Tag: girl baby

  • ಪೋಷಕರು ಮನೆಯಿಂದ ಹೊರಹಾಕಿದ್ದರಿಂದ ನಡುರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ!

    ಪೋಷಕರು ಮನೆಯಿಂದ ಹೊರಹಾಕಿದ್ದರಿಂದ ನಡುರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ!

    ರಾಂಚಿ: ಅಪ್ರಾಪ್ತೆಯೊಬ್ಬಳು ನಡುರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮನಕಲಕುವ ಘಟನೆಯೊಂದು ಜಾರ್ಖಂಡ್ ನ ಖರ್ಸವನ್ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ 17 ವರ್ಷದ ಹುಡುಗಿಯೊಬ್ಬಳು ತನ್ನದೇ ಗ್ರಾಮದ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದಳು. ಅಲ್ಲದೇ ಆ ವ್ಯಕ್ತಿಯಿಂದಾಗಿ ಆಕೆ ಗರ್ಭ ಧರಿಸಿದ್ದಳು. ಈ ವಿಚಾರ ಹುಡುಗಿಯ ಪೋಷಕರಿಗೆ ತಿಳಿದು, ನಮ್ಮ ಮರ್ಯಾದೆ ಹಾಳಾಗುತ್ತೆ ಅಂತ ಹೇಳಿ ಮನೆಯಿಂದ ಹೊರ ಹಾಕಿದ್ದರು. ಹೀಗಾಗಿ ಮನೆ, ಹೆತ್ತವರಿಂದ ದೂರವಾಗಿ ರಸ್ತೆ ಬದಿಯಲ್ಲೇ ವಾಸಿಸುತ್ತಿದ್ದಳು.

    ಕಳೆದ ನಾಲ್ಕು ತಿಂಗಳಿನಿಂದ ಈಕೆ ಬೀದಿ ಬೀದಿ ಅಲೆದಾಡುತ್ತಿರುವುದನ್ನು ನೋಡಿದ್ದೇವೆ ಅಂತ ಸ್ಥಳಿಯರು ಇದೀಗ ಹೇಳುತ್ತಿದ್ದಾರೆ. ಈಕೆ ಕಳೆದ ಕೆಲ ದಿನಗಳ ಹಿಂದೆ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಸ್ಥಳೀಯ ಆಸ್ಪತ್ರೆಗೆ ತೆರಳಿದ್ದಳು. ಆದ್ರೆ ಆಕೆಯ ಜೊತೆ ಯಾರು ಇಲ್ಲವೆಂದು ಹೇಳಿ ಆಸ್ಪತ್ರೆ ಸಿಬ್ಬಂದಿ ಆಕೆಯನ್ನು ದಾಖಲು ಮಾಡಿಕೊಂಡಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಆಕೆ ಮರುದಿನ ಮುಂಜಾನೆ ಸುಮಾರು 5 ಗಂಟೆ ಸುಮಾರಿಗೆ ಆಸ್ಪತ್ರೆಯಿಂದ 30 ಮೀಟರ್ ದೂರದಲ್ಲಿ ರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯ ಮಹಿಳೆಯರು ಸ್ಥಳಕ್ಕೆ ದೌಡಾಯಿಸಿ ತಾಯಿ-ಮಗುವನ್ನು ರಕ್ತದ ಮಡುವಿನಿಂದ ರಕ್ಷಿಸಿದ್ದಾರೆ.

    ಸ್ಥಳೀಯ ನಿವಾಸಿ 50 ವರ್ಷದ ಓಂ ಪ್ರಕಾಶ್ ಶರ್ಮಾ ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿ, ನಾನು ಮುಂಜಾನೆ ಈ ರಸ್ತೆಯಲ್ಲಿ ಬರುತ್ತಿರುವಾಗ ಮಗು ಮತ್ತು ತಾಯಿ ಅಳುತ್ತಿರೋದನ್ನು ಗಮನಿಸಿದೆ. ಕೂಡಲೇ ಆ ರಸ್ತೆಯಲ್ಲಿ ವಾಹನಗಳು ಬರದಂದೆ ತಡೆದೆ. ಹೀಗೆ ಯಾವುದೇ ಅನಾಹುತವಾಗದಂತೆ ತಾಯಿ-ಮಗುವನ್ನು ರಕ್ಷಿಸಿದೆ. ಅಲ್ಲದೇ ಅಲ್ಲೇ ಇದ್ದ ಆಸ್ಪತ್ರೆಗೆ ತೆರಳಿ ತಾಯಿ-ಮಗುವನ್ನು ರಕ್ಷಿಸುವಂತೆ ಕೇಳಿಕೊಂಡೆ. ಆದ್ರೆ ಇದನ್ನು ಆಸ್ಪತ್ರೆ ಸಿಬ್ಬಂದಿ ತಿರಸ್ಕರಿಸಿದ್ದಾರೆ. ಅಲ್ಲದೇ ಆಕೆಯ ಜೊತೆ ಯಾರೊಬ್ಬರೂ ಇಲ್ಲ. ಹೀಗಾಗಿ ನಾವು ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳುವುದಿಲ್ಲ ಅಂತ ಹೇಳಿದ್ದಾರೆ. ಆ ಬಳಿಕ ಪೊಲೀಸರಿಗೆ ಮಾಹಿತಿ ರವಾನಿಸಿರುವುದಾಗಿ ಅವರು ಹೇಳಿದ್ರು. ಪೊಲೀಸರಿಗೆ ಮಾಹಿತಿ ನಿಡಿದ ಬಳಿಕ ಓಂ ಪ್ರಕಾಶ್ ಆಟೋ ವ್ಯವಸ್ಥೆ ಮಾಡಿ ಸ್ಥಳೀಯ ಮಹಿಳೆಯರು ಸೇರಿ ಅದೇ ಆಸ್ಪತ್ರೆಗೆ ಬಾಣಂತಿಯನ್ನು ದಾಖಲಿಸಿದರು.

    ಆಸ್ಪತ್ರೆಯ ವೈದ್ಯ ಡಾ.ಲಲಿತ್ ಕಶ್ಯಪ್, ಹುಡುಗಿಯ ಆರೋಪವನ್ನು ತಳ್ಳಿ ಹಾಕಿದ್ದು, ಆಸ್ಪತ್ರೆಯಲ್ಲಿ ಹುಡುಗಿ ಬಂದ ವೇಳೆ ಇಬ್ಬರು ನರ್ಸ್ ಗಳು ಮಾತ್ರ ಇದ್ದರು. ಅವರಿಬ್ಬರೂ ಬ್ಯುಸಿಯಾಗಿದ್ದರು. ಹೀಗಾಗಿ ಸ್ವಲ್ಪ ಸಮಯ ಕಾಯುವಂತೆ ಹೇಳಲಾಗಿತ್ತು. ಆದ್ರೆ ಆಕೆ ಆಸ್ಪತ್ರೆಯಿಂದ ಹೊರಹೋಗಿದ್ದಾಳೆ ಅಂತ ಅವರು ಹೇಳಿದ್ದಾರೆ.

    ಸದ್ಯ ತಾಯಿ-ಮಗುವನ್ನು ಜಾರ್ಖಂಡ್ ನ ಮಹಿಳಾ ಸುರಕ್ಷಾ ಗೃಹಕ್ಕೆ ಕರೆದೊಯ್ಯಲಾಗಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ ಅಂತ ಅಲ್ಲಿನ ಮುಖ್ಯಸ್ಥ ಡಾ. ಲಖಿಂದ್ರ ಹನ್ಸದ್ ಹೇಳಿದ್ದಾರೆ.

  • 3 ದಿನದ ನವಜಾತ ಹೆಣ್ಣು ಶಿಶುವನ್ನು ಎಸೆದು ಹೋದ ಪಾಪಿಗಳು!

    3 ದಿನದ ನವಜಾತ ಹೆಣ್ಣು ಶಿಶುವನ್ನು ಎಸೆದು ಹೋದ ಪಾಪಿಗಳು!

    – ಮಗು ಮೈಮೇಲೆ ಇರುವೆ ಮುತ್ತಿರೋದು ಕಂಡು ಸಾರ್ವಜನಿಕರಿಂದ ಹಿಡಿಶಾಪ

    ಧಾರವಾಡ: ನಗರದ ಹೊರವಲಯದ ನವಲಗುಂದ ರಸ್ತೆಯ ಗೋವನಕೊಪ್ಪ ಗ್ರಾಮ ಬಳಿ ನವಜಾತ ಹೆಣ್ಣು ಶಿಶುವೊಂದನ್ನು ಎಸೆದು ಹೋಗಿದ್ದಾರೆ.

    ಹೆಣ್ಣು ಹುಟ್ಟಿದೆ ಎಂಬ ಕಾರಣಕ್ಕೆ ಈ ಮಗುವನ್ನ ಎಸೆದು ಹೋಗಿರಬಹುದು ಎಂದು ಶಂಕೆ ವ್ಯಕ್ತವಾಗುತ್ತಿದ್ದು, ಈ ಮಗು ಜನಿಸಿ ಮೂರು ದಿನಗಳು ಕಳೆದ ನಂತರ ಎಸೆದು ಹೋಗಲಾಗಿದೆ. ಇಂದು ಬೆಳಿಗ್ಗೆ ಹೊಲದಲ್ಲಿ ಬಿದ್ದಿದ್ದ ಮೃತ ನವಜಾತ ಶಿಶುವನ್ನ ನೋಡಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಗು ಮೈಮೇಲೆ ರಕ್ತ ಇರುವ ಕಾರಣ ಇರುವೆಗಳು ಮುತ್ತಿಕೊಂಡ ದೃಶ್ಯ ಮನಕಲಕುವಂತೆ ಇದ್ದವು. ಕೆಲವರು ಮಗುವಿನ ಮೈಮೇಲೆ ಇರುವೆ ಮುತ್ತಿರುವುದನ್ನ ಕಂಡು, ಈ ಮಗು ಎಸೆದು ಹೋದ ಪಾಪಿಗಳಿಗೆ ಹಿಡಿಶಾಪ ಕೂಡಾ ಹಾಕಿದ್ದಾರೆ.

    ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ತಾಯಿಯ ಮಡಿಲು ಸೇರಿದ ಪುಟಾಣಿ- ದುಷ್ಕರ್ಮಿಗಳು ಎಸ್ಕೇಪ್

    ತಾಯಿಯ ಮಡಿಲು ಸೇರಿದ ಪುಟಾಣಿ- ದುಷ್ಕರ್ಮಿಗಳು ಎಸ್ಕೇಪ್

    ಬೆಂಗಳೂರು: ಇಲ್ಲಿನ ಸಿದ್ದಾಪುರದಲ್ಲಿ ಅಪಹರಣವಾಗಿದ್ದ ಹೆಣ್ಣು ಮಗು ಕೊನೆಗೂ ಹೆತ್ತವರ ಕೈಸೇರಿದೆ. ಮೂರು ದಿನಗಳ ಹಿಂದೆ ಗುಟ್ಟೆಪಾಳ್ಯ ನಿವಾಸಿ ಶಬನಮ್ ಹಾಗೂ ಸೈಯದ್ ದಂಪತಿಯ ಮೂರು ವರ್ಷದ ಮಗು ಕತೀಜಾರನ್ನು ಯಾರೋ ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿದ್ರು.

    ಮನೆಯ ಪಕ್ಕದ ಅಂಗಡಿಗೆ ಐಸ್ ತರಲು ಹೋದ ಮಗುವನ್ನು ಎತ್ತಿಕೊಂಡೋಗಿದ್ರು. ಸಿಸಿಟಿವಿಯಲ್ಲಿ ಆ ದೃಶ್ಯ ಸೆರೆಯಾಗಿತ್ತು. ಸಿದ್ದಾಪುರ ಪೊಲೀಸರು ಮಗುಗಾಗಿ ಹುಡುಕಾಟ ನಡೆಸ್ತಿದ್ರು. ಆದ್ರೆ ಸೋಮವಾರ ಮಧ್ಯಾಹ್ನ ಮಡಿವಾಳದ ದರ್ಗಾ ಬಳಿ ಬಂದ ಮಹಿಳೆಯೊಬ್ಬಳು ಮಗುವನ್ನು ಬಿಟ್ಟು ಎಸ್ಕೇಪ್ ಆಗಿದ್ದಾಳೆ.

    ಇತ್ತ ಮಾಧ್ಯಮಗಳಲ್ಲಿ ಮಗು ನಾಪತ್ತೆ ಸುದ್ದಿ ನೋಡಿದ್ದ ವ್ಯಕ್ತಿ ಪೊಲೀಸ್ರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬಂದ ಮಡಿವಾಳ ಪೊಲೀಸ್ರು ಮಗುವನ್ನು ಹೆತ್ತವರಿಗೆ ಹಸ್ತಾಂತರ ಮಾಡಿದ್ದಾರೆ. ಇನ್ನೂ, ಆರೋಪಿಗಳು ಮಗುವನ್ನು ಕಿಡ್ನಾಪ್ ಮಾಡಿ ಬಸ್ಸಿನಲ್ಲಿ ಬೇರೆ ಕಡೆಗೆ ಕರೆದೊಯ್ದಿದ್ದರಂತೆ. ಒರ್ವ ಮಹಿಳೆಯ ಜತೆ ಮನೆಯೊಂದರಲ್ಲಿ ಬಚ್ಚಿಡಲಾಗಿತ್ತಂತೆ. ಆದ್ರೆ ಮಾಧ್ಯಮಗಳಲ್ಲಿ ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿರುವುದು ನೋಡಿದ ಅರೋಪಿಗಳು ಮಗು ಬಿಟ್ಟು ಪರಾರಿಯಾಗಿರಬಹುದು ಎನ್ನಲಾಗುತ್ತಿದೆ.

    ಸದ್ಯ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    https://www.youtube.com/watch?v=3AexHtfodPM

  • ವೀಡಿಯೋ: ಮನೆ ಮುಂದೆ ಆಟವಾಡ್ತಿದ್ದ ಹೆಣ್ಣು ಮಗುವಿನ ಅಪಹರಣ!

    ವೀಡಿಯೋ: ಮನೆ ಮುಂದೆ ಆಟವಾಡ್ತಿದ್ದ ಹೆಣ್ಣು ಮಗುವಿನ ಅಪಹರಣ!

    ಸಿದ್ದಾಪುರ: ಬೆಂಗಳೂರಲ್ಲಿ ಹಾಡಹಗಲೇ ಮೂರು ವರ್ಷದ ಮಗುವನ್ನು ಅಪಹರಣ ಮಾಡಲಾಗಿದೆ. ಸಿದ್ದಾಪುರದ ಗುಟ್ಟೆಪಾಳ್ಯದಲ್ಲಿ ಮನೆಯ ಹೊರಗೆ ಆಟವಾಡುತ್ತಿದ್ದ ಮೂರು ವರ್ಷದ ಕತೀಜಾ ಕುಬ್ರಾ ಅನ್ನೋ ಮಗುವನ್ನು ಅಪಹರಣ ಮಾಡಲಾಗಿದೆ.

    ಶನಿವಾರ ಮಧ್ಯಾಹ್ನ 1 ಗಂಟೆ 50 ನಿಮಿಷಕ್ಕೆ ನಡೆದಿರುವ ಈ ಕೃತ್ಯ ಏರಿಯಾದಲ್ಲಿರುವ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಕತೀಜಾ ತನ್ನ ದೊಡ್ಡಪ್ಪನ ಮಗ ಬುರಾನ್ ಜೊತೆ ಆಟವಾಡ್ತಿದ್ದಳು. ಈ ವೇಳೆ ಬಂದ ಹುಡುಗನೊಬ್ಬ ಆಕೆಯನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ.

    ಏರಿಯಾದಲ್ಲಿ ಸಲ್ಯೂಷನ್(ಡ್ರಗ್ಸ್) ಹೊಡೆಯುವ ಹುಡುಗರೇ ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಪೋಷಕರು ಸಿದ್ದಾಪುರ ಠಾಣೆಗೆ ಪೋಷಕರು ದೂರು ನೀಡಿದ್ದಾರೆ. ಸದ್ಯ ಮಗುವಿಗಾಗಿ ಹುಡುಕಾಟ ನಡೆಯುತ್ತಿದೆ.

    https://www.youtube.com/watch?v=3AexHtfodPM&feature=youtu.be