Tag: Ghatprabha River

  • ಮೈದುಂಬಿ ಹರಿಯುತ್ತಿರುವ ಘಟಪ್ರಭಾ – ಮುದೋಳ್‌ನ ಮಿರ್ಜಿ ಗ್ರಾಮ ಸಂಪೂರ್ಣ ಜಲಾವೃತ

    ಮೈದುಂಬಿ ಹರಿಯುತ್ತಿರುವ ಘಟಪ್ರಭಾ – ಮುದೋಳ್‌ನ ಮಿರ್ಜಿ ಗ್ರಾಮ ಸಂಪೂರ್ಣ ಜಲಾವೃತ

    ಬಾಗಲಕೋಟೆ: ಜಿಲ್ಲೆಯ ಮುಧೋಳ್ (Mudol) ತಾಲೂಕಿನ ಮಿರ್ಜಿ ಹಾಗೂ ಚನಾಳ್ ಗ್ರಾಮದಲ್ಲಿ ಘಟಪ್ರಭಾ ನದಿ (Ghatprabha River) ಮೈದುಂಬಿ ಹರಿಯುತ್ತಿದ್ದು, ಎರಡು ಗ್ರಾಮಗಳಲ್ಲೂ ಪ್ರವಾಹದ (Flood) ಪ್ರರಿಸ್ಥಿತಿ ಎದುರಾಗಿದೆ.

    ಮಿರ್ಜಿ ಗ್ರಾಮದ 25ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಪರಿಣಾಮ ನೂರಕ್ಕೂ ಹೆಚ್ಚು ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇದರ ನಡುವೆಯೇ ಜನ ಮನೆಯಲ್ಲಿದ್ದ ದವಸ ಧಾನ್ಯಗಳನ್ನು ರಕ್ಷಣೆಗೆ ಪರದಾಡುತ್ತಿದ್ದಾರೆ. ದಿನಬಳಕೆಯ ವಸ್ತುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಸುರಕ್ಷಿತ ಸ್ಥಳಗಳಿಗೆ ಹೋಗುತ್ತಿದ್ದಾರೆ.


    ಮಿರ್ಜಿ ಗ್ರಾಮಸ್ಥರಿಗೆ 2019 ರಿಂದಲೂ ಘಟಪ್ರಭಾ ನದಿಯ ಪ್ರವಾಹದ ಗೋಳು ಎದುರಾಗಿದೆ. ಗ್ರಾಮವನ್ನು ಶಾಶ್ವತವಾಗಿ ಸ್ಥಳಾಂತರ ಮಾಡುವಂತೆ ಜನ ಅಂದಿನಿಂದಲೂ ಮನವಿ ಮಾಡುತ್ತಿದ್ದಾರೆ. ಈ ಕೂಗಿಗೆ ಈವರೆಗೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಜನ ಆಕ್ರೋಶ ಹೊರಹಾಕಿದ್ದಾರೆ.

  • ಘಟಪ್ರಭಾ ನದಿಗೆ 28,791ಕ್ಯೂಸೆಕ್ ನೀರಿನ ಒಳಹರಿವು – ಮತ್ತೊಂದು ಸೇತುವೆ ಮುಳುಗಡೆ

    ಘಟಪ್ರಭಾ ನದಿಗೆ 28,791ಕ್ಯೂಸೆಕ್ ನೀರಿನ ಒಳಹರಿವು – ಮತ್ತೊಂದು ಸೇತುವೆ ಮುಳುಗಡೆ

    ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಘಟಪ್ರಭಾ ನದಿಗೆ 28,791ಕ್ಯೂಸೆಕ್ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಕಮಲದಿನ್ನಿ ಗ್ರಾಮದ ಬಳಿಯಿರುವ ಸೇತುವೆ ಮುಳುಗಡೆ ಆಗಿದೆ.

    ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿರುವ ಮತ್ತೊಂದು ಸೇತುವೆ ಮುಳುಗಡೆ ಆಗಿದೆ. ನಿರಂತರ ಮಳೆಗೆ ಘಟಪ್ರಭಾ ನದಿಗೆ 28,791 ಕ್ಯೂಸೆಕ್ ನೀರಿನ ಒಳಹರಿವು ಪ್ರಮಾಣ ಹೆಚ್ಚಳವಾಗಿದೆ. ಆದರೆ ಮುಳುಗಡೆಯಾದ ಸೇತುವೆ ಮೇಲೆ ಜನರು ಸಂಚಾರ ನಡೆಸುತ್ತಿದ್ದಾರೆ. ಇನ್ನೂ ಕೆಲವರು ಅಪಾಯವನ್ನು ಲೆಕ್ಕಿಸದೇ ಸೇತುವೆ ಬಳಿ ಬೈಕ್‍ಗಳನ್ನು ತೊಳೆಯುತ್ತಿದ್ದರೆ, ಪೋಷಕರು ಪುಟ್ಟಪುಟ್ಟ ಮಕ್ಕಳನ್ನು ಸೇತುವೆ ಬಳಿ ಕರೆತಂದಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ಇಲಿ ಪಾಷಾಣ ಸೇವಿಸಿ ಗೃಹಿಣಿ ಆತ್ಮಹತ್ಯೆ

    ಈಗಾಗಲೇ ಮೂಡಲಗಿ ತಾಲೂಕಿನಲ್ಲಿ ನಾಲ್ಕು ಕೆಳಹಂತದ ಸೇತುವೆ ಮುಳುಗಡೆ ಆಗಿದ್ದು, ಅವರಾದಿ – ಮೂಡಲಗಿ, ಅವರಾದಿ – ಮಹಾಲಿಂಗಪುರ, ಸುಣಧೋಳಿ – ಮೂಡಲಗಿ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿದೆ. ಸೇತುವೆ ಮುಳುಗಡೆಯಾಗಿ ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಮುಳುಗಡೆಯಾದ ಸೇತುವೆ ಮೇಲೆ ಜನಸಂಚಾರ ನಿಷೇಧಿಸಲು ಸಾರ್ವಜನಿಕರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಬೆಳಗಾವಿಯ 13 ಸೇತುವೆಗಳು ಜಲಾವೃತ – ಮತ್ತೆ ಪ್ರವಾಹ ಭೀತಿ

    Live Tv
    [brid partner=56869869 player=32851 video=960834 autoplay=true]