Tag: gir

  • ಬಾಲಕಿಯಿಂದ ವಿನೂತನವಾಗಿ ಮತದಾನ ಜಾಗೃತಿ- ಚುನಾವಣಾ ಆಯೋಗ ಪ್ರಶಂಸೆ

    ಬಾಲಕಿಯಿಂದ ವಿನೂತನವಾಗಿ ಮತದಾನ ಜಾಗೃತಿ- ಚುನಾವಣಾ ಆಯೋಗ ಪ್ರಶಂಸೆ

    ಮಂಗಳೂರು: ಎಲ್ಲೆಡೆ ಚುನಾವಣಾ ಕಾವು ಹೆಚ್ಚಾಗಿದ್ದು, ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಯ ಗೆಲುವಿಗಾಗಿ ನಾನಾ ಕಸರತ್ತು ನಡೆಸುತ್ತಿದೆ. ಚುನಾವಣಾ ಆಯೋಗ ಚುನಾವಣಾ ತಯಾರಿಯ ಜೊತೆಗೆ ಮತದಾನ ಮಾಡುವ ಬಗ್ಗೆಯೂ ಜಾಗೃತಿ ಮೂಡಿಸುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಬಾಲಕಿಯೊಬ್ಬಳು ವಿಭಿನ್ನ ಪ್ರಯತ್ನದೊಂದಿಗೆ ಮತದಾನದ ಜಾಗೃತಿ (Voting Awareness) ಮೂಡಿಸಿ ರಾಜ್ಯದ ಜನರ ಗಮನ ಸೆಳೆದಿದ್ದಾಳೆ.

    ಹೌದು. ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕಶೆಕೋಡಿ ನಿವಾಸಿಯಾ ಬಾಲಕಿ ಸನ್ನಿಧಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ.100 ರಷ್ಟು ಮತದಾನ ಆಗಬೇಕೆಂದು ಮತದಾನದ ಜಾಗೃತಿ ಮೂಡಿಸುತ್ತಿದ್ದಾಳೆ. ಬಂಟ್ವಾಳದ ಮಾಣಿ ಪೆರಾಜೆಯ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ಮನೆ ಮನೆಗೆ ತೆರಳಿ ಮತದಾನದ ಜಾಗೃತಿ ಮೂಡಿಸುತ್ತಿದ್ದಾರೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದು, ತನ್ನ ಮತದಾನ ಜಾಗೃತಿಗೆ ಸಹಕಾರ ನೀಡಬೇಕೆಂದು ವಿನಂತಿಸಿದ್ದಾಳೆ. ಬಾಲಕಿಯ ಪತ್ರ ಪುರಸ್ಕರಿಸಿರುವ ಚುನಾವಣಾ ಆಯೋಗ ಬಾಲಕಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಆದೇಶಿಸಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಆ ಬಾಲಕಿಯನ್ನ ಸನ್ಮಾನಿಸಿ, ಸಂಪೂರ್ಣ ಸಹಕಾರ ನೀಡಿದ್ದಾರೆ. ಇದನ್ನೂ ಓದಿ: ಎಲ್ಲಾ ಸೇರಿ ಮತದಾನದ ಹಬ್ಬ ಆಚರಿಸೋಣ: ತುಷಾರ್ ಗಿರಿನಾಥ್

    ಬಾಲಕಿ ಸನ್ನಿಧಿ ಪ್ರತಿದಿನ ಮನೆ ಮನೆ, ಮಾರ್ಕೆಟ್, ಹೊಟೇಲ್, ಅಂಗಡಿ, ಕಚೇರಿ, ಆಟೋ ನಿಲ್ದಾಣ ಸೇರಿದಂತೆ ಎಲ್ಲೆಡೆ ತೆರಳಿ ಮತದಾನವನ್ನು ತಪ್ಪದೇ ಮಾಡಬೇಕು ಎಂದು ಜಾಗೃತಿ ಮೂಡಿಸ್ತಿದ್ದಾಳೆ. ವಿಶೇಷ ಅಂದ್ರೆ ಕನ್ನಡ, ತುಳು, ಇಂಗ್ಲಿಷ್, ಕೊಂಕಣಿ ಹಾಗೂ ಮಲಯಾಳಂ ಸೇರಿ ಒಟ್ಟು 5 ಭಾಷೆಗಳಲ್ಲಿ ಮತದಾನದ ಜಾಗೃತಿ ನಡೆಸುತ್ತಿದ್ದಾಳೆ. ಕೇವಲ ಜಿಲ್ಲೆ ಮಾತ್ರವಲ್ಲದೆ ಉಡುಪಿ, ಕಾರವಾರ ನೆರೆಯ ರಾಜ್ಯಗಳಾದ ಕೇರಳ, ಗೋವಾದಲ್ಲೂ ಮತದಾನ ಜಾಗೃತಿ ಮೂಡಿಸುತ್ತಿದ್ದಾಳೆ. ಇದನ್ನೂ ಓದಿ: ರಾಷ್ಟ್ರ ಮುನ್ನಡೆಸಲು ತಪ್ಪದೆ ಮತ ಚಲಾಯಿಸೋಣ: ನಟ ರಮೇಶ್ ಅರವಿಂದ್

    ಯಾರಿಂದಲೂ ಸಹಾಯ ಪಡೆಯದೆ ಟ್ಯಾಕ್ಸಿ ಚಾಲಕರಾದ ತನ್ನ ತಂದೆ ಲೋಕೇಶ್ ಕಶೆಕೋಡಿಯವರ ಕಾರಿನಲ್ಲೇ ತಾಯಿ ಲೀಲಾವತಿ ಸಹೋದರಿ ಸಮೃದ್ಧಿ ಜೊತೆ ತೆರಳಿ ಈ ಕಾರ್ಯ ಮಾಡುತ್ತಿದ್ದಾಳೆ. ಮಗಳ ಈ ಆಲೋಚನೆ ಹಾಗೂ ಸಾಹಸಕ್ಕೆ ಪೋಷಕರು ಕೂಡ ಸಾಥ್ ನೀಡಿದ್ದು, ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

    ಒಟ್ಟಾರೆ ಮತದಾನ ದಿನದಂದು ಸಿಕ್ಕ ರಜೆಯಲ್ಲಿ ಮಜಾ ಮಾಡಲು ಹೊರಡುವವರೇ ಹೆಚ್ಚು. ತನ್ನ ಕರ್ತವ್ಯವನ್ನು ಮರೆತು ಮತದಾನಕ್ಕೆ ಚಕ್ಕರ್ ಹಾಕುವ ಮಂದಿಗೆ ಈ ಬಾಲಕಿಯ ಜಾಗೃತಿ ನಿಜಕ್ಕೂ ಶ್ಲಾಘನೀಯ.

  • ವಾಹನ ಸುತ್ತುವರಿದ 12 ಸಿಂಹಗಳು- ಮಧ್ಯರಾತ್ರಿ ಅಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

    ವಾಹನ ಸುತ್ತುವರಿದ 12 ಸಿಂಹಗಳು- ಮಧ್ಯರಾತ್ರಿ ಅಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

    ಅಹಮದಾಬಾದ್: 32 ವರ್ಷದ ಮಹಿಳೆಯೊಬ್ಬರು ಗುಜರಾತ್‍ನ ಗಿರ್ ಅರಣ್ಯಪ್ರದೇಶದಲ್ಲಿ ಆಂಬುಲೆನ್ಸ್ ನೊಳಗೆ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಅಷ್ಟೆ ಅಲ್ಲ ಅಂದು ಅಮ್ರೇಲಿ ಜಿಲ್ಲೆಯ ಗ್ರಾಮವೊಂದರಲ್ಲಿ ನಿಲ್ಲಿಸಲಾಗಿದ್ದ ಈ ಆಂಬುಲೆನ್ಸ್ ಬಳಿ ಹತ್ತಿರದ ಕಾಡಿನಿಂದ 12 ಸಿಂಹಗಳು ಬಂದು ವಾಹನವನ್ನ ಸುತ್ತುವರಿದಿದ್ದವು ಎಂದರೆ ನೀವು ನಂಬಲೇಬೇಕು.

    ಹೌದು. ಗುರುವಾರದಂದು ಮಧ್ಯರಾತ್ರಿ ಸುಮಾರು 2.30ರ ವೇಳೆಯಲ್ಲಿ ಇಲ್ಲಿನ ಲುನಾಸಾಪುರ್ ನಿವಾಸಿಯಾದ ಮಂಗುಬೆನ್ ಮಕ್ವಾನಾ ಅವರನ್ನ ಹೆರಿಗೆಗಾಗಿ ಜಾಫರ್‍ಬಾದ್ ಟೌನ್‍ನ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕೊಂಡೊಯ್ಯಲಾಗ್ತಿತ್ತು. ಈ ವೇಳೆ ಮಹಿಳೆಗೆ ಹೆರಿಗೆ ನೋವು ತೀವ್ರವಾಗಿದ್ದು ಮಗುವಿನ ತಲೆ ಹೊರಗೆ ಬರ್ತಿದ್ರಿಂದ ಯಾವ ಕ್ಷಣದಲ್ಲಾದ್ರೂ ಹೆರಿಗೆಯಾಗುವ ಸಂಭವವಿತ್ತು. ಹೀಗಾಗಿ 108 ಆಂಬುಲೆನ್ಸ್ ನ ತುರ್ತು ನಿರ್ವಹಣಾ ತಂತ್ರಜ್ಞರಾದ ಅಶೋಕ್ ಮಕ್ವಾನಾ ಚಾಲಕ ರಾಜು ಅವರಿಗೆ ವಾಹನವನ್ನ ಅರ್ಧ ದಾರಿಯಲ್ಲೇ ನಿಲ್ಲಿಸಲು ಹೇಳಿದ್ರು ಎಂದು ಅಮ್ರೇಲಿಯ 108 ಆಂಬುಲೆನ್ಸ್ ನ ತುರ್ತು ನಿರ್ವಹಣಾ ಕಾರ್ಯನಿರ್ವಾಹಕ ಅಧಿಕಾರಿ ಚೇತನ್ ಗಾದೆ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಬಳಿಕ ತಂತ್ರಜ್ಞ ಅಶೋಕ್, ಹೆರಿಗೆ ಮಾಡಿಸಲು ಸಲಹೆಗಾಗಿ ವೈದ್ಯರಿಗೆ ಕರೆ ಮಾಡಿದ್ರು. ಈ ವೇಳೆ ಮನುಷ್ಯರು ಇದ್ದಿದ್ದನ್ನು ಗ್ರಹಿಸಿದ ಸಿಂಹಗಳ ಹಿಂಡು ಹತ್ತಿರದ ಪೊದೆಗಳಿಂದ ಹೊರಬಂದು ಆಂಬುಲೆನ್ಸ್ ಸುತ್ತುವರಿದವು. ಸ್ಥಳೀಯರಾಗಿದ್ದ ಆಂಬುಲೆನ್ಸ್ ಚಾಲಕ ರಾಜು ಸಿಂಹಗಳ ವರ್ತನೆ ಬಗ್ಗೆ ತಿಳಿದುಕೊಂಡಿದ್ದರಿಂದ ಅವುಗಳನ್ನ ಬೆದರಿಸಲು ಪ್ರಯತ್ನಿಸಿದ್ರು. ಆದ್ರೆ ಸಿಂಗಹಳು ಮಾತ್ರ ಅಲ್ಲಿಂದ ಕದಲಲಿಲ್ಲ. ಕೆಲವು ಸಿಂಹಗಳು ವಾಹನದ ಮುಂದೆಯೇ ಕುಳಿತುಕೊಂಡು ರಸ್ತೆಯನ್ನ ಅಡ್ಡಗಟ್ಟಿದ್ವು ಎಂದು ಅವರು ಹೇಳಿದ್ದಾರೆ.

    ಇಷ್ಟೆಲ್ಲಾ ಆಗ್ತಿದ್ರೂ ಆಂಬುಲೆನ್ಸ್ ಒಳಗೆ ತಂತ್ರಜ್ಞ ಅಶೋಕ್ ವೈದ್ಯರ ನಿರ್ದೇಶನದಂತೆ ಮಹಿಳೆಯ ಹೆರಿಗೆಗೆ ಸಹಾಯ ಮಾಡಿದ್ರು. ನಂತರ ಚಾಲಕ ರಾಜು ಗಾಡಿಯನ್ನ ಸ್ಟಾರ್ಟ್ ಮಾಡಿ ನಿಧಾನವಾಗಿ ಮುಂದೆ ಸಾಗಿದ್ರು. ಗಾಡಿ ಚಲಿಸಲು ಶುರು ಮಾಡಿದ್ದರಿಂದ ಹಾಗೂ ಆಂಬುಲೆನ್ಸ್ ಲೈಟ್‍ನ ಬೆಳಕಿನಿಂದಾಗಿ ಸಿಂಹಗಳು ರಸ್ತೆಯ ಪಕ್ಕಕ್ಕೆ ಹೋಗಿದ್ದು ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟವು ಎಂದು ಚೇತನ್ ವಿವರಿಸಿದ್ದಾರೆ.

    ಸದ್ಯ ಮಹಿಳೆ ಹಾಗೂ ನವಜಾತ ಶಿಶುವನ್ನ ಜಫರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.