Tag: Ghosts

  • ಆತ್ಮಗಳ ಜೊತೆ ಮಾತಾಡುತ್ತೇನೆಂದು ಮನೆ ಬಿಟ್ಟು ತೆರಳಿದ್ದ ಬಾಲಕಿ ಪತ್ತೆ

    ಆತ್ಮಗಳ ಜೊತೆ ಮಾತಾಡುತ್ತೇನೆಂದು ಮನೆ ಬಿಟ್ಟು ತೆರಳಿದ್ದ ಬಾಲಕಿ ಪತ್ತೆ

    ಬೆಂಗಳೂರು: ಆತ್ಮಗಳ ಜೊತೆ ಮಾತಾಡುತ್ತೇನೆಂದು ಮನೆ ಬಿಟ್ಟು ತೆರಳಿದ್ದ ಬಾಲಕಿ ಗುಜರಾತ್‍ನ ಸೂರತ್‍ನಲ್ಲಿ ಪತ್ತೆಯಾಗಿದ್ದಾಳೆ.

    ಕಳೆದ ಅಕ್ಟೋಬರ್ 31 ರಂದು ಮನೆಬಿಟ್ಟು ತೆರಳಿದ್ದು, 78 ದಿನಗಳ ಬಳಿಕ ಸೂರತ್‍ನಲ್ಲಿ ಜನವರಿ 15 ರಂದು ಪತ್ತೆಯಾಗಿದ್ದಾಳೆ. ಬಾಲಕಿಯು ಆತ್ಮಗಳ ಜೊತೆ ಮಾತನಾಡುವದನ್ನು ಅಭ್ಯಾಸ ಮಾಡುತ್ತೇನೆಂದು ಬೆಂಗಳೂರಿನಿಂದ ಸೂರತ್ ತಲುಪಿದ್ದು, ಸೂರತ್‍ನ ಅನಾಥಾಶ್ರಮವೊಂದರಲ್ಲಿ ಪತ್ತೆಯಾಗಿದ್ದಾಳೆ. ಇದನ್ನೂ ಓದಿ: ಕೊಹ್ಲಿ ನಾಯಕತ್ವ ತ್ಯಜಿಸಲು ಇದೇ ಕಾರಣ!

    ಸದ್ಯ ಸುಬ್ರಹ್ಮಣ್ಯನಗರ ಪೊಲೀಸರು ಅಪ್ರಾಪ್ತ ಬಾಲಕಿಯನ್ನ ಪೋಷಕರಿಗೆ ಒಪ್ಪಿಸಿದ್ದು, ಮನೆಯಿಂದ ತೆರಳುವ ವೇಳೆ 2 ಜೊತೆ ಬಟ್ಟೆ 2500 ರೂ ನಗದು ಕೊಂಡೊಯ್ದಿದ್ದಳು. ಇದನ್ನೂ ಓದಿ:  ಟೆಸ್ಟ್ ನಾಯಕತ್ವಕ್ಕೆ ಗುಡ್‌ಬೈ – ಕೊಹ್ಲಿ ಬ್ರ್ಯಾಂಡ್ ಮೌಲ್ಯ ಇಳಿಕೆ?

  • ಕಂಬಿ ಮೇಲೆ ನೇತಾಡ್ತಾಳೆ, ಗಿರಗಿರ ಬುಗುರಿಯಂತೆ ತಿರುಗ್ತಾಳೆ

    ಕಂಬಿ ಮೇಲೆ ನೇತಾಡ್ತಾಳೆ, ಗಿರಗಿರ ಬುಗುರಿಯಂತೆ ತಿರುಗ್ತಾಳೆ

    – ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ವಿಚಿತ್ರ ಆಚರಣೆ
    – ಕಂಬಿಗೆ ತಲೆಕೆಳಗಾಗಿ ನೇತುಬಿದ್ದ ಮಹಿಳೆ

    ಕಲಬುರಗಿ: ಜಿಲ್ಲೆಯ ಶ್ರೀ ಕ್ಷೇತ್ರ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಅಂದರೆ ಯಾರಿಗೆ ತಾನೆ ಗೊತ್ತಿಲ್ಲ. ಆದರೆ ಇದೀಗ ಈ ದೇವಸ್ಥಾನದಲ್ಲಿ ದೆವ್ವ-ಪ್ರೇತಾತ್ಮಗಳ ಸಂಖ್ಯೆ ಹೆಚ್ಚಾಗಿದೆಯಂತೆ, ಅಚ್ಚರಿಯಾದರೂ ಇದು ನಿಜವಾಗಿದೆ.

    ಅಫಜಲಪುರ ತಾಲೂಕಿನ ಶ್ರೀ ಕ್ಷೇತ್ರ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ಬೆಚ್ಚಿಬೀಳಿಸುವ ದೃಶ್ಯಗಳನ್ನು ನಿತ್ಯ ಇಲ್ಲಿ ಕಾಣಬಹುದು. ಮೈಮೇಲೆ ಪರಿವೇ ಇಲ್ಲದಂತೆ ಚಿತ್ರ ವಿಚಿತ್ರವಾಗಿ ವರ್ತಿಸುವ ಇವರ ಮೇಲೆ ದೆವ್ವ, ಪಿಶಾಚಿ, ಪ್ರಾತಾತ್ಮಗಳು ಆವಾಹಿಸಿಕೊಂಡಿವೆಯಂತೆ. ಇದರಿಂದ ಮುಕ್ತರಾಗಲು ಇವರೆಲ್ಲ ದತ್ತನ ಸನ್ನಿಧಿಗೆ ಬರುತ್ತಾರೆ.

    ಪ್ರತಿನಿತ್ಯ ಮಧ್ಯಾಹ್ನ 1.30ಕ್ಕೆ ದತ್ತನಿಗೆ ಮಹಾ ಮಂಗಳಾರತಿ ನೆರವೇರಿಸುವ ವೇಳೆ ಮಾನಸಿಕ ಅಸ್ವಸ್ಥರು, ಮೈಮೇಲೆ ದೆವ್ವ ಬಂದವರ ರೀತಿ ಆಡುತ್ತಾರೆ. ಕೂದಲು ಕೆದರಿಕೊಂಡು ತಮ್ಮ ದೇಹವನ್ನು ದಂಡಿಸಿಕೊಳ್ಳುತ್ತಾರೆ, ಕೇಕೆ ಹಾಕುತ್ತಾರೆ, ಅಳುತ್ತಾರೆ, ದೇವರನ್ನೇ ಬಾಯಿಗೆ ಬಂದಂತೆ ಬೈಯ್ಯುತ್ತಾರೆ. ಕೆಲವರು ಕಂಬಿ ಮೇಲೆ ನಿದ್ದೆ ಹೋಗುತ್ತಾರೆ. ಹೀಗೆ ಬರೋರಲ್ಲಿ ಕರ್ನಾಟಕದವರು ಇದ್ದಾರೆ. ಆಂಧ್ರ, ತೆಲಂಗಾಣದವರು ಇದ್ದಾರೆ. ಆದರೆ ಪ್ರೇತಾತ್ಮಗಳ ಕಾಟಕ್ಕೆ ತುತ್ತಾಗುವವರಲ್ಲಿ ಮಹಾರಾಷ್ಟ್ರ ಮಂದಿಯೇ ಅಧಿಕ. ಇಲ್ಲಿ ಬಂದು ಕೆಲ ದಿನಗಳ ದತ್ತನ ಆರಾಧನೆ ಮಾಡಿದರೆ ದುಷ್ಟ ಶಕ್ತಿಗಳಿಂದ ಜನ ಪಾರಾಗುತ್ತಾರೆ ಎಂದು ಅರ್ಚಕ ಪ್ರಸನ್ನ ಪೂಜಾರಿ ಹೇಳಿದ್ದಾರೆ.

    ಇವರೆಲ್ಲರೂ ಚಿತ್ರ ವಿಚಿತ್ರವಾಗಿ ವರ್ತಿಸಲು ಒಂದು ಕಾರಣ ಇದೆ. ಜೊತೆಗೆ ಪುರಾಣದ ಹಿನ್ನೆಲೆ ಇದೆ. ಇಲ್ಲಿನ ಅಶ್ವಥ್ಥ ವೃಕ್ಷದಲ್ಲಿ ಸಾಕ್ಷತ್ ಬ್ರಹ್ಮ ರಾಕ್ಷಸ ನೆಲೆಸಿದ್ದನಂತೆ. ಇಲ್ಲಿನ ಜನ ಜಾನುವಾರುಗಳ ನೆಮ್ಮದಿ ಕೆಡಿಸಿದ್ದರು. ಆಗ ದತ್ತಾತ್ರೇಯ ಸ್ವಾಮಿ, ಎರಡನೇ ಅವತಾರ ಎತ್ತಿ ಶ್ರೀಮಾನ್ ನರಸಿಂಹ ಸರಸ್ವತಿ ಮಹಾರಾಜರು ರೂಪದಲ್ಲಿ ರಾಕ್ಷಸನಿಗೆ ಮುಕ್ತಿ ನೀಡಿದ್ದರು ಎನ್ನಲಾಗುತ್ತದೆ. ಅಂದಿನಿಂದ ಇದು ಪ್ರೇತಾತ್ಮಗಳನ್ನು ದೂರ ಮಾಡುವ ಭಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಭಕ್ತೆ ಮಾಲತಿ ರೇಷ್ಮಿ ಹೇಳಿದರು.

    ಅಂದಹಾಗೆ ಬ್ರಹ್ಮ ವಿಷ್ಣು ಮಹೇಶ್ವರ ಈ ಮೂರು ಅವತಾರವನ್ನೆತ್ತಿರುವ ಗುರುದತ್ತನ ಸನ್ನಿಧಿಯಲ್ಲಿ ಈ ಪವಾಡಗಳು ನಿತ್ಯ ನಡೆಯುತ್ತವೆ. ಯಾಕೆಂದರೆ ಈ ದೇವಾಲಯದ ಆವರಣದಲ್ಲಿರುವ ಅಶ್ವಥ ವೃಕ್ಷದಲ್ಲಿ ಸಾಕ್ಷತ್ ಬ್ರಹ್ಮ ರಾಕ್ಷಸ ವಾಸಿಸುತ್ತಿದ್ದು, ಇಲ್ಲಿರುವ ಜನ-ಜಾನುವಾರುಗಳಿಗೆ ತೊಂದರೆ ನೀಡುತ್ತಿದ್ದರು. ಆದರೆ ದತ್ತಾತ್ರೇಯ ಸ್ವಾಮಿಗಳ ಎರಡನೇ ಅವತಾರದಲ್ಲಿ ಸಾಕ್ಷತ್ ಶ್ರೀಮನ ನರಸಿಂಹ ಸರಸ್ವತಿ ಮಹಾರಾಜರು ಆ ರಾಕ್ಷಸನಿಗೇ ಮುಕ್ತಿ ನೀಡಿದ್ದಾರೆ. ಹೀಗಾಗಿ ಪ್ರತಿ ದಿನ ನಡೆಯುವ ಮಹಾಮಂಗಳಾರತಿ ವೇಳೆ ಭೂತ-ಪ್ರೇತಗಳು ಇದೆ ಎಂದು ನಂಬಿದ ಜನ, ಇಲ್ಲಿ ಬಂದು ಶ್ರೀ ಗುರು ದತ್ತನ ಪೂಜೆ ಸಲ್ಲಿಸಿದರೆ, ಅವರಲ್ಲಿರುವ ಎಲ್ಲಾ ದುಷ್ಟ ಶಕ್ತಿಗಳು ಹೋಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

    ಭೀಮಾ ಅಮರ್ಜಾ ನದಿ ಸಂಗಮವಿರುವ ಈ ಪುಣ್ಯಕ್ಷೇತ್ರಕ್ಕೆ ನಿತ್ಯವು ಸಾವಿರಾರು ಜನ ಬಂದು ಹೋಗುತ್ತಾರೆ. ಕೆಲವರು ಬರಿ ದರ್ಶನ ಭಾಗ್ಯಕ್ಕೆಂದು ಬಂದು ಶ್ರೀಗುರುದತ್ತನ ನಿರ್ಗುಣ ಪಾದುಕೆಗೆ ಪೂಜೆ ಸಲ್ಲಿಸಿದರೆ, ಇನ್ನೂ ಕೆಲವರು ಇನ್ನೂ ಕೆಲವರು ಅವರಿಗೆ ಕಾಡುತ್ತಿರುವ ದುಷ್ಟ ಶಕ್ತಿಗಳು ಸಂಕಟ ದೂರು ಮಾಡಿಕೊಳ್ಳಲು ಬರುತ್ತಾರೆ.

  • ಸೋತ ಕಾಂಗ್ರೆಸ್, ಜೆಡಿಎಸ್ ಪ್ರೇತಾತ್ಮಗಳಂತೆ- ಆರ್ ಅಶೋಕ್ ವ್ಯಂಗ್ಯ

    ಸೋತ ಕಾಂಗ್ರೆಸ್, ಜೆಡಿಎಸ್ ಪ್ರೇತಾತ್ಮಗಳಂತೆ- ಆರ್ ಅಶೋಕ್ ವ್ಯಂಗ್ಯ

    ತುಮಕೂರು: ಬಿಜೆಪಿಗೆ ಸ್ಪಷ್ಟ ಬಹುಮತವನ್ನು ರಾಜ್ಯದ ಜನರು ಕೊಟ್ಟಿದ್ದಾರೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪ್ರೇತಾತ್ಮಗಳಂತೆ ಓಡಾಡುತ್ತಿವೆ ಎಂದು ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಕುಪ್ಪೂರು ಗದ್ದುಗೆ ಸಂಸ್ಥಾನ ಮಠದಲ್ಲಿ ನಡೆದ ಭಾವೈಕ್ಯ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್, ರಾಜ್ಯದಲ್ಲಿ ತಮ್ಮ ನೆಲೆ ಕಳೆದುಕೊಂಡು ಪ್ರೇತಾತ್ಮದ ತರ ಓಡಾಡುತ್ತಿವೆ ಎಂದು ಲೇವಡಿ ಮಾಡಿದರು.

    ಸಚಿವ ಸ್ಥಾನ ಯಾರಿಗೆ ಕೊಡಬೇಕೆಂಬ ಎಂಬ ನಿರ್ಧಾರವನ್ನು ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ. ಡಿಸೆಂಬರ್ 20ರ ನಂತರ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ನಿರ್ಧಾರವಾಗಲಿದ್ದು, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಸಹಾಯ ಮಾಡಿದವರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಲಾಗುವುದು ಎಂದು ಸಚಿವ ಆರ್. ಅಶೋಕ್ ಆಶ್ವಾಸನೆ ನೀಡಿದರು.