Tag: Girl Friend

  • ರಾತ್ರಿ ಪ್ರೇಯಸಿ ನೋಡಲು ಹೋಗಿ ಹೆಣವಾದ ಪ್ರಿಯಕರ

    ರಾತ್ರಿ ಪ್ರೇಯಸಿ ನೋಡಲು ಹೋಗಿ ಹೆಣವಾದ ಪ್ರಿಯಕರ

    -ಗೆಳತಿ ಕಾಣಲು ಹೋದವನಿಗೆ ನರಕ ದರ್ಶನ
    -ಎರಡು ಗ್ರಾಮಗಳ ನಡುವೆ ಉದ್ವಿಘ್ನ ಪರಿಸ್ಥಿತಿ

    ಲಕ್ನೋ: ಪಕ್ಕದೂರಿನಲ್ಲಿರುವ ಗೆಳತಿಯನ್ನ ಕಾಣಲು ಹೋದ ಪ್ರಿಯಕರನ ಕೊಲೆಯಾಗಿರುವ ಘಟನೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಭರ್ತಿಯಾ ಗ್ರಾಮದಲ್ಲಿ ನಡೆದಿದೆ.

    ಪರಖಮ್ ಗುರ್ಜರ್ ಗ್ರಾಮದ ಸಾಹೇಬ್ ಸಿಂಗ್ ಕೊಲೆಯಾದ ಯುವಕ. ಸಾಹೇಬ್ ಸಿಂಗ್ ತನ್ನ ಗೆಳೆಯ ಲಕ್ಷ್ಮಣ್ ಸಿಂಗ್ ಜೊತೆ ರಾತ್ರಿ ಪಕ್ಕದೂರಿನಲ್ಲಿರುವ ಪ್ರೇಯಸಿಯನ್ನ ಭೇಟಿಯಾಗಲು ತೆರಳಿದ್ದನು. ಈ ವೇಳೆ ಯುವತಿಯ ಕುಟುಂಬಸ್ಥರು ಯುವಕರಿಬ್ಬರನ್ನು ಹಿಡಿದಿದ್ದಾರೆ. ಗ್ರಾಮಸ್ಥರ ಜೊತೆ ಸೇರಿದ ಯುವತಿ ಕುಟುಂಬಸ್ಥರು ಯುವಕರಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಸಾಹೇಬ್ ಸಿಂಗ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಮದ್ವೆಯಾಗಿದ್ದ 20ರ ಯುವತಿಯ ಜೊತೆ 21ರ ಯುವಕನ ಮೃತದೇಹ ಪತ್ತೆ

    ವಿಷಯ ತಿಳಿದ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಗಾಯಾಳು ಲಕ್ಷ್ಮಣ್‍ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತನ ಶವ ತಮ್ಮ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಯುವತಿ ಠಾಕೂರ್ ಸಮಾಜದವಳಾಗಿದ್ದು, ಯುವಕ ಗುರ್ಜರ್ ಸಮುದಾಯಕ್ಕೆ ಸೇರಿದನಾಗಿದ್ದರಿಂದ ಎರಡು ಗ್ರಾಮಗಳಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎರಡೂ ಗ್ರಾಮಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದಕ್ಕೆ ತಂಗಿ ಆತ್ಮಹತ್ಯೆ – ಪ್ರೇಮಿಯನ್ನು ಕೊಚ್ಚಿಕೊಂದ ಅಣ್ಣ

    ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದಾಗ ಗ್ರಾಮಸ್ಥರು ಓರ್ವ ಯುವಕನನ್ನು ಥಳಿಸುತ್ತಿದ್ದರು. ಓರ್ವ ಮೃತಪಟ್ಟಿದ್ದ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದನು. ಘಟನೆ ಸಂಬಂಧ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ ಎಂದು ಎಸ್‍ಎಸ್‍ಪಿ ಡಾ.ಗೌರವ್ ಗ್ರೋವರ್ ತಿಳಿಸಿದ್ದಾರೆ. ಇದನ್ನೂ ಓದಿ: ವಿವಾಹಿತೆ ಮೇಲೆ ಆರು ಮಂದಿಯಿಂದ ಗ್ಯಾಂಗ್‍ರೇಪ್ – ವಿಡಿಯೋ ರೆಕಾರ್ಡ್

  • ಫೋನ್ ಕರೆ ಸ್ವೀಕರಿಸಲು ಗೆಳತಿ ನಕಾರ- ಮನನೊಂದು ಯುವಕ ಆತ್ಮಹತ್ಯೆಗೆ ಯತ್ನ

    ಫೋನ್ ಕರೆ ಸ್ವೀಕರಿಸಲು ಗೆಳತಿ ನಕಾರ- ಮನನೊಂದು ಯುವಕ ಆತ್ಮಹತ್ಯೆಗೆ ಯತ್ನ

    ಚೆನ್ನೈ: ಪ್ರಿಯತಮೆ ತನ್ನ ಕಾಲ್ ಸ್ವೀಕರಿಸುತ್ತಿಲ್ಲ ಎಂದು ಮನನೊಂದು 22 ವರ್ಷದ ಆಟೋ ಚಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ.

    ಆತ್ಮಹತ್ಮೆಗೆ ಯತ್ನಿಸಿದವನನ್ನು ದುರೈ ಎಂದು ಗುರುತಿಸಲಾಗಿದ್ದು, ಈತ ಉತ್ತರ ಚೆನ್ನೈನ ಕೊರಕ್ಕುಪೇಟೆ ನೆರೆಹೊರೆಯ ಪಟ್ಟಾಭಿಷೇಕ ನಗರ ನಿವಾಸಿ.

    ಕೊರೊನಾ ಲಾಕ್ ಡೌನ್ ಆದ ಬಳಿಕ ದುರೈ ಹಾಗೂ ಆತನ ಪ್ರಿಯತಮೆ ಭೇಟಿಯಾಗಿರಲಿಲ್ಲ. ಆದರೆ ಫೋನ್ ಕಾಲ್ ಹಾಗೂ ಮೆಸೇಜ್ ಮೂಲಕ ಇಬ್ಬರೂ ನಿರಂತರ ಸಂಪರ್ಕದಲ್ಲಿದ್ದರು. ಇತ್ತೀಚೆಗೆ ಗೆಳತಿ ಫೋನ್, ಮೆಸೇಜ್ ಮಾಡದೆ ಈತನನ್ನು ನಿರ್ಲಕ್ಷ್ಯಿಸುತ್ತಿದ್ದಳು. ಇದರಿಂದ ದುರೈ ಮಾನಸಿಕವಾಗಿ ನೊಂದಿದ್ದಾನೆ. ಈ ಹಿನ್ನೆಲೆಯಲ್ಲಿ ಗುರುವಾರ ತಾನು ವಾಸವಿದ್ದ ಕಟ್ಟಡದ ಮೂರನೇ ಮಹಡಿಯಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಕಟ್ಟಡದಿಂದ ಜಿಗಿದಿದ್ದರಿಂದ ದುರೈ ಕಾಲಿನ ಮೂಳೆಗಳು ಹಾಗೂ ದೇಹದ ಇತರೆ ಭಾಗಗಳಿಗೆ ಗಂಭೀರವಾಗಿ ಗಾಯಗಳಾಗಿವೆ. ನೋವಿನಿಂದ ಚೀರಾಡಿದ್ದನು ಕೇಳಿಸಿಕೊಂಡ ಸ್ಥಳೀಯರು ಕೂಡಲೇ ಆತನ ರಕ್ಷಣೇಗೆ ಧಾವಿಸಿದ್ದಾರೆ. ಬಳಿಕ ಆತನನ್ನು ಜಿಎಸ್‍ಎಂಸಿಎಚ್ ಗೆ ದಾಖಲಿಸಿ ಐಸಿಯುವಿನಲ್ಲಿ ಚಿಕಿತ್ಸೆ ಕೊಡಿಲಾಗುತ್ತಿದೆ. ಸದ್ಯ ಯುವಕ ಪ್ರಜ್ಞಾಹೀನನಾಗಿದ್ದು, ವೈದ್ಯರು ನಿಗಾ ಇಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

    ಘಟನೆ ಸಂಬಂಧ ಆರ್‍ಕೆ ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದುರೈ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ದುರೈ ಆರೋಗ್ಯ ಸುಧಾರಿಸಿದ ಬಳಿಕ ಆತನ ಬಳಿಯಿಂದ ಹೇಳಿಕೆ ಪಡೆದುಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪೊಲೀಸರ ಪ್ರಕಾರ, ದುರೈ ತನ್ನ ಹೆತ್ತವರೊಂದಿಗೆ ಕೊರಕ್ಕುಪೇಟೆ ವಸತಿ ಸಮುಚ್ಚಯದ ಮೂರನೇ ಮಹಡಿಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದು, ಗೆಳತಿ ಕೂಡ ನೆರೆಹೊರೆಯ ನಿವಾಸಿ ಎಂದು ತಿಳಿದುಬಂದಿದೆ.

  • ಪ್ರೇಯಸಿ ಜೊತೆ ಸೇರಿಕೊಂಡು ತಾಯಿಯನ್ನೇ ಕೊಂದ ಮಗ

    ಪ್ರೇಯಸಿ ಜೊತೆ ಸೇರಿಕೊಂಡು ತಾಯಿಯನ್ನೇ ಕೊಂದ ಮಗ

    – ಪ್ರೀತಿ ವಿರೋಧಿಸಿದ್ದಕ್ಕೆ ಹೆತ್ತ ತಾಯಿಯ ಕೊಲೆ
    – ಸುಳ್ಳು ಕತೆ ಹೇಳಿದ ಮಗ, ಯುವತಿ ಅರೆಸ್ಟ್

    ಲಕ್ನೋ: ಮಗನೊಬ್ಬ ಪ್ರೇಯಸಿ ಜೊತೆ ಸೇರಿಕೊಂಡು ತನ್ನ ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಲಕ್ಷ್ಮಿ ದೇವಿ(55) ಕೊಲೆಯಾದ ತಾಯಿ. ಶಿವಂ ಮಾರ್ಚ್ 6ರಂದು ತನ್ನ ತಾಯಿಯನ್ನು ಕೊಲೆ ಮಾಡಿ ಪೊಲೀಸ್ ಠಾಣೆಗೆ ಹೋಗಿ ಪೊಲೀಸರ ಬಳಿ ಸುಳ್ಳು ಕತೆ ಹೇಳಿದ್ದನು. ಪೊಲೀಸರು ಸ್ಥಳಕ್ಕೆ ಬಂದು ಮಹಿಳೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ವರದಿ ಬಂದಾಗ ಇದು ಕೊಲೆ ಎಂಬುದು ಪೊಲೀಸರಿಗೆ ತಿಳಿಯಿತು. ಬಳಿಕ ಶಿವಂ ಮೇಲೆ ಅನುಮಾನಗೊಂಡ ಪೊಲೀಸರು ಆತನನ್ನು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.

    ನಡೆದಿದ್ದೇನು?
    ಶಿವಂ ತನ್ನ ಪಕ್ಕದ ಮನೆಯಲ್ಲಿರುವ ಯುವತಿಯನ್ನು ಪ್ರೀತಿಸುತ್ತಿದ್ದನು. ಇವರಿಬ್ಬರ ಪ್ರೀತಿಯನ್ನು ಲಕ್ಷ್ಮಿ ದೇವಿ ತೀವ್ರವಾಗಿ ವಿರೋಧಿಸಿದ್ದರು. ಯುವತಿ ಜೊತೆ ಓಡಿ ಹೋಗಿ ಬೇರೆ ಕಡೆ ಜೀವನ ನಡೆಸಲು ಶಿವಂ ನಿರ್ಧರಿಸಿದ್ದನು. ಅಲ್ಲದೆ ತನ್ನ ತಾಯಿಯ ಬಳಿ ಹಣ ಕೂಡ ಕೇಳಿದ್ದನು. ಹಣ ಕೊಟ್ಟರೆ ಶಿವಂ ಯುವತಿ ಜೊತೆ ಓಡಿ ಹೋಗುತ್ತಾನೆ ಎಂದು ಮಹಿಳೆ ಆತನಿಗೆ ಹಣ ಕೊಡಲು ನಿರಾಕರಿಸಿದ್ದಳು.

    ಘಟನೆ ನಡೆದ ದಿನ ಶಿವಂ ಮನೆಯಲ್ಲಿದ್ದ ಚಿನ್ನ ಹಾಗೂ ಹಣವನ್ನು ತೆಗೆದುಕೊಳ್ಳುತ್ತಿದ್ದನು. ಇದನ್ನು ನೋಡಿದ ತಾಯಿ ಆತನಿಗೆ ಬೈದು ಹಣ ಹಾಗೂ ಚಿನ್ನವನ್ನು ವಾಪಸ್ ಪಡೆದರು. ಇದರಿಂದ ಕೋಪಗೊಂಡ ಶಿವಂ ತನ್ನ ತಾಯಿಯನ್ನು ಜೋರಾಗಿ ತಳ್ಳಿದ್ದನು. ಪರಿಣಾಮ ಲಕ್ಷ್ಮಿ ದೇವಿ ಗಾಯಗೊಂಡಿದ್ದರು. ಬಳಿಕ ಶಿವಂ ತನ್ನ ಪ್ರೇಯಸಿಯನ್ನು ಕರೆದಿದ್ದನು. ಇಬ್ಬರು ದಿಂಬಿನಿಂದ ಲಕ್ಷ್ಮಿ ದೇವಿಯ ಉಸಿರುಗಟ್ಟಿ ಕೊಲೆ ಮಾಡಿದ್ದರು. ಕೊಲೆ ಮಾಡಿದ ನಂತರ ಶಿವಂ ಹಾಗೂ ಯುವತಿ ಸ್ಥಳದಿಂದ ಪರಾರಿಯಾಗಿದ್ದರು.

    ಈ ಬಗ್ಗೆ ಎಸ್‍ಪಿ ಸಿ.ಟಿ ರೋಹನ್ ಪ್ರತಿಕ್ರಿಯಿಸಿ, ಲಕ್ಷ್ಮಿ ದೇವಿ ಒಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಪತಿ ಹಲವು ವರ್ಷಗಳ ಹಿಂದೆ ನಿಧನರಾಗಿದ್ದರು. ಘಟನೆ ನಡೆದ ದಿನ ಶಿವಂ ಯುವತಿಯನ್ನು ಆಕೆಯ ಮನೆಗೆ ಕಳುಹಿಸಿ ಸ್ವತಃ ತಾನು ಓಡಿ ಹೋಗಿದ್ದನು. ರಾತ್ರಿ ಶಿವಂ ಮನೆಗೆ ವಾಪಸ್ ಬಂದ ನಂತರ ಪೊಲೀಸ್ ಠಾಣೆಗೆ ಬಂದು ತಾಯಿ ಮೃತಪಟ್ಟಿದ್ದಾರೆ ಎಂದು ಸುಳ್ಳು ಕತೆ ಹೇಳಿದ್ದನು. ನಾವು ಮಹಿಳೆಯ ಮೃತದೇಹವನ್ನು ವಶಕ್ಕೆ ಪಡೆದು ತನಿಖೆ ಶುರು ಮಾಡಿದ್ದೇವು. ಈ ವೇಳೆ ಶಿವಂ ಮೇಲೆ ಅನುಮಾನ ಬಂದಿದ್ದು, ಆತನನ್ನು ವಶಕ್ಕೆ ಪಡೆದುಕೊಂಡಿದ್ದೇವು. ತೀವ್ರವಾಗಿ ವಿಚಾರಣೆ ನಡೆಸಿದಾಗ ಶಿವಂ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡನು. ಬಳಿಕ ಶಿವಂ ಹಾಗೂ ಆತನ ಪ್ರೇಯಸಿಯನ್ನು ಬಂಧಿಸಿದ್ದೇವು ಎಂದು ತಿಳಿಸಿದರು.

  • ಬ್ರೇಕಪ್ ಮಾಡ್ಕೊಂಡಿದ್ದಕ್ಕೆ ಪ್ರೇಯಸಿಗೆ ಚಾಕು ಇರಿದ ಪ್ರಿಯಕರ

    ಬ್ರೇಕಪ್ ಮಾಡ್ಕೊಂಡಿದ್ದಕ್ಕೆ ಪ್ರೇಯಸಿಗೆ ಚಾಕು ಇರಿದ ಪ್ರಿಯಕರ

    – ಬಳಿಕ 3ನೇ ಮಹಡಿಯಿಂದ ಆತ್ಮಹತ್ಯೆಗೆ ಯತ್ನ
    – ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ

    ಭೋಪಾಲ್: ಬ್ರೇಕಪ್ ಮಾಡಿಕೊಂಡಿದ್ದಕ್ಕೆ ಪ್ರಿಯಕರನೊಬ್ಬ ತನ್ನ ಪ್ರೇಯಸಿಗೆ ಚಾಕು ಇರಿದು ಹಲ್ಲೆ ಮಾಡಿ ಸ್ವತಃ ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಧ್ಯಪ್ರದೇಶದ ಬುರ್ಹಾನಪುರದಲ್ಲಿ ನಡೆದಿದೆ.

    ಯುವಕ ತನ್ನ ಪ್ರೇಯಸಿಗೆ ಚಾಕು ಇರಿದ ತಕ್ಷಣ ಮೂರನೇ ಮಹಡಿಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಈ ಘಟನೆಯಿಂದ ಯುವಕ ಹಾಗೂ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸುದ್ದಿ ಸಂಸ್ಥೆ ಪ್ರಕಾರ, ಈ ಘಟನೆ ಬುರ್ಹಾನಪುರದ ಸೇವಾ ಸದನ್ ಕಾಲೇಜಿನಲ್ಲಿ ನಡೆದಿದೆ. ಈ ಕಾಲೇಜಿನ ವಿದ್ಯಾರ್ಥಿಯೊಬ್ಬ ಯುವತಿಗೆ ಚಾಕು ಇರಿದು ಹಲ್ಲೆ ಮಾಡಿದ್ದಾನೆ. ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂಬ ಭಯದಿಂದ ಯುವಕ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆಯಿಂದ ಇಬ್ಬರಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಯುವಕ ಹಾಗೂ ಯುವತಿ ಕೆಲವು ದಿನಗಳ ಹಿಂದೆ ಬ್ರೇಕಪ್ ಮಾಡಿಕೊಂಡಿದ್ದರು. ಗುರುವಾರ ಕಾಲೇಜಿಗೆ ತಲುಪಿದಾಗ ಯುವಕ ತನ್ನ ಪ್ರೇಯಸಿಯ ಮನವೊಲಿಸಲು ಪ್ರಯತ್ನಿಸಿದ್ದಾನೆ. ಇದಕ್ಕಾಗಿ ಆತ ಯುವತಿಯನ್ನು ಮೂರನೇ ಮಹಡಿಗೆ ಕರೆದುಕೊಂಡು ಹೋಗಿದ್ದನು. ಈ ನಡುವೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಯುವಕ ಯುವತಿಗೆ ಚಾಕು ಇರಿದು ಹಲ್ಲೆ ಮಾಡಿದ್ದಾನೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಸಿಸಿಟಿವಿ ದೃಶ್ಯವಾಳಿಗಳನ್ನು ಪರಿಶೀಲಿಸುತ್ತಿದ್ದೇವೆ. ನಮ್ಮ ಒಂದು ತಂಡ ಆಸ್ಪತ್ರೆಗೆ ಭೇಟಿ ನೀಡಿದ್ದು, ಗಾಯಗೊಂಡ ವಿದ್ಯಾರ್ಥಿನಿ ಹಾಗೂ ಆರೋಪಿ ವಿದ್ಯಾರ್ಥಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮದುವೆಗೆ ತಾಯಿ ನಿರಾಕರಿಸಿದ್ದಕ್ಕೆ ಪ್ರೇಯಸಿ ಮನೆಗೆ ಬೆಂಕಿಯಿಟ್ಟ

    ಮದುವೆಗೆ ತಾಯಿ ನಿರಾಕರಿಸಿದ್ದಕ್ಕೆ ಪ್ರೇಯಸಿ ಮನೆಗೆ ಬೆಂಕಿಯಿಟ್ಟ

    ಮುಂಬೈ: ಪ್ರೇಯಸಿಯ ತಾಯಿ ಮದುವೆಗೆ ನಿರಾಕರಿಸಿದಕ್ಕೆ ವ್ಯಕ್ತಿಯೊಬ್ಬ ಆಕೆಯ ಮನೆಗೆ ಬೆಂಕಿ ಹಚ್ಚಿದ ಘಟನೆ ಮಹಾರಾಷ್ಟ್ರದ ಉಲ್ಲಾಸ್‍ನಗರದಲ್ಲಿ ನಡೆದಿದೆ.

    ಅಶೋಕ್ ವಾಘಮರೆ ಅರೆಸ್ಟ್ ಆದ ಆರೋಪಿ. ಉಲ್ಲಾಸ್‍ನಗರದ ನಿವಾಸಿಯಾಗಿರುವ ಅಶೋಕ್, ರೇಖಾ ಮಾರುತಿಯಾ ಎಂಬವಳನ್ನು ಪ್ರೀತಿಸುತ್ತಿದ್ದನು. ಅಲ್ಲದೆ ಆಕೆಯ ಮನೆಗೆ ಹೋಗಿ ತಾಯಿ ಕಮಲ್ ಅವರ ಮುಂದೆ ಮದುವೆ ಪ್ರಸ್ತಾಪಿಸಿದ್ದಾನೆ.

    ಅಶೋಕ್ ನಿರುದ್ಯೋಗಿ ಆಗಿದ್ದ ಕಾರಣ ಕಮಲ್ ಅವರು ಈ ಮದುವೆಗೆ ನಿರಾಕರಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಶೋಕ್ ತನ್ನ ಪ್ರೇಯಸಿಯ ಮನೆಗೆ ಬೆಂಕಿ ಹಚ್ಚಿದ್ದಾನೆ. ಬಳಿಕ ಬೆಂಕಿಯನ್ನು ನಂದಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು.

    ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಸುಧಾಕರ್ ಸುರಾದ್ಕರ್ ಮಾತನಾಡಿ, ಅಶೋಕ್ ಹಾಗೂ ರೇಖಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ನಿರ್ಧರಿಸಿದ್ದರು. ಸೋಮವಾರ ಅಶೋಕ್ ತನ್ನ ಪ್ರೇಯಸಿಯ ಮನೆಗೆ ಹೋಗಿ ರೇಖಾಳನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ. ಆದರೆ ಕಮಲ್ ಇದಕ್ಕೆ ಒಪ್ಪಲಿಲ್ಲ ಎಂದು ತಿಳಿಸಿದ್ದಾರೆ.

    ಅಶೋಕ್ ನಿರುದ್ಯೋಗಿ ಆಗಿದ್ದ ಕಾರಣ ಕಮಲ್ ಈ ಮದುವೆಯನ್ನು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಅಶೋಕ್, ಕಮಲ್‍ಗೆ ಬೆದರಿಕೆ ಹಾಕಿ ಬಟ್ಟೆಯ ಮೇಲೆ ಬೆಂಕಿಕಡ್ಡಿಯನ್ನು ಎಸೆದಿದ್ದಾನೆ. ತಕ್ಷಣ ಕಮಲ್ ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಬಟ್ಟೆಗಳು ಸಂಪೂರ್ಣವಾಗಿ ಸುಟ್ಟು ಹೋಗಿತ್ತು ಎಂದು ಸುಧಾಕರ್ ಹೇಳಿದ್ದಾರೆ.

    ಈ ಘಟನೆ ನಡೆಯುತ್ತಿದ್ದಂತೆ ಕಮಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಆರೋಪಿ ಅಶೋಕ್‍ನನ್ನು ಬಂಧಿಸಿದ್ದಾರೆ.

  • ಮದುವೆಯಾಗದ್ದಕ್ಕೆ ಪ್ರಿಯಕರನ ಮರ್ಮಾಂಗ ಕತ್ತರಿಸಿದ್ಲು – ಪ್ರೇಯಸಿಗೆ ಈಗ 10 ವರ್ಷ ಕಠಿಣ ಶಿಕ್ಷೆ

    ಮದುವೆಯಾಗದ್ದಕ್ಕೆ ಪ್ರಿಯಕರನ ಮರ್ಮಾಂಗ ಕತ್ತರಿಸಿದ್ಲು – ಪ್ರೇಯಸಿಗೆ ಈಗ 10 ವರ್ಷ ಕಠಿಣ ಶಿಕ್ಷೆ

    ಬೆಂಗಳೂರು: ಪ್ರಿಯಕರನ ಮೋಸಕ್ಕೆ ಬೇಸತ್ತು ಪ್ರೇಯಸಿಯೊಬ್ಬಳು ಪ್ರಿಯಕರನ ಮರ್ಮಾಂಗ ಕತ್ತರಿಸಿ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸುತ್ತಿದ್ದಾಳೆ.

    2008ರಲ್ಲಿ ಬೆಂಗಳೂರಿನ ಕೋರಮಂಲದಲ್ಲಿ ಈ ಘಟನೆ ನಡೆದಿತ್ತು. ದಂತ ವೈದ್ಯರಾಗಿದ್ದ ಸೈಯಾದ್ ಅಮಿನಾ ಮತ್ತು ಮೀರ್ ಅರ್ಷದ್ ಕೋರಮಂಗಲದಲ್ಲಿ ಕ್ಲಿನಿಕ್ ನಡೆಸುತ್ತಿದ್ದರು.

    ಜೊತೆಯಲ್ಲಿ ಇದ್ದ ಇಬ್ಬರು ಕೂಡ ಪ್ರೀತಿ ಮಾಡುತ್ತಿದ್ದರು. ಈ ನಡುವೆ ಹುಡುಗನ ಮನೆಯವರು ಮದುವೆಗೆ ನಿರಾಕರಿಸಿದರು. ಮೀರ್ ಅರ್ಷದ್ ಕ್ಯಾನ್ಸರ್ ಇದೆ ಎಂದು ಅಮಿನಾಗೆ ನಂಬಿಸಿ ಮದುವೆ ಆಗಲು ನಿರಾಕರಿಸಿದ್ದನು. ಬಳಿಕ ಮೀರ್ ಅರ್ಷದ್ ಬೇರೊಂದು ಮದುವೆಯಾಗಿದ್ದನು.

    ಪ್ರಿಯಕರನ ಮದುವೆಯಿಂದ ಕೋಪಗೊಂಡ ಪ್ರೇಯಸಿ ಆತನನ್ನು ಮತ್ತು ಆತನ ಪತ್ನಿಯನ್ನು ಔತಣಕ್ಕೆ ಕರೆದಿದ್ದಳು. ಮನೆಯಲ್ಲಿ ಊಟಕ್ಕೆ ಮತ್ತಿನ ಔಷಧಿ ಹಾಕಿ ಪ್ರಿಯಕರನ ಮರ್ಮಾಂಗ ಕತ್ತರಿಸಿದ್ದಳು. ಬಳಿಕ ಆಕೆಯೇ ಪ್ರಿಯಕರನ ಆಸ್ಪತ್ರೆಗೆ ಸೇರಿಸಿ ಪರಾರಿಯಾಗಿದ್ದಳು.

    ಇಷ್ಟೇಲ್ಲಾ ಘಟನೆ ಬಳಿಕ ಪೊಲೀಸರು ಪ್ರಿಯತಮೆಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬೆಂಗಳೂರಿನ ಸಿಟಿ ಸಿವಿಲ್ ಕೋಟ್ ನಲ್ಲಿ ವಾದ ಪ್ರತಿವಾದ ಆಲಿಸಿ ಯುವತಿಗೆ 10 ವರ್ಷ ಶಿಕ್ಷೆ ಪ್ರಕಟಿಸಿದೆ.

  • ಪ್ರೇಯಸಿ ಜೊತೆ ಮಜಾ ಮಾಡಲು ತಾಯಿಯ ಚಿನ್ನವನ್ನೇ ಕದ್ದ

    ಪ್ರೇಯಸಿ ಜೊತೆ ಮಜಾ ಮಾಡಲು ತಾಯಿಯ ಚಿನ್ನವನ್ನೇ ಕದ್ದ

    ಹೈದರಾಬಾದ್: ಯುವಕನೊಬ್ಬ ತನ್ನ ಪ್ರೇಯಸಿ ಜೊತೆ ಮಜಾ ಮಾಡಲು ಮನೆಯಲ್ಲಿದ್ದ ತನ್ನ ತಾಯಿಯ ಚಿನ್ನಾಭರಣವನ್ನೇ ಕದ್ದ ಘಟನೆ ಆಂಧ್ರ ಪ್ರದೇಶದ ಹೈದರಾಬಾದ್‍ನಲ್ಲಿ ನಡೆದಿದೆ.

    ಅರುಣ್ ಕುಮಾರ್ ಚಿನ್ನ ಕದ್ದ ಆರೋಪಿ. ಅರುಣ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ತನ್ನ ಪ್ರೀತಿಗಾಗಿ ಅವನು ಮನೆಯಲ್ಲಿ ಕದಿಯಲು ಶುರು ಮಾಡಿದ್ದನು. ಅಲ್ಲದೆ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ನಗದು ಹಣವನ್ನು ಕದಿಯುತ್ತಿದ್ದನು. ಮನೆಯಲ್ಲಿ ಕಳ್ಳತನ ಆಗುವುದನ್ನು ನೋಡಿ ಯುವಕನ ತಾಯಿ ಈ ಬಗ್ಗೆ ಸಂಜೀವ್ ರೆಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ, ಅರುಣ್ ಕುಮಾರ್ ಹಲವು ದಿನಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಯುವತಿಗೆ ಬೇಕಾದ ಅಗತ್ಯಗಳನ್ನು ಪೂರೈಸಲು ಅರುಣ್ ಕುಮಾರ್ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದನು. ಅಲ್ಲದೆ ಆಕೆಗೆ ಪ್ರತಿ ತಿಂಗಳು ಉಡುಗೊರೆ ನೀಡುತ್ತಿದ್ದನು. ಇದರ ಜೊತೆಗೆ ಆಕೆಯನ್ನು ಹೊರಗೆ ಸುತ್ತಾಡಿಸಲು ಕರೆದುಕೊಂಡು ಹೋಗುತ್ತಿದ್ದನು ಎಂದು ತಿಳಿದು ಬಂದಿದೆ.

    ತನ್ನ ಪ್ರೇಯಸಿಗಾಗಿ ಅರುಣ್ ಮನೆಯಲ್ಲಿ ಕಳ್ಳತನ ಮಾಡುವ ನಿರ್ಧಾರ ಮಾಡುತ್ತಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಅರುಣ್ 50 ಸಾವಿರ ನಗದು ಹಾಗೂ 80 ಗ್ರಾಂ ಚಿನ್ನಾಭರಣವನ್ನು ಕದ್ದಿದ್ದಾನೆ. ಚಿನ್ನಾಭರಣ ಹಾಗೂ ಹಣ ಕಾಣಿಸದಿದ್ದಾಗ ಯುವಕನ ತಾಯಿ ಮೊದಲು ಮನೆಯಲ್ಲಿ ಹುಡುಕಾಟ ನಡೆಸಿದ್ದರು. ಬಳಿಕ ಚಿನ್ನಾಭರಣ ಹಾಗೂ ಹಣ ಕಳ್ಳತನವಾಗಿದೆ ಎಂದು ಅರಿತ ಯುವಕನ ತಾಯಿ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅರುಣ್‍ನನ್ನು ವಿಚಾರಣೆ ನಡೆಸಿದ್ದಾರೆ. ಆದರೆ ಆತ ಸರಿಯಾದ ಉತ್ತರ ನೀಡಲಿಲ್ಲ. ಹಾಗಾಗಿ ಪೊಲೀಸರು ಅರುಣ್ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿರಬಹುದು ಎಂದು ಶಂಕಿಸಿದ್ದಾರೆ.

  • ಅಂಡರ್‌ವಾಟರ್‌ನಲ್ಲಿ ಪ್ರಪೋಸ್ ಮಾಡಲು ಹೋಗಿ ಮೃತಪಟ್ಟ ವ್ಯಕ್ತಿ

    ಅಂಡರ್‌ವಾಟರ್‌ನಲ್ಲಿ ಪ್ರಪೋಸ್ ಮಾಡಲು ಹೋಗಿ ಮೃತಪಟ್ಟ ವ್ಯಕ್ತಿ

    ಡೋಡೋಮಾ: ವ್ಯಕ್ತಿಯೊಬ್ಬ ಅಂಡರ್‌ವಾಟರ್‌ನಲ್ಲಿ ಗೆಳತಿಗೆ ಪ್ರಪೋಸ್ ಮಾಡಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಆಫ್ರಿಕಾದಲ್ಲಿ ನಡೆದಿದೆ.

    ಸ್ಟೀವ್ ವೆಬ್ಬರ್ ಮೃತಪಟ್ಟ ವ್ಯಕ್ತಿ. ಸ್ಟೀವ್ ವೆಬ್ಬರ್ ಗೆಳತಿ ಕೆನೆಶಾ ಆಂಟೊಯಿನ್ ಜೊತೆ ಟಾಂಜಾನಿಯಾದಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದರು. ಈ ವೇಳೆ ಸ್ಟೀವ್ ಅಂಡರ್‌ವಾಟರ್‌ನಲ್ಲಿ ಗೆಳತಿಯನ್ನು ಪ್ರಪೋಸ್ ಮಾಡಲು ನಿರ್ಧರಿಸುತ್ತಾನೆ.

    ಸಮುದ್ರಕ್ಕೆ ಜಿಗಿದ ಸ್ಟೀವ್ ಸಬ್‍ಮರ್ಜ್ಡ್ ಕ್ಯಾಬಿನ್ ಮೂಲಕ ತನ್ನ ಗೆಳತಿಗೆ ಪ್ರೇಮ ಪತ್ರವನ್ನು ಹಾಗೂ ಉಂಗುರವನ್ನು ತೋರಿಸುತ್ತಾನೆ. ಆ ಪತ್ರದಲ್ಲಿ ನೀನು ನನ್ನ ಪತ್ನಿ ಆಗುತ್ತೀಯಾ? ಎಂದು ಸ್ಟೀವ್ ಬರೆದಿದ್ದನು. ಈ ಪತ್ರ ತೋರಿಸಿದ ನಂತರ ಸ್ಟೀವ್ ಮತ್ತೆ ಮೇಲೆ ಬರಲಿಲ್ಲ ಎಂದು ಕೆನೆಶಾ ತಿಳಿಸಿದ್ದಾಳೆ.

    ಸ್ಟೀವ್ ಪ್ರಪೋಸ್ ಮಾಡಿದ ವಿಡಿಯೋವನ್ನು ಕೆನೆಶಾ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಅದಕ್ಕೆ ಎಸ್. ಎಸ್. ಎಸ್. ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಅಲ್ಲದೆ ನಮ್ಮ ಜೀವನದ ಅತ್ಯುತ್ತಮ ದಿನವನ್ನು ನಾವು ಎಂದಿಗೂ ಆಚರಿಸಿಕೊಳ್ಳಲು ಆಗಲಿಲ್ಲ. ನಮ್ಮ ಜೀವನದ ಅದ್ಭುತ ದಿನ ಕೆಟ್ಟ ದಿನವಾಗಿ ಬದಲಾಗಿದೆ. ನೀನು ಆ ಆಳದಿಂದ ಹೊರ ಬರಲಿಲ್ಲ. ಹಾಗಾಗಿ ನೀನು ಎಂದಿಗೂ ನನ್ನ ಉತ್ತರವನ್ನು ಕೇಳಲು ಆಗಲೇ ಇಲ್ಲ. ಹೌದು. ಹೌದು ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾಳೆ.

    ಕೆನೆಶಾ ತನ್ನ ಭಾವನಾತ್ಮಕ ಪೋಸ್ಟ್ ನಲ್ಲಿ ಸ್ಟೀವ್‍ಗೆ ಗೌರವ ಸಲ್ಲಿಸಿದ್ದಾಳೆ. ಅಲ್ಲದೆ, “ಕಳೆದ ಕೆಲವು ದಿನಗಳಲ್ಲಿ ನಾವು ಅತ್ಯಂತ ಅದ್ಭುತವಾದ ಅನುಭವಗಳನ್ನು ಅನುಭವಿಸಿದ್ದೇವೆ. ನಾವಿಬ್ಬರು ತುಂಬಾ ಸಂತೋಷದಿಂದ ನಮ್ಮ ಅಂತಿಮ ಕ್ಷಣಗಳನ್ನು ಉತ್ಸಾಹದಿಂದ ಕಳೆದಿದ್ದೇವೆ. ಆ ನೆನಪುಗಳಿಂದ ನಾನು ಸಾಂತ್ವನ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ” ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾಳೆ.

  • ಶಾಲಾ ಆವರಣದಲ್ಲೇ ಪ್ರೇಯಸಿ ಜೊತೆ ಶಿಕ್ಷಕ ಸೆಕ್ಸ್

    ಶಾಲಾ ಆವರಣದಲ್ಲೇ ಪ್ರೇಯಸಿ ಜೊತೆ ಶಿಕ್ಷಕ ಸೆಕ್ಸ್

    ಚೆನ್ನೈ: ಶಾಲೆಯ ಆವರಣದಲ್ಲಿ ಶಿಕ್ಷಕನೊಬ್ಬ ತನ್ನ ಅಂಗನವಾಡಿ ಸಿಬ್ಬಂದಿ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ಈ ಸಂಬಂಧ ಗ್ರಾಮಸ್ಥರು ಶಿಕ್ಷಕನಿಗೆ ಥಳಿಸಿದ ಘಟನೆ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ನಡೆದಿದೆ.

    ನಾಮಕ್ಕಲ್ ಉದುಪ್ಪಂ ಸರ್ಕಾರಿ ಶಾಲೆಯ ಶಿಕ್ಷಕ ಶಾಲೆ ಸಮಯ ಮುಗಿದ ನಂತರ ಅಂಗನವಾಡಿ ಮಹಿಳಾ ಸಿಬ್ಬಂದಿ ಜೊತೆ ದೈಹಿಕ ಸಂಬಂಧ ಬೆಳೆಸುತ್ತಿದ್ದನು. ಕಳೆದ ಎರಡು ತಿಂಗಳಿಂದ ಇಬ್ಬರ ನಡುವೆ ಅಕ್ರಮ ಸಂಬಂಧ ಇತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಮಹಿಳೆಯೂ ಗ್ರಾಮೀಣ ಮಕ್ಕಳ ಆರೋಗ್ಯ ಅಭಿವೃದ್ಧಿ ವಿಭಾಗದ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಾಳೆ. ಅಲ್ಲದೆ ಆಕೆ ಈ ಶಾಲೆಯೊಂದಿಗೆ ಸಂಬಂಧ ಹೊಂದಿದ್ದಾಳೆ. ಶಾಲೆಯ ಸಮಯ ಮುಗಿದ ನಂತರ ಇಬ್ಬರು ಒಟ್ಟಿಗೆ ಭೇಟಿ ಆಗುತ್ತಿದ್ದರು.

    ಇಬ್ಬರು ದೈಹಿಕ ಸಂಬಂಧ ಬೆಳೆಸುತ್ತಿರುವುದನ್ನು ಶಾಲೆಯ ಮಕ್ಕಳು ನೋಡಿದ್ದಾರೆ. ಅಲ್ಲದೆ ಈ ಬಗ್ಗೆ ತಮ್ಮ ಪೋಷಕರಿಗೂ ದೂರು ನೀಡಿದ್ದಾರೆ. ಮಂಗಳವಾರ ಪೋಷಕರ ಗುಂಪು ಶಾಲೆಗೆ ಭೇಟಿ ನೀಡಿದ್ದಾಗ ಇಬ್ಬರೂ ದೈಹಿಕ ಸಂಬಂಧ ಬೆಳೆಸುತ್ತಿದ್ದರು.

    ಇದರಿಂದ ಸಿಟ್ಟುಗೊಂಡ ಗ್ರಾಮಸ್ಥರು ಶಿಕ್ಷಕನನ್ನು ಹಾಗೂ ಅಂಗನವಾಡಿ ಸಿಬ್ಬಂದಿಯನ್ನು ಥಳಿಸಿದ್ದಾರೆ. ನಂತರ ಹುಲ್ಲಿನ ಮೇಲೆ ಕುಳಿತುಕೊಳ್ಳುವಂತೆ ಹೇಳಿ ನಿಂದಿಸಿದ್ದಾರೆ. ಬಳಿಕ ಪುಡನ್‍ಸಂಡೈ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಶಿಕ್ಷಕನನ್ನು ಹಾಗೂ ಅಂಗನವಾಡಿ ಸಿಬ್ಬಂದಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ.

    ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಶಾಲೆಯ ಪ್ರಾಂಶುಪಾಲರು ಆರೋಪಿ ಶಿಕ್ಷಕನ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೆ ಅಂಗನವಾಡಿ ಸಿಬ್ಬಂದಿ ಬಗ್ಗೆ ಆಕೆ ಕೆಲಸ ಮಾಡುವ ಸ್ಥಳದಲ್ಲಿ ಹೇಳುವುದಾಗಿ ಹೇಳಿದ್ದಾರೆ.

  • ಈಗಲೇ ಮದುವೆ ಬೇಡ ಎಂದಿದ್ದಕ್ಕೆ ಪ್ರೇಯಸಿಯ ಕೊಲೆಗೆ ಯತ್ನ

    ಈಗಲೇ ಮದುವೆ ಬೇಡ ಎಂದಿದ್ದಕ್ಕೆ ಪ್ರೇಯಸಿಯ ಕೊಲೆಗೆ ಯತ್ನ

    ತುಮಕೂರು: ಮದುವೆ ತಡವಾಗಿ ಆಗೋಣ ಎಂದಿದ್ದಕ್ಕೆ ಜಿ.ಪಂ ಸದಸ್ಯೆಯ ಮಗ ತನ್ನ ಪ್ರೇಯಸಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮದಲೂರು ಗ್ರಾಮದಲ್ಲಿ ನಡೆದಿದೆ.

    24 ವರ್ಷದ ಮಹಾವೀರ ಭಕ್ತ ಗುರುನಾನಕ್ ಎಂಬ ಹುಚ್ಚು ಪ್ರೇಮಿ ತನ್ನ 23 ವರ್ಷದ ಪ್ರಿಯತಮೆಯ ಹತ್ಯೆಗೆ ಮಂದಾಗಿದ್ದಾನೆ. ಮದಲೂರು ಗ್ರಾಮಕ್ಕೆ ಗುರುವಾರ ಯುವತಿಯನ್ನು ಕರೆಸಿಕೊಂಡು ಅತೀ ಶೀಘ್ರದಲ್ಲೇ ಮದುವೆಯಾಗುವಂತೆ ಒತ್ತಡ ಹಾಕಿದ್ದಾನೆ. ಆದರೆ  ಚಿತ್ರದುರ್ಗದಲ್ಲಿ ಬಿ.ಎಸ್ಸಿ ನರ್ಸಿಂಗ್ ಓದುತ್ತಿರುವ ಯುವತಿ ಈಗಲೇ ಮದುವೆ ಬೇಡ ಎಂದು ಹೇಳಿದ್ದಾಳೆ.

    ಮದುವೆ ಬೇಡ ಎಂದಿದ್ದಕ್ಕೆ ಸಿಟ್ಟಿಗೆದ್ದ ಮಹಾವೀರ್, ಯುವತಿ ಧರಿಸಿದ್ದ ಚೂಡಿದಾರದ ವೇಲನ್ನು ಆಕೆಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. ಪರಿಣಾಮ ಯುವತಿ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ. ತನ್ನ ಲವ್ವರ್ ಮೃತಪಟ್ಟಿದ್ದಾಳೆ ಎಂದು ಭಾವಿಸಿದ ಮಹಾವೀರ ಅಲ್ಲಿಂದ ಪರಾರಿಯಾಗಿದ್ದಾನೆ. ಪ್ರಜ್ಞೆ ಬಂದ ಬಳಿಕ ಆಕೆ ತನ್ನ ಮನೆಯವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ.

    ಘಟನೆಯಿಂದ ಯುವತಿಯ ಸ್ಥಿತಿ ಗಂಭೀರವಾಗಿದ್ದು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಾರಾರಿಯಾಗಿರುವ ಆರೋಪಿಯನ್ನು  ಭಕ್ತ ಗುರುನಾನಕ್ ಮದಲೂರು ಜಿ.ಪಂ ಕ್ಷೇತ್ರದ ಸದಸ್ಯೆ ಲಕ್ಷ್ಮಿ ದೇವಮ್ಮಳ ಮಗನೆಂದು ತಿಳಿದು ಬಂದಿದೆ.

    ಈ ಸಂಬಂಧ ಶಿರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.