Tag: Genome Sequencing

  • ವೇಗವಾಗಿ ಹರಡುವ ಚೀನಾದ ಕೋವಿಡ್ ಹೊಸ ತಳಿ ಭಾರತದಲ್ಲಿ ಪತ್ತೆ – ರಾಜ್ಯಗಳಲ್ಲಿ ಹೈ ಅಲರ್ಟ್

    ವೇಗವಾಗಿ ಹರಡುವ ಚೀನಾದ ಕೋವಿಡ್ ಹೊಸ ತಳಿ ಭಾರತದಲ್ಲಿ ಪತ್ತೆ – ರಾಜ್ಯಗಳಲ್ಲಿ ಹೈ ಅಲರ್ಟ್

    ನವದೆಹಲಿ: ಚೀನಾದ ಆತಂಕಕ್ಕೆ ಕಾರಣವಾಗಿರುವ ಕೊರೊನಾ ವೈರಸ್ (Corona Virus) ಓಮಿಕ್ರಾನ್‌ನ ಉಪತಳಿ ಬಿಎಫ್.7 (BF.7 Variant) ಸೋಂಕಿನ 4 ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ.

    ಭಾರತದಲ್ಲಿ ಒಟ್ಟು ನಾಲ್ಕು ಪ್ರಕರಣಗಳು ವರದಿಯಾಗಿದ್ದು, ಗುಜರಾತ್ (Gujarat) ಹಾಗೂ ಒಡಿಶಾ (Odisha) ರಾಜ್ಯಗಳಲ್ಲಿ ತಲಾ ಎರಡು ಪ್ರಕರಣಗಳು ವರದಿಯಾಗಿವೆ. ಬಿಎಫ್.7 ಸೋಂಕಿನ ಮೊದಲ ಪ್ರಕರಣ ಅಕ್ಟೋಬರ್‌ನಲ್ಲಿ ಗುಜರಾತ್‌ನಲ್ಲಿ ಪತ್ತೆಯಾಯಿತು. ಗುಜರಾತ್ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರವು (Serum Institute of India) ಈ ಪ್ರಕರಣವನ್ನು ಪತ್ತೆ ಮಾಡಿತು. 2ನೇ ಪ್ರಕರಣವೂ ಗುಜರಾತ್‌ನಲ್ಲಿ ಪತ್ತೆಯಾಗಿದ್ದರೆ, ಉಳಿದೆರಡು ಪ್ರಕರಣಗಳು ಒಡಿಶಾದಲ್ಲಿ ವರದಿಯಾಗಿವೆ.

    ಚೀನಾದಲ್ಲಿ ಸದ್ಯ ಅಧಿಕ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿರುವುದಕ್ಕೆ ವೈರಸ್‌ನ ಈ ಬಿಎಫ್.7 ಉಪತಳಿಯೇ ಕಾರಣ ಎಂದು ಮೂಲಗಳು ತಿಳಿಸಿವೆ. ಯುಎಸ್, ಯುಕೆ, ಯುರೋಪಿಯನ್ ದೇಶಗಳಾದ ಬೆಲ್ಜಿಯಂ, ಜರ್ಮನಿ, ಫ್ರಾನ್ಸ್ ಹಾಗೂ ಡೆನ್ಮಾರ್ಕ್ ದೇಶಗಳಲ್ಲೂ ಬಿಫ್.7 ಉಪತಳಿ ಪತ್ತೆಯಾಗಿದ್ದು, ಆತಂಕ ಹೆಚ್ಚಿಸಿದೆ. ಇದನ್ನೂ ಓದಿ: ಆಸ್ಪತ್ರೆಗಳು ಭರ್ತಿ, ಸ್ಮಶಾನದಲ್ಲಿ ಶವಗಳ ರಾಶಿ – ಚೀನಾದಲ್ಲಿ ಕೋವಿಡ್‌ ಸುನಾಮಿಗೆ ಕಾರಣ ಏನು?

    ಚೀನಾದಲ್ಲಿ (China) ಓಮಿಕ್ರಾನ್‌ನ ಉಪತಳಿ ಬಿಎಫ್.7 ಸೋಂಕು ವೇಗವಾಗಿ ಹರಡುತ್ತಿದೆ. ಚೀನಾ ಪ್ರಜೆಗಳ ದೇಹದಲ್ಲಿ ಈ ಮೊದಲು ಕಾಣಿಸಿಕೊಂಡ ಕೊರೊನಾ ಸೋಂಕಿನಿಂದಾಗಿ ವೃದ್ಧಿಸಿರುವ ರೋಗನಿರೋಧಕ ಶಕ್ತಿ ಕಡಿಮೆ ಮಟ್ಟದಲ್ಲಿ ಇರಬಹುದು. ಇಲ್ಲವೇ, ಅವರಿಗೆ ನೀಡಿರುವ ಲಸಿಕೆಯು ಪರಿಣಾಮಕಾರಿಯಾಗಿರದೇ ಇರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕೊರೊನಾ ಆರ್ಭಟಕ್ಕೆ ಮತ್ತೆ ನಲುಗಿದ ಚೀನಾ – ಆಸ್ಪತ್ರೆಗಳೆಲ್ಲಾ ಫುಲ್

    ಭಾರತದಲ್ಲಿ ಈಗಾಗಲೇ ಎಲ್ಲ ರಾಜ್ಯಗಳೂ ಅಲರ್ಟ್ ಆಗಿದ್ದು, ಸಾರ್ವಜನಿಕರು ಜಾಗೃತವಾಗಿರುವಂತೆ ಸೂಚಿಸಿವೆ. ಜನರು ಗುಂಪಿನಲ್ಲಿದ್ದಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಅಲ್ಲದೇ ಉಪತಳಿಗಳನ್ನು ಶೀಘ್ರವಾಗಿ ಪತ್ತೆಹಚ್ಚಲು ಜಿನೋಮ್ ಸಿಕ್ವೆನ್ಸಿಂಗ್ ಲ್ಯಾಬ್‌ಗೆ ಮಾದರಿ ಕಳುಹಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೇಳಿದೆ.

    ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 129 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 3,408ಕ್ಕೆ ಏರಿಕೆಯಾಗಿದೆ. 24 ಗಂಟೆಯಲ್ಲಿ ಒಂದು ಸಾವಿನ ಪ್ರಕರಣ ದಾಖಲಾಗಿದೆ.

    Live Tv

    [brid partner=56869869 player=32851 video=960834 autoplay=true]

  • ಕೊರೊನಾ ಆರ್ಭಟಕ್ಕೆ ಮತ್ತೆ ನಲುಗಿದ ಚೀನಾ – ಆಸ್ಪತ್ರೆಗಳೆಲ್ಲಾ ಫುಲ್

    ಕೊರೊನಾ ಆರ್ಭಟಕ್ಕೆ ಮತ್ತೆ ನಲುಗಿದ ಚೀನಾ – ಆಸ್ಪತ್ರೆಗಳೆಲ್ಲಾ ಫುಲ್

    ನವದೆಹಲಿ/ಬೀಜಿಂಗ್: ಕೋವಿಡ್ ವೈರಸ್ (Corona Virus) ಸೃಷ್ಟಿಕರ್ತ ಚೀನಾ (China) ದೇಶವೀಗ ಮತ್ತೆ ವೈರಸ್ ಅಟ್ಟಹಾಸಕ್ಕೆ ತತ್ತರಿಸಿದೆ. ನಿತ್ಯವೂ ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರಕರಣಗಳು ವರದಿ ಆಗ್ತಿದ್ದು, ಆಸ್ಪತ್ರೆಗಳೆಲ್ಲಾ (Hospitals) ಹೌಸ್‌ಫುಲ್ ಆಗಿಬಿಟ್ಟಿವೆ.

    ಲಕ್ಷಾಂತರ ಮಂದಿ ಸೋಂಕಿನಿಂದ ನಲುಗ್ತಿದ್ದಾರೆ. ನಿನ್ನೆ ಬೀಜಿಂಗ್‌ನಲ್ಲಿ ಕೋವಿಡ್‌ಗೆ ಇಬ್ಬರು ಬಲಿ ಆಗಿದ್ದಾರೆ. ಇನ್ನೊಂದು ಮೂಲದ ಪ್ರಕಾರ ಒಂದು ವಾರದ ಅಂತರದಲ್ಲಿ ಬೀಜಿಂಗ್‌ನಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 2,700ಕ್ಕಿಂತಲೂ ಹೆಚ್ಚಾಗಿದೆ. ಇದನ್ನೂ ಓದಿ: ಬಿಜೆಪಿಯನ್ನು ನಾಯಿ, ಇಲಿ ಎಂದು ಟೀಕಿಸಿದ ಖರ್ಗೆ ಜೊತೆ ಊಟ ಮಾಡಿದ ಮೋದಿ

    ಸ್ಥಳೀಯ ಮಾಧ್ಯಮಗಳ ಪ್ರಕಾರ, ಬೀಜಿಂಗ್‌ನ ಸ್ಮಶಾನಗಳೆಲ್ಲ ಕೋವಿಡ್ ಶವಗಳಿಂದ ತುಂಬಿಹೋಗಿವೆ. ಪ್ರತಿದಿನ ಏನಿಲ್ಲ ಅಂದ್ರೂ ಒಂದೊಂದು ಸ್ಮಶಾನಕ್ಕೆ ಕನಿಷ್ಠ 200 ಶವ ಬರ್ತಿವೆ. ಇದು ಆರಂಭ ಮಾತ್ರ. ಮುಂದಿನ ಮೂರು ತಿಂಗಳಲ್ಲಿ ಚೀನಾದ ಶೇ.60ರಷ್ಟು ಜನರನ್ನು ಕೋವಿಡ್ ಆವರಿಸಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಾಬರ್ ದೊಡ್ಡ ಸೊನ್ನೆ; ಕೊಹ್ಲಿಯೊಂದಿಗೆ ಹೋಲಿಕೆ ಮಾಡೋದು ನಿಲ್ಸಿ – ಪಾಕ್ ಮಾಜಿ ಕ್ರಿಕೆಟಿಗ ಆಕ್ರೋಶ

    ಚೀನಾ ಸರ್ಕಾರ ಝೀರೋ ಕೋವಿಡ್ ಪಾಲಿಸಿಯನ್ನು ಕೈಬಿಟ್ಟ ನಂತರ ಚೀನಾಗೆ ಈ ಸ್ಥಿತಿ ಬಂದೊದಗಿದೆ. ಚೀನಾ, ಜಪಾನ್, ಅಮೆರಿಕಾ ಸೇರಿ ಹಲವು ದೇಶಗಳಲ್ಲಿ ಕೋವಿಡ್ ಕೇಕೆ ಹಾಕುತ್ತಿರುವ ಕಾರಣ, ಭಾರತ ಸರ್ಕಾರ (Government Of India) ಅಲರ್ಟ್ ಆಗಿದೆ. ನಿತ್ಯ ವರದಿ ಆಗೋ ಪಾಸಿಟಿವ್ ಪ್ರಕರಣವನ್ನು ಜಿನೋಮ್ (Genome Sequencing) ಟೆಸ್ಟ್‌ ಕಳಿಸಬೇಕೆಂದು ರಾಜ್ಯಗಳಿಗೆ ಆದೇಶ ನೀಡಿದೆ. ಸದ್ಯಕ್ಕೆ ನಮ್ಮ ದೇಶದಲ್ಲಿ ವಾರಕ್ಕೆ 1,200 ಕೇಸ್‌ಗಳು ದಾಖಲಾಗುತ್ತಿವೆ.

    Live Tv
    [brid partner=56869869 player=32851 video=960834 autoplay=true]