Tag: girija lokesh

  • ಎಲ್ಲಿದ್ದೆ ಇಲ್ಲಿತನಕ: ಮಗನ ಸಾಹಸಕ್ಕೆ ಮದರ್ ಇಂಡಿಯಾ ಬೆಂಬಲ!

    ಎಲ್ಲಿದ್ದೆ ಇಲ್ಲಿತನಕ: ಮಗನ ಸಾಹಸಕ್ಕೆ ಮದರ್ ಇಂಡಿಯಾ ಬೆಂಬಲ!

    ಬೆಂಗಳೂರು: ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅಭಿನಯದ ಎಲ್ಲಿದ್ದೆ ಇಲ್ಲಿತನಕ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಮಜಾ ಟಾಕೀಸ್ ಎಂಬ ಶೋ ಮೂಲಕವೇ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿರುವವರು ಸೃಜನ್. ಆ ಪ್ರೇಕ್ಷಕರ ಪಾಲಿಗೆ ಪ್ರೀತಿಯ ಸೃಜಾ ಆಗಿರೋ ಅವರ ಈ ಸಿನಿಮಾ ಬಗ್ಗೆ ಈಗ ಎಲ್ಲ ಕೋನಗಳಿಂದಲೂ ಗೆಲುವಿನ ಲಕ್ಷಣಗಳೇ ಮಿರುಗಲಾರಂಭಿಸಿವೆ. ಈ ಸಿನಿಮಾ ಮೇಲೆ ಬಹಳಷ್ಟು ಕನಸಿಟ್ಟುಕೊಂಡೇ ಸೃಜನ್ ತಮ್ಮ ಹೋಂ ಬ್ಯಾನರಿನಲ್ಲಿಯೇ ಇದನ್ನು ನಿರ್ಮಾಣ ಮಾಡಿದ್ದಾರೆ. ಒಂದು ಬೃಹತ್ ತಾರಾಗಣವೇ ಅವರಿಗಿಲ್ಲಿ ಸಾಥ್ ಕೊಟ್ಟಿದೆ.

    ವಿಶೇಷವೆಂದರೆ ಈ ಸಿನಿಮಾದಲ್ಲಿ ಗಿರಿಜಾ ಲೋಕೇಶ್ ಕೂಡ ಸೃಜನ್ ಜೊತೆ ನಟಿಸಿದ್ದಾರೆ. ಮಗನ ಈವರೆಗಿನ ಸಾಧನೆಯ ಹಾದಿಯಲ್ಲಿ ನೆರಳಾಗುತ್ತಾ ಬಂದಿರುವವರು ಗಿರಿಜಾ ಲೋಕೇಶ್. ಸದಾ ಮಗನಿಗೆ ಮಾರ್ಗದರ್ಶನ ನೀಡುತ್ತಾ ಬಂದಿರೋ ಗಿರಿಜಮ್ಮ, ಎಲ್ಲಿದ್ದೆ ಇಲ್ಲಿತನಕ ಚಿತ್ರದಲ್ಲಿಯೂ ನಟಿಸಿದ್ದಾರೆ. ಆದರೆ ಇದುವರೆಗೂ ನಿರ್ದೇಶಕರಾಗಲಿ, ಚಿತ್ರತಂಡವಾಗಲೀ ಈ ಪಾತ್ರದ ಬಗ್ಗೆ ತೆಳುವಾಗಿ ಒಂದಷ್ಟು ವಿಚಾರಗಳನ್ನು ಹೇಳಿಕೊಂಡಿದೆಯಷ್ಟೆ. ಈ ಸಿನಿಮಾದಲ್ಲಿ ಒಟ್ಟಾರೆ ವಿಶೇಷತೆಗಳಿವೆಯಲ್ಲಾ? ಅದರಲ್ಲಿ ಗಿರಿಜಾ ಲೋಕೇಶ್ ಅವರ ಪಾತ್ರವೂ ಸೇರಿಕೊಂಡಿದೆ.

    ಗಿರಿಜಾ ಲೋಕೇಶ್ ಅವರಿಗಿಲ್ಲಿ ವಿಶಿಷ್ಟವಾದ ಪಾತ್ರವೇ ಸಿಕ್ಕಿದೆ. ಅಷ್ಟಕ್ಕೂ ಗಿರಿಜಮ್ಮನ ಪಾಲಿಗೆ ಈವರೆಗೆ ಎಲ್ಲ ಪಾತ್ರಗಳೂ ಒಲಿದು ಬಂದಿವೆ. ಆದರೆ ಮಗನೇ ನಾಯಕನಾಗಿರೋ ಈ ಚಿತ್ರದಲ್ಲವರ ಪಾತ್ರ ನಿಜಕ್ಕೂ ಸ್ಪೆಷಲ್ ಆಗಿದೆಯಂತೆ. ಆದರೆ ಅದು ಬಿಡುಗಡೆಯ ದಿನವಷ್ಟೇ ಗೊತ್ತಾಗಬೇಕಿದೆ. ಅದಕ್ಕಾಗಿ ಈಗ ಕ್ಷಣಗಣನೆ ಶುರುವಾಗಿದೆ. ಅಂತೂ ಈ ಸಿನಿಮಾ ಕೇವಲ ಸೃಜನ್ ಅವರಿಗೆ ಮಾತ್ರವಲ್ಲದೇ ಗಿರಿಜಾ ಲೋಕೇಶ್ ಪಾಲಿಗೂ ವಿಶೇಷವೇ. ಅಮ್ಮ ಗಿರಿಜಮ್ಮ ಮಾತ್ರವಲ್ಲದೇ ಅನೇಕಾನೇಕ ಕಲಾವಿದರಿಲ್ಲಿ ಸೃಜನ್‍ಗೆ ಸಾಥ್ ನೀಡಿದ್ದಾರೆ. ಅವರೆಲ್ಲರ ಪಾತ್ರಗಳ ಮಜಾ ಜಾಹೀರಾಗೋದಕ್ಕೆ ದಿನಗಳಷ್ಟೇ ಬಾಕಿ ಉಳಿದುಕೊಂಡಿವೆ.

  • ಸೀರೆಯಲ್ಲೇ ಫಿಟ್ನೆಸ್ ಸಾಬೀತು – ಬೆಂಗ್ಳೂರಿನಲ್ಲಿ ಸೀರೆ ಮ್ಯಾರಥಾನ್

    ಸೀರೆಯಲ್ಲೇ ಫಿಟ್ನೆಸ್ ಸಾಬೀತು – ಬೆಂಗ್ಳೂರಿನಲ್ಲಿ ಸೀರೆ ಮ್ಯಾರಥಾನ್

    ಬೆಂಗಳೂರು: ನಗರದ ಮಲ್ಲೇಶ್ವರಂನ 18ನೇ ಕ್ರಾಸ್‍ನಲ್ಲಿ ಇಂದು ಸೀರೆ ಮ್ಯಾರಥಾನ್ ಏರ್ಪಡಿಸುವ ಮೂಲಕ ವಿಭಿನ್ನ ರೀತಿಯ ಮ್ಯಾರಾಥಾನ್‍ಗೆ ಹಿರಿಯ ನಟಿ ಗಿರಿಜಾ ಲೋಕೇಶ್ ಚಾಲನೆ ನೀಡಿದರು.

    ಜಾಗಿಂಗ್ ಮತ್ತು ಓಡಾಟಕಕ್ಕೆ ಸೀರೆ ಅಡ್ಡಿಯಲ್ಲ, ಸೀರೆಯಲ್ಲೇ ಫಿಟ್ನೆಸ್ ಸಾಬೀತು ಪಡಿಸಬಹುದೆಂದು ಹಠತೊಟ್ಟ ಕೆಲವು ಗೃಹಿಣಿಯರು “ಡ್ರೆಸ್ ಕೋಡ್ ಬಗ್ಗೆ ಚಿಂತೆ ಬೇಡ, ಸೀರೆಯಲ್ಲೇ ಫಿಟ್ನೆಸ್ ಸಾಬೀತು ಪಡಿಸಿ” ಎಂಬ ಟ್ಯಾಗ್ ಲೈನ್ ಮೂಲಕ ಮ್ಯಾರಥಾನ್‍ನಲ್ಲಿ ನೂರಾರು ಗೃಹಿಣಿಯರು ಭಾಗಿಯಾಗಿ ಯಶಸ್ವಿಗೊಳಿಸಿದ್ದಾರೆ.

    ವಿಭಿನ್ನ ಮ್ಯಾರಥಾನ್ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಹಿರಿಯ ನಟಿ ಗಿರಿಜಾ ಲೋಕೇಶ್‍ರವರು, ಇಂದು ಸಾರಿ ಹಾಕಿಕೊಂಡೇ ಮ್ಯಾರಥಾನ್ ನಡೆಸಲಾಗಿದ್ದು, ಸಾಮಾನ್ಯವಾಗಿ ಸೀರೆಯಲ್ಲಿ ಜಾಗಿಂಗ್ ಹಾಗೂ ಓಡಾಟ ಮಾಡಲು ತೊಂದರೆಯಾಗುತ್ತದೆ. ಅದರಿಂದ ಹೊರ ಬಂದು ಸೀರೆ ಮೂಲಕವೇ ಫಿಟ್ನೆಸ್ ಸಾಬೀತುಪಡಿಸಲು ಸಾಧ್ಯ ಅನ್ನುವುದನ್ನು ಈ ಮೂಲಕ ತೋರಿಸಿಕೊಡುತ್ತಿದ್ದೇವೆ ಎಂದು ಹೇಳಿದರು.

    ಮ್ಯಾರಥಾನ್‍ನಲ್ಲಿ ನಟಿ ಸಮುನ್ ನಗರ್ಕರ್ ಸೇರಿದಂತೆ ಇನ್ನೂ ಹಲವರು ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.