Tag: Gent wheel

  • ಸೆಲ್ಫಿ ಕ್ಲಿಕ್ಕಿಸಲು ಹೋಗಿ ಜೀವ ಕಳ್ಕೊಂಡ್ಲು!

    ಸೆಲ್ಫಿ ಕ್ಲಿಕ್ಕಿಸಲು ಹೋಗಿ ಜೀವ ಕಳ್ಕೊಂಡ್ಲು!

    ಲಕ್ನೋ: ಜಾತ್ರೆಯಲ್ಲಿ ಜೇಂಟ್ ವೀಲ್ ಮೇಲಿಂದ ಸೆಲ್ಫಿ ಕ್ಲಿಕ್ಕಿಸುವ ವೇಳೆ ಆಯ ತಪ್ಪಿ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಭಾನುವಾರದಂದು ನಡೆದಿದೆ.

    ಬಲ್ಲಿಯಾ ಪ್ರದೇಶದ ನಿವಾಸಿ ರಾಣಿ (20) ಮೃತ ಯುವತಿ. ಭಾನುವಾರದಂದು ಡಾದ್ರಿ ಜಾತ್ರಮಹೋತ್ಸವವನ್ನು ಸದರ್ ಪ್ರದೇಶದಲ್ಲಿ ನಡೆಸಲಾಗಿತ್ತು. ಈ ಜಾತ್ರೆಗೆ ಬಂದಿದ್ದ ರಾಣಿ ತನ್ನ ಗೆಳತಿಯರ ಜೊತೆ ಜೇಂಟ್ ವೀಲ್ ಹತ್ತಿದ್ದಾಳೆ. ತಿರುಗುತ್ತಿದ್ದ ಜೇಂಟ್ ವೀಲ್ ಮೇಲಿಂದ ಸೆಲ್ಫಿ ಕ್ಲಿಕ್ಕಿಸುವ ಸಮಯದಲ್ಲಿ ಆಯ ತಪ್ಪಿ ಕೆಳೆಗೆ ಬಿದ್ದು ಯುವತಿ ಸಾವನ್ನಪ್ಪಿದ್ದಾಳೆ.

    ಯುವತಿ ಕೆಳಗೆ ಬಿದ್ದ ತಕ್ಷಣವೇ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತುಂಬ ಎತ್ತರದಿಂದ ಬಿದ್ದ ಪರಿಣಾಮ ರಾಣಿ ತೀವ್ರ ಗಾಯಗೊಂಡಿದ್ದಳು. ಆದರಿಂದ ವೈದ್ಯರು ಚಿಕಿತ್ಸೆ ನೀಡುತ್ತಿದ್ದ ವೇಳೆಯೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

    ಪೊಲೀಸರು ಯುವತಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನೆ ಕುರಿತು ಬಲ್ಲಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv