Tag: girls education

  • ಇರಾನ್‌ನಲ್ಲಿ ಹೆಣ್ಣುಮಕ್ಕಳ ಶಿಕ್ಷಣ ತಡೆಯಲು ವಿಷಪ್ರಾಶನ – ಸಚಿವರ ಆರೋಪದ ಬಳಿಕ ಭುಗಿಲೆದ್ದ ವಿವಾದ

    ಇರಾನ್‌ನಲ್ಲಿ ಹೆಣ್ಣುಮಕ್ಕಳ ಶಿಕ್ಷಣ ತಡೆಯಲು ವಿಷಪ್ರಾಶನ – ಸಚಿವರ ಆರೋಪದ ಬಳಿಕ ಭುಗಿಲೆದ್ದ ವಿವಾದ

    ಟೆಹ್ರಾನ್: ಹಿಜಬ್ ವಿರೋಧಿಸಿ ವ್ಯಾಪಕ ಪ್ರತಿಭಟನೆಗಳಿಂದ (Hijab Protest) ತತ್ತರಿಸಿಹೋಗಿರುವ ಇರಾನ್ (Iran) ದೇಶದಲ್ಲಿ ಇದೀಗ ಮತ್ತೊಂದು ವಿವಾದ ಭುಗಿಲೆದ್ದಿದೆ.

    ಹೆಣ್ಣುಮಕ್ಕಳ ಶಿಕ್ಷಣ (Girls Education) ಸ್ಥಗಿತಗೊಳಿಸುವ ಉದ್ದೇಶದಿಂದ ಪವಿತ್ರ ನಗರವಾದ ಕೋಮ್‌ನಲ್ಲಿ (Qom City) ಕೆಲ ಕಿಡಿಗೇಡಿಗಳು ಶಾಲಾ ಮಕ್ಕಳಿಗೆ ವಿಷ ಉಣಿಸುತ್ತಿದ್ದಾರೆ ಎಂದು ಇರಾನ್ ಆರೋಗ್ಯ ಸಚಿವರು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಈ ವರ್ಷದಲ್ಲೇ ಮೋದಿ ಪಾಕಿಸ್ತಾನವನ್ನ ಸಂಕಷ್ಟದಿಂದ ಪಾರು ಮಾಡ್ತಾರೆ – RAW ಮಾಜಿ ನಿರ್ದೇಶಕ

    2022ರ ನವೆಂಬರ್ ಅಂತ್ಯದ ವೇಳೆಗೆ ಟೆಹ್ರಾನ್‌ನ ದಕ್ಷಿಣದ ಕೋಮ್‌ನಲ್ಲಿ ಶಾಲಾ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದಿದೆ. ಮಕ್ಕಳ ಉಸಿರಾಟದಲ್ಲಿ ವಿಷಕಾರಿ ಅಂಶ ಇರುವುದು ಪತ್ತೆಯಾಗಿದ್ದು, ಈಗ ಆರೋಗ್ಯ ಸಚಿವ ಯುನೆಸ್ ಪನಾಹಿ, ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ಈ ಘಟನೆ ಉದ್ದೇಶಪೂರ್ವಕವಾಗಿ ನಡೆದಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

    ಕೋಮ್ ನಗರದ ಶಾಲೆಗಳಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ವಿಷಪ್ರಾಶನ ಮಾಡಿಸಿರುವುದು ಕಂಡುಬಂದನಂತರ ಎಲ್ಲಾ ಶಾಲೆಗಳನ್ನು ಮುಚ್ಚಬೇಕೆಂಬ ಒತ್ತಾಯ ಕೇಳಿಬಂದಿದೆ. ಅದರಲ್ಲೂ ಬಾಲಕಿಯರ ಶಾಲೆಗಳನ್ನು ಮುಚ್ಚಲೇಬೇಕೆಂದು ಕೆಲವರು ಪಟ್ಟುಹಿಡಿದಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

    ಈ ಬಗ್ಗೆ ತನಿಖೆ ಆರಂಭಗೊಂಡಿದ್ದರೂ ಇಲ್ಲಿಯವರೆಗೆ ಯಾರೊಬ್ಬರ ಬಂಧನವಾಗಿಲ್ಲ ಎಂದು ಹೇಳಲಾಗಿದೆ. ಇದನ್ನೂ ಓದಿ: ಸಾವಿರಾರು ಮೈಲಿ ದೂರವಿದ್ದರೂ ಸಿಗುತ್ತೆ ನೈಜ ಮುತ್ತಿನ ಗಮ್ಮತ್ತು – ಏನಿದು ಕಿಸ್ಸಿಂಗ್ ಡಿವೈಸ್ ಕರಾಮತ್ತು?

    ಇದೇ ಫೆಬ್ರವರಿ 14ರಂದು ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿಗಳ ಪೋಷಕರು ರಾಜ್ಯಪಾಲರ ಮನೆ ಹೊರಗೆ ಜಮಾಯಿಸಿ ಅಧಿಕಾರಿಗಳಿಂದ ವಿವರಣೆ ಕೊಡುವಂತೆ ಆಗ್ರಹಿಸಿದ್ದರು. ಇದಾದ ಮರುದಿನ ಸರ್ಕಾರದ ವಕ್ತಾರ ಅಲಿ ಬಹದೋರಿ ಜಹ್ರೋಮಿ, ಗುಪ್ತಚರ ಮತ್ತು ಶಿಕ್ಷಣ ಸಚಿವಾಲಯಗಳು ವಿಷ ಪ್ರಾಶನದ ಕಾರಣವನ್ನು ಪತ್ತೆಮಾಡಲು ಪ್ರಯತ್ನಿಸುತ್ತಿವೆ ಎಂದು ಹೇಳಿದ್ದರು.

    ಈ ಸಂಬಂಧ ಕಳೆದ ವಾರ, ಪ್ರಾಸಿಕ್ಯೂಟರ್ ಜನರಲ್ ಮೊಹಮ್ಮದ್ ಜಾಫರ್ ಮೊಂಟಜೆರಿ ಘಟನೆಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದರು.

  • ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸಿ ತನ್ನ ಪುತ್ರಿಯರನ್ನು ಶಾಲೆಗೆ ಸೇರಿಸಿದ ತಾಲಿಬಾನ್‌ ವಕ್ತಾರ

    ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸಿ ತನ್ನ ಪುತ್ರಿಯರನ್ನು ಶಾಲೆಗೆ ಸೇರಿಸಿದ ತಾಲಿಬಾನ್‌ ವಕ್ತಾರ

    ಕಾಬೂಲ್: ಆಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸಿರುವ ಹೊತ್ತಿನಲ್ಲೇ ತಾಲಿಬಾನ್‌ ವಕ್ತಾರ ತನ್ನ ಪುತ್ರಿಯರನ್ನು ಶಾಲೆಗೆ ಸೇರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

    ತಾಲಿಬಾನ್‌ ವಕ್ತಾರ ಸುಹೇಲ್ ಶಾಹೀನ್ ತನ್ನ ಪುತ್ರಿಯರನ್ನು ಶಾಲೆಗೆ ಸೇರಿಸಿದ್ದಾರೆ. ಈ ಕುರಿತು ಟಿವಿ ಸಂದರ್ಶನದಲ್ಲಿ ಮಾಹಿತಿ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಹೊಸ ಸರ್ಕಾರ ರಚನೆಗೆ ವಿಪಕ್ಷ ನಾಯಕ ಒಪ್ಪಿಗೆ

    ಅವರು ಹಿಜಾಬ್‌ಗೆ ಆದ್ಯತೆ ನೀಡುತ್ತಾರೆ. ನಾವು ನಮ್ಮ ಜನರನ್ನು ನಿರಾಕರಿಸಿಲ್ಲ ಎಂದು ಶಾಹೀನ್‌ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ದೂರದರ್ಶನ ವರದಿಗಾರರೊಬ್ಬರು ಸಂದರ್ಶನದ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

    ಇದಕ್ಕೆ ಅನೇಕರು ಟೀಕೆ ಹಾಗೂ ವ್ಯಂಗ್ಯಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಸುಹೇಲ್ ಶಾಹೀನ್ ಅವರದ್ದು ಬೂಟಾಟಿಕೆ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ನಿಜಕ್ಕೂ ಇದು ಬೂಟಾಟಿಕೆ. ತಾಲಿಬಾನ್‌ಗಳು ತಮ್ಮ ಮಕ್ಕಳಿಗೆ ಶಾಲೆಗೆ ಹೋಗಲು ಅವಕಾಶ ಮಾಡಿಕೊಡುತ್ತಾರೆ. ಆದರೆ ಇತರರಿಗೆ ಶಿಕ್ಷಣವನ್ನು ನಿಷೇಧಿಸುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿ ಟೀಕಿಸಿದ್ದಾರೆ. ಇದನ್ನೂ ಓದಿ: ಉತ್ತರ ಕೊರಿಯಾದಲ್ಲಿ ಮೊದಲ ಬಾರಿಗೆ ಕೊರೊನಾ ಪ್ರಕರಣ ಪತ್ತೆ- ಕಟ್ಟುನಿಟ್ಟಿನ ಲಾಕ್‌ಡೌನ್‌ ಘೋಷಣೆ

    ಈ ವ್ಯಕ್ತಿಯ ಹೆಣ್ಣುಮಕ್ಕಳು ಹಿಜಬ್‌ಗೆ ಆದ್ಯತೆ ನೀಡಿ ಶಿಕ್ಷಣವನ್ನು ಪಡೆಯುತ್ತಾರೆ. ಈ ವ್ಯಕ್ತಿಯ ಒಬ್ಬ ಮಗಳು ಕತಾರಿ ಫುಟ್ಬಾಲ್ ತಂಡದಲ್ಲಿ ಆಡುತ್ತಾಳೆ. ಈ ವ್ಯಕ್ತಿಯ ಇನ್ನೊಬ್ಬ ಮಗಳಿಗೆ ಕತಾರಿ ಬಾಯ್‌ಫ್ರೆಂಡ್ ಇದ್ದಾನೆ. ಆಫ್ಘನ್ ಹುಡುಗಿಯರೂ ಹಿಜಬ್‌ಗೆ ಆದ್ಯತೆ ನೀಡುತ್ತಾರೆ. ಆದರೆ 6 ನೇ ತರಗತಿಯ ನಂತರ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರು ಕ್ರೀಡೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಇನ್ನೊಬ್ಬರು ಕುಟುಕಿದ್ದಾರೆ.