Tag: General Motors

  • ಕಾರುಗಳಿಗೂ ಚಾಟ್‌ಜಿಪಿಟಿ ಅಳವಡಿಸಲು General Motors ಚಿಂತನೆ

    ಕಾರುಗಳಿಗೂ ಚಾಟ್‌ಜಿಪಿಟಿ ಅಳವಡಿಸಲು General Motors ಚಿಂತನೆ

    ವಾಷಿಂಗ್ಟನ್: ಅಮೆರಿಕದ (USA) ಪ್ರಖ್ಯಾತ ವಾಹನ ಸಂಸ್ಥೆ ಹಾಗೂ ಷೆವರ್ಲೆ, ಬ್ಯೂಕ್, ಜಿಎಂಸಿ ಮತ್ತು ಕ್ಯಾಡಿಲಾಕ್ ಕಾರುಗಳನ್ನು ಉತ್ಪಾದಿಸುವ ಜನರಲ್ ಮೋಟರ್ಸ್ (General Motors) ತನ್ನ ವಾಹನಗಳಲ್ಲಿ ಚಾಟ್‌ಜಿಪಿಟಿ (ChatGPT) ತಂತ್ರಜ್ಞಾನ ಬಳಸಲು ನಿರ್ಧರಿಸಿದೆ.

    ಮೈಕ್ರೋಸಾಫ್ಟ್ ಕಾರ್ಪ್ (Microsoft Corp) ಸಹಯೋಗದ ಭಾಗವಾಗಿ ಚಾಟ್‌ಜಿಪಿಟಿ ಅಳವಡಿಸಲು ನಿರ್ಧರಿಸಿರುವುದಾಗಿ ಜನರಲ್ ಮೋಟರ್ಸ್ ಉಪಾಧ್ಯಕ್ಷ ಸ್ಕಾಟ್ ಮಿಲ್ಲರ್ (Scott Miller) ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ಅತಿದೊಡ್ಡ ಬ್ಯಾಂಕ್ ದಿವಾಳಿ – Silicon Valley Bank ಬಂದ್

    ಸಾಮಾನ್ಯವಾಗಿ ಚಾಟ್‌ಜಿಪಿಟಿ ಎಲ್ಲದರಲ್ಲೂ ಬಳಕೆಯಲ್ಲಿದೆ. ಹಾಗಾಗಿ ವಾಹನಗಳ ವೈಶಿಷ್ಟ್ಯಗಳು, ಗ್ಯಾರೇಜ್ ಡೋರ್ ಕೋಡ್‌ನಂತಹ ಪ್ರೋಗ್ರಾಮ್‌ಗಳು ಅಥವಾ ಕ್ಯಾಲೆಂಡರ್ ವೇಳಾಪಟ್ಟಿ ಸಂಯೋಜನೆ ಮಾಡುವುದು ಹೇಗೆ? ಎಂಬೆಲ್ಲಾ ಮಾಹಿತಿ ತಿಳಿಯಲು ಚಾಟ್‌ಜಿಪಿಟಿ ಬಳಸಬಹುದು. ಈ ಹಿಂದೆ ಅಮೆರಿಕದಲ್ಲಿ ಕೃತಕ ಬುದ್ಧಿಮತ್ತೆ ಸಾಧನಗಳನ್ನ ವರ್ಚುವಲ್ ಪರ್ಸನಲ್ ಅಸಿಸ್ಟೆಂಟ್ ಕೆಲಸಕ್ಕಾಗಿ ಬಳಸಲಾಗುತ್ತಿತ್ತು ಎಂದು ಮಿಲ್ಲರ್ ಹೇಳಿದ್ದಾರೆ. ಇದನ್ನೂ ಓದಿ: ಈ ಇಲಿಗೆ ತಾಯಿ ಇಲ್ಲ.. ಇಬ್ಬರು ತಂದೆಯಂದಿರಂತೆ – ಸಲಿಂಗಿಗಳಿಂದ ಜನಿಸುತ್ತವೆ ಜೈವಿಕ ಮಕ್ಕಳು!

    ಈ ವರ್ಷದ ಆರಂಭದಲ್ಲಿ ಮೈಕ್ರೋಸಾಫ್ಟ್ ಚಾಟ್‌ಜಿಪಿಟಿ ಮಾಲೀಕ ಓಪನ್‌ಎಐ ನಲ್ಲಿ (ಕೃತಕ ಬುದ್ದಿಮತ್ತೆ) ಬಹು-ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಜೊತೆಗೆ ತನ್ನ ಎಲ್ಲಾ ಉತ್ಪನ್ನಗಳಿಗೆ ಚಾಟ್‌ಬಾಟ್‌ನ ತಂತ್ರಜ್ಞಾನ ಅಳವಡಿಸುವ ಗುರಿ ಹೊಂದಿದೆ. ಹಾಗಾಗಿ ದೈತ್ಯ ಟೆಕ್ ಕಂಪನಿಯಾಗಿರುವ ಮೈಕ್ರೋಸಾಫ್ಟ್ ವಾಹನಗಳಲ್ಲಿ ಹೆಚ್ಚಿನ ತಂತ್ರಜ್ಞಾನ ಅಳವಡಿಸುವ ಪ್ರಯತ್ನ ಮುಂದುವರಿಸಿದೆ.

  • ಅಮೆರಿಕದ ಜನರಲ್‌ ಮೋಟಾರ್ಸ್‌ ಪ್ಲ್ಯಾಂಟ್‌ ಖರೀದಿಸಲಿದೆ ಮಹೀಂದ್ರಾ

    ಅಮೆರಿಕದ ಜನರಲ್‌ ಮೋಟಾರ್ಸ್‌ ಪ್ಲ್ಯಾಂಟ್‌ ಖರೀದಿಸಲಿದೆ ಮಹೀಂದ್ರಾ

    ಮುಂಬೈ: ಮಹೀಂದ್ರಾ ಕಂಪನಿ ಮಹಾರಾಷ್ಟ್ರದ ತಾಳೆಗಾಂವ್‌ನಲ್ಲಿರುವ ಅಮೆರಿಕದ ಕಾರು ತಯಾರಕ ಕಂಪನಿ ಜನರಲ್‌ ಮೋಟಾರ್ಸ್‌ನ ಉತ್ಪಾದನಾ ಘಟಕವನ್ನು ಖರೀದಿಸುವ ಸಾಧ್ಯತೆಯಿದೆ.

    ಮಹೀಂದ್ರಾ ಕಂಪನಿಯ ಕಾರ್ಯನಿರ್ವಾಹಕರು ಹಲವು ಬಾರಿ ಆಗಮಿಸಿ ಜನರಲ್‌ ಮೋಟಾರ್ಸ್‌ ಘಟಕ ವೀಕ್ಷಣೆ ಮಾಡಿದ್ದಾರೆ.

    ಮಹೀಂದ್ರಾ ಅಲ್ಲದೇ ಬ್ರಿಟಿಷ್‌ ಕಂಪನಿ ಎಂಜಿ ಮೋಟಾರ್ಸ್‌ ಈ ಘಟಕವನ್ನು ಖರೀದಿಸಲು ಉತ್ಸಾಹ ತೋರಿಸಿದೆ. ಆದರೆ ಎಂಜಿ ಮೋಟಾರ್ಸ್‌ನಲ್ಲಿ ಚೀನಾ ಹೂಡಿಕೆ ಇದ್ದು, ಪರಿಶೀಲನೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಜನರಲ್‌ ಮೋಟಾರ್ಸ್‌ ಮಾತುಕತೆಯಿಂದ ಹಿಂದೆ ಸರಿದಿದೆ ಎಂದು ವರದಿಯಾಗಿದೆ.

    ಮಹೀಂದ್ರಾ ಕಂಪನಿಯ ಡೀಲ್‌ ಯಶಸ್ವಿಯಾದರೆ ಅಮೆರಿಕದ ಅಟೋಮೊಬೈಲ್‌ ಕಂಪನಿಯ ಘಟಕವನ್ನು ಖರೀದಿಸಿದ ಎರಡನೇ ಸ್ವದೇಶಿ ಕಂಪನಿ ಎಂಬ ಹೆಗ್ಗಳಿಕಗೆ ಮಹೀಂದ್ರಾ ಪಾತ್ರವಾಗಲಿದೆ. ಈ ಹಿಂದೆ ಟಾಟಾ ಕಂಪನಿ ಗುಜರಾತಿನಲ್ಲಿದ್ದ ಫೋರ್ಡ್‌ ಕಂಪನಿಯ ಉತ್ಪಾದನಾ ಘಟಕವನ್ನು ಖರೀದಿಸಿತ್ತು. ಇದನ್ನೂ ಓದಿ: 725.7 ಕೋಟಿ ಡೀಲ್‌ – ಗುಜರಾತ್‌ನ ಫೋರ್ಡ್‌ ಘಟಕ ಖರೀದಿಸಿದ ಟಾಟಾ

    ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ 700 ಮತ್ತು ಎನ್‌ ಎಸ್‌ಯುವಿ ಒಟ್ಟು 2.40 ಲಕ್ಷ ಬುಕ್ಕಿಂಗ್‌ ಆಗಿದ್ದು 12-18 ತಿಂಗಳು ಕಾಯಬೇಕಿದೆ. 2027ರ ಒಳಗಡೆ ಒಟ್ಟು 2 ಲಕ್ಷ ಎಲೆಕ್ಟ್ರಿಕ್‌ ಕಾರನ್ನು ಉತ್ಪಾದನೆ ಮಾಡುವ ಗುರಿಯನ್ನು ಮಹೀಂದ್ರಾ ಹಾಕಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಚೀನಾದಲ್ಲಿ ಜನರಲ್ ಮೋಟಾರ್ಸ್ ಸಂಸ್ಥೆಯ ಕಾರು ಉತ್ಪಾದನೆ ನಿಲ್ಲಿಸಿ: ಡೊನಾಲ್ಡ್ ಟ್ರಂಪ್

    ಚೀನಾದಲ್ಲಿ ಜನರಲ್ ಮೋಟಾರ್ಸ್ ಸಂಸ್ಥೆಯ ಕಾರು ಉತ್ಪಾದನೆ ನಿಲ್ಲಿಸಿ: ಡೊನಾಲ್ಡ್ ಟ್ರಂಪ್

    ವಾಷಿಂಗ್ಟನ್: ಅಮೆರಿಕ ಮೂಲದ ಕಾರು ಉತ್ಪಾದಕ ಸಂಸ್ಥೆ ಜನರಲ್ ಮೋಟಾರ್ಸ್ ಗೆ ಚೀನಾದಲ್ಲಿ ಉತ್ಪಾದನೆ ನಿಲ್ಲಿಸುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ ಎನ್ನುವ ಮಾಹಿತಿಯನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಅಮೆರಿಕದ ಪ್ರಖ್ಯಾತ ಕಾರು ತಯಾರಿಕಾ ಸಂಸ್ಥೆಯಾದ ಜನರಲ್ ಮೋಟಾರ್ಸ್ ಚೀನಾದಲ್ಲಿ ಉತ್ಪಾದನಾ ಘಟಕವನ್ನು ಹೊಂದಿದೆ. ಆದರೆ ಈಗ ಈ ಘಟಕವನ್ನು ಸ್ಥಗಿತಗೊಳಿಸಿ ಅಮೆರಿಕದ ಬಹಿಯೊ ರಾಜ್ಯದಲ್ಲಿ ಘಟಕ ಸ್ಥಾಪಿಸಲು ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

    ಚೀನಾದಲ್ಲಿ ಸ್ಥಗಿತ ಮಾಡಲು ಹೇಳಿದ್ದೇಕೆ?
    ಇತ್ತೀಚೆಗೆ ಜನರಲ್ ಮೋಟಾರ್ಸ್ ಕಂಪನಿ ತನ್ನ ಅಮೆರಿಕ ಮತ್ತು ಕೆನಡಾ ಘಟಕಗಳಲ್ಲಿರುವ 14,800 ಉದ್ಯೋಗಗಳನ್ನು ಕಡಿತಗೊಳಿಸಲು ಚಿಂತನೆ ನಡೆಸುತ್ತಿದ್ದು, ಇದರಿಂದಾಗಿ 2020ರ ಅಂತ್ಯಕ್ಕೆ ಕಂಪನಿಗೆ ಸುಮಾರು 4.5 ಬಿಲಿಯನ್ ಡಾಲರ್ ಉಳಿತಾಯವಾಗುತ್ತದೆಂದು ಘೋಷಿಸಿತ್ತು.ಕಂಪನಿಯ ನಿರ್ಧಾರವನ್ನು ಡೊನಾಲ್ಡ್ ಟ್ರಂಪ್ ಖುದ್ದು ಶ್ವೇತ ಭವನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಜನರಲ್ ಮೋಟಾರ್ಸ್ ತೀರ್ಮಾನ ನಮಗೆ ಒಪ್ಪಿಗೆ ಆಗಲಿಲ್ಲ ಅಂತ ಅಸಮಾಧಾನ ಹೊರಹಾಕಿದ್ದರು.

    ಕಂಪನಿಯ ನಿರ್ಣಯದಿಂದ ಅಮೆರಿಕಾದ ಬಹಿಯೊ ಮತ್ತು ಮಿಚಿಗನ್ ರಾಜ್ಯಗಳ ಜನರ ಉದ್ಯೋಗದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹೀಗಾಗಿ ಜನರಲ್ ಮೋಟಾರ್ಸ್ ಚೀನಾದಲ್ಲಿರುವ ತಮ್ಮ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಿ ಬಹಿಯೊದಲ್ಲಿ ಹೊಸ ಘಟಕವನ್ನು ಸ್ಥಾಪಿಸುವಂತೆ ಹೇಳಿತ್ತು. ಈ ಬಗ್ಗೆ ಜನರಲ್ ಮೋಟಾರ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬರ್ರೆ ಅವರಿಗೆ ತಿಳಿಸಿದ್ದಾರೆಂದು ಸ್ಥಳೀಯ ಸಂಸ್ಥೆಯೊಂದು ವರದಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv