– ಯುಪಿಯಲ್ಲಿ ಮೊದಲ ಬಾರಿಗೆ ಮಹಿಳಾ ಪೊಲೀಸರ ತಂಡದಿಂದ ಎನ್‌ಕೌಂಟರ್
ಲಕ್ನೋ: ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ (Ghaziabad) ಮೊದಲ ಬಾರಿಗೆ ಮಹಿಳಾ ಪೊಲೀಸರ ತಂಡ (Women Cop Team) ಎನ್‌ಕೌಂಟರ್ (Encounter) ನಡೆಸಿ ಕಳ್ಳನನ್ನು ಬಂಧಿಸಿದೆ.
ಬಂಧಿತನನ್ನು ಜಿತೇಂದ್ರ (22) ಎಂದು ಗುರುತಿಸಲಾಗಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಆರೋಪಿಯನ್ನು ಪೊಲೀಸ್ ಚೆಕ್‌ಪಾಯಿಂಟ್‌ನಲ್ಲಿ ತಡೆದಿದ್ದಾರೆ. ಈ ವೇಳೆ ಈತ ಸ್ಕೂಟರ್ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾನೆ. ಈತನನ್ನು ಮಹಿಳಾ ಪೊಲೀಸರ ತಂಡ ಬೆನ್ನಟ್ಟಿದೆ. ಆಗ ತಪ್ಪಿಸಿಕೊಳ್ಳುವ ಭರದಲ್ಲಿ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ವೇಷದಲ್ಲಿ ಬಂದು ಶ್ರೀಗಂಧಕ್ಕೆ ಕೊಡಲಿ – 33 ತುಂಡುಗಳು ವಶ, ಆರೋಪಿ ಅರೆಸ್ಟ್
ಪೊಲೀಸರು ಆತನಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಈ ವೇಳೆ ತನ್ನ ಬಳಿ ಇದ್ದ ನಾಡ ಪಿಸ್ತೂಲಿನಿಂದ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಪ್ರತಿದಾಳಿ ನಡೆಸಿದ ಪೊಲೀಸರು ಆತನ ಕಾಲಿಗೆ ಗುಂಡೇಟು ನೀಡಿ ಬಂಧಿಸಿದ್ದಾರೆ. ಜೀತೇಂದ್ರ ಕಳ್ಳತನ, ದರೋಡೆ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ.
ವಿಚಾರಣೆಯ ಸಮಯದಲ್ಲಿ, ದೆಹಲಿ-ಎನ್‌ಸಿಆರ್‌ನಲ್ಲಿ ಬೈಕ್‌ಗಳು ಮತ್ತು ಸ್ಕೂಟರ್‌ಗಳನ್ನು ಕದ್ದಿದ್ದಾಗಿ ಒಪ್ಪಿಕೊಂಡಿದ್ದಾನೆ. ಈತ ಜನರಿಂದ ಫೋನ್‌ಗಳು ಕಸಿದು ಪರಾರಿಯಾಗುತ್ತಿದ್ದ. ಪಿಸ್ತೂಲ್, ಸ್ಕೂಟರ್, ಫೋನ್ ಮತ್ತು ಟ್ಯಾಬ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ನೋ: ಪಶ್ಚಿಮ ಆರ್ಕ್ಟಿಕಾ, ಸಬ್ರೋಗಾ, ಪೌಲ್ವಿಯಾ ಮತ್ತು ಲೊಡೋನಿಯಾದಂತಹ ರಾಷ್ಟ್ರಗಳ ರಾಯಭಾರಿ ಕಚೇರಿ (Fake Embassy) ಎಂದು ವಂಚನೆ ಮಾಡ್ತಿದ್ದ ಪ್ರಕರಣದ ಕುರಿತು ಸ್ಫೋಟಕ ರಹಸ್ಯಗಳನ್ನು ಅಧಿಕಾರಿಗಳು ಬಯಲಿಗೆಳೆದಿದ್ದಾರೆ. 8 ವರ್ಷಗಳಿಂದ ನಕಲಿ ಕಚೇರಿ ನಡೆಸುತ್ತಿದ್ದ ಆರೋಪಿ ಹರ್ಷವರ್ಧನ್ ಜೈನ್ (Harshvardhan Jain) ಬಗೆಗಿನ ಸತ್ಯಗಳನ್ನು ಕಂಡು ತನಿಖಾಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.
300 ಕೋಟಿ ರೂ.ಗಳ ಹಗರಣ
ಯುಪಿ ಎಸ್‌ಟಿಎಫ್ ನಡೆಸಿದ ತನಿಖೆಯಲ್ಲಿ ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ ಮತ್ತು ವಂಚಕ ಅಹ್ಸಾನ್ ಅಲಿ ಸಯೀದ್‌ಗೆ ಹರ್ಷವರ್ಧನ್‌ನನ್ನ ಪರಿಚಯಿಸಿದ್ದು ಚಂದ್ರಸ್ವಾಮಿ ಅಂತ ತಿಳಿದುಬಂದಿದೆ. ಹೈದರಾಬಾದ್‌ನಲ್ಲಿ ಜನಿಸಿದ್ದ ಸಯೀದ್ ಜೈನ್ ಈಗ ಟರ್ಕಿ ಪ್ರಜೆಯಾಗಿದ್ದಾರೆ. ಹರ್ಷವರ್ಧನ್ ಜೈನ್ ಸಯೀದ್ ಜೈನ್ ಜೊತೆ ಸೇರಿ 25 ನಕಲಿ ಕಂಪನಿಗಳನ್ನು ತೆರೆಯಲು ಕೆಲಸ ಮಾಡಿದ್ದ. ಈ ಹಾದಿಯಲ್ಲಿ 300 ಕೋಟಿ ಹಗರಣ ನಡೆದಿರುವುದು ಗಮನಕ್ಕೆ ಬಂದಿದೆ. ಇದನ್ನೂ ಓದಿ: ನೋಯ್ಡಾದಲ್ಲಿ ಸ್ಕೂಟಿಗೆ BMW ಕಾರು ಡಿಕ್ಕಿ – 5 ವರ್ಷದ ಬಾಲಕಿ ಸಾವು
ಸ್ವಿಸ್ ನಲ್ಲಿ ವಂಚನೆ
ಅಂತಾರಾಷ್ಟ್ರೀಯ ವಂಚಕ ಸಯೀದ್ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ವೆಸ್ಟರ್ನ್ ಅಡ್ವೈಸರಿ ಗ್ರೂಪ್ ಎಂಬ ಕಂಪನಿ ನಡೆಸುತ್ತಿದ್ದ. ಕೆಲ ಸಮಯದ ನಂತರ ಇದನ್ನ ಬ್ರೋಕರೇಜ್ ಕಂಪನಿ ಆಗಿ ಬದಲಾಯಿಸಲಾಗಿತ್ತು. ಈ ವೇಳೆ ಸಾಲ ಪಡೆಯುವವರಿಗೆ ಸಹಾಯ, ಮಾರ್ಗದರ್ಶನ ಮಾಡುವ ಭರವಸೆ ನೀಡಿ 25 ದಶಲಕ್ಷ ಪೌಂಡ್ (ಸುಮಾರು 300 ಕೋಟಿ ರೂ.) ಸಂಗ್ರಹ ಮಾಡಿದ್ದ. ಬಳಿಕ ಸ್ವಿಸ್ ನಿಂದ ಕಂಪನಿಯನ್ನೇ ಎತ್ತಂಗಡಿ ಮಾಡಿದ್ದ ಸಯೀದ್. ಈ ಪ್ರಕರಣ ಸಂಬಂಧ ಸಯೀದ್ ಜೈನ್‌ನನ್ನ 2022ರಲ್ಲಿ ಬಂಧಿಸಲಾಗಿತ್ತು. ಇದಕ್ಕೂ ಮುನ್ನ ಜೈನ್ ನಕಲಿ ರಾಯಭಾರ ಕಚೇರಿ ನೆಟ್‌ವರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂಬುದನ್ನ ಯುಪಿ ಎಸ್‌ಟಿಎಫ್ ಅಧಿಕಾರಿಗಳು ಬಯಲಿಗೆಳೆದಿರುವುದಾಗಿ ವರದಿಗಳು ತಿಳಿಸಿವೆ. ಇದನ್ನೂ ಓದಿ: ಹರಿದ್ವಾರ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ – 6 ಭಕ್ತರು ಸಾವು
ಏನಿದು ಪ್ರಕರಣ?
ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ ಪಶ್ಚಿಮ ಆರ್ಕ್ಟಿಕಾ, ಸಬ್ರೋಗಾ, ಪೌಲ್ವಿಯಾ ಮತ್ತು ಲೊಡೋನಿಯಾದಂತಹ ರಾಷ್ಟ್ರಗಳ ರಾಯಭಾರ ಕಚೇರಿ (Fake Embassy) ಎಂದು ವಂಚನೆ ಮಾಡ್ತಿದ್ದ ಶಂಕಿತ ಹರ್ಷವರ್ಧನ್ ಜೈನ್‌ನನ್ನ ಯುಪಿ ಎಸ್‌ಟಿಎಫ್ ಬಂಧಿಸಿತ್ತು. ದಾಳಿಯಲ್ಲಿ ಹಲವಾರು ನಕಲಿ ಅಂಚೆ ಚೀಟಿಗಳು, ಪಾಸ್‌ಪೋರ್ಟ್‌ಗಳು, ರಾಜತಾಂತ್ರಿಕ ನೋಂದಣಿ ಫಲಕಗಳು, ವಿದೇಶಿ ಮತ್ತು ದೇಶೀಯ ನಗದು ವಶಪಡಿಸಿಕೊಳ್ಳಲಾಗಿತ್ತು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ದೋಣಿ ಮುಳುಗಿ ಮೂವರು ಮೀನುಗಾರರು ನಾಪತ್ತೆ
ಆರೋಪಿಯು ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನ ಹೊಂದಿರುವ ಹಲವಾರು ಕಾರುಗಳನ್ನು ಹೊಂದಿದ್ದ. ಜೊತೆಗೆ ಪ್ರಧಾನಿ, ರಾಷ್ಟ್ರಪತಿ ಮತ್ತು ಇತರ ಗಣ್ಯರೊಂದಿಗೆ ತಮ್ಮ ಮಾರ್ಫ್ ಮಾಡಿದ ಛಾಯಾಚಿತ್ರಗಳನ್ನ ಬಳಸಿಕೊಂಡು ಜನರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿರೋದು ಬೆಳಕಿಗೆ ಬಂದಿತ್ತು. ದೇಶದಲ್ಲಿ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ದಲ್ಲಾಳಿ ಮಾಡುವುದು ಮತ್ತು ಶೆಲ್ ಕಂಪನಿಗಳ ಮೂಲಕ ಹವಾಲಾ ದಂಧೆಯನ್ನು ನಡೆಸುವುದು ಪತ್ತೆಯಾಗಿತ್ತು. ಹರ್ಷವರ್ಧನ್ ಚಂದ್ರಸ್ವಾಮಿ ಮತ್ತು ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ ಅವರೊಂದಿಗೆ ಈ ಹಿಂದೆ ಸಂಪರ್ಕ ಹೊಂದಿದ್ದ ಎಂದು ತನಿಖೆಗಳು ಬಹಿರಂಗಪಡಿಸಿದ್ದವು. 2011 ರಲ್ಲಿ, ಆತನ ಬಳಿ ಅಕ್ರಮ ಸ್ಯಾಟಲೈಟ್ ಫೋನ್ ಕೂಡ ಪತ್ತೆಯಾಗಿತ್ತು, ಇದಕ್ಕಾಗಿ ಕವಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಶಪಡಿಸಿಕೊಂಡ ವಸ್ತುಗಳು:
1. ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ನಾಲ್ಕು ಕಾರ್‌ಗಳು
2. 12 ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳು
3. ವಿದೇಶಾಂಗ ಸಚಿವಾಲಯದ ಮುದ್ರೆಯೊಂದಿಗೆ ನಕಲಿ ದಾಖಲೆಗಳು
4. ಎರಡು ನಕಲಿ ಪ್ಯಾನ್ ಕಾರ್ಡ್‌ಗಳು
5. ವಿವಿಧ ದೇಶಗಳು ಮತ್ತು ಕಂಪನಿಗಳ ಮೂವತ್ನಾಲ್ಕು ಸೀಲುಗಳು
6. ಎರಡು ನಕಲಿ ಪ್ರೆಸ್ ಕಾರ್ಡ್‌ಗಳು
7. 44.7 ಲಕ್ಷ ರೂ. ನಗದು
8. ವಿವಿಧ ದೇಶಗಳಿಂದ ಬಂದ ವಿದೇಶಿ ಕರೆನ್ಸಿ
9. ವಿವಿಧ ಕಂಪನಿಗಳ ದಾಖಲೆಗಳು
10. ಹೆಚ್ಚುವರಿ ಹದಿನೆಂಟು ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳು ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ.
ಲಕ್ನೋ: ಉತ್ತರ ಪ್ರದೇಶದ ಗಾಜಿಯಾಬಾದ್‌ನ (Ghaziabad) ಹಿಂಡನ್ ವಿಮಾನ ನಿಲ್ದಾಣದಿಂದ (Hindon Airport) ಕೋಲ್ಕತ್ತಾಗೆ (Kolkata) ಹೊರಟಿದ್ದ ಏರ್ ಇಂಡಿಯಾ (Air India) ಎಕ್ಸ್‌ಪ್ರೆಸ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಟೇಕಾಫ್‌ಗೆ ಸ್ವಲ್ಪ ಸಮಯ ಬಾಕಿ ಇರುವಾಗ ತಾಂತ್ರಿಕ ದೋಷ ಕಾಣಿಸಿದ್ದು, ಅನಾಹುತವೊಂದು ತಪ್ಪಿದಂತಾಗಿದೆ.
ಏರ್ ಇಂಡಿಯಾ IX 1511 ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ರನ್‌ವೇಯಲ್ಲಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ, ವಿಮಾನ ಹಾರಾಟ ಒಂದು ಗಂಟೆ ಕಾಲ ವಿಳಂಬವಾಯಿತು. ಇದರಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲಕ್ಕೆ ಏರ್ ಇಂಡಿಯಾ ಕ್ಷಮೆಯಾಚಿಸಿದೆ. ಇದನ್ನೂ ಓದಿ: ಬ್ರಿಟನ್‌ನ F-35 ಫೈಟರ್ ಜೆಟ್ ಕೇರಳದಲ್ಲಿ ತುರ್ತು ಭೂಸ್ಪರ್ಶ – ಕಾರಣ ಏನು?
ವಿಮಾನದಲ್ಲಿನ ತಾಂತ್ರಿಕ ದೋಷದಿಂದಾಗಿ ಹಾರಾಟ ವಿಳಂಬವಾಗಿದೆ. ಪ್ರಯಾಣಿಕರಿಗೆ ಉಚಿತ ಟಿಕೆಟ್ ಮರುಹೊಂದಿಕೆ ಅಥವಾ ರದ್ದತಿಯನ್ನು ಪೂರ್ಣ ಮರುಪಾವತಿಯೊಂದಿಗೆ ಮಾಡಿಕೊಡಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಎಂದು ಏರ್ ಇಡಿಯಾ ವಕ್ತಾರರು ತಿಳಿಸಿದ್ದಾರೆ.
ವಿಮಾನವು ರನ್‌ವೇಗೆ ಬಂದು ನಿರ್ಗಮನಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಸಿಬ್ಬಂದಿಗೆ ಕೊನೆಯ ಕ್ಷಣದಲ್ಲಿ ತೊಂದರೆ ಕಂಡುಬಂದಿದೆ. ಕೂಡಲೇ ಇಂಜಿನಿಯರ್‌ಗಳನ್ನು ಕರೆಸಿ ಪರಿಶೀಲಿಸಲಾಯಿತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಘಾಜಿಯಾಬಾದ್‌ನ ಲೋನಿ ಗಡಿ ಪ್ರದೇಶದ ಕಾಲುವೆಯಲ್ಲಿ ಮಹಿಳೆಯ ಛಿದ್ರಗೊಂಡ ಮೃತದೇಹ ಸೂಟ್‌ಕೇಸ್‌ವೊಂದರಲ್ಲಿ ಪತ್ತೆಯಾಗಿದೆ. ಈ ಕುರಿತು ಮಂಗಳವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಸೂಟ್‌ಕೇಸ್‌ನಲ್ಲಿ ಕಾಲುಗಳನ್ನು ಅಡ್ಡಲಾಗಿ ಇರಿಸಲಾಗಿದ್ದು, ಕೈ ಹಾಗೂ ತಲೆಯನ್ನು ಮೂಲೆಯಲ್ಲಿ ಇರಿಲಾಗಿತ್ತು. ಸದ್ಯ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಮಹಿಳೆಯ ಗುರುತು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.
ಇದಕ್ಕೂ ಮುನ್ನ ದೆಹಲಿಯ (Dehli) ನೆಹರೂ ವಿಹಾರ್‌ದಲ್ಲಿ 9 ವರ್ಷದ ಬಾಲಕಿಯ ಮೃತದೇಹ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇನ್ನೂ ಬಾಲಕಿ ಆ ದಿನ ತನ್ನ ಸಂಬಂಧಿಕರನ್ನು ಭೇಟಿಯಾಗಲು ಹೋಗಿದ್ದಳು. ಆದರೆ ಅವಳು ಎರಡು ಗಂಟೆ ಕಳೆದರೂ ಮನೆಗೆ ಹಿಂದಿರುಗಲಿಲ್ಲ. ಹೀಗಾಗಿ ನಾವು ಆಕೆಯನ್ನು ಹುಡುಕಲು ಪ್ರಾರಂಭಿಸಿದೆವು ಎಂದು ಕುಟುಂಬ ಮೂಲಗಳು ತಿಳಿಸಿವೆ.ಇದನ್ನೂ ಓದಿ: ಲವ್ವರ್ ಜೊತೆಯೇ ಓಡಿ ಹೋಗಬಹುದಿತ್ತು, ನನ್ನ ಅಣ್ಣನನ್ನು ಯಾಕೆ ಕೊಂದ್ಲು?- ಹತ್ಯೆಯಾದ ರಘುವಂಶಿ ಸಹೋದರಿ ಕಣ್ಣೀರು
ನವದೆಹಲಿ: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಕುಲದೀಪ್ ತ್ಯಾಗಿ (46) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್‌ನೋಟ್‌ನಲ್ಲಿ, ‘ನನಗೆ ಕ್ಯಾನ್ಸರ್ ಇತ್ತು. ಚಿಕಿತ್ಸೆಗೆ ಹಣ ವ್ಯರ್ಥವಾಗಬಾರದು ಎಂದು ಈ ನಿರ್ಧಾರಕ್ಕೆ ಬಂದೆವು. ಪತ್ನಿ ಅಂಶು ತ್ಯಾಗಿ ಮತ್ತು ನಾನು ಒಟ್ಟಿಗೆ ಇರುವುದಾಗಿ ನಿರ್ಧರಿಸಿದೆವು. ಹೀಗಾಗಿ, ಅವಳನ್ನೂ ಕೊಂದಿದ್ದೇನೆ’ ಎಂದು ಉಲ್ಲೇಖವಾಗಿದೆ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದರು. ಕುಲದೀಪ್ ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ. ಇದನ್ನೂ ಓದಿ: ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಕೋಪಗೊಂಡು ನಾದಿನಿಯನ್ನು ಕೊಂದ
ರಾಧಾ ಕುಂಜ್ ಸೊಸೈಟಿಯಲ್ಲಿರುವ ಮನೆಯಲ್ಲಿ ಕುಲದೀಪ್ ತನ್ನ ಪತ್ನಿಯನ್ನು ಪರವಾನಗಿ ಪಡೆದ ರಿವಾಲ್ವರ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದರು. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯ ಸಮಯದಲ್ಲಿ ಅವರ ಪುತ್ರರು ಮನೆಯಲ್ಲಿದ್ದರು. ಗುಂಡೇಟಿನ ಶಬ್ದ ಕೇಳಿ ಕೋಣೆಗೆ ಧಾವಿಸಿದರು. ಕುಲದೀಪ್ ಮೃತದೇಹ ನೆಲದ ಮೇಲೆ ಮತ್ತು ಅಂಶು ಅವರ ಮೃತದೇಹ ಹಾಸಿಗೆಯ ಮೇಲೆ ಬಿದ್ದಿತ್ತು. ತಕ್ಷಣ ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಾಗಲೇ ಇಬ್ಬರು ಮೃತಪಟ್ಟಿದ್ದರು.
ಡೆತ್‌ನೋಟ್‌ನಲ್ಲೇನಿತ್ತು?
ನಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ. ಆದರೆ, ಈ ವಿಚಾರ ನನ್ನ ಕುಟುಂಬದವರಿಗೆ ತಿಳಿದಿಲ್ಲ. ಬದುಕುಳಿಯುವುದು ಕಷ್ಟ ಎಂದು ತಿಳಿದಿತ್ತು. ನನ್ನ ಚಿಕಿತ್ಸೆಗೆ ಹಣ ವ್ಯರ್ಥವಾಗಬಾರದು ಎಂದು ನಾನು ಬಯಸುತ್ತೇನೆ. ಬದುಕಿದರೂ, ಸತ್ತರೂ ನಿನ್ನ ಜೊತೆಯೇ ಎಂದು ಪತ್ನಿ ಹೇಳಿದ್ದಳು. ಹಾಗಾಗಿ, ಇಬ್ಬರೂ ಒಟ್ಟಿಗೆ ಸಾಯಲು ನಿರ್ಧರಿಸಿದ್ದೇವೆ. ನಾನು ನನ್ನ ಹೆಂಡತಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದೇನೆ. ಇದರಲ್ಲಿ ಯಾರೂ ಕೂಡ ತಪ್ಪಿತಸ್ಥರಲ್ಲ ಎಂದು ಡೆತ್‌ನೋಟ್‌ನಲ್ಲಿ ಕುಲದೀಪ್ ಬರೆದಿದ್ದರು. ಇದನ್ನೂ ಓದಿ: ನಾನು ಅವನನ್ನೇ ಮದ್ವೆಯಾಗ್ತೀನಿ – ಭಾವಿ ಅಳಿಯನೊಂದಿಗೆ ಓಡಿಹೋಗಿದ್ದ ಯುಪಿ ಮಹಿಳೆ ಪಟ್ಟು
ಪೊಲೀಸರು ಪಿಸ್ತೂಲನ್ನು ವಶಪಡಿಸಿಕೊಂಡು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ನವದೆಹಲಿ: ದೆಹಲಿಯ ಮೃಗಾಲಯಕ್ಕೆ ಭೇಟಿ ನೀಡಿದ್ದ ಗಾಜಿಯಾಬಾದ್‌ನ ನವಜೋಡಿಯೊಂದು ದಾರುಣ ಅಂತ್ಯ ಕಂಡಿರುವ ಘಟನೆ ನಡೆದಿದೆ. ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟರೆ, ಪತಿಯ ಸಾವಿನಿಂದ ಆಘಾತಗೊಂಡು ಪತ್ನಿ ಕೂಡ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ್ದಾಳೆ.
25 ರ ಹರೆಯದ ಅಭಿಷೇಕ್ ಅಹ್ಲುವಾಲಿ ಹೃದಯಾಘಾತದಿಂದ ಮೃತಪಟ್ಟ. ಇದಾದ 24 ಗಂಟೆಗಳ ಬಳಿಕ ಪತಿ ಸಾವಿನ ಆಘಾತದಿಂದ ಅಂಜಲಿ, ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ತೇಜಸ್ವಿ ಯಾದವ್ ಬೆಂಗಾವಲು ಪಡೆಯ ವಾಹನ ಅಪಘಾತ- ಚಾಲಕ ದುರ್ಮರಣ
ಕಳೆದ ವರ್ಷದ ನವೆಂಬರ್ 30 ರಂದು ಅಭಿಷೇಕ್ ಮತ್ತು ಅಂಜಲಿ ವಿವಾಹವಾಗಿದ್ದರು. ಸೋಮವಾರ ಇಬ್ಬರೂ ದೆಹಲಿ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅಭಿಷೇಕ್‌ಗೆ ಎದೆನೋವು ಕಾಣಿಸಿಕೊಂಡಿತು. ಅಂಜಲಿ ತನ್ನ ಸ್ನೇಹಿತರನ್ನು ಕರೆದು ಪತಿಯನ್ನು ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಸೇರಿಸಿದರು. ನಂತರ ಸಫ್ದರ್‌ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಬಳಿಕ ಅಭಿಷೇಕ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಸಾವಿಗೆ ಹೃದಯಾಘಾತವೇ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಪತಿಯ ಮರಣದ ಆಘಾತ ಸಹಿಸಲಾಗದೆ ಅಂಜಲಿ ಏಳನೇ ಮಹಡಿಯ ಬಾಲ್ಕನಿಗೆ ಧಾವಿಸಿ ಜಿಗಿದಿದ್ದಾರೆ. ಗಂಭೀರ ಗಾಯಗೊಂಡ ಆಕೆಯನ್ನು ವೈಶಾಲಿಯ ಮ್ಯಾಕ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಇಂದು ಮುಂಜಾನೆ ಆಕೆಯೂ ಕೊನೆಯುಸಿರೆಳೆದಿದ್ದಾಳೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್‍ನಲ್ಲಿ ಕುಡುಕರ ಗಲಾಟೆ- ಓರ್ವನನ್ನು ತಳ್ಳಿ ಹತ್ಯೆಗೈದ
ಪತಿಯ ಮೃತದೇಹದ ಪಕ್ಕದಲ್ಲೇ ಕುಳಿದು ಅಂಜಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ನಂತರ ಆಕೆ ಇದ್ದಕ್ಕಿದ್ದಂತೆ ಎದ್ದು ಬಾಲ್ಕನಿ ಕಡೆ ಓಡಿದಳು. ಕಟ್ಟಡದಿಂದ ಜಿಗಿಯಲು ಮುಂದಾಗಿದ್ದಾಳೆ ಎಂಬುದು ನನಗೆ ತಿಳಿಯಿತು. ನಾವು ಹೋಗಿ ಹಿಡಿದುಕೊಳ್ಳುವಷ್ಟರಲ್ಲಿ ಆಕೆ ಮಹಡಿಯಿಂದ ಕೆಳಗೆ ಜಿಗಿದುಬಿಟ್ಟಳು ಎಂದು ಅಭಿಷೇಕ್ ಸಂಬಂಧಿ ಬಬಿತಾ ನೊಂದು ನುಡಿದಿದ್ದಾಳೆ.
ಎದೆನೋವು ಎಂದು ಕುಸಿದು ಬಿದ್ದ ಅಭಿಷೇಕ್‌ನನ್ನು ಮೃಗಾಲಯದಿಂದ 20 ಕಿಮೀ ದೂರದಲ್ಲಿರುವ ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಸಾಗಿಸಿದೆವು. ಆದರೆ ವೈದ್ಯರು ಸಫ್ದರ್‌ಜಂಗ್‌ಗೆ ಕರೆದೊಯ್ಯಲು ಹೇಳಿದರು. ನಾವು ಅಲ್ಲಿಗೂ ತಲುಪಿದೆವು. ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಮತ್ತೊಬ್ಬ ಸಂಬಂಧಿ ಸಂಜೀವ್ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಿಂದ ತಂದು ಅಕ್ರಮ ಸಾಗಾಟ – ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 1 ಕೆಜಿ ಚಿನ್ನ ಸೀಜ್
ನವದೆಹಲಿ: ರೈತರ ಪ್ರತಿಭಟನೆ (Protest) ನಡೆಯುತ್ತಿರುವ ಹಿನ್ನೆಲೆ ಗಾಜಿಪುರ ಮತ್ತು ಚಿಲ್ಲಾ ಗಡಿಯ ಹೆದ್ದಾರಿಗಳಲ್ಲಿ (Highway) ತೀವ್ರ ಟ್ರಾಫಿಕ್ ಉಂಟಾಗಿದ್ದು, ವಾಹನ ಸವಾರರು ಗಂಟೆಗಳ ಕಾಲ ಕಾಯುವಂತಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ರೈತರ ಮೆರವಣಿಗೆಗೆ ಮೊದಲೇ ದೆಹಲಿಯ ಬಹುಮುಖ್ಯ ರಸ್ತೆಗಳಿಗೆ ಸಂರ್ಪಕಿಸುವ ಹೆದ್ದಾರಿಗಳಲ್ಲಿ ತೀವ್ರ ಟ್ರಾಫಿಕ್ ಉಂಟಾಗಿದೆ. ಇದರಿಂದ ವಾಹನ ಸವಾರರು ಒಂದು ಕಿಲೋಮೀಟರ್‌ಗೆ ಒಂದು ಗಂಟೆ ಕಾಯುವಂತಾಗಿದೆ. ದೆಹಲಿಯ ಗಾಜಿಯಾಬಾದ್ (Ghaziabad) ಮತ್ತು ಉತ್ತರ ಪ್ರದೇಶದ ನೋಯ್ಡಾದೊಂದಿಗೆ (Noida) ಸಂಪರ್ಕಿಸುವ ಗಾಜಿಪುರ ಮತ್ತು ಚಿಲ್ಲಾ ಗಡಿ ಹೆದ್ದಾರಿಯಲ್ಲಿ ತೀವ್ರ ಟ್ರಾಫಿಕ್ ಉಂಟಾಗಿದೆ. ಇದನ್ನೂ ಓದಿ: ಪ್ರಧಾನಿ, ಗೃಹ ಸಚಿವರ ನಿವಾಸದ ಮುಂದೆ ರೈತರ ದೀಢಿರ್ ಪ್ರತಿಭಟನೆ ಸಾಧ್ಯತೆ
ದೆಹಲಿಯಿಂದ ಗುರುಗಾಂವ್‌ಗೆ ಸಂಪರ್ಕಿಸುವ ಎನ್‌ಹೆಚ್- 48 ರಸ್ತೆಯಲ್ಲಿಯೂ ವಾಹನಗಳ ಸಂಚಾರ ನಿಧಾನವಾಗಿದೆ. ದೆಹಲಿಗೆ ಪ್ರವೇಶಿಸುವ ಮೊದಲು ಬರುವ ಎಲ್ಲ ವಾಹನಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಪ್ರತಿಭಟನೆ ಮಾಡುತ್ತಿರುವ ರೈತರನ್ನು ದೆಹಲಿಗೆ ಪ್ರವೇಶಿಸಿದಂತೆ ತಡೆಯಲು ಗಾಜಿಪುರ, ಸಿಂಘು ಮತ್ತು ಟಿಕ್ರಿ ಸೇರಿದಂತೆ ಹಲವಾರು ಗಡಿ ಭಾಗಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ಮೈದಾನವನ್ನು ಜೈಲಾಗಿಸಲು ಅನುಮತಿ ನೀಡಲ್ಲ – ರೈತರ ಹೋರಾಟಕ್ಕೆ ದೆಹಲಿ ಸರ್ಕಾರದ ಬೆಂಬಲ
ಟ್ರಾಕ್ಟರ್‌ಗಳು ಮತ್ತು ಟ್ರಾಲಿಗಳು ಗಡಿ ಭಾಗದಲ್ಲಿ ಉರುಳುವುದನ್ನು ತಡೆಯಲು ಕಾಂಕ್ರೀಟ್ ಬ್ಲಾಕ್‌ಗಳು ಮತ್ತು ಬ್ಯಾರಿಕೇಡ್‌ಗಳ ಪದರಗಳನ್ನು ಹೆದ್ದಾರಿಗಳಲ್ಲಿ ನಿರ್ಮಿಸಲಾಗಿದೆ. ರಸ್ತೆಗಳಲ್ಲಿ ಮುಳ್ಳು ತಂತಿ ಮತ್ತು ಮೊಳೆಗಳನ್ನೂ ಅಳವಡಿಸಲಾಗಿದೆ. ರೈತರು ಸೋಮವಾರ ರಾತ್ರಿ ಸರ್ಕಾರದ ನಿಯೋಗದೊಂದಿಗೆ ಮಾತುಕತೆ ನಡೆಸಿದ್ದಾರೆ. ನಂತರವೂ ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದು, ಕನಿಷ್ಠ ಬೆಂಬಲ ಬೆಲೆಯನ್ನು ತಾವು ಬೆಳೆಯುವ ಬೆಲೆಗಳಿಗೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದೆಹಲಿಯ ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗೆ 1 ಸ್ಥಾನ- AAP ಪ್ರಸ್ತಾಪ
ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸವೇ ಮೂಲಕ ದೆಹಲಿಗೆ ಸರಕು ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಹರಿಯಾಣದ ಸಿರ್ಸಾ ಮತ್ತು ಉತ್ತರ ಪ್ರದೇಶದ ಸೂರಜ್‌ಪುರ (ಪರಿಚೌಕ್) ಮೂಲಕ ಪ್ರಯಾಣಿಸಲು ಸಹ ಅನುಮತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಚಲೋ ರೈತರ ಮೇಲೆ ಅಶ್ರುವಾಯು ಪ್ರಯೋಗ – ಹಲವರು ವಶಕ್ಕೆ
ಲಕ್ನೋ: ಸಂಭ್ರಮದಿಂದ ಕೂಡಿರಬೇಕಾಗಿದ್ದ ಮದುವೆ ಮನೆಯಲ್ಲಿ ರಕ್ತ ಹರಿದಿರುವ ಘಟನೆಯೊಂದು ನಡೆದಿದೆ. ಮದುವೆಗೆ ಬಂದ ಅಥಿತಿಗಳ ಮೇಲೆ ಮುಸುರೆ ತಟ್ಟೆಗಳು ಬಿತ್ತು ಎಂದು ವೈಟರ್‌ನನ್ನೇ (Waiter) ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್ನಲ್ಲಿ (Ghaziabad) ನಡೆದಿದೆ.
ಅಂಕುರ್ ವಿಹಾರ್ ಸಿಜಿಎಸ್ ವಾಟಿಕಾದಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದ ಪಂಕಜ್ ಹತ್ಯೆಯಾದ ವ್ಯಕ್ತಿ. ನವೆಂಬರ್ 17ರಂದು ಮದುವೆ ಸಮಾರಂಭವೊಂದರಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದಾಗ ಮುಸುರೆ ತಟ್ಟೆಗಳು ಅತಿಥಿಗಳಾಗಿ ಆಗಮಿಸಿದ್ದ ರಿಷಬ್ ಹಾಗೂ ಆತನ ಇಬ್ಬರು ಸ್ನೇಹಿತರ ಮೇಲೆ ಬಿದ್ದಿತ್ತು.
ಕೊಲೆ ಬಳಿಕ ಸಿಕ್ಕಿ ಬೀಳುವ ಭಯದಲ್ಲಿ ರಿಷಬ್ ಹಾಗೂ ಆತನ ಸ್ನೇಹಿತರಾದ ಮನೋಜ್ ಹಾಗೂ ಅಮಿತ್ ಪಂಕಜ್‌ನ ಶವವನ್ನು ಹತ್ತಿರದ ಕಾಡಿಗೆ ಕೊಂಡುಹೋಗಿ ಅಲ್ಲಿ ಬಚ್ಚಿಟ್ಟಿದಾರೆ. ಘಟನೆ ನಡೆದ ಒಂದು ದಿನದ ಬಳಿಕ ಪೊಲೀಸರು ಪಂಕಜ್‌ನ ಶವವನ್ನು ಕಾಡಿನಿಂದ ವಶಪಡಿಸಿಕೊಂಡಿದ್ದಾರೆ.
ಲಕ್ನೋ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್ನಲ್ಲಿ (Ghaziabad) ನಡೆದಿದೆ.
ಮೃತ ವ್ಯಕ್ತಿಯನ್ನು ನಾತು ಅಕಾ ಅಫ್ಜಲ್ ಎಂದು ಗುರುತಿಸಲಾಗಿದೆ. ದೀಪಾವಳಿ ಆಚರಣೆ ವೇಳೆ ಆತನ ಮೇಲೆ ಪಟಾಕಿ ಹಚ್ಚಿ ಎಸೆಯಲಾಗಿದೆ. ವ್ಯಕ್ತಿ ಪಟಾಕಿ ಸಿಡಿದ ಶಬ್ದದಿಂದ ಆತಂಕಕ್ಕೊಳಗಾಗಿ ಕುಸಿದು ಬಿದ್ದಿದ್ದಾನೆ. ಬಳಿಕ ಅಲ್ಲಿಯೇ ಸಾವಿಗೀಡಾಗಿದ್ದಾನೆ. ಇದನ್ನೂ ಓದಿ: ಮದುವೆಯಾಗಿ 3 ವರ್ಷವಾದ್ರೂ ಮಕ್ಕಳಾಗಿಲ್ಲ ಅಂತ ಪತ್ನಿಯ ಹತ್ಯೆ?
ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೆರೆಯಾದ ವೀಡಿಯೋದಲ್ಲಿ ಇಬ್ಬರು ಮತ್ತೊಂದು ಗುಂಪಿನ ಜನರೊಂದಿಗೆ ಮಾತನಾಡಿ, ಅವರು ಹೊರಡಲು ತಿರುಗಿದಾಗ ಇದ್ದಕ್ಕಿದ್ದಂತೆ ಒಬ್ಬರ ಮೇಲೆ ಪಟಾಕಿ ಹಚ್ಚಿ ಎಸೆದಿರುವುದು ಸೆರೆಯಾಗಿದೆ. ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆತನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಲಕ್ನೋ: ದರೋಡೆ (Robbery) ಮಾತ್ರವಲ್ಲದೇ ವೃದ್ಧ ದಂಪತಿಯ ಕೊಲೆ (Murder) ಪ್ರಕರಣದ ಮಾಸ್ಟರ್ ಮೈಂಡ್ 12 ವರ್ಷದ ಬಾಲಕ (Boy) ಸೇರಿದಂತೆ ಇನ್ನಿಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್ನಲ್ಲಿ (Ghaziabad) ನಡೆದಿದೆ.
12 ವರ್ಷದ ಬಾಲಕನೊಬ್ಬ ವೃದ್ಧ ದಂಪತಿ ಕೊಲೆಯ ಮಾಸ್ಟರ್ ಮೈಂಡ್ ಆಗಿದ್ದು, ಆತನೊಂದಿಗೆ ಇನ್ನಿಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವರದಿಗಳ ಪ್ರಕಾರ ನವೆಂಬರ್ 22 ರಂದು ವೃದ್ಧ ದಂಪತಿಯಾದ ಇಬ್ರಾಹಿಂ ಹಾಗೂ ಪತ್ನಿ ಹಜ್ರಾ ಶವಗಳು ತಮ್ಮ ಮನೆಯಲ್ಲಿ ಪತ್ತೆಯಾಗಿತ್ತು. ಇಬ್ಬರ ಕುತ್ತಿಗೆಗೆ ಬಟ್ಟೆ ಬಿಗಿದು ಕೊಂದಿರುವುದು ಕಂಡುಬಂದಿತ್ತು. ಇದನ್ನೂ ಓದಿ: ಬಲವಂತದ ಮತಾಂತರ ಆರೋಪ – ಕ್ರಿಸ್ಮಸ್ ಆಚರಣೆ ವೇಳೆ ಗುಂಪು ದಾಳಿ
ವರದಿಗಳ ಪ್ರಕಾರ ಬಾಲಕ ವೃದ್ಧ ದಂಪತಿಗೆ ಪರಿಚಿತನಾಗಿದ್ದ. ಬಾಲಕ ಇಬ್ರಾಹಿಂ ಅವರ ಬಳಿ ಹೆಚ್ಚು ಹಣವಿದೆ ಎಂದು ಭಾವಿಸಿ, ತನ್ನೊಂದಿಗೆ ಇನ್ನೂ ಮೂವರನ್ನು ಒಟ್ಟುಗೂಡಿಸಿ ಅವರ ಮನೆಯನ್ನು ಲೂಟಿಗೆ ಯತ್ನಿಸಿದ್ದ. ಆದರೆ ದರೋಡೆ ವೇಳೆ ದಂಪತಿಯ ಕೊಲೆ ನಡೆದಿದೆ.
ಇದೀಗ ಪೊಲೀಸರು ಕೊಲೆ ಮಾಸ್ಟರ್ ಮೈಂಡ್ ಬಾಲಕನೊಂದಿಗೆ ಇನ್ನಿಬ್ಬರು ಆರೋಪಿಗಳಾದ ಮಂಜೇಶ್ ಹಾಗೂ ಶಿವಂನನ್ನು ಬಂಧಿಸಿದ್ದಾರೆ. 4ನೇ ಆರೋಪಿ ಸಂದೀಪ್ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳಿಂದ 12 ಸಾವಿರ ರೂ. ನಗದು, 1 ಮೊಬೈಲ್ ಫೋನ್ ಹಾಗೂ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಾಜಿಯಾಬಾದ್ ಇರಿಯ ಪೊಲೀಸ್ ಇರಾಜ್ ರಾಜಾ ತಿಳಿಸಿದ್ದಾರೆ. ಇದನ್ನೂ ಓದಿ: ಶೂಟಿಂಗ್ ಸೆಟ್‌ನಲ್ಲಿ ತುನೀಶಾ ಆತ್ಮಹತ್ಯೆ – ಸಹ ನಟ ಶೀಜಾನ್ ಬಂಧನ
Live Tv
[brid partner=56869869 player=32851 video=960834 autoplay=true]