Tag: Gift

  • Christmas | ಮಕ್ಕಳಿಗೆ ಗಿಫ್ಟ್‌ ನೀಡುವ ಸಾಂತಾ ಕ್ಲಾಸ್‌ ಯಾರು? ಹಿನ್ನೆಲೆ ಏನು?

    Christmas | ಮಕ್ಕಳಿಗೆ ಗಿಫ್ಟ್‌ ನೀಡುವ ಸಾಂತಾ ಕ್ಲಾಸ್‌ ಯಾರು? ಹಿನ್ನೆಲೆ ಏನು?

    ಕ್ರಿಸ್ಮಸ್‌ (Christmas) ಹಬ್ಬದ ಸಂದರ್ಭದಲ್ಲಿ ಮಕ್ಕಳಿಗಾಗಿ ಸಾಕಷ್ಟು ಉಡುಗೊರೆಗಳು, ಸಿಹಿತಿಂಡಿಗಳನ್ನು ನೀಡುವ ಸಾಂತಾ ಕ್ಲಾಸ್‌ (Santa Claus) ಯಾರು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ.

    ಸಾಂತಾ ಕ್ಲಾಸ್‌ ಬಗ್ಗೆ ಮಕ್ಕಳು ಪ್ರಶ್ನೆ ಮಾಡಿದರೆ ಆತ ದೇವದೂತ. ಕ್ರಿಸ್ಮಸ್‌ ಹಬ್ಬದಂದು ಮೇಲಿನಿಂದ ಇಳಿದು ಬಂದು ಉಡುಗೊರೆ (Gift) ನೀಡಿ ಮರಳಿ ಹೋಗುತ್ತಾನೆ ಎಂದು ಪೋಷಕರು ಹೇಳುತ್ತಿರುತ್ತಾರೆ. ಆದರೆ ನಿಜವಾದ ಸಾಂತಾ ಕ್ಲಾಸನ ಕಥೆ ಬೇರೆಯೇ ಇದೆ.

    ಬಹಳ ಹಿಂದೆ ಟರ್ಕಿಯ (Turkey) ಮೈರಾ ನಗರದಲ್ಲಿ ಸೇಂಟ್ ನಿಕೋಲಸ್ (Saint Nicholas) ಎಂಬ ವ್ಯಕ್ತಿ ನೆಲೆಸಿದ್ದ. ಶ್ರೀಮಂತನಾಗಿದ್ದ ಈತ ಜನರಿಗೆ ಸಹಾಯ ಮಾಡುವುದರಲ್ಲೇ ಸಂತೋಷ ಅನುಭವಿಸುತ್ತಿದ್ದ. ಮಕ್ಕಳು ದು:ಖದಲ್ಲಿದ್ದರೆ ವಿಶೇಷವಾದ ಉಡುಪು ತೊಟ್ಟು ಅವರಿಗೆ ಉಡುಗೊರೆಗಳನ್ನು ನೀಡುತ್ತಿದ್ದ. ಎಲ್ಲರೂ ಸಂತೋಷವಾಗಿರಬೇಕು ಎಂದು ಆತ ಬಯಸುತ್ತಿದ್ದ.

    17ನೇ ವಯಸ್ಸಿನಲ್ಲಿ ಪಾದ್ರಿಯಾದ ಸೇಂಟ್ ನಿಕೋಲಸ್ ತನ್ನ ಜೀವನದುದ್ದಕ್ಕೂ ಮಧ್ಯರಾತ್ರಿಯಲ್ಲಿ ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಿದ್ದ. ಒಂದು ಬಾರಿ ಊರಿನಲ್ಲಿ ವರದಕ್ಷಿಣೆ ಕೊಡಲು ಹಣವಿಲ್ಲದೆ ಮೂವರು ಹುಡುಗಿಯರ ಮದುವೆ ನಿಂತು ಹೋಗುವ ಪರಿಸ್ಥಿತಿ ಬಂದಿತ್ತು. ಈ ವಿಚಾರ ತಿಳಿದ ಸಂತ ನಿಕೊಲಾಸ್ ಮೂರು ಥೈಲಿ ಹಣವನ್ನು ಕ್ರಿಸ್ಮಸ್ ಹಬ್ಬದಂದು ಕಿಟಕಿಯ ಮೂಲಕ ಒಳಗೆಸೆದು ಅವರಿಗೆ ಸಂತೋಷ ಉಂಟುಮಾಡಿದ್ದ.  ಇದನ್ನೂ ಓದಿ: ಕ್ರಿಸ್ಮಸ್ ಟ್ರೀ – ಏನಿದರ ಇತಿಹಾಸ, ಮಹತ್ವ?

    ನಿಕೋಲಸ್‌ ಹೆಸರಿನ ರೂಪಾಂತರವೇ ಸಾಂತಾಕ್ಲಾಸ್. ಈ ಕಾರಣಕ್ಕೆ ನಿದ್ರೆ ಮಾಡುತ್ತಿರುವ ಮಕ್ಕಳ ಹಾಸಿಗೆ ಬದಿಯಲ್ಲಿ ಕ್ರಿಸ್ಮಸ್ ಬಹುಮಾನಗಳನ್ನು ಇಟ್ಟುಹೋಗುವುದು ಸಂಪ್ರದಾಯ ಆರಂಭಗೊಂಡಿದೆ.

    ನಿಕೋಲಸ್‌ ಸಾವಿನ ನಂತರ ಚರ್ಚ್ ಅನುಯಾಯಿಗಳು ಈ ಪರಂಪರೆಯನ್ನು ಮುಂದುವರೆಸಿದರು. ಅಂದಿನಿಂದ ಈ ಕ್ರಮ ಒಂದು ಆಚರಣೆಯಾಗಿ ವಿಶ್ವಾದ್ಯಂತ ಪಸರಿಸಿತು. ಕುಟುಂಬದ ಹಿರಿಯರು ನಿಕೋಲಸ್ ತೊಡುತ್ತಿದ್ದಂತಹ ಉಡುಗೆ ಧರಿಸಿ ಮಕ್ಕಳಿಗಾಗಿ ಉಡುಗೊರೆಗಳನ್ನು ನೀಡಲಾರಂಭಿಸಿದರು. ಹೀಗೆ ಬಿಳಿಯ ಗಡ್ಡ, ಕೆಂಪು ಬಣ್ಣದ ಉಡುಗೆಯೊಂದಿಗೆ ಗಿಫ್ಟ್‌ ನೀಡುವ ಹಿರಿಯ ವ್ಯಕ್ತಿಯನ್ನು ಇಂದಿಗೂ ಮಕ್ಕಳು ಸಾಂತಾ ಕ್ಲಾಸ್ ಎಂದು ನಂಬುತ್ತಾರೆ.

     

  • ‘ಕೊರಗಜ್ಜ’ ಚಿತ್ರ ನಿರ್ದೇಶಕನಿಗೆ ಭರ್ಜರಿ ಗಿಫ್ಟ್

    ‘ಕೊರಗಜ್ಜ’ ಚಿತ್ರ ನಿರ್ದೇಶಕನಿಗೆ ಭರ್ಜರಿ ಗಿಫ್ಟ್

    ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫ಼ಿಲ್ಮ್ಸ್ ಬ್ಯಾನರ್ ನಡಿ ಬಹುನಿರೀಕ್ಷಿತ, ಬಹುಕೋಟಿ ಬಜೆಟ್ ನ “ಕೊರಗಜ್ಜ” (Koragajja) ಸಿನಿಮಾದ ಮೊದಲ ಪ್ರತಿ ಇನ್ನೇನು ಕೈ ಸೇರಲಿದೆ ಎನ್ನುವ ಸಂದರ್ಭದಲ್ಲಿ , ಸಿನಿಮಾ ನೋಡಿ ನಿರ್ಮಾಪಕ ತ್ರಿವಿಕ್ರಮ ಸಪಲ್ಯ (Trivikrama Sapalya) , ಸಿನಿಮಾದ ಗುಣಮಟ್ಟ, ತಾಂತ್ರಿಕತೆ ಮತ್ತು ಮಾಸ್ ಅಪೀಲ್ ಗೆ ಫಿದಾ ಆಗಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ನಿರ್ದೇಶಕ ಸುಧೀರ್ ಅತ್ತಾವರ್ (Sudhir Attavar) ಗೆ ಟಾಪ್ ಎಂಡ್ ಕಿಯಾ ಕೇರನ್ಸ್ ಕಾರನ್ನೇ ಗಿಫ಼್ಟ್ ಮಾಡಿದ್ದಾರೆ.  ನಿರ್ದೇಶಕರ ಸ್ರಜನಶೀಲ ತಾಂತ್ರಿಕ ನೈಪುಣ್ಯತೆಯೊಂದಿಗೆ ಸುಮಾರು 15ಕೋಟಿ ಬಜೆಟ್ ನ  ಈ ಸಿನೆಮಾ ಯಾವ ಮಟ್ಟದಲ್ಲಿ ಮೂಡಿ ಬಂದಿರಬಹುದೆನ್ನುವುದಕ್ಕೆ ಇದು ಉದಾಹರಣೆ” .- ಎಂದು ಖ್ಯಾತ ಕಲಾವಿದೆ ಭವ್ಯರವರು ಈ ಸಂದರ್ಭದಲ್ಲಿ ಹೇಳಿದರು. ತಾನು ಇಂತಹ ಸಿನಿಮಾದಲ್ಲಿ ಪಾರ್ಟ್ ಮಾಡಿದ್ದು ಇನ್ನಿಲ್ಲದ ಹೆಮ್ಮೆ ಮತ್ತು ಪುನೀತಭಾವ  ಮೂಡಿಸಿದೆ ಎಂದು ಮಾತು ಸೇರಿಸಿದರು.

    ನಿರ್ಮಾಪಕ ತ್ರಿವಿಕ್ರಮ ತಮ್ಮ ಮಾತು ಮುಂದುವರೆಸುತ್ತಾ;  ” ನನ್ನ ತ್ರಿವಿಕ್ರಮ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ  ಈ ಮಟ್ಟದಲ್ಲಿ ಸಿನಿಮಾ ಒಂದು ಮೂಡಿ ಬರುತ್ತದೆ ಎಂದು ನಾನು ಊಹಿಸಿರಲಿಲ್ಲ. “ಕೊರಗಜ್ಜ” ಸಿನಿಮಾ ಎಲ್ಲಾ ಊಹೆಯನ್ನು ಮೀರಿ ಅದ್ಭುತ ರೀತಿಯಲ್ಲಿ ಮೂಡಿಬಂದಿದೆ.  ಭಾರತೀಯ ಚಿತ್ರರಂಗದಲ್ಲೇ ಇದೊಂದು ವಿಶಿಷ್ಟ ಸಿನೆಮಾ ಆಗಿ ಮೂಡಿ ಬಂದಿದೆ . ನಿರ್ದೇಶಕರು ಸುಮಾರು ಒಂದುವರೆ ವರ್ಷ ಗಳ ಕಾಲ   ರೀಸರ್ಚ್ ಮಾಡಿ ಎಂಟು ನೂರು ವರ್ಷದ ಹಿಂದೆ ಬದುಕಿದ್ದ 23-24 ವರ್ಷ ಪ್ರಾಯದ  “ತನಿಯಾ” ಎನ್ನುವ ಆದಿವಾಸಿ ಹುಡುಗ “,  ಮಹಾನ್ ಶಕ್ತಿ “ಕೊರಗಜ್ಜ” ಆಗಿ  ಬೆಳಗುತ್ತಿರುವ ಬಗೆ ಹೇಗೆ ಎನ್ನುವುದನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ವಿಭಿನ್ನ ಜ಼ೋನರ್ ನಲ್ಲಿ ಈ ಸಿನಿಮಾವನ್ನು ಮಾಡಿದ್ದಾರೆ…..! ಈ ಮಹಾನ್ ಶಕ್ತಿಯ ನ್ನು ಮರುಸ್ರಷ್ಟಿ ಮಾಡಿ ಸಸ್ಪೆನ್ಸ್, ಉತ್ಸುಕತೆ, ಥ್ರಿಲ್ಲರ್, ಊಹಿಸಲಾರದ  ತಿರುವುಗಳ ಕಥಾ ಹಂದರ ಮತ್ತು ಬಿಗಿದಿಟ್ಟುಕೊಳ್ಳುವ ಆಕರ್ಷಣೀಯ ಸ್ಕ್ರೀನ್ ಪ್ಲೆ ಸಿನಿಮಾವನ್ನು ಬೇರೆಯೇ ಮಜಲಿಗೆ ಕೊಂಡೊಯ್ದಿದೆ. ಕಬೀರ್ ಬೇಡಿ ಅಭಿನಯಿಸಿದ್ದ, ನೂರಾರು ಕಲಾವಿದರನ್ನು ಬಳಸಿಕೊಂಡು ಮೈನವಿನೇಳಿಸುವಂತೆ ಚಿತ್ರೀಕರಿಸಿದ್ದ ಯುದ್ಧ ಭೂಮಿಯ ಪರಿಕಲ್ಪನೆಯಂತೂ ಜಗತ್ತಿನ ಯಾವುದೇ “ವಾರ್” ಸಿನೆಮಾ ಸ್ರಷ್ಟಿಸುವ ಸಂಚಲನವನ್ನು “ಕೊರಗಜ್ಜ” ಸಿನಿಮಾ ಸ್ರಷ್ಟಿಸಿದೆ ಎಂದು  ಹೆಮ್ಮೆಯಿಂದ ಹೇಳಿಕೊಂಡರು.ಯುದ್ಧ ಸನ್ನಿವೇಷವನ್ನು ಚಿತ್ರೀಕರಿಸುವ ಸಮಯದಲ್ಲಿ  ಕಬೀರ್ ಬೇಡಿಯವರು  ಸುಧೀರ್ ಅತ್ತಾವರ್ ರನ್ನು”ವಾಟರ್ ವರ್ಲ್ಡ್” ಚಿತ್ರದ   ಹಾಲಿವುಡ್ ನಿರ್ದೇಶಕ ಕೆವಿನ್ ಹಾಲ್  ರೆಯ್ನಾಲ್ಡ್ಸ್ ಜೊತೆ ಯಾಕೆ ಕಂಪೇರ್ ಮಾಡಿದ್ದರು ಎನ್ನುವುದು ಈಗ ತಿಳಿದು ಬರುತ್ತಿದೆ ಎಂದು ತ್ರಿವಿಕ್ರಮ ನೆನಪಿಸಿ ಕೊಂಡರು.

     

    ನಿರ್ದೇಶನ ಮಾತ್ರವಲ್ಲದೆ, ಸಿನೆಮಾಗೆ ಕಲಾ ನಿರ್ದೇಶನ, ಕಾಸ್ಟ್ಯೂಮ್ ಹಾಗೂ ಮೇಕಪ್ ಡಿಸೈನ್ ಕೂಡಾ ಸುಧೀರ್ ಅತ್ತಾವರ್ ಅಧ್ಭುತವಾಗಿ ಮಾಡಿದ್ದಾರೆ ಎಂದು ತಮ್ಮ  ನಿರ್ದೇಶಕನ ಮೇಲೆ  ಹೆಮ್ಮೆ ಯ ಮಾತುಗಳನ್ನು ಹೇಳಿದರು. ಸುಧೀರ್ ರವರು ದೇಶಾದ್ಯಂತ ನೂರಾರು ನಾಟಕ ಪ್ರದರ್ಶನಗಳಲ್ಲಿ ಅಭಿನಯ, ಐವತ್ತರಷ್ಟು ನಾಟಕಗಳ ನಿರ್ದೇಶನ, ಮುಂಬಾಯಿಯ “ಇಪ್ಟಾ” ಮೊದಲಾದ ಸಂಸ್ಥೆಗಳ ನಂಟು.ಹೀಗೆ ರಂಗಭೂಮಿಯಲ್ಲಿ ಸಾಕಷ್ಟು ಪಳಗಿದ ಅವರ ಅನುಭವವೇ ಸಿನಿಮಾವನ್ನು ಈ ಮಟ್ಟಕ್ಕೆ ಕೊಂಡೊಯ್ದಿದೆ- ಎಂದು ಸೇರಿಸಿದರು.

  • ವಿಶೇಷ ಅಭಿಮಾನಿಯ ಉಡುಗೊರೆ ಮೆಚ್ಚಿ, ಸುದೀಪ್ ಕೊಟ್ಟರು ಭರ್ಜರಿ ಗಿಫ್ಟ್

    ವಿಶೇಷ ಅಭಿಮಾನಿಯ ಉಡುಗೊರೆ ಮೆಚ್ಚಿ, ಸುದೀಪ್ ಕೊಟ್ಟರು ಭರ್ಜರಿ ಗಿಫ್ಟ್

    ಮ್ಮ ನೆಚ್ಚಿನ ನಟರನ್ನ ಭೇಟಿ ಆಗುವುದು ಅವರಿಗೆ ತಮ್ಮ ಕೈಲಾದ ಉಡುಗೊರೆ ಕೊಡುವುದು ಇದೇನು ಹೊಸತಲ್ಲ. ಆದರೆ ಇಲ್ಲೊಬ್ಬ ವಿಶೇಷಚೇತನ ಅಭಿಮಾನಿ ಅಂದರೆ ಮಾತು ಬಾರದ ಕಿಚ್ಚನ ಅಭಿಮಾನಿ ಸುದೀಪ್ (Kiccha Sudeep) ಭೇಟಿ ಮಾಡಿದ್ದಾನೆ. ಕಿಚ್ಚ ಸುದೀಪ್ ಕೂಡಾ ಅಭಿಮಾನಿಯನ್ನ (Fans) ಭೇಟಿ ಮಾಡಿದ್ದಾರೆ. ಕಿಚ್ಚನಿಗೆ ಏನು ಹೇಳಬೇಕು ಅದನ್ನ ಬರವಣಿಗೆಯಲ್ಲಿ ಬರೆದು ತಂದಿದ್ದಾನೆ. ಅಭಿಮಾನಿ ಬರೆದುಕೊಂಡು ಬಂದಿದ್ದ ಪತ್ರವನ್ನ ಸುದೀಪ್ ತಾಳ್ಮೆಯಿಂದ ಪೂರ್ತಿಯಾಗಿ ಓದಿದ್ದಾರೆ.

    ನಂತರ ನನ್ನಿಂದ ಏನಾಗ್ಬೇಕು ಅಂತ ಸುದೀಪ್ ಸನ್ನೆಯಿಂದಲೇ ಕೇಳಿದ್ದಾರೆ. ಅದಕ್ಕೆ ಅಭಿಮಾನಿ ಕೂಡಾ ಪ್ರತಿಕ್ರಿಯಿಸಿದ್ದಾನೆ. ಬಳಿಕ ಸುದೀಪ್ ವಿಶೇಷಚೇತನ ಅಭಿಮಾನಿಗೆ ಸಹಾಯವನ್ನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಊಟ ಆಯ್ತಾ ಅಂತಾ ಸುದೀಪ್ ಸನ್ನೆ ಮೂಲಕ ಕೇಳಿದ್ದಾರೆ ಸುದೀಪ್, ಇಲ್ಲ ಎಂದು ಅಭಿಮಾನಿ ಪ್ರತಿಕ್ರಿಯಿಸಿದ್ದಾನೆ. ಸರಿ ಇಲ್ಲೆ ಊಟ ಮಾಡಿ ಹೋಗಿ ಅಂತಾ ಸುದೀಪ್ ಅಭಿಮಾನಿಗೆ ಊಟ ಮಾಡಿಸಿ ಕಳುಹಿಸಿದ್ದಾರೆ.

    ಅಭಿಮಾನಿಗಳು ನೆಚ್ಚಿನ ನಟರನ್ನ ಹುಡುಕಿಕೊಂಡು ಬರ್ತಾರೆ ಅದಕ್ಕೆ ನಟರು ಸಹ ಅವರನ್ನ ಭೇಟಿ ಮಾಡಿ ಪ್ರತಿಕ್ರಿಯೆ ನೀಡುವುದು ವಿಶೇಷ. ಆದರೆ ವಿಶೇಷಗಳಲ್ಲಿ ವಿಶೇಷ ಅಂದರೆ ಈ ಅಭಿಮಾನಿಗೆ ಮಾತು ಬರುವುದಿಲ್ಲ ಆದರೂ ಕಿಚ್ಚ ಸುದೀಪ್ ಭೇಟಿ ಮಾಡಬೇಕು. ತನ್ನ ಮನದಾಳದ ಮಾತನ್ನ ಹಂಚಿಕೊಳ್ಳಬೇಕು ಅಂತ ಬಂದು ಭೇಟಿ ಮಾಡಿದ್ದಾನೆ. ಸುದೀಪ್ ಹಾಗೂ ಅಪ್ಪು ಇರುವ ಫೋಟೋವನ್ನ ಉಡುಗೊರೆಯಾಗಿ (Gift) ನೀಡಿದ್ದಾನೆ.

    ಮನೆ ಬಳಿ ಬಂದ ವಿಶೇಷಚೇತನ ಅಭಿಮಾನಿಯನ್ನ ಭೇಟಿ ಮಾಡಿ ಅವರ ಆಸೆಯನ್ನ ಈಡೇರಿಸಿದ್ದಾರೆ ಕಿಚ್ಚ ಸುದೀಪ್. ಈ ಸಂದರ್ಭಕ್ಕೆ ಕಿಚ್ಚನ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ `ಮ್ಯಾಕ್ಸ್’ ಸಿನಿಮಾದ ಶೂಟಿಂಗ್ ಮುಗಿಸಿರುವ ಸುದೀಪ್ ಮುಂದಿನ ದಿನಗಳಲ್ಲಿ ಸಿನಿಮಾ ಬಗ್ಗೆ ಮಾಹಿತಿ ನೀಡುತ್ತಾರೆ ಎನ್ನುವ ನಿರೀಕ್ಷಯಲ್ಲಿ ಅಭಿಮಾನಿ ಬಳಗ.

  • ‘ಕಾಟೇರ’ ಬರಹಗಾರರಿಗೆ ಕಾರು ಉಡುಗೊರೆ ನೀಡಿದ ರಾಕ್ ಲೈನ್ ವೆಂಕಟೇಶ್

    ‘ಕಾಟೇರ’ ಬರಹಗಾರರಿಗೆ ಕಾರು ಉಡುಗೊರೆ ನೀಡಿದ ರಾಕ್ ಲೈನ್ ವೆಂಕಟೇಶ್

    ಕಾಟೇರ ಸಿನಿಮಾ ಕನ್ನಡದ ನೆಲದ ಸಿನಿಮಾ. 1970ರ ಕಾಲಘಟ್ಟದ ಕಥೆಯನ್ನು ಚೆಂದವಾಗಿ ತೆರೆಮೇಲೆ ತಂದಿದ್ದರು ನಿರ್ದೇಶಕ ತರುಣ್ ಸುಧೀರ್. ಮಾಲಾಶ್ರೀ ಪುತ್ರಿ ಆರಾಧನಾ ರಾಮ್ಗೂ ಕಾಟೇರ ದೊಡ್ಡ ಹಿಟ್ ನೀಡಿತ್ತು. ಕಥೆ ಬರೆದ ಜಡೇಶ್ ಕುಮಾರ್ ಹಂಪಿ, ಡೈಲಾಗ್ ಬರೆದ ಮಾಸ್ತಿಗೂ ಕಾಟೇರ ಸಿನಿಮಾ ಮರೆಯಲಾಗದ ಯಶಸ್ಸು ನೀಡಿತ್ತು. ಚಿತ್ರ ಶತದಿನೋತ್ಸವ ಕಂಡ ಬೆನ್ನಲ್ಲೇ ಬರಹಗಾರರಿಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (Rock Line Venkatesh) ಕಾರುಗಳನ್ನು (Car Gift) ಉಡುಗೊರೆಯಾಗಿ ನೀಡಿದ್ದಾರೆ.

    ಈ ಹಿಂದೆ ‘ಕಾಟೇರ’ ಸಿನಿಮಾ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಿರ್ದೇಶಕ ತರುಣ್ ಸುಧೀರ್ ಮತ್ತು ತಂಡ ಕೇಕ್ ಕತ್ತರಿಸಿ ಸಂಭ್ರಮಿಸಿತ್ತು. ಈ ಸಂಭ್ರಮದಲ್ಲಿ ದರ್ಶನ್ ಕಾಣಿಸಿದೇ ಇದ್ದರೂ, ನೂರು ದಿನ ಖುಷಿಯನ್ನು ಅಭಿಮಾನಿಗಳಿಗಾಗಿ ಚಿತ್ರತಂಡ ಹಂಚಿಕೊಂಡಿತ್ತು. ನೂರು ದಿನಗಳನ್ನು (Hundred Days) ಪೂರೈಸಿದ ಬೆನ್ನಲ್ಲೇ ಕಾಟೇರ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಂಡಿತ್ತು.

    ಕಾಟೇರ (Kaatera) ಸಿನಿಮಾ ಥಿಯೇಟರ್ ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೂ, ಒಟಿಟಿಯಲ್ಲೂ (OTT) ಸ್ಟ್ರೀಮಿಂಗ್ ಆಗುತ್ತಿದೆ. ಒಟಿಟಿಯಲ್ಲಿ ಕಾಟೇರ ಪ್ರದರ್ಶನ ಕಾಣುತ್ತಿರುವುದಕ್ಕೆ ಹುಬ್ಬಳ್ಳಿಯ ಅಭಿಮಾನಿಗಳು ವಿಶೇಷ ರೀತಿಯಲ್ಲಿ ಬರಮಾಡಿಕೊಂಡಿದ್ದರು. ಆಳೆತ್ತರದ ಕಟೌಟ್ ಹಾಕಿ ಕಾಟೇರನನ್ನು ಸ್ವಾಗತಿಸಿದ್ದರು.

    ದರ್ಶನ್ ಸಿನಿಕರಿಯರ್ ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದ್ದ ಕಾಟೇರ ಬಾಕ್ಸಾಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಪ್ಯಾನ್ ಇಂಡಿಯಾ ಚಿತ್ರಗಳ ಅಬ್ಬರದ ನಡುವೆಯೂ  ನಮ್ಮ ನೆಲದ ಕಥೆಗೆ ಪ್ರೇಕ್ಷಕ ಜೈಕಾರ ಹಾಕಿದ್ದರು. ರಾಕ್ಲೈನ್ ವೆಂಕಟೇಶ್ ನಿರ್ಮಿಸಿರುವ ಈ ಸಿನಿಮಾವನ್ನು ಒಟಿಟಿಗೆ Zee5 ವಹಿವಾಟು ಮುಗಿಸಿತ್ತು.

     

    Zee5 ತಾನು ಖರೀದಿಸಿದ ಹೊಸ ಸಿನಿಮಾಗಳನ್ನು ಪ್ರತಿ ಶುಕ್ರವಾರ ಬಿಡುಗಡೆ ಮಾಡುತ್ತೆ. ಅಲ್ಲದೆ ನಿರ್ಮಾಪಕರು ಹಾಗೂ ಓಟಿಟಿ ಸಂಸ್ಥೆಯೊಂದಿಗೆ ಸಿನಿಮಾ ಬಿಡುಗಡೆಯಾದ 30 ರಿಂದ 40 ದಿನಗಳ ಅಂತರದಲ್ಲಿ ಓಟಿಟಿಯಲ್ಲಿ ಪ್ರೀಮಿಯರ್ ಮಾಡುವ ಬಗ್ಗೆ ಸಹಜವಾಗಿ ಒಪ್ಪಂದ ಆಗುತ್ತೆ. ‘ಕಾಟೇರ’ ಬಿಡುಗಡೆಯಾದ 40 ದಿನಗಳ ಬಳಿಕ ಓಟಿಟಿಯಲ್ಲಿ ರಿಲೀಸ್ ಮಾಡುವ ಮಾತುಕತೆ ನಡೆದಿದ್ದು, ಅದರಂತೆಯೇ ಫೆಬ್ರವರಿ 9ರಂದು  ಸಿನಿಮಾ ಪ್ರೀಮಿಯರ್ ಆಗಿದೆ.

  • ಸಹೋದರಿಗೆ ಚಿನ್ನದ ಉಂಗುರ, ಟಿವಿ ಗಿಫ್ಟ್‌ ಕೊಡ್ತೀನಿ ಎಂದ ಪತಿಯನ್ನೇ ಮುಗಿಸಿದ ಪತ್ನಿ!

    ಸಹೋದರಿಗೆ ಚಿನ್ನದ ಉಂಗುರ, ಟಿವಿ ಗಿಫ್ಟ್‌ ಕೊಡ್ತೀನಿ ಎಂದ ಪತಿಯನ್ನೇ ಮುಗಿಸಿದ ಪತ್ನಿ!

    ಲಕ್ನೋ: ಮದುವೆ ಉಡುಗೊರೆಗೆ ಸಂಬಂಧಿಸಿದಂತೆ ಗಂಡ- ಹೆಂಡತಿ ಜಗಳ ಪತಿಯ ಕೊಲೆಯಲ್ಲಿ ಅಂತ್ಯವಾದ ಘಟನೆಯೊಂದು ಉತ್ತರಪ್ರದೇಶದಲ್ಲಿ (Uttarpradesh) ನಡೆದಿದೆ.

    ಮೃತನನನು ಚಂದ್ರಪ್ರಕಾಶ್‌ (35) ಎಂದು ಗುರುತಿಸಲಾಗಿದೆ. ಈತನನ್ನು ಪತ್ನಿ ಚಾಬಿ ತನ್ನ ಸಹೋದರರ ಸಹಾಯದಿಂದ ಕೊಲೆ ಮಾಡಿದ್ದಾಳೆ. ಈ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಸಮೀಪದ ಹಳ್ಳಿಯೊಂದರಲ್ಲಿ ನಡೆದಿದೆ.

    ನಡೆದಿದ್ದೇನು?: ಚಂದ್ರಪ್ರಕಾಶ್‌ ಸಹೋದರಿಗೆ ಮದುವೆ ನಿಗದಿಯಾಗಿತ್ತು. ಅಂತೆಯೇ ಏಪ್ರಿಲ್‌ 26 ರಂದು ಮದುವೆ ಕಾರ್ಯಕ್ರಮ ನಡೆಯುವುದಿತ್ತು. ಹೀಗಾಗಿ ಸಹೋದರಿಗೆ ಏನಾದರೂ ಗಿಫ್ಟ್‌ ಕೊಡಬೇಕು ಎಂದು ಯೋಚಿಸುತ್ತಿರುವಾಗ ಚಂದ್ರಶೇಖರ್‌ಗೆ ಚಿನ್ನದ ಉಂಗುರ ಮತ್ತು ಟಿವಿ ಕೊಡಿಸುವ ಯೋಚನೆ ಬಂತು. ಅಂತೆಯೇ ಈ ವಿಚಾರವನ್ನು ಪತ್ನಿಯ ಮುಂದೆ ಪ್ರಸ್ತಾಪಿಸಿದ್ದಾನೆ. ಇದನ್ನೂ ಓದಿ; 6 ವರ್ಷದ ಮಗಳ ಮುಂದೆಯೇ ಗರ್ಭಿಣಿ ಪತ್ನಿಯನ್ನು ಕೊಂದ ಪಾಪಿ!

    ಈ ವೇಳೆ ಪತಿಯ ನಿರ್ಧಾರಕ್ಕೆ ಪತ್ನಿ ಚಾಬಿ ವಿರೋಧ ವ್ಯಕ್ತಪಡಿಸಿದ್ದಾಳೆ. ಅಲ್ಲದೇ ಇದೇ ವಿಚಾರವಾಗಿ ಪತಿ- ಪತ್ನಿಯ ನಡುವೆ ವಾಗ್ವಾದವೂ ನಡೆದಿದೆ. ಆದರೆ ಚಂದ್ರಶೇಖರ್‌ ಈ ಎರಡು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳುತ್ತಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಪತ್ನಿ ಚಾಬಿ ತನ್ನ ಸಹೋದರರಿಗೆ ಈ ವಿಷಯ ಮುಟ್ಟಿಸುತ್ತಾಳೆ. ಅಲ್ಲದೇ ಪತಿಗೆ ತಕ್ಕ ಬುದ್ಧಿ ಕಲಿಸುವಂತೆ ಹೇಳುತ್ತಾಳೆ.

    ಸಹೋದರಿ ಚಾಬಿ ಮಾತು ಕೇಳಿ ಮನೆಗೆ ಬಂದು ಚಂದ್ರಶೇಖರ್‌ಗೆ ದೊಣ್ಣೆಗಳಿಂದ ಮನಬಂದಂತೆ ಥಳಿಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಥಳಿಸಿದ್ದರಿಂದ ಗಂಭೀರ ಗಾಯಗೊಂಡು ಚಂದ್ರಶೇಕರ್‌ ಕುಸಿದು ಬಿದ್ದಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರು ಚಂದ್ರಶೇಖರ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಸದೇ ಚಂದ್ರಶೇಖರ್‌ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ.

    ಇತ್ತ ಪ್ರಕರಣ ಸಂಬಂಧ ಚಾಬಿ ಮತ್ತು ಆಕೆಯ ಸಹೋದರರು ಸೇರಿದಂತೆ ಐವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

  • ಮೈಸೂರು ಬಿಜೆಪಿ ಘಟಕದಿಂದ ಮೋದಿಗಾಗಿ ರೆಡಿಯಾಗಿದೆ ವಿಶೇಷ ಉಡುಗೊರೆ

    ಮೈಸೂರು ಬಿಜೆಪಿ ಘಟಕದಿಂದ ಮೋದಿಗಾಗಿ ರೆಡಿಯಾಗಿದೆ ವಿಶೇಷ ಉಡುಗೊರೆ

    ಮೈಸೂರು: ಅರಮನೆ ನಗರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಇನ್ನು ಕೆಲವೇ ಹೊತ್ತಿನಲ್ಲಿ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ಬಿಜೆಪಿ ಘಟಕದಿಂದ ವಿಶೇಷ ಉಡುಗೊರೆಯೊಂದು ರೆಡಿಯಾಗಿದೆ.

    ಈ ಸಂಬಂಧ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ರಾಮಾ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯ ಒಳಗೊಂಡ ಮರದಲ್ಲಿ ಕೆತ್ತನೆ ಮಾಡಿರುವ ಸುಮಾರು 2 ಅಡಿ ಎತ್ತರ ಇರುವ ಮರದ ಮೂರ್ತಿ ಉಡುಗೊರೆ ನೀಡಲು ತಯಾರಿ ನಡೆಸಲಾಗುತ್ತಿದೆ. ಈ ಮೂರ್ತಿಯು ವಿಶೇಷ ಕುಸುರಿ ಕೆಲಸ ಒಳಗೊಂಡಿದೆ. ಮೂರ್ತಿ ಜೊತೆಗೆ ಮೈಸೂರು ಪೇಟ, ರೇಷ್ಮೆ ಶಲ್ಯ, ಹಾರ ಹಾಕಿ ಸನ್ಮಾನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

    ರಾಮರಾಜ್ಯ ನಿರ್ಮಾಣದ ಕಲ್ಪನೆಯಲ್ಲಿರುವ ನರೇಂದ್ರ ಮೋದಿ ಅವರಿಗೆ ರಾಮನ ಮೂರ್ತಿ ನೀಡಿ ಗೌರವಿಸುತ್ತಿದ್ದೇವೆ. ಅವರು ಮೈಸೂರು ಭಾಗದ ಪ್ರಚಾರ ನಮಗೆ ಮತ್ತಷ್ಟು ಬೂಸ್ಟ್ ನೀಡಿದೆ. ಈ ಬಾರಿಯೂ ಜನ ಮತ್ತೊಮ್ಮೆ ಮೋದಿ ಎನ್ನುತ್ತಿದ್ದಾರೆ ಎಂದು ಅವರು ಹೇಳಿದರು. ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಪುಷ್ಪವೃಷ್ಟಿಗೆ ಕೋಲಾರದಿಂದ 2 ಟನ್ ಚೆಂಡು ಹೂವು!

    ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬರಲಿರುವ ಮೋದಿಯವರು ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ಓವೆಲ್ ಮೈದಾನಕ್ಕೆ ಆಗಮಿಸಲಿದ್ದಾರೆ. ಬಳಿಕ ಮೋದಿಯವರು ಕಾರಿನಲ್ಲಿ ಮಹಾರಾಜ ಮೈದಾನಕ್ಕೆ ತೆರಳಲಿದ್ದಾರೆ. ಓವೆಲ್ ಮೈದಾನದಲ್ಲಿ ಈಗಾಗಲೇ ಹೆಲಿಪ್ಯಾಡ್ ಸಿದ್ಧಗೊಂಡಿದ್ದು, ಹೆಲಿಪ್ಯಾಡ್ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

  • ರಾಜಕಾರಣಿ ಜೊತೆಗಿನ ನಂಟಿನ ವಿಚಾರ: ಗರಂ ಆದ ನಟಿ ನಿವೇತಾ ಪೇತುರಾಜ್

    ರಾಜಕಾರಣಿ ಜೊತೆಗಿನ ನಂಟಿನ ವಿಚಾರ: ಗರಂ ಆದ ನಟಿ ನಿವೇತಾ ಪೇತುರಾಜ್

    ಮ್ಮ ಸಿನಿಮಾದಲ್ಲಿ ನಟಿಸಿದ್ದ ನಟಿಯೊಬ್ಬರಿಗೆ ರಾಜಕಾರಣಿಯೊಬ್ಬರು ಕೋಟ್ಯಂತರ ಮೌಲ್ಯದ ಫ್ಲ್ಯಾಟ್ ಕೊಡಿಸಿ, ದುಬೈನಲ್ಲಿ ಇಟ್ಟಿದ್ದಾರೆ ಎನ್ನುವ ವಿಚಾರ ತಮಿಳು ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತ್ತು. ನಟಿ ನಿವೇತಾ ಪೇತುರಾಜ್, ಆ ರಾಜಕಾರಣಿಯಿಂದ (Politician) ಸಾಕಷ್ಟು ದುಬಾರಿ ಗಿಫ್ಟ್ ಗಳನ್ನು ಪಡೆದುಕೊಂಡಿದ್ದಾರೆ ಎಂದೂ ಹೇಳಲಾಗಿತ್ತು.

    ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಸಾಕಷ್ಟು ಹರಿದಾಡಿದ್ದರಿಂದ ನಿವೇತಾ ಪೇತುರಾಜ್ (Nivetha Pethuraj) ಗರಂ ಆಗಿದ್ದಾರೆ. ಈ ಸುದ್ದಿಯನ್ನು ಹರಡುತ್ತಿರುವವರಿಗೆ ವಾರ್ನ್ ಕೂಡ ನೀಡಿದ್ದಾರೆ. ನಾನು 16ನೇ ವಯಸ್ಸಿನಲ್ಲೇ ದುಡಿಯಲು ಪ್ರಾರಂಭಿಸಿದವಳು. ಅತ್ಯಂತ ಸುಂಸ್ಕೃತ ಮನೆತನದಿಂದ ಬಂದವಳು. ದುಡ್ಡು ಮಾಡಲು ಅಡ್ಡ ದಾರಿ ಹಿಡಿಯುವವಳು ಅಲ್ಲ. ಈ ಸುದ್ದಿಯನ್ನು ಹಬ್ಬಿಸುವಾಗ ಎಚ್ಚರವಿರಲಿ ಎಂದಿದ್ದಾರೆ ನಿವೇತಾ.

    ತಮ್ಮ ಕುಟುಂಬ ಹತ್ತಾರು ವರ್ಷಗಳಿಂದ ದುಬೈನಲ್ಲಿ (Dubai) ನೆಲೆಸಿದೆ. ನಾನೂ ಕೂಡ ಸಂಪಾದನೆ ಮಾಡಿಕೊಂಡು ಬಂದಿದ್ದೇನೆ. ಅದಕ್ಕಾಗಿ ಈವರೆಗೂ ಯಾವುದೇ ಅಡ್ಡದಾರಿ ತುಳಿದಿಲ್ಲ. ಅದರ ಅವಶ್ಯಕತೆಯೂ ತಮಗಿಲ್ಲ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಹಾಗಾಗಿ ಇಂತಹ ವಿಷಯಗಳು ಬಂದಾಗ ನೋವಾಗತ್ತೆ ಎನ್ನುವುದು ನಿವೇತಾ ಮಾತು.

     

    ತಮಗೆ ಯಾವುದೇ ರಾಜಕಾರಣಿಯ ಜೊತೆ ನಂಟಿಲ್ಲ. ಅವರೊಂದಿಗೆ ಕೆಲಸ ಮಾಡಿದ್ದೇನೆ. ಅದು ಆಯಾ ಸಿನಿಮಾಗೆ ಮಾತ್ರ ಸಿಮೀತ. ಅದರಾಚೆ ಯಾವ ಸ್ನೇಹವೂ ಇಲ್ಲ ಎನ್ನುವುದನ್ನು ಅವರು ಸ್ಪಷ್ಟ ಪಡಿಸಿದ್ದಾರೆ.

  • ಬಿಗ್ ಬಾಸ್ ವಿನ್ನರ್ ಕಾರ್ತಿಕ್ ತಂಗಿ ಮಗುವಿಗೆ ಚಿನ್ನದ ಗಿಫ್ಟ್ ಕೊಟ್ಟ ತನಿಷಾ

    ಬಿಗ್ ಬಾಸ್ ವಿನ್ನರ್ ಕಾರ್ತಿಕ್ ತಂಗಿ ಮಗುವಿಗೆ ಚಿನ್ನದ ಗಿಫ್ಟ್ ಕೊಟ್ಟ ತನಿಷಾ

    ಬಿಗ್ ಬಾಸ್ (Bigg Boss) ಸ್ಪರ್ಧಿಗಳು ಮನೆಯಿಂದ ಆಚೆ ಬಂದ ಮೇಲೂ ತಮ್ಮ ನಡುವಿನ ಬಾಂಧವ್ಯವನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವಾಗ ಕಾರ್ತಿಕ್ ಅವರ ತಂಗಿಯ ಸೀಮಂತ ಮತ್ತು ಹೆರಿಗೆ ಕುರಿತಂತೆ ಮಾತುಕತೆಗಳು ನಡೆಯುತ್ತಲೇ ಇದ್ದವು. ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಕಾರ್ತಿಕ್ (Karthik) ತಂಗಿಯ ಮಗುವಿಗೆ ತನಿಷಾ ಕುಪ್ಪಂಡ (Tanisha Kuppanda) ಸಣ್ಣದೊಂದು ಉಡುಗೊರೆ ನೀಡಿದ್ದರು. ಇದೀಗ ಮತ್ತೆ ಉಡುಗೊರೆ ಕೊಟ್ಟಿದ್ದಾರೆ.

    ಕಾರ್ತಿಕ್ ಅವರ ತಂಗಿಯ ಮನೆಗೆ ಭೇಟಿ ನೀಡಿರುವ ತನಿಷಾ ಕುಪ್ಪಂಡ ಮಗುವಿಗೆ ಚಿನ್ನದ ಉಂಗುರುವನ್ನು ಉಡುಗೊರೆಯಾಗಿ (Gift) ಕೊಟ್ಟಿದ್ದಾರೆ. ಕೆಲ ಸಮಯ ಮಗುವಿನೊಂದಿಗೆ ಕಳೆದಿದ್ದಾರೆ. ಆ ಸ್ಮರಣೆಯನ್ನು ಅವರು ನೆನಪಿಸಿಕೊಂಡಿದ್ದಾರೆ. ಅಲ್ಲದೇ, ಕಾರ್ತಿಕ್ ಅವರ ಸಹಾಯವನ್ನೂ ಗುಣಗಾನ ಮಾಡಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಕಾರ್ತಿಕ್ ಅವರಿಗೆ ತನಿಷಾ ಮತ್ತು ತನಿಷಾಗೆ ಕಾರ್ತಿಕ್ ಸಪೋರ್ಟ್ ಮಾಡಿಕೊಂಡು ಆಟವಾಡಿದ್ದಾರೆ. ಟಾಸ್ಕ್ ವಿಚಾರದಲ್ಲಿ ಜಗಳ ಕೂಡ ಮಾಡಿದ್ದಾರೆ. ಅದು ಏನೇ ಇದ್ದರೂ, ಅದನ್ನು ಆಟಕ್ಕಷ್ಟೇ ಸೀಮಿತ ಮಾಡಿಕೊಂಡು ಸ್ನೇಹವನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗಿದ್ದಾರೆ.

     

    ಕಾರ್ತಿಕ್ ಅವರ ತಂಗಿಯ ಬಗ್ಗೆ ಸಾಕಷ್ಟು ಜನರು ಮಾತನಾಡಿದ್ದರು. ಸ್ವತಃ ಕಾರ್ತಿಕ್ ಕೂಡ ಬಿಗ್ ಬಾಸ್ ಮನೆಯಲ್ಲಿ ಈ ಕುರಿತಂತೆ ಹೇಳಿಕೊಂಡಿದ್ದರು. ಕೊನೆಗೂ ಟ್ರೋಫಿ ಎತ್ತಿಕೊಂಡು ತಂಗಿಯ ಮಗುವನ್ನು ನೋಡಲು ಹೋಗಿದ್ದು ಮಾತ್ರ ಸಂಭ್ರಮಿಸಬೇಕಾದ ಸಂಗತಿ.

  • ಹುಟ್ಟುಹಬ್ಬಕ್ಕೆ ನಟ ದರ್ಶನ್ ಮಾಡಿದ ಮನವಿ ಏನು?

    ಹುಟ್ಟುಹಬ್ಬಕ್ಕೆ ನಟ ದರ್ಶನ್ ಮಾಡಿದ ಮನವಿ ಏನು?

    ದಾಸ ದರ್ಶನ್ (Darshan) ಅವರು ಫೆಬ್ರವರಿ 16ರಂದು  ತಮ್ಮ ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅಭಿಮಾನಿಗಳಿಗೆ ದರ್ಶನ್ ಸಂದೇಶವೊಂದನ್ನು ರವಾನಿಸಿದ್ದು, ಯಾರೂ ಕೇಕ್ ಮತ್ತು ಬ್ಯಾನರ್ ಕಟ್ಟದಂತೆ ಹೇಳಿದ್ದಾರೆ. ಜೊತೆಗೆ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ದವಸ ಧಾನ್ಯಗಳನ್ನು ಉಡುಗೊರೆಯಾಗಿ (Gift) ನೀಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

    ಈ ನಡುವೆ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು, ಡೆವಿಲ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡುವ ಸಾಧ್ಯತೆ ಇದೆಯಂತೆ. ಈ ಹಿಂದೆ ಪ್ರಕಾಶ್ ವೀರ್ (Prakash Veer) ಅನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿ ನಟಿಸುತ್ತಿರುವ ‘ಡೆವಿಲ್’ (Devil) ಚಿತ್ರದ ಸ್ಕ್ರಿಪ್ಟ್ ಪೂಜೆ ಸರಳವಾಗಿ ನೆರವೇರಿದೆ. ಪೂಜೆ ಮುಗಿದಿದ್ದೆ ತಡ ಡೆವಿಲ್ ಹೆಸರಿನಲ್ಲಿ ಪೋಸ್ಟರ್ ಹರಿದಾಡಿದವು. ಆದರೆ, ಈ ಕುರಿತು ನಿರ್ದೇಶಕರು ಪ್ರತಿಕ್ರಿಯೆ ನೀಡಿದ್ದರು.

    ಶುಭದಿನವೆಂದು ಡೆವಿಲ್ ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಿದ್ದೇವೆ. ಆದರೆ, ಚಿತ್ರದ ಫಸ್ಟ್ ಲುಕ್ (First Look) ಆಗಲಿ, ಪೋಸ್ಟರ್ ಆಗಲಿ ಯಾವುದು ನಾವು ಬಿಡುಗಡೆ ಮಾಡಿಲ್ಲ. ಕಾಟೇರ ಚಿತ್ರದ ನಂತರ ನಮ್ಮ ಚಿತ್ರದ ಪ್ರಚಾರ ಕಾರ್ಯ ಆರಂಭಿಸುತ್ತೇವೆ‌. ನಮ್ಮ ವೈಷ್ಣೊ ಸ್ಟುಡಿಯೋಸ್ ಸಂಸ್ಥೆಯ ಮೂಲಕವೇ ಅಧಿಕೃತವಾಗಿ ಡೆವಿಲ್ ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾ ಹೋಗುತ್ತೇವೆ ಎಂದು ನಿರ್ದೇಶಕ ಪ್ರಕಾಶ್ ವೀರ್ ತಿಳಿಸಿದ್ದರು. ಇದೀಗ ಫಸ್ಟ್ ಲುಕ್ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

     

    ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದ್ದು, ವೈಷ್ಣೋ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಈ ನಡುವೆ ಮತ್ತೊಂದು ಸುದ್ದಿ ಗಾಂಧಿ ನಗರದಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ. ದರ್ಶನ್ ಮತ್ತು ಸುದೀಪ್ ಕಾಂಬಿನೇಷನ್ ನ  ದಿಗ್ಗಜರು 2 ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದೆ. ಮತ್ತೆ ಇಬ್ಬರು ಜೊತೆಯಾಗಿ ನಟಿಸುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

  • ಪತಿಯಿಂದ ನಯನತಾರಾಗೆ ಭರ್ಜರಿ ಗಿಫ್ಟ್

    ಪತಿಯಿಂದ ನಯನತಾರಾಗೆ ಭರ್ಜರಿ ಗಿಫ್ಟ್

    ಕ್ಷಿಣದ ಹೆಸರಾಂತ ನಟಿ ನಯನತಾರಾ ತಮ್ಮ ಹುಟ್ಟು ಹಬ್ಬಕ್ಕೆ ಪತಿಯಿಂದ ಭರ್ಜರಿ ಉಡುಗೊರೆ ಪಡೆದಿದ್ದಾರೆ. ಪತಿ, ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan) ಪತ್ನಿಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಪತಿ ನೀಡಿರುವ ಮೂರು ಕೋಟಿ ಮೌಲ್ಯದ ಮರ್ಸಿಡಿಸ್ ಮೇಬ್ಯಾಕ್ ಕಾರಿನ (Car) ಫೋಟೋವನ್ನು ನಯನತಾರಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪತಿಗೆ ಧನ್ಯವಾದ ಹೇಳಿದ್ದಾರೆ.

    ಮತ್ತೊಂದು ಗುಡ್ ನ್ಯೂಸ್

    ಖ್ಯಾತ ನಟ ಕಮಲ್ ಹಾಸನ್ ಅವರ ಹೊಸ ಚಿತ್ರಕ್ಕೆ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara) ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ಇದೇ ಸಿನಿಮಾಗೆ ತ್ರಿಷಾ ನಾಯಕಿ ಎಂದು ಹೇಳಲಾಗಿತ್ತು. ತ್ರಿಷಾ ಬದಲಾಗಿ ಇದೀಗ ನಯನತಾರಾ ಹೆಸರು ಕೇಳಿ ಬಂದಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಈ ಜೋಡಿಯನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಈಗಲೇ ಕಾತರದಿಂದ ಕಾಯುವಂತಾಗಿದೆ.

    ಭಾರತೀಯ ಸಿನಿಮಾ ರಂಗದ ಇಬ್ಬರು ದಂತಕಥೆಗಳು ಬರೋಬ್ಬರಿ 36 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ. ನಿರ್ದೇಶಕ ಮಣಿರತ್ನಂ (Mani Ratnam) ಮತ್ತು ಕಮಲ್ ಹಾಸನ್ (Kamal Haasan) ‘ನಾಯಗನ್’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆನಂತರ ಈ ಜೋಡಿ ಮತ್ತೆ ಒಟ್ಟಾಗಿ ಕೆಲಸ ಮಾಡಲೇ ಇಲ್ಲ. ಇದೀಗ ಮೂರುವರೆ ದಶಕದ ಬಳಿಕ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಕಮಲ್ ಹಾಸನ್ ನಟನೆಯ 234ನೇ ಚಿತ್ರಕ್ಕೆ ಮಣಿರತ್ನಂ ನಿರ್ದೇಶನ ಮಾಡುತ್ತಿದ್ದಾರೆ.

     

    ಈ ಸಿನಿಮಾ ಶುರುವಾಗುವುದಕ್ಕೆ ಇನ್ನೂ ಹಲವು ತಿಂಗಳು ಬೇಕು. ಅದಕ್ಕೂ ಮುನ್ನ ಅನೇಕ ವಿಷಯಗಳು ಹೊರ ಬಂದಿವೆ. ಈ ಸಿನಿಮಾದಲ್ಲಿ ಸ್ಟಾರ್ ನಟರ ದಂಡೇ ಇರಲಿದ್ದು, ತ್ರಿಷಾ (Trisha) ನಾಯಕಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಇದೀಗ ನಯನತಾರಾ ಹೆಸರು ಸೇರ್ಪಡೆ ಆಗಿದೆ. ಅಲ್ಲದೇ, ದುಲ್ಕರ್ ಸಲ್ಮಾನ್ (Dulquer Salmaan) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ.