ಚಿಕ್ಕಮಗಳೂರು: ಲೋಕಸಭಾ ಚುನಾವಣೆ (General Elections 2024) ಹೊತ್ತಲ್ಲಿ ಟೆಂಪಲ್ ರನ್ ಮುಂದುವರಿಸಿರುವ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B. S. Yediyurappa), ಕುಟುಂಬ ಸಮೇತರಾಗಿ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ (Horanadu Sri Annapoorneshwari Temple) ಭೇಟಿ ನೀಡಿದ್ದಾರೆ. ಇಂದು ಮುಂಜಾನೆಯಿಂದ ದೇವಾಲಯದಲ್ಲಿ ನಡೆಯುತ್ತಿರುವ ಚಂಡಿಕಾಯಾಗದಲ್ಲಿ ಅವರು ಭಾಗಿಯಾಗಿದ್ದಾರೆ.
ಯಡಿಯೂರಪ್ಪ, ಪುತ್ರ ವಿಜಯೇಂದ್ರ ಹಾಗೂ ರಾಘವೇಂದ್ರ ಅವರು ಶನಿವಾರ ರಾತ್ರಿ 9 ಗಂಟೆಗೆ ದೇವಾಲಯಕ್ಕೆ ಆಗಮಿಸಿ, ಅನ್ನಪೂರ್ಣೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಾಲಯದಲ್ಲೇ ತಂಗಿದ್ದು, ಇಂದು ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಯಾಗದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಅಜಯ್ ರೈ ಸ್ಪರ್ಧೆ – ಕಾಂಗ್ರೆಸ್‌ನ ನಾಲ್ಕನೇ ಪಟ್ಟಿ ರಿಲೀಸ್
ತುಮಕೂರು: ಲೋಕಸಭಾ ಚುನಾವಣೆ (General Elections 2024) ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಹೊತ್ತಿನಲ್ಲಿ ರಾಜಕೀಯ ಮುಖಂಡರು ಮತದಾರರನ್ನು ಸೆಳೆಯಲು ಆಮೀಷ ಒಡ್ಡಲು ಮುಂದಾಗುತ್ತಿದ್ದಾರೆ. ಕುಣಿಗಲ್‍ನಲ್ಲಿ (Kunigal) ಮತದಾರರಿಗೆ ಹಂಚಲು ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ 73 ಕುಕ್ಕರ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕುಕ್ಕರ್ ಬಾಕ್ಸ್ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಸೇರಿದಂತೆ ಸಂಸದ, ಶಾಸಕರ ಭಾವಚಿತ್ರಗಳಿವೆ. ಜೊತೆಗೆ ಬಾಕ್ಸ್ ಮೇಲೆ ಹೊಸ ವರ್ಷ ಹಾಗೂ ಸಂಕ್ರಾತಿ ಶುಭಾಶಯಗಳು ಎಂದು ಮುದ್ರಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಇದೀಗ ಎಲ್ಲಾ ಕುಕ್ಕರ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: INDIA ಗೆದ್ದರೆ ಮೇಕೆದಾಟು ಯೋಜನೆಗೆ ತಡೆ: ಡಿಎಂಕೆ ಪ್ರಣಾಳಿಕೆಯಲ್ಲಿ ಘೋಷಣೆ
ಕುಣಿಗಲ್ ಪಟ್ಟಣದ ಮಲ್ಲಿಪಾಳ್ಯದ ಕಾಂಗ್ರೆಸ್ ಪುರಸಭಾ ಸದಸ್ಯ ನಾಗೇಂದ್ರ ಅವರಿಗೆ ಸೇರಿದ ಗೋದಾಮಿನಲ್ಲಿ ಕುಕ್ಕರ್‌ಗಳನ್ನು ಸಂಗ್ರಹಿಸಿಡಲಾಗಿತ್ತು. ಇದನ್ನೂ ಓದಿ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಬಿಜೆಪಿ (BJP) ಸಾಮಾಜಿಕ ಜಾಲತಾಣದ ಮುಖ್ಯಸ್ಥ ಜಯಾನಂದ ಅವರ ಮನೆಗೆ ಕೆಲವರು ಚೆಂಡೆ ವಾಲಗದ ಮೂಲಕ ಕಾಂಗ್ರೆಸ್‍ನ (Congress) ಅನುದಾನದ ಬ್ಯಾನರ್ ಹಿಡಿದು ಬಂದು ದಾಂಧಲೆ ಮಾಡಿದ ಘಟನೆ ನಡೆದಿದೆ.
ಜಿಲ್ಲೆಯ ಪುತ್ತೂರು ತಾಲೂಕಿನ ತಾರಿಗುಡ್ಡೆಯ ಜಯಾನಂದ ಅವರ ಮನೆಗೆ ರೌಡಿಶೀಟರ್ ಪ್ರಜ್ವಲ್ ರೈ ಮತ್ತು ಕಾಂಗ್ರೆಸ್ ಬೆಂಬಲಿಗರು ನುಗ್ಗಿ ದಾಂಧಲೆ ಮಾಡಿದ್ದಾರೆ. ಈ ವೇಳೆ ಅನುದಾನ ಹಂಚಿಕೆ ವಿಚಾರದಲ್ಲಿ ತಕರಾರು ತೆಗೆದಿದ್ದಾರೆ. ಅಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಕೊನೆಗೂ ಕನಸು ನನಸು – ಬೆಂಗಳೂರಿನಲ್ಲಿ ರಾತ್ರಿ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ
ಪುತ್ತೂರು ಶಾಸಕರು ಅತೀ ಹೆಚ್ಚು ಅನುದಾನ ತಂದಿದ್ದಾರೆ ಎಂಬ ವಿಚಾರಕ್ಕೆ, ಸ್ಪಷ್ಟನೆ ನೀಡುವಂತೆ ಬಿಜೆಪಿ ಕಾರ್ಯಕರ್ತರು ಪೋಸ್ಟ್ ಹಾಕಿದ್ದರು. ಇದೇ ವಿಚಾರಕ್ಕೆ ಈ ಗಲಾಟೆ ನಡೆದಿದೆ ಎನ್ನಲಾಗಿದೆ. ರೌಡಿಶೀಟರ್ ಪ್ರಜ್ವಲ್ ರೈ ಮತ್ತು ತಂಡದಿಂದ ದಾಂಧಲೆ ನಡೆದಿದ್ದು, ಇವರು ಶಾಸಕ ಅಶೋಕ್ ರೈ ಬೆಂಬಲಿಗರು ಎನ್ನಲಾಗಿದೆ.
– ರಾಹುಲ್ ಗಾಂಧಿ ನ್ಯಾಯಯಾತ್ರೆ, ಕಾಂಗ್ರೆಸ್‍ನ ಅಂತ್ಯಯಾತ್ರೆಯಾಗಲಿದೆ
ರಾಯಚೂರು: ಲೋಕಸಭಾ ಚುನಾವಣೆಯಲ್ಲಿ (General Elections 2024) ಅಪ್ಪಿತಪ್ಪಿ ಕಾಂಗ್ರೆಸ್‍ಗೆ (Congress) ಮತ ಹಾಕಿದ್ರೆ ಭಯೋತ್ಪಾದಕರಿಗೆ, ಭ್ರಷ್ಟಾಚಾರಕ್ಕೆ ಮತ ಹಾಕಿದ ಹಾಗೆ ಎಂದು ಶ್ರೀರಾಮಸೇನೆ (Sri Ram Sena) ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ (Gangadhar Kulakarni) ಹೇಳಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ಮೋದಿ ಗೆಲ್ಲಿಸಿ ದೇಶ ಉಳಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಸಬ್‍ನನ್ನ ಜೈಲಿನಲ್ಲಿಟ್ಟು ಬಿರಿಯಾನಿ ತಿನ್ನಿಸಿದ್ರಿ, ಅಫ್ಜಲ್ ಗುರು ಪರ ಘೋಷಣೆ ಕೂಗಿದವರನ್ನು ಸಾಕಿದ್ರಿ, ನೀವು ಭಯೋತ್ಪಾದಕರ ಬಗ್ಗೆ ಮಾತನಾಡುತ್ತೀರಿ ಎಂದು ಅವರು ಗುಡುಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನಿಂದ ನನಗೂ, ಹೆಗಡೆಗೂ ಗಲಾಟೆಯಾಗಿತ್ತು: ಹೆಚ್‍ಡಿಡಿ
ಭ್ರಷ್ಟಾಚಾರದ ಮೂಲ ಯಾರು? ಯಾರ ಕಾಲದಲ್ಲಿ ಭ್ರಷ್ಟಾಚಾರ ಬೆಳೆಯಿತು? ಈಗ ಕಾಂಗ್ರೆಸ್‍ನವರು ಭ್ರಷ್ಟಾಚಾರದ ಬಗ್ಗೆ ಭಾಷಣ ಮಾಡುತ್ತಾರೆ. ಭ್ರಷ್ಟಾಚಾರವನ್ನ ಶಿಷ್ಟಾಚಾರ ಮಾಡಿದವರು ಕಾಂಗ್ರೆಸ್‍ನವರು. ರಾಹುಲ್ ಗಾಂಧಿಯದ್ದು ನ್ಯಾಯ ಯಾತ್ರೆಯಲ್ಲ, 2024ರಲ್ಲಿ ಕಾಂಗ್ರೆಸ್ ಪಕ್ಷದ ಅಂತ್ಯ ಯಾತ್ರೆಯಾಗಲಿದೆ. ಭಯೋತ್ಪಾದಕರು 2047ಕ್ಕೆ ಭಾರತವನ್ನ ಮುಸ್ಲಿಂ ರಾಷ್ಟ್ರ ಮಾಡಲು ಹೊರಟಿದ್ದಾರೆ. 2047ಕ್ಕೆ ಭಾರತವನ್ನ ಹಿಂದೂ ರಾಷ್ಟ್ರ ಮಾಡಬೇಕು ಎನ್ನುವ ಸಂಕಲ್ಪ ಮಾಡಬೇಕಿದೆ ಎಂದಿದ್ದಾರೆ.
ಅಯೋಗ್ಯ ಓವೈಸಿ ಮಂದಿರ ಒಡೆಯುವ ಬಗ್ಗೆ ಮಾತನಾಡುತ್ತಾನೆ. ಅಯೋಧ್ಯೆಯಲ್ಲಿ ಮಸೀದಿ ಒಡೆದು ಮಂದಿರ ಕಟ್ಟಿದ್ದಾರೆ. ಆ ಮಂದಿರ ಒಡೆದು ಮತ್ತೆ ಮಸೀದಿ ಕಟ್ಟಬೇಕು ಎಂದು ನಮ್ಮ ಮುಂದಿನ ಪೀಳಿಗೆಗೆ ಹೇಳುತ್ತ ಹೋಗುತ್ತೇವೆ ಎನ್ನುತ್ತಿದ್ದಾನೆ. ಓವೈಸಿಗೆ ಧಮ್ಮು, ತಾಕತ್ತು, ಗಂಡಸು ತನ ಇದ್ದರೆ ರಾಮಮಂದಿರದ ಒಂದೇ ಒಂದು ಇಟ್ಟಿಗೆ ಮುಟ್ಟಲಿ. ಇಡೀ ಭಾರತದಲ್ಲಿರುವ 6 ಲಕ್ಷ ಮಸೀದಿಯನ್ನು ಒಡೆದು ನಮಾಜ್ ಮಾಡಲು ನಿನಗೆ ಜಾಗ ಇಲ್ಲದ ಹಾಗೆ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಮೋದಿ ರಣಕಹಳೆ – ಇಂದು ಖರ್ಗೆ ಕೋಟೆಗೆ ನಮೋ ಎಂಟ್ರಿ
ಚಿಕ್ಕಮಗಳೂರು: ಸಿದ್ದರಾಮಯ್ಯ (Siddaramaiah) ಯಾರನ್ನ ಮಂತ್ರಿ ಮಾಡಿದ್ದ? ನನ್ನ ಅಭಿಮಾನಿ ಕೆ.ಎಂ ಕೃಷ್ಣಮೂರ್ತಿಯನ್ನೂ ಮಂತ್ರಿ ಮಾಡಲಿಲ್ಲ. ಸ್ವಜಾತಿಯವರನ್ನೇ ಬೆಳೆಯಲು ಬಿಡಲಿಲ್ಲ ಎಂದು ಸಿಎಂ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (H. D Deve Gowda) ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಒಡನಾಡಿಗಳನ್ನು ಸಿದ್ದರಾಮಯ್ಯ ಮಂತ್ರಿ ಮಾಡಲಿಲ್ಲ. ಈ ಮಾತನ್ನು, ಇವತ್ತು ಹೇಳುತ್ತೇನೆ ನಾಳೆಯೂ ಹೇಳುತ್ತೇನೆ. ಸಿದ್ದರಾಮಯ್ಯನನ್ನೇ ಕೇಳಿ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಮೋದಿ ರಣಕಹಳೆ – ಇಂದು ಖರ್ಗೆ ಕೋಟೆಗೆ ನಮೋ ಎಂಟ್ರಿ
ಸಿದ್ದರಾಮಯ್ಯ ಮೋಸ ಮಾಡುತ್ತಾರೆ. ಮಂತ್ರಿ ಮಾಡಬೇಡ ಎಂದು ಹೆಗಡೆಯವರು ಹೇಳಿದ್ದರು. ಈ ವಿಚಾರಕ್ಕೆ ಹೆಗಡೆ ಮತ್ತು ನನಗೂ ಹೋರಾಟ ಆಯಿತು. ವಾಲ್ಮೀಕಿ ಸಮುದಾಯದ ತಿಪ್ಪೇಸ್ವಾಮಿ ಅವರನ್ನು ಮಂತ್ರಿ ಮಾಡುವಂತೆ ಮನೆಯ ಒಳಗೆ ಕೂರಿಸಿಕೊಂಡು ನನಗೆ ಹೇಳಿದ್ದರು. ಹಿಂದುಳಿದ ವರ್ಗದವರನ್ನೇ ಮಾಡುವುದಾದರೆ ತಿಪ್ಪೇಸ್ವಾಮಿ ಮಾಡು, ಸಿದ್ದರಾಮಯ್ಯನ ಮಾಡಬೇಡ ಎಂದಿದ್ದರು. ನಾನು ಸುಳ್ಳನ್ನು ಹೇಳಿ ಪಾಪದ ಕೆಲಸ ಮಾಡುವುದಿಲ್ಲ. ನನಗೆ ಮಂಡಿ ನೋವಿದೆ. ಆದರೆ ಜ್ಞಾಪಕ ಶಕ್ತಿ ಹಾಗೆ ಉಳಿದಿದೆ ಎಂದಿದ್ದಾರೆ.
ಮೋದಿ (Narendra Modi) ದೇಶದ ಸರ್ವೋಚ್ಚ ನಾಯಕ. ಅವರ ಸಮಾನವಾಗಿ ಯಾವ ನಾಯಕರು ದೇಶದಲ್ಲಿ ಇಲ್ಲ. ಎನ್‍ಡಿಎ ಕೂಟದಲ್ಲಿ ಮೋದಿ ಸಮಕ್ಕೆ ಯಾರು ಇಲ್ಲ. ಒಂದೊಂದು ಚಾನೆಲ್‍ನಲ್ಲಿ ಒಂದೊಂದು ಸಮೀಕ್ಷೆ ಬರುತ್ತಿದೆ. ಇದಕ್ಕೆಲ್ಲ ಯಾರು ತಲೆಕೆಡಿಸಿಕೊಳ್ಳಬೇಕಿಲ್ಲ. ಮೋದಿ ಮತ್ತೆ ಈ ದೇಶದ ಪ್ರಧಾನಿಯಾಗುತ್ತಾರೆ. ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದಾರೆ. ಹಿಂದೆಯೇ ಕುಮಾರಸ್ವಾಮಿ (HD Kumaraswamy) ಸಾಲ ಮನ್ನಾ ಮಾಡಿದ್ದರು. 26 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ. ಹಾಸನ ಕ್ಷೇತ್ರದ ಜನರು ನನ್ನ ಗೆಲ್ಲಿಸಿದ್ದಾರೆ ಅವರ ಋಣ ತೀರಿಸಬೇಕು ಎಂದಿದ್ದಾರೆ.
ಇದೇ ವೇಳೆ, ಸಿಎಂ ಸಿದ್ದರಾಮಯ್ಯ ಆಪ್ತ ಶಾಸಕ ಜಿ.ಹೆಚ್ ಶ್ರೀನಿವಾಸ್ ಅಳಿಯ ಚೇತನ್ ಕೆಂಪರಾಜು ಜೆಡಿಎಸ್‍ಗೆ ಸೇರ್ಪಡೆಗೊಂಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಮ್ಮ ಕುಟುಂಬ ಜೆಡಿಎಸ್ ಹಾಗೂ ಕಾಂಗ್ರೆಸ್ಸಿನ ಜೊತೆ ಗುರುತಿಸಿಕೊಂಡಿತ್ತು. ನಮ್ಮ ದೊಡ್ಡಪ್ಪ ದಿವಂಗತ ಮಾಜಿ ಶಾಸಕ ಕೆ.ಎಂ ಕೃಷ್ಣಮೂರ್ತಿ, ನಮ್ಮ ಅಪ್ಪ ಕೆ.ಎಂ. ಕೆಂಪರಾಜು ಸಿದ್ದರಾಮಯ್ಯ ಒಟ್ಟಿಗಿದ್ದರು. ದೊಡ್ಡಪ್ಪ, ನಮ್ಮಪ್ಪ ನಿಧನವಾದ ನಂತರ ನಮಗೆ ರಾಜಕೀಯ ನೆಲೆ ಇಲ್ಲದಂತಾಗಿತ್ತು. ನಮ್ಮನ್ನು ಗುರುತಿಸಿದ ಪ್ರಜ್ವಲ್ ರೇವಣ್ಣ ರಾಜಕೀಯ ಸ್ಥಾನಮಾನ ಕೊಡುವ ಭರವಸೆ ಕೊಟ್ಟಿದ್ದಾರೆ. ರಾಜಕೀಯ ಹಿತೈಷಿಗಳು, ಕಡೂರಿನ ಜನರ ಸಲಹೆಯಂತೆ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿಕೊಂಡು ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಂಬಲಿಸಿದ್ದೇನೆ. ನಾನು ಶಾಸಕ ಶ್ರೀನಿವಾಸ ಅವರ ಅಳಿಯ ಎನ್ನುವುದಕ್ಕಿಂತ ಕಡೂರು ಕ್ಷೇತ್ರದ ಮಗ ಎಂದಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರದ ಗೆಲುವಿಗೆ ದೇವೇಗೌಡರು ರಣತಂತ್ರ ಹೆಣೆಯಲು ಆರಂಭಿಸಿದ್ದಾರೆ. ಬಿಜೆಪಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ನಿವಾಸಕ್ಕೆ ಪುತ್ರ ಹೆಚ್.ಡಿ.ರೇವಣ್ಣ, ಮೊಮ್ಮಗ ಪ್ರಜ್ವಲ್ ರೇವಣ್ಣ, ಮಾಜಿ ಶಾಸಕ ವೈ.ಎಸ್.ವಿ ದತ್ತರೊಂದಿಗೆ ಭೇಟಿ ನೀಡಿ ಚರ್ಚೆ ನಡೆಸಿದರು. ಕಡೂರಿನಲ್ಲಿ ಮೊದಲು ಜೆಡಿಎಸ್ ಕಾರ್ಯಕರ್ತರು ಸಭೆ ನಡೆಸಿ ಸಂಸದ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ನಡೆಸಿದರು. ಬಳಿಕ ಕಡೂರಿನ ಬಿಜೆಪಿ ಪಕ್ಷದ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ನಿವಾಸಕ್ಕೆ ತೆರಳಿದರು. ಅಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಕೇಸರಿ ಶಾಲ್ ಧರಿಸಿ ದೊಡ್ಡಗೌಡರನ್ನು ಸ್ವಾಗತಿಸಿದರು. ಇದನ್ನೂ ಓದಿ: ಬಾಂಡ್ ಬರುವ ಮೊದಲು ಚುನಾವಣೆಗೆ ಫಂಡಿಂಗ್ ಹೇಗೆ ನಡೆಯುತ್ತಿತ್ತು – ದೇಶದ ಜನತೆಗೆ ಅಮಿತ್ ಶಾ ಪ್ರಶ್ನೆ
ನವದೆಹಲಿ: 2024ರ ಲೋಕಸಭಾ ಚುನಾವಣೆ (Lok Sabha Elections 2024) ದಿನಾಂಕ ಶನಿವಾರ ಘೋಷಣೆಯಾಗಲಿದೆ. ನಾಳೆ ಮಧ್ಯಾಹ್ನ 3 ಗಂಟೆಗೆ ಚುನಾವಣಾ ಆಯೋಗ (Election Commission) ಸುದ್ದಿಗೋಷ್ಠಿ ಕರೆದಿದೆ.
2024 ರ ಸಾರ್ವತ್ರಿಕ ಚುನಾವಣೆ ಮತ್ತು ಕೆಲವು ರಾಜ್ಯಗಳ ಅಸೆಂಬ್ಲಿಗಳ ವೇಳಾಪಟ್ಟಿಯನ್ನು ಪ್ರಕಟಿಸಲು ನಾಳೆ ಮಧ್ಯಾಹ್ನ 3 ಗಂಟೆಗೆ ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ ಕರೆದಿದೆ. ಇದನ್ನೂ ಓದಿ: ರಷ್ಯಾ ಅಧ್ಯಕ್ಷೀಯ ಚುನಾವಣೆ – ಕೇರಳದಲ್ಲಿ ಮತದಾನ
ಏಪ್ರಿಲ್/ಮೇ ತಿಂಗಳಲ್ಲಿ ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ರಾಜ್ಯಗಳಿಗೆ ಮತದಾನ ನಡೆಯಲಿದೆ. ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್ ಈ ವರ್ಷದ ಕೊನೆಯಲ್ಲಿ ಮತದಾನ ಮಾಡಲು ನಿರ್ಧರಿಸಲಾಗಿದೆ.
ಬೆಂಗಳೂರು: ಈಶ್ವರಪ್ಪ ಅವರ ಜೊತೆ ಮಾತಾಡುತ್ತೇನೆ, ಅವರೂ ಸರಿ ಹೋಗುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S Yediyurappa) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಶ್ವರಪ್ಪ (K.S Eshwarappa) ಅವರ ಮಗ ಕಾಂತೇಶ್‍ಗೆ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರ ಮಾಡಿಕೊಂಡ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರ ಮಗನಿಗೆ ಎಂಎಲ್‍ಸಿ ಮಾಡುವ ಬಗ್ಗೆ ದೆಹಲಿ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ನಾನು ಮಾತನಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನನ್ನ ವಿರುದ್ಧವೂ ಯಶಸ್ವಿಯಾಗಿಲ್ಲ, ಅವರಿಂದಲೂ ಟಿಕೆಟ್ ತಗೊಂಡು ಬರೋದಕ್ಕೆ ಆಗಿಲ್ಲ: ಕರಂದ್ಲಾಜೆ
ಯದುವೀರ್ ಸ್ಪರ್ಧೆ ವಿಚಾರವಾಗಿ, ಅವರು ಸ್ಪರ್ಧೆಯಿಂದ ಸುತ್ತಮುತ್ತಲ ಕ್ಷೇತ್ರಗಳಲ್ಲಿ ಅನುಕೂಲವಾಗಲಿದೆ. ಅವರು ಕೂಡಾ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಓಡಾಡಲು ಒಪ್ಪಿಕೊಂಡಿದ್ದಾರೆ. ಅವರ ಸ್ಪರ್ಧೆಯಿಂದ ದೊಡ್ಡ ಬಲ ಬಂದಿದೆ ಎಂದಿದ್ದಾರೆ.
ಇದೇ ವೇಳೆ ಪ್ರತಾಪಸಿಂಹಗೆ ಟಿಕೆಟ್ ಕೈತಪ್ಪಿದ ವಿಚಾರವಾಗಿ, ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಪತ್ರಕರ್ತರಲ್ಲಿ, ಯಾವುದೇ ಪ್ರಶ್ನೆ ಕೇಳಬೇಡಿ, ಎಲ್ಲರೂ ಸಮಾಧಾನಗೊಂಡಿದ್ದಾರೆ. ಎಲ್ಲರೂ ಬೆಂಬಲ ನೀಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
ಬೆಂಗಳೂರು: ಹಾವೇರಿ (Haveri) ಲೋಕಸಭಾ ಟಿಕೆಟ್ (General Elections 2024) ವಿಚಾರಕ್ಕೆ ಯಡಿಯೂರಪ್ಪ (B. S. Yediyurappa) ಅವರನ್ನು ದೂರಬಾರದು. ಕೇಂದ್ರದ ವರಿಷ್ಠರು ಎಲ್ಲಾ ಸರ್ವೆ ವರದಿಗಳನ್ನು ಪಡೆದು, ನೀನು ನಿಲ್ಲಲೇಬೇಕು ಎಂದು ಸೂಚನೆ ಕೊಟ್ಟಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದ್ದಾರೆ.
ಹಾವೇರಿಯಿಂದ ಸ್ಪರ್ಧೆಗೆ ಬಲವಂತವಾಗಿ ಯಡಿಯೂರಪ್ಪ ಒಪ್ಪಿಸಿದ್ದು ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಪಾರ್ಲಿಮೆಂಟರಿ ಬೋರ್ಡ್‍ನಲ್ಲೂ ನನ್ನ ಹೆಸರು ಕ್ಲೀಯರ್ ಆಗಿರಲಿಲ್ಲ. ಅಮಿತ್ ಶಾ ಹಾಗೂ ನಡ್ಡಾ ಸಭೆಯಲ್ಲಿ ತೀರ್ಮಾನ ಆಗಿತ್ತು. ಪ್ರಧಾನ ಮಂತ್ರಿ ಏನು ತೀರ್ಮಾನ ಮಾಡ್ತಾರೆ ಅದರಂತೆ ನೀನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದರು. ಅದರಂತೆ ನಾನು ಇವಾಗ ಚುನಾವಣೆ ಸ್ಪರ್ಧೆಗೆ ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಬಿಎಸ್‌ವೈ ವಿರುದ್ಧ ಈಶ್ವರಪ್ಪ ಗರಂ – ಶಿವಮೊಗ್ಗದಿಂದ ಕಾಂತೇಶ್ ಸ್ಪರ್ಧೆ?
ನನ್ನ ಆರೋಗ್ಯ ಖಂಡಿತವಾಗಿಯೂ ಅಷ್ಟೊಂದು ಚೆನ್ನಾಗಿಲ್ಲ. ಜವಬ್ದಾರಿ ಬಂದಾಗ ಅದನ್ನು ನಿಭಾಯಿಸುವ ಶಕ್ತಿ ನನಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಆರೋಗ್ಯದ ಸಮಸ್ಯೆಯಿಂದ ನನಗೆ ಲೋಕಸಭಾ ಚುನಾವಣೆಗೆ (General Elections 2024) ಸ್ಪರ್ಧಿಸಲು ಆಗುತ್ತಿಲ್ಲ. ಇದೇ ಕಾರಣಕ್ಕೆ ನನ್ನ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡಿ ಎಂದು ಕೇಳಿದ್ದೆ. ಅಂತಿಮವಾಗಿ ನನ್ನ ಪತ್ನಿಗೆ ವರಿಷ್ಠರು ಟಿಕೆಟ್ ಕೊಟ್ಟಿದ್ದಾರೆ ಎಂದು ದಾವಣಗೆರೆ (Davangere) ಸಂಸದ ಜಿ.ಎಂ ಸಿದ್ದೇಶ್ವರ್ (GM Siddeshwar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ನನ್ನ ಪತ್ನಿಯ ಟಿಕೆಟ್‍ನಿಂದ ಇಡೀ ಜಿಲ್ಲೆಗೆ ಖುಷಿಯಾಗಿದೆ. ಅಲ್ಲೋ ಇಲ್ಲೋ ಒಬ್ಬರು ಮಾತಾಡ್ತಿದ್ದಾರೆ. ಅವರು ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಚುನಾವಣೆ ಮಾಡುತ್ತೇನೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಡೀಸೆಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೆಲ್ಲ ಬರೀ ನಾಟಕ ಅಷ್ಟೇ. ಎಂ.ಪಿ ರೇಣುಕಾಚಾರ್ಯ ನನ್ನ ಮಿತ್ರ ನಾನು ಅವನ ಜೊತೆ ಮಾತಾನಾಡುತ್ತೇನೆ. ನನ್ನ ಪತ್ನಿಯ ಗೆಲುವಿಗೆ ಅವನು ಸಹಕಾರ ಕೊಡುತ್ತಾನೆ ಎಂದಿದ್ದಾರೆ.
ಬೆಂಗಳೂರು: ನಗರದ ಉತ್ತರ ಲೋಕಸಭಾ ಟಕೆಟ್ (Bengaluru North) ಸಿಕ್ಕ ಬೆನ್ನಲ್ಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಮಾಜಿ ಸಿಎಂ ಹಾಗೂ ಕ್ಷೇತ್ರದ ಹಾಲಿ ಸಂಸದ ಸದಾನಂದ ಗೌಡ (D.V.Sadananda Gowda) ಅವರನ್ನು ಭೇಟಿಯಾಗಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸಿ, ಸಹಕಾರ ನೀಡುವಂತೆ ಶೋಭಾ ಅವರು ಕೇಳಿಕೊಂಡಿದ್ದಾರೆ.
— Shobha Karandlaje (Modi Ka Parivar) (@ShobhaBJP) March 14, 2024
ಕಳೆದ ಬಾರಿ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಅವರಿಗೆ ಈ ಬಾರಿ ಆ ಕ್ಷೇತ್ರದಿಂದ ಸ್ಪರ್ಧಿಸಲು ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿತ್ತು. ಈಗ ಅವರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ. ಇತ್ತ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದಲೂ ಅವರಿಗೆ ಗೋ ಬ್ಯಾಕ್ ಬಿಸಿ ತಟ್ಟಿತ್ತು. ಆದರೂ ಶೋಭಾ ಕರಂದ್ಲಾಜೆ ಅವರು ಬೆಂಗಳೂರು ಉತ್ತರದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’: ರಾಷ್ಟ್ರಪತಿಗೆ 18,000 ಪುಟಗಳ ವರದಿ ಸಲ್ಲಿಕೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ದೆಹಲಿ ನಾಯಕರ ಮೇಲೆ ನನಗೆ ವಿಶ್ವಾಸ ಇತ್ತು. ಅವರು ಯಾವ ಜವಾಬ್ದಾರಿ ನನಗೆ ವಹಿಸಿದ್ರು, ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಯಾವುದೇ ರಾಜ್ಯದ ಚುನಾವಣೆಯಾಗಲಿ, ಯಾವುದೇ ಇಲಾಖೆ ಆಗಲಿ ಅಲ್ಲೆಲ್ಲ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೆ. ಈ ಕಾರಣಕ್ಕೆ ನನ್ನ ನಾಯಕತ್ವವನ್ನು ಗುರುತಿಸಿ ಟಿಕೆಟ್ ಕೊಟ್ಟಿದ್ದಾರೆ ಎಂದಿದ್ದಾರೆ.
ಇನ್ನಾದರೂ ಪಕ್ಷ ವಿರೋಧಿ ಚಟುವಟಿಕೆ ಮಾಡುವವರು ಪಾಠ ಕಲಿಯಲಿ. ಬಿಜೆಪಿ ಒಂದು ಶಿಸ್ತಿನ ಪಕ್ಷವಾಗಿದೆ. ಇದರಿಂದ ನನಗೆ ನಿಜಕ್ಕೂ ಆನಂದವಾಗಿದೆ. ನಾನು ಬೆಂಗಳೂರಲ್ಲಿ ಶಾಸಕಿಯಾಗಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಸದಾನಂದಗೌಡರ ಮನೆಗೆ ಹೋಗಿ ಬಂದಿದ್ದೇನೆ. ಎಲ್ಲರ ಆಶೀರ್ವಾದ ನನ್ನ ಮೇಲಿದೆ. ಇಲ್ಲಿ ವಿರೋಧ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳಲು ಸಿಎಎಯಲ್ಲಿ ಅವಕಾಶವಿಲ್ಲ: ಅಮಿತ್ ಶಾ ಸ್ಪಷ್ಟನೆ