Tag: German Shepherd

  • ಕೈ ಕೊಟ್ಟ ಮೋದಿ ಪ್ಲಾನ್ – ಕಾಡುಗಳ್ಳರ ಪತ್ತೆ ಹಚ್ಚಲು ವಿಫಲವಾಯ್ತು ಮುಧೋಳ ತಳಿಯ ಶ್ವಾನ

    ಕೈ ಕೊಟ್ಟ ಮೋದಿ ಪ್ಲಾನ್ – ಕಾಡುಗಳ್ಳರ ಪತ್ತೆ ಹಚ್ಚಲು ವಿಫಲವಾಯ್ತು ಮುಧೋಳ ತಳಿಯ ಶ್ವಾನ

    ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್‌ನಲ್ಲಿ ದೇಶಿ ತಳಿ ಮುಧೋಳ ಶ್ವಾನವನ್ನು ಸೈನ್ಯದಲ್ಲಿ, ಭದ್ರತೆಯಲ್ಲಿ, ಅರಣ್ಯದಲ್ಲಿ ಬಳಸಲು ಕರೆಕೊಟ್ಟಿದ್ರು. ಅವರ ಮಾತಿನಿಂದ ಪ್ರೇರಣೆಗೊಂಡ ಬಂಡೀಪುರ ಅರಣ್ಯ ಅಧಿಕಾರಿಗಳು, ಈ ಪ್ರದೇಶದಲ್ಲಿ ಕಳ್ಳಬೇಟೆ ಪತ್ತೆ ಹಚ್ಚಲು ಮುಧೋಳ ತಳಿಯ ಶ್ವಾನವನ್ನು ತರಲಾಗಿತ್ತು. ಆದ್ರೆ ಬೇಟೆಗೆ ಮಾತ್ರ ನಿಸ್ಸೀಮವಾಗಿರುವ ಮುಧೋಳ ತಳಿ ಶ್ವಾನ ಕಳ್ಳಬೇಟೆ ಪತ್ತೆ ಹಚ್ಚಲು ವಿಫಲವಾಗಿದೆ.

    ಕಳ್ಳಬೇಟೆ ಪತ್ತೆಹಚ್ಚಲು ಕಳೆದ ಒಂದೂವರೆ ವರ್ಷದ ಹಿಂದೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮುಧೋಳ ತಳಿಯ ಶ್ವಾನವನ್ನು ಕರೆತರಲಾಗಿತ್ತು. ಈ ಶ್ವಾನಕ್ಕೆ ‘ಮಾರ್ಗರೇಟ್’ ಎಂದು ಹೆಸರಿಡಲಾಗಿತ್ತು. ಆ ಬಳಿಕ ಈ ಶ್ವಾನಕ್ಕೆ ಎಲ್ಲಾ ರೀತಿಯ ತರಬೇತಿಯನ್ನು ಕೂಡ ನೀಡಲಾಗಿತ್ತು. ಆದರೆ ಇದೂವರೆಗೂ ಒಂದು ಕಳ್ಳತನವನ್ನು ಸಹ ಪತ್ತೆಹಚ್ಚಲು ಈ ಮಾರ್ಗರೇಟ್‍ನಿಂದ ಸಾಧ್ಯವಾಗಿಲ್ಲ. ಮುಧೋಳ ಶ್ವಾನ ಅರಣ್ಯಧಿಕಾರಿಗಳು ಚಿಂತಿಸಿದ್ದ ಮಟ್ಟಿಗೆ ಕೆಲಸ ಮಾಡುತ್ತಿಲ್ಲ. ಹೀಗಾಗಿ ಈ ಶ್ವಾನವನ್ನು ಕೇವಲ ಬೋನಿನಲ್ಲಿರಿಸಿದ್ದಾರೆ. ಹೀಗಾಗಿ ಮೊದಲಿದ್ದ ಜರ್ಮನ್ ಶೆಫರ್ಡ್ ಅಥವಾ ಬೆಲ್ಜಿಯಂ ತಳಿಯ ಶ್ವಾನವನ್ನು ತರಲು ಅರಣ್ಯಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಇದನ್ನೂ ಓದಿ: ಚೆನ್ನೈನಿಂದ ಚಿಂಗವನಂಗೆ ರೈಲು ಸೇವೆ – ಶಬರಿಮಲೆ ಯಾತ್ರಾರ್ಥಿಗಳಿಗೆ ಬಂಪರ್ ಆಫರ್

    ಬಂಡೀಪುರದಲ್ಲಿ ಕಾಡುಗಳ್ಳರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಹಂಟಿಂಗ್ ಸ್ಪೆಷಲಿಸ್ಟ್ ಖ್ಯಾತಿಯ ಜರ್ಮನ್ ಶೆಫರ್ಡ್ ತಳಿಯ ಶ್ವಾನ ರಾಣಾಗೆ 13 ವರ್ಷ ತುಂಬಿದ್ದು ನಿವೃತ್ತಿ ಅಂಚಿನಲ್ಲಿತ್ತು. ಇದಕ್ಕೆ ಪರ್ಯಾಯವಾಗಿ ಅರಣ್ಯ ಪ್ರದೇಶದಲ್ಲಿ ಕಳ್ಳಬೇಟೆ ಪತ್ತೆ ಹಚ್ಚುವುದು, ಅರಣ್ಯ ಸಿಬ್ಬಂದಿ ನೀಡುವ ಸೂಚನೆ ಪಾಲಿಸುವುದು, ವಾಸನೆ ಗ್ರಹಿಸಿ ಅದರ ಮೂಲಕ ಕಳ್ಳರನ್ನು ಪತ್ತೆ ಹಚ್ಚುವುದು, ಈ ರೀತಿಯ ಎಲ್ಲಾ ತರಬೇತಿಯನ್ನು ನೀಡಿ ಅರಣ್ಯಾಧಿಕಾರಿಗಳು ಮಾರ್ಗರೇಟ್ ಅನ್ನು ಕರೆತಂದಿದ್ರು. ಆದ್ರೆ ಮಾರ್ಗರೇಟ್ ಯಾವುದೇ ಕೆಲಸ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಹೀಗಾದರೆ ಅರಣ್ಯ ಪ್ರದೇಶದಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತದೆ. ಕಳ್ಳ ಬೇಟೆಗಾರರನ್ನು ಹಿಡಿಯುವುದು ಕಷ್ಟವಾಗುತ್ತದೆ. ಇದು ಅರಣ್ಯ ಇಲಾಖೆಗೆ ತಲೆ ನೋವಾಗಿದೆ. ಇದನ್ನೂ ಓದಿ: ಮಾಜಿ ಪ್ರೇಯಸಿಯ ರುಂಡ ಕಡಿದು, ಪೊಲೀಸ್ ಠಾಣೆಗೆ ತಂದ ಪಾಗಲ್ ಪ್ರೇಮಿ

    Live Tv
    [brid partner=56869869 player=32851 video=960834 autoplay=true]

  • ಕೊರೊನಾ ವೈರಸ್ ದೃಢಪಟ್ಟ ಜಗತ್ತಿನ ಮೊದಲ ಶ್ವಾನ ಸಾವು

    ಕೊರೊನಾ ವೈರಸ್ ದೃಢಪಟ್ಟ ಜಗತ್ತಿನ ಮೊದಲ ಶ್ವಾನ ಸಾವು

    ನ್ಯೂಯಾರ್ಕ್: ಇಲ್ಲಿನ ಸ್ಟೇಟೆನ್ ಐಲ್ಯಾಂಡ್‍ನಲ್ಲಿ 7 ವರ್ಷದ ಜರ್ಮನ್ ಶೆಫರ್ಡ್ ಕೋವಿಡ್ 19ಗೆ ಬಲಿಯಾಗಿದೆ. ಈ ಮೂಲಕ ಕೋವಿಡ್ 19 ದೃಢಪಟ್ಟ ಜಗತ್ತಿನ ಮೊದಲ ಶ್ವಾನ ಮೃತಪಟ್ಟಿದೆ.

    ಸಾವನ್ನಪ್ಪಿದ ಶ್ವಾನ ಬಡ್ಡಿ ಕಳೆದ ಏಪ್ರಿಲ್ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಅದೇ ಸಮಯದಲ್ಲಿ ಮಾಲೀಕ ರಾಬರ್ಟ್ ಮಹೋನಿ ಕೂಡ ಕೋವಿಡ್ 19 ನಿಂದ ಗುಣಮುಖರಾಗುತ್ತಿದ್ದರು ಎಂದು ನ್ಯಾಷನಲ್ ಜಿಯೋಗ್ರಫಿ ತಿಳಿಸಿದೆ.

    ರಾಬರ್ಟ್ ಅವರು ಹಲವಾರು ವಾರ ಕೊರೊನಾ ವೈರಸ್‍ಗೆ ತುತ್ತಾದ ನಂತರ ಶ್ವಾನ ಬಡ್ಡಿಯಲ್ಲೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಹೀಗಾಗಿ ಮೇ ತಿಂಗಳಲ್ಲಿ ಪಶುವೈದ್ಯರು ಪರೀಕ್ಷಿಸಿದ್ದು, ಈ ವೇಳೆ ಬಡ್ಡಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಆ ನಂತರ ಬಡ್ಡಿಯ ಆರೋಗ್ಯ ನಿಧಾನವಾಗಿ ಕುಸಿಯುತ್ತಾ ಬಂತು. ಕ್ರಮೇಣ ಹೆಪ್ಪುಗಟ್ಟಿದ ರೀತಿಯಲ್ಲಿ ವಾಂತಿ, ಮೂತ್ರದಲ್ಲೂ ರಕ್ತ ಹಾಗೆಯೇ ನಡೆದಾಡಲು ಕಷ್ಟಪಡುತ್ತಿತ್ತು. ಈ ಹಿನ್ನೆಲೆಯಲ್ಲಿ ಮಹೋನಿ ಮತ್ತು ಅವರ ಪತ್ನಿ ಆಲಿಸನ್ ಜುಲೈ 11 ರಂದು ಶ್ವಾನಕ್ಕೆ ದಯಾಮರಣ ನೀಡಿದ್ದಾರೆ.

    ನ್ಯೂಯಾರ್ಕ್ ನಗರದ ಆರೋಗ್ಯ ಇಲಾಖೆಯ ವಕ್ತಾರರು, ನೆಕ್ರೋಪ್ಸಿ ಪರೀಕ್ಷೆಗಾಗಿ ನಾಯಿಯ ಮೃತದೇಹವನ್ನು ತೆಗೆದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಆದರೆ ಈ ಬಗ್ಗೆ ಪಶುವೈದ್ಯರ ಜೊತೆ ಮಾತನಾಡಿದಾಗ ಅವರು, ಈಗಾಗಲೇ ನಾಯಿಯನ್ನು ಈಗಾಗಲೇ ದಹನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಅಮೆರಿಕದಲ್ಲಿ 12 ಶ್ವಾನಗಳು ಹಾಗೂ 19 ಬೆಕ್ಕುಗಳಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ ಎಂದು ನ್ಯಾಷನಲ್ ಜಿಯೋಗ್ರಫಿ ಮಾಹಿತಿ ನೀಡಿದೆ. ಇದನ್ನೂ ಓದಿ: ವಿಶ್ವದಲ್ಲೇ ಮೊದಲ ಪ್ರಕರಣ – ಝೂನಲ್ಲಿದ್ದ ಹುಲಿಗೂ ಕೊರೊನಾ

  • ಕೊಡಗಿನ ಡಾಗ್ ಶೋ – 22ಕ್ಕೂ ಹೆಚ್ಚು ತಳಿಗಳ 230 ಶ್ವಾನಗಳು ಭಾಗಿ

    ಕೊಡಗಿನ ಡಾಗ್ ಶೋ – 22ಕ್ಕೂ ಹೆಚ್ಚು ತಳಿಗಳ 230 ಶ್ವಾನಗಳು ಭಾಗಿ

    ಮಡಿಕೇರಿ: ಸದಾ ಒಂದಿಲ್ಲೊಂದು ವಿಶೇಷ ಸ್ಪರ್ಧೆಗಳಿಂದ ಗಮನಸೆಳೆಯುವ ಕೊಡಗಿನಲ್ಲಿ ಇಂದು ಡಾಗ್ ಶೋ ಎಲ್ಲರನ್ನು ರಂಜಿಸಿತು. ಹಲವು ಭಾಗಗಳಿಂದ ಆಗಮಿಸಿದ್ದ 22ಕ್ಕೂ ಹೆಚ್ಚು ತಳಿಗಳ 230 ಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನಗೊಂಡವು.

    ಮುದ್ದು ಮುದ್ದಾಗಿ ಹೆಜ್ಜೆಯಿಡುತ್ತಾ ನಲಿದಾಡಿದ ಚಿಕ್ಕ ಚಿಕ್ಕ ನಾಯಿಮರಿಗಳೊಂದೆಡೆಯಾದರೆ, ನೋಡಿದ ಕೂಡಲೇ ಎದೆನಡುಗಿಸುವಂತಹ ದೈತ್ಯಾಕಾರದ ನಾಯಿಗಳು ಕೂಡ ಶೋನಲ್ಲಿ ಬಂದಿದ್ದು ಗಮನಸೆಳೆಯಿತು. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲಿನಲ್ಲಿ ನಡೆದ ಈ ಡಾಗ್ ಶೋ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

    ಪೊಮೆರಿಯನ್, ಗೋಲ್ಡನ್ ರಿಟ್ರೈವರ್, ಕೋಕರ್ ಸ್ಪ್ಯಾನಿಯೆಲ್ ನಂತಹ ಮುದ್ದು ಮುದ್ದಾದ ನಾಯಿಗಳನ್ನು ನೋಡೋದೆ ಒಂದು ಚೆಂದ. ಲಕ ಲಕನೆ ಓಡಾಡುತ್ತಾ ನೆರೆದಿದ್ದವರನ್ನ ರಂಜಿಸಿದ ಸ್ವೀಟ್ ಶ್ವಾನಗಳು ಬಹುಮಾನಕ್ಕಾಗಿ ಪೈಪೋಟಿ ನಡೆಸಿದವು. ದೂರದೂರುಗಳಿಂದ ತಮ್ಮ ಮುದ್ದು ನಾಯಿಗಳನ್ನ ಸ್ಪರ್ಧೆಗಾಗಿ ಕರೆತಂದಿದ್ದ ಮಾಲೀಕರು ಕೂಡ ಖುಷಿ ಖುಷಿಯಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ಎಂಜಾಯ್ ಮಾಡಿದರು.

    ಮುಧೋಳ, ಗ್ರೇಟ್ ಡ್ಯಾನ್, ಸೇಂಟ್ ಬರ್ನಾಡ್, ಜರ್ಮನ್ ಶಫರ್ಡ್, ಲ್ಯಾಬ್ರೆಡಾರ್ ನಂತಹ ದೈತ್ಯಾಕಾರದ ಶ್ವಾನಗಳು ಕೂಡ ಸ್ಪರ್ಧೆಯಲ್ಲಿ ಬಾಗವಹಿಸಿದ್ದು ವಿಶೇಷವಾಗಿತ್ತು. ತಳಿಗಳ ಆಧಾರದಲ್ಲಿ ನಡೆದ ಪ್ರದರ್ಶನದಲ್ಲಿ ಪ್ರತಿ ತಳಿಗಳ ವಿಭಾಗದಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿದ ಶ್ವಾನಗಳಿಗೆ ಬಹುಮಾನ ನೀಡಲಾಯಿತು.

  • ನಾಯಿಯ ತಲೆಗೆ 47 ಲಕ್ಷ ರೂ. ಬಹುಮಾನ ಘೋಷಿಸಿದ ಸ್ಮಗ್ಲರ್!

    ನಾಯಿಯ ತಲೆಗೆ 47 ಲಕ್ಷ ರೂ. ಬಹುಮಾನ ಘೋಷಿಸಿದ ಸ್ಮಗ್ಲರ್!

    ಬೊಗೊಟಾ: 10 ಸಾವಿರ ಕೆಜಿ ಕೊಕೇನ್ ಪತ್ತೆ ಹಚ್ಚಿದ್ದ ಸೊಂಬ್ರಾ (ಜರ್ಮನ್ ಶೆಫರ್ಡ್) ನಾಯಿಯ ತಲೆಗೆ ಕೊಲಂಬಿಯಾದ ಸ್ಮಗ್ಲರ್ ಒಬ್ಬ 47 ಲಕ್ಷ ರೂ. ಬಹುಮಾನ ಘೋಷಿಸಿದ್ದಾನೆ.

    ಹೌದು, ಕೊಲಂಬಿಯಾದ ಒಟೋನಿಯಲ್ ಕುಖ್ಯಾತ ಸ್ಮಗಲರ್ ಆಗಿದ್ದು, ಆತನೇ 200 ದಶಲಕ್ಷ ಕೊಲಂಬಿಯನ್ ಪೆಸೊ (ಅಂದಾಜು 47 ಲಕ್ಷ ರೂ.) ಬಹುಮಾನದ ಮೊತ್ತವನ್ನು ಘೋಷಿಸಿದ್ದಾನೆ ಎಂದು ಗುಪ್ತಚರ ಇಲಾಖೆಯ ಮಾಹಿತಿಯನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.

    ಆರು ವರ್ಷದ ಸೊಂಬ್ರಾ, ಮಾದಕವಸ್ತುಗಳ ನಿಗ್ರಹ ದಳದಲ್ಲಿ ಸೇವೆ ಸಲ್ಲಿಸುತ್ತಿದೆ. ಅಕ್ರಮ ಮಾದಕ ವಸ್ತು ಸಾಗಾಣಿಕೆ ಮಾಡುವ ಜಾಲವನ್ನು ಪತ್ತೆ ಹಚ್ಚುವಲ್ಲಿ ಸೊಂಬ್ರಾ ನಿಸ್ಸಿಮಳು. ಸದ್ಯ ಬೊಗೊಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜೀವ ಬೆದರಿಕೆಯ ಹಿನ್ನೆಲೆಯಲ್ಲಿ ನಾಯಿಗೆ ಭಾರೀ ಭದ್ರತೆ ನೀಡುವಂತೆ ಕೊಲಂಬಿಯಾ ಸರ್ಕಾರ ಆದೇಶಿಸಿದೆ.

    ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿ 245 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸುವಲ್ಲಿ ಸೊಂಬ್ರಾ ಯಶಸ್ವಿಯಾಗಿದೆ. ಹೀಗಾಗಿ ಇದನ್ನು ಕೊಂದವರಿಗೆ 47 ಲಕ್ಷ ರೂ. ಬಹುಮಾನ ನೀಡುವುದಾಗಿ ಒಟೋನಿಯಲ್ ಪ್ರಕಟಿಸಿದ್ದಾನೆ.

    ಸೊಂಬ್ರಾಳಿಗೆ ರಕ್ಷಣೆಗೆ ಕೊಲಂಬಿಯಾ ರಾಷ್ಟ್ರೀಯ ಪೊಲೀಸ್ ದಳ ಮುಂದಾಗಿದೆ. ಬೊಗೊಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇವೆ ಸಲ್ಲಿಸುತ್ತಿರುವ ಸೊಂಬ್ರಾ ಈ ಹಿಂದೆ ಅಟ್ಲಾಂಟಿಕ್ ಕರಾವಳಿ ಪ್ರದೇಶ ಸೇರಿದಂತೆ ಅಮೆರಿಕಾದ ಕೆಲವು ಭಾಗದಲ್ಲಿಯೂ ಸೇವೆ ಸಲ್ಲಿಸಿದೆ.