Tag: Girl Private Videos

  • ಹಾಸ್ಟೆಲ್ ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಸೆರೆ – ಮೆಸ್ ಸಿಬ್ಬಂದಿಯಿಂದಲೇ ಕೃತ್ಯ

    ಹಾಸ್ಟೆಲ್ ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಸೆರೆ – ಮೆಸ್ ಸಿಬ್ಬಂದಿಯಿಂದಲೇ ಕೃತ್ಯ

    ಗಾಂಧಿನಗರ: ಮೊಹಾಲಿಯಲ್ಲಿರುವ ಚಂಡೀಗಢ ವಿವಿಯಲ್ಲಿ (Chandigarh University) ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಲೀಕ್ ಆದ ಪ್ರಕರಣ (FIR) ತನಿಖೆಯಲ್ಲಿರುವಾಗಲೇ ಅಂತಹದ್ದೇ ಮತ್ತೊಂದು ಪ್ರಕರಣ ಗುಜರಾತ್‌ನ ಸರ್ಕಾರಿ ವಸತಿ ಶಾಲೆಯಲ್ಲಿ (Gujarat Government Residential School) ನಡೆದಿದೆ.

    ದಕ್ಷಿಣ ಗುಜರಾತ್‌ (South Gujarat) ನಲ್ಲಿರುವ ಏಕಲವ್ಯ ಕನ್ಯಾ ಸಾಕ್ಷರತಾ ನಿವಾಸ ಶಾಲೆಯಲ್ಲಿ ಹಾಸ್ಟೆಲ್ ಮೆಸ್ (Hostel Mess) ಸಿಬ್ಬಂದಿಯೇ ಹಾಸ್ಟೆಲ್ ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ (Private Video) ಚಿತ್ರೀಕರಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. 

    ವಿದ್ಯಾರ್ಥಿಗಳ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಗುಜರಾತ್ ಪೊಲೀಸರು (Gujarat Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ವಿದ್ಯಾರ್ಥಿನಿಯರು ಶಾಲೆಯ ಪ್ರಾಂಶುಪಾಲರಿಗೆ ಹಾಗೂ ಪೊಲೀಸರಿಗೆ ಲಿಖಿತ ಅರ್ಜಿ ಮೂಲಕ ದೂರು ನೀಡಿದ್ದಾರೆ. ಯಾರಾದರೂ ಇಂತಹ ವಿಷಯದಲ್ಲಿ ಭಾಗಿಯಾಗಿದ್ದರೆ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಲ್ಸಾದ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜ್‌ದೀಪ್‌ಸಿನ್ಹ ಝಲಾ ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್ ಪ್ರಕರಣ – ಬಾಯ್‌ಫ್ರೆಂಡ್‌ಗೆ ಹೆದರಿ ವೀಡಿಯೋ ಮಾಡಿದ್ಲು ಸಹಪಾಠಿ

    ಏನಿದು ಘಟನೆ?
    ಇಲ್ಲಿನ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ (Hostel Girl Students) ಕಳಪೆ ಗುಣಮಟ್ಟದ ಆಹಾರ (Food) ಪೂರೈಕೆ ಮಾಡುತ್ತಿದ್ದಾರೆ. ಅಡುಗೆಯವರು ಹೆಣ್ಣುಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾರೆ. ಬುಡಕಟ್ಟು ಹೆಣ್ಣುಮಕ್ಕಳ ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆ. ಈಗ ವಿದ್ಯಾರ್ಥಿನಿರು ಸ್ನಾನ ಮಾಡುತ್ತಿರುವುದನ್ನು ವೀಡಿಯೋ ಮಾಡಿದ್ದಾರೆ ಮಾಡಿದ್ದಾರೆ ಎಂದು ಹಾಸ್ಟೆಲ್ ವಿದ್ಯಾರ್ಥಿನಿಯರು ಲಿಖಿತ ದೂರಿನಲ್ಲಿ ಆರೋಪಿಸಿದ್ದಾರೆ. ಆದರೆ ನಾಲ್ವರು ಪುರುಷರು ಅಡುಗೆಯವರಿದ್ದು, ಈ ಪೈಕಿ ಒಬ್ಬನ ಬಳಿ ಮಾತ್ರ ಆಂಡ್ರಾಯ್ಡ್ ಫೋನ್ ಇದೆ. ಮೊಬೈಲ್ ಫೋನ್‌ (Mobile Phone) ಅನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್‌ ಕೇಸ್‌ – ಹುಡುಗಿಯ ಬಾಯ್‌ಫ್ರೆಂಡ್‌ ಸಹ ಅರೆಸ್ಟ್‌ 

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಶಾಲೆಯ ಪ್ರಾಂಶುಪಾಲರಾದ ನೀತಾ ಚೌಧರಿ, ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುತ್ತಿದೆ ಅನ್ನೋದು ವಿದ್ಯಾರ್ಥಿಗಳ ಪ್ರಾಥಮಿಕ ದೂರು. ಅಲ್ಲದೇ ಅವರು ಮಹಿಳಾ ಅಡುಗೆ ಸಿಬ್ಬಂದಿಯನ್ನೇ ನೇಮಕ ಮಾಡುವಂತೆ ಬೇಡಿಕೆಯಿಟ್ಟಿದ್ದರು ಎಂದು ತಿಳಿಸಿದ್ದಾರೆ. ತನಿಖೆ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್ ಪ್ರಕರಣ – ಬಾಯ್‌ಫ್ರೆಂಡ್‌ಗೆ ಹೆದರಿ ವೀಡಿಯೋ ಮಾಡಿದ್ಲು ಸಹಪಾಠಿ

    ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್ ಪ್ರಕರಣ – ಬಾಯ್‌ಫ್ರೆಂಡ್‌ಗೆ ಹೆದರಿ ವೀಡಿಯೋ ಮಾಡಿದ್ಲು ಸಹಪಾಠಿ

    ಚಂಡೀಗಢ: ಮೊಹಾಲಿಯಲ್ಲಿರುವ ಚಂಡೀಗಢ ವಿವಿಯ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಲೀಕ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಸಹ ವಿದ್ಯಾರ್ಥಿನಿಯ ಬಾಯ್‌ಫ್ರೆಂಡ್ ಬೆದರಿಕೆ ಹಾಕಿದ್ದರಿಂದಲೇ ಇತರ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಸೆರೆ ಹಿಡಿದು ಹಂಚಿಕೊಂಡಿದ್ದಾಳೆ ಎಂಬ ಸಂಗತಿ ತನಿಖೆ ವೇಳೆ ಬಯಲಾಗಿದೆ.

    ಆರೋಪಿಗಳಾದ ಸನ್ನಿ ಮೆಹ್ತಾ ಮತ್ತು ಆತನ ಸ್ನೇಹಿತ ರಂಕಜ್ ವರ್ಮಾ, ಹಾಸ್ಟೆಲ್‌ನ ಸಾಮಾನ್ಯ ಶೌಚಗೃಹದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರ ಬೆತ್ತಲೆ ದೃಶ್ಯಗಳನ್ನು ಚಿತ್ರೀಕರಿಸಿ, ಹಂಚಿಕೊಳ್ಳದಿದ್ದರೇ ನಿನ್ನ ಖಾಸಗಿ ವೀಡಿಯೋಗಳನ್ನ ವೈರಲ್ ಮಾಡುವುದಾಗಿ ಆರೋಪಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದರು. ಆದ್ದರಿಂದಲೇ ಸಹ ವಿದ್ಯಾರ್ಥಿನಿ ಇತರರ ಖಾಸಗಿ ವೀಡಿಯೋಗಳನ್ನ ಸೆರೆ ಹಿಡಿದು ಹಂಚಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್‌ ಕೇಸ್‌ – ಹುಡುಗಿಯ ಬಾಯ್‌ಫ್ರೆಂಡ್‌ ಸಹ ಅರೆಸ್ಟ್‌

    ಈ ಪ್ರಕರಣದಲ್ಲಿ ಪಂಜಾಬ್ ಪೊಲೀಸರು ಮೂವರನ್ನ ಬಂಧಿಸಿದ್ದಾರೆ. ಮೂವರಲ್ಲಿ 23 ವರ್ಷದ ಆರೋಪಿಯೊಬ್ಬ ಬಂಧಿತ ವಿದ್ಯಾರ್ಥಿನಿಯ ಬಾಯ್‌ಫ್ರೆಂಡ್ ಎಂದು ತಿಳಿದುಬಂದಿದೆ. 31 ವರ್ಷದ ಇನ್ನೊಬ್ಬ ಆರೋಪಿ ಆತನ ಸ್ನೇಹಿತನಾಗಿದ್ದಾನೆ.

    ಏನಿದು ಘಟನೆ? 
    ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಸುಮಾರು 60 ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿರುವ ವೀಡಿಯೋವನ್ನು ಸಹ ವಿದ್ಯಾರ್ಥಿನಿಯೊಬ್ಬಳು ಸೆರೆಹಿಡಿದು, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿರುವುದಾಗಿ ಆರೋಪಿಸಲಾಗಿದೆ. ಈ ವೀಡಿಯೋವನ್ನು ಹರಿಬಿಟ್ಟ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ. ವೀಡಿಯೋ ಸೋರಿಕೆಯಾದ ಬೆನ್ನಲ್ಲೇ ಭಾರೀ ಪ್ರತಿಭಟನೆ ಭುಗಿಲೆದ್ದಿದ್ದು, ಈ ಬೆನ್ನಲ್ಲೇ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಇದನ್ನೂ ಓದಿ: ಚಂಡೀಗಢ ವಿವಿ ಬಳಿಕ ಐಐಟಿ ಬಾಂಬೆ- ಹಾಸ್ಟೆಲ್ ಸ್ನಾನಗೃಹದಲ್ಲಿ ಇಣುಕಿದ ಕ್ಯಾಂಟೀನ್ ಸಿಬ್ಬಂದಿ ಬಂಧನ

    ವ್ಯಾಪಕ ಆಕ್ರೋಶಕ್ಕೆ ಗುರಿಯಾದ ಬೆನ್ನಲ್ಲೇ ಚಂಗೀಗಢ ವಿಶ್ವವಿದ್ಯಾಲಯವನ್ನು ಒಂದು ವಾರಗಳ ಕಾಲ ಬಂದ್ ಮಾಡಲಾಗಿದೆ. ಆದರೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ವಿದ್ಯಾರ್ಥಿನಿಯರು ಭಯಭೀತರಾಗಿದ್ದು, ಹಾಸ್ಟೆಲ್ ತೊರೆದು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಇನ್ನು ಇರುವ ವಿದ್ಯಾರ್ಥಿನಿಯರಂತು ಸ್ನಾನದ ಕೊಠಡಿಗಳನ್ನು ಬಳಸೋದಕ್ಕೆ ಹೆದರುತ್ತಿದ್ದಾರೆ. ಈ ಬೆನ್ನಲ್ಲೇ ತನಿಖೆಗೆ ವಿಶೇಷ ತಂಡ ನಿಯೋಜನೆ ಮಾಡುವುದಾಗಿ ಪಂಜಾಬ್ ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸ್ನಾನದ ವೀಡಿಯೋ ಲೀಕ್ – ವಾಶ್ ರೂಂ ಅಂದ್ರೆನೇ ಬೆಚ್ಚಿ ಬೀಳ್ತಿದ್ದಾರೆ ವಿದ್ಯಾರ್ಥಿನಿಯರು

    ಸ್ನಾನದ ವೀಡಿಯೋ ಲೀಕ್ – ವಾಶ್ ರೂಂ ಅಂದ್ರೆನೇ ಬೆಚ್ಚಿ ಬೀಳ್ತಿದ್ದಾರೆ ವಿದ್ಯಾರ್ಥಿನಿಯರು

    ಚಂಡೀಗಢ: ಮೊಹಾಲಿಯ ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ (Chandigarh University) ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ (Private Video) ಲೀಕ್ ಪ್ರಕರಣ ಬೆಳಕಿಗೆ ಬಂದ ಬಳಿಕ ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ (Hostel Toilet) ವಾಶ್ ರೂಂ ಬಳಸೋದಕ್ಕೂ ಹೆದರುತ್ತಿದ್ದಾರೆ.

    ಹಾಸ್ಟೆಲ್ ವಿದ್ಯಾರ್ಥಿನಿಯರ (Hostel Students) ಸ್ನಾನದ ವೀಡಿಯೋ ಲೀಕ್ ಪ್ರಕರಣವು ವ್ಯಾಪಕ ಆಕ್ರೋಶಕ್ಕೆ ಗುರಿಯಾದ ಬೆನ್ನಲ್ಲೇ ಚಂಗೀಗಢ ವಿಶ್ವವಿದ್ಯಾಲಯವನ್ನು 5 ದಿನ ಬಂದ್ ಮಾಡಲಾಗಿದೆ. ಸೆ.24ರವರೆಗೆ ವಿವಿಯನ್ನು ಬಂದ್ ಮಾಡಲಾಗಿದೆ. ಆದರೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ವಿದ್ಯಾರ್ಥಿನಿಯರು ಭಯಭೀತರಾಗಿದ್ದು, ಹಾಸ್ಟೆಲ್ ತೊರೆದು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಇನ್ನು ಇರುವ ವಿದ್ಯಾರ್ಥಿನಿಯರಂತು ಸ್ನಾನದ ಕೊಠಡಿಗಳನ್ನು ಬಳಸೋದಕ್ಕೆ ಹೆದರುತ್ತಿದ್ದಾರೆ.

    ನಿನ್ನೆ ರಾತ್ರಿಯಷ್ಟೇ ವೀಡಿಯೋ ಲೀಕ್ ಮಾಡಿದ ವಿದ್ಯಾರ್ಥಿನಿಯನ್ನು ವಶಕ್ಕೆ ಪಡೆದು, ಆಕೆಯಿಂದ ವೀಡಿಯೋ ಕಳಿಸಿಕೊಂಡಿದ್ದ ಬಾಯ್‌ಫ್ರೆಂಡ್‌ನನ್ನು ಬಂಧಿಸಲಾಗಿದೆ. ಆದರೂ ವಿದ್ಯಾರ್ಥಿಗಳ ಆಕ್ರೋಶ ಕಡಿಮೆಯಾಗಿಲ್ಲ. ವೀಡಿಯೋ ಲೀಕ್ ಆದಾಗಿನಿಂದಲೂ ವಿದ್ಯಾರ್ಥಿನಿಯರು ವಾಶ್‌ರೂಂ ಗಳಲ್ಲಿ ಸ್ನಾನ ಮಾಡಲು ಹೆದರುತ್ತಿದ್ದಾರೆ. ಹಾಗಾಗಿ ಪೊಲೀಸರು (Police) ಹಾಸ್ಟೆಲ್‌ನಲ್ಲಿ ಹಿಡನ್ ಕ್ಯಾಮೆರಾಗಳಿವೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಸ್ನಾನದ ವೀಡಿಯೋ ಲೀಕ್‌ ಬೆನ್ನಲ್ಲೇ ಹಾಸ್ಟೆಲ್‌ ತೊರೆಯುತ್ತಿರುವ ವಿದ್ಯಾರ್ಥಿನಿಯರು – 5 ದಿನ ವಿವಿ ಬಂದ್‌

    ಇದೇ ವೇಳೆ ವಿದ್ಯಾರ್ಥಿನಿಯೋರ್ವಳು ಮಾತನಾಡಿ, ನಾನು ಡೇ ಸ್ಕಾಲರ್, ಖಂಡಿತವಾಗಿಯೂ ಇಲ್ಲಿನ ವಿದ್ಯಾರ್ಥಿಗಳಿಗೆ ಭಯವಿದೆ. ವಿವಿ ಆಡಳಿತ ಮಂಡಳಿ ಪೊಲೀಸರಿಗೆ ಲಂಚ ನೀಡಿದೆ. ಆದ್ದರಿಂದ ಪೊಲೀಸರು ವಿದ್ಯಾರ್ಥಿನಿಯರಿಗೆ ಬೆಂಬಲ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್‌ ಕೇಸ್‌ – ಹುಡುಗಿಯ ಬಾಯ್‌ಫ್ರೆಂಡ್‌ ಸಹ ಅರೆಸ್ಟ್‌

    ಪ್ರಕರಣ ಕುರಿತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagawant mann) ತನಿಖೆಗೆ ಆದೇಶಿಸಿದ್ದಾರೆ. ಪಂಜಾಬ್ ಪೊಲೀಸರು (Panjab Police) ಸಹ ಉನ್ನತಮಟ್ಟದಲ್ಲಿ ತನಿಖೆ ನಡೆಸಲು ವಿಶೇಷ ತಂಡ ನಿಯೋಜಿಸುವುದಾಗಿ ಭರವಸೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್‌ ಕೇಸ್‌ – ಹುಡುಗಿಯ ಬಾಯ್‌ಫ್ರೆಂಡ್‌ ಸಹ ಅರೆಸ್ಟ್‌

    ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್‌ ಕೇಸ್‌ – ಹುಡುಗಿಯ ಬಾಯ್‌ಫ್ರೆಂಡ್‌ ಸಹ ಅರೆಸ್ಟ್‌

    ಚಂಡೀಗಢ: ವಿಶ್ವವಿದ್ಯಾಲಯದಲ್ಲಿ (Chandigarh University) ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ (Private Video) ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೀಡಿಯೋ ಕಳಿಸಿದ್ದ ಹುಡುಗಿ ಹಾಗೂ ಆಕೆಯ ಬಾಯ್‌ಫ್ರೆಂಡ್‌ (BoyFriend) ಇಬ್ಬರನ್ನೂ ಪಂಜಾಬ್‌ ಪೊಲೀಸರು (Panjab Police) ಬಂಧಿಸಿದ್ದಾರೆ.

    ವಿವಿಯಲ್ಲಿ ನಡೆದ ಘಟನೆಯಿಂದಾಗಿ ಪರಸ್ಪರ ಪರಿಚಯವಿಲ್ಲದ ವಿದ್ಯಾರ್ಥಿಗಳಲ್ಲಿ ಭಾರೀ ಆತಂಕವನ್ನೇ ಉಂಟುಮಾಡಿದೆ. ತನ್ನ ವೈಯಕ್ತಿಕ ವೀಡಿಯೋವನ್ನು ಕಳಿಸಿದ್ದ ವಿದ್ಯಾರ್ಥಿನಿ ಹಾಗೂ ಬಾಯ್‌ ಫ್ರೆಂಡ್‌ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಹೆಚ್ಚಿನ ತನಿಖೆಗೆ ವಿಶೇಷ ತನಿಖಾ ತಂಡ (Speical Investigation Team) ನಿಯೋಜಿಸುವುದಾಗಿ ಭರವಸೆ ನೀಡಿದ್ದರೂ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ್ದಾರೆ ಎಂದು ಪಂಜಾಬ್‌ ಪೊಲೀಸರು ತಿಳಿಸಿದ್ದಾರೆ.

    ಘಟನೆ ಕುರಿತು ಇಂದು ಮಧ್ಯಾಹ್ನ ಸ್ಪಷ್ಟನೆ ನೀಡಿದ್ದ ಚಂಡೀಗಢ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಆರ್.ಎಸ್ ಬಾವಾ, ವಿದ್ಯಾರ್ಥಿಗಳ 60 ಆಕ್ಷೇಪಾರ್ಹ ಎಂಎಂಎಸ್‌ಗಳು ಕಂಡುಬಂದಿದೆ ಎನ್ನುತ್ತಿರುವ ವದಂತಿ ಸಂಪೂರ್ಣ ಸುಳ್ಳು ಹಾಗೂ ಆಧಾರ ರಹಿತವಾದುದು. ವಿವಿಯಲ್ಲಿ ವಿದ್ಯಾರ್ಥಿನಿ ಚಿತ್ರೀಕರಿಸಿದ ವೈಯಕ್ತಿಕ ವೀಡಿಯೋವನ್ನು ಹೊರತುಪಡಿಸಿ, ಉಳಿದ ಯಾವುದೇ ಆಕ್ಷೇಪಾರ್ಹ ವೀಡಿಯೋಗಳು ಕಂಡುಬಂದಿಲ್ಲ. ಅಲ್ಲದೇ ವಿದ್ಯಾರ್ಥಿನಿ ತನ್ನ ವೈಯಕ್ತಿಕ ವೀಡಿಯೋವನ್ನು ತನ್ನ ಬಾಯ್‌ಫ್ರೆಂಡ್‌ಗೆ ಹಂಚಿಕೊಂಡಿದ್ದಾಳೆ ಎಂದು ಹೇಳಿದ್ದರು.

    ಏನಿದು ಘಟನೆ?
    ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಸುಮಾರು 60 ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿರುವ ವೀಡಿಯೋವನ್ನು ಸಹ ವಿದ್ಯಾರ್ಥಿನಿಯೊಬ್ಬಳು ಸೆರೆಹಿಡಿದು, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿರುವುದಾಗಿ ಆರೋಪಿಸಲಾಗಿದೆ. ಈ ವೀಡಿಯೋವನ್ನು ಹರಿಬಿಟ್ಟ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ. ವೀಡಿಯೋ ಸೋರಿಕೆಯಾದ ಬೆನ್ನಲ್ಲೇ ಭಾರೀ ಪ್ರತಿಭಟನೆ ಬುಗಿಲೆದ್ದಿದ್ದು, ಈ ಬೆನ್ನಲ್ಲೇ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ, ವಿಶ್ವವಿದ್ಯಾಲಯಕ್ಕೆ ರಜೆ ಘೋಷಣೆ ಮಾಡಲಾಗಿದೆ. ವೀಡಿಯೋ ಕಳಿಸಿದ್ದ ಹುಡುಗಿಯನ್ನು ಇಂದು ಬೆಳಗ್ಗೆ ಬಂಧಿಸಲಾಗಿತ್ತು, ನಿರಂತರ ತನಿಖೆಯಿಂದಾಗಿ ಇಂದು ರಾತ್ರಿ ಬಾಯ್‌ಫ್ರೆಂಡ್‌ನನ್ನೂ ಬಂಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]