Tag: ghajini 2

  • ‘ಘಜಿನಿ 2’ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ‘ಸಿಕಂದರ್’ ಡೈರೆಕ್ಟರ್

    ‘ಘಜಿನಿ 2’ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ‘ಸಿಕಂದರ್’ ಡೈರೆಕ್ಟರ್

    ಸೌತ್‌ನ ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ (A.R. Murugadoss) ಸದ್ಯ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಆಮೀರ್ ಖಾನ್ ನಟನೆಯ ‘ಘಜಿನಿ’ ಚಿತ್ರದ ಸೀಕ್ವೆಲ್ ಬರಲಿದೆಯಾ? ಎಂಬುದಕ್ಕೆ ನಿರ್ದೇಶಕ ಸ್ಪಷ್ಟನೆ ನೀಡಿದ್ದಾರೆ. ‘ಘಜಿನಿ’ ಪಾರ್ಟ್ 2 ಬರೋದಾಗಿ ಅವರು ತಿಳಿಸಿದ್ದಾರೆ.

    ಆಮೀರ್ ಖಾನ್ (Aamir Khan) ಸದ್ಯ ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಸೆಟ್‌ಗೆ ಇತ್ತೀಚೆಗೆ ಮುರುಗದಾಸ್ ಭೇಟಿ ನೀಡಿರೋದಾಗಿ ತಿಳಿಸಿದ್ದಾರೆ. ಈ ವೇಳೆ, ‘ಘಜಿನಿ 2’ (Ghajini 2) ಬಗ್ಗೆ ಮಾತುಕತೆ ನಡೆಸಿದ್ದೇವೆ. ನಮ್ಮ ಬಳಿ ಕೆಲವು ಐಡಿಯಾಗಳಿವೆ. ಮತ್ತೊಮ್ಮೆ ಮಾತುಕತೆ ನಡೆಸೋದಾಗಿ ಹೇಳಿದ್ದಾರೆ. ‘ಘಜಿನಿ 2’ ಬರಲಿದೆ ಎಂದು ಅಧಿಕೃತವಾಗಿ ನಿರ್ದೇಶಕ ತಿಳಿಸಿದ್ದಾರೆ. ಇದನ್ನೂ ಓದಿ:ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡುತ್ತೇನೆ: ಬ್ರೇಕಪ್‌ ಬಗ್ಗೆ ತಮನ್ನಾ ಮಾತು

    ಇನ್ನೂ 2008ರಲ್ಲಿ ‘ಘಜಿನಿ’ (Ghajini) ಸಿನಿಮಾ ರಿಲೀಸ್ ಆಗಿತ್ತು. ಆಮೀರ್ ಖಾನ್ ಮತ್ತು ಆಸಿನ್ ಜೋಡಿಯಾಗಿ ನಟಿಸಿದ್ದರು. ಈ ಸಿನಿಮಾ ಸಕ್ಸಸ್ ಕಂಡಿತ್ತು. ಇದೀಗ ಹಲವು ವರ್ಷಗಳ ನಂತರ ಇದರ ಸಿಕ್ವೇಲ್ ತರಲು ಪ್ಲ್ಯಾನ್ ನಡೆಯುತ್ತಿದೆ.‌ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದ್ದು, ಈ ಸುದ್ದಿ ತಿಳಿದು ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

  • Ghajini 2: ಅಲ್ಲು ಅರವಿಂದ್‌ ನಿರ್ಮಾಣದಲ್ಲಿ ಆಮೀರ್ ಖಾನ್

    Ghajini 2: ಅಲ್ಲು ಅರವಿಂದ್‌ ನಿರ್ಮಾಣದಲ್ಲಿ ಆಮೀರ್ ಖಾನ್

    ‘ಲಾಲ್ ಸಿಂಗ್ ಚಡ್ಡಾ’ (Lal Singh Chadha) ಸಿನಿಮಾದ ಸೋಲಿನ ನಂತರ ಆಮೀರ್ ಖಾನ್ (Aamir Khan) ಬ್ರೇಕ್ ತೆಗೆದುಕೊಂಡಿದ್ದರು. ಈ ಸಿನಿಮಾದ ಸೋಲು ಅವರನ್ನ ನಟನೆಯಿಂದ ದೂರಯುಳಿವಂತೆ ಮಾಡಿತ್ತು. ಇದೀಗ ಮತ್ತೆ ಕಂಬ್ಯಾಕ್ ಆಗುವ ಆಲೋಚನೆಯಲ್ಲಿದ್ದಾರೆ. ಸೂಪರ್ ಡೂಪರ್ ಹಿಟ್ ‘ಗಜನಿ’ ಸೀಕ್ವೆಲ್ ಮಾಡಲು ಆಮೀರ್ ಮುಂದಾಗಿದ್ದಾರೆ.

    2005ರಲ್ಲಿ ಬಂದ ತಮಿಳಿನ ‘ಗಜನಿ’ (Ghajini) ಚಿತ್ರವನ್ನು ಅದೇ ಹೆಸರಲ್ಲಿ ಹಿಂದಿಗೆ 2008ರಲ್ಲಿ ರಿಮೇಕ್ ಮಾಡಲಾಯಿತು. ತಮಿಳಿನಲ್ಲಿ (Tamil) ಸೂರ್ಯ (Suriya)  ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ಆಮಿರ್ ಖಾನ್ ಮಾಡಿದರು. ಈಗ ಚಿತ್ರಕ್ಕೆ ಈಗ ಸೀಕ್ವೆಲ್ ತರಲು ಸಿದ್ಧತೆ ನಡೆದಿದೆ. ಆಮಿರ್ ಖಾನ್ ಅವರು ಸೀಕ್ವೆಲ್‌ನಲ್ಲಿ ನಟಿಸುತ್ತಿದ್ದು, ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಆರ್.ಎಲ್ ಜಾಲಪ್ಪ ವಿರುದ್ಧ ಸ್ಪರ್ಧಿಸಿ ಸೋತಿದ್ದರು ಹಿರಿಯ ನಟ ಶ್ರೀನಿವಾಸ್ ಮೂರ್ತಿ

    ತಮಿಳಿನ ‘ಗಜನಿ’ (Ghajini)  ಚಿತ್ರವನ್ನು ನಿರ್ಮಾಣ ಮಾಡಿದ್ದು ಸೇಲಮ್ ಚಂದ್ರಶೇಖರನ್. ಅವರು ಈಗ ನಮ್ಮೊಂದಿಗೆ ಇಲ್ಲ. 2021ರಲ್ಲಿ ಅವರು ತೀರಿಕೊಂಡರು. ಈ ಚಿತ್ರಕ್ಕೆ ಸೀಕ್ವೆಲ್ ಮಾಡಲು ಅಲ್ಲು ಅರವಿಂದ್ ಮುಂದಾಗಿದ್ದಾರೆ. ಈ ವಿಷ್ಯವಾಗಿಯೇ ಆಮೀರ್ ಅವರು ಪದೇ ಪದೇ ಹೈದರಾಬಾದ್‌ಗೆ ಭೇಟಿ ನೀಡ್ತಿದ್ದಾರೆ. ಕಥೆಯ ಬಗ್ಗೆ ತಂಡದ ಜೊತೆ ಆಮೀರ್ ಚರ್ಚೆ ಮಾಡ್ತಿದ್ದಾರೆ. ಹಿಂದಿಯ ‘ಗಜನಿ’ ಸಿನಿಮಾದಲ್ಲಿ ಆಮಿರ್ ಖಾನ್ (Aamir Khan) ಅವರು ಸಂಜಯ್ ಸಿಂಘಾನಿಯಾ ಆಗಿ ಕಾಣಿಸಿಕೊಂಡಿದ್ದರು. ಈಗ ಚಿತ್ರದ ಕಥೆ ಮುಂದುವರಿಯಲಿದೆ. ಈ ರೀತಿಯಲ್ಲಿ ಕಥೆ ಸಿದ್ಧಪಡಿಸಲಾಗಿದೆ ಎನ್ನಲಾಗುತ್ತಿದೆ.

    ಅಲ್ಲು ಅರವಿಂದ್ ಅವರು ಖ್ಯಾತ ನಿರ್ಮಾಪಕರಲ್ಲಿ ಒಬ್ಬರು. ಈಗಾಗಲೇ ಹಲವು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ಈಗ ಅವರು ‘ಗಜನಿ 2’ ಚಿತ್ರವನ್ನು ನಿರ್ಮಿಸಲು ಹೊರಟಿದ್ದಾರೆ ಎನ್ನಲಾಗುತ್ತಿದೆ. ನಟ ಆಮೀರ್‌ಗೂ ಗಜನಿ ಪಾರ್ಟ್ 2 ಕಥೆ ಸಾಕಷ್ಟು ಇಷ್ಟ ಆಗಿದೆಯಂತೆ. ಈ ಚಿತ್ರದ ಭಾಗವಾಗಲು ಓಕೆ ಎಂದಿದ್ದಾರೆ. ಸದ್ಯ ಈ ಬಗ್ಗೆ ಅಂತೆ- ಕಂತೆ ಸುದ್ದಿ ಹರಿದಾಡುತ್ತಿದೆ. ಚಿತ್ರತಂಡ ಅಧಿಕೃತ ಅಪ್‌ಡೇಟ್ ನೀಡುವವೆರೆಗೂ ಕಾದು ನೋಡಬೇಕಿದೆ.