Tag: german

  • ವಿಮಾನದ ಮೇಲೆ ಚಿಗುರಿದ ಪ್ರೀತಿ- ದೈಹಿಕವಾಗಿಯೂ ಸಂಪರ್ಕ ಹೊಂದಿದ್ದೇನೆಂದ ಮಹಿಳೆ

    ವಿಮಾನದ ಮೇಲೆ ಚಿಗುರಿದ ಪ್ರೀತಿ- ದೈಹಿಕವಾಗಿಯೂ ಸಂಪರ್ಕ ಹೊಂದಿದ್ದೇನೆಂದ ಮಹಿಳೆ

    -ವಿಮಾನದ ಮೇಲೆ ಅರಳಿದ ಪ್ರೇಮ್ ಕಹಾನಿ

    ಬರ್ಲಿನ್: ಸುಮಾರು ಐದು ವರ್ಷಗಳಿಂದ ಇತರ ದಂಪತಿಗಳ ರೀತಿ ತಾನು ವಿಮಾನದೊಂದಿಗೆ ಪ್ರಣಯ ಸಂಪರ್ಕ ಹೊಂದಿದ್ದೇನೆ ಎಂದು ಜರ್ಮನಿಯ ಬರ್ಲಿನ್‍ನ 30 ವರ್ಷದ ಮಿಷೆಲ್ ಕೋಬ್ಕೆ ಅಚ್ಚರಿಯ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಇನ್ನೂ ವಿಲಕ್ಷಣವೆಂದರೆ ತನ್ನ ಪ್ರೀತಿ ಕೇವಲ ಭಾವನಾತ್ಮಕವಾದದ್ದಲ್ಲ, ಬದಲಿಗೆ ದೈಹಕವಾದದ್ದು ಸಹ ಎಂದು ಮಿಷೆಲ್ ಹೆಮ್ಮಯಿಂದ ಹೇಳಿದ್ದಾರೆ.

    ಬೋಯಿಂಗ್ 737-800ನ್ನು ‘ಷಾಟ್ಜ್’ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಈ ವಿಮಾನವು ಸೊಗಸಾಗಿ ಹಾಗೂ ಅತ್ಯಂತ ಆಕರ್ಷಕವಾಗಿದೆ. 737-800 ನನಗೆ ತುಂಬಾ ಇಷ್ಟ ಆಕರ್ಷಕ ಹಾಗೂ ಮಾದಕವಾಗಿದೆ. ಅವನನ್ನು ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದೆ. ಇದು ಅತ್ಯಂತ ಸೊಗಸಾದ ಹಾಗೂ ಆಕರ್ಷಕ ವಿಮಾನ ಎಂದು ಮಿಷೆಲ್ ವಿಮಾನವನ್ನು ಹಾಡಿ ಹೊಗಳಿದ್ದಾರೆ.

    https://www.facebook.com/michele.kobke/videos/10212429261360425/

    ಆದರೆ ಇತರ ಯಾವುದೇ ಸಂಬಂಧಗಳಂತೆ ಬೋಯಿಂಗ್ ವಿಮಾನದೊಂದಿಗೆ ಖಾಸಗಿ ಸಮಯವನ್ನು ಕಳೆಯುವುದು ಮಿಷೆಲ್‍ಗೆ ಕಷ್ಟಕರವಾಗಿದೆ. ನಾನು ಅವನೊಂದಿಗೆ ಹಾರಾಟ ನಡೆಸಿದಾಗ ಅಥವಾ ಹ್ಯಾಂಗರ್ ಬಳಿಗೆ ಬಂದಾಗ ಮಾತ್ರ ಅವನ ಹತ್ತಿರ ಹೋಗಿದ್ದೇನೆ. ಅದು ನನ್ನ ಜೀವನದಲ್ಲಿ ಒಮ್ಮೆ ಮಾತ್ರ ಸಂಭವಿಸಿದೆ ಎಂದು ಹೇಳುತ್ತಾರೆ.

    ಈಗ ಮಿಷೆಲ್ ತನ್ನ ಪ್ರೀತಿಗೆ ಹತ್ತಿರವಾಗಲು ಇನ್ನೊಂದು ಮಾರ್ಗವನ್ನು ಕಂಡುಕೊಂಡಿದ್ದು, ಇದೀಗ ಬೋಯಿಂಗ್ 737-800ರ ಫೈಬರ್‍ನ ದೊಡ್ಡ ಮಾದರಿಯನ್ನು ಖರೀದಿಸಿದ್ದಾರೆ. ಇದನ್ನು ಫೈಬರ್‍ನಲ್ಲಿ ತಯಾರಿಸಲಾಗಿದೆ. ಮಿಷೆಲ್ ಫೈಬರ್‍ನಿಂದ ತಯಾರಿಸಿದ ವಿಮಾನದ ಮಾದರಿಯನ್ನು ಯಾವಾಗಲೂ ತನ್ನ ಹತ್ತಿರ ಇಟ್ಟುಕೊಂಡಿರುತ್ತಾರೆ. ನಿದ್ದೆ ಮಾಡುವ ಸಂದರ್ಭದಲ್ಲಿ ಈ ಫೈಬರ್‍ನ ಬೋಯಿಂಗ್‍ನ್ನು ತಬ್ಬಿಕೊಂಡು ಮಲಗುತ್ತಾರೆ.

    ಈಗ ನಾನು ಫೈಬರ್ ಗ್ಲಾಸ್ ನಿಂದ ತಯಾರಿಸಿದ ದೊಡ್ಡ ಮಾದರಿಯನ್ನು ಹೊಂದಿದ್ದೇನೆ. ಹೀಗಾಗಿ ನನ್ನ ಪ್ರೀತಿಯನ್ನು ಸ್ವಲ್ಪ ಮಟ್ಟಿಗೆ ನಿರ್ವಹಿಸುತ್ತೇನೆ. ಮಾರ್ಚ್ 2013ರಲ್ಲಿ ಮೊದಲ ಬಾರಿಗೆ ವಿಮಾನದಲ್ಲಿ ಹಾರಾಟ ನಡೆಸಿದ ನಂತರ ವಿಮಾನಗಳ ಮೇಲೆ ಪ್ರೀತಿ ಅರಳಿತು. ಆದರೆ ಮೇ 2019ರಲ್ಲಿ ಬೋಯಿಂಗ್ 737-800 ಹತ್ತಿದ ನಂತರ ಇವನು ನನ್ನವನೇ ಎಂದುಕೊಂಡು ಪ್ರೀತಿ ಮಾಡಲು ಪ್ರಾರಂಭಿಸಿದೆ ಎಂದು ಮಿಷೆಲ್ ತಮ್ಮ ಪ್ರೀತಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

    ನಾನು ವಿಮಾನ ಹತ್ತಲು ತುಂಬಾ ಉತ್ಸುಕಳಾಗಿದ್ದೇನೆ. ಈ ವೇಳೆಯೇ ನನಗೆ 737-800 ಬೋಯಿಂಗ್ ಮೇಲೆ ಪ್ರೀತಿಯಾಯಿತು. ನಾವು ನಿಜವಾಗಿಯೂ ಮೊದಲ ಬಾರಿಗೆ ಭೇಟಿಯಾಗಿದ್ದು ಮೇ 1, 2019ರಂದು. ನಾನು ಅವನೊಂದಿಗೆ ಕಳೆದ ಪ್ರತಿ ಮಿಲಿಸೆಕೆಂಡ್‍ನ್ನು ಸಹ ಆನಂದಿಸಿದ್ದೇನೆ. ಅವನನ್ನು ನೋಡಿ ನಕ್ಕು ಸುಸ್ತಾಗಿ ನನ್ನ ಕೆನ್ನೆಗಳು ನೋಯುತ್ತವೆ. ಪ್ರಪಂಚದಲ್ಲೇ ಅತ್ಯಂತ ಸಂತೋಷ ಹೊಂದಿದ ಮಹಿಳೆ ನಾನು. ಅವನೊಂದಿಗೆ ಇರುವಾಗ ಸರ್ವಸ್ವವೂ ಇದ್ದಂತೆ ಎಂದು ತಮ್ಮ ಭಾವನೆಗಳನ್ನು ಮಿಚೆಲ್ ವ್ಯಕ್ತಪಡಿಸಿದ್ದಾರೆ.

    ನಿರ್ಜೀವ ವಸ್ತುಗಳ ಮೇಲಿನ ಮಿಷೆಲ್‍ರ ಪ್ರೀತಿಯನ್ನು ‘ಆಬ್ಜೆಕ್ಟೊಫಿಲಿಯಾ’ ಎಂದು ಕರೆಯಲಾಗುತ್ತದೆ. ಇದು ನಿರ್ಜೀವ ವಸ್ತುಗಳ ಮೇಲಿನ ಲೈಂಗಿಕ ಅಥವಾ ಪ್ರಣಯದ ಆಕರ್ಷಣೆಯಾಗಿದೆ.

  • ಮೋದಿ ಅಪ್ಪುಗೆಯ ಬಗ್ಗೆ ಕೊನೆಗೂ ಮೌನ ಮುರಿದ ರಾಹುಲ್ ಗಾಂಧಿ

    ಮೋದಿ ಅಪ್ಪುಗೆಯ ಬಗ್ಗೆ ಕೊನೆಗೂ ಮೌನ ಮುರಿದ ರಾಹುಲ್ ಗಾಂಧಿ

    ಬರ್ಲಿನ್: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರು ಎರಡು ದಿನಗಳ ಜರ್ಮನಿ ಪ್ರವಾಸದಲ್ಲಿದ್ದು, ಈ ವೇಳೆ ಸಂಸತ್ತಿನಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರನ್ನು ಅಪ್ಪಿಕೊಂಡಿದ್ದರ ಬಗ್ಗೆ ಕೊನೆಗೂ ಮಾತನಾಡಿದ್ದಾರೆ.

    ಬುಧವಾರ ಹ್ಯಾಮ್‍ಬರ್ಗ್ ನ ಬುಸೆರೀಯಸ್ ಸಮ್ಮರ್ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬರು ನೀವು ಮೋದಿಯವರನ್ನು ಅಪ್ಪಿಕೊಂಡಿದ್ದೇಕೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ನನ್ನ ಮೇಲೆ ದ್ವೇಷದ ಮಾತುಗಳನ್ನು ಆಡುತ್ತಿದ್ದರು. ಅಂತಹ ಸಂದರ್ಭದಲ್ಲಿ ನಾನು ಪ್ರೀತಿ, ಬಾಂಧವ್ಯವನ್ನು ತೋರಿಸಲು ಅವರ ಬಳಿಗೆ ಹೋಗಿ ಅವರನ್ನು ತಬ್ಬಿಕೊಂಡೆ ಎಂದು ಹೇಳಿದರು.

    ನಾನು ಅವರಿಗೆ ಈ ಜಗತ್ತಿನಲ್ಲಿ ದ್ವೇಷವೊಂದೇ ಇರುವುದಲ್ಲ. ನಾವು ಅಂದುಕೊಳ್ಳುವಷ್ಟು ಪ್ರಪಂಚ ಕೆಟ್ಟದಾಗಿಲ್ಲ. ಎಲ್ಲಾ ಕೆಟ್ಟದಾಗಿದೆ ಎಂದು ಭಾವಿಸುವಂತಿಲ್ಲ ಎಂಬುದನ್ನು ತೋರಿಸಲು ನಾನು ಅವರನ್ನು ಆಲಂಗಿಸಿದೆ. ಅಪ್ಪುಗೆ ವೇಳೆ ಖುದ್ದು ನರೇಂದ್ರ ಮೋದಿಯವರು ಗಲಿಬಿಲಿಗೊಳಗಾಗಿ, ಹಿಂದಕ್ಕೆ ಸರಿಯಲು ಯತ್ನಿಸಿದರೆ ಹೊರತು, ಅವರು ನನ್ನ ಮನಸ್ಥಿತಿಯನ್ನು ಅರಿಯುವ ಯೋಚನೆ ಮಾಡಲಿಲ್ಲ ಎಂದು ತಿಳಿಸಿದರು.

    ಜುಲೈ 20 ರಂದು ನಡೆದ ಸಂಸತ್ತಿನ ಮುಂಗಾರು ಅಧಿವೇಶನದ ಅವಿಶ್ವಾಸ ನಿರ್ಣಯ ಗೊತ್ತುವಳಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸುದೀರ್ಘ ಭಾಷಣಮಾಡಿದ್ದರು. ಭಾಷಣದ ವೇಳೆ ಆಢಳಿತಾರೂಢ ಎನ್‍ಡಿಎ ಸರ್ಕಾರ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಭಾಷಣದ ಬಳಿಕ ನೇರವಾಗಿ ಪ್ರಧಾನಿ ಬಳಿ ತೆರಳಿ ಅವರನ್ನು ಅಪ್ಪಿಕೊಂಡಿದ್ದರು.

    ರಾಹುಲ್ ಗಾಂಧಿಯವರ ನಡೆ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಸ್ವ-ಪಕ್ಷೀಯ ನಾಯಕರು ಸಹ ಪರೋಕ್ಷವಾಗಿ ರಾಹುಲ್ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಈಗ ಮೊಬೈಲ್ ಬಿದ್ದರೂ ಚಿಂತೆಯಿಲ್ಲ: ಹೊಸದಾಗಿ ಬಂದಿದೆ ಮೊಬೈಲ್ ಏರ್ ಬ್ಯಾಗ್  – ವಿಡಿಯೋ

    ಈಗ ಮೊಬೈಲ್ ಬಿದ್ದರೂ ಚಿಂತೆಯಿಲ್ಲ: ಹೊಸದಾಗಿ ಬಂದಿದೆ ಮೊಬೈಲ್ ಏರ್ ಬ್ಯಾಗ್ – ವಿಡಿಯೋ

    ಬೆಂಗಳೂರು: ಕಾರುಗಳಲ್ಲಿರುವ ಏರ್ ಬ್ಯಾಗ್ ನಲ್ಲಿ ಈಗ ಮೊಬೈಲ್ ಅನ್ನು ರಕ್ಷಿಸಲು ಏರ್ ಬ್ಯಾಗ್ ನಿರ್ಮಾಣಗೊಂಡಿದೆ.

    ಹೌದು, ಜರ್ಮನಿಯ ವಿದ್ಯಾರ್ಥಿಯೊಬ್ಬ ಮೊಬೈಲ್ ಏರ್‍ಬ್ಯಾಗ್ ಅನ್ನು ಅಭಿವೃದ್ಧಿ ಪಡಿಸಿದ್ದಾನೆ. ಆಲೇನ ವಿಶ್ವವಿದ್ಯಾನಿಲಯದ ಎಂಜಿನಿಯರಿಂಗ್ ವಿದ್ಯಾರ್ಥಿ ಫಿಲಿಪ್ ಪ್ರೆಂಜಲ್ ನೂತನ ಮೊಬೈಲ್ ಏರ್ ಬ್ಯಾಗ್ ತಯಾರಿಸಿದ್ದಾನೆ. ಈತನ ಈ ಸಾಧನೆಗೆ ಜರ್ಮನಿಯ `ಜರ್ಮನ್ ಸೊಸೈಟಿ ಫಾರ್ ಮೆಕಾಟ್ರೋನಿಕ್ಸ್’ ಸಂಸ್ಥೆಯು ಪ್ರಶಸ್ತಿ ನೀಡಿ ಗೌರವಿಸಿದೆ.

    ಹೇಗೆ ತೆರೆದುಕೊಳ್ಳುತ್ತೆ?
    ಎಂಟು ತೆಳುವಾದ ಮೆಟಲ್ ಸುರುಳಿಗಳ ಸ್ಪ್ರಿಂಗ್ ಅನ್ನು ಹೊಂದಿರುವಂತೆ ಈ ಕೇಸನ್ನು ವಿನ್ಯಾಸಗೊಳಿಸಲಾಗಿದೆ. ಈ ಕೇಸ್‍ನಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಮೊಬೈಲ್ ಫೋನ್ ಬಿದ್ದರೂ, ಯಾವುದೇ ತೊಂದರೆ ಆಗುವುದಿಲ್ಲ. ಮೊಬೈಲ್ ಬೀಳುವಾಗ ಕೇಸ್‍ನಲ್ಲಿರುವ ಸೆನ್ಸರ್ ಅಲರ್ಟ್ ಆಗಿ ಸ್ಪ್ರಿಂಗ್ ಓಪನ್ ಆಗುವಂತೆ ಮಾಡುತ್ತದೆ. ಆಗ ಸ್ಪ್ರಿಂಗ್ ಓಪನ್ ಆಗಿ ಮೊಬೈಲನ್ನು ರಕ್ಷಿಸುತ್ತದೆ.

  • ಇಂದು ಮೋದಿಯ ಐತಿಹಾಸಿಕ ಇಸ್ರೇಲ್ ಪ್ರವಾಸ ಆರಂಭ

    ಇಂದು ಮೋದಿಯ ಐತಿಹಾಸಿಕ ಇಸ್ರೇಲ್ ಪ್ರವಾಸ ಆರಂಭ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಭೇಟಿಗಾಗಿ ಇಸ್ರೇಲ್‍ಗೆ ಪ್ರಯಾಣ ಬೆಳೆಸಿದ್ದಾರೆ. ಈ ಭೇಟಿ ದ್ವಿಪಕ್ಷೀಯ ಸಂಬಂಧದ ದೃಷ್ಟಿಯಿಂದ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

    ಇಸ್ರೇಲ್ ಜೊತೆಗಿನ ರಾಜತಾಂತ್ರಿಕ ಬಾಂಧವ್ಯಕ್ಕೆ 25 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಇಸ್ರೇಲ್ ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿ ನೆತಾನ್ಯಾಹು ಅವರೇ ಖುದ್ದಾಗಿ ಪ್ರಧಾನಿ ಮೋದಿಯನ್ನು ಸ್ವಾಗತಿಸಲಿದ್ದಾರೆ. 48 ಗಂಟೆಗಳ ಅವಧಿಯಲ್ಲಿ ಪ್ರಧಾನಿ ಮೋದಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

    ಭಯೋತ್ಪಾದನೆಯನ್ನು ಮಟ್ಟಹಾಕುವ ಸಂಬಂಧ ಇಸ್ರೇಲ್ ಪ್ರವಾಸ ತುಂಬಾ ಮಹತ್ವದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರವಾಸಕ್ಕೂ ಮುನ್ನ ಟ್ವೀಟ್ ಮಾಡಿದ್ದಾರೆ. ಯಹೂದಿ ರಾಜ್ಯಕ್ಕೆ ಭೇಟಿ ಮೋದಿ ನೀಡುತ್ತಿರುವುದು ಅಲ್ಲಿಯೂ ಭಾರೀ ಸಂಚಲನ ಮೂಡಿಸಿದೆ.

    ಮೋದಿ ಭೇಟಿ ಕುರಿತು ಮಾತನಾಡಿರುವ ಇಸ್ರೇಲ್ ಪ್ರಧಾನಿ ನೇತನ್ಯಾಹು, ಮೋದಿ ನನ್ನ ಮಿತ್ರ. ಅತಿ ವೇಗವಾಗಿ ಆರ್ಥಿಕ ಬೆಳವಣಿಗೆ ಕಾಣುತ್ತಿರುವ ದೇಶದ ಪ್ರಧಾನಿ ಭೇಟಿಯಿಂದ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದ್ದಾರೆ. ಇನ್ನು ಇಸ್ರೇಲ್‍ನ ಪ್ರಮುಖ ಬ್ಯುಸಿನೆಸ್ ದಿನ ಪತ್ರಿಕೆ `ದಿ ಮಾರ್ಕ್’, ಏಳಿ, ಎದ್ದೇಳಿ, ವಿಶ್ವದ ಅತ್ಯಂತ ಪ್ರಮುಖ ಪ್ರಧಾನಿ ಬರುತ್ತಿದ್ದಾರೆ ಎಂದು ಕೆಲ ದಿನಗಳ ಹಿಂದಷ್ಟೇ ಹಾಡಿ ಹೊಗಳಿತ್ತು.

    ಜುಲೈ 6ರಂದು ಮೋದಿ ಜರ್ಮನಿಯ ಹ್ಯಾಮ್‍ಬರ್ಗ್‍ಗೆ ಜಿ-20 ಶೃಂಗಸಭೆಗಾಗಿ ತೆರಳಲಿದ್ದಾರೆ.

     

  • ಹಡಗಿನಲ್ಲಿ ತೇಲಾಡುತ್ತಾ ಲವ್ವಾಯ್ತು: ಭಾರತದ ಭರತ್ ಜರ್ಮನ್ ಬ್ಯೂಟಿಗೆ ಉಡುಪಿಯಲ್ಲಿ ತಾಳಿ ಕಟ್ಟಿದ್ರು

    ಹಡಗಿನಲ್ಲಿ ತೇಲಾಡುತ್ತಾ ಲವ್ವಾಯ್ತು: ಭಾರತದ ಭರತ್ ಜರ್ಮನ್ ಬ್ಯೂಟಿಗೆ ಉಡುಪಿಯಲ್ಲಿ ತಾಳಿ ಕಟ್ಟಿದ್ರು

    ಉಡುಪಿ: ಆಕೆ ಜರ್ಮನ್ ಮೂಲದ ಸುಂದರಾಂಗ ಚೆಲುವೆ. ಆತ ಪಕ್ಕಾ ಇಂಡಿಯನ್. ಬಣ್ಣದಲ್ಲಿ ವ್ಯತ್ಯಾಸವಿದ್ದರೂ ಇಬ್ಬರ ಮನಸ್ಸುಗಳು ಮಾತ್ರ ಹೊಂದಾಣಿಕೆಯಾಗಿದೆ. ಸ್ವರ್ಗದಲ್ಲಿ ನಿಶ್ಚಯವಾದ ಮದುವೆ. ಸಮುದ್ರದಲ್ಲಿ ಒಪ್ಪಿಗೆಯಾಗಿ, ಭೂಮಿ ಮೇಲೆ ನಡೆದಿದೆ.

    ರೆಬೆಕಾ ಮರಿಯಾ ಜರ್ಮನಿ ಮೂಲದ ಸ್ಪುರದ್ರೂಪಿ ಚೆಲುವೆ. ಭರತ್ ಕುಮಾರ್ ಇಂಡಿಯನ್ ಜಂಟಲ್ ಮ್ಯಾನ್. ದೇಶ, ಭಾಷೆ, ಸಂಸ್ಕೃತಿಗೆ ಸಂಬಂಧವೇ ಇಲ್ಲದ ಇವರಿಬ್ಬರು ಉಡುಪಿಯಲ್ಲಿ ಮದುವೆಯಾಗಿದ್ದಾರೆ. ಜರ್ಮನಿಯ ಐಡಾ ಕಂಪನಿ ಬೆಲ್ಲಾ ಹಡಗಿನಲ್ಲಿ ಭರತ್ ಕುಮಾರ್ ಫುಡ್ ಆಂಡ್ ಬೇವರೇಜ್ ವಿಭಾದಲ್ಲಿ ಉದ್ಯೋಗಿ. ರೆಬೆಕಾ ಆರ್ಟ್ ಗ್ಯಾಲರಿಯಲ್ಲಿ ಕೆಲಸ ಮಾಡುವಾಕೆ. ಒಂದೇ ಹಡಗಿನಲ್ಲಿ ತೇಲಾಡುತ್ತಾ, ಓಡಾಡುತ್ತಾ ಇವರಿಬ್ಬರಿಗೂ ಲವ್ವಾಗಿದೆ.

    ಇಬ್ಬರೂ ತಮ್ಮ ತಮ್ಮ ಮನೆಯವರಲ್ಲಿ ವಿಷಯ ತಿಳಿಸಿದ್ದಾರೆ. ನಿಮಗೊಪ್ಪಿಗೆಯಾದರೆ ನಮಗೇನೂ ಸಮಸ್ಯೆಯಿಲ್ಲ ಅಂತ ಹೇಳಿದ ಇಬ್ಬರ ಪೋಷಕರು ಅಕ್ಷತೆ ಕಾಳು ಹಾಕಲು ಒಪ್ಪಿದ್ದಾರೆ. ಇಬ್ಬರ ಮದುವೆ ಭಾರತೀಯ ಸಂಸ್ಕೃತಿಯಂತೆ ನಡೆಯಿತು.

    ನಮ್ಮದು ಮೂರು ವರ್ಷದಿಂದ ಲವ್. ಶಿಪ್‍ನಲ್ಲಿ ಮೀಟಾಗಿದ್ದೆವು. ಡೇಟಿಂಗ್ ಹೋಗಿದ್ದೆವು. ಇಬ್ಬರಿಗೂ ನಾವಿಬ್ಬರು ಒಳ್ಳೆ ಜೋಡಿಯಾಗ್ತೇವೆ ಅಂತ ಅನ್ನಿಸ್ತು. ಇಬ್ಬರಿಗೂ ಎಂತ ಸಮಸ್ಯೆಯೂ ಇರಲಿಲ್ಲ. ಇಬ್ಬರ ಮನೆಯಲ್ಲಿಯೂ ಒಪ್ಪಿಗೆ ಸಿಕ್ಕಿದೆ. ಆರ್ಟ್ ಗ್ಯಾಲರಿಸ್ಟ್ ಆಗಿ ರೆಬೆಕಾ ಕೆಲಸ ಮಾಡುತ್ತಿದ್ದರು. ಪ್ಯಾಕೇಜ್ ಟೂರ್ ತರ ಸಮುದ್ರಯಾನ ಮಾಡುತ್ತೇವೆ. ಇನ್ನೊಂದು ಮೂರ್ನಾಲ್ಕು ವರ್ಷ ಕೆಲಸ ಮಾಡಿ ಭಾರತದಲ್ಲೇ ನೆಲೆಸುವ ಆಲೋಚನೆಯಿದೆ ಎಂದು ಭರತ್ ಕುಮಾರ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದರು.

    ಎರಡು ವರ್ಷದ ಹಿಂದೆ ರೆಬೆಕಾ ಉಡುಪಿಯ ಪಡುಬಿದ್ರೆಯ ಭರತ್ ಮನೆಗೆ ಬಂದಿದ್ದರು. ಆಗ ವಿಷಯ ಪ್ರಸ್ತಾಪವಾಗಿದೆ. ವರ್ಷದ ಹಿಂದೆ ಇಬ್ಬರಿಗೂ ಎಂಗೇಜ್‍ಮೆಂಟ್ ಆಗಿದೆ. ಈಗ ಮದುವೆಯೂ ಮುಗಿದಿದೆ. ಎರಡೂ ಕುಟುಂಬದವರು ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಜರ್ಮನಿಯಿಂದ ರೆಬೆಕಾ ಪೋಷಕರು, ಸಂಬಂಧಿಕರು, ಗೆಳೆಯರು ಬಂದಿದ್ದರು. ಭಾರತೀಯ ಸಂಸ್ಕೃತಿಯ ಮದುವೆಯಲ್ಲಿ ಪಾಲ್ಗೊಂಡ ಜರ್ಮನ್ ನೆಂಟರು ಭಾರತೀಯ ಸಂಪ್ರದಾಯದ ಧಿರಿಸು ತೊಟ್ಟಿದ್ದರು. ಇಲ್ಲಿನ ಊಟ, ಹವಾಮಾನದ ಬಗ್ಗೆ ಮೆಚ್ಚಿಕೊಂಡರು.

    ಈ ಸಂದರ್ಭ ವಧುವಿನ ಸಂಬಂಧಿ ಇಯಾಗ ಮಾತನಾಡಿ, 10 ದಿನದ ಹಿಂದೆ ಇಲ್ಲಿಗೆ ಬಂದಾಗ ಜೋರು ಬಿಸಿಲಿತ್ತು. ಈಗ ಜೋರು ಮಳೆ ಬರ್ತಾಯಿದೆ. ಇಲ್ಲಿನ ವೆದರ್ ಗೆ ಅಡ್ಜಸ್ಟ್ ಆಗೋದಕ್ಕೆ ಕಷ್ಟ ಆಗ್ತಾಯಿದೆ. ಊಟ ಕೂಡಾ ಸಿಕ್ಕಾಪಟ್ಟೆ ಸ್ಪೈಸಿ. ಆದ್ರೂ ಇಷ್ಟ ಆಗ್ತಾಯಿದೆ ಎಂದು ಹೇಳಿದರು. ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡು ಬಹಳ ಖುಷಿಯಾಗಿದೆ. ಇಲ್ಲಿನ ಡೆಕೋರೇಷನ್, ಉಡುಗೆ ತೊಡುಗೆಯೆಲ್ಲಾ ಜರ್ಮನಿ ಮದುವೆಗಿಂತ ಡಿಫರೆಂಟ್ ಇದೆ ಅಂತ ಹೇಳಿದರು.

    ಭಾರತದ ಸಂಸ್ಕೃತಿಯನ್ನು ನೋಡಿ ಇಷ್ಟಪಟ್ಟು ಭಾರತದ ಹುಡುಗನನ್ನು ರೆಬೆಕಾ ಆಯ್ಕೆ ಮಾಡಿದರಂತೆ. ಭರತ್ ಕುಮಾರ್ ರೆಬೆಕಾಗೆ ತುಳು ಭಾಷೆ ಕಲಿಸುತ್ತಿದ್ದಾರೆ. ಮೂರ್ನಾಲ್ಕು ವರ್ಷ ಜರ್ಮನಿಯಲ್ಲೇ ಕೆಲಸ ಮಾಡಿ ಮತ್ತೆ ಭಾರತದಲ್ಲಿ ಸೆಟೆಲ್ ಆಗೋ ಆಲೋಚನೆ ಇಟ್ಟುಕೊಂಡಿದ್ದಾರೆ.