Tag: Girl Friend

  • ಗೆಳತಿಯನ್ನು ಪಿಕ್ ಮಾಡೋ ಬರದಲ್ಲಿ ಸಾವಿನ ದವಡೆಯಿಂದ ಪಾರಾದ ಪ್ರೇಮಿ!

    ಗೆಳತಿಯನ್ನು ಪಿಕ್ ಮಾಡೋ ಬರದಲ್ಲಿ ಸಾವಿನ ದವಡೆಯಿಂದ ಪಾರಾದ ಪ್ರೇಮಿ!

    ಬೆಂಗಳೂರು: ಗರ್ಲ್ ಫ್ರೆಂಡ್ ಪಿಕ್ ಮಾಡುವ ಬರದಲ್ಲಿ ಬೈಕ್ ಸವಾರನೊಬ್ಬ ಕೂದಲೆಳೆಯ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾದ ಘಟನೆಯೊಂದು ಶುಕ್ರವಾರ ಬೆಳಗ್ಗೆ 7:53ರ ಸುಮಾರಿಗೆ ಹೊಸೂರು ಮುಖ್ಯರಸ್ತೆಯಲ್ಲಿ ನಡೆದಿದೆ.

    ಗೆಳತಿಗಾಗಿ ಸವಾರ ವೇಗವಾಗಿ ಬೈಕನ್ನು ಚಲಾಯಿಸಿ ಕಂಟೈನರ್ ಓವರ್ ಟೇಕ್ ಮಾಡಲು ಮುಂದಾಗಿದ್ದಾನೆ. ಓವರ್ ಟೇಕ್ ಮಾಡಲು ಹೋಗಿ ಸಾಧ್ಯವಾಗದೇ ಇದ್ದಾಗ ಬೈಕನ್ನು ನಿಧಾನವಾಗಿ ಎಡಗಡೆಯಿಂದ ಚಲಾಯಿಸಿದ್ದಾನೆ. ಎಡಭಾಗದಲ್ಲಿ ಬೈಕ್ ಇದೆ ಎನ್ನುವುದನ್ನು ಗಮನಿಸದೇ ಚಾಲಕ ಕಂಟೈನರ್ ಚಲಾಯಿಸಿದ್ದಾನೆ. ಮುಂದಕ್ಕೆ ಹೋಗುತ್ತಿದ್ದಂತೆ ಕಂಟೈನರ್ ಎಡಭಾಗ ಬೈಕಿಗೆ ಹೊಡೆದಿದೆ. ಈ ವೇಳೆ ಬೈಕನ್ನು ನಿಯಂತ್ರಣ ಮಾಡಲು ಸಾಧ್ಯವಾಗದ ಕಾರಣ ಬೈಕಿನ ಜೊತೆಗೆ ಸವಾರ ರಸ್ತೆಗೆ ಬಿದ್ದಿದ್ದಾನೆ. ಒಂದು ವೇಳೆ ಮೊದಲೇ ರಸ್ತೆಗೆ ಸವಾರ ಬಿದ್ದಿದ್ದರೆ ಆತನ ಮೇಲೆ ಹಿಂದುಗಡೆ ಚಕ್ರ ಹರಿಯುವ ಸಾಧ್ಯತೆ ಇತ್ತು.

    ಈ ಎಲ್ಲ ದೃಶ್ಯಗಳು ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ ಬೈಕ್ ಸವಾರ ಪವಾಡ ಎಂಬಂತೆ ಪಾರಾಗಿದ್ದಾನೆ. ಬೈಕ್ ಸವಾರ ಪಾರಾದ ಈ ವಿಡಿಯೋವನ್ನು ನೋಡಿದರೆ, ಎಂತಹವರಿಗಾದರೂ ಮೈ ಜುಮ್ ಎಂದು ಅನಿಸುತ್ತದೆ.

    ಶುಕ್ರವಾರ ಬೆಳಗ್ಗೆ ಹೂಸೂರಿನಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಹೋಗುವ ವೇಳೆ ರಸ್ತೆ ಫುಲ್ ಟ್ರಾಫಿಕ್ ಜಾಮ್ ಆಗಿತ್ತು. ಈ ವೇಳೆ ಕೆಲಸಕ್ಕೆ ಟೈಮ್ ಆಗಿದೆ ಗೆಳತಿಯನ್ನು ಪಿಕ್ ಮಾಡಬೇಕು ಎಂದು ಬೈಕ್ ಸವಾರ ಆತುರದಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನುವ ವಿಚಾರ ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಯಸಿಯೊಂದಿಗೆ ಸೇರಿ ಪತ್ನಿಯನ್ನು ಕೊಂದ ಪಾಪಿ ಪತಿ

    ಪ್ರೇಯಸಿಯೊಂದಿಗೆ ಸೇರಿ ಪತ್ನಿಯನ್ನು ಕೊಂದ ಪಾಪಿ ಪತಿ

    ಕಲಬುರಗಿ: ಪತಿಯೊಬ್ಬ ತನ್ನ ಪ್ರೇಯಸಿ ಜೊತೆ ಸೇರಿ ತಾಳಿ ಕಟ್ಟಿದ್ದ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ರೇಷ್ಮಾ (25) ಕೊಲೆಯಾದ ಮಹಿಳೆ. ಪತಿ ವಿಜಯ್ ಕುಮಾರ್ ತನ್ನ ಪ್ರೇಯಸಿ ಪೂಜಾ ಜೊತೆ ಸೇರಿ ರೇಷ್ಮಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ವಿಜಯ್ ಹಾಗೂ ಪೂಜಾ ರೇಷ್ಮಾಳ ಮೃತದೇಹವನ್ನು ಜೇವರ್ಗಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹೊಲದಲ್ಲಿ ಹೂತು ಹಾಕಿದ್ದನು.

    ರೇಷ್ಮಾಳನ್ನು ಕೊಲೆ ಮಾಡಿದ ಬಳಿಕ ವಿಜಯ್ ಕುಮಾರ್ ಡಿಸೆಂಬರ್ 4ರಂದು ವಾಡಿ ಪೊಲೀಸ್ ಠಾಣೆಯಲ್ಲಿ ತನ್ನ ಪತ್ನಿ ನಾಪತ್ತೆ ಆಗಿದ್ದಾಳೆ ಎಂದು ದೂರು ದಾಖಲಿಸಿದ್ದನು. ಆಗ ಪೊಲೀಸರಿಗೆ ಅನುಮಾನ ಬಂದು ಪತಿ ವಿಜಯಕುಮಾರ್ ನನ್ನು ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

    ಈ ಬಗ್ಗೆ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಯಸಿಯನ್ನು ಕೊಂದು ತಾನು ನೇಣಿಗೆ ಶರಣಾದ..!

    ಪ್ರೇಯಸಿಯನ್ನು ಕೊಂದು ತಾನು ನೇಣಿಗೆ ಶರಣಾದ..!

    ನವದೆಹಲಿ: ದಕ್ಷಿಣ ದೆಹಲಿಯ ಫ್ಲಾಟ್‍ವೊಂದರಲ್ಲಿ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಕೊಂದು ನಂತರ ತಾನು ನೇಣಿಗೆ ಶರಣಾಗಿರುವ ಘಟನೆ ಸೋಮವಾರದಂದು ನಡೆದಿದೆ.

    ಅಭಿಷೇಕ್ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಪ್ರೇಮಿ. ಅಭಿಷೇಕ್ ಪ್ರೇಯಸಿ ಹಾಗೂ ಅವಳ ಗೆಳತಿ ಕಳೆದ ಎರಡು ತಿಂಗಳಿಂದ ಒಟ್ಟಿಗೆ ದೆಹಲಿಯ ಸುಮನ್ ಕಾಲೋನಿಯ ಫ್ಲ್ಯಾಟ್ ವೊಂದರಲ್ಲಿ ವಾಸಿಸುತ್ತಿದ್ದರು. ಸೋಮವಾರ ಸಂಜೆ 7.30 ಸುಮಾರಿಗೆ ಯುವತಿಯ ಗೆಳತಿ ತಮ್ಮ ಫ್ಲ್ಯಾಟ್ ಬಾಗಿಲು ಒಳಗಿನಿಂದ ಲಾಕ್ ಆಗಿದೆ ಒಳಗೆ ಕಳ್ಳರು ಸೇರಿರಬಹುದು ಎಂದು ಪೊಲೀಸರಿಗೆ ಕರೆಮಾಡಿ ತಿಳಿಸಿದ್ದಳು. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ಒಳಗೆ ಹೋದಾಗ ಯುವತಿ ಹಾಗೂ ಅಭಿಷೇಕ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

    ಕಳೆದ ಹಲವು ವರ್ಷಗಳಿಂದ ಅಭಿಷೇಕ್ ಹಾಗೂ ಯುವತಿ ಪ್ರೀತಿಸುತ್ತಿದ್ದರು. ಆದರೆ ಕೆಲದಿನಗಳಿಂದ ಅವರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪ ಉಂಟಾಗಿತ್ತು. ಇದರಿಂದ ಮನನೊಂದಿದ್ದ ಅಭಿಷೇಕ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಬಳಿಕ ಏಕಾಏಕಿ ಯುವತಿಯ ಫ್ಲ್ಯಾಟ್‍ಗೆ ತೆರಳಿದ್ದ ಅಭಿಷೇಕ್ ಆಕೆಯ ಕತ್ತು ಕೊಯ್ದು ಸಾಯಿಸಿ ನಂತರ ತಾನು ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡುಕೊಂಡಿದ್ದಾನೆ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ಕುರಿತು ದಕ್ಷಿಣ ದೆಹಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಯಸಿಯ “I Don’t Mind” ಮೆಸೇಜ್ ನೋಡಿ ಪ್ರಿಯಕರ ನೇಣಿಗೆ ಶರಣು!

    ಪ್ರೇಯಸಿಯ “I Don’t Mind” ಮೆಸೇಜ್ ನೋಡಿ ಪ್ರಿಯಕರ ನೇಣಿಗೆ ಶರಣು!

    ಬೆಂಗಳೂರು: ನಾನು ಸಾಯುತ್ತೇನೆ ಎಂದು ಪ್ರೇಯಸಿಗೆ ಹೇಳಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಸಂಜೆ ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಯ್ಯ ರಸ್ತೆಯಲ್ಲಿ ನಡೆದಿದೆ.

    ಕೆವಿನ್ ಫೆಡರಿಕ್(21) ಆತ್ಮಹತ್ಯೆ ಮಾಡಿಕೊಂಡ ಯುವಕ. ಕೆವಿನ್ ಫೆಡರಿಕ್ ಖಾಸಗಿ ಕಾಲೇಜ್ ನಲ್ಲಿ ಹೊಟೆಲ್ ಮ್ಯಾನೇಜ್ ಮೆಂಟ್ ವ್ಯಾಸಂಗ ಮಾಡುತ್ತಿದ್ದ. ಪ್ರೀತಿ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ಕೆವಿನ್ ತನ್ನ ಮೊಬೈಲ್ ನಲ್ಲಿ ಯುವತಿ ಜೊತೆ ಚಾಟ್ ಮಾಡುತ್ತಿದ್ದ. ಈ ವೇಳೆ ಕೆವಿನ್ ತನ್ನ ಪ್ರೇಯಸಿಯೊಂದಿಗೆ ಚಾಟ್ ಮಾಡುವಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೇಸೆಜ್ ಮಾಡಿದ್ದಾನೆ. ನಂತರ ತನ್ನ ಪ್ರೇಯಸಿಯ ಪ್ರತಿಕ್ರಿಯೆ ನೋಡಿ ಕೆವಿನ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಕೆವಿನ್ ನಾನು ಸಾಯುತ್ತೇನೆ ಎಂದಾಗ ಯುವತಿ ‘ಐ ಡೋಂಟ್ ಮೈಂಡ್’ ಎಂದು ಮೇಸಜ್‍ಗೆ ರಿಪ್ಲೇ ಮಾಡಿದ್ದಾಳೆ. ಇದ್ದರಿಂದ ಮನನೊಂದು ಕೆವಿನ್ ತನ್ನ ಪ್ರೇಯಸಿಗೆ ತಾನು ಸಾಯುವ ಮುನ್ನ ಹಗ್ಗವನ್ನು ಫ್ಯಾನ್ ಗೆ ಕಟ್ಟಿರುವ ಫೋಟೋವನ್ನು ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಕೆವಿನ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಭಾರತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರಿಯತಮೆ ಮದ್ವೆಯಾದ 10 ದಿನದಲ್ಲಿ 36ಕ್ಕೂ ಹೆಚ್ಚು ಆಕೆಯ ಅಶ್ಲೀಲ ಫೋಟೋವನ್ನು ಪತಿಗೆ ಸೆಂಡ್ ಮಾಡ್ದ!

    ಪ್ರಿಯತಮೆ ಮದ್ವೆಯಾದ 10 ದಿನದಲ್ಲಿ 36ಕ್ಕೂ ಹೆಚ್ಚು ಆಕೆಯ ಅಶ್ಲೀಲ ಫೋಟೋವನ್ನು ಪತಿಗೆ ಸೆಂಡ್ ಮಾಡ್ದ!

    ಭುವನೇಶ್ವರ: ತನ್ನ ಮಾಜಿ ಗೆಳತಿಯ ಮದುವೆಯಾದ 10 ದಿನದಲ್ಲೇ ಪ್ರಿಯತಮ ಆಕೆಯ 36ಕ್ಕೂ ಹೆಚ್ಚು ಅಶ್ಲೀಲ ಫೋಟೋ, ವಿಡಿಯೋಗಳನ್ನು ಆಕೆಯ ಪತಿಗೆ ಕಳುಹಿಸಿದ ಘಟನೆ ಒಡಿಶಾದ ಕೋರಾಪುಟ್‍ನ ಜೆಪೋರ್ ನಲ್ಲಿ ನಡೆದಿದೆ.

    ಪ್ರಿಯತಮೆ ಬೇರೆಯವನ ಜೊತೆ ಮದುವೆಯಾಗಿದ್ದಕ್ಕೆ ಪ್ರಿಯಕರ ಆಕೆಯ 36ಕ್ಕೂ ಹೆಚ್ಚು ಅಶ್ಲೀಲ ಫೋಟೋ, ವಿಡಿಯೋಗಳನ್ನು ಆಕೆಯ ಪತಿಗೆ ಕಳುಹಿಸಿದ್ದಾನೆ. ಆ ಫೋಟೋಗಳನ್ನು ನೋಡಿ ಯುವತಿಯ ಪತಿ ಜೆಪೋರ್ ಸದಾರ್ ಪೊಲೀಸ್ ಠಾಣೆಯಲ್ಲಿ ಇಂದು ಬೆಳಗ್ಗೆ ಯುವಕನ ವಿರುದ್ಧ ದೂರು ನೀಡಿದ್ದಾನೆ.

    ಯುವಕನ ಜೊತೆಯಿರುವ ತನ್ನ ಪತ್ನಿಯ ಅಶ್ಲೀಲ ಫೋಟೋ, ವಿಡಿಯೋಗಳನ್ನು ನೋಡಿದ ಪತಿ ನಾನು ನನ್ನ ಮುಂದಿನ ಜೀವನವನ್ನು ಈಕೆಯ ಜೊತೆ ಕಳೆಯಲು ಇಷ್ಟಪಡುವುದಿಲ್ಲ ಎಂದು ಪೊಲೀಸ್ ಠಾಣೆಯಲ್ಲಿ ಹೇಳಿದ್ದಾನೆ.

    ಪೊಲೀಸರ ಪ್ರಕಾರ ಯುವಕ ಆ ಯುವತಿಯ ಪ್ರಿಯಕರ ಎಂದು ಹೇಳಿಕೊಂಡಿದ್ದಾನೆ. ಅಲ್ಲದೇ ಆಕೆಯ ಪತಿಯ ವಾಟ್ಸಾಪ್ ನಂಬರ್ ಕೂಡ ಪಡೆದಿದ್ದಾನೆ. ನಂತರ ಆರೋಪಿ ಯುವತಿ ಜೊತೆಯಿರುವ 36 ಅಶ್ಲೀಲ ಫೋಟೋ, ವಿಡಿಯೋವನ್ನು ಯುವತಿಯ ಪತಿಗೆ ಕಳುಹಿಸಿದ್ದಾನೆ ಎಂದು ಹೇಳಿದ್ದಾರೆ. ಸದ್ಯ ಪೊಲೀಸರು ಈ ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.

  • ಬಾಯ್‍ಫ್ರೆಂಡ್ ಇಲ್ಲದಿದ್ದರೆ ಹುಡುಗಿಯರು ಸುರಕ್ಷಿತ: ಬಿಜೆಪಿ ಶಾಸಕ

    ಬಾಯ್‍ಫ್ರೆಂಡ್ ಇಲ್ಲದಿದ್ದರೆ ಹುಡುಗಿಯರು ಸುರಕ್ಷಿತ: ಬಿಜೆಪಿ ಶಾಸಕ

    ಭೋಪಾಲ್: ನೀವು ಸುರಕ್ಷಿತವಾಗಿ ಇರಬೇಕಾದರೆ ಬಾಯ್‍ಫ್ರೆಂಡ್ ಸಹವಾಸ ಮಾಡಬೇಡಿ ಎಂದು ಮಧ್ಯಪ್ರದೇಶದ ಗುನಾ ಕ್ಷೇತ್ರದ ಬಿಜೆಪಿ ಶಾಸಕ ಪನ್ನಾಲಾಲ್ ಶಾಕ್ಯ ಅವರು ಹುಡುಗಿಯರಿಗೆ ಸಲಹೆ ನೀಡಿದ್ದಾರೆ.

    ಸ್ಥಳೀಯ ಗುನಾ ಸರ್ಕಾರಿ ಕಾಲೇಜಿನಲ್ಲಿ ಮಾತನಾಡಿದ ಅವರು, ಹುಡುಗಿಯರಿಗೆ ಬಾಯ್ ಫ್ರೆಂಡ್ ಏಕೆ ಬೇಕು? ಎಂದು ಪ್ರಶ್ನಿಸಿದ್ದು, ಹುಡುಗಿಯರ ಮೇಲಿನ ದೌರ್ಜನ್ಯಗಳು ನಿಲ್ಲಬೇಕಾದರೆ ಗೆಳೆಯರಿಂದ ದೂರವಿರಬೇಕು ಎಂದು ಹೇಳಿದ್ದಾರೆ.

    ಇದೇ ವೇಳೆ ತಾವು ಭಾಗವಹಿಸಿದ್ದ ಖಾಸಗಿ ಟಿವಿ ವಾಹಿನಿವೊಂದರ ವೇಳೆಯೂ ತಾನು ಮಧ್ಯಪ್ರದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತ ಪ್ರಶ್ನೆಗೂ ಇದೇ ಉತ್ತರವನ್ನು ನೀಡಿರುವುದಾಗಿ ತಿಳಿಸಿದರು.

    ಇಂದಿನ ಯುವಕರಿಗೂ ಗರ್ಲ್ ಫ್ರೆಂಡ್ ಗಳನ್ನು ಮಾಡಿಕೊಳ್ಳದಿರಲು ಸಲಹೆ ನೀಡಿದ ಅವರು, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಕರಣೆ ಮಾಡದಿರಲು ತಿಳಿಸಿದರು. ಅಲ್ಲದೇ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯು ವಿದೇಶಿ ಸಂಸ್ಕೃತಿ ಪ್ರತಿರೂಪವಾಗಿದ್ದು, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌರವವಿದೆ. ವರ್ಷದಲ್ಲಿ ನಾವು ನಾಲ್ಕು ಬಾರಿ ಮಹಿಳಾ ದಿನ ಆಚರಿಸುತ್ತೇವೆ. ನಾಲ್ಕು ಬಾರಿ ಅವರನ್ನು ಪೂಜಿಸುತ್ತೇವೆ ಎಂದರು.

    ಶಾಸಕ ಪನ್ನಾಲಾಲ್ ಈ ಹಿಂದೆಯೂ ಹಲವು ಬಾರಿ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಇಟಲಿಯಲ್ಲಿ ವಿವಾಹವಾಗಿದ್ದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಕೊಹ್ಲಿ ದೇಶಭಕ್ತನಾಗಲು ಸಾಧ್ಯವಿಲ್ಲ: ಬಿಜೆಪಿ ಶಾಸಕ

  • ಗರ್ಲ್ ಫ್ರೆಂಡ್ ಜೊತೆ ಸೇರಿ ತಾಯಿ, ಪತ್ನಿ ಮೇಲೆ ಹಲ್ಲೆಗೆ ಯತ್ನಿಸಿದ ವ್ಯಕ್ತಿ

    ಗರ್ಲ್ ಫ್ರೆಂಡ್ ಜೊತೆ ಸೇರಿ ತಾಯಿ, ಪತ್ನಿ ಮೇಲೆ ಹಲ್ಲೆಗೆ ಯತ್ನಿಸಿದ ವ್ಯಕ್ತಿ

    ಬೆಂಗಳೂರು: ಗರ್ಲ್ ಫ್ರೆಂಡ್ ಜೊತೆ ಸೇರಿಕೊಂಡು ಪತ್ನಿ ಹಾಗೂ ತನ್ನ ತಾಯಿಯ ಮೇಲೆ ಪತಿರಾಯನೊಬ್ಬ ಹಲ್ಲೆ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನ ಪುಲಿಕೇಶಿನಗರದಲ್ಲಿ ನಡೆದಿದೆ.

    ರೋಹಿತ್ ತನ್ನ ಕುಟುಂಬದವರ ಮೇಲೆ ಹಲ್ಲೆಗೆ ಯತ್ನಿಸಿರೋ ವ್ಯಕ್ತಿ. ರೋಹಿತ್ ತನ್ನ ಪ್ರೇಯಸಿ ಅಬಂತಿಕಾ ಜೊತೆ ಸೇರಿ ಪತ್ನಿ ಸ್ನೇಹಾ ಹಾಗೂ ತಾಯಿ ನಂದಾರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆರು ವರ್ಷಗಳ ಹಿಂದೆ ಸ್ನೇಹಾ ಅವರನ್ನ ಮದುವೆಯಾಗಿದ್ದ ರೋಹಿತ್, ಇತ್ತೀಚಿನ ದಿನಗಳಲ್ಲಿ ಅಬಂತಿಕಾಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.

    ಈ ಬಗ್ಗೆ ಮನೆಯಲ್ಲಿ ಪ್ರಶ್ನಿಸಿದ್ದಕ್ಕೆ ತಾಯಿ ಮತ್ತು ಹೆಂಡತಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ ಈ ಭೂಪ. ಪ್ರೇಯಸಿ ಮಾತಿಗೆ ಮರುಳಾಗಿ ಪತ್ನಿ ಸ್ನೇಹಾಗೆ ಡೈವೋರ್ಸ್ ನೀಡುವಂತೆ ಪದೇ ಪದೇ ಕಿರುಕುಳ ನೀಡುತ್ತಿದ್ದಾನೆ. ಇದಕ್ಕೆ ಒಲ್ಲೆ ಎಂದಾಗ ಸಾಕಷ್ಟು ಬಾರಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ.

    ಮಂಗಳವಾರ ರಾತ್ರಿ ರೋಹಿತ್ ಮತ್ತು ಅಬಂತಿಕಾ ಇಬ್ಬರು ಸೇರಿ ಮನೆ ಹತ್ತಿರ ಬಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಪತ್ನಿ ಸ್ನೇಹ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ.

    ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಪುಲಿಕೇಶಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.