Tag: gita gopinath

  • 2027 ರ ವೇಳೆಗೆ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಭರವಸೆ ಇದೆ: ಡಾ. ಗೀತಾ ಗೋಪಿನಾಥ್

    2027 ರ ವೇಳೆಗೆ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಭರವಸೆ ಇದೆ: ಡಾ. ಗೀತಾ ಗೋಪಿನಾಥ್

    ನವದೆಹಲಿ: ಭಾರತದ ಬೆಳವಣಿಗೆಯು ನಿರೀಕ್ಷೆಗಿಂತ ಉತ್ತಮವಾಗಿದೆ. 2027 ರ ವೇಳೆಗೆ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಭರವಸೆ ಇದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ಉಪ ವ್ಯವಸ್ಥಾಪಕ ನಿರ್ದೇಶಕಿ ಡಾ. ಗೀತಾ ಗೋಪಿನಾಥ್ (Gita Gopinath) ಹೇಳಿದ್ದಾರೆ.

    ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತದ ಬೆಳವಣಿಗೆಯು ಕಳೆದ ಆರ್ಥಿಕ ವರ್ಷದಲ್ಲಿ ನಾವು ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿದೆ ಮತ್ತು ಆ ಕ್ಯಾರಿಓವರ್ ಪರಿಣಾಮಗಳು ಈ ವರ್ಷದ ನಮ್ಮ ಮುನ್ಸೂಚನೆಯ ಮೇಲೆ ಪರಿಣಾಮ ಬೀರುತ್ತಿವೆ. ಇತರ ಅಂಶವೆಂದರೆ ನಾವು ಖಾಸಗಿ ಬಳಕೆ ಚೇತರಿಸಿಕೊಳ್ಳುವುದನ್ನು ನೋಡುತ್ತಿದ್ದೇವೆ ಎಂದು ಗೋಪಿನಾಥ್ ಹೇಳಿದರು. ಇದನ್ನೂ ಓದಿ: ISRO: ಭೂಮಿ ಪರಿವೀಕ್ಷಣಾ ಇಒಎಸ್‌-08 ಉಪಗ್ರಹ ಯಶಸ್ವಿ ಉಡಾವಣೆ

    IMF 2024-25 ರ ಆರ್ಥಿಕ ವರ್ಷಕ್ಕೆ ಭಾರತದ ಬೆಳವಣಿಗೆಯ ಪ್ರಕ್ಷೇಪಣವನ್ನು 7% ಗೆ ಹೆಚ್ಚಿಸಿದೆ. ಆರ್ಥಿಕ ಸಮೀಕ್ಷೆಯಲ್ಲಿ ಕೇಂದ್ರ ಸರ್ಕಾರವು ನೀಡಿದ 6.5% ಪ್ರೊಜೆಕ್ಷನ್‌ಗಿಂತ ಇದು ತುಸು ಹೆಚ್ಚಿದೆ. ಇದರಿಂದ 2027 ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು IMF ಭವಿಷ್ಯ ನುಡಿದಿದೆ.

    ಗ್ರಾಮೀಣ ಬಳಕೆಯಲ್ಲಿನ ಆರ್ಥಿಕತೆ ಚೇತರಿಕೆಯಿಂದ ಕಾಣಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ನೀವು ದ್ವಿಚಕ್ರ ವಾಹನಗಳ ಮಾರಾಟವನ್ನು ನೋಡಿದರೆ, ಅದು ಹೆಚ್ಚುತ್ತಿದೆ. ಈ ಮಾನ್ಸೂನ್‌‌ನಲ್ಲಿ ಉತ್ತಮ ಫಸಲುಗಳನ್ನು ಉತ್ಪಾದಿಸುತ್ತೇವೆ ಎಂದು ನಾವು ನಿರೀಕ್ಷಿಸುತ್ತೇವೆ. ಗ್ರಾಮೀಣ ಬಳಕೆಯಲ್ಲಿ ಚೇತರಿಕೆ ಕಾಣಬೇಕು ಎಂದು ಹೇಳಿದರು. ಇದನ್ನೂ ಓದಿ: ಅಗ್ನಿ ಕ್ಷಿಪಣಿ ಪಿತಾಮಹ ರಾಮ್ ನಾರಾಯಣ್ ಅಗರ್ವಾಲ್ ನಿಧನ

  • ಮೈಸೂರಿನ ಗೀತಾ ಗೋಪಿನಾಥ್‌ ಐಎಂಎಫ್‌ನ ಉನ್ನತ ಹುದ್ದೆಗೆ ಬಡ್ತಿ

    ಮೈಸೂರಿನ ಗೀತಾ ಗೋಪಿನಾಥ್‌ ಐಎಂಎಫ್‌ನ ಉನ್ನತ ಹುದ್ದೆಗೆ ಬಡ್ತಿ

    ವಾಷಿಂಗ್‌ಟನ್: ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್‌ ಅವರು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌)ಯ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ.

    ಐಎಂಎಫ್‌ನ ಹಾಲಿ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಜೆಫ್ರಿ ಒಕಾಮೊಟೊ ಅವರ ಅಧಿಕಾರವಧಿ 2022ರ ಮೊದಲ ತಿಂಗಳು ಮುಕ್ತಾಯವಾಗಲಿದೆ. ಆ ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ ಪಡೆದಿದ್ದಾರೆ. ಐಎಂಎಫ್‌ನಲ್ಲಿ ಉನ್ನತ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ ಮಹಿಳೆಯರು ಎಂಬ ಹೆಗ್ಗಳಿಕೆಗೆ ಈ ಇಬ್ಬರೂ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಸ್ವಚ್ಛತೆ ಎನ್ನುವ ಪತ್ನಿಗೆ ಡೈವೋರ್ಸ್ ನೀಡಲು ಮುಂದಾದ ಪತಿ

    ಐಎಂಎಫ್‌ನ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ಅವರು, ಸೂಕ್ತ ಸಮಯಕ್ಕೆ ಸೂಕ್ತ ವ್ಯಕ್ತಿಯೇ ಪ್ರಮುಖ ಸ್ಥಾನಕ್ಕೆ ಬರುತ್ತಿದ್ದಾರೆ ಎಂದು ಗೀತಾ ಗೋಪಿನಾಥ್‌ ಅವರನ್ನು ಹೊಗಳಿದ್ದಾರೆ.

    ನಮ್ಮ ಸದಸ್ಯ ರಾಷ್ಟ್ರಗಳು ಎದುರಿಸುತ್ತಿರುವ ಆರ್ಥಿಕ ಸವಾಲುಗಳಿಗೆ ಸಾಂಕ್ರಾಮಿಕ ರೋಗ ಪ್ರಮುಖ ಕಾರಣವಾಗಿದೆ. ಗೀತಾ ಅವರು ವಿಶ್ವದ ಪ್ರಮುಖ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರು. ನಮ್ಮ ಕ್ಷೇತ್ರಕ್ಕೆ ಅಗತ್ಯವಿರುವ ಪರಿಣತಿಯನ್ನು ಅವರನ್ನು ಹೊಂದಿದ್ದಾರೆ ಎಂದು ಜಾರ್ಜೀವಾ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ

    ಜಾಗತಿಕ ಮಟ್ಟದಲ್ಲಿ ಅರ್ಥಶಾಸ್ತ್ರಜ್ಞೆಯಾಗಿ ಹೆಸರು ಮಾಡಿರುವ ಗೀತಾ ಗೋಪಿನಾಥ್‌ ಅವರು ಭಾರತದ ಕರ್ನಾಟಕ ರಾಜ್ಯದ ಮೈಸೂರು ಮೂಲದವರು.

  • ಕೃಷಿ ಸಾಲಮನ್ನಾದಿಂದ ಯಾವುದೇ ಬದಲಾವಣೆ ಆಗಲ್ಲ: ಐಎಂಎಫ್ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್

    ಕೃಷಿ ಸಾಲಮನ್ನಾದಿಂದ ಯಾವುದೇ ಬದಲಾವಣೆ ಆಗಲ್ಲ: ಐಎಂಎಫ್ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್

    ನವದೆಹಲಿ: ಕೃಷಿ ಸಾಲಮನ್ನಾದಿಂದ ರೈತರ ಜೀವನ ಮತ್ತು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗಲ್ಲ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಾಲಮನ್ನಾದಿಂದ ರೈತರ ಸಮಸ್ಯೆಗಳನ್ನು ಅಂತ್ಯಗೊಳಿಸಲು ಸಾಧ್ಯವಿಲ್ಲ. ರೈತರಿಗೆ ನಗದು ವರ್ಗಾವಣೆ ಮಾಡುವುದರಿಂದ ಕೃಷಿ ವಲಯದ ಜನರ ಆರ್ಥಿಕ ಸ್ಥಿತಿಗತಿಯಲ್ಲಿ ಬದಲಾವಣೆ ತರಲು ಸಾಧ್ಯವಾಗಲಿದೆ. ನನ್ನ ಪ್ರಕಾರ ಕೃಷಿ ಸಾಲಮನ್ನಾ ಒಂದೇ ಒಂದು ಸಮಸ್ಯೆಗೆ ಪರಿಹಾರ ಸಿಗಲ್ಲ. ರಾಜ್ಯ ಅಥವಾ ಕೇಂದ್ರ ಸರ್ಕಾರ ಬಿತ್ತನೆ ಸಮಯದಲ್ಲಿ ಬೀಜ ಮತ್ತು ರಸಗೊಬ್ಬರ ಖರೀದಿಗಾಗಿ ಅವರ ಖಾತೆಗೆ ನಗದು ವರ್ಗಾಯಿಸುವುದು ಸೂಕ್ತ ಎಂದು ತಿಳಿಸಿದ್ದಾರೆ.

    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ಕೃಷಿ ವರ್ಗದ ಜನರನ್ನು ಖುಷಿಪಡಿಸಲು ಸಾಲಮನ್ನಾ ಎಂಬ ತಂತ್ರವನ್ನು ಪ್ರಯೋಗಿಸುತ್ತಿದ್ದಾರೆ. ಈಗಾಗಲೇ ಮಧ್ಯಪ್ರದೇಶ, ಛತ್ತೀಸಗಢ, ರಾಜಸ್ಥಾನ ಸಾಲಮನ್ನಾ ಘೋಷಣೆ ಮಾಡಿವೆ. ಕರ್ನಾಟಕ ರಾಜ್ಯ ಸರ್ಕಾರ ಸಹ ರೈತರ ಸಾಲಮನ್ನಾ ಮಾಡಲಾಗುವುದು ಎಂದು ಘೋಷಿಸಿದ್ದು ಋಣಮುಕ್ತ ಪ್ರಮಾಣ ಪತ್ರವನ್ನು ವಿತರಿಸುತ್ತದೆ. ಕಾಂಗ್ರೆಸ್ ಸರ್ಕಾರ ರಚಿಸಿರುವ ರಾಜ್ಯಗಳಲ್ಲಿ ಸಾಲಮನ್ನಾ ಘೋಷಣೆ ಮಾಡಲಾಗುತ್ತಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷದ ನಾಯಕರು, ಪ್ರಧಾನಿಗಳು ದೇಶದ ಎಲ್ಲ ರೈತರ ಸಂಪೂರ್ಣ ಸಾಲಮನ್ನಾ ಮಾಡುವವರೆಗೂ ಮೋದಿ ಅವರಿಗೆ ನಿದ್ದೆ ಮಾಡಲು ಬಿಡಲ್ಲ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ.

    ಈ ಸಂಬಂಧ ಪ್ರಧಾನಿಗಳು ತಮ್ಮ ಸಾರ್ವಜನಿಕ ಸಮಾವೇಶಗಳಲ್ಲಿ ಸಾಲಮನ್ನಾ ಆದೇಶಿಸುವ ಕುರಿತ ಸುಳಿವು ನೀಡುತ್ತಾ ಬಂದಿದ್ದಾರೆ. ಸಾಲಮನ್ನಾ ಅಥವಾ ಅದೇ ಉದ್ದೇಶ ಹೊಂದಿರುವ ಬೇರೆ ಯೋಜನೆಗಳನ್ನು ಈ ಬಾರಿಯ ಬಜೆಟ್ ನಲ್ಲಿ ಘೋಷಿಸುವ ಸಾಧ್ಯತೆಗಳಿವೆ. ಆರ್‍ಬಿಐ ಮಾಜಿ ಗವರ್ನರ್ ರಘುರಾಂ ರಾಜನ್, ಕೃಷಿ ಸಾಲಮನ್ನಾ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv