ಚಿಕ್ಕಮಗಳೂರಿನ ಹಿಟ್ & ರನ್ ಕೇಸ್ ಬಗ್ಗೆ ಕಾಮಿಡಿ ನಟ ಚಂದ್ರಪ್ರಭಾ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಶೂಟಿಂಗ್ ಮುಗಿಸಿಕೊಂಡು ಬರುತ್ತಿದ್ದೆ, ಕುಡಿದು ಬೈಕ್ ಸವಾರನೇ ನನ್ನ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ನಾನೇ ಅವರನ್ನು ಆಸ್ಪತ್ರೆಗೆ ದಾಖಲಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

‘ಗಿಚ್ಚಿ ಗಿಲಿ ಗಿಲಿʼ (Gichchi Gili Gili Winner) ವಿನ್ನರ್ ಚಂದ್ರಪ್ರಭಾ (Chandraprabha) ಅವರು ಹಿಟ್ & ರನ್ ಕೇಸ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಅಪಘಾತ ಮಾಡಿ ಮಾನವೀಯತೆಗೂ ಕಾರು ನಿಲ್ಲಿಸದೇ ನಟ ಪರಾರಿಯಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಈ ಅಪಘಾತ ಪ್ರಕರಣ ನಡೆದಿದ್ದು, ಬೈಕ್‌ನಲ್ಲಿದ್ದ ಯುವಕ ಮಾಲ್ತೇಶ್‌ಗೆ ಗುದ್ದಿ ನಟ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿತ್ತು.

ಚಿಕ್ಕಮಗಳೂರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ. ಚಿಕ್ಕಮಗಳೂರು ಸಮೀಪದ ನಾಗೇನಹಳ್ಳಿ ನಿವಾಸಿ ಮಾಲ್ತೇಶ್ ಎಂಬವರು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮುಗಿಸಿ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಕಾರು, ಬೈಕ್‌ಗೆ ಡಿಕ್ಕಿ ಹೊಡೆದಿದೆ. ಮಾಲ್ತೇಶ್‌ಗೆ ಏನಾಯಿತು ಎಂದು ನೋಡುವ ಸೌಜನ್ಯ ಕೂಡ ತೋರಿಲ್ಲ ಎಂದು ಹೇಳಲಾಗಿತ್ತು. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ:ಸೀರಿಯಲ್ ನಿರ್ದೇಶನದತ್ತ ’ಚಮಕ್’ ಡೈರೆಕ್ಟರ್ ಸಿಂಪಲ್ ಸುನಿ
ಸದ್ಯ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಮಾಲ್ತೇಶ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಗಂಭೀರ ಆಗಿದೆ. ಘಟನೆ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]



ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಸದ್ಯ ಸಿನಿಮಾಗಳಲ್ಲಿ ನಟಿಸಲು ತೆರೆಮರೆಯಲ್ಲಿ ಭರ್ಜರಿ ತಯಾರಿ ಮಾಡಿಕೊಳ್ತಿದ್ದಾರೆ. ಇನ್ನೊಂದ್ ಕಡೆ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ತಿದ್ದಾರೆ. ಈ ವಾರಾಂತ್ಯದಲ್ಲಿ ಪ್ರಸಾರವಾಗುವ ಸಂಚಿಕೆಯ ಪ್ರೋಮೋ ನೆಟ್ಟಿಗರನ್ನ ಸೆಳೆಯುತ್ತಿದೆ. ಶೋನಲ್ಲಿ ಚಂದನ್ ಶೆಟ್ಟಿ ಸ್ಪೆಷಲ್ ಎಂಟ್ರಿ ಕೊಟ್ಟಿದ್ದಾರೆ.
ಅತಿಥಿಯಾಗಿ ಚಂದನ್ ಶೆಟ್ಟಿ `ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ನಿರೂಪಕ ನಿಮ್ಮ ಪಾದ ಪೂಜೆ ಆಗಿಲ್ವಾ ಚಂದನ್ ಅಂತಾ ಕೇಳಿದ್ದಾರೆ. ಆಗ ಚಂದನ್, ಇಲ್ಲಾ ಇನ್ನೂ ಆಗಿಲ್ಲ ಎಂದಿದ್ದಾರೆ. ನಿವೇದಿತಾ ಸಂಜೆ ಮನೆಗೆ ಹೋದ್ಮಲೆ ಭೀಮನ ಅಮಮಾಸೆ, ಅವಮಾಸೆ ಮಾಡ್ತಿನಿ ಅಂತಾ ಪದ ಬಳಕೆ ಮಾಡಿದ್ದಾರೆ. ನಟಿ ಶೃತಿ ಅವರು ಈ ಪೂಜೆ ಆಚರಣೆಯನ್ನ ನಿವಿಗೆ ಕೇಳಿದ್ದಾರೆ. ತಟ್ಟೆ ಇಟ್ಟು, ತಟ್ಟೆಯ ಮೇಲೆ ಕಾಲಿಟ್ಟು ನೀರು ಹಾಕಿ, ಉಜ್ಜಬೇಕು ಎಂದಿದ್ದಾರೆ. ನಿವೇದಿತಾ ಅವರ ಈ ಮಾತು ಪ್ರೇಕ್ಷಕರನ್ನ ನಗೆಯಗಡಲಲ್ಲಿ ತೇಲಿಸಿದೆ. ಇದನ್ನೂ ಓದಿ:
ಒಂದ್‌ಕಡೆ ನಿವೇದಿತಾ ಮಾತು ಒಂದಿಷ್ಟು ಜನ ತಮಾಷೆಯಾಗಿ ತೆಗೆದುಕೊಂಡ್ರೆ, ಮತ್ತೊಂದಿಷ್ಟು ಜನ ನಿವಿಯ ಕನ್ನಡ ಕೇಳಿ ಸೋಷಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.