Tag: GH Thippareddy

  • ಬರದನಾಡಲ್ಲಿ ಗ್ರಾಮೀಣ ರಸ್ತೆ, ಅಂತರ್ಜಲ ಮಟ್ಟ ಹೆಚ್ಚಿಸಲು ಒತ್ತು: ತಿಪ್ಪಾರೆಡ್ಡಿ

    ಬರದನಾಡಲ್ಲಿ ಗ್ರಾಮೀಣ ರಸ್ತೆ, ಅಂತರ್ಜಲ ಮಟ್ಟ ಹೆಚ್ಚಿಸಲು ಒತ್ತು: ತಿಪ್ಪಾರೆಡ್ಡಿ

    ಚಿತ್ರದುರ್ಗ: ಗ್ರಾಮೀಣ ಭಾಗದ ರಸ್ತೆ ಮತ್ತು ಅಂತರ್ಜಲದ ಮಟ್ಟ ಹೆಚ್ಚಿಸುವ ಕೆಲಸಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಚಿತ್ರದುರ್ಗ ಕ್ಷೇತ್ರದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

    ಚಿತ್ರದುರ್ಗ ತಾಲೂಕಿನ ಪ್ರಧಾನ ಮಂತ್ರಿ ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯಡಿ ತೋಪುರಮಾಳಿಗೆಯಿಂದ ಎಣ್ಣೆಗೆರೆ ಮುಖ್ಯರಸ್ತೆಯ ಕಾಮಗಾರಿಗೆ ಶಾಸಕ ತಿಪ್ಪಾರೆಡ್ಡಿ ಚಾಲನೆ ನೀಡಿ ಮಾತನಾಡಿದರು. ಈ ವೇಳೆ ಅವರು, ತೋಪರಮಾಳಿಗೆಯಿಂದ ಎಣ್ಣೆಗೆರೆವರೆಗೆ 35 ಲಕ್ಷ ವೆಚ್ಚದಲ್ಲಿ ರಸ್ತೆ ಮಾಡಲಾಗುತ್ತಿದೆ. ರಸ್ತೆ ಕಾಮಗಾರಿ ಗುಣಮಟ್ಟದಿಂದ ಮಾಡಲು ಸೂಚಿಸಿದ್ದೇನೆ. ಈ ಭಾಗದಲ್ಲಿ 4 ಕೋಟಿ ವೆಚ್ಚದಲ್ಲಿ 4 ಬೃಹತ್ ಚಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸ್ಲಂ ಬೋರ್ಡ್‍ನಿಂದ ಕೈಗೆತ್ತಿಕೊಂಡಿರುವ 50 ಮನೆಗಳನ್ನು ಜ.30 ರೊಳಗೆ ಪೂರ್ಣಗೊಳಿಸಬೇಕು: ಗೋಪಾಲಯ್ಯ

    ನಮ್ಮ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ರಸ್ತೆಗಳ ಶಾಲೆಗಳು, ಅಂತರ್ಜಲ ಹೆಚ್ಚಿಸುವ ಕಡೆಗೆ ಹೆಚ್ಚಿನ ಗಮನ ನೀಡಿದ್ದೇನೆ. 75 ಭಾಗ ಹಳ್ಳಿಯಲ್ಲಿ ಸಿ.ಸಿ.ರಸ್ತೆಗಳ ನಿರ್ಮಾಣ ಮಾಡಲಾಗಿದೆ. ಅಲ್ಪ ಸ್ವಲ್ಪ ಹಳ್ಳಿಯಲ್ಲಿ ಮಾತ್ರ ರಸ್ತೆ ಮಾಡಬೇಕಿದೆ. ಜನರಿಗೆ ಅಂತರ್ಜಲ ವೃದ್ಧಿಯಾದರೆ ಬೊರವೆಲ್ ನಲ್ಲಿ ನೀರಿನ ಮಟ್ಟ ಹೆಚ್ಚಿ ಉತ್ತಮ ಮಳೆ ಬೆಳೆಯಾಗಬಹುದು. ಚೆಕ್ ಡ್ಯಾಂಗಳು ಎಲ್ಲ ಕಡೆಗಳಲ್ಲಿ ತುಂಬಿದ್ದು, ಸಂತಸ ಉಂಟು ಮಾಡಿದೆ.

    ಕ್ಷೇತ್ರದಲ್ಲಿ ಶಾಲೆಗಳ ಅಭಿವೃದ್ಧಿಗೂ ಅನುದಾನ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿವೆ. ಖಾಸಗಿ ಶಾಲೆಗಳಿಗಿಂತ ಅಚ್ಚುಕಟ್ಟಾಗಿ ಕಟ್ಟಡ ನಿರ್ಮಿಸುವ ಮೂಲಕ ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆ ತರುವ ಕೆಲಸ ಮಾಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಲಕ್ಷಾಂತರ ಹಣ ಕಟ್ಟಿ ಖಾಸಗಿ ಶಾಲೆಗೆ ಕಳಿಸುವ ಬದಲು ಉತ್ತಮವಾದ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸಬೇಕು ಎಂಬ ಭಾವನೆಯಲ್ಲಿ ಪೋಷಕರು ಇದ್ದಾರೆ ಎಂದು ತಿಳಿಸಿದರು.

    ಕೋವಿಡ್ ಮತ್ತು ಓಮಿಕ್ರಾನ್ ಬಗ್ಗೆ ಎಚ್ಚರ ಇರಲಿ. ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಈಗ ನಮ್ಮ ಪ್ರಾಣ ತಮ್ಮ ಕೈಯಲ್ಲಿದೆ. ಎಲ್ಲರೂ ಸಹ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಿ ಎಂದು ಸಂದೇಶ ಕೊಟ್ಟರು. ಎಲ್ಲಾರಿಗೂ ಸಹ ತನ್ನದೇ ಆದ ಕುಟುಂಬಗಳಿವೆ. ನಮಗಾಗಿ ನಮ್ಮವರಿಗಾಗಿ ಎಚ್ಚರಿಕೆ ವಹಿಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ತೆಲುಗು ಭಾಷೆಯನ್ನು ನೀವು ಅನುವಾದಿಸಿದರೆ ಸೆಕ್ಸಿಸ್ಟ್ ಆಗಿ ಕಾಣುತ್ತೆ: ನಾಗಾರ್ಜುನ ಅಕ್ಕಿನೇನಿ

    ಈ ಸಂದರ್ಭದಲ್ಲಿ ಎಂಜಿನಿಯರ್ ನಾಗರಾಜು, ಗುತ್ತಿಗೆದಾರ ಎಟಿಎಸ್ ತಿಪ್ಪೇಸ್ವಾಮಿ, ಗ್ರಾಮ ಪಂಚಾಯತಿ ಅಧ್ಯಕ್ಷ ಬೋಸಣ್ಣ, ಸದಸ್ಯರಾದ ಓಬಳೇಶ್, ವೆಂಕಟೇಶ್, ಮುಖಂಡರಾದ ನಾಗೇಂದ್ರ ರೆಡ್ಡಿ, ಸುರೇಶ್ ರೆಡ್ಡಿ, ಶಶಿಧರ್, ಸುರೇಶ್, ರಾಜೇಶ್, ಮಾರುತಿ ಗ್ರಾಮಸ್ಥರು ಇದ್ದರು.

  • ಬಿಟ್ ಕಾಯಿನ್ ವಿಚಾರದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗುವುದು ಶತಸಿದ್ಧ: ತಿಪ್ಪಾರೆಡ್ಡಿ

    ಬಿಟ್ ಕಾಯಿನ್ ವಿಚಾರದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗುವುದು ಶತಸಿದ್ಧ: ತಿಪ್ಪಾರೆಡ್ಡಿ

    ಚಿತ್ರದುರ್ಗ: ಬಿಟ್ ಕಾಯಿನ್ ವಿಚಾರದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗುವುದು ಶತಸಿದ್ದವೆಂದು ಚಿತ್ರದುರ್ಗ ಬಿಜೆಪಿ ಹಿರಿಯ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಹೇಳಿದ್ದಾರೆ.

    ಚಿತ್ರದುರ್ಗದ ಖಾಸಗಿ ಹೋಟೆಲ್ ನಲ್ಲಿ ಮಾದ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ರಾಜ್ಯದಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ವಿಚಾರದಲ್ಲಿ ವಿರೋಧ ಪಕ್ಷದವರು ಸುಮ್ನೆ ಇದ್ದರೆ, ರಾಜ್ಯದಲ್ಲಿ ವಿರೋಧ ಪಕ್ಷವಿಲ್ಲ ಎಂಬ ಭಾವನೆ ಜನರಲ್ಲಿ ಬರುತ್ತದೆ ಎಂಬ ಉದ್ದೇಶದಿಂದ ಮಾತನಾಡುತ್ತಿದ್ದಾರೆ. ಇದನ್ನೂ ಓದಿ: ಹೆಚ್‍ಡಿಡಿ ಕುಟುಂಬದವರಿಗೆ ಟಿಕೆಟ್ ಕೊಟ್ಟರೆ ನಮ್ಮ ಅಭ್ಯರ್ಥಿ ಗೆಲ್ಲುವುದರಲ್ಲಿ ಅನುಮಾನವಿಲ್ಲ: ಗೋಪಾಲಸ್ವಾಮಿ

    ಅಧಿಕಾರ ಇರುವ ಸರ್ಕಾರವನ್ನು ಎಚ್ಚರಿಸುವುದು ವಿರೋಧ ಪಕ್ಷದ ಕೆಲಸ ಆದರೆ ಈ ವಿಪಕ್ಷವು ಜನರ ಗಮನ ಸೆಳೆಯುವುದಕ್ಕೆ ಈ ರೀತಿ ಕೆಲಸ ಮಾಡುತ್ತಿದೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಹಳ ಅನುಭವಿ ರಾಜಕಾರಣಿಯಾಗಿದ್ದು, ಅವರ ತಂದೆಯವರಾದ ಎಸ್ ಆರ್.ಬೊಮ್ಮಾಯಿ ಕಾಲದಿಂದಲೂ ಅವರು ಉತ್ತಮ ಆಡಳಿತಗಾರ ಎನ್ನುವುದನ್ನು ನಾವು ನೋಡಿದ್ದೇವೆ. ಇದನ್ನೂ ಓದಿ: ಪ್ಯಾರಾ ಒಲಿಂಪಿಕ್ಸ್ ಆಟಗಾರ ಸುಹಾಸ್ ಯತೀರಾಜ್‍ಗೆ ಬಂಪರ್ – ವಿಶೇಷ ಗೌರವಕ್ಕೆ ಭಾಜನರಾದ ಕನ್ನಡಿಗ

    ಸರ್ಕಾರ ಹಾಗೂ ಬೊಮ್ಮಾಯಿ ಅವರಿಗೆ ಜನರಲ್ಲಿ ಕೆಟ್ಟ ಭಾವನೆ ಬರುವ ನಿಟ್ಟಿನಲ್ಲಿ ವಿಪಕ್ಷ ಈ ಕೆಲಸಮಾಡುತ್ತಿದೆ. ನಮ್ಮ ಬಳಿ ಮಾಹಿತಿ ಇದೆ ಅಂತ ಪದೇ ಪದೇ ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ಹೀಗಾಗಿ ಕನಿಷ್ಟಪಕ್ಷ ಅವರ ಬಳಿ ಮಾಹಿತಿ ಇದ್ದರೆ ಅದನ್ನು ಬಹಿರಂಗಪಡಿಸಲಿ ಅಂತ ಸವಾಲು ಹಾಕಿದರು. ಹಾಗೆಯೇ ನಾನು ಆರು ಬಾರಿ ಗೆದ್ದು ಹಿರಿಯ ಶಾಸಕನಾಗಿದ್ದೇನೆ. ಹೀಗಾಗಿ ಏನೂ ಆಧಾರ ಇಲ್ಲದೇ ವಿರೋಧ ಪಕ್ಷದವರು ಹೇಳಿದ ರೀತಿ ಆಡಳಿತ ನಡೆಸುವವರು ಮಾತನಾಡಲು ಆಗಲ್ಲ. ಇದನ್ನೂ ಓದಿ: ಬೊಮ್ಮಾಯಿ ಗೃಹಮಂತ್ರಿಯಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ: ಸುರ್ಜೆವಾಲಾ

    basavaraj bommai

    ರಾಜ್ಯ ರಾಜಕಾರಣದಲ್ಲಿ ಭಾರೀ ಅಲೆ ಎಬ್ಬಿಸಿರುವ ಈ ಬಿಟ್ ಕಾಯಿನ್ ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಸುವುದಕ್ಕೆ ಸಿಎಂ ಬೊಮ್ಮಾಯಿ ಸಮರ್ಥರಿದ್ದಾರೆ. ಬಿಟ್ ಕಾಯಿನ್ ವಿಚಾರದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗುವುದು ಶತಸಿದ್ಧ ಎನಿಸಿದ್ದು, ಯಾರೇ ಆಗಿರಲಿ ತಪ್ಪು ಮಾಡಿದವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳು ಕೂಡ ಭಾಗಿಯಾಗಿದ್ದಾರೆಂಬ ಮಾತುಗಳು ಕೇಳಿ ಬಂದಿವೆ. ಅದರ ಬಗ್ಗೆ ತನಿಖೆ ಆಗದೇ, ಕಾಂಗ್ರೆಸ್‍ನವರಿಂದ ಈ ರೀತಿ ಟೀಕೆ ಸರಿಯಲ್ಲ. ಜೊತೆಗೆ ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಯಾವುದೇ ಪಕ್ಷದವರಾಗಲಿ ಸೂಕ್ತ ಕ್ರಮವಾಗಲಿದೆ. ಆದರೆ ಬಿಟ್ ಕಾಯಿನ್ ವಿಚಾರಕ್ಕೆ ಬೊಮ್ಮಾಯಿ ಅವರ ಬದಲಾವಣೆ ಪ್ರಶ್ನೆ ಕೂಡ ಇಲ್ಲ. ಮುಂಬರುವ 2023 ಚುನಾವಣೆಯಲ್ಲಿ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.