Tag: girls hostel

  • ಯಾರು ಇಲ್ಲದ ಹಾಸ್ಟೆಲ್ ಕೋಣೆಯಲ್ಲಿ ಅವನು, ಅವಳು ಪತ್ತೆ – ಸ್ನೇಹಿತೆಯ ಸರಸಕ್ಕೆ ಸಹಪಾಠಿಗಳ ಸಾಥ್

    ಯಾರು ಇಲ್ಲದ ಹಾಸ್ಟೆಲ್ ಕೋಣೆಯಲ್ಲಿ ಅವನು, ಅವಳು ಪತ್ತೆ – ಸ್ನೇಹಿತೆಯ ಸರಸಕ್ಕೆ ಸಹಪಾಠಿಗಳ ಸಾಥ್

    – ಬೀಗ ಒಡೆದು ನೋಡಿದ ಸಿಬ್ಬಂದಿಗೆ ಶಾಕ್
    – ಹೊರಗೆ ಬೀಗ, ಒಳಗಿಬ್ಬರು ಲಾಕ್

    ಹೈದರಾಬಾದ್: ವಿದ್ಯಾರ್ಥಿನಿಯರ ಹಾಸ್ಟೆಲ್‍ನಲ್ಲಿ 16ರ ವಿದ್ಯಾರ್ಥಿ ಇಡೀ ರಾತ್ರಿ ಕಳೆದು, ಕೊನೆಗೆ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದ ಘಟನೆ ಆಂಧ್ರಪ್ರದೇಶದ ನುಜ್ವಿಡ್‍ನಲ್ಲಿ ಬೆಳಕಿಗೆ ಬಂದಿದೆ.

    ನುಜ್ವಿಡ್‍ನ ಐಐಐಟಿ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್‍ನಲ್ಲಿ ಈ ಘಟನೆ ನಡೆದಿದೆ. ಫೆ. 16ರಂದು ಈ ಘಟನೆ ನಡೆದಿದ್ದು, ಹಾಸ್ಟೆಲ್‍ನಲ್ಲಿ ಇದ್ದ ಇತರೆ ವಿದ್ಯಾರ್ಥಿನಿಯರು ವಿಡಿಯೋವನ್ನು ಎಲ್ಲೆಡೆ ಹರಿಬಿಟ್ಟ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಹಾಸ್ಟೆಲ್ ಕೋಣೆಯ ಕಿಟಕಿ ಮೂಲಕ ಒಳಗೆ ನುಗ್ಗಿದ್ದ ವಿದ್ಯಾರ್ಥಿ ಇಡೀ ರಾತ್ರಿ ವಿದ್ಯಾರ್ಥಿಯೋರ್ವಳ ಜೊತೆ ಬೀಗ ಹಾಕಿದ್ದ ಕೋಣೆಯಲ್ಲಿ ಇದ್ದ. ಇದಕ್ಕೆ ವಿದ್ಯಾರ್ಥಿನಿಯ ಸಹಪಾಠಿಗಳು ಇಬ್ಬರು ಜೊತೆಗಿರಲು ಸಹಾಯ ಮಾಡಿದ್ದರು ಎಂಬುದು ಕೂಡ ತಿಳಿದು ಬಂದಿದೆ.

    ಬೀಗ ಹಾಕಿದ್ದ ಕೋಣೆಯಲ್ಲಿ ಯಾರೋ ಇದ್ದಾರೆ ಎಂದು ಅನುಮಾನ ಬಂದು ಭದ್ರತಾ ಸಿಬ್ಬಂದಿ ಬೀಗ ಮುರಿದು ನೋಡಿದಾಗ ಸತ್ಯಾಂಶ ಹೊರಬಿದ್ದಿದೆ. ಬೀಗ ಮುರಿದಾಗ ಕೊಣೆಯಲ್ಲಿ ವಿದ್ಯಾರ್ಥಿನಿ ಇದ್ದಿದ್ದನ್ನು ನೋಡಿ ಸಿಬ್ಬಂದಿ ಶಾಕ್ ಆಗಿದ್ದರು. ಬಳಿಕ ಕೋಣೆಯನ್ನು ಪರಿಶೀಲನೆ ನಡೆಸಿದಾಗ ಮಂಚದ ಕೆಳಗೆ ಅವಿತು ಕುಳಿತ್ತಿದ್ದ ವಿದ್ಯಾರ್ಥಿ ಪತ್ತೆಯಾಗಿದ್ದನು. ತಕ್ಷಣ ಈ ಬಗ್ಗೆ ಸಿಬ್ಬಂದಿ ಕಾಲೇಜು ಮಂಡಳಿಗೆ ಮಾಹಿತಿ ನೀಡಿದರು. ಆ ಬಳಿಕ ವಿದ್ಯಾರ್ಥಿ ಹಾಸ್ಟೆಲ್ ಕೋಣೆಗೆ ಬರಲು ಸಹಾಯ ಮಾಡಿದ ಎಲ್ಲಾ ವಿದ್ಯಾರ್ಥಿನಿಯರ ಪೋಷಕರನ್ನು ಕರೆಸಿ, ಈ ಬಗ್ಗೆ ವಿಷಯ ಮುಟ್ಟಿಸಲಾಯ್ತು.

    ವಿದ್ಯಾರ್ಥಿ ಹಾಸ್ಟೆಲ್ ಒಳಗೆ ಬರಲು ಸಹಾಯ ಮಾಡಿದ್ದ ಸಹಪಾಠಿಗಳು ಹಾಗೂ ವಿದ್ಯಾರ್ಥಿನಿ ಸೇರಿ 6 ಮಂದಿಯನ್ನು ಕಾಲೇಜಿನಿಂದ ಅಮಾನತು ಗೊಳಿಸಿದ್ದು, ವಿದ್ಯಾರ್ಥಿನಿಯರಿಗೆ ಕೌನ್ಸಿಲಿಂಗ್ ನೀಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ತನಿಖೆ ನಡೆಸಲು ಕಾಲೇಜು ಆಡಳಿತ ಮಂಡಳಿ ಶಿಸ್ತಿನ ಸಮಿತಿ ರಚಿಸಿದೆ.

  • ಹಾಸ್ಟೆಲ್‍ಗೆ ನುಗ್ಗಿದ್ದವನ ಕಣ್ಣಿಗೆ ಖಾರದಪುಡಿ ಹಾಕಿ ವಿದ್ಯಾರ್ಥಿನಿಯರಿಂದ ಥಳಿತ

    ಹಾಸ್ಟೆಲ್‍ಗೆ ನುಗ್ಗಿದ್ದವನ ಕಣ್ಣಿಗೆ ಖಾರದಪುಡಿ ಹಾಕಿ ವಿದ್ಯಾರ್ಥಿನಿಯರಿಂದ ಥಳಿತ

    ಕಲಬುರಗಿ: ತಡರಾತ್ರಿ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ನುಗ್ಗಿದ ವ್ಯಕ್ತಿಗೆ ವಿದ್ಯಾರ್ಥಿನಿಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಕೆಸರಟಗಿ ಗ್ರಾಮದ ನಿವಾಸಿ ಸತೀಶ್ ಹಾಸ್ಟೆಲ್‍ಗೆ ನುಗ್ಗಿದ ವ್ಯಕ್ತಿ. ಪಿಡಿಎ ಎಂಜನಿಯರಿಂಗ್ ಕಾಲೇಜು ಬಳಿಯಿರುವ ಸರ್ಕಾರಿ ಬಾಲಕಿಯರ ಹಾಸ್ಟೆಲ್‍ಗೆ ಆರೋಪಿ ನುಗ್ಗಿದ್ದನು. ತಡರಾತ್ರಿ 2 ಗಂಟೆ ವೇಳೆಗೆ ಕಂಪೌಂಡ್ ಹತ್ತಿ ಹಾಸ್ಟೆಲ್‍ಗೆ ಬಂದಿದ್ದನು. ಈ ವೇಳೆ ಕೆಲ ವಿದ್ಯಾರ್ಥಿನಿಯರು ಆತನನ್ನು ಕಂಡು ಇತರೆ ವಿದ್ಯಾರ್ಥಿನಿಯರನ್ನು ಕರೆದು, ಆರೋಪಿ ಕಣ್ಣಿಗೆ ಖಾರದ ಪುಡಿ ಹಾಕಿ ಗೂಸಾ ಕೊಟ್ಟು ಧೈರ್ಯ ಮೆರೆದಿದ್ದಾರೆ.

    ಥಳಿಸಿದ ಬಳಿಕ ಆರೋಪಿಯನ್ನು ವಿದ್ಯಾರ್ಥಿನಿಯರು ಪೊಲೀಸರಿಗೆ ಒಪ್ಪಿಸಿದ್ದು, ಕುಡಿದ ಮತ್ತಿನಲ್ಲಿ ಹಾಸ್ಟೆಲ್‍ಗೆ ಬಂದಿರೋದಾಗಿ ಆರೋಪಿ ಸತೀಶ್ ಹೇಳಿದ್ದಾನೆ. ಸದ್ಯ ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟವರ್ ಏರಿ ಹಾಸ್ಟೆಲ್ ಹುಡುಗಿಯರ ಕೋಣೆ ಇಣುಕಿ ನೋಡ್ತಾನೆ – ಹಾಸನದಲ್ಲೊಬ್ಬ ಸೈಕೋ

    ಟವರ್ ಏರಿ ಹಾಸ್ಟೆಲ್ ಹುಡುಗಿಯರ ಕೋಣೆ ಇಣುಕಿ ನೋಡ್ತಾನೆ – ಹಾಸನದಲ್ಲೊಬ್ಬ ಸೈಕೋ

    ಹಾಸನ: ಟವರ್ ಏರಿ ಹಾಸ್ಟೆಲ್ ಕೋಣೆಯನ್ನು ಇಣುಕಿ ನೋಡುವ ಸೈಕೋ ವ್ಯಕ್ತಿಯ ಕಾಟಕ್ಕೆ ನಗರದ ವಿದ್ಯಾರ್ಥಿನಿಯರು ಭಯಗೊಂಡಿದ್ದಾರೆ.

    ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್‍ಗೆ ತಡರಾತ್ರಿ ನುಗ್ಗಿದ್ದಾನೆ. ಕಟ್ಟಡದ ಪಕ್ಕದಲ್ಲಿರುವ ಮೊಬೈಲ್ ಟವರ್ ಮುಖಾಂತರ ಸರಾಗವಾಗಿ ಮೇಲ್ಭಾಗಕ್ಕೆ ಹತ್ತಿ ಬರುವ ಅಪರಿಚಿತ ವ್ಯಕ್ತಿಯೊಬ್ಬ ಹಾಸ್ಟೆಲ್ ವಿದ್ಯಾರ್ಥಿನಿಯರ ಕೊಠಡಿಗಳ ಒಳಗೆ ಇಣುಕಿ ನೋಡಿದ್ದಾನೆ.

    ಹಾಸ್ಟೆಲ್‍ನ ಓರ್ವ ವಿದ್ಯಾರ್ಥಿನಿ ಸೈಕೋನ ಚಲನವಲಗಳನ್ನು ಗಮನಿಸಿ ಕೂಡಲೇ ಮೇಲ್ವಿಚಾರಕರಿಗೆ ವಿಷಯ ತಿಳಿಸಿದ್ದಾಳೆ. ಸಿಸಿಟಿವಿ ಕ್ಯಾಮೆರಾದಲ್ಲಿ ಮುಖಕ್ಕೆ ಬಟ್ಟೆ ಬರುವ ಅಪರಿಚಿತನ ವ್ಯಕ್ತಿಯ ಗುರುತು ಪತ್ತೆಯಾಗಿದೆ.

    ವಸತಿ ನಿಲಯಕ್ಕೆ ಹೈಸ್ಪೀಡ್ ಇಂಟರ್ ನೆಟ್ ಕಲ್ಪಿಸಲು ಟವರ್ ಹಾಕಲಾಗಿದೆ. ವ್ಯಕ್ತಿಯೊಬ್ಬ ಅದನ್ನು ಹತ್ತಿ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ನುಗ್ಗಿದ್ದಾನೆ. ಇದನ್ನು ನೋಡಿದ ಓರ್ವ ವಿದ್ಯಾರ್ಥಿನಿ ಕಿರುಚಾಡಿದ್ದಾಳೆ. ತಕ್ಷಣವೇ ಆ ವ್ಯಕ್ತಿ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾನೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಸತೀಶ್ ತಿಳಿಸಿದ್ದಾರೆ.

    ನಗರದಲ್ಲಿ ಮಹಿಳಾ ಹಾಸ್ಟೆಲ್‍ಗಳಿಗೆ ಸೈಕೋ ವ್ಯಕ್ತಿಗಳು ಪ್ರವೇಶ ಮಾಡುವುದು ಹೊಸದೆನಲ್ಲ ಈ ಹಿಂದೆ ನಗರದ ಪಶುವೈದ್ಯಕೀಯ ಕಾಲೇಜು ಮಹಿಳಾ ಹಾಸ್ಟೆಲ್‍ಗೆ ಸೈಕೋ ಎಂಟ್ರಿ ಕೊಟ್ಟಿದ್ದ. ಇದಾದ ಬಳಿಕ ಕೆಆರ್ ಪುರಂ ಬಡಾವಣೆಯ ಹಾಸ್ಟೆಲ್‍ಗೂ ಕಾಮುಕ ವ್ಯಕ್ತಿ ನುಗ್ಗಿದ್ದ. ಅಷ್ಟೇ ಅಲ್ಲದೆ ವಿದ್ಯಾನಗರದಲ್ಲಿ ಲೇಡಿಸ್ ಪಿಜಿಗೂ ಎಂಟ್ರಿ ಕೊಟ್ಟಿದ್ದ.

    ಈ ಸಂಬಂಧ ಕೆ.ಆರ್ ಪುರಂ ಬಡಾವಣೆಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಹಾಸ್ಟೆಲ್‍ನಲ್ಲಿ ಹುಡ್ಗೀರು ಸ್ನಾನ ಮಾಡೋದನ್ನು ನೋಡಲು ಬಂದವ ಜೈಲು ಸೇರಿದ!

    ಹಾಸ್ಟೆಲ್‍ನಲ್ಲಿ ಹುಡ್ಗೀರು ಸ್ನಾನ ಮಾಡೋದನ್ನು ನೋಡಲು ಬಂದವ ಜೈಲು ಸೇರಿದ!

    ಭೋಪಾಲ್: ಹಾಸ್ಟೆಲ್‍ನಲ್ಲಿ ಹುಡುಗಿಯರು ಸ್ನಾನ ಮಾಡುವುದನ್ನು ನೋಡಲು ಯುವಕನೊಬ್ಬ ಪೈಪ್ ಲೈನ್ ಹತ್ತಿ ಬಂದು ಸಿಕ್ಕಿಬಿದ್ದಿದ್ದು, ಈಗ ಕಂಬಿ ಎಣಿಸುತ್ತಿದ್ದಾನೆ.

    ಮಧ್ಯಪ್ರದೇಶದ ಭೋಪಾಲ್ ಎಂ.ಪಿ.ನಗರದ ಬಾಲಕಿಯರ ಹಾಸ್ಟೆಲ್‍ನಲ್ಲಿ ಈ ಘಟನೆ ನಡೆದಿದೆ. ಅಮನ್ ಕುಮಾರ್ ಬಂಧಿತ ಆರೋಪಿ. ಹಾಸ್ಟೆಲ್ ಎರಡನೇ ಮಹಡಿಯಲ್ಲಿದ್ದು, ಕೆಳಗಿನ ಮಹಡಿಯಲ್ಲಿ ಒಂದು ಅಂಗಡಿಯಿದೆ. ಈ ಅಂಗಡಿಯಲ್ಲಿ ಯುವಕ ಕೆಲಸ ಮಾಡುತ್ತಿದ್ದನು. ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಬಾಲಕಿಯರ ಹಾಸ್ಟೆಲ್ ಇದ್ದುದರಿಂದ ಹುಡುಗಿಯರು ಸ್ನಾನ ಮಾಡುವುದನ್ನು ನೋಡಲು ಹೋಗಿದ್ದಾನೆ. ಈ ವೇಳೆ ಹುಡುಗಿಯೊಬ್ಬಳ ಕೈಗೆ ಯುವಕ ಸಿಕ್ಕಿಬಿದ್ದಿದ್ದು, ಹಾಸ್ಟೆಲ್ ಸಿಬ್ಬಂದಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಮಧ್ಯ ರಾತ್ರಿಯೇ ಈ ಯುವಕ ಒಳ ಚರಂಡಿ ಪೈಪ್ ಲೈನ್ ಮೂಲಕ ಹಾಸ್ಟೆಲ್ ಪ್ರವೇಶಿಸಿದ್ದಾನೆ. ಅಲ್ಲಿ ಹುಡುಗಿಯರ ಬಾತ್ ರೂಂ ಬಳಿ ಕತ್ತಲಿನಲ್ಲಿ ಸುಮ್ಮನೆ ಕುಳಿತುಕೊಂಡಿದ್ದಾನೆ. ಆದರೆ ರಾತ್ರಿ ಹುಡುಗಿಯೊಬ್ಬಳು ಬಾತ್ ರೂಂಗೆ ತೆರೆಳಿದಾಗ, ಕತ್ತಲ್ಲಲ್ಲಿ ಯಾರೋ ಕೂತಿರುವುದು ಕಾಣಿಸಿ ಜೋರಾಗಿ ಕಿರುಚಿಕೊಂಡಿದ್ದಾಳೆ. ತಕ್ಷಣ ಹುಡುಗಿಯರು ಹಾಗೂ ವಾರ್ಡನ್ ಅಲ್ಲಿಗೆ ಬಂದಾಗ ಯುವಕ ಸಿಕ್ಕಿಬಿದ್ದಿದ್ದಾನೆ.

    ಎಲ್ಲರೂ ಸ್ಥಳಕ್ಕೆ ಬಂದಾಗ ಭಯದಲ್ಲಿ ಯುವಕ ಪೈಪ್ ಲೈನ್ ಮೂಲಕ ಕೆಳಗಿಳಿಯುವ ಪ್ರಯತ್ನ ನಡೆಸಿದ್ದಾನೆ. ಆದರೆ ಅಷ್ಟರಲ್ಲಿ ಹುಡುಗಿಯರು ಆತನನ್ನು ಹಿಡಿದು ಸಖತ್ ಗೂಸ ನೀಡಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿ ಆತನನ್ನು ಜೈಲಿಗಟ್ಟಿದ್ದಾರೆ.

  • ಹಾಸ್ಟೆಲ್ ವರಾಂಡದಲ್ಲಿ ಹೆಡೆಎತ್ತಿದ 5 ಅಡಿ ಉದ್ದದ ನಾಗರಹಾವು!

    ಹಾಸ್ಟೆಲ್ ವರಾಂಡದಲ್ಲಿ ಹೆಡೆಎತ್ತಿದ 5 ಅಡಿ ಉದ್ದದ ನಾಗರಹಾವು!

    ಭವನೇಶ್ವರ್: ಒಡಿಶಾದ ಹಾಸ್ಟೆಲ್ ವೊಂದರ ಆವರಣದಲ್ಲಿ ಭಾನುವಾರ 5 ಅಡಿ ಉದ್ದದ ನಾಗರ ಹಾವೊಂದು ಪ್ರತ್ಯಕ್ಷವಾಗಿದ್ದು, ವಿದ್ಯಾರ್ಥಿನಿಯರು ಬೆಚ್ಚಿಬಿದ್ದಿದ್ದಾರೆ.

    ಈ ಹಾಸ್ಟೆಲ್ ಒಡಿಶಾದ ಮಯೂರ್‍ಭಂಜ್ ಜಿಲ್ಲೆಯ ಬರಿಪಡ ನಗರದಲ್ಲಿದೆ. ವಿದ್ಯಾರ್ಥಿನಿಯೊಬ್ಬಳ ಬಳಿಯಲಿದ್ದ ಹಾವನ್ನು ಗಮನಿಸಿದ ಆಕೆಯ ಸಹಪಾಠಿ ಆಕೆಯನ್ನು ಕೂಡಲೇ ಪಾರು ಮಾಡಿದ್ದಾರೆ. ಇದರಿಂದ ಇಬ್ಬರೂ ಬೆಚ್ಚಿಬಿದ್ದಿದ್ದು, ಜೋರಾಗಿ ಕಿರುಚಿಕೊಂಡಿದ್ದಾರೆ. ವಿದ್ಯಾರ್ಥಿನಿಯರ ಚೀರಾಟ ಕೇಳಿದ ಹಾಸ್ಟೆಲ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಏನಾಯ್ತು ಅನ್ನೋವಷ್ಟರಲ್ಲಿ ಹಾವು ಹೆಡೆ ಎತ್ತಿರುವುದು ಕಂಡು ಬಂದಿದೆ. ಹಾವನ್ನು ನೋಡಿ ಗಾಬರಿಗೊಂಡ ಸಿಬ್ಬಂದಿ ಕೂಡಲೇ ಸ್ಥಳೀಯ ಫೇಮಸ್ ಉರಗತಜ್ಞರಿಗೆ ಮಾಹಿತಿ ರವಾನಿಸಿದ್ದಾರೆ.

    ಮಾಹಿತಿ ಪಡೆದ ಉರಗತಜ್ಞ ಕೃಷ್ಣಚಂದ್ರ ಗೊಚ್ಚಾಯಟ್ ಕೂಡಲೇ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಬಂದು ಫಿಶಿಂಗ್ ನೆಟ್ ಮೂಲಕ ಹಾವನ್ನು ಹಿಡಿದು ರಕ್ಷಿಸಿದ್ದಾರೆ. ಉರಗ ತಜ್ಞರು ಹಾವನ್ನು ಹಿಡಿದ ಬಳಿಕ ವಿದ್ಯಾರ್ಥಿನಿಯರು ನಿಟ್ಟಿಸಿರು ಬಿಟ್ಟಿದ್ದಾರೆ.

    ಸಾಮಾನ್ಯವಾಗಿ ನಾಗರಹವುಗಳು ಯಾರಿಗೂ ತೊಂದರೆ ಕೊಡಲ್ಲ. ಆದ್ರೆ ಅವುಗಳಿಗೆ ಮನುಷ್ಯರು ತೊಂದ್ರೆ ಅಥವಾ ಕೆರಳಿಸಿದ್ರೆ ಕೊಟ್ರೆ ಮಾತ್ರ ತಿರುಗಿ ಬೀಳುತ್ತವೆ. ಹಾವನ್ನು ಈಗಾಗಲೇ ಸೆರೆಹಿಡಿಯುವ ಮೂಲಕ ರಕ್ಷಿಸಲಾಗಿದೆ ಅಂತ ಕೃಷ್ಣಚಂದ್ರ ಗೊಚ್ಚಾಯಟ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv