Tag: General Manager

  • ನೈಋತ್ಯ ರೈಲ್ವೆ ಮಹಾಪ್ರಬಂಧಕರಾಗಿ ಸಂಜೀವ ಕಿಶೋರ್ ನೇಮಕ

    ನೈಋತ್ಯ ರೈಲ್ವೆ ಮಹಾಪ್ರಬಂಧಕರಾಗಿ ಸಂಜೀವ ಕಿಶೋರ್ ನೇಮಕ

    ಹುಬ್ಬಳ್ಳಿ: ನೈಋತ್ಯ ರೈಲ್ವೆ ನೂತನ ಮಹಾಪ್ರಬಂಧಕರಾಗಿ ಸಂಜೀವ ಕಿಶೋರ್ ಅಧಿಕಾರ ಸ್ವೀಕರಿಸಿದ್ದಾರೆ.

    ದಕ್ಷಿಣ ಮಧ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಗಜಾನನ್ ಮಲ್ಯ ಅವರು ಕಳೆದ ಏಪ್ರಿಲ್ ನಿಂದ ಇಲ್ಲಿಯವರೆಗೆ ಹೆಚ್ಚುವರಿಯಾಗಿ ನೈಋತ್ಯ ರೈಲ್ವೆ ಹುದ್ದೆಯನ್ನು ನಿಭಾಯಿಸಿದ್ದರು. ಇದೀಗ ಸಂಜೀವ ಕಿಶೋರ್ ನೂತನ ಮಹಾಪ್ರಬಂಧಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

    ಕಿಶೋರ್ ಅವರು ಈಶಾನ್ಯ ರೈಲ್ವೆ, ರೈಲ್ ಕೋಚ್ ಫ್ಯಾಕ್ಟರಿ, ಕಪುರ್ಥಾಲಾ, ಸೆಂಟ್ರಲ್ ರೈಲ್ವೆ, ರೈಟ್ಸ್, ಕೋಫೋ, ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ, ನವದೆಹಲಿ, ರೈಲ್ವೆ ಮಂಡಳಿ ಮತ್ತು ರೈಲ್ವೆ ವೀಲ್ ಫ್ಯಾಕ್ಟರಿ, ಯಲಹಂಕದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಶ್ರೇಷ್ಠ ಸೇವೆಗಾಗಿ 2003ರಲ್ಲಿ ರಾಷ್ಟ್ರೀಯ ಪ್ರಶಸ್ತಿ (ರೈಲ್ವೇಸ್ ಮಂತ್ರಿ ಪ್ರಶಸ್ತಿ) ಪಡೆದಿದ್ದಾರೆ.

    ಇನ್‍ಸ್ಟಿಟ್ಯೂಷನ್ ಆಫ್ ಎಂಜಿನಿಯರ್ ಇಂಡಿಯಾ ಮತ್ತು ಯುನೈಟೆಡ್ ಕಿಂಗ್ಡಂನ ಇನ್ಸಿಟ್ಯೂಷನ್ ಆಫ್ ಮೆಕ್ಯಾನಿಕಲ್ ಎಂಜಿನಿಯರ್ಸ್ ಫೆಲೋಶಿಪ್ ಸಹ ಕಿಶೋರ್ ಸಂಜೀವ ಪಡೆದಿದ್ದಾರೆ.

  • ಎಸಿಬಿ ದಾಳಿ – ಮನೆಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ

    ಎಸಿಬಿ ದಾಳಿ – ಮನೆಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ

    ಬೆಂಗಳೂರು: ಎಸಿಬಿ ಕಳೆದ ಮೂರು ದಿನಗಳಿಂದ ಅಧಿಕಾರಿಗಳ ಕಚೇರಿ ಮತ್ತು ಮನೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಇಂದು ಕರ್ನಾಟಕ ವಾಲ್ಮಿಕಿ ಅಭಿವೃದ್ಧಿ ನಿಗಮದ ಜನರಲ್ ಮ್ಯಾನೇಜರ್ ಮನೆಯಲ್ಲಿ ಎಸಿಬಿ ದಾಳಿ ಮಾಡಿದೆ.

    ಗುರುವಾರ ಎಸಿಬಿ ಕರ್ನಾಟಕ ವಾಲ್ಮಿಕಿ ಅಭಿವೃದ್ಧಿ ನಿಗಮದ ಮೇಲೆ ದಾಳಿ ಮಾಡಿತ್ತು. ಈ ವೇಳೆ 22 ಲಕ್ಷ ನಗದು ಹಣವನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಇಂದು ಜನರಲ್ ಮ್ಯಾನೇಜರ್ ನಾಗೇಶ್ ಮತ್ತು ಅಧಿಕಾರಿ ಸುಬ್ಬಯ್ಯ ಮನೆ ಮೇಲೆ ದಾಳಿ ಮಾಡಿದ್ದು, ಮನೆಯಲ್ಲಿ ಲಕ್ಷ ಲಕ್ಷ ಹಣ ಪತ್ತೆಯಾಗಿದೆ.

    ನಾಗೇಶ್ ಮನೆಯಲ್ಲಿ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ಮಾಡಿದ್ದು, 82 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. ಸದ್ಯಕ್ಕೆ ಎಸಿಬಿ ಅಧಿಕಾರಿಗಳು ನಾಗೇಶ್ ಮತ್ತು ಸುಬ್ಬಯ್ಯ ಇಬ್ಬರನ್ನು ಬಂಧಿಸಿದ್ದಾರೆ.

    ಅಭಿವೃದ್ಧಿ ನಿಗಮದ ಅಧಿಕಾರಿಗಳು ಸರ್ಕಾರದಿಂದ ಹಣ ಮಂಜೂರು ಮಾಡಿಕೊಂಡು ಹಣ ಹೊಡೆಯುತ್ತಿದ್ದಾರೆ ಎಂಬ ಆರೋಪಿ ಕೇಳಿ ಬಂದಿತ್ತು. ಅಲ್ಲದೇ ಕಳಪೆ ಜಮೀನು ಖರೀದಿ ಮಾಡಿ ಜನರಿಗೆ ಮಾರಾಟ ಮಾಡಿದ್ದರು. ಜನರಿಂದ ಬಂದ ಹಣವನ್ನು ಹಂಚಿಕೊಳ್ಳುವಾಗ ಬೆಂಗಳೂರಿನ ವಸಂತ್‍ನಗರದಲ್ಲಿರುವ ವಾಲ್ಮಿಕಿ ಅಭಿವೃದ್ಧಿ ನಿಗಮದ ಮೇಲೆ ಎಸಿಬಿ ದಾಳಿ ಮಾಡಿತ್ತು. ಆಗ ಜನರಲ್ ಮ್ಯಾನೇಜರ್ ನಾಗೇಶ್ ಮತ್ತು ಅಧಿಕಾರಿ ಸುಬ್ಬಯ್ಯ ಇಬ್ಬರು ಸಿಕ್ಕಿಬಿದ್ದಿದ್ದರು.