Tag: ghost film

  • ಜುಲೈ 12ಕ್ಕೆ ಸೆಂಚುರಿ ಸ್ಟಾರ್ ಬರ್ತ್‌ಡೇಗೆ ಸಿದ್ಧತೆ ಹೇಗಿದೆ ಗೊತ್ತಾ?

    ಜುಲೈ 12ಕ್ಕೆ ಸೆಂಚುರಿ ಸ್ಟಾರ್ ಬರ್ತ್‌ಡೇಗೆ ಸಿದ್ಧತೆ ಹೇಗಿದೆ ಗೊತ್ತಾ?

    ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar)  ಅವರ ನಿಧನದ ಕಾರಣದಿಂದ ಶಿವಣ್ಣ ಕಳೆದ ವರ್ಷ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಈ ವರ್ಷ ಜುಲೈ 12ರಂದು ಅಭಿಮಾನಿಗಳ ಜೊತೆ ಅದ್ದೂರಿಯಾಗಿ ಬರ್ತ್‌ಡೇಯನ್ನ ಆಚರಿಸಿಕೊಳ್ತಿದ್ದಾರೆ. ಫ್ಯಾನ್ಸ್‌ಗಾಗಿ ತಮ್ಮ ಸಮಯವನ್ನ ಮೀಸಲಿಡುತ್ತಿದ್ದಾರೆ. ನಾಳೆ ಏನೆಲ್ಲಾ ಸರ್ಪ್ರೈಸ್ ಇರಲಿದೆ ಇಲ್ಲಿದೆ ಡಿಟೈಲ್ಸ್.

    ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಅವರು ಜೂನ್ 12ರಂದು 61ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ‘ಆನಂದ’ ಸಿನಿಮಾದಿಂದ ವೃತ್ತಿ ಬದುಕು ಆರಂಭಿಸಿದ ನಟ, 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 60ರ ವಯಸ್ಸಿನಲ್ಲೂ ಯಂಗ್ & ಎನರ್ಜಿಟಿಕ್ ಆಗಿ ಶಿವಣ್ಣ ಕಾಣಿಸಿಕೊಳ್ಳುತ್ತಾರೆ.

    ಇದೀಗ ಶಿವಣ್ಣ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಶಿವರಾಜ್ ಕುಮಾರ್ ಬರ್ತಡೇಗೆ ಫ್ಯಾನ್ಸ್ ಕಡೆಯಿಂದ ಸಿದ್ಧತೆ ನಡೆಯುತ್ತಿದೆ. ಇಂದು ರಾತ್ರಿ 11:30ಕ್ಕೆ ನಾಗವಾರದ ಮನೆಯಲ್ಲಿ ಆಪ್ತರ ಜೊತೆ ಆಚರಣೆ ಶಿವಣ್ಣ, ಬರ್ತ್‌ಡೇ ಸೆಲೆಬ್ರೆಟ್ ಮಾಡಲಿದ್ದಾರೆ. ಬೆಳಗ್ಗೆ 8ರಿಂದ 10ಗಂಟೆಯವರೆಗೆ ಅಭಿಮಾನಿಗಳಿಗೆ ಸಮಯ ಮೀಸಲಿಟ್ಟಿದ್ದಾರೆ. ಬಳಿಕ 10:30ಕ್ಕೆ ಡಾ.ರಾಜ್‌ಕುಮಾರ್ ಪುಣ್ಯಭೂಮಿಯಲ್ಲಿ ಪೂಜೆ ಇರಲಿದೆ. ಇದಾದ ನಂತರ ಶಿವಣ್ಣ ನಟನೆಯ ಘೋಸ್ಟ್ ಸಿನಿಮಾದ ಟೀಸರ್ 11:45ಕ್ಕೆ ಸಂತೋಷ್ ಚಿತ್ರಮಂದಿರದಲ್ಲಿ ಲಾಂಚ್ ಆಗಲಿದೆ. ಮತ್ತೆ ಸಂಜೆ ನಾಗವಾರದ ಮನೆಯಲ್ಲಿ ಅಭಿಮಾನಿಗಳ ಜೊತೆ ಸಂಭ್ರಮಾಚರಣೆ ಮಾಡಲಿದ್ದಾರೆ. ಅಭಿಮಾನಿಗಳಿಗಾಗಿ ಚಿಕನ್ ಬಿರಿಯಾನಿಯನ್ನ ಶಿವಣ್ಣನ ಆಪ್ತಬಳಗ ಮಡಿಸುತ್ತಿದ್ದಾರೆ.

    ಶಿವರಾಜ್‌ಕುಮಾರ್ ಅವರು ಕನ್ನಡ ಸಿನಿಮಾಗಳ ಜೊತೆ ಪರಭಾಷೆಯ ಸಿನಿಮಾಗಳಲ್ಲೂ ಮಿಂಚ್ತಿದ್ದಾರೆ. ಕೈತುಂಬಾ ಸಿನಿಮಾಗಳಿವೆ. ಸದ್ಯ ‘ಘೋಸ್ಟ್’ ಸಿನಿಮಾದ ಲುಕ್‌ನಿಂದ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಬಿಗ್ ಡ್ಯಾಡಿ ಎಂಬ ಪೋಸ್ಟರ್ ಲುಕ್‌ನಿಂದ ಶಿವಣ್ಣ ಕಿಕ್ ಕೊಟ್ಟಿದ್ದಾರೆ. ಅದರ ಜೊತೆಗೆ ಈ ಬಿಗ್ ಡ್ಯಾಡಿ ಅಂದರೆ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕೌತುಕ ಮೂಡುವ ಹಾಗೇ ಮಾಡಿದ್ದಾರೆ.

    ಶಿವಣ್ಣ ಬರ್ತ್‌ಡೇ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಲು ‘ಘೋಸ್ಟ್’ (Ghost Film) ಸಿನಿಮಾ ತಂಡದಿಂದ ಬಿಗ್ ಡ್ಯಾಡಿ ವೀಡಿಯೋ ರಿಲೀಸ್ ಆಗಲಿದೆ. ಅಂದು ಬೆಳಗ್ಗೆ 11:45ಕ್ಕೆ ಬಿಗ್ ಡ್ಯಾಡಿ ಪರಿಚಯ ಆಗಲಿದೆ. ಈ ಮೂಲಕ ಬಿಗ್ ಡ್ಯಾಡಿ ಅಂದರೆ ಏನು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಇದನ್ನೂ ಓದಿ:ಸ್ಟೈಲೀಶ್‌ ಆಗಿ ಕಾಣಿಸಿಕೊಂಡ ‘ಅಮೃತಧಾರೆ’ ಸಾರಾ- ಕಾವ್ಯಾ ಗೌಡ

    ಈ ಪೋಸ್ಟರ್‌ನಲ್ಲಿ ಶಿವಣ್ಣ ಅವರು ರೈಫಲ್ ಹಿಡಿದು ನಿಂತಿದ್ದಾರೆ. ಈ ಸಿನಿಮಾ ಸಖತ್ ಮಾಸ್ ಆಗಿರಲಿದೆ ಎಂಬುದಕ್ಕೆ ಸುಳಿವು ಸಿಕ್ಕಿದೆ. ನಿರ್ದೇಶಕ ಎಂ.ಜಿ. ಶ್ರೀನಿವಾಸ್ ಅವರ ಬರ್ತ್‌ಡೇಯಂದು ಪೋಸ್ಟರ್ ರಿವೀಲ್ ಆಗಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಕನ್ನಡ ಚಿತ್ರರಂಗದಲ್ಲಿ ಶ್ರೀನಿ ಅವರು ನಟನಾಗಿ, ನಿರ್ದೇಶಕನಾಗಿ ಹೆಸರು ಮಾಡಿದ್ದಾರೆ. ‘ಘೋಸ್ಟ್’ ಚಿತ್ರದಲ್ಲಿ ಅವರು ಶಿವಣ್ಣ ಜೊತೆ ಕೈ ಜೋಡಿಸಿರುವುದರಿಂದ ಫ್ಯಾನ್ಸ್‌ಗೆ ನಿರೀಕ್ಷೆ ಮೂಡಿಸಿದೆ. ಘೋಸ್ಟ್ ಸಿನಿಮಾದ ಜೊತೆ ಶಿವಣ್ಣ ನಟಿಸಿರುವ ಪರಭಾಷಾ ಸಿನಿಮಾಗಳ ಲುಕ್ ಕೂಡ ರಿವೀಲ್ ಆಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ವಿಜಯ್‌ 69’ ಶೂಟಿಂಗ್‌ ವೇಳೆ ಬಾಲಿವುಡ್‌ ನಟ ಅನುಪಮ್‌ ಖೇರ್‌ಗೆ ಗಾಯ

    ‘ವಿಜಯ್‌ 69’ ಶೂಟಿಂಗ್‌ ವೇಳೆ ಬಾಲಿವುಡ್‌ ನಟ ಅನುಪಮ್‌ ಖೇರ್‌ಗೆ ಗಾಯ

    ಬಾಲಿವುಡ್ (Bollywood)  ನಟ ಅನುಪಮ್ ಖೇರ್ (Anupam Kher) ಅವರು ಕನ್ನಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟ ಅನುಪಮ್  ‘ವಿಜಯ್ 69’ (Vijay 69) ಸಿನಿಮಾ ಶೂಟಿಂಗ್ ವೇಳೆ ಅವರ ಭುಜಕ್ಕೆ ಪೆಟ್ಟಾಗಿದೆ. ಆತಂಕದಲ್ಲಿರುವ ಅಭಿಮಾನಿಗಳಿಗೆ ಅನುಪಮ್ ಖೇರ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಶಿವಣ್ಣ ನಟನೆಯ ‘ಬೈರತಿ ರಣಗಲ್‌’ ಸಿನಿಮಾದ ಬಿಗ್‌ ಅಪ್‌ಡೇಟ್

    ಕನ್ನಡದ ‘ಘೋಸ್ಟ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಿರುವ ಖ್ಯಾತ ನಟ ಅನುಪಮ್ ಅವರಿಗೆ ‘ವಿಜಯ್ 69’ ಸಿನಿಮಾ ಚಿತ್ರೀಕರಣದ ವೇಳೆ ಭುಜಕ್ಕೆ ಗಾಯವಾಗಿದೆ. ಈ ಬಗ್ಗೆ ನಟ ರಿಯಾಕ್ಟ್ ಮಾಡಿದ್ದಾರೆ. ನಾನು ಆರೋಗ್ಯವಾಗಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. ಸ್ಪೋರ್ಟ್ಸ್ ಸಿನಿಮಾ ಮಾಡುತ್ತೀರಿ ಮತ್ತು ನೀವು ಗಾಯಗೊಂಡಿಲ್ಲ ಅಂದರೆ ಅದು ಹೇಗೆ ಸಾಧ್ಯ ‘ವಿಜಯ್ 69’ರ ಶೂಟಿಂಗ್ ಸಮಯದಲ್ಲಿ ಭುಜಕ್ಕೆ ತೀವ್ರವಾಗಿ ಗಾಯವಾಯಿತು’ ಎಂದು ಅವರು ಬರೆದುಕೊಂಡಿದ್ದಾರೆ. ಸದ್ಯ ಅವರು ಗಾಯಗೊಂಡಿರುವುದರಿಂದ ಶೂಟಿಂಗ್‌ಗೆ ಬ್ರೇಕ್ ಪಡೆದಿದ್ದಾರೆ. ನೆಚ್ಚಿನ ನಟ ಶ್ರೀಘ್ರವೇ ಗುಣಮುಖರಾಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.

    ಯಶ್ ರಾಜ್ ಫಿಲ್ಮ್ಸ್ ಸಂಸ್ಥೆಯ ‘ವೈಆರ್‌ಎಫ್ ಎಂಟರ್‌ಟೈನ್ಮೆಂಟ್’ ಒಟಿಟಿ ಮೂಲಕ ವಿಜಯ್ 69 ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ನೇರವಾಗಿ ಒಟಿಟಿ ಮೂಲಕ ತೆರೆ ಕಾಣಲಿದೆ. ಈ ಚಿತ್ರಕ್ಕೆ ಅಕ್ಷಯ್ ರಾಯ್ ನಿರ್ದೇಶನ ಮಾಡುತ್ತಿದ್ದಾರೆ.

  • ನಿಮ್ಮ ಅಭಿನಯ- ವ್ಯಕ್ತಿತ್ವ ಎರಡು ಅದ್ಭುತ: ಅನುಪಮ್ ಖೇರ್ ಹೊಗಳಿದ ಶಿವಣ್ಣ

    ನಿಮ್ಮ ಅಭಿನಯ- ವ್ಯಕ್ತಿತ್ವ ಎರಡು ಅದ್ಭುತ: ಅನುಪಮ್ ಖೇರ್ ಹೊಗಳಿದ ಶಿವಣ್ಣ

    ಬಾಲಿವುಡ್ (Bollywood) ನಟ ಅನುಪಮ್ ಖೇರ್ ಇದೀಗ ಶಿವಣ್ಣ (Shivanna) ನಟನೆಯ ‘ಘೋಸ್ಟ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಕನ್ನಡ ಸಿನಿಮಾಗೆ ಎಂಟ್ರಿ ಕೊಟ್ಟಿರುವ ಅನುಪಮ್ ಖೇರ್‌ಗೆ ಶಿವಣ್ಣ ಸ್ವಾಗತಿಸಿದ್ದಾರೆ.

     

    View this post on Instagram

     

    A post shared by SRINI (@lordmgsrinivas)

    ನಟ-ನಿರ್ದೇಶಕ ಶ್ರೀನಿ ನಿರ್ದೇಶನದ ‘ಘೋಸ್ಟ್’ (Ghost) ಚಿತ್ರದಲ್ಲಿ ಶಿವಣ್ಣ ಜೊತೆ ಹಿಂದಿ ನಟ ಅನುಪಮ್ ಖೇರ್ (Anupam Kher) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅನುಪಮ್ ಪಾತ್ರಕ್ಕೆ ಆದ್ಯತೆಯಿದ್ದು, ಶಿವಣ್ಣ ಜೊತೆಗಿನ ಜುಗಲ್‌ಬಂದಿ ಮೋಡಿ ಮಾಡಲಿದೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ಮಗಧೀರನ ಬೆಡಗಿ ಕಾಜಲ್

    ‘ ದಿ ಕಾಶ್ಮೀರ್‌ ಫೈಲ್ಸ್’ (Kashmir Files) ನಟ ಅನುಪಮ್ ಖೇರ್ ಸ್ಯಾಂಡಲ್‌ವುಡ್‌ಗೆ ಬಂದಿರೋದ್ದಕ್ಕೆ ಶಿವಣ್ಣ ಖುಷಿಯಿಂದ ಸ್ವಾಗತಿಸಿದ್ದಾರೆ. ಈ ಕುರಿತ ಟ್ವೀಟ್ ಇದೀಗ ವೈರಲ್ ಆಗುತ್ತಿದೆ. ನಿಮ್ಮ ಜೊತೆ ಕೆಲಸ ಮಾಡಿದ್ದು, ತುಂಬಾ ಖುಷಿ ಆಯ್ತು ಅನುಪಮ್ ಸರ್. ನಿಮ್ಮ ಅಭಿನಯ ಮತ್ತು ವ್ಯಕ್ತಿತ್ವ ಎರಡು ಅದ್ಭುತ. ನಿಮ್ಮನ್ನು ‘ಘೋಸ್ಟ್’ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಸ್ವಾಗತಿಸುತ್ತೇನೆ.

    ನಟ ಅನುಪಮ್ ಖೇರ್ ಬೆಂಗಳೂರಿಗೆ ಬಂದು, ತಮ್ಮ ಭಾಗದ ಚಿತ್ರೀಕರಣ ಮುಗಿಸಿ ಕೊಟ್ಟಿದ್ದಾರೆ. ಶಿವಣ್ಣ- ಅನುಪಮ್ ಖೇರ್ ಕಾಂಬಿನೇಷನ್ ತೆರೆಯ ಮೇಲೆ ನೋಡಲು ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ಶಿವಣ್ಣ ನಟನೆಯ `ಘೋಸ್ಟ್’ ಚಿತ್ರದಲ್ಲಿ ನಟ ಅನುಪಮ್ ಖೇರ್

    ಶಿವಣ್ಣ ನಟನೆಯ `ಘೋಸ್ಟ್’ ಚಿತ್ರದಲ್ಲಿ ನಟ ಅನುಪಮ್ ಖೇರ್

    ಶಿವರಾಜ್‌ಕುಮಾರ್ (Shivarajkumar) ನಟನೆಯ ನಿರೀಕ್ಷಿತ ಚಿತ್ರ `ಘೋಸ್ಟ್’ (Ghost) ಸಿನಿಮಾ ಶೂಟಿಂಗ್‌ನಲ್ಲಿ ನಟ ಬ್ಯುಸಿಯಾಗಿದ್ದಾರೆ. ಶಿವಣ್ಣನ ಸಿನಿಮಾಗೆ ಬಾಲಿವುಡ್ ನಟ ಅನುಪಮ್ ಖೇರ್ (Anupam Kher) ಸಾಥ್ ನೀಡಲಿದ್ದಾರೆ.

     

    View this post on Instagram

     

    A post shared by DrShivaRajkumar (@nimmashivarajkumar)

    ಶಿವಣ್ಣ ನಟನೆಯ `ವೇದ’ (Vedha Film) ಸಿನಿಮಾ ಇದೀಗ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಸಕ್ಸಸ್ ನಂತರ ತಮ್ಮ ಮುಂದಿನ ಸಿನಿಮಾದತ್ತ ನಟ ಗಮನ ಕೊಡ್ತಿದ್ದಾರೆ. ಸದ್ಯ ʻಘೋಸ್ಟ್ʼ ಚಿತ್ರದ ಶೂಟಿಂಗ್‌ನಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ.

    ಬೀರ್‌ಬಲ್, ಓಲ್ಡ್‌ಮಾಂಕ್‌ ಚಿತ್ರಗಳನ್ನ ನಟಿಸಿ ನಿರ್ದೇಶಿಸಿದ್ದ ಶ್ರೀನಿ ಇದೀಗ ಘೋಸ್ಟ್ ಸಿನಿಮಾಗೆ ನಿರ್ದೇಶನ ಮಾಡ್ತಿದ್ದಾರೆ. ಘೋಸ್ಟ್ ಸಿನಿಮಾ ಶುರುವಾದ ದಿನದಿಂದ ಒಂದಲ್ಲಾ ಒಂದು ವಿಚಾರವಾಗಿ ಗಮನ ಸೆಲೆಯುತ್ತಲೇ ಬಂದಿದೆ. ಹೀಗಿರುವಾಗ ಬಾಲಿವುಡ್ ನಟ ಅನುಪಮ್ ಖೇರ್ ಶಿವಣ್ಣನ ಟೀಮ್ ಜೊತೆ ಕೈಜೋಡಿಸಿದ್ದಾರೆ. ಇದನ್ನೂ ಓದಿ: ಬಹುಕಾಲದ ಗೆಳತಿ ಜೊತೆ ತೆಲುಗು ನಟ ಶರ್ವಾನಂದ್ ಎಂಗೇಜ್‌ಮೆಂಟ್

    ಮಾಲಿವುಡ್ ನಟ ಜಯರಾಮ್ ನಂತರ ಅನುಪಮ್ ಖೇರ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಜೀವತುಂಬಲಿದ್ದಾರೆ. ಶಿವಣ್ಣನ ಜೊತೆ ನಟಿಸಲಿದ್ದಾರೆ. ಈಗಾಗಲೇ ತಮ್ಮ ಪಾತ್ರದ ಕಥೆ ಕೇಳಿ ಥ್ರಿಲ್ ಆಗಿ, ಚಿತ್ರತಂಡಕ್ಕೆ ನಟ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯದಲ್ಲೇ ಶೂಟಿಂಗ್‌ಗೆ ಭಾಗಿಯಾಗಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಣ್ಣಾವ್ರ ಬರ್ತಡೇ ದಿನ ಶಿವಣ್ಣ ನಟನೆಯ `ಘೋಸ್ಟ್’ ಲುಕ್ ರಿಲೀಸ್

    ಅಣ್ಣಾವ್ರ ಬರ್ತಡೇ ದಿನ ಶಿವಣ್ಣ ನಟನೆಯ `ಘೋಸ್ಟ್’ ಲುಕ್ ರಿಲೀಸ್

    ರನಟ ಡಾ.ರಾಜ್‌ಕುಮಾರ್ ಅವರ ಹುಟ್ಟು ಹಬ್ಬ. ಅಭಿಮಾನಿಗಳು ಈ ದಿನವನ್ನ ಸ್ಪೆಷಲ್ ಆಗಿ ಆಚರಿಸುತ್ತಾರೆ. ಈ ಶುಭ ಸಂದರ್ಭದಲ್ಲಿ ಡಾ.ರಾಜ್ ಫ್ಯಾಮಿಲಿಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ನಟನೆಯ ಬಹುನಿರೀಕ್ಷಿತ `ಘೋಸ್ಟ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.

    ಖ್ಯಾತ ನಿರ್ಮಾಪಕ ಸಂದೇಶ್ ನಾಗಾರಾಜ್ ನಿರ್ಮಾಣದಲ್ಲಿ ಘೋಸ್ಟ್ ಚಿತ್ರ ಮೋಡಿ ಬರಲಿದ್ದು, ಚಿತ್ರಕ್ಕೆ ನಟ ಕಮ್ ನಿರ್ದೇಶಕ ಶ್ರೀನಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಅಣ್ಣಾವ್ರ ಹುಟ್ಟು ಹಬ್ಬದಂದು `ಘೋಸ್ಟ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದ್ದು, ಸಖತ್ ರಾ ಆಗಿ ಮೂಡಿ ಬಂದಿದೆ. ಶಿವಣ್ಣ ಕೈಯಲ್ಲಿ ಎಕೆ47 ಮಾದರಿಯ ಗನ್‌ಯಿದ್ದು, ಅವರ ಕಡೆ ಒಂದಷ್ಟು ಗನ್‌ಗಳು ಮುಖ ಮಾಡಿದೆ. ಪೋಸ್ಟರ್‌ನಲ್ಲಿ ಕಂಬಿಗಳನ್ನು ಕೂಡ ತೋರಿಸಲಾಗಿದೆ. ಸಖತ್ ರಗಡ್ ಲುಕ್ಕಿನಲ್ಲಿ ಮಿಂಚ್ತಿರೋ ಶಿವಣ್ಣನ ಹೊಸ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಮೂಡಿಸುತ್ತಿದೆ.

    ಇನ್ನು ಶಿವಣ್ಣನ ವಯಸ್ಸು 60 ಆಸುಪಾಸಿನಲ್ಲಿದ್ರು ಎನರ್ಜಿ ಒಂದು ಚೂರು ಕಮ್ಮಿ ಆಗೋದಿಲ್ಲ. ಏನೇ ಕೆಲಸಯಿರಲಿ ಯಾವುದೇ ಚಿತ್ರವಾಗಿರಲಿ ಶಿವಣ್ಣ ಯಾವಾಗಲೂ ಮುಂದು. ಭಿನ್ನ ಟೈಟಲ್‌ನಿಂದ ಗಮನ ಸೆಳೆಯುತ್ತಿರುವ `ಘೋಸ್ಟ್’ ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾವಾಗಿದೆ. ಸದ್ಯ ಚಿತ್ರದ ಪೊಸ್ಟರ್ ಲುಕ್‌ನಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಇದನ್ನೂ ಓದಿ:ಸೀಮಂತದ ಸಂಭ್ರಮದಲ್ಲಿ ನಟಿ ಸಂಜನಾ ಗಲ್ರಾನಿ

    `ಘೋಸ್ಟ್’ ಸಿನಿಮಾ ಕನ್ನಡ, ತಮಿಳು, ತೆಲುಗು, ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿ ಬರಲಿದ್ದು, ಸಂದೇಶ ನಾಗಾರಾಜ್ ಬ್ಯಾನರ್‌ನಲ್ಲಿ ಮೂಡಿಬರಲಿರುವ 29ನೇ ಚಿತ್ರವಾಗಿದೆ. ಎಂದೂ ಮಾಡಿರದ ಪಾತ್ರದಲ್ಲಿ ರಂಜಿಸಲು ಶಿವಣ್ಣ ರೆಡಿಯಾಗಿದ್ದು, ಮುಂದಿನ ದಿನಗಳಲ್ಲಿ ಹೇಗೆಲ್ಲಾ ಸೌಂಡ್ ಮಾಡಬಹುದು ಅಂತಾ ಕಾದುನೋಡಬೇಕಿದೆ.