Tag: George Christie

  • ಸಪ್ತಪದಿ ತುಳಿಯಲು ಸಿದ್ಧರಾದ ಬಿಗ್ ಬಾಸ್ ಸ್ಪರ್ಧಿ

    ಸಪ್ತಪದಿ ತುಳಿಯಲು ಸಿದ್ಧರಾದ ಬಿಗ್ ಬಾಸ್ ಸ್ಪರ್ಧಿ

    ಬೆಂಗಳೂರು: ರಿಯಾಲಿಟಿ ಶೋ ಬಿಗ್ ಬಾಸ್ 3ನೇ ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದ ನಟಿ ಗೌತಮಿ ಗೌಡ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

    ಗೌತಮಿ ಗೌಡ ಖಾಸಗಿ ವಾಹಿನಿಯ ಒಂದು ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದರು. ಆ ಧಾರಾವಾಹಿಯ ಮೂಲಕವೇ ಖ್ಯಾತಿ ಪಡೆದಿದ್ದರು. ನಂತರ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಆದ ಬಿಗ್ ಬಾಸ್ ನ ಸ್ಪರ್ಧಿಯಾಗಿದ್ದರು.

    ಈಗ ಗೌತಮಿ ಗೌಡ ತಾವು ಪ್ರೀತಿಸುತ್ತಿದ್ದ ಹುಡುಗನ ಜೊತೆ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ. ಗೌತಮಿ ಕೆಲವು ವರ್ಷಗಳಿಂದ ಜಾರ್ಜ್ ಕ್ರಿಸ್ಟಿ ಅವರನ್ನು ಪ್ರೀತಿಸುತ್ತಿದ್ದರು. ನಂತರ ಇವರ ಎರಡು ಕುಟುಂಬದವರು ಒಪ್ಪಿ ಗುರು-ಹಿರಿಯರು ಸೇರಿ ಇತ್ತೀಚೆಗೆಷ್ಟೆ ಗೌತಮಿ ಗೌಡ ಹಾಗು ಜಾರ್ಜ್ ಕ್ರಿಸ್ಟಿ ಅವರ ನಿಶ್ಚಿತಾರ್ಥವನ್ನು ಮಾಡಿದ್ದಾರೆ.

    ಗೌತಮಿ ಗೌಡ ತಾವು ಪ್ರೀತಿಸಿದ ಹುಡುಗನ ಜೊತೆ ಮದುವೆಯಾಗುವ ಖುಷಿಯಲ್ಲಿದ್ದಾರೆ. ನಿಶ್ಚಿತಾರ್ಥದ ಫೋಟೋಗಳನ್ನು ತಮ್ಮ ಇನ್ಸ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿ ಸಂತಸವನ್ನು ಹಂಚಿಕೊಂಡಿದ್ದಾರೆ. ಗೌತಮಿಗೌಡ ಅವರು ಕಿರುತೆರೆ ಮಾತ್ರವಲ್ಲದೇ ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.