Tag: generator

  • ಸಾಗರ | ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಜನರೇಟರ್‌ ಸ್ಫೋಟ – ಯುವಕನಿಗೆ ಗಂಭೀರ ಗಾಯ

    ಸಾಗರ | ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಜನರೇಟರ್‌ ಸ್ಫೋಟ – ಯುವಕನಿಗೆ ಗಂಭೀರ ಗಾಯ

    ಶಿವಮೊಗ್ಗ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಜನರೇಟರ್‌ (Generator) ಸ್ಫೋಟಗೊಂಡು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸಾಗರ (Sagar) ತಾಲೂಕಿನ ಡಿಗಟೆಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಗಾಯಗೊಂಡ ಯುವಕ ಲೋಕೇಶ್‌ಗೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ (Shivamogga) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಸ್ತಿಕಂಬ ಗಣೇಶೋತ್ಸವ ಸಮಿತಿಯ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪಟಾಕಿ ಸ್ಫೋಟ – ಓರ್ವ ಬಾಲಕ ದುರ್ಮರಣ

    ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ. ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಕಾರು ಅಪಘಾತ – ಬಿಜೆಪಿ ಶಾಸಕಿ ದೀಪ್ತಿ ಕಿರಣ್ ಮಹೇಶ್ವರಿಗೆ ಗಂಭೀರ ಗಾಯ

  • ಜನರೇಟರ್ ಆಫ್ ಆಗಿದ್ದಕ್ಕೆ ಮದುವೆನೇ ಕ್ಯಾನ್ಸಲ್ ಮಾಡಿದ್ಲು

    ಜನರೇಟರ್ ಆಫ್ ಆಗಿದ್ದಕ್ಕೆ ಮದುವೆನೇ ಕ್ಯಾನ್ಸಲ್ ಮಾಡಿದ್ಲು

    ಲಕ್ನೋ: ಮೆರವಣಿಗೆ ವೇಳೆ ಜನರೇಟರ್ ಆಫ್ ಆಗಿದಕ್ಕೆ ಮದುವೆ ಮನೆ ರಣರಂಗವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವಧು-ವರ ಕಡೆಯವರು ಪರಸ್ಪರ ಕಿತ್ತಾಟ ನಡೆಸಿದ್ದು, ಈ ವೇಳೆ ವರ ಮತ್ತು ಆತನ ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ಕಾರಣಕ್ಕೆ ವಧು ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ ಎಂದು ವರ ಅಳಲು ತೊಡಿಕೊಂಡಿದ್ದಾನೆ.

    ಶಹಜಾಪುರ ಠಾಣಾ ಪ್ರದೇಶದಿಂದ ಪಿಲಿಭಿತ್‍ನ ಠಾಣಾ ಬಿಲ್ಸಂದಾ ಪ್ರದೇಶದ ಮುದಿಯ ಬಿಲ್ಹಾರ ಗ್ರಾಮಕ್ಕೆ ಮದುವೆ ಮೆರವಣೆ ಉತ್ತಮವಾಗಿ ಸಾಗಿತು. ನಂತರ ಎಲ್ಲರೂ ಕೂಡ ಊಟ ಮಾಡಿದರು. ಕಾರ್ಯಕ್ರಮ ಚೆನ್ನಾಗಿಯೇ ನಡೆಯುತ್ತಿತ್ತು. ಅಷ್ಟರಲ್ಲಿ ಜನರೇಟರ್ ಇದ್ದಕ್ಕಿದ್ದಂತೆ ಆಫ್ ಆಗಿದೆ. ಆಗ ಎರಡು ಮನೆಯವರ ನಡುವೆ ವಾಗ್ವಾದ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ವಧುವಿನ ಮನೆಯವರು ವರ ಹಾಗೂ ಆತನ ಸ್ನೇಹಿತರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ಎರಡು ಕಡೆಯವರ ಜಗಳ ಬಿಡಿಸಿ ಸಮಾಧಾನ ಪಡಿಸಿದರು. ಮತ್ತೊಂದೆಡೆ ವಧು ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ ಎಂದು ವರ ಪೊಲೀಸರಿಗೆ ದೂರು ನೀಡಿದ್ದಾನೆ. ಇದನ್ನೂ ಓದಿ: ಆಫರ್‌ ಬೆನ್ನಲ್ಲೇ ದಾಖಲೆ ಪ್ರಮಾಣದಲ್ಲಿ ರಷ್ಯಾದಿಂದ ತೈಲ ಖರೀದಿಸಿದ ಭಾರತ

    ನಂತರ ಪೊಲೀಸ್ ಠಾಣೆಗೆ ಕುಟುಂಬಸ್ಥರೊಂದಿಗೆ ಬಂದ ವಧು, ಮದುವೆ ಮೆರವಣಿಗೆ ನಂತರ ವರನ ಕಡೆಯವರು ತನ್ನ ಸಹೋದರನನ್ನು ಕೊಲ್ಲುವುದಾಗಿ ಮಾತನಾಡುತ್ತಿದ್ದರು. ಹೀಗಾಗಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾಳೆ. ಅಲ್ಲದೇ ಪೊಲೀಸರ ಸಮ್ಮುಖದಲ್ಲಿಯೇ ವಧು ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಕೊನೆಗೆ ವರ ಮತ್ತು ಆತನ ಕಡೆಯವರು ತಮ್ಮ ಗ್ರಾಮಕ್ಕೆ ಹಿಂದಿರುಗಿದರು.  ಇದನ್ನೂ ಓದಿ: ಪಬ್ಲಿಕ್ ಟಿವಿ ಜೊತೆ ಡಿಕೆಶಿ ತಾಯಿ ಮಾತಾಡಿದ್ದ ವೀಡಿಯೋ ಶೇರ್ ಮಾಡ್ಕೊಂಡು ಸಿದ್ದುಗೆ ಬಿಜೆಪಿ ಟಾಂಗ್

    Live Tv
    [brid partner=56869869 player=32851 video=960834 autoplay=true]

  • ಗಣೇಶ ವಿಸರ್ಜನೆ ವೇಳೆ ಜನರೇಟರ್‌ಗೆ ಸಿಲುಕಿ ಯುವಕನ ಕೈಕಟ್

    ಗಣೇಶ ವಿಸರ್ಜನೆ ವೇಳೆ ಜನರೇಟರ್‌ಗೆ ಸಿಲುಕಿ ಯುವಕನ ಕೈಕಟ್

    ರಾಮನಗರ: ಗಣೇಶ ವಿಸರ್ಜನೆ ವೇಳೆ ಜನರೇಟರ್‌ಗೆ ಯುವಕನ ಕೈ ಸಿಲುಕಿ ಕಟ್ ಆಗಿರುವ ಘಟನೆ ರಾಮನಗರದಲ್ಲಿ ತಡರಾತ್ರಿ ನಡೆದಿದೆ.

    ನರೇಂದ್ರ ಕೈ ಕಳೆದುಕೊಂಡ ಯುವಕ. ನರೇಂದ್ರ ರಾಮನಗರದ ಚಾಮುಂಡೇಶ್ವರಿ ಬಡಾವಣೆ ನಿವಾಸಿ. ಶನಿವಾರ ಬಡಾವಣೆಯಲ್ಲಿ ಕೂರಿಸಿದ್ದ ಗಣೇಶನ ವಿಸರ್ಜನೆ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಟ್ರಾಕ್ಟರಿನಲ್ಲಿ 6.5 ಅಡಿ ಎತ್ತರದ ಗಣೇಶನನ್ನು ವಿಸರ್ಜಿಸಲು ನಗರದ ರಂಗರಾಯರದೊಡ್ಡಿ ಕೆರೆಯ ಬಳಿಗೆ ತೆಗೆದುಕೊಂಡು ಹೋಗಲಾಗಿತ್ತು.

    ಕೆರೆಯ ಬಳಿ ಆಗಮಿಸಿದ ಟ್ರಾಕ್ಟರಿನಲ್ಲಿ ಇದ್ದ ಯುವಕನ ಕೇಸರಿ ಟವಲ್ ಚಾಲನೆಯಲ್ಲಿದ್ದ ಜನರೇಟರ್‌ಗೆ ಸಿಲುಕಿಕೊಂಡಿದೆ. ಟವಲ್‍ನ ಜೊತೆ ಆತನ ಕೈ ಕೂಡ ಜನರೇಟರ್ ನ ಫ್ಯಾನ್ ಗೆ ಸಿಲುಕಿದ್ದು, ಅರ್ಧ ಕೈಕಟ್ ಆಗಿದೆ.

    ಸದ್ಯ ಕೈ ಕಳೆದುಕೊಂಡ ಯುವಕ ನರೇಂದ್ರನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಜನರೇಟರ್ ಬಳಸಿ ಮೊಬೈಲ್ ಚಾರ್ಜ್ ಮಾಡಿ ಸಂಬಂಧಿಕರನ್ನು ಸಂಪರ್ಕಿಸುತ್ತಿದ್ದಾರೆ ಸಂತ್ರಸ್ತರು

    ಜನರೇಟರ್ ಬಳಸಿ ಮೊಬೈಲ್ ಚಾರ್ಜ್ ಮಾಡಿ ಸಂಬಂಧಿಕರನ್ನು ಸಂಪರ್ಕಿಸುತ್ತಿದ್ದಾರೆ ಸಂತ್ರಸ್ತರು

    ಬೆಳಗಾವಿ(ಚಿಕ್ಕೋಡಿ): ಎಡಬಿಡದೆ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ನದಿ ತೀರದ ಗ್ರಾಮಗಳಲ್ಲಿ ಒಂದೆಡೆ ಪ್ರವಾಹ ಸೃಷ್ಟಿಯಾಗಿದ್ದರೆ, ಇನ್ನೊಂದೆಡೆ ವಿದ್ಯುತ್ ಇಲ್ಲದೆ ಜನ ಪರದಾಡುತ್ತಿದ್ದಾರೆ.

    ಈಗಾಗಲೇ ಜಿಲ್ಲೆಯ 323 ಗ್ರಾಮಗಳು ಪ್ರವಾಹ ಸ್ಥಿತಿಯನ್ನು ಎದುರಿಸುತ್ತಿದೆ. ಈ ನಡುವೆ ಸುತ್ತಮುತ್ತಲು ಏನಾಗುತ್ತಿದೆ ಎಂಬುದನ್ನು ತಿಳಿಯಲು ಯಾವುದೇ ಸಂವಹನ ಸೌಲಭ್ಯವಿಲ್ಲದೆ, ಬೇರೆಡೆಗೆ ಹೋಗಲು ರಸ್ತೆ ಸಂಪರ್ಕವಿಲ್ಲದೆ ಜನರು ಕಂಗಲಾಗಿದ್ದರೆ. ಜಿಲ್ಲೆಯ ಬಹುತೇಹ ಗ್ರಾಮಗಳು ಅಲ್ಲಿನ ಹರಿಯುವ ನದಿಗಳ ಅಬ್ಬರಕ್ಕೆ ಜಲಾವೃತಗೊಂಡಿದೆ. ವಿದ್ಯುತ್ ಸಂಪರ್ಕವಿಲ್ಲದೆ ನದಿ ಪಾತ್ರದ ಜನರು ಕತ್ತಲಲ್ಲಿ ಮುಳುಗಿದ್ದಾರೆ.

    ಜನರ ಬಳಿ ಇರುವ ಮೊಬೈಲ್‍ಗಳೆಲ್ಲಾ ಸ್ವಿಚ್ ಆಫ್ ಆಗಿದ್ದು, ತಮ್ಮ ಆಪ್ತರನ್ನು ಸಂಪರ್ಕ ಮಾಡಲು ಆಗದೇ ಸಂಕಷ್ಟದಲ್ಲಿದ್ದಾರೆ. ಈ ನಡುವೆ ಪಂಪ್ ಗಳಿಗೆ ಬಳಸುತ್ತಿದ್ದ ಡೀಸೆಲ್ ಜನರೇಟರ್ ಬಳಸಿಕೊಂಡು ಮೊಬೈಲ್‍ಗಳನ್ನು ಚಾರ್ಜ್ ಮಾಡುತ್ತಿದ್ದಾರೆ.

    ಜನರೇಟರ್ ಬಳಸಿಕೊಂಡು ಜನರು ಸಾಮೂಹಿಕವಾಗಿ ಮೊಬೈಲ್ ಚಾರ್ಜ್ ಮಾಡಿಕೊಳ್ಳುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈಗಾಗಲೇ ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯದಲ್ಲಿ ಎನ್‍ಡಿಆರ್‍ಎಫ್ ತಂಡ ತೊಡಗಿದೆ. ನಿರಾಶ್ರಿತರಿಗಾಗಿ ಗಂಜಿ ಕೇಂದ್ರಗಳನ್ನೂ ಕೂಡ ತೆರೆಯಲಾಗಿದೆ.

    https://www.youtube.com/watch?v=xy9ITwQCxI0