Tag: gifts

  • ಪ್ರಧಾನಿ ಮೋದಿಗೆ ದೊರಕಿದ 1,300ಕ್ಕೂ ಹೆಚ್ಚು ಉಡುಗೊರೆಗಳ ಇ-ಹರಾಜು

    ಪ್ರಧಾನಿ ಮೋದಿಗೆ ದೊರಕಿದ 1,300ಕ್ಕೂ ಹೆಚ್ಚು ಉಡುಗೊರೆಗಳ ಇ-ಹರಾಜು

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಉಡುಗೊರೆಯಾಗಿ (Gifts) ದೊರಕಿದ 1,300ಕ್ಕೂ ಹೆಚ್ಚು ವಸ್ತುಗಳನ್ನು ಬುಧವಾರ ಪ್ರಾರಂಭಗೊಂಡ ಇ-ಹರಾಜಿನಲ್ಲಿ (E-Auction) ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಯೋಧ್ಯಾ ರಾಮ ಮಂದಿರ ಮಾದರಿ, ಭವಾನಿ ದೇವಿಯ ವಿಗ್ರಹ, 2024ರ ಒಲಿಂಪಿಕ್ಸ್ ಕ್ರೀಡಾಕೂಟದ ಸ್ಮರಣಿಕೆಗಳು ಸೇರಿದಂತೆ 1,300ಕ್ಕೂ ಹೆಚ್ಚು ಉಡುಗೊರೆಗಳನ್ನು ಹರಾಜಿಗಿಡಲಾಗಿದೆ. ಮೋದಿಯವರ ಜನ್ಮದಿನವಾದ ಇಂದು (ಸೆ.17) ಇ-ಹರಾಜು ಪ್ರಕ್ರಿಯೆ ಆರಂಭಗೊಂಡಿದ್ದು, ಅ.2ರವರೆಗೆ ಹರಾಜು ನಡೆಯಲಿದೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ 75ರ ಸಂಭ್ರಮ – ಫೋನ್‌ ಕರೆ ಮಾಡಿ ಬರ್ತ್‌ಡೇ ವಿಶ್‌ ಮಾಡಿದ ಟ್ರಂಪ್‌

    ಪಿಎಂ ಮೊಮೆಂಟೋಸ್ ವೆಬ್‌ಸೈಟ್ ಪ್ರಕಾರ, ಭವಾನಿ ದೇವಿಯ ಪ್ರತಿಮೆಯ ಬೆಲೆ 1,03,95,000 ರೂ. ಆಗಿದ್ದು, ರಾಮ ಮಂದಿರ ದೇವಾಲಯದ ಮಾದರಿ 5.5 ಲಕ್ಷ ರೂ. ಮೌಲ್ಯವನ್ನು ಹೊಂದಿದೆ. ಇನ್ನು ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳ ಮೂರು ಜೊತೆ ಶೂಗಳನ್ನು ಕೂಡ ಹರಾಜಿಗಿಡಲಾಗಿದ್ದು, ಪ್ರತಿ ಶೂ ಬೆಲೆ 7.7 ಲಕ್ಷ ರೂ. ಇರಲಿದೆ ಎಂದು ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.  2019ರ ಜನವರಿಯಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿಯವರಿಗೆ ನೀಡಿದ್ದ ಉಡುಗೊರೆಗಳ ಇ-ಹರಾಜನ್ನು ನಡೆಸಲಾಗಿತ್ತು. ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ಗುಂಡಿಗಳನ್ನ ಮುಚ್ಚಲು ಡೆಡ್‌ಲೈನ್‌ ಫಿಕ್ಸ್‌ ಮಾಡಿದ ಡಿಸಿಎಂ ಡಿಕೆಶಿ

    ಜಮ್ಮು ಮತ್ತು ಕಾಶ್ಮೀರದ ಕಸೂತಿ ಮಾಡಿದ ಪಶ್ಮಿನಾ ಶಾಲು, ರಾಮ ದರ್ಬಾರ್‌ನ ತಂಜೂರಿನ ಚಿತ್ರಕಲೆ, ಲೋಹದ ನಟರಾಜ ಪ್ರತಿಮೆ, ಗುಜರಾತ್‌ನ ರೋಗನ್ ಕಲೆ ಮತ್ತು ಕೈಯಿಂದ ನೇಯ್ದ ನಾಗಾ ಶಾಲು ಕೂಡ ಇ-ಹರಾಜಿನಲ್ಲಿ ಇಡಲಾಗಿದೆ. ಈವರೆಗೂ ಹರಾಜಿನಲ್ಲಿ 50 ಕೋಟಿ. ರೂಗೂ ಹೆಚ್ಚು ಹಣ ಸಂಗ್ರಹವಾಗಿದ್ದು, ಈ ಹಣವನ್ನು ನಮಾಮಿ ಗಂಗೆ ಯೋಜನೆಗೆ ವಿನಿಯೋಗಿಸಲಾಗುತ್ತದೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸ್ವಚ್ಛ ಆಡಳಿತ – ಆರ್.ಅಶೋಕ್

  • ಕುಕ್ಕರ್ ಪಾಲಿಟಿಕ್ಸ್ – ಮತದಾರರಿಗೆ ಗಿಫ್ಟ್ ಹಂಚಿದ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್

    ಕುಕ್ಕರ್ ಪಾಲಿಟಿಕ್ಸ್ – ಮತದಾರರಿಗೆ ಗಿಫ್ಟ್ ಹಂಚಿದ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್

    ಹಾವೇರಿ: ವಿಧಾನಸಭಾ ಚುನಾವಣೆ (Karnataka Assembly Election) ಸಮೀಪಿಸುತ್ತಿದ್ದಂತೆ ಹಾವೇರಿ (Haveri) ಜಿಲ್ಲೆಯಲ್ಲಿ ಭರ್ಜರಿ ಕುಕ್ಕರ್ ಪಾಲಿಟಿಕ್ಸ್ ಜೋರಾಗಿದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ (R.Shankar)  ಮತದಾರರಿಗೆ ಕುಕ್ಕರ್ (Cooker) ಗಿಫ್ಟ್ (Gift) ನೀಡಿದ್ದಾರೆ.

    ಮನೆ ಮನೆಗೆ ಮೊದಲು ಆರ್.ಶಂಕರ್ ಬೆಂಬಲಿಗರು ಕೂಪನ್ ನೀಡಿದ್ದರು. ಆ ಬಳಿಕ ಕೂಪನ್ ತೋರಿಸಿದವರಿಗೆ ಕುಕ್ಕರ್ ನೀಡಲಾಗಿದೆ. ಸದಾ ನಿಮ್ಮ ಸೇವೆಗಾಗಿ ನಿಮ್ಮ ಮನೆ ಮಗ ಆರ್. ಶಂಕರ್ ಅಂತ ಕುಕ್ಕರ್ ಮೇಲೆ ಬರೆಸಲಾಗಿದೆ. ಸದ್ಯ ಬಿಜೆಪಿ ಎಂಎಲ್‍ಸಿ ಆರ್. ಶಂಕರ್ ಈ ಬಾರಿ ರಾಣೆಬೆನ್ನೂರು ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಟಿಕೆಟ್ (Ticket) ಸಿಕ್ಕರೆ ಬಿಜೆಪಿಯಿಂದ (BJP), ಇಲ್ಲದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ರಾಜಕೀಯ ವಿಚಾರದಲ್ಲಿ ಜಗಳ- ಮಚ್ಚಿನಿಂದ ಕೈ ಕಡಿದ ಸ್ನೇಹಿತ

    ಇತ್ತ ಆರ್. ಶಂಕರ್ ಕಾಂಗ್ರೆಸ್ ಸೇರ್ತಾರೆ ಅನ್ನೋ ಸುದ್ದಿಯೂ ಜೋರಾಗಿ ಹರಿದಾಡುತ್ತಿದೆ. ಕಳೆದ 2018ರ ವಿಧಾನ ಚುನಾವಣೆಯಲ್ಲಿ ರಾಣೆಬೆನ್ನೂರು ಕ್ಷೇತ್ರದಲ್ಲಿ ಗೆದ್ದು, ರಾಜಕೀಯ ಮೇಲಾಟದಿಂದ 2018ರಲ್ಲಿ ಬಿ.ಎಸ್‌ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ನಡೆಸುತ್ತಿದ್ದಾಗ ಶಂಕರ್, ಯಡಿಯೂರಪ್ಪನವರಿಗೆ (B.S Yediyurappa) ಬೆಂಬಲ ನೀಡಲು ಮುಂದಾಗಿದ್ದರು. ಆದರೆ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಅದೇ ದಿನ ಸಂಜೆ ಕೆಪಿಸಿಸಿ ಕಚೇರಿಗೆ ಹೋಗಿ ಕಾಂಗ್ರೆಸ್ (Congress)-ಜೆಡಿಎಸ್ (JDS) ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿ ಬಳಿಕ ಕಾಂಗ್ರೆಸ್ ಜೊತೆಗೆ ತಮ್ಮ ಪಕ್ಷವನ್ನು ವಿಲೀನಗೊಳಿಸಿದ್ದರು. ಇದನ್ನೂ ಓದಿ: ಪ್ಲೀಸ್ ಮುಕ್ತಿ ಕೊಡಿಸಿ ಸರ್- ಎಮ್ಮೆಗಳ ವಿರುದ್ಧ ಅರವಿಂದ ಲಿಂಬಾವಳಿಗೆ ಟೆಕ್ಕಿಗಳಿಂದ ದೂರು!

    ಆದರೆ ಬಳಿಕ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರ್ಪಡೆಗೊಂಡರು. ಈ ವೇಳೆ ಸಚಿವರನ್ನಾಗಿ ಮಾಡುವ ಭರವಸೆ ಬಿ.ಎಸ್ ಯಡಿಯೂರಪ್ಪ ನೀಡಿದ್ದರು. ತಮ್ಮ ರಾಜಕೀಯ ಅಸ್ಥಿರತೆಯಿಂದ ಕಂಗಾಲಾಗಿರೋ ಶಂಕರ್. ಇದೀಗ ಮತ್ತೆ ರಾಣೆಬೆನ್ನೂರು ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎಲೆಕ್ಷನ್ ಎಫೆಕ್ಟ್: ಸಂಕ್ರಾಂತಿ ಹಬ್ಬಕ್ಕೆ ಜನರಿಗೆ ಗಿಫ್ಟೋ ಗಿಫ್ಟ್ – ಮನೆ ಮನೆಗೆ ತಟ್ಟೆ, ಲೋಟ, ಸ್ಪೂನ್ ಕೊಟ್ಟ MLA

    ಎಲೆಕ್ಷನ್ ಎಫೆಕ್ಟ್: ಸಂಕ್ರಾಂತಿ ಹಬ್ಬಕ್ಕೆ ಜನರಿಗೆ ಗಿಫ್ಟೋ ಗಿಫ್ಟ್ – ಮನೆ ಮನೆಗೆ ತಟ್ಟೆ, ಲೋಟ, ಸ್ಪೂನ್ ಕೊಟ್ಟ MLA

    ಬೆಂಗಳೂರು: ಚುನಾವಣಾ (Election) ಹೊಸ್ತಿಲಲ್ಲಿ ಬೆಂಗಳೂರಿನಲ್ಲಿ (Bengaluru) ಈಗಾಗಲೇ ಮತದಾರರಿಗೆ ಆಮಿಷವೊಡ್ಡಲು ಕಸರತ್ತು ಶುರುವಾಗಿದೆ. ಅದ್ರಲ್ಲೂ ಹಬ್ಬ ಬಂತು ಅಂದ್ರೆ ಈಗ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದೆ.

    ಒಂದ್ಕಡೆ ಮುಂಬರುವ ವಿಧಾನಸಭೆ ಚುನಾವಣೆಗೆ (Karnataka Assembly Election) ಅಖಾಡ ಬಲಗೊಳಿಸುವ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಮತ್ತೊಂದ್ಕಡೆ ಬೆಂಗಳೂರಿನಲ್ಲಿಯೂ ಈಗ ಚುನಾವಣಾ ಹೊಸ್ತಿಲಲ್ಲಿ ಮತದಾರರ ಮನಸೆಳೆಯಲು ಗಿಮಿಕ್‍ಗಳು ಶುರುವಾಗಿದೆ. ಹಬ್ಬದ ನೆಪದಲ್ಲಿ ಮತದಾರರಿಗೆ ಉಡುಗೊರೆಗಳು ಸಿಕ್ಕಾಪಟ್ಟೆ ಸಪ್ಲೈಯಾಗ್ತಿದೆ. ಸಿವಿ ರಾಮನ್ ನಗರದಲ್ಲಿ ಸ್ಥಳೀಯ ಶಾಸಕ ರಘು ಜನ್ರಿಗೆ ತಟ್ಟೆ, ಲೋಟ, ಸ್ಪೂನ್ ಕಳುಹಿಸಿದ್ದಾರೆ ಎಂದು ಎಎಪಿ (AAP) ಆರೋಪಿಸಿದ್ದು, ಗಿಫ್ಟ್ ಬಾಕ್ಸ್ ಸಮೇತ ಮಾಧ್ಯಮಗಳ ಮುಂದೆ ಇಟ್ಟಿದ್ದಾರೆ. ಸೋಲಿನ ಭಯಕ್ಕೆ ಜನ್ರಿಗೆ ತಟ್ಟೆ, ಲೋಟ ಕೊಟ್ಟು ಒಲೈಕೆ ಮಾಡೋಕೆ ಹೊರಟಿದ್ದಾರೆ ಇದು ಮತದಾರರಿಗೆ ಮಾಡುವ ಅವಮಾನ ಅಂತಾ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಚಿರತೆ ಆತಂಕ

    ಈಗಾಗಲೇ ಬೆಂಗಳೂರಿನ ಬೇರೆ ಬೇರೆ ಕ್ಷೇತ್ರದಲ್ಲಿ ಮತಭೇಟೆಯ ಸರ್ಕಸ್ ಶುರುವಾಗಿದ್ದು ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ ಅಂತಾ ಎಎಪಿ ಆರೋಪಿಸಿದೆ. ಜನರಿಗೆ ಬೇಕಾಗಿರೋದು ಎಲೆಕ್ಷನ್ ಟೈಂನಲ್ಲಿ ಕೊಡುವ ತಟ್ಟೆ, ಲೋಟ ಗಿಫ್ಟ್ ಅಲ್ಲ. ಬದಲಾಗಿ ಗೆಲ್ಲಿಸಿ ಕೊಟ್ಟ ಜನರಿಗೆ ಕೊಡುವ ಬೆಸ್ಟ್ ಗಿಫ್ಟ್ ಅಂದ್ರೆ ಜನಪ್ರತಿನಿಧಿಗಳು ಮಾಡುವ ಅಭಿವೃದ್ಧಿ ಕೆಲಸ ಎಂದು ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: BJPಯಿಂದ ರಿಪೋರ್ಟ್‌ ಕಾರ್ಡ್ ಪಾಲಿಟಿಕ್ಸ್; ಜನರ ಮುಂದೆ ಡಬಲ್ ಇಂಜಿನ್ ಸರ್ಕಾರಗಳ ಸಾಧನಾ ವರದಿ ಅನಾವರಣಕ್ಕೆ ಮುಹೂರ್ತ ಫಿಕ್ಸ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಇ-ಹರಾಜಿನಲ್ಲಿ ಭಾಗವಹಿಸಲು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

    ಇ-ಹರಾಜಿನಲ್ಲಿ ಭಾಗವಹಿಸಲು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

    ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನರಿಂದ ಪಡೆದ ಹಲವಾರು ಉಡುಗೊರೆ, ಸ್ಮರಣಿಕೆಗಳು ಹರಾಜಾಗುತ್ತಿದ್ದು, ಜನರು ಈ ಹರಾಜಿನಲ್ಲಿ ಭಾಗವಹಿಸಬೇಕೆಂದು ಮೋದಿ ಕರೆ ನೀಡಿದ್ದಾರೆ.

    ಪ್ರಧಾನ ಮಂತ್ರಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ಸಂಸ್ಕೃತಿ ಸಚಿವಾಲಯವು ಆಯೋಜಿಸಿರುವ ಇ-ಹರಾಜು ಶುಕ್ರವಾರ ಆರಂಭವಾಯಿತು. ಅಕ್ಟೋಬರ್ 7 ರವರೆಗೆ ಹರಾಜು ಪ್ರಕ್ರಿಯೆ ಮುಂದುವರಿಯುತ್ತದೆ. ಹರಾಜಿನ ಮೂರನೇ ಆವೃತ್ತಿ ಇದಾಗಿದ್ದು, ಇದರಲ್ಲಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ಭಾಗವಹಿಸಬಹುದು.  https://pmmementos.gov.in ಮೂಲಕ ಹರಾಜಿನಲ್ಲಿ ನೀವು ಭಾಗಿಯಾಗಬಹುದು.

    ಟ್ವೀಟ್‍ನಲ್ಲಿ ಏನಿದೆ?: ಹರಾಜಿನಲ್ಲಿ ಸಿಗುವ ಹಣವನ್ನು ನಮಾಮಿ ಗಂಗೆ (Namami Gange) ಕಾರ್ಯಕ್ರಮಕ್ಕೆ ಬಳಸಲಾಗುತ್ತದೆ. ನಾನು ಸ್ವೀಕರಿಸಿದ ಹಲವಾರು ಉಡುಗೊರೆಗಳು ಮತ್ತು ಸ್ಮರಣಿಕೆಗಳು ಹರಾಜಾಗುತ್ತಿವೆ. ಈ ಹರಾಜಿನಲ್ಲಿ ನಮ್ಮ ಒಲಿಂಪಿಕ್ಸ್ ಹೀರೋಗಳು ನೀಡಿದ ವಿಶೇಷ ಸ್ಮರಣಿಕೆಗಳು ಕೂಡಾ ಒಳಗೊಂಡಿದೆ. ನೀವು ಹರಾಜಿನಲ್ಲಿ ಭಾಗವಹಿಸಿ. ಆದಾಯವು ನಮಾಮಿ ಗಂಗೆ ಯೋಜನೆಗೆ ಹೋಗುತ್ತದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟಿಗೆ ಟ್ವೀಟ್ ಮಾಡಿದ್ದ ರಾಜಸ್ಥಾನ ಸಿಎಂ ಒಎಸ್‍ಡಿ ರಾಜೀನಾಮೆ!

    ನಮಾಮಿ ಗಂಗೆ ಯೋಜನೆ ಏನು?: ನಮಾಮಿ ಗಂಗೆ ಎನ್ನುವುದು ಗಂಗಾ ನದಿಯ ಸಮಗ್ರ ಸಂರಕ್ಷಣೆ ಮತ್ತು ಪುನರುಜ್ಜೀವನ ಕಾರ್ಯಕ್ರಮ. ಕೇಂದ್ರ ಸರ್ಕಾರವು ಜೂನ್ 2014ರಲ್ಲಿ ಈ ಕಾರ್ಯಕ್ರಮವನ್ನು ಆರಂಭಿಸಿತು. ಇದು ಗಂಗಾ ನದಿಯ ಮಾಲಿನ್ಯ ನಿಯಂತ್ರಣ ಮತ್ತು ಸಂರಕ್ಷಣೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. 2019ರಲ್ಲಿ ಸರ್ಕಾರವು ಪ್ರಧಾನ ಮಂತ್ರಿ ಪಡೆದ 4,000ಕ್ಕೂ ಹೆಚ್ಚು ಉಡುಗೊರೆಗಳನ್ನು ಹರಾಜು ಹಾಕಲಾಗಿತ್ತು. ಹಿಂದಿನ ಹರಾಜಿನ ಆದಾಯವು ನಮಾಮಿ ಗಂಗೆ ಕಾರ್ಯಕ್ರಮಕ್ಕೆ ಹೋಗಿತ್ತು. ಇದನ್ನೂ ಓದಿ:  ಪಂಜಾಬ್ ನೂತನ ಸಿಎಂ ಆಗಿ ಸುಖ್‍ಜಿಂದರ್ ಸಿಂಗ್ ರಂಧಾವಾ

    ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಲೊವ್ಲಿನಾ ಬೊರ್ಗೊಹೈನ್ ಅವರ ಬಾಕ್ಸಿಂಗ್ ಗ್ಲೌಸ್ ಇ-ಹರಾಜಿನಲ್ಲಿ ಅತಿ ಹೆಚ್ಚು ಬಿಡ್ ಪಡೆದಿದೆ. 80 ಲಕ್ಷ ಮೂಲ ಬೆಲೆಯ ಬೊರ್ಗೊಹೈನ್ ಕೈಗವಸುಗಳು 1.92 ಕೋಟಿ ಬಿಡ್ ಪಡೆದಿದೆ. ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಜಾವೆಲಿನ್ 1.5 ಕೋಟಿ ಬಿಡ್ ಪಡೆದಿದೆ. ಚೋಪ್ರಾ ಅವರ ಜಾವೆಲಿನ್ ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ ಹರಾಜಿನಲ್ಲಿ 1 ಕೋಟಿ ಮೂಲ ಬೆಲೆಯನ್ನು ಹೊಂದಿತ್ತು. ಪ್ಯಾರಾಲಿಂಪಿಯನ್ ಅವನಿ ಲೇಖರಾ ಮತ್ತು ಭವಾನಿ ಪಟೇಲ್ ಅವರ ಟೀ ಶರ್ಟ್‍ಗಳು, ಪಿವಿ ಸಿಂಧು ತನ್ನ ಕಂಚಿನ ಪದಕ ವಿಜೇತ ಒಲಿಂಪಿಕ್ಸ್ ಪಂದ್ಯದಲ್ಲಿ ಬಳಸಿದ racket ಕೂಡ ಹರಾಜಿನ ಭಾಗವಾಗಿತ್ತು. ಕ್ರೀಡಾ ಸಾಮಗ್ರಿಗಳ ಹೊರತಾಗಿ, ಇ-ಹರಾಜಿನಲ್ಲಿ ಕೇದಾರನಾಥ ದೇವಸ್ಥಾನ ಮತ್ತು ಏಕತೆಯ ಪ್ರತಿಮೆ, ಪ್ರಧಾನಿಯವರ ಭಾವಚಿತ್ರಗಳು ಮತ್ತು ಛಾಯಾಚಿತ್ರಗಳು ಸೇರಿವೆ. ಮೋದಿಯವರ ಛಾಯಾಚಿತ್ರ ಮತ್ತು ಭಾವಚಿತ್ರಗಳ ಮೂಲ ಬೆಲೆ 2 ಲಕ್ಷ ರೂಪಾಯಿ ಎಂದು ನಿಗದಿಗೊಳಿಸಲಾಗಿದೆ. ಇದನ್ನೂ ಓದಿ:  ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆ- ಸ್ಮರಣಿಕೆಗಳು ಸೆ.17ರಿಂದ ಇ-ಹರಾಜು