Tag: Gift Politics

  • ಶಾಸಕ ಶಾಮನೂರು ಕೊಟ್ಟ ಗಿಫ್ಟನ್ನು ರಸ್ತೆಗೆ ಎಸೆದು ಮಹಿಳೆಯರ ಆಕ್ರೋಶ

    ಶಾಸಕ ಶಾಮನೂರು ಕೊಟ್ಟ ಗಿಫ್ಟನ್ನು ರಸ್ತೆಗೆ ಎಸೆದು ಮಹಿಳೆಯರ ಆಕ್ರೋಶ

    ದಾವಣಗೆರೆ: ಚುನಾವಣೆ (Election) ಹತ್ತಿರ ಬರುತ್ತಿದ್ದಂತೆ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಸಾಕಷ್ಟು ಕಸರತ್ತು ಮಾಡುತ್ತವೆ. ಅಲ್ಲದೆ ಇಷ್ಟು ದಿನ ಇವರ ಕಷ್ಟಕ್ಕೆ ಸ್ಪಂದಿಸದ ನಾಯಕರು ಚುನಾವಣಾ ಸಂದರ್ಭದಲ್ಲಿ ಹಬ್ಬ ಹರಿದಿನಗಳ ಶುಭಾಶಯ ಕೋರಿ ಸೀರೆ, ಕುಕ್ಕರ್, ಸೇರಿದಂತೆ ಹಲವಾರು ಉಡುಗೊರೆಗಳನ್ನು (Gift) ಮತದಾರರಿಗೆ ನೀಡಿ ಮತ ಸೆಳೆಯುವ ತಂತ್ರವನ್ನು ಮಾಡುತ್ತಾರೆ. ಇದೀಗ ನಮಗೆ ಸೀರೆ ಬೇಡ, ಮೂಲಭೂತ ಸೌಕರ್ಯ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ಸೀರೆಗಳನ್ನು (Saree) ಬೀದಿಗೆ ಎಸೆದಿರುವ ಪ್ರಸಂಗ ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಡೆದಿದೆ.

    ದಾವಣಗೆರೆಯ (Davanagere) ದಕ್ಷಿಣ ಕ್ಷೇತ್ರದ ಶಾಸಕ ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಕಳೆದ 4 ಚುನಾವಣೆಯಿಂದ ಗೆದ್ದು ಆಡಳಿತ ನಡೆಸುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ ಕಳೆದ 1 ತಿಂಗಳಿನಿಂದ ದಾವಣಗೆರೆಯ ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಎಸ್‌ಎಸ್ ಮಲ್ಲಿಕಾರ್ಜುನ್ ಭಾವಚಿತ್ರವಿರುವ ಬ್ಯಾಗ್‌ಗಳಲ್ಲಿ ಸೀರೆ, ಕುಕ್ಕರ್, ಸೇರಿದಂತೆ ಗೃಹ ಬಳಕೆ ವಸ್ತುಗಳನ್ನು ಮತದಾರರಿಗೆ ನೀಡುತ್ತಿದ್ದಾರೆ. ಅದರಲ್ಲಿ ಯುಗಾದಿ ಹಬ್ಬದ ಶುಭಾಶಯಗಳು ಎಂದು ಶುಭಾಶಯ ತಿಳಿಸುತ್ತಾ ಉಡುಗೊರೆಗಳನ್ನು ಹಂಚಿಕೆ ಮಾಡುತ್ತಿದ್ದಾರೆ.

    ಭಾಷಾ ನಗರದಲ್ಲಿ ಗಿಫ್ಟ್ ಹಂಚಿಕೆ ಮಾಡಿದ್ದು ಅಲ್ಲಿನ ಸ್ಥಳೀಯ ಮಹಿಳೆಯರು ಶಾಮನೂರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಸರಿಯಾದ ಚರಂಡಿ ಇಲ್ಲ, ರಸ್ತೆ ಇಲ್ಲ. ಪ್ರಾಣಿಗಳು ವಾಸ ಮಾಡುವ ರೀತಿ ನಾವು ವಾಸ ಮಾಡುತ್ತಾ ಇದ್ದೇವೆ. ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಂದರೆ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಆದರೆ ಈಗ ಸೀರೆಗಳನ್ನು ಕೊಟ್ಟು ಹೋಗುತ್ತಿದ್ದಾರೆ. ಈ ಸೀರೆಗಳು ಬೇಡ ಎಂದು ಸ್ಥಳೀಯ ಮಹಿಳೆಯರು ಕೊಟ್ಟ ಸೀರೆಗಳನ್ನು ರಸ್ತೆಯಲ್ಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿ ಅತ್ತೆ-ಸೊಸೆ ಮಧ್ಯೆ ಜಗಳ ತಂದಿಡುತ್ತಿದೆ- ಸಿ.ಎಂ ಇಬ್ರಾಹಿಂ

    ಸ್ಥಳೀಯರು ಹಲವು ವರ್ಷಗಳಿಂದ ಕಾಂಗ್ರೆಸ್ ಬೆಂಬಲಿಸಿಕೊಂಡು ಬಂದಿದ್ದರು. ನಮಗೆ ಯಾವುದೇ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಶಾಸಕರಿಗೆ ಎಷ್ಟು ಬಾರಿ ಮನವಿ ಮಾಡಿದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಭಾಷಾ ನಗರ 17ನೇ ಕ್ರಾಸ್ ಎಲ್ಲಿದೆ ಎಂದು ಶಾಸಕರು ಕೇಳುತ್ತಾರೆ. ಅಷ್ಟರ ಮಟ್ಟಿಗೆ ನಮ್ಮನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಇಲ್ಲಿನ ಸ್ಥಳೀಯ ಪ್ರತಿನಿಧಿಗಳು ಕೂಡಾ ಅವರ ಗಮನಕ್ಕೆ ತರುತ್ತಿಲ್ಲ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ನೀರು ನಿಂತು ಮಕ್ಕಳಿಗೆ ಕಾಯಿಲೆಗಳು ಬರುತ್ತಿವೆ. ಈಗ ಬಂದ ಹಬ್ಬದ ಶುಭಾಶಯ ತಿಳಿಸಿ ಗಿಫ್ಟ್ ಕೊಡ್ತಾರೆ. ನಮಗೆ ಗಿಫ್ಟ್ ಬೇಡ. ಮೂಲಭೂತ ಸೌಕರ್ಯ ಬೇಕು. ಇಲ್ಲವಾದರೆ ಚುನಾವಣೆಯಲ್ಲಿ ನಾವು ನಿರ್ಧಾರ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ದಾವಣಗೆರೆ ದಕ್ಷಿಣ ಕ್ಷೇತ್ರದ ಜನರು ಸರಿಯಾದ ಮೂಲಭೂತ ಸೌಕರ್ಯ ಸಿಗದೆ ಸಂಕಷ್ಟ ಅನುಭವಿಸುತ್ತಿದ್ದು, ಚುನಾವಣೆ ಬಂದಿದೆ ಎಂದು ಗಿಫ್ಟ್‌ಗಳನ್ನು ನೀಡಿ ಮನವೊಲಿಸುವ ಕೆಲಸ ರಾಜಕೀಯ ಪಕ್ಷಗಳು ಮಾಡುತ್ತಿವೆ. ಇದಕ್ಕೆ ಭಾಷಾ ನಗರದ ನಿವಾಸಿಗಳು ತಕ್ಕ ಶಾಸ್ತಿ ನೀಡಿದ್ದಾರೆ. ಇದನ್ನೂ ಓದಿ: ಶಕ್ತಿದೇವತೆ ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಟಿಕೆಟ್ ಫೈಟ್ ಜೋರು

  • ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ಮನ್ನೋಳ್ಕರ್‌ಗೆ ಮತ್ತೊಂದು ಶಾಕ್

    ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ಮನ್ನೋಳ್ಕರ್‌ಗೆ ಮತ್ತೊಂದು ಶಾಕ್

    – ಮತದಾರರಿಗೆ ಹಂಚಲು ತಂದಿದ್ದ ನೂರಾರು ಟಿಫಿನ್ ಬಾಕ್ಸ್ ಜಪ್ತಿ

    ಬೆಳಗಾವಿ: ರಮೇಶ್ ಜಾರಕಿಹೊಳಿ (Ramesh Jarkiholi) ಆಪ್ತ ನಾಗೇಶ್ ಮನ್ನೋಳ್ಕರ್‌ಗೆ (Nagesh Manolkar) ಚುನಾವಣೆ ಅಧಿಕಾರಿಗಳು ಮತ್ತೊಂದು ಶಾಕ್ ನೀಡಿದ್ದಾರೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಮತಕ್ಷೇತ್ರದಲ್ಲಿ ಮತದಾರರಿಗೆ ಹಂಚಲು ತಂದಿದ್ದ ನೂರಾರು ಟಿಫಿನ್ ಬಾಕ್ಸ್‌ಗಳನ್ನು (Tiffin Box) ಜಪ್ತಿ ಮಾಡಿಕೊಂಡಿದ್ದಾರೆ.

    ತಾಲೂಕಿನ ಕುದ್ರೆಮನಿ ಗ್ರಾಮದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಟಿಫಿನ್ ಬಾಕ್ಸ್‌ಗಳನ್ನು ಬೆಳಗಾವಿ ಡಿಸಿ, ಚುನಾವಣಾಧಿಕಾರಿ ನಿತೇಶ್ ಪಾಟೀಲ್ ಮಾರ್ಗದರ್ಶನದಲ್ಲಿ ಜಪ್ತಿ ಮಾಡಿಕೊಳ್ಳಲಾಗಿದೆ. ಬೆಳಗಾವಿ (Belagavi) ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುದ್ರೆಮನಿ ಗ್ರಾಮದಲ್ಲಿ ಮತದಾರರಿಗೆ ಗಿಫ್ಟ್ ಕೊಡಲು ಟಿಫಿನ್ ಬಾಕ್ಸ್ ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದರು. ಇದನ್ನೂ ಓದಿ: ಆಡಿಯೋದಲ್ಲಿ ಶಿವಲಿಂಗೇಗೌಡ ಹೇಳಿರುವುದು ಸುಳ್ಳು ಎಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ – ರೇವಣ್ಣ ಸವಾಲು

    ದಾಳಿ ವೇಳೆ ರಮೇಶ್ ಜಾರಕಿಹೊಳಿ ಆಪ್ತ, ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮನ್ನೋಳ್ಕರ್ ಭಾವಚಿತ್ರ ಇರುವ ಟಿಫಿನ್ ಬಾಕ್ಸ್ ಜಪ್ತಿ ಮಾಡಿಕೊಳ್ಳಲಾಗಿದೆ. 400 ಕ್ಕೂ ಅಧಿಕ ಟಿಫಿನ್ ಬಾಕ್ಸ್ ಜಪ್ತಿ ಮಾಡಿಕೊಂಡ ಅಧಿಕಾರಿಗಳು ನೀತಿ ಸಂಹಿತೆ ಉಲ್ಲಂಘನೆ ಅಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಆಡಿಯೋದಲ್ಲಿ ಶಿವಲಿಂಗೇಗೌಡ ಹೇಳಿರುವುದು ಸುಳ್ಳು ಎಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ – ರೇವಣ್ಣ ಸವಾಲು

    ಇತ್ತೀಚೆಗೆ ಬಾಡೂಟ ಆಯೋಜನೆ ಹಿನ್ನೆಲೆ ನಾಗೇಶ್ ಮನ್ನೋಳ್ಕರ್ ಸೇರಿ ಇಬ್ಬರ ವಿರುದ್ಧ ಕೇಸ್ ದಾಖಲಾಗಿತ್ತು.

  • `ಕೈ’ ಟಿಕೆಟ್ ಆಕಾಂಕ್ಷಿಯಿಂದ ಸೀರೆ, ತವಾ ವಿತರಣೆ- ಉಡುಗೊರೆ ಸಿಗದ ಮಹಿಳೆಯರು ಗರಂ

    `ಕೈ’ ಟಿಕೆಟ್ ಆಕಾಂಕ್ಷಿಯಿಂದ ಸೀರೆ, ತವಾ ವಿತರಣೆ- ಉಡುಗೊರೆ ಸಿಗದ ಮಹಿಳೆಯರು ಗರಂ

    – ಅತ್ತ ಚಿಕ್ಕಬಳ್ಳಾಪುರದಲ್ಲೂ ಗಿಫ್ಟ್ ಗಿಫ್ಟ್

    ಯಾದಗಿರಿ/ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭಾ ಚುನಾವಣೆ (Vidhanasabha Election 2023) ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಗಿಫ್ಟ್ ಪಾಲಿಟಿಕ್ಸ್ (Gift Politics) ಆರಂಭವಾಗಿದೆ. ಟಿಕೆಟ್ ಆಕಾಂಕ್ಷಿಗಳಿಂದ ಮತದಾರರ ಓಲೈಕೆ ಮುಂದುವರಿದಿದೆ. ಅದರಲ್ಲೂ ಮಹಿಳಾ ಮತದಾರರ ಸೆಳೆಯಲು ನಾನಾ ಕಸರತ್ತು ನಡೆದಿವೆ.

    ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾಗಲಿದೆ. ಈಗಿನಿಂದಲೇ ಮತದಾರರ ಓಲೈಕೆ ಮಾಡ್ತಿರೋ ಟಿಕೆಟ್ ಆಕಾಂಕ್ಷಿಗಳು ನಾನಾ ಕಸರತ್ತು ಮಾಡ್ತಿದ್ದಾರೆ. ಮಹಿಳಾ ಮತದಾರರಿಗೆ ಆಮಿಷ ತೋರಿಸಿ, ಭರ್ಜರಿ ಗಿಫ್ಟ್ ಕೊಡೋದಕ್ಕೆ ಮುಂದಾಗಿದ್ದಾರೆ.

    ಹೌದು, ಯಾದಗಿರಿಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ ಎಸ್.ಬಿ ಕಾಮರೆಡ್ಡಿ (Dr. S B Kamareddy) ಮಹಿಳಾ ದಿನಾಚರಣೆ ಹೆಸರಿನಲ್ಲಿ ಸಾವಿರಾರು ಮಹಿಳೆಯರನ್ನು ಸೇರಿಸಿ ಕಾರ್ಯಕ್ರಮ ಆಯೋಜನೆ ಮಾಡಿದ್ರು. ಕಾರ್ಯಕ್ರಮಕ್ಕೆ ಬಂದ ಪ್ರತೀ ಮಹಿಳೆಗೂ ಸೀರೆ, ತವ ನೀಡಿ ಸತ್ಕರಿಸಿದ್ರು. ಇನ್ನೂ ಕಾರ್ಯಕ್ರಮಕ್ಕೆ ಬಂದ ಮಹಿಳೆಯರು ಸೀರೆ, ತವ ಪಡೆಯಲು ನೂಕು ನುಗ್ಗಲು ಉಂಟಾಯ್ತು. ಇದನ್ನೂ ಓದಿ: ಬೆಳಗಾವಿಯಲ್ಲಿ ಬಾಡೂಟ ರಾಜಕೀಯಕ್ಕೆ ಬಿಸಿ- ನೀತಿ ಸಂಹಿತೆ ಉಲ್ಲಂಘನೆ ಅಡಿ ಕೇಸ್

    ಯಾದಗಿರಿಯ ಕಾಂಗ್ರೆಸ್‍ನ ಪ್ರಭಲ ಟಿಕೆಟ್ ಆಕಾಂಕ್ಷಿ ಕಾಮರೆಡ್ಡಿ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ. ಯಾದಗಿರಿ ವಿಧಾನಸಭಾ ಕ್ಷೇತ್ರ (Yadagiri Vidhanasabha Constituency) ವ್ಯಾಪ್ತಿಯ ಸಾವಿರಾರು ಮಹಿಳೆಯರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಕೆಲವರಿಗೆ ಸೀರೆ, ತವ ಸಿಗದೇ ನಿರಾಸೆ ಅನುಭವಿಸಬೇಕಾಯ್ತು. ನಮ್ಮನ್ನ ಅಲ್ಲಿಂದ ಇಲ್ಲಿಗೆ ಕರೆಸಿದ್ರೂ ನಮಗೇನೂ ಕೊಡ್ಲಿಲ್ಲ ಅಂತಾ ಮಹಿಳೆಯರು ಸಪ್ಪೆ ಮೋರೆ ಹಾಕಿ ಮನೆ ಕಡೆ ಹೋಗೋದು ಕಂಡುಬಂತು.

    ಇತ್ತ ಚಿಕ್ಕಬಳ್ಳಾಪುದಲ್ಲೂ ಮತದಾರರಿಗೆ ಆಮಿಷ ನೀಡಲಾಗ್ತಿದೆ. ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ರಾಮಲಿಂಗಪ್ಪ ಯುಗಾದಿ ಹಬ್ಬದ ಹೆಸರಲ್ಲಿ ಮನೆ ಮನೆಗೆ ತೆರಳಿ ಮತದಾರರಿಗೆ ಉಡುಗೊರೆಗಳನ್ನು ನೀಡಿದ್ದಾರೆ. ಸೀರೆ, ಪಂಚೆ, ಬೆಳ್ಳಿ ದೀಪಗಳು ಕಿಟ್ ವಿತರಸಿದ್ದಾರೆ. ಗಿಫ್ಟ್ ಪಾಲಿಟಿಕ್ಸ್ ಜೊತೆ ಜೊತೆಯಲ್ಲೇ ಟೂರ್ ಪಾಲಿಟಿಕ್ಸ್ ಸಹ ಬಲು ಜೋರಾಗಿದೆ. ಬಾಗೇಪಲ್ಲಿ ಮತದಾರರಿಗೆ ಧರ್ಮಸ್ಥಳ, ಕುಕ್ಕೆ, ಯಡಿಯೂರು ದೇವರ ದರ್ಶನಕ್ಕೂ ಬಸ್ ವ್ಯವಸ್ಥೆ ಮಾಡಿದ್ದಾರೆ. 15 ಕ್ಕೂ ಹೆಚ್ಚು ಬಸ್‍ಗಳಲ್ಲಿ ದೇವರ ದರ್ಶನಕ್ಕೆ ಕಳಿಸಲಾಗಿದೆ. ಈ ಮೂಲಕ ಮತದಾರರ ಓಲೈಕೆಗೆ ಕಸರತ್ತು ನಡೆಸಿದ್ದಾರೆ.

    ಈ ಮಧ್ಯೆ ರಾಮನಗರದಲ್ಲಿ ಮತದಾರಿಗೆ ಹಂಚಲು ಸಂಗ್ರಹಿಸಿ ಇಟ್ಟಿದ್ದ 2,900 ಕುಕ್ಕರ್‍ಗಳನ್ನ ತಹಶೀಲ್ದಾರ್ ವಶಕ್ಕೆ ಪಡೆದಿದ್ದಾರೆ. ಸವದತ್ತಿ-ಯಲ್ಲಮ್ಮ ಮತಕ್ಷೇತ್ರದ ಮತದಾರಿಗೆ ಹಂಚಲು ತಯಾರಿಸಿದ ಕುಕ್ಕರ್ ಗಳು ಎಂದು ಹೇಳಲಾಗ್ತಿದ್ದು, ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

    ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

    ಬೆಂಗಳೂರು: ಚುನಾವಣೆ (Elections) ಘೋಷಣೆಗೂ ಮುನ್ನ ಬೆಂಗಳೂರಿನ (Bengaluru) ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜಿಎಸ್ ಆಟದ ಮೈದಾನದಲ್ಲಿ ಶುಕ್ರವಾರ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.

    ಕಾಂಗ್ರೆಸ್, ಮಹಿಳೆಯರಿಗೆ ಸ್ಕೂಟರ್ ಗಿಫ್ಟ್ ಆಮಿಷ (Gift Politics) ಒಡ್ಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಇದನ್ನೂ ಓದಿ: ಇತಿಹಾಸದ ಪುಟ ತೆರೆದು ನೋಡಿದ್ರೆ ಉರಿಗೌಡ, ನಂಜೇಗೌಡನ ಹೆಸರಿದೆ: ಶೋಭಾ ಕರಂದ್ಲಾಜೆ

    ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜಿಎಸ್ ಆಟದ ಮೈದಾನದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಕಲ್ಲು ತೂರಾಟ ಆಗಿದೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ. ಇದನ್ನೂ ಓದಿ: ಉರಿಗೌಡ, ನಂಜೇಗೌಡ ಟಿಪ್ಪುವನ್ನ ಕೊಂದಿರೋದು ಸತ್ಯ – ಸಿ.ಟಿ ರವಿ

    ಬಿಜಿಎಸ್ ಗ್ರೌಂಡ್‌ನಲ್ಲಿ (BGS Ground) ಇದೇ ಭಾನುವಾರ ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಶುಕ್ರವಾರ ವೇದಿಕೆ ಸಿದ್ಧಪಡಿಸಲು ಕಾಂಗ್ರೆಸ್ ಕಾರ್ಯಕರ್ತರು ತೆರಳಿದಾಗ ಈ ಘಟನೆ ನಡೆದಿದೆ. ಅರುಣ್ ಸೋಮಣ್ಣ (Arun Somanna) ತಮ್ಮ ಬೆಂಬಲಿಗರ ಜೊತೆ ಬಂದು ಗಲಾಟೆ ನಡೆಸಿದ್ದಾರೆ ಅಂತಾ ಕಾಂಗ್ರೆಸ್ ಆರೋಪಿಸಿದೆ.

  • ನೂರಾರು ಮತದಾರರಿಗೆ ಬಿಜೆಪಿಯಿಂದ ಬಾಡೂಟ, ಗಿಫ್ಟ್ – ಕಂಠಪೂರ್ತಿ ಕುಡಿದು ಎಲ್ಲೆಂದರಲ್ಲಿ ಮಲಗಿದ ಜನ

    ನೂರಾರು ಮತದಾರರಿಗೆ ಬಿಜೆಪಿಯಿಂದ ಬಾಡೂಟ, ಗಿಫ್ಟ್ – ಕಂಠಪೂರ್ತಿ ಕುಡಿದು ಎಲ್ಲೆಂದರಲ್ಲಿ ಮಲಗಿದ ಜನ

    ಹಾಸನ: ಜಿಲ್ಲೆಯಲ್ಲಿ ಚುನಾವಣೆ ಕಾವು ರಂಗೇರುತ್ತಿದ್ದು, ಟಿಕೆಟ್ ಆಕಾಂಕ್ಷಿಗಳು ಮತದಾರರನ್ನು ಸೆಳೆಯಲು ಹಲವು ರೀತಿಯ ಆಮಿಷ ಒಡ್ಡುತ್ತಿದ್ದಾರೆ.

    ಬಿಜೆಪಿ (BJP) ಜಿಲ್ಲಾಧ್ಯಕ್ಷ ಹಾಗೂ ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಹೆಚ್‌ಕೆ ಸುರೇಶ್ (HK Suresh) ಮತದಾರರಿಗೆ ಭರ್ಜರಿ ಬಾಡೂಟ ಆಯೋಜಿಸಿದ್ದು ಇದರ ಜೊತೆಗೆ ಗಿಫ್ಟ್ (Gift) ನೀಡಿದ್ದಾರೆ. ಬೇಲೂರು ತಾಲೂಕಿನ, ಅಗಸರಹಳ್ಳಿ ಬಾರೆಯಲ್ಲಿ ನೂರಾರು ಜನರಿಗೆ ಗುಂಡು ತುಂಡು ಪಾರ್ಟಿ ಆಯೋಜನೆ ಮಾಡಿದ್ದು, ಕಂಠಪೂರ್ತಿ ಕುಡಿದು, ಬಾಡೂಟ ಮಾಡಿದ ಮತದಾರರು ಎಲ್ಲೆಂದರಲ್ಲಿ ಮಲಗಿದ್ದರು. ಇದನ್ನೂ ಓದಿ: ರಾಯಚೂರು ಜಿಲ್ಲಾ ಚುನಾವಣಾ ಐಕಾನ್ ಆಗಿ ಬಾಹುಬಲಿ ನಿರ್ದೇಶಕ ರಾಜಮೌಳಿ ನೇಮಕ

    ಪ್ರತಿದಿನ ಒಂದೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್‌ಕೆ ಸುರೇಶ್ ಬಾಡೂಟ ಆಯೋಜನೆ ಮಾಡುತ್ತಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಬಾಡೂಟ, ಮದ್ಯ ಜೊತೆಗೆ ಗಿಫ್ಟ್ ಮೂಲಕ ಮತದಾರರಿನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ನಡುವೆ ಗುರುವಾರ ಬೇಲೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ ನಡೆಯುತ್ತಿದೆ. ಇದನ್ನೂ ಓದಿ: ಬಿಎಸ್‍ವೈ ಹೇಳಿಕೆ ಬೆನ್ನಲ್ಲೇ ಆ್ಯಕ್ಟೀವ್ ಆದ ವಿ.ಸೋಮಣ್ಣ ಬೆಂಬಲಿಗರು

  • ಯುಗಾದಿ ಹಬ್ಬಕ್ಕೆ ಸೀರೆ ಹಂಚಲು ಬಂದ ಬಿಜೆಪಿ ಕಾರ್ಯಕರ್ತರು- ಬೆಂಕಿ ಹಚ್ಚಿ ಮತದಾರರಿಂದ ಕ್ಲಾಸ್

    ಯುಗಾದಿ ಹಬ್ಬಕ್ಕೆ ಸೀರೆ ಹಂಚಲು ಬಂದ ಬಿಜೆಪಿ ಕಾರ್ಯಕರ್ತರು- ಬೆಂಕಿ ಹಚ್ಚಿ ಮತದಾರರಿಂದ ಕ್ಲಾಸ್

    ಚಿಕ್ಕಮಗಳೂರು: ಚುನಾವಣೆ ನೆಪದಲ್ಲಿ ಮುಂಬರುವ ಯುಗಾದಿ ಹಬ್ಬಕ್ಕೆ ಸೀರೆ ಹಂಚಿಕೆ ಮಾಡಿದ್ದ ಶಾಸಕ ಸಿಟಿ ರವಿ (CT Ravi) ಬೆಂಬಲಿಗರಿಗೆ ಮತದಾರರು ಮೈಚಳಿ ಬಿಡಿಸಿರುವ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನಲ್ಲಿ ನಡೆದಿದೆ.

    ಮಂಗಳವಾರ ರಾತ್ರಿ ಬಿಜೆಪಿ ಕಾರ್ಯಕರ್ತರು ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ, ಮಲ್ಲೇನಹಳ್ಳಿ ಭಾಗದಲ್ಲಿ ಸೀರೆ ಹಂಚಿದ್ದಾರೆ. ಸೀರೆ ಹಂಚುವ ವೇಳೆ ಮನೆಗೆ ಬಂದ ಮದ್ಯವ್ಯಸನಿಯೊಬ್ಬ ಸೀರೆಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾನೆ. ರಸ್ತೆ ಮಧ್ಯೆ ಸೀರೆಯನ್ನು ಸುಟ್ಟು ಸೀರೆ ಹಂಚಲು ಬಂದಿದ್ದ ಬಿಜೆಪಿ ಕಾರ್ಯಕರ್ತರಿಗೆ ಅಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾನೆ. ಇದನ್ನೂ ಓದಿ: ಪ್ರೀತಂ ಗೌಡರಿಂದ ಭರಪೂರ ಕೊಡುಗೆ – ಬಾಗಿನ ಹೆಸರಲ್ಲಿ ಸೀರೆ, ಬೆಳ್ಳಿಯ ದೇವರ ಫೋಟೋ ಹಂಚಿಕೆ

    ಕೊರೊನಾ ಸಂದರ್ಭದಲ್ಲಿ ಒಂದು ಕೆಜಿ ಅಕ್ಕಿ ಕೊಟ್ಟಿಲ್ಲ. ಈಗ ಎಲೆಕ್ಷನ್ ಬಂತು ಅಂತ ಸೀರೆ ಹಂಚಲು ಬಂದಿದ್ದಾರಾ ಎಂದು ಹಳ್ಳಿಗರು ರೆಬೆಲ್ ಆಗಿದ್ದಾರೆ. ನಮಗೆ ಸೀರೆ ಬೇಡ, ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ನಮಗೆ ಸೂಕ್ತವಾದ ಮೂಲಭೂತ ಸೌಲಭ್ಯ ಬೇಕು ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

    ವ್ಯಕ್ತಿ 2-3 ಸೀರೆಗಳನ್ನು ರಸ್ತೆಗೆ ಎಸೆದು ಬೆಂಕಿ ಹಚ್ಚಿದ್ದಾನೆ. ಇದನ್ನು ಕಂಡ ಬಿಜೆಪಿ ಕಾರ್ಯಕರ್ತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: EXCLUSIVE: ದೇವರ ದುಡ್ಡನ್ನೂ ಬಿಡದ ನಾಯಕರು- ಮುಜರಾಯಿ ಹಣದ ಮೇಲೆ ಬಿಜೆಪಿ ಶಾಸಕನ ಕಣ್ಣು

  • ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹೆಚ್ಚು ವಿತರಣೆ ಮಾಡೋರಿಗೆ ಟಿವಿ ಗಿಫ್ಟ್ – ಡಿಕೆಶಿ ಘೋಷಣೆ

    ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹೆಚ್ಚು ವಿತರಣೆ ಮಾಡೋರಿಗೆ ಟಿವಿ ಗಿಫ್ಟ್ – ಡಿಕೆಶಿ ಘೋಷಣೆ

    ಚಾಮರಾಜನಗರ: ಕಾಂಗ್ರೆಸ್ (Congress) ಪಕ್ಷದ ಗ್ಯಾರಂಟಿ ಕಾರ್ಡ್‌ಗಳನ್ನ ಹೆಚ್ಚು ವಿತರಣೆ ಮಾಡುವವರಿಗೆ ಟಿವಿ ಗಿಫ್ಟ್ ಕೊಡುತ್ತೇನೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಘೋಷಣೆ ಮಾಡಿದ್ದಾರೆ.

    ಚಾಮರಾಜನಗರ (Chamarajanagar) ಜಿಲ್ಲೆ ಹನೂರು ತಾಲೂಕಿನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಬಿಡುಗಡೆಯಾಗುವ ಗ್ಯಾರಂಟಿ ಕಾರ್ಡ್ ಮನೆ-ಮನೆಗೆ ತಲುಪಿಸಬೇಕು. ಪ್ರತಿ ಕ್ಷೇತ್ರದಲ್ಲಿ ಯಾರು ಹೆಚ್ಚು ಕಾರ್ಡ್ ವಿತರಣೆ ಮಾಡುತ್ತಾರೊ ಅವರಲ್ಲಿ 10 ಮಂದಿಗೆ ಟಿವಿ ಉಡುಗೊರೆಯಾಗಿ ಕೊಡುತ್ತೇನೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಟರ್ಕಿ-ಸಿರಿಯಾದಲ್ಲಿ ಮತ್ತೆ ಭೂಕಂಪ; 8 ಸಾವು, 290ಕ್ಕೂ ಹೆಚ್ಚು ಮಂದಿಗೆ ಗಾಯ

    ಇದೇ ವೇಳೆ 40 ಪರ್ಸೆಂಟ್ ಕಮಿಷನ್ ಬಗ್ಗೆ ಮಾತನಾಡಿದ ಡಿಕೆಶಿ, ಕೆ.ಎಸ್ ಈಶ್ವರಪ್ಪ (KS Eshwarappa) ಯಾಕೆ ರಾಜೀನಾಮೆ ಕೊಟ್ಟ? ಅಂತಾ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ನಮ್ಮ ನಾಯಕ, ರಾಜ್ಯಕ್ಕೆ ಅನ್ನದಾತ – ಡಿಕೆಶಿ ಗುಣಗಾನ

    ಈಶ್ವರಪ್ಪ, ಗುತ್ತಿಗೆದಾರ ಸಂತೋಷ್ ಪಾಟೀಲ್‌ನಿಂದ 40 ಪರ್ಸೆಂಟ್ ಕಮಿಷನ್ ಕೇಳಿದ್ದ. ಆತ ಮುಖ್ಯಮಂತ್ರಿಗೆ, ಪ್ರಧಾನ ಮಂತ್ರಿಗೆ ಪತ್ರ ಬರೆದರೂ ರಕ್ಷಣೆ ಸಿಗಲಿಲ್ಲ. ಆ ದುಡ್ಡನ್ನು ಕೊಡೋದಕ್ಕೆ ಆಗದೇ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ. ಇವತ್ತಿಗೂ ಯಾವ ಕಚೇರಿಗೆ ಹೋದರೂ ಕಾಸು ಕಾಸು, ಲಂಚ ಲಂಚ ಅಂತಿದ್ದಾರೆ. ಹಾಗಾಗಿ ನಾವು ಬಿಜೆಪಿಯ ಪಾಪ, ಪುರಾಣವನ್ನ ಪತ್ರದ ಮೂಲಕ ಜನರ ಮುಂದೆ ಇಡ್ತಿದ್ದೇವೆ ಎಂದು ಹೇಳಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k