Tag: Ginger Cookies

  • ಒಳಗಡೆ ಮೃದು, ಹೊರಗಡೆ ಕ್ರಂಚಿ – ಸುಲಭದ ಶುಂಠಿ ಕುಕೀಸ್ ಹೀಗೆ ಮಾಡಿ

    ಒಳಗಡೆ ಮೃದು, ಹೊರಗಡೆ ಕ್ರಂಚಿ – ಸುಲಭದ ಶುಂಠಿ ಕುಕೀಸ್ ಹೀಗೆ ಮಾಡಿ

    ಶುಂಠಿ ಕುಕೀಸ್ ಅದ್ಭುತ ರುಚಿ ಹಾಗೂ ಸುವಾಸನೆಯುಕ್ತ ತಿಂಡಿ. ಮಸಾಲೆಯುಕ್ತ ಕುಕೀಸ್ ಹೊರಗಡೆ ಕ್ರಂಚಿ ಹಾಗೂ ಒಳಗಡೆ ಮೃದು ಅನುಭವ ನೀಡುತ್ತದೆ. ಬೆಳಗ್ಗೆ ಅಥವಾ ಸಂಜೆ ಒಂದು ಕಪ್ ಚಹಾದೊಂದಿದೆ ಈ ಕುಕೀಸ್ ಜೊತೆಯಾಗಬಲ್ಲದು. ಸುಲಭವಾಗಿ ತಯಾರಿಸಬಹುದಾದ ಕುಕೀಸ್ ಇದಾಗಿದ್ದು, ನೀವು ಕೂಡಾ ಒಮ್ಮೆ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಸಕ್ಕರೆ ಪುಡಿ – 2 ಟೀಸ್ಪೂನ್
    ಮೈದಾ ಹಿಟ್ಟು – 2 ಕಾಲು ಕಪ್
    ಶುಂಠಿ ಪುಡಿ – 2 ಟೀಸ್ಪೂನ್
    ಅಡುಗೆ ಸೋಡಾ – 1 ಟೀಸ್ಪೂನ್
    ದಾಲ್ಚಿನ್ನಿ ಪುಡಿ – ಮುಕ್ಕಾಲು ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್
    ಮೃದುಗೊಳಿಸಿದ ಬೆಣ್ಣೆ – ಮುಕ್ಕಾಲು ಕಪ್
    ಸಕ್ಕರೆ ಪುಡಿ – 1 ಕಪ್ (ಪ್ರತ್ಯೇಕ ಬಳಕೆಗೆ)
    ಮೊಟ್ಟೆ – 1
    ಕಂದು ಸಕ್ಕರೆ ಸಿರಪ್ – ಕಾಲು ಕಪ್
    ನೀರು – 1 ಟೀಸ್ಪೂನ್ ಇದನ್ನೂ ಓದಿ: ಸಿಂಪಲ್ & ಟೇಸ್ಟಿ ಬ್ಲೂಬೆರಿ ಕಾಫಿ ಕೇಕ್

    ಮಾಡುವ ವಿಧಾನ:
    * ಮೊದಲಿಗೆ ಓವನ್ ಅನ್ನು 175 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ.
    * ಸಣ್ಣ ಬಟ್ಟಲಿಗೆ 2 ಟೀಸ್ಪೂನ್ ಸಕ್ಕರೆಯನ್ನು ಹರಡಿ ಪಕ್ಕಕ್ಕಿ ಇಟ್ಟುಕೊಳ್ಳಿ.
    * ಇನ್ನೊಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಉಪ್ಪು, ಅಡುಗೆ ಸೋಡಾ, ಶುಂಠಿ ಪುಡಿ, ದಾಲ್ಚಿನ್ನಿ ಪುಡಿ ಹಾಕಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
    * ಮತ್ತೊಂದು ಬಟ್ಟಲಿನಲ್ಲಿ ಬೆಣ್ಣೆ ಹಾಗೂ 1 ಕಪ್ ಸಕ್ಕರೆ ಪುಡಿಯನ್ನು ಹಾಕಿ ಅದನ್ನು ಮೃದುಗೊಳಿಸಿ. ಇದಕ್ಕಾಗಿ ಎಲೆಕ್ಟ್ರಿಕ್ ಮಿಕ್ಸರ್ ಬಳಸುವುದು ಉತ್ತಮ.
    * ನಂತರ ಮೊಟ್ಟೆ, ಕಂದು ಸಕ್ಕರೆ ಸಿರಪ್, 1 ಟೀಸ್ಪೂನ್ ನೀರು ಬೆರೆಸಿ ಮಿಶ್ರಣ ಮಾಡಿ.
    * ಈಗ ಈ ಮಿಶ್ರಣಕ್ಕೆ ಒಣ ಹಿಟ್ಟಿನ ಮಿಶ್ರಣವನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಬೆರೆಸಿಕೊಳ್ಳಿ. ಹಿಟ್ಟು ಹೆಚ್ಚು ಜಿಗುಟಾಗಿರದಂತೆ ಎಚ್ಚರವಹಿಸಿ.
    * ಈಗ ಹಿಟ್ಟಿನಿಂದ ಒಂದೊಂದು ಇಂಚಿನಷ್ಟು ವ್ಯಾಸ ಬರುವಂತೆ ಚೆಂಡುಗಳನ್ನು ರಚಿಸಿ. ಅದರ ಮೇಲೆ ಬದಿಗಿಡಲಾಗಿದ್ದ 2 ಟೀಸ್ಪೂನ್ ಸಕ್ಕರೆ ಪುಡಿಯನ್ನು ಚದುರಿಸಿ.
    * ಗ್ರೀಸ್ ಮಾಡಲಾದ ಬೇಕಿಂಗ್ ಶೀಟ್ ಮೇಲೆ ಹಿಟ್ಟಿನ ಚೆಂಡುಗಳನ್ನು ಜೋಡಿಸಿ.
    * ಈಗ ಅದನ್ನು ಓವನ್‌ನಲ್ಲಿಟ್ಟು ಸುಮಾರು 10-12 ನಿಮಿಷಗಳವರೆಗೆ ಬೇಯಿಸಿಕೊಳ್ಳಿ.
    * ಬೆಂದ ಬಳಿಕ ಕುಕೀಗಳು ಚಪ್ಪಟೆಯಾಗಿ ಬಿರುಕುಗಳು ಮೂಡಿರುತ್ತವೆ.
    * ಇದೀಗ ಸುವಾಸನೆಯುಕ್ತ ಶುಂಠಿ ಕುಕೀಸ್ ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಗೋಬಿ ಪೆಪ್ಪರ್ ಡ್ರೈ ರೆಸಿಪಿ ನಿಮಗಾಗಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]