Tag: Georgia

  • 19 ವರ್ಷದ ನಂತರ ಒಂದಾದ ಟ್ವಿನ್ಸ್- ಜಾರ್ಜಿಯಾದಲ್ಲಿ ಇಂದಿಗೂ ಬಗೆಹರಿಯದ ಕದ್ದು ಮಾರಾಟವಾದ ಮಕ್ಕಳ ಸಂಖ್ಯೆ

    19 ವರ್ಷದ ನಂತರ ಒಂದಾದ ಟ್ವಿನ್ಸ್- ಜಾರ್ಜಿಯಾದಲ್ಲಿ ಇಂದಿಗೂ ಬಗೆಹರಿಯದ ಕದ್ದು ಮಾರಾಟವಾದ ಮಕ್ಕಳ ಸಂಖ್ಯೆ

    -ಹುಟ್ಟಿನಿಂದ ಬೇರ್ಪಟ್ಟು, ಒಂದೇ ನಗರದಲ್ಲಿ ವಾಸವಿದ್ದ ಅವಳಿಗಳು

    ಅಟ್ಲಾಂಟ: ಹುಟ್ಟಿನಿಂದ ಬೇರ್ಪಟ್ಟು ಒಂದೇ ನಗರದಲ್ಲಿ ವಾಸವಿದ್ದ ಅವಳಿಗಳು (Twins) 19 ವರ್ಷದ ನಂತರ ಒಂದಾಗಿರುವ ಘಟನೆ ಪೂರ್ವ ಯುರೋಪಿಯನ್ ದೇಶ ಜಾರ್ಜಿಯಾದಲ್ಲಿ (Georgia) ನಡೆದಿದೆ.

    ಬೇರ್ಪಟ್ಟಿದ್ದು ಹೇಗೆ?
    ಆಮಿ ಖ್ವಿಟಿಯಾ ಮತ್ತು ಅನೋ ಸರ್ತಾನಿಯಾ ಬೇರ್ಪಟ್ಟಿದ್ದ ಅವಳಿ ಸಹೋದರಿಯರು. ಅವಳಿ ಮಕ್ಕಳ ತಾಯಿಯಾದ ಅಜಾ ಶೋನಿ ಅವರು 2002 ರಲ್ಲಿ ಆಮಿ ಮತ್ತು ಅನೋ ಎಂಬ ಅವಳಿ ಹೆಣ್ಣುಮಕ್ಕಳಿಗೆ ಜಾರ್ಜಿಯಾ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು. ಅದರೆ ಅವರು ಮಕ್ಕಳ ಜನ್ಮ ತೂಡಕುಗಳಿಂದ ಕೋಮಾಗೆ ಜಾರಿದ್ದಾರೆ. ಆಕೆಯ ಗಂಡನಾದ ಗೋಚಾ ಗಖಾರಿಯಾ ಅವಳಿ ಹೆಣ್ಣುಮಕ್ಕಳನ್ನು ಆ ಪ್ರತ್ಯೇಕ ಕುಟುಂಬಗಳಿಗೆ ಮಾರಾಟ ಮಾಡಿ ಬೇರ್ಪಡಿಸಿದ್ದ. ಆದರೆ ಅವರು ಒಂದೇ ನಗರದಲ್ಲಿ ಸುಮಾರು 19 ವರ್ಷಗಳ ಕಾಲ ವಾಸವಿದ್ದರು. ಇದನ್ನೂ ಓದಿ:  ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ; ಮೊದಲ ಪಟ್ಟಿ ರಿಲೀಸ್

    ಒಂದಾಗಿದ್ದು ಹೇಗೆ?
    ಅನೋಳನ್ನು ಟಿಬಿಲಿಸಿ ಎಂಬವರು ಪೋಷಣೆ ಮಾಡುತ್ತಿದ್ದರು. ಆದರೆ ಅನೋಳಿಗೆ ಅವಳಿ ಸಹೋದರಿ ಇದ್ದಾಳೆ ಎಂಬುದರ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಅಥವಾ ಸುಳಿವು ಇರಲಿಲ್ಲ. ಒಂದು ದಿನ ಆಮಿಯ ಅಚ್ಚುಮೆಚ್ಚಿನ ಟಿವಿ ಶೋ ಆದ “ಜಾರ್ಜಿಯಾಸ್ ಗಾಟ್ ಟ್ಯಾಲೆಂಟ್” ಅನ್ನು ವೀಕ್ಷಿಸುವಾಗ ಮಗಳ ಹೋಲಿಕೆ ಹೊಂದಿರುವ ಹುಡುಗಿಯೊಬ್ಬಳು ನೃತ್ಯ ಮಾಡುವುದನ್ನು ನೋಡಿ ಆಶ್ಚರ್ಯವಾಗಿದ್ದಾರೆ. ಅಂದು ಅವರಿಗೆ ಆಕೆ ಅನೋಳ ಸಹೋದರಿ ಎಂಬುದು ತಿಳಿದಿರಲಿಲ್ಲ. ನಂತರ ಅವರು ವೈರಲ್ ಟಿಕ್‌ಟಾಕ್ ಮತ್ತು ಟ್ಯಾಲೆಂಟ್ ಶೋ ಮೂಲಕ ಪರಿಚಯವಾಗಿ, ಇಬ್ಬರೂ ಅವಳಿ ಸಹೋದರಿಯರು 19 ವರ್ಷದ ಬಳಿಕ ಒಂದಾಗಿದ್ದಾರೆ. ಇದನ್ನೂ ಓದಿ: 2024ರಲ್ಲಿ ಅಣು ಬಾಂಬ್ ಸ್ಫೋಟಗೊಳ್ಳುವ ಸಾಧ್ಯತೆ ಇದೆ: ಕೋಡಿಮಠ ಸ್ವಾಮೀಜಿ ಭವಿಷ್ಯ 

    ಈ ಪ್ರಕರಣದೊಂದಿಗೆ ಅಚ್ಚರಿದಾಯಕ ಅಂಶವೊಂದು ಬಹಿರಂಗಗೊಂಡಿದೆ. ಜಾರ್ಜಿಯನ್ ಆಸ್ಪತ್ರೆಯಲ್ಲಿ ಸುಮಾರು ವರ್ಷಗಳಿಂದ ಮಕ್ಕಳನ್ನು ಕದ್ದು ಮಾರಾಟ ಮಾಡಲಾಗುತ್ತಿದೆ. ಈವರೆಗೂ ಮಾರಾಟವಾದ ಸಾವಿರಾರು ಶಿಶುಗಳಲ್ಲಿ ಇವರೂ ಸೇರಿದ್ದಾರೆ. ಇತ್ತೀಚೆಗೆ ಕೂಡ ಜಾರ್ಜಿಯಾದಲ್ಲಿ ಇದೇ ರೀತಿ ಪ್ರಕರಣಗಳು ದಾಖಲಾಗಿವೆ. ಜಾರ್ಜಿಯಾದಿಂದ ಕದ್ದು ಮಾರಾಟವಾದ ಮಕ್ಕಳ ಸಂಖ್ಯೆಯ ಸಮಸ್ಯೆ ಬಗೆಹರಿಯದೆ ಹಲವು ದಶಕಗಳಿಂದ ಹಾಗೆ ಉಳಿದಿದೆ. ಇಂದಿಗೂ ಕೂಡ ಜಾರ್ಜಿಯಾವನ್ನು ಈ ಸಮಸ್ಯೆ ಬಾಧಿಸುತ್ತಿದೆ. ಈ ಸಮಸ್ಯೆ ಮೇಲೆ ಅವಳಿ ಸಹೋದರಿಯರ ಘಟನೆ ಬೆಳಕು ಚೆಲ್ಲುತ್ತದೆ. ಜಾರ್ಜಿಯಾದ ಆಸ್ಪತ್ರೆಗಳಲ್ಲಿ ಎಷ್ಟು ಮಕ್ಕಳನ್ನು ಕದ್ದು ಮಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿಲ್ಲ. ಇದನ್ನೂ ಓದಿ: ಸಂಘಟನೆ ಕೆಲಸದಲ್ಲಿ ತೊಡಗಿಸಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡ್ತೇನೆ: ಜಗದೀಶ್ ಶೆಟ್ಟರ್

  • ʼಸ್ವೀಟ್‌ 16ʼ ಬರ್ತ್‌ಡೇ ಪಾರ್ಟಿಯಲ್ಲಿ ಶೂಟೌಟ್‌ – ಇಬ್ಬರು ಸಾವು, 6 ಮಂದಿಗೆ ಗಾಯ

    ʼಸ್ವೀಟ್‌ 16ʼ ಬರ್ತ್‌ಡೇ ಪಾರ್ಟಿಯಲ್ಲಿ ಶೂಟೌಟ್‌ – ಇಬ್ಬರು ಸಾವು, 6 ಮಂದಿಗೆ ಗಾಯ

    ಟಿಬಿಲಿಸಿ: ಜಾರ್ಜಿಯಾದ (Georgia Shoot) ಡೌಗ್ಲಾಸ್ ಕೌಂಟಿಯಲ್ಲಿ ಪಾರ್ಟಿ ವೇಳೆ ನಡೆದ ಗುಂಡಿನ ದಾಳಿಗೆ ಇಬ್ಬರು ಬಲಿಯಾಗಿದ್ದು, 6 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

    ಹೌಸ್‌ ಪಾರ್ಟಿಯಲ್ಲಿ ನೂರಾರು ಮಂದಿ ಜಮಾಯಿಸಿದ್ದರು. ಈ ವೇಳೆ ಘರ್ಷಣೆಯಾಗಿದ್ದು, ಗುಂಡಿನ ದಾಳಿ ನಡೆದಿದೆ. ದಾಳಿ ಕುರಿತು ಜನರಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತೈಲ ದಾಸ್ತಾನು ಕೇಂದ್ರದಲ್ಲಿ ಬೆಂಕಿ ಅವಘಡ – 19 ಮಂದಿ ಸಾವು

    ಘಟನೆ ಕುರಿತು ಮನೆಯ ಮಾಲೀಕ ಪ್ರತಿಕ್ರಿಯಿಸಿ, ನಮ್ಮ ಮಗಳ ಬರ್ತ್‌ಡೇ ಪಾರ್ಟಿಯನ್ನು ಮನೆಯಲ್ಲಿ ಆಯೋಜಿಸಿದ್ದೆವು. ರಾತ್ರಿ 10 ಗಂಟೆಗೆ ಪಾರ್ಟಿಯನ್ನು ಕೊನೆಗೊಳಿಸಲು ನಿರ್ಧರಿಸಿದ್ದೆವು. ಪಾರ್ಟಿಯಲ್ಲಿ ಕೆಲವರು ಪಾಲ್ಗೊಂಡಿದ್ದರು. ಅವರು ಗಾಂಜಾ ಸೇದುತ್ತಿದ್ದುದು ನಮ್ಮ ಗಮನಕ್ಕೆ ಬಂದಿತ್ತು ಎಂದು ಪೊಲೀಸರಿಗೆ ವಿವರ ನೀಡಿದ್ದಾರೆ.

    ಪ್ರಕರಣ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ. ನಮ್ಮ ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಎಸ್‌ಒ ತಿಳಿಸಿದೆ. ಇದನ್ನೂ ಓದಿ: ಇಮ್ರಾನ್ ಖಾನ್ ಅರೆಸ್ಟ್ ಮಾಡಲು ಮನೆಗೆ ಹೋದ ಪೊಲೀಸರು – ಎಷ್ಟು ಹುಡುಕಿದ್ರೂ ಪತ್ತೆಯಾಗ್ಲಿಲ್ಲ ಪಾಕ್ ಮಾಜಿ ಪಿಎಂ

  • ಪಾಕಿನಿಂದ ಹಾರಿ ಬಂದ ವಿಮಾನವನ್ನು ಬಲವಂತವಾಗಿ ಇಳಿಸಿದ ವಾಯುಸೇನೆ

    ಪಾಕಿನಿಂದ ಹಾರಿ ಬಂದ ವಿಮಾನವನ್ನು ಬಲವಂತವಾಗಿ ಇಳಿಸಿದ ವಾಯುಸೇನೆ

    ನವದೆಹಲಿ: ಪಾಕಿಸ್ತಾನದಿಂದ ಹಾರಿ ಬಂದ ಜಾರ್ಜಿಯದ ಸರಕು ಸಾಗಾಣೆ ವಿಮಾನವನ್ನು ಭಾರತೀಯ ವಾಯುಸೇನೆ ಬಲವಂತವಾಗಿ ಇಳಿಸಿದ ಘಟನೆ ಜೈಪುರದಲ್ಲಿ ನಡೆದಿದೆ.

    ಜಾರ್ಜಿಯಾದ ಆಂಟೋನೋವ್ ಎಎನ್-12 ಹೆಸರಿನ ಬೃಹತ್ ಸರಕು ವಿಮಾನವು ಟಿಬಿಲಿಸಿಯಿಂದ ಕರಾಚಿ ಮಾರ್ಗವಾಗಿ ದೆಹಲಿಯಲ್ಲಿ ಇಳಿಯಬೇಕಿತ್ತು. ಆದರೆ ಏರ್ ಟ್ರಾಫಿಕ್ ಸರ್ವಿಸಸ್(ಎಟಿಎಸ್) ನೀಡಿದ್ದ ಅಧಿಕೃತ ಮಾರ್ಗವನ್ನು ಬದಲಾಯಿಸಿ ಶುಕ್ರವಾರ ಮಧ್ಯಾಹ್ನ 3:30 ವೇಳೆಗೆ ಗುಜರಾತಿನ ಕಛ್ ವಾಯು ನೆಲೆಯನ್ನು ವಿಮಾನ ಪ್ರವೇಶಿಸಿತ್ತು.

    70 ಕಿ.ಮೀ ದೂರದಲ್ಲಿ ಭಾರತದ ವಾಯುಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ ಕೂಡಲೇ ಭಾರತದ ವಾಯುಪಡೆ ಕೂಡಲೇ ಜಾಗೃತಗೊಂಡಿತ್ತು. ನಿಯಂತ್ರಣ ಕೊಠಡಿಗಳಿಂದ ರೇಡಿಯೊ ಕರೆಗಳನ್ನು ಮಾಡಿದರೂ ವಿಮಾನದ ಪೈಲಟ್ ಯಾವುದೇ ಪ್ರತಿಕ್ರಿಯೆ ನೀಡದೇ ಮುನ್ನುಗ್ಗಿಸುತ್ತಿದ್ದ.

    ವಿಮಾನದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಉತ್ತರ ಭಾರತದ್ಯಾಂತ ಅಲರ್ಟ್ ಘೋಷಿಸಲಾಯಿತು. ಕೂಡಲೇ ರಾಜಸ್ಥಾನ ಜೋಧ್‍ಪುರ ಮತ್ತು ಉತ್ತರ ಪ್ರದೇಶದಲ್ಲಿರುವ ರಾಯ್‍ಬರೇಲಿ ವಾಯು ನೆಲೆಯಿಂದ ಎರಡು ಸುಖೋಯ್ ಯುದ್ಧ ವಿಮಾನಗಳನ್ನು ಕಳುಹಿಸಿ 27 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಕಾರ್ಗೋ ವಿಮಾನವನ್ನು ಬಲವಂತವಾಗಿ ಸಂಜೆ 4:30ಕ್ಕೆ ಜೈಪುರದಲ್ಲಿ ಇಳಿಸಲಾಯಿತು.

    ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಇಬ್ಬರು ಪೈಲಟ್, ಆರು ಸಿಬ್ಬಂದಿಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಗಳು, ಗುಪ್ತಚರ ದಳದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.  ವಿಮಾನ ವಾಯು ಮಾರ್ಗವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬಲವಂತವಾಗಿ ಇಳಿಸಿಲಾಗಿತ್ತು. ಇದು ಗಂಭೀರವಾದ ಉಲ್ಲಂಘನೆ ಅಲ್ಲ. ವಿಚಾರಣೆ ಬಳಿಕ  ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಒಂದು ವೇಳೆ ವಿಮಾನ ಜೈಪುರದಲ್ಲಿ ಲ್ಯಾಂಡ್ ಆಗದೇ ಇದ್ದರೆ ಯುದ್ಧ ವಿಮಾನಗಳು ಸರಕು ವಿಮಾನವನ್ನು ಹೊಡೆದು ಉರುಳಿಸಲು ಮುಂದಾಗಿತ್ತು.

  • ಆಕಸ್ಮಿಕವಾಗಿ 65 ಲಕ್ಷ ರೂ. ಮೌಲ್ಯದ ಆಭರಣಗಳನ್ನ ಕಸದ ರಾಶಿಗೆ ಎಸೆದ ಮಹಿಳೆ!

    ಆಕಸ್ಮಿಕವಾಗಿ 65 ಲಕ್ಷ ರೂ. ಮೌಲ್ಯದ ಆಭರಣಗಳನ್ನ ಕಸದ ರಾಶಿಗೆ ಎಸೆದ ಮಹಿಳೆ!

    ಅಟ್ಲಾಂಟ: ಮಹಿಳೆಯೊಬ್ಬಳು ತನ್ನ 100,000 ಡಾಲರ್(ಅಂದಾಜು 65 ಲಕ್ಷ ರೂ.) ಮೌಲ್ಯದ ವಜ್ರದ ಆಭರಣಗಳನ್ನ ಕಸದ ರಾಶಿಗೆ ಎಸೆದಿರುವ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ.

    ಮಹಿಳೆ ತನ್ನ ವಜ್ರದ ಆಭರಣಗಳನ್ನ ಆಕಸ್ಮಿಕವಾಗಿ ಕಸದ ರಾಶಿಗೆ ಎಸೆದಿದ್ದರು. ನಂತರ ಕಸ ವಿಲೇವಾರಿ ಮಾಡುವವರಿಗೆ ಕರೆ ಮಾಡಿ ತಾನು ಕಳೆದುಕೊಂಡ ಭಾರೀ ಮೊತ್ತದ ಆಭರಣದ ಬಗ್ಗೆ ತಿಳಿಸಿದ್ದರು.

    ಮಹಿಳೆಯ ಆಭರಣಗಳನ್ನ ಕಳೆದುಕೊಂಡ ಬಗ್ಗೆ ಮಾಹಿತಿ ತಿಳಿದ ನಂತರ ಹಾಲ್ ಕೌಂಟಿಯ ಘನ ತಾಜ್ಯ ವಿಭಾಗದ ನಿರ್ದೇಶಕರಾದ ಜಾನ್ನಿ ವಿಕ್ಕರ್ಸ್ ಅವರು ತಮ್ಮ ಕಾರ್ಮಿಕರೊಂದಿಗೆ ಆಭರಣ ಹುಡುಕುವ ಕಾರ್ಯಾಚರಣೆಯನ್ನ ಶುರುಮಾಡಿದ್ದರು. ಆದರೆ ಆ ಮಹಿಳೆಯು ಕರೆ ಮಾಡಿದಾಗ ಒಂದು ಸುಳಿವನ್ನ ಮಾತ್ರ ಕೊಟ್ಟಿದ್ದರು. ಮಹಿಳೆಯು ತನ್ನ ಆಭರಣವನ್ನ ಕಪ್ಪು ಬ್ಯಾಗ್‍ನಲ್ಲಿ ಇಟ್ಟಿದ್ದು, ಆ ಕಪ್ಪು ಬ್ಯಾಗ್‍ನ ಹುಡುಕಾಟ ಪ್ರಾರಂಭವಾಯಿತು.

    ಪ್ರತಿ ದಿನ 300 ಟನ್‍ಗಳ ಕಸದ ರಾಶಿ ಬೀಳುತ್ತಿದ್ದ ಸ್ಥಳದಲ್ಲಿ, ಮೂರು ಗಂಟೆಗಳ ನಿರಂತರ ಪ್ರಯತ್ನದಿಂದ, ಪ್ರತಿ 20 ನಿಮಿಷಕ್ಕೆ 9-10 ಟನ್‍ಗಳ ಕಸದ ರಾಶಿಯನ್ನ ಹುಡುಕಿ ಕೊನೆಗೂ ಆ ಕಪ್ಪು ಬ್ಯಾಗನ್ನು ಕಾರ್ಮಿಕರು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.

    ಕಸದ ರಾಶಿಯಲ್ಲಿ ಆ ಕಪ್ಪು ಬ್ಯಾಗ್ ಸಿಕ್ಕ ಬಳಿಕ ಅಲ್ಲಿಯ ಕಾರ್ಮಿಕರು ತಮ್ಮದೇ ವಸ್ತು ಕಳೆದು ಹೋದಾಗ ಮತ್ತೆ ಹುಡುಕಿದಷ್ಟು ಸಂತಸವನ್ನ ವ್ಯಕ್ತಪಡಿಸಿದರು.

    ಆ ಕಪ್ಪು ಬ್ಯಾಗ್‍ನಲ್ಲಿ 100,000 ಡಾಲರ್(ಅಂದಾಜು 65 ಲಕ್ಷ ರೂ.) ಬೆಲೆ ಬಾಳುವ ಎರಡು ಉಂಗುರಗಳು ಮತ್ತು ಒಂದು ಕೈಬಳೆ ಇದ್ದವು. ವಜ್ರದ ಆಭರಣವನ್ನ ಹುಡುಕಿದ ಕಾರ್ಮಿಕರಿಗೆ ಆ ಮಹಿಳೆ ಅಭಿನಂದನೆ ಸಲ್ಲಿಸಿದರು.

  • ಪ್ರಾಣಿಯನ್ನ ಹಿಂಬಾಲಿಸಿ ಮರದ ಕಾಂಡದೊಳಗೆ ಹೋಗಿ ಸಿಲುಕಿದ್ದ ನಾಯಿ 20 ವರ್ಷಗಳ ನಂತರ ಪತ್ತೆಯಾಗಿದ್ದು ಹೀಗೆ

    ಪ್ರಾಣಿಯನ್ನ ಹಿಂಬಾಲಿಸಿ ಮರದ ಕಾಂಡದೊಳಗೆ ಹೋಗಿ ಸಿಲುಕಿದ್ದ ನಾಯಿ 20 ವರ್ಷಗಳ ನಂತರ ಪತ್ತೆಯಾಗಿದ್ದು ಹೀಗೆ

    ಟಿಬಿಲಿಸಿ: ಯಾವುದೇ ಪ್ರಾಣಿ ಸಾವನ್ನಪ್ಪಿದ್ರೆ ಕೆಲವು ದಿನಗಳ ನಂತರ ಅದು ಕೊಳೆತು ದುರ್ವಾಸನೆ ಬೀರುತ್ತದೆ. ಆದ್ರೆ ಮರದ ಕಾಂಡದೊಳಗೆ ಸಿಲುಕಿ ಸಾವನ್ನಪ್ಪಿದ್ದ ಈ ನಾಯಿ ಒಂದಿಷ್ಟೂ ಕೊಳೆಯದೇ 20 ವರ್ಷಗಳ ನಂತರವೂ ಸಂರಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

    1980ರಲ್ಲಿ ಜಾರ್ಜಿಯಾದಲ್ಲಿ ಓಕ್ ಮರಗಳನ್ನು ಕಡಿಯುವ ವೇಳೆ ಈ ನಾಯಿ ಸಂರಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಂತರ ಈ ನಾಯಿಯನ್ನ ಇಲ್ಲಿನ ಫಾರೆಸ್ಟ್ ವಲ್ರ್ಡ್ ಟ್ರೀ ಮ್ಯೂಸಿಯಂ ನಲ್ಲಿ ಇಡಲಾಗಿದ್ದು, ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಇದಕ್ಕೆ ಸ್ಟಕ್ಕಿ ಅಂತ ಹೆಸರಿಡಲಾಗಿದೆ.

    ನಾಯಿಯ ದೇಹ ಯಾಕೆ ಕೊಳೆತಿಲ್ಲ?: ನಾಯಿಯ ದೇಹ ಕೊಳೆಯದೇ ಮಮ್ಮಿಫೈ ಆಗೋದಕ್ಕೆ ಕಾರಣವೂ ಇದೆ. ನಾಯಿ ಸಿಲುಕಿದ್ದ ಮರದ ಕಾಂಡ ಟೊಳ್ಳಾಗಿದ್ದು, ಅದರೊಳಗೆ ಗಾಳಿಯ ಚಲನೆ ಮೇಲ್ಮುಖವಾಗಿದ್ದರಿಂದ ಅದರ ವಾಸನೆ ಕೀಟಗಳಿಗೆ ಸಿಗದಂತೆ ಹೊರಟುಹೋಗಿದೆ. ಮಮ್ಮಿಫೈಯಿಂಗ್ ಪ್ರಕ್ರಿಯೆ ಬಗ್ಗೆ ಮಾತನಾಡಿದ ಮ್ಯೂಸಿಯಂ, ಟೊಳ್ಳಾದ ಮರದೊಳಗೆ ಚಿಮ್ನಿಯಂತ ಪರಿಣಾಮದಿಂದ ಗಾಳಿ ಮೇಲ್ಮುಖವಾಗಿ ಚಲಿಸುವಂತಾಗಿದೆ. ಇದರಿಂದಾಗಿ ಸತ್ತ ಪ್ರಾಣಿಯ ವಾಸನೆ ಹೊರಟುಹೋಗಿದೆ. ಇಲ್ಲವಾಗಿದ್ರೆ ವಾಸನೆ ಕೀಟ ಹಾಗೂ ಇತರೆ ಜೀವಿಗಳಿಗೆ ಬಡಿದು ಅವು ಅದನ್ನ ತಿನ್ನುತ್ತಿದ್ದವು. ಅಲ್ಲದೆ ಮರದೊಳಗೆ ಒಣದಾಗಿದ್ದು, ಓಕ್ ಮರದ ಟ್ಯಾನ್ನಿಕ್ ಆ್ಯಸಿಡ್ ನಾಯಿಯ ಚರ್ಮ ಗಟ್ಟಿಯಾಗುವಂತೆ ಮಾಡಿದೆ ಎಂದು ಹೇಳಿದೆ.

    ಸ್ಟಕ್ಕಿ ಪತ್ತೆಯಾದ ಸಮಯಕ್ಕಿಂತ 20 ವರ್ಷಗಳ ಹಿಂದೆ ಅದು ಮರದೊಳಗೆ ಹೋಗಿ ಸಿಲುಕಿರಬಹುದೆಂದು ನಂಬಲಾಗಿದೆ. ಅಂದ್ರೆ 1960ರ ಆಸುಪಾಸಿನಲ್ಲಿ ಅದು ಮರದೊಳಗೆ ಹೋಗಿ ಸಾವನ್ನಪ್ಪಿರಬಹುದೆಂದು ಹೇಳಲಾಗಿದೆ.

    ಮರದೊಳಗೆ ಸಿಲುಕಿದ್ದು ಹೇಗೆ?: ನಾಯಿ ಸಣ್ಣ ಪ್ರಾಣಿಯನ್ನ(ಬಹುಶಃ ರಕೂನ್) ಅಟ್ಟಿಸಿಕೊಂಡು ಮರದ ಕಾಂಡದೊಳಗೆ ಹೋಗಿ ಸಿಲುಕಿರಬಹುದು ಎಂದು ತಜ್ಞರು ನಂಬಿದ್ದಾರೆ. ಮರದೊಳಗೆ ಸಿಲುಕಿದ ನಂತರ ನಾಯಿ ಸುಮಾರು 28 ಅಡಿ ಮೇಲಕ್ಕೆ ಏರುವಲ್ಲಿ ಯಶಸ್ವಿಯಾಗಿದ್ದು ಅದರಿಂದ ಮುಂದೆ ಬರದೆ ಸಾವನ್ನಪ್ಪಿದೆ.

    ಈ ಬಗ್ಗೆ ಫಾರೆಸ್ಟ್ ವಲ್ರ್ಡ್ ನ ಮ್ಯಾನೇಜರ್ ಬ್ರ್ಯಾಂಡಿ ಸ್ಟೀವೆನ್ಸನ್ ಮಾತನಾಡಿ, ಜನ ಯಾವಾಗ್ಲೂ ಆ ನಾಯಿ ಅಲ್ಲಿ ಹೋಗಿ ಹೇಗೆ ಸಿಲುಕಿಕೊಳ್ತು? ಅಂತ ನನ್ನನ್ನು ಕೇಳ್ತಾರೆ. ಆಗೆಲ್ಲಾ ನಾನು, ಅದೊಂದು ಬೇಟೆನಾಯಿ. ರಕೂನ್ ನನ್ನು ಅಟ್ಟಿಸಿಕೊಂಡು ಹೋಗಿರಬಹುದು ಎಂದು ಹೇಳ್ತೀನಿ. ಆಗ ಅವರು ಅಯ್ಯೋ ಪಾಪ.. ಹೀಗೆ ಆಗಬಾರದಿತ್ತು ಅಂತಾರೆ ಎಂದು ಹೇಳಿದ್ರು.

    ನಾಯಿಗೆ ಸ್ಟಕ್ಕಿ ಎಂದು 2002ರಲ್ಲಿ ಹೆಸರಿಡಲಾಗಿದೆ. ಇದಕ್ಕಾಗಿ ಸ್ಪರ್ಧೆಯೊಂದನ್ನ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಸ್ಟಕ್ಕಿ ಹೆಸರಿಗೆ ಮೊದಲನೇ ಸ್ಥಾನ ಸಿಕ್ಕಿತ್ತು. ನಂತರ ಡಾಗ್ ವುಡ್ ಹಾಗೂ ಚಿಪ್ಪರ್ ಎಂಬ ಹೆಸರುಗಳು ಸ್ಥಾನ ಪಡೆದಿದ್ದವು. ಆದ್ರೆ ಕೊನೆಗೆ ಸ್ಟಕ್ಕಿ ಹೆಸರಿನ್ನ ಇಡಲಾಗಿದೆ.

  • ಚಲಿಸುತ್ತಿದ್ದ ಕಾರಿನಲ್ಲಿ ಹಾವಿನ ಸರ್ಕಸ್: ವೈರಲ್ ವಿಡಿಯೋ ನೋಡಿ

    ಚಲಿಸುತ್ತಿದ್ದ ಕಾರಿನಲ್ಲಿ ಹಾವಿನ ಸರ್ಕಸ್: ವೈರಲ್ ವಿಡಿಯೋ ನೋಡಿ

    ಜಾರ್ಜಿಯ: ಚಲಿಸುತ್ತಿದ್ದ ಕಾರಿನಲ್ಲಿ ಹಾವೊಂದು ಸರ್ಕಸ್ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜಾರ್ಜಿಯಾದ ರಿಯಾನ್ ಎಂಬವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರಿನ ಮುಂಭಾಗದಲ್ಲಿ ಹಾವು ಪ್ರತ್ಯಕ್ಷವಾಗಿದೆ.

    ಮುಂಭಾಗದಲ್ಲಿ ಪ್ರತ್ಯಕ್ಷವಾದ ಹಾವು ಬಾನೆಟ್ ಮೇಲೆ ತೆವಳಿಕೊಂಡು ಮುಂಭಾಗಕ್ಕೆ ಎಡಭಾಗದಿಂದ ಬಲಭಾಗಕ್ಕೆ, ಬಲಭಾಗದಿಂದ ಎಡಭಾಗಕ್ಕೆ ಬಂದಿದೆ. ಅಷ್ಟೇ ಅಲ್ಲದೇ ಕಾರಿನ ಎಡಗಡೆಯ ಮಿರರ್ ಮೇಲೆ ಹತ್ತಿ ಬುಸ್ ಬುಸ್ ಎಂದಿದೆ. ಗ್ಲಾಸ್ ಹಾಕಿದ ಕಾರಣ ಕಾರಿನ ಒಳಗಡೆ ಹಾವು ಎಂಟ್ರಿ ಕೊಡಲಿಲ್ಲ.

    ಹಾವು ಮಿರರ್ ಮೇಲೆ ಕುಳಿಕೊಂಡಿರುವ ದೃಶ್ಯಕ್ಕೆ ವಿಡಿಯೋ ಮುಕ್ತಾಯವಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://youtu.be/pPxZ21t3j9E