ಮೈಸೂರು: ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಅನಾಹುತ ಎದುರಾಗಿದೆ. ಲಕ್ಷಾಂತರ ರೂ. ಮೌಲ್ಯದ ಶುಂಠಿ ಬೆಳೆ (Ginger Crop) ನಾಶವಾಗಿದ್ದರಿಂದ ಇದೀಗ ರೈತ ಮಹಿಳೆ ಸಹಾಯಕ್ಕಾಗಿ ಕಣ್ಣೀರು ಹಾಕುತ್ತಿದ್ದಾರೆ.
ಸರಗೂರು ತಾಲೂಕು ಬಾಡಿಗೆ ಗ್ರಾಮದಲ್ಲಿ ರೈತ ಜವರಯ್ಯ ಹಾಗೂ ಪುಟ್ಟತಾಯಮ್ಮ ದಂಪತಿ ತಮ್ಮ ಜಮೀನಿನಲ್ಲಿ ಸುಮಾರು ನಾಲ್ಕು ಲಕ್ಷ ಖರ್ಚು ಮಾಡಿ ಶುಂಠಿ ಬೆಳೆ ಬೆಳೆದಿದ್ದರು. ಆದರೆ ಇದೀಗ ಭಾರೀ ಮಳೆಯಿಂದ ಜಮೀನಿನಲ್ಲಿ ನೀರು ನಿಂತಿದೆ. ಪರಿಣಾಮ ಈ ಬೆಳೆ ನಾಶವಾಗಿದೆ. ಇದನ್ನೂ ಓದಿ: ಕನ್ನಡದ ಹುಡುಗನ ಚಿತ್ರಕ್ಕೆ ಕಾನ್ ಚಿತ್ರೋತ್ಸವದಲ್ಲಿ ಮೊದಲ ಬಹುಮಾನ
ತಾವು ಬೆಳೆದ ಬೆಳೆ ಕಣ್ಣ ಮುಂದೆಯೇ ನಾಶವಾಗಿರುವುದರಿಂದ ಮನನೊಂದು ಜಮೀನಿನಲ್ಲಿ ನಿಂತು ಪುಟ್ಟತಾಯಮ್ಮ ಕಣ್ಣೀರು ಹಾಕಿದ್ದಾರೆ. ನೀವು ಬಂದು ಪರಿಸ್ಥಿತಿ ನೋಡಿ ಸೂಕ್ತ ಪರಿಹಾರ ನೀಡುವಂತೆ ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ.
ಇತ್ತ ಪಿರಿಯಾಪಟ್ಟಣದಲ್ಲಿ ಹಲಗನಹಳ್ಳಿಯಲ್ಲಿ ಮಳೆಗೆ 4 ಎಕರೆ ತಂಬಾಕು ಬೆಳೆ ನಾಶವಾಗಿದೆ. ಕಳೆದ 15 ದಿನಗಳ ಹಿಂದೆ ರೈತ ನಾಟಿ ಮಾಡಿದ್ದರು. ಆದರೆ ಕಳೆದ ವಾರದಿಂದ ಸುರಿದ ಮಳೆಗೆ ತಂಬಾಕು ಕೊಚ್ಚಿ ಹೋಗಿದೆ.
ಬೆಂಗಳೂರು: ಬಂಗಾರದ ಬೆಲೆ ಕಂಡಿದ್ದ ಟೊಮೆಟೋ (Tomato) ರೇಟ್‍ನಲ್ಲಿ ಕೊಂಚ ಇಳಿಕೆ ಕಂಡಿದೆ. ಹೀಗಿರುವಾಗ ಮಾರ್ಕೆಟ್‍ನಲ್ಲಿ ಈರುಳ್ಳಿ (Onion) ಬೆಲೆ ದುಬಾರಿಯಾಗುತ್ತಿದೆ.
ಬೆಂಗಳೂರಿನ ಕೆ.ಆರ್ ಮಾರ್ಕೆಟ್‍ನಲ್ಲಿ ವಾರದ ಹಿಂದೆ 25 ರೂ. ಇದ್ದ ಕೆಜಿ ಈರುಳ್ಳಿ, ಈಗ 30 ರಿಂದ 40 ರೂ. ಆಗಿದೆ. ಇನ್ನು 80 ರಿಂದ 100 ರೂಪಾಯಿ ಇದ್ದ ಬೆಳ್ಳುಳ್ಳಿ, 200 ರೂ.ಗೆ ಏರಿಕೆಯಾಗಿದೆ.
ಶ್ರಾವಣ ಮಾಸದ ಆರಂಭದಲ್ಲಿ ಬೆಲೆ ಏರಿಕೆ ಗ್ರಾಹಕರನ್ನ ಕಂಗಾಲಾಗಿಸಿದೆ. ಸದ್ಯ ರಾಜ್ಯದಲ್ಲಿ ಮಳೆ (Rain) ವಿಳಂಬ ಆಗಿರೋದ್ರಿಂದ ಈರುಳ್ಳಿ ಕೊಯ್ಲು 6 ರಿಂದ 8 ವಾರಗಳ ಕಾಲ ವಿಳಂಬ ಆಗುತ್ತಿದೆ. ಮುಂದಿನ ದಿನದಲ್ಲಿ ಈರುಳ್ಳಿ ಕೆ.ಜಿಗೆ 50 ರಿಂದ 60 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ.
ನವದೆಹಲಿ: ಟೊಮೆಟೊ (Tomato) ಜೊತೆಗೆ ಈಗ ಹೂಕೋಸು (Cauliflower), ಶುಂಠಿ (Ginger), ಹಸಿರು ಮೆಣಸಿನಕಾಯಿ (Green Chilli) ಬೆಲೆಯೂ ಹೆಚ್ಚಳವಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.
ಟೊಮೆಟೊ ಬೆಲೆ ನೂರರ ಗಡಿ ದಾಟಿದೆ. ಪ್ರಸ್ತುತ ದೆಹಲಿಯಲ್ಲಿ ಟೊಮೆಟೋ ಕೆಜಿಗೆ 145 ರೂ.ಗೆ ಮಾರಾಟವಾಗುತ್ತಿದೆ. ಒಂದು ಹೂಕೋಸು ಬೆಲೆ 80 ರೂ., ಕೆಜಿ ಶುಂಠಿಗೆ 380 ರೂ. (100 ಗ್ರಾಂಗೆ 38 ರೂ.) ಮತ್ತು ಹಸಿರು ಮೆಣಸಿನಕಾಯಿ ಕೆಜಿಗೆ 170 ರೂ.ಗೆ ಮಾರಾಟವಾಗುತ್ತಿದೆ.
ದೇಶವು ಹಣದುಬ್ಬರ ಕಡಿಮೆಯಾಗಬಹುದೆಂದು ನಿರೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಬೆಲೆ ಏರಿಕೆ ಬಿಕ್ಕಟ್ಟು ತಲೆದೋರಿದೆ. ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಏಪ್ರಿಲ್‌ನಲ್ಲಿ 4.7% ರಿಂದ ಮೇ ತಿಂಗಳಲ್ಲಿ 4.25% ಕ್ಕೆ ಇಳಿದಿದೆ. ಇದನ್ನೂ ಓದಿ: ದೆಹಲಿಯಲ್ಲಿ ಕೆ.ಜಿ ಟೊಮೆಟೋಗೆ 129 ರೂ., ಯುಪಿಯಲ್ಲಿ 150 ರೂ.!
ತರಕಾರಿ ಬೆಲೆ ಸಾಕಷ್ಟು ಏರಿಕೆಯಾಗಿದೆ. ಕೆಲ ದಿನಗಳ ಹಿಂದೆ ಕೆಜಿಗೆ 20 ರೂ. ಇದ್ದ ವಸ್ತುಗಳು ಈಗ ದುಪ್ಪಟ್ಟಾಗಿವೆ. ಟೊಮೆಟೊ ಹೆಚ್ಚು ದುಬಾರಿಯಾಗಿದೆ ಎಂದು ಗ್ರಾಹಕರೊಬ್ಬರು ತಿಳಿಸಿದ್ದಾರೆ.
ಬೆಲೆ ಏರಿಕೆ ತಾತ್ಕಾಲಿಕ ವಿದ್ಯಮಾನ ಎಂದು ಸರ್ಕಾರ ಹೇಳುತ್ತಿದ್ದರೆ, ಪ್ರತಿಪಕ್ಷಗಳು ಈ ವಿಚಾರವಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿವೆ. ಮಂಗಳವಾರ, ಕಾಂಗ್ರೆಸ್ ವಕ್ತಾರ ಸುಪ್ರಿಯಾ ಶ್ರಿನಾಟೆ ಅವರು ಟೊಮೆಟೊ, ಬೆಳ್ಳುಳ್ಳಿ, ಶುಂಠಿ ಮತ್ತು ಹಸಿರು ಮೆಣಸಿನಕಾಯಿಗಳ ಬುಟ್ಟಿಯಿಟ್ಟುಕೊಂಡು ಪತ್ರಿಕಾಗೋಷ್ಠಿ ನಡೆಸಿದರು. ಇದನ್ನೂ ಓದಿ: ಸೇಬಿಗಿಂತ ಟೊಮೆಟೊ ರೇಟೇ ಜಾಸ್ತಿ!
ಬೆಲೆ ಏರಿಕೆಯ ನಡುವೆ ಮಂಗಳವಾರ ರಾತ್ರಿ ಕರ್ನಾಟಕದ ಹಾಸನದಲ್ಲಿ ಮಹಿಳೆಯೊಬ್ಬರ ಜಮೀನಿನಲ್ಲಿ 2.5 ಲಕ್ಷ ರೂ. ಮೌಲ್ಯದ ಟೊಮೆಟೊ ಕಳ್ಳತನವಾಗಿದೆ. ಹಾಸನ ಜಿಲ್ಲೆಯ ಹಳ್ಳಿಯೊಂದರ ಜಮೀನಿನಲ್ಲಿದ್ದ ಸುಮಾರು 60 ಚೀಲ ಟೊಮೆಟೊಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಒಣ ಶುಂಠಿ ಎಂದಾಕ್ಷಣ ಅದು ಏನಕ್ಕೂ ಬರಲ್ಲ ಎಂಬ ಭಾವನೆ ಬಂದಿರುತ್ತೆ. ಆದರೆ ಒಣ ಶುಂಠಿಯು ಹಸಿ ಶುಂಠಿಯಷ್ಟೇ ಪ್ರಾಮುಖ್ಯೆತಯೆನ್ನು ಪಡೆದಿದ್ದು, ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಮಲಬದ್ಧತೆಯ ಸಮಸ್ಯೆಯ ಜೊತೆಗೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಒಣ ಶುಂಠಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ನಿಮ್ಮ ದೇಹದ ಆರೋಗ್ಯ ಹೆಚ್ಚುವುದನ್ನು ನೀವೇ ಸುಲಭವಾಗಿ ಕಂಡುಕೊಳ್ಳಬಹುರು
ತೂಕ ಇಳಿಸಲು ಸಹಾಯ: ಒಣ ಶುಂಠಿ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ಒಣ ಶುಂಠಿ ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ತೂಕ ಇಳಿಸಲು ಸಹಾಯ ಮಾಡುತ್ತದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಹಸಿವು ಕಡಿಮೆಯಾಗುತ್ತದೆ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.
ಹೊಟ್ಟೆ ನೋವು ನಿವಾರಣೆ: ಒಣ ಶುಂಠಿಯ ಬಳಕೆಯು ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಹಾಗೂ ದೇಹದ ನೋವನ್ನು ಶಮನ ಮಾಡುತ್ತದೆ. ಇದಲ್ಲದೆ ಒಣ ಶುಂಠಿಯ ಸೇವನೆಯು ಹೊಟ್ಟೆಯನ್ನು ಶುದ್ಧೀಕರಿಸಲು ಮತ್ತು ದೇಹಕ್ಕೆ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ.
ಜೀರ್ಣಶಕ್ತಿ ಬಲವಾಗಿಸುತ್ತೆ: ಒಣ ಶುಂಠಿಯ ಪುಡಿ ದೀರ್ಘಕಾಲದ ಅಜೀರ್ಣದಿಂದಾಗಿ ಹೊಟ್ಟೆ ನೋವು ಮತ್ತು ಕಿಬ್ಬೊಟ್ಟೆಯ ಅಸ್ವಸ್ಥತೆಯನ್ನು ನಿವಾರಿಸುತ್ತದೆ. ಒಣ ಶುಂಠಿಯ ಪುಡಿ ಈ ಸಮಸ್ಯೆಯನ್ನು ಕಡಿಮೆ ಮಾಡಿ ಜೀರ್ಣಕ್ರಿಯೆಯನ್ನು ಅಧಿಕಗೊಳಿಸುತ್ತದೆ. ಇದನ್ನೂ ಓದಿ: ಮುಖದಲ್ಲಿನ ಎಣ್ಣೆಯುಕ್ತ ಚರ್ಮವನ್ನು ಹೋಗಲಾಡಿಸಿ ಅಂದ ಹೆಚ್ಚಿಸಿಕೊಳ್ಳಿ
ಕೊಲೆಸ್ಟ್ರಾಲ್ ಕಡಿಮೆ: ಶುಂಠಿಯು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚಿನ ಮಟ್ಟದ ಎಲ್ಡಿಎಲ್ ಲಿಪೊಪ್ರೋಟೀನ್ ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ಒಣ ಶುಂಠಿ ಸೇವಿಸಿದರೆ ನಿಮ್ಮ ಸಮಸ್ಯೆಯಿಂದ ದೂರವಾಗಬಹುದು. ಇದನ್ನೂ ಓದಿ: ಹೊಟ್ಟೆನೋವಿಗೆ ಈ ಮನೆ ಮದ್ದು ರಾಮಬಾಣ
Live Tv
[brid partner=56869869 player=32851 video=960834 autoplay=true]
ಶುಂಠಿ ಟೀ ಕುಡಿದರೆ ಶೀತ, ಕೆಮ್ಮಿನಂತಹ ಕಾಯಿಲೆಗಳು ದೂರ ಉಳಿಯುತ್ತದೆ. ಶುಂಠಿ ಹಾಕಿ ತಯಾರಿಸಿದ ಆಹಾರ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಮಾಂಸಹಾರದ ಅಡುಗೆಗಳಲ್ಲಿ ಹೆಚ್ಚಾಗಿ ಶುಂಠಿಯನ್ನು ಬಳಕೆ ಮಾಡುತ್ತಾರೆ. ಆದರೆ ನಾವು ಇಂದು ಶುಂಠಿ ಉಪ್ಪಿನಕಾಯಿಯನ್ನು ಮಾಡುವುದು ಹೇಗೆ ಎಂದು ಸರಳ ವಿಧಾನದ ಮೂಲಕವಾಗಿ ವಿವರಿಸಲಿದ್ದೇವೆ.
ಬೇಕಾಗುವ ಸಾಮಗ್ರಿಗಳು:
* ಶುಂಠಿ – 1ಕಪ್
* ಮೆಂತೆ – 2 ಚಮಚ
* ಜೀರಿಗೆ – 2 ಚಮಚ
* ಖಾರದ ಪುಡಿ – 1 ಚಮಚ
* ಹುಣಸೆ ಹಣ್ಣಿನ ರಸ
* ಇಂಗು ಚಿಟಿಕೆಯಷ್ಟು
* ಅರಿಶಿಣ ಪುಡಿ- ಅರ್ಧ ಚಮಚ
* ತೆಂಗಿನಕಾಯಿ – 1 ಕಪ್
* ಅಡುಗೆ ಎಣ್ಣೆ – 1 ಕಪ್
* ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ:
* ಬಾಣಲೆಯನ್ನು ತೆಗದುಕೊಂಡು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಬೇಕು. ಎಣ್ಣೆ ಬಿಸಿಯಾದಾಗ ಅದಕ್ಕೆ ದೊಡ್ಡ ಜೀರಿಗೆ, ಮೆಂತೆ, ಖಾರದ ಪುಡಿ ಹಾಕಬೇಕು.
* ನಂತರ ಶುಂಠಿಯನ್ನು ಎಣ್ಣೆಯಲ್ಲಿ ಹಾಕಿ 10-15 ನಿಮಿಷ ಹುರಿಯಬೇಕು. ಇದನ್ನೂ ಓದಿ: ಕೆಲವೇ ಸಾಮಗ್ರಿಗಳಲ್ಲಿ ಮಾಡಿ ರುಚಿಯಾದ ಮೊಟ್ಟೆ ಪಲ್ಯ
* ಕತ್ತರಿಸಿದ ತೆಂಗಿನ ತುಂಡುಗಳನ್ನು ಸ್ವಲ್ಪ ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಹುರಿಯಬೇಕು.
* ನಂತರ ಶುಂಠಿಯನ್ನು ತೆಂಗಿನಕಾಯಿಯ ಜೊತೆ ಸೇರಿಸಿ, ಇದಕ್ಕೆ ಹುಣಸೆ ಹಣ್ಣಿನ ರಸ, ಇಂಗು, ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಎರಡು ನಿಮಿಷ ಹುರಿದು ತಣ್ಣಗಾಗಲು ಇಡಬೇಕು.
* ತಣ್ಣಗಾದ ಮೇಲೆ ಅದನ್ನು ಬಾಕ್ಸ್‌ನಲ್ಲಿ ಹಾಕಿ ಮುಚ್ಚಿಡಬೇಕು. ಈ ಉಪ್ಪಿನಕಾಯಿಯನ್ನು 2 ವಾರಗಳ ಕಾಲ ಇಡಬಹುದಾಗಿದೆ.
ಕೌಲಾಲಂಪುರ್: ಸೆಕ್ಯೂರಿಟಿ ಗಾರ್ಡ್ ಒಬ್ಬರು ಕೇವಲ ಈರುಳ್ಳಿ ಹಾಗೂ ಶುಂಠಿ ಜೊತೆ ಅನ್ನ ಸೇವಿಸುತ್ತಿರುವ ಫೋಟೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದು ನೆಟ್ಟಿಗರ ಮನಕಲಕುವಂತೆ ಮಾಡಿದೆ. ಮಾಲೇಷ್ಯಾದ ಸೆಕ್ಯೂರಿಟಿ ಗಾರ್ಡ್ ನ ಈ ಫೋಟೋವನ್ನು ಆತನ ಸ್ನೇಹಿತ ಅಪಿತ್ ಲಿಡ್ ಎಂಬಾತ ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದಾರೆ.
ಫೋಟೋದಲ್ಲಿ ಸೆಕ್ಯೂರಿಟಿ ಗಾರ್ಡ್ ಡ್ಯೂಟಿಯಲ್ಲಿರುವ ವೇಳೆ ಪ್ರೀತಿಯಿಂದ ಆಹಾರ ಸೇವಿಸುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಅಪಿತ್ ಲಿಡ್ ಶೇರ್ ಮಾಡಿರುವ ಮತ್ತೊಂದು ಫೋಟೋದಲ್ಲಿ ಟಿಫನ್ ಬಾಕ್ಸ್‍ನ ಒಳಗೆ ಬೇಯಿಸಿದ್ದ ಅನ್ನ, ಈರುಳ್ಳಿ ಹಾಗೂ ಶುಂಠಿ ಇರುವುದನ್ನು ಕಾಣಬಹುದಾಗಿದೆ.
ಫೋಟೋ ಜೊತೆ ಅಪಿತ್ ಲಿಡ್, ನನ್ನ ಸ್ನೇಹಿತ ಕಷ್ಟಪಟ್ಟು ಕೆಲಸ ಮಾಡುತ್ತಾನೆ. ಅವನು ತನಗೆ ಬರುವ ಸಂಬಳದಲ್ಲಿ ಬಹಳಷ್ಟು ಭಾಗ ಕುಟುಂಬಕ್ಕಾಗಿ ಮನೆಗೆ ಕಳುಹಿಸಿಕೊಡುತ್ತಾನೆ ಮತ್ತು ಸ್ವಲ್ಪ ಹಣವನ್ನು ತನ್ನ ಊಟದ ಖರ್ಚಿಗಾಗಿ ಇಟ್ಟುಕೊಳ್ಳುತ್ತಾನೆ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಜೊತೆಗೆ ಅಪಿತ್ ಸಹ ಕೆಲವೊಮ್ಮೆ ತನ್ನ ಸ್ನೇಹಿತನನ್ನು ನೋಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
Manusia contoh…Kerja rajin… Gaji sama banyak je dgn orang lain.. Tapi kenapa dia makan nasi putih + kuah air masak +…
ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ 6 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿಕೊಂಡಿದ್ದು, ನೆಟ್ಟಿಗರು ಭಾವನಾತ್ಮಕವಾಗಿ ಕಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಸೆಕ್ಯೂರಿಟಿ ಗಾರ್ಡ್‍ನ ವರ್ತನೆ ಕುರಿತಂತೆ ಶುಭ ಹಾರೈಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.