Tag: Gichchi Giligili

  • ಕಾಮಿಡಿ ಶೋನಲ್ಲಿ ಡೈಲಾಗ್ ಹೇಳಲು ಒದ್ದಾಡಿದ ಡ್ರೋನ್ ಪ್ರತಾಪ್

    ಕಾಮಿಡಿ ಶೋನಲ್ಲಿ ಡೈಲಾಗ್ ಹೇಳಲು ಒದ್ದಾಡಿದ ಡ್ರೋನ್ ಪ್ರತಾಪ್

    ಯಾರು ಯಾವುದನ್ನು ಮಾಡಬೇಕು ಅದನ್ನು ಮಾಡಿದರೇ ಚಂದ ಎನ್ನುವ ಮಾತಿದೆ. ಆಗದೇ ಇರೋದನ್ನು ನೋಡಿಯೇ ಬಿಡೋಣ ಎಂದರೆ ಅಲ್ಲೊಂದು ಎಡವಟ್ಟು ಕಾದಿರುತ್ತದೆ. ಅಂತಹ ಎಡವಟ್ಟಿಗೆ ಸಾಕ್ಷಿಯಾಗಿದ್ಧಾರೆ ಡ್ರೋನ್ ಪ್ರತಾಪ್.

    ಬಿಗ್ ಬಾಸ್‌ನಿಂದ ಬಂದ್ಮೇಲೆ ಡ್ರೋನ್ ಪ್ರತಾಪ್ (Drone Pratap) ಹವಾ ಜೋರಾಗಿದೆ. `ಗಿಚ್ಚಿ ಗಿಲಿಗಿಲಿ 3′ (Gichchi Giligili) ಶೋಗೆ ಎಂಟ್ರಿ ಕೊಟ್ಟು ಕಾಮಿಡಿ ಮಾಡಲು ಪ್ರತಾಪ್ ಶುರು ಮಾಡಿದ್ದಾರೆ. ಇದೀಗ ವೇದಿಕೆಯಲ್ಲಿ ಡೈಲಾಗ್ ಹೇಳಲು ಪ್ರತಾಪ್ ತಿಣುಕಾಡಿದ್ದಾರೆ.

    ಬಿಗ್ ಬಾಸ್ ಮನೆಗೆ ಕಾಲಿಡುವ ಮುನ್ನ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು ಪ್ರತಾಪ್. ದೊಡ್ಮನೆಗೆ ಕಾಲಿಟ್ಟ ಮೇಲೆ ಸ್ಪರ್ಧಿಗಳಿಂದಲೂ ಭಾರೀ ಟಾರ್ಗೆಟ್ ಆಗಿದ್ದರು. ಬಳಿ ಎದುರಾಳಿಗಳಿಗೆ ಠಕ್ಕರ್ ಕೊಟ್ಟು ಬಿಗ್ ಬಾಸ್ ಫಿನಾಲೆಯಲ್ಲಿ ಪ್ರತಾಪ್ ಮೊದಲ ರನ್ನರ್ ಅಪ್ ಆಗಿ ಸ್ಥಾನ ಗಿಟ್ಟಿಸಿಕೊಂಡರು.

    ಡ್ರೋನ್ ಪ್ರತಾಪ್ ಡ್ಯಾನ್ಸ್ನಲ್ಲಿ ಸೈ.. ಆದರೆ ಕಾಮಿಡಿ ಅಂತ ಬಂದಾಗ ಪ್ರತಾಪ್ ಕೊಂಚ ಹಿಂದೆ. ಇದೀಗ ಅಭಿನಯದ ಕಾಗುಣಿತ ಗೊತ್ತಿಲ್ಲದ ಪ್ರತಾಪ್ ಗಿಚ್ಚಿಗಿಲಿ ಗಿಲಿಗೆ ಎಂಟ್ರಿ ಕೊಟ್ಟು ಆ್ಯಕ್ಟಿಂಗ್ ಕಲಿಯುತ್ತಿದ್ದಾರೆ. ಅದಷ್ಟೇ ಅಲ್ಲ.. ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದಾರೆ.

    ಪ್ರತಾಪ್ ಈ ಬಾರಿ ಮಂತ್ರವಾದಿಯ ಗೆಟಪ್‌ನಲ್ಲಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಆಗ ಆತ್ಮವನ್ನು ಬದಲಿಸುವ ಸೀನ್‌ನಲ್ಲಿ ಆತ್ಮ ಆವಾಹಯಾಮಿ ಎಂದು ಡೈಲಾಗ್ ಹೇಳಬೇಕಿತ್ತು. ಆಗ ಪ್ರತಾಪ್.. ಡೈಲಾಗ್ ಹೇಳಲು ಆಗದೇ ತಿಣುಕಾಡಿದ್ದಾರೆ. ಹಾವಾಹಯಾಮಿ ಎಂದು ತಪ್ಪಾಗಿ ಡೈಲಾಗ್ ಹೇಳಿದ್ದಾರೆ. ಪ್ರತಾಪ್ ಮಾತಿಗೆ ಜಡ್ಜ್ಗಳಾದ ನಟಿ ಶ್ರುತಿ, ಕೋಮಲ್, ಸಾಧುಕೋಕಿಲ ಬಿದ್ದು ಬಿದ್ದು ನಕ್ಕಿದ್ದಾರೆ. ಒಟ್ನಲ್ಲಿ ನಟನೆಯ ಗಂಧ ಗಾಳಿ ಗೊತ್ತಿಲ್ಲದ ಪ್ರತಾಪ್‌ನ ಹೊಸ ಜರ್ನಿಗೆ ಅಭಿಮಾನಿಗಳು ಸ್ವೀಟ್ ಆಗಿ ವಿಶ್ ಮಾಡ್ತಿದ್ದಾರೆ.

  • ನ.19ಕ್ಕೆ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಸುಷ್ಮಿತಾ-ಜಗ್ಗಪ್ಪ ಮದುವೆ

    ನ.19ಕ್ಕೆ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಸುಷ್ಮಿತಾ-ಜಗ್ಗಪ್ಪ ಮದುವೆ

    ನಪ್ರಿಯ ಕಾಮಿಡಿ ಶೋಗಳಾದ ಗಿಚ್ಚಿ ಗಿಲಿಗಿಲಿ (Gichchi Giligili), ಮಜಾ ಭಾರತ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಭಾಗಿಯಾಗಿದ್ದ ನಟಿ ಸುಷ್ಮಿತಾ (Sushmita) ಮತ್ತು ಜಗ್ಗಪ್ಪ (Jaggappa) ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜೊತೆಯಾಗಿಯೇ ಹಲವಾರು ಶೋಗಳಲ್ಲಿ ಈ ಜೋಡಿ ಭಾಗಿಯಾಗಿದ್ದು, ವೇದಿಕೆಯ ಮೇಲೆ ಅನೇಕ ಬಾರಿ ಗಂಡ ಹೆಂಡತಿಯಾಗಿಯೇ ಪಾತ್ರ ನಿರ್ವಹಿಸಿದ್ದಾರೆ.

    ಹಲವು ದಿನಗಳಿಂದ ಜಗ್ಗಪ್ಪ ಮತ್ತು ಸುಷ್ಮಿತಾ ಲವ್ ಮಾಡುತ್ತಿದ್ದಾರೆ ಎನ್ನುವ ಗಾಸಿಪ್ ಇತ್ತು. ಆದರೆ, ಈ ಜೋಡಿ ಅದನ್ನು ಅಲ್ಲಗಳೆಯುತ್ತಲೇ ಬಂದರು.

    ಕಾಮಿಡಿ ಶೋಗಳಲ್ಲಿ ಅನೇಕ ಬಾರಿ ಗಂಡ ಹೆಂಡತಿ ಪಾತ್ರ ಮಾಡುತ್ತಾ ಬಂದಿರುವುದರಿಂದ ಜನರು ಆ ರೀತಿಯಲ್ಲಿ ತಿಳಿದುಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು. ಆದರೆ, ಇದೀಗ ಜಗ್ಗಪ್ಪನ ಜೊತೆಯೇ ಸುಷ್ಮಿತಾ ಹಸೆ ಮಣೆ ಏರುತ್ತಿದ್ದಾರೆ.

    ನಿನ್ನೆ ಮೆಹಂದಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಆ ಫೋಟೋಗಳನ್ನು ಸುಷ್ಮಿತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಒಂದೇ ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ. ಮೆಹಂದಿ ಕಾರ್ಯಕ್ರಮಕ್ಕೆ ಅಚ್ಚುಕಟ್ಟಾಗಿ ನಡೆದಿದ್ದಕ್ಕೆ ಸುಷ್ಮಿತಾ ಧನ್ಯವಾದಗಳನ್ನು ತಿಳಿಸಿದ್ದಾರೆ.

    ಇಂದು ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದ್ದು, ನಾಳೆ ಮಾಂಗಲ್ಯ ಧಾರಣೆವಿದೆ. ಈ ಜೋಡಿಯ ವಿವಾಹ (marriage) ಮುಹೋತ್ಸವಕ್ಕೆ ಅನೇಕ ಕಿರುತೆರೆ ಮತ್ತು ಹಿರಿತೆರೆ ಕಲಾವಿದರು ಭಾಗಿಯಾಗಲಿದ್ದಾರೆ.

    ಕಿರುತೆರೆ ಲೋಕದ ಅತ್ಯಂತ ಜನಪ್ರಿಯ ಜೋಡಿಯಾಗಿದ್ದ ಸುಷ್ಮಿತಾ ಮತ್ತು ಜಗ್ಗಪ್ಪ ಜೋಡಿಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಈ ಜೋಡಿಯ ಕಾಮಿಡಿ ವಿಡಿಯೋಗಳು ವೈರಲ್ ಕೂಡ ಆಗಿವೆ.


    ಇಂತಹ ಜನಪ್ರಿಯ ಜೋಡಿಯು ಕೇವಲ ವೇದಿಕೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಜೊತೆಯಾಗಿವೆ.