Tag: Glass Bridge

  • PUBLiC TV Impact – ಮಡಿಕೇರಿ ರಾಜಾಸೀಟ್ ಗ್ಲಾಸ್ ಬ್ರಿಡ್ಜ್ ಯೋಜನೆ ಹಿಂಪಡೆದ ಸರ್ಕಾರ

    PUBLiC TV Impact – ಮಡಿಕೇರಿ ರಾಜಾಸೀಟ್ ಗ್ಲಾಸ್ ಬ್ರಿಡ್ಜ್ ಯೋಜನೆ ಹಿಂಪಡೆದ ಸರ್ಕಾರ

    ಮಡಿಕೇರಿ: ನಗರದ ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟ್ ಗ್ಲಾಸ್ ಬ್ರಿಡ್ಜ್ (Raja Seat Glass Bridge) ಯೋಜನೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಇತ್ತೀಚೆಗೆ ರಾಜಾಸೀಟ್‌ನಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಗಾಜಿನ ಸೇತುವೆ ಮತ್ತು ಫುಡ್ ಕೋರ್ಟ್ ನಿರ್ಮಾಣ ಯೋಜನೆಗೆ ತೋಟಗಾರಿಕೆ ಇಲಾಖೆ ಟೆಂಡರ್ ಆಹ್ವಾನಿಸಿತ್ತು. ಇದಕ್ಕೆ ಜಿಲ್ಲೆಯ ಜನರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಸರ್ಕಾರ ಆ ಯೋಜನೆಯನ್ನು ಹಿಂಪಡೆದಿದೆ.

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಡಿಕೇರಿ ಶಾಸಕ ಮಂಥರ್ ಗೌಡ, ರಾಜಾಸೀಟ್ ಗ್ಲಾಸ್ ಬ್ರಿಡ್ಜ್ ಯೋಜನೆ ರಾಜ್ಯ ಸರ್ಕಾರ ಹಿಂಪಡೆದಿದೆ. ಗ್ಲಾಸ್ ಬ್ರಿಡ್ಜ್‌ಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಗ್ಲಾಸ್ ಬ್ರಿಡ್ಜ್ ನಿರ್ಮಾಣವಾದರೆ ಅಪಾಯವಾಗುವ ಸಾಧ್ಯತೆ ಇದೆ. ಹಾಗಾಗಿ ಈ ಯೋಜನೆ ರದ್ದು ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮುಸುಕುದಾರಿಯ ಮಂಪರು ಪರೀಕ್ಷೆ ಮಾಡಿ : ಕೈ ಶಾಸಕ ಸವದಿ ಒತ್ತಾಯ

    ಕೋಟ್ಯಂತರ ರೂ. ವೆಚ್ಚದಲ್ಲಿ ಯೋಜನೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿತ್ತು. ಯೋಜನೆಯ ಅಪಾಯಗಳ ಬಗ್ಗೆ ಪಬ್ಲಿಕ್ ಟಿವಿ ಕೆಲ ದಿನಗಳ ಹಿಂದೆ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿ ಬೆನ್ನಲ್ಲೇ ಕೊಡಗು (Kodagu) ಜಿಲ್ಲಾಡಳಿತದಿಂದ ಯೋಜನೆ ರದ್ದು ಮಾಡಲಾಗಿದೆ. ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಟೆಂಡರ್ ಕರೆಯುವ ಮೊದಲು ಅಲ್ಲಿಗೆ ಭೂ ವಿಜ್ಞಾನಿಗಳನ್ನ, ಪರಿಸರ ಇಲಾಖೆ ತಜ್ಞರನ್ನ ಕರೆಸಿ ವಿವಿಧ ಪರೀಕ್ಷೆಗಳನ್ನು ಮಾಡಬೇಕಿತ್ತು. ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಲು ಈ ಜಾಗ ಸುರಕ್ಷಿತವಾಗಿದೆಯಾ ಎಂದು ಚೆಕ್ ಮಾಡಬೇಕಿತ್ತು. ಆದರೆ ಯಾವುದನ್ನೂ ಮಾಡದೆ ತೋಟಗಾರಿಕಾ ಇಲಾಖೆ ಟೆಂಡರ್ ಆಹ್ವಾನಿಸಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಮಾಜಿ ಸಚಿವ ಎಂಸಿ ನಾಣಯ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಈ ಯೋಜನೆಯನ್ನು ಕೈಬಿಡಬೇಕು ಎಂದು ಮನವಿ ಮಾಡಿದ್ದರು. ಇದನ್ನೂ ಓದಿ: Bengaluru | ಪ್ರೇಯಸಿಯ ಹೊಸ ಲವ್ವರ್‌ಗೆ ಚಾಕು ಇರಿದ ಮಾಜಿ ಬಾಯ್‌ಫ್ರೆಂಡ್

  • ತಮಿಳುನಾಡು | ಕನ್ಯಾಕುಮಾರಿಯಲ್ಲಿ ಭಾರತದ ಮೊದಲ ಗ್ಲಾಸ್‌ ಬ್ರಿಡ್ಜ್‌ ಉದ್ಘಾಟನೆ

    ತಮಿಳುನಾಡು | ಕನ್ಯಾಕುಮಾರಿಯಲ್ಲಿ ಭಾರತದ ಮೊದಲ ಗ್ಲಾಸ್‌ ಬ್ರಿಡ್ಜ್‌ ಉದ್ಘಾಟನೆ

    ಚೆನ್ನೈ: ಕನ್ಯಾಕುಮಾರಿ (Kanyakumari) ಕರಾವಳಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕ ಮತ್ತು 133 ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಯನ್ನು ಸಂಪರ್ಕಿಸುವ ಗಾಜಿನ ಸೇತುವೆಯನ್ನು (Glass Bridge) ತಮಿಳುನಾಡು (Tamil Nadu) ಸಿಎಂ ಎಂ.ಕೆ ಸ್ಟಾಲಿನ್ (M.K Stalin) ಅವರು ಸೋಮವಾರ ಸಂಜೆ ಉದ್ಘಾಟಿಸಿದ್ದಾರೆ.

    ಈ ಗಾಜಿನ ಸೇತುವೆಯು ದೇಶದಲ್ಲೇ ಮೊದಲನೆಯದಾಗಿದೆ. ಪ್ರವಾಸಿಗರಿಗೆ ಇಬ್ಬರು ಮಹಾನ್‌ ವ್ಯಕ್ತಿಗಳ ಸ್ಮಾರಕಗಳು ಮತ್ತು ಸುತ್ತಲೂ ಸಮುದ್ರದ ವೀಕ್ಷಣೆಗಾಗಿ ಇದನ್ನು ನಿರ್ಮಿಸಲಾಗಿದೆ. ಅಲ್ಲದೇ ಈ ಸೇತುವೆ ಸಮುದ್ರದ ಮೇಲೆ ನಡೆಯುವ ರೋಮಾಂಚಕ ಅನುಭವವನ್ನು ನೀಡುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ತಿರುವಳ್ಳುವರ್ ಪ್ರತಿಮೆ ಅನಾವರಣದ ಬೆಳ್ಳಿಹಬ್ಬದ ಸಂದರ್ಭದಲ್ಲಿ ರಾಜ್ಯ ಸರ್ಕಾರವು 37 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಿದೆ. ಬೌಸ್ಟ್ರಿಂಗ್ ಕಮಾನನ್ನು ಗಾಜಿನ ಸೇತುವೆಗೆ ಲವಣಯುಕ್ತ ಗಾಳಿಯನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಸೇತುವೆ 77 ಮೀಟರ್ ಉದ್ದ ಮತ್ತು 10 ಮೀಟರ್ ಅಗಲವಿದೆ.

    ಉದ್ಘಾಟನೆಯ ನಂತರ ಎಂ.ಕೆ ಸ್ಟಾಲಿನ್ ಹಾಗೂ ಡಿಸಿಎಂ ಉದಯನಿಧಿ ಸ್ಟಾಲಿನ್, ರಾಜ್ಯ ಸಚಿವರು, ಸಂಸದೆ ಕನಿಮೋಳಿ ಮತ್ತು ಹಿರಿಯ ಅಧಿಕಾರಿಗಳು ಸೇತುವೆಯ ಮೇಲೆ ಓಡಾಡಿ ಸಂಭ್ರಮಿಸಿದ್ದಾರೆ. ಬಳಿಕ ತಿರುವಳ್ಳುವರ್ ಪ್ರತಿಮೆ ಬಳಿ ಲೇಸರ್ ಲೈಟ್ ಶೋ ನಡೆಯಿತು.

  • ಕಾಲಡಿಯಲ್ಲೇ ಪ್ರಪಾತ- ಗ್ಲಾಸ್ ಸೇತುವೆ ಮೇಲೆ ನಡೆಯಲು ಬೇಕು ಗಟ್ಟಿ ಗುಂಡಿಗೆ

    ಕಾಲಡಿಯಲ್ಲೇ ಪ್ರಪಾತ- ಗ್ಲಾಸ್ ಸೇತುವೆ ಮೇಲೆ ನಡೆಯಲು ಬೇಕು ಗಟ್ಟಿ ಗುಂಡಿಗೆ

    ಬೀಜಿಂಗ್: ಚೀನಾದ ಹುವಾಕ್ಸಿ ವಲ್ರ್ಡ್ ಅಡ್ವೆಂಚರ್ ಪಾರ್ಕ್ ನಲ್ಲಿ ಜಗತ್ತಿನ ಅತಿ ಉದ್ದದ ಗಾಜಿನ ಸೇತುವೆ ಉದ್ಘಾಟನೆಗೊಂಡಿದೆ. ಆದರೆ ಈ ಸೇತುವೆ ಮೇಲೆ ನಡೆಯಲು ನಿಜಕ್ಕೂ ಗಟ್ಟಿ ಗುಂಡಿಗೆ ಇರಲೇಬೇಕು.

    ಹೌದು. ಹುವಾಕ್ಸಿ ವಲ್ರ್ಡ್ ಅಡ್ವೆಂಚರ್ ಪಾರ್ಕ್ ನಲ್ಲಿ ಗಾಜಿನ ಸೇತುವೆ ಮೇಲೆ ನಡೆಯುವವರಿಗೆ ಕಾಲಿನ ಅಡಿಯಲ್ಲೇ ಪ್ರಪಾತ ಕಾಣಿಸುತ್ತದೆ. ಈ ಸೇತುವೆ ಗಾಜಿನಿಂದ ನಿರ್ಮಿತವಾಗಿದ್ದು, ಇದರ ಮೇಲೆ ನಡೆಯಲು ನಿಜಕ್ಕೂ ಗಟ್ಟಿ ಗುಂಡಿಗೆ ಇರಬೇಕು. ಯಾಕೆಂದರೆ ಇದರ ಮೇಲೆ ಹೋಗುವಾಗ ಯಾವಾಗ ಗಾಜು ಒಡೆಯುತ್ತದೋ ಎಂದು ಹೆದರಿ ಸಾಗುವ ಮಂದಿಯೇ ಹೆಚ್ಚು. ಈ ಸೇತುವೆ ಮೇಲೆ ಹೋಗುವುದೆಂದರೇ ಒಂದು ರೀತಿ ಸಾಹಸ ಎಂದರೆ ತಪ್ಪಾಗಲ್ಲ.

    ಭೂಮಿಯಿಂದ ಸುಮಾರು 100 ಮೀಟರ್ ಎತ್ತರದಲ್ಲಿ ಬರೋಬ್ಬರಿ 518 ಮೀಟರ್ ಉದ್ದದ ಈ ಗ್ಲಾಸ್ ಬ್ರಿಡ್ಜ್ ನಿರ್ಮಿಸಲಾಗಿದೆ. ಇದಕ್ಕೆ 3.5 ಸೆಂ.ಮೀ. ದಪ್ಪದ ಗಾಜು ಬಳಸಲಾಗಿದ್ದು, 4.7 ಟನ್‍ಗಳಷ್ಟು ತೂಕವನ್ನು ತಡೆಯಬಲ್ಲ ಸಾಮಥ್ರ್ಯವನ್ನು ಸೇತುವೆ ಹೊಂದಿದೆ. ಅಲ್ಲದೆ ಸೇತುವೆ ಮೇಲೆ ಒಮ್ಮೆಗೆ 2,600 ಮಂದಿ ನಿಲ್ಲಬಹುದು.

    ಈ ಸೇತುವೆಯ ಇನ್ನೊಂದು ವಿಶೇಷತೆ ಏನೆಂದರೆ, ಇದಕ್ಕೆ ಅಳವಡಿಸಿರುವ ವಿಶೇಷ ಸೌಂಡ್ ಹಾಗೂ ವಿಶ್ಯುವಲ್ ಎಫೆಕ್ಟ್. ಹೌದು. ಈ ಸೇತುವೆ ಮೇಲೆ ನಡೆಯುತ್ತಿದ್ದಾಗ ಗಾಜು ಒಡೆಯುತ್ತಿರುವ ಹಾಗೆ, ಬಿರುಕು ಬಿಡುವ ಹಾಗೆ ವಿಶ್ಯುವಲ್ ಎಫೆಕ್ಟ್ ಕಾಣಸಿಗುತ್ತದೆ. ಅದಕ್ಕೆ ತಕ್ಕಂತೆ ಗಾಜು ಒಡೆಯುತ್ತಿರುವ ಸದ್ದನ್ನು ಕೂಡ ಹಾಕಲಾಗಿದೆ. ಹೀಗಾಗಿ ಮೊದಲೇ ಗಾಜಿನ ಮೇಲೆ ನಡೆಯಲು ಹೆದರುವ ಮಂದಿಗೆ ಈ ಎಫೆಕ್ಟ್‍ಗಳು ಒಂದು ಕ್ಷಣ ಮೈ ಝಲ್ ಎನಿಸುವಂತೆ ಮಾಡುತ್ತದೆ.

    ಇತ್ತೀಚಿಗಷ್ಟೇ ಈ ಅದ್ಬುತ ಗಾಜಿನ ಸೇತುವೆಯ ಏರಿಯಲ್ ವಿಡಿಯೋ ಒಂದನ್ನು ಮಾಡಲಾಗಿದೆ. ಈ ವಿಡಿಯೋದಲ್ಲಿ ಕೆಲವರು ವಿಶೇಷ ಸೇತುವೆಯ ಸುಂದರ ಪಯಣವನ್ನು ಆನಂದಿಸುತ್ತ ಸಾಗುತ್ತಿದ್ದರೆ, ಇನ್ನೂ ಕೆಲವರು ಎಲ್ಲಿ ಗಾಜು ಒಡೆದು ಅನಾಹುತವಾಗುತ್ತೋ ಎಂದು ಭಯದಿಂದ ಸಾಗುತ್ತಿರುವ ದೃಶ್ಯಗಳು ಸೆರೆಯಾಗಿದೆ. ಮನಮೋಹಕ ನಿಸರ್ಗ ಸೌಂದರ್ಯದ ನಡುವೆ ಈ ಗಾಜಿನ ಸೇತುವೆ ಮೇಲೆ ನಡೆಯುವ ಖುಷಿಯೇ ಬೇರೆ ಎಂದು ಇಲ್ಲಿಗೆ ಬರುವ ಪ್ರವಾಸಿಗರು ಹೇಳುತ್ತಾರೆ.

  • ಗ್ಲಾಸ್ ಬ್ರಿಡ್ಜ್ ಮೇಲೆ ನಡೆಯಲು ಹೆದರಿದ ಪ್ರವಾಸಿಯನ್ನ 500 ಮೀ. ಎಳೆದುಕೊಂಡೇ ಹೋದ್ರು

    ಗ್ಲಾಸ್ ಬ್ರಿಡ್ಜ್ ಮೇಲೆ ನಡೆಯಲು ಹೆದರಿದ ಪ್ರವಾಸಿಯನ್ನ 500 ಮೀ. ಎಳೆದುಕೊಂಡೇ ಹೋದ್ರು

    ಬೀಜಿಂಗ್: ಚೀನಾ ಗ್ಲಾಸ್ ಸೇತುವೆಯ ಮೇಲೆ ಪ್ರವಾಸಿ ಯುವತಿ ನಡೆಯಲು ಹೆದರಿದ್ದರಿಂದ ಆಕೆಯನ್ನು ಸುಮಾರು 500 ಮೀಟರ್ ವರಗೆ ಎಳೆದುಕೊಂಡು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    500 ಮೀಟರ್ ಎತ್ತರ ಬೆಟ್ಟದ ಡೆಹಾಂಗ್ ಕ್ಯಾನನ್ ಬೆಟ್ಟದ ಮೇಲೆ ಐಜಾಯಿ ಎಂಬ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಲಾಗಿದೆ. ಚೀನಾ ಎತ್ತರದ ಪ್ರದೇಶಗಳಲ್ಲಿ ಗ್ಲಾಸ್ ನಿಂದ ಬ್ರಿಡ್ಜ್ ಗಳನ್ನು ನಿರ್ಮಿಸಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ನಿರ್ಮಾಣವಾಗ್ತಿದೆ ಐಫೆಲ್ ಟವರ್‍ಗಿಂತ ಎತ್ತರದ ಬ್ರಿಡ್ಜ್? ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ

    ಐಜಾಯಿ ಗ್ಲಾಸ್ ಬ್ರಿಡ್ಜ್ ಉತ್ತರ ಚೀನಾದ ಪೂರ್ವ ತೈಹೆಂಗಾ ಎಂಬಲ್ಲಿ ಎರಡು ಬೆಟ್ಟಗಳ ನಡುವೆ ಈ ಗ್ಲಾಸ್ ವಾಕ್ ಕಟ್ಟಲಾಗಿದೆ. 500 ಮೀಟರ್ ಎತ್ತರದಲ್ಲಿ ಬ್ರಿಡ್ಜ್ ನಿರ್ಮಾಣವಾಗಿದ್ದು, ಒಂದು ಕಡೆಯಿಂದ ಮತ್ತೊಂದು ಕಡೆ ಚಲಿಸುವಾಗ ಕೆಳಗಡೆ ಆಳದ ಕಣಿವೆ ಕಾಣುತ್ತದೆ. ಇದು ಪ್ರವಾಸಿಗರಿಗೆ ಥ್ರಿಲ್ಲಿಂಗ್ ಅನುಭವವನ್ನು ನೀಡುತ್ತದೆ. 500 ಮೀಟರ್ ಎತ್ತರದಲ್ಲಿ ಗ್ಲಾಸ್ ಮೇಲೆ ನಡೆಯಲು ಕೆಲವರು ಹೆದರುವುದು ಸಹಜ.