Tag: General Elections 2024

  • ಇಂದು ಆರನೇ ಹಂತದ ಚುನಾವಣೆ- 58 ಕ್ಷೇತ್ರಗಳಿಗೆ ಮತದಾನ

    ಇಂದು ಆರನೇ ಹಂತದ ಚುನಾವಣೆ- 58 ಕ್ಷೇತ್ರಗಳಿಗೆ ಮತದಾನ

    ನವದೆಹಲಿ: ಲೋಕಸಭೆಗೆ (Lok Sabha Election) ಇಂದು (ಶನಿವಾರ) ಆರನೇ ಹಂತದ ಚುನಾವಣೆ ನಡೆಯುತ್ತಿದ್ದು, ಒಟ್ಟು 8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಿಗೆ ಮತದಾನ (Voting) ನಡೆಯಲಿದೆ.

    ಈಗಾಗಲೇ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಬಿಹಾರದ 8, ಹರಿಯಾಣದ ಎಲ್ಲಾ 10 ಸ್ಥಾನಗಳು, ಜಮ್ಮು ಮತ್ತು ಕಾಶ್ಮೀರದ 1 ಸ್ಥಾನ, ಜಾರ್ಖಂಡ್‌ನ 4 ಸ್ಥಾನ, ದೆಹಲಿಯ ಎಲ್ಲಾ 7 ಸ್ಥಾನಗಳು, ಒಡಿಶಾದಲ್ಲಿ 6, ಉತ್ತರ ಪ್ರದೇಶದ 14 ಮತ್ತು ಪಶ್ಚಿಮ ಬಂಗಾಳದ 8 ಸ್ಥಾನಗಳಿಗೆ ಮತದಾನ ನಡೆಯಲಿದೆ. ಚುನಾವಣಾ ಅಖಾಡದಲ್ಲಿ ಒಟ್ಟು 889 ಅಭ್ಯರ್ಥಿಗಳಿದ್ದಾರೆ. 5.84 ಕೋಟಿ ಪುರುಷರು, 5.29 ಕೋಟಿ ಮಹಿಳೆಯರು, 5,120 ತೃತೀಯ ಲಿಂಗಿಗಳು ಸೇರಿ ಒಟ್ಟು 11.13 ಕೋಟಿ ಮತದಾರರು ಮತದಾನಕ್ಕೆ ಅರ್ಹರಾಗಿದ್ದಾರೆ. 8.93 ಲಕ್ಷಕ್ಕೂ ಹೆಚ್ಚು ನೋಂದಾಯಿತ 85+ ವರ್ಷದ, 23,659 100 ವರ್ಷಕ್ಕಿಂತ ಮೇಲ್ಪಟ್ಟ ಮತದಾರರು ಮತ ಚಲಾಯಿಸಲಿದ್ದಾರೆ. ಇದನ್ನೂ ಓದಿ: ಫಾರ್ಮ್‍ಹೌಸ್‍ನಲ್ಲಿ ರೇವ್ ಪಾರ್ಟಿ ಪ್ರಕರಣ- ಐವರ ಬ್ಯಾಂಕ್ ಅಕೌಂಟ್ ಸೀಜ್

    ಆರನೇ ಹಂತದ ಮತದಾನಕ್ಕೆ 1.14 ಲಕ್ಷ ಮತಗಟ್ಟೆಗಳ ನಿರ್ಮಾಣವಾಗಿದ್ದು, 11.4 ಲಕ್ಷ ಮತಗಟ್ಟೆ ಅಧಿಕಾರಿಗಳ ನೇಮಕ ಮಾಡಲಾಗಿದೆ. ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯಲು 20 ವಿಶೇಷ ರೈಲುಗಳನ್ನು ನಿಯೋಜಿಸಿದ್ದು, 184 ವೀಕ್ಷಕರು, 2,222 ಫ್ಲೈಯಿಂಗ್‌ ಸ್ಕ್ವಾಡ್‌ಗಳ ನೇಮಕ ಮಾಡಲಾಗಿದೆ. 257 ಅಂತರಾಷ್ಟ್ರೀಯ ಗಡಿ ಚೆಕ್‌ಪೋಸ್ಟ್‌ಗಳು, 927 ಅಂತರ-ರಾಜ್ಯ ಗಡಿ ಚೆಕ್‌ಪೋಸ್ಟ್‌ಗಳು ನಿಯೋಜನೆ ಮಾಡಿದ್ದು, ಚುನಾವಣಾ ಗಲಭೆ ತಡೆಯಲು ಪ್ರಮುಖ ಕ್ಷೇತ್ರಗಳಲ್ಲಿ ಕೇಂದ್ರದ ಮೀಸಲು ಪಡೆಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಕೋಲ್ಕತ್ತಾದಲ್ಲಿ ಹಿಂಸಾತ್ಮಕ ಪ್ರತಿಭಟನೆ ಸಾಧ್ಯತೆ – ಮೇ 28 ರಿಂದ 60 ದಿನ 144 ಸೆಕ್ಷನ್ ಜಾರಿ

    ಆರನೇ ಹಂತದಲ್ಲಿರುವ ಪ್ರಮುಖ ಅಭ್ಯರ್ಥಿಗಳು:
    ನವದೆಹಲಿ – ಬನ್ಸೂರಿ ಸ್ವರಾಜ್ (ಬಿಜೆಪಿ)
    ಈಶಾನ್ಯ ದೆಹಲಿ – ಮನೋಜ್ ತಿವಾರಿ (ಬಿಜೆಪಿ), ಕನ್ಹಯ್ಯಾ ಕುಮಾರ್ (ಕಾಂಗ್ರೆಸ್)
    ರೊಹ್ಟಕ್ – ದೀಪೇಂದ್ರ ಸಿಂಗ್ ಹೂಡಾ (ಕಾಂಗ್ರೆಸ್)
    ಸಂಬಲ್‌ಪುರ – ಧರ್ಮೇಂದ್ರ ಪ್ರಧಾನ್ (ಬಿಜೆಪಿ)
    ಸುಲ್ತಾನ್‌ಪುರ – ಮೇನಕಾ ಗಾಂಧಿ (ಬಿಜೆಪಿ),
    ಅನಂತನಾಗ್ ರಜೌರಿ- ಮೆಹಬೂಬಾ ಮುಫ್ತಿ (ಪಿಡಿಪಿ)
    ತಮ್ಲುಕ್ – ಅಭಿಜಿತ್ ಗಂಗೋಪಾಧ್ಯಾಯ (ಬಿಜೆಪಿ)
    ಕರ್ನಾಲ್ – ಮನೋಹರ್ ಲಾಲ್ ಖಟ್ಟರ್ (ಬಿಜೆಪಿ)
    ಕುರುಕ್ಷೇತ್ರ – ನವೀನ್ ಜಿಂದಾಲ್ (ಬಿಜೆಪಿ)
    ಗುರ್‌ಗಾಂವ್ – ಇಂದರ್‌ಜಿತ್ ಸಿಂಗ್ (ಬಿಜೆಪಿ)

  • ಇಂದು ದೇಶದಲ್ಲಿ ಮೂರನೇ ಹಂತದ ಚುನಾವಣೆ – 11 ರಾಜ್ಯಗಳ 92 ಕ್ಷೇತ್ರಗಳಲ್ಲಿ ಮತದಾನ

    ಇಂದು ದೇಶದಲ್ಲಿ ಮೂರನೇ ಹಂತದ ಚುನಾವಣೆ – 11 ರಾಜ್ಯಗಳ 92 ಕ್ಷೇತ್ರಗಳಲ್ಲಿ ಮತದಾನ

    ನವದೆಹಲಿ: ದೇಶದ ಸಾರ್ವತ್ರಿಕ ಚುನಾವಣೆಯ (Lok Sabha Election 2024) ಮೂರನೇ ಹಂತದಲ್ಲಿ ಇಂದು 11 ರಾಜ್ಯಗಳ 92 ಕ್ಷೇತ್ರಗಳಿಗೆ ಮತದಾನ (Voting) ನಡೆಯಲಿದೆ.

    ಕರ್ನಾಟಕದ (Karnataka) 14 ಕ್ಷೇತ್ರ ಸೇರಿದಂತೆ ಒಟ್ಟು 92 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮೂರನೇ ಹಂತದ ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ (Election Commission) ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಒಟ್ಟು 1,300 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 1.85 ಲಕ್ಷ ಮತದಾನ ಕೇಂದ್ರಗಳನ್ನು ಸ್ಥಾಪಿಸಿದ್ದು, 18.5 ಲಕ್ಷ ಚುನಾವಣಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

    8.85 ಕೋಟಿ ಪುರುಷರು, 8.39 ಕೋಟಿ ಮಹಿಳೆಯರು ಸೇರಿ 17.24 ಕೋಟಿ ಜನರು ಮತದಾನಕ್ಕೆ ಅರ್ಹರಾಗಿದ್ದಾರೆ. 85 ವರ್ಷ ಮೇಲ್ಪಟ್ಟ 14.04 ಲಕ್ಷ ಹಿರಿಯ ಮತದಾರರು, 100 ವರ್ಷ ಮೇಲ್ಪಟ್ಟ 39,599 ಮತದಾರರು ಮತದಾನ ಮಾಡಲಿದ್ದಾರೆ. ಚುನಾವಣೆ ಹಿನ್ನೆಲೆ 264 ಚುನಾವಣೆ ವೀಕ್ಷಕರು, 4,303 ಫ್ಲೈಯಿಂಗ್ ಸ್ಕ್ವ್ಯಾಡ್ ನೇಮಕ ಮಾಡಲಾಗಿದೆ. ಚುನಾವಣಾ ಅಕ್ರಮ ತಡೆಯಲು 1,041 ಚೆಕ್‌ಪೋಸ್ಟ್ ನಿಯೋಜಿಸಲಾಗಿದೆ.

    ಬಿಎಸ್‌ಪಿ ಅಭ್ಯರ್ಥಿ ನಿಧನದ ಹಿನ್ನೆಲೆ ಮಧ್ಯಪ್ರದೇಶದ ಬೇತುಲ್ ಕ್ಷೇತ್ರದ ಚುನಾವಣೆ 2ನೇ ಹಂತದಿಂದ 3ನೇ ಹಂತಕ್ಕೆ ಬದಲಾಗಿದೆ. 3ನೇ ಹಂತದಲ್ಲಿ ನಡೆಯಬೇಕಿದ್ದ ಅನಂತ್ ನಾಗ್ – ರಜೋರಿ ಕ್ಷೇತ್ರದ ಚುನಾವಣೆ 6ನೇ ಹಂತದಲ್ಲಿ ನಡೆಯಲಿದೆ.

    ಯಾವ ರಾಜ್ಯದಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಮತದಾನ?
    ಅಸ್ಸಾಂ – 4
    ಬಿಹಾರ – 5
    ಛತ್ತೀಸ್‌ಗಢ – 7
    ಗೋವಾ – 2
    ಗುಜರಾತ್ – 26
    ಕರ್ನಾಟಕ – 14
    ಮಧ್ಯಪ್ರದೇಶ – 8+1
    ಮಹಾರಾಷ್ಟ್ರ -11
    ಉತ್ತರ ಪ್ರದೇಶ – 10
    ಪಶ್ಚಿಮ ಬಂಗಾಳ – 4
    ದಾದ್ರಾ ಮತ್ತು ಹವೇಲಿ ಹಾಗೂ ದಮನ್ ಮತ್ತು ದಿಯು 2 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

    ಮೂರನೇ ಹಂತದ ಚುನಾವಣೆಯ ಪ್ರಮುಖ ಕ್ಷೇತ್ರ ಹಾಗೂ ಅಭ್ಯರ್ಥಿಗಳು:
    ಅಮಿತ್ ಶಾ – ಗಾಂಧಿನಗರ, ಗುಜರಾತ್
    ಡಿಂಪಲ್ ಯಾದವ್ – ಮೈನ್‌ಪುರಿ, ಉತ್ತರ ಪ್ರದೇಶ
    ಜ್ಯೋತಿರಾದಿತ್ಯ ಸಿಂಧಿಯಾ – ಗುಣಾ, ಮಧ್ಯಪ್ರದೇಶ
    ಶಿವರಾಜ್ ಸಿಂಗ್ ಚೌಹಾಣ್ – ವಿದಿಶಾ, ಮಧ್ಯಪ್ರದೇಶ
    ದಿಗ್ವಿಜಯ ಸಿಂಗ್ – ರಾಜಗಢ, ಮಧ್ಯಪ್ರದೇಶ
    ಸುಪ್ರಿಯಾ ಸುಳೆ – ಬಾರಾಮತಿ, ಮಹಾರಾಷ್ಟ್ರ
    ಸುನೇತ್ರಾ ಪವಾರ್ – ಬಾರಾಮತಿ, ಮಹಾರಾಷ್ಟ್ರ
    ಪಲ್ಲವಿ ಡೆಂಪೋ – ದಕ್ಷಿಣ ಗೋವಾ, ಗೋವಾ
    ಬದ್ರುದ್ದೀನ್ ಅಜ್ಮಲ್ – ಧುಬ್ರಿ, ಅಸ್ಸಾಂ
    ಮನ್ಸುಕ್ ಮಾಂಡವಿಯ – ಪೋರಬಂದರ್, ಗುಜರಾತ್
    ಪುರುಷೋತ್ತಮ್ ರೂಪಾಲ – ರಾಜ್‌ಕೋಟ್, ಗುಜರಾತ್

  • ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಹೃದಯಾಘಾತ- ಶಿಕ್ಷಕ ದುರ್ಮರಣ

    ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಹೃದಯಾಘಾತ- ಶಿಕ್ಷಕ ದುರ್ಮರಣ

    ಬಾಗಲಕೋಟೆ: ಚುನಾವಣಾ  (Lok Sabha Elections 2024) ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ  (Heart Attack) ಸಾವನ್ನಪ್ಪಿದ ಘಟನೆ ಮುಧೋಳದಲ್ಲಿ ನಡೆದಿದೆ.

    ಮೃತ ಸಿಬ್ಬಂದಿಯನ್ನು ಗೋವಿಂದಪ್ಪ ಎಂದು ಗುರುತಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ ತೆರಳಲು ಬಸ್ ನಿಲ್ದಾಣದ ಗೇಟ್ ಬಳಿ ಬಂದಿದ್ದ ವೇಳೆ ಅವರಿಗೆ ಹೃದಯಾಘಾತವಾಗಿದೆ. ಈ ವೇಳೆ ಅವರು ಸ್ಥಳದಲ್ಲೇ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಭೇಟಿ ಕೊಟ್ಟ ಬಳಿಕ ನನ್ನನ್ನು ಟಾರ್ಗೆಟ್‌ ಮಾಡಲಾಗಿದೆ: ʼಕೈʼ ವಿರುದ್ಧ ರಾಧಿಕಾ ಕಿಡಿ

    ಜಮಖಂಡಿ ತಾಲೂಕಿನ ಮೈಗೂರು ಪ್ರಾಥಮಿಕ ಶಾಲೆ ಮತಗಟ್ಟೆಗೆ ಗೋವಿಂದಪ್ಪ ಅವರು ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರು ಮುಧೋಳದ ಬಿದರಿ ಶಾಲೆಯಲ್ಲಿ ಶಿಕ್ಷಕರಾಗಿ (Teacher) ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ನನಗೆ ಕೆಆರ್ ನಗರದ ಸಂತ್ರಸ್ತೆ ಗೊತ್ತಿಲ್ಲ, ದೂರನ್ನೂ ಕೊಡಿಸಿಲ್ಲ: ಶಾಸಕ ರವಿಶಂಕರ್

  • ಬೆಂಗಳೂರು ನಗರ ಜಿಲ್ಲೆಯ 3 ಕ್ಷೇತ್ರಗಳ ಮತ ಎಣಿಕೆ ಮತ್ತು ಸ್ಟ್ರಾಂಗ್ ರೂಂ ಕೇಂದ್ರಗಳ ವಿವರ ಹೀಗಿದೆ..

    ಬೆಂಗಳೂರು ನಗರ ಜಿಲ್ಲೆಯ 3 ಕ್ಷೇತ್ರಗಳ ಮತ ಎಣಿಕೆ ಮತ್ತು ಸ್ಟ್ರಾಂಗ್ ರೂಂ ಕೇಂದ್ರಗಳ ವಿವರ ಹೀಗಿದೆ..

    – 14 ಕ್ಷೇತ್ರಗಳ ಮೊದಲ ಹಂತದ ಮತದಾನ ಮುಕ್ತಾಯ

    ಬೆಂಗಳೂರು: ರಾಜ್ಯದ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದೆ. 14 ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆದಿದ್ದು, ಜನ ಉತ್ಸಾಹದಿಂದಲೇ ಮತ ಚಲಾಯಿಸಿದ್ದಾರೆ.

    ಸಂಜೆ 6 ಗಂಟೆ ವೇಳೆಗೆ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಬೂತ್‌ಗಳಲ್ಲಿ ಇವಿಎಂ ಯಂತ್ರಗಳ ಪವರ್ ಬಟನ್ ಆಫ್ ಮಾಡಿದ ಮತಗಟ್ಟೆ ಅಧಿಕಾರಿಗಳು ಅವುಗಳನ್ನು ಸ್ಟ್ರಾಂಕ್‌ ರೂಮಿನಲ್ಲಿರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ 38.23% ಮತದಾನ-ಬೆಂಗಳೂರು ನಗರದಲ್ಲಿ ಅತಿ ಕಡಿಮೆ, ದಕ್ಷಿಣ ಕನ್ನಡದಲ್ಲಿ ಗರಿಷ್ಠ

    ಈ ಬೆನ್ನಲ್ಲೇ ಚುನಾವಣಾ ಅಧಿಕಾರಿಗಳು ಬೆಂಗಳೂರು ನಗರ ಜಿಲ್ಲೆಯ 3 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಮತ್ತು ಸ್ಟ್ರಾಂಗ್ ರೂಂ ಕೇಂದ್ರಗಳ ವಿವರವನ್ನು ಹಂಚಿಕೊಂಡಿದ್ದಾರೆ. ಅವುಗಳ ಮಾಹಿತಿ ಹೀಗಿದೆ.. ಇದನ್ನೂ ಓದಿ: 2nd Phase Voting: ಹೇಮ ಮಾಲಿನಿಗಿಂತಲೂ ಸ್ಟಾರ್‌ ಚಂದ್ರು ಅತ್ಯಂತ ಶ್ರೀಮಂತ ಅಭ್ಯರ್ಥಿ!

    3 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಮತ್ತು ಸ್ಟ್ರಾಂಗ್ ರೂಂ ಕೇಂದ್ರಗಳ ವಿವರ:
    1. ಬೆಂಗಳೂರು ಕೇಂದ್ರ :- ಮೌಂಟ್ ಕಾರ್ಮೆಲ್ ಕಾಲೇಜು, ಅರಮನೆ ರಸ್ತೆ, ವಸಂತನಗರ, ಬೆಂಗಳೂರು.
    2. ಬೆಂಗಳೂರು ಉತ್ತರ :- ಸೆಂಟ್ ಜೋಸೆಫ್ ಕಾಲೇಜು, ಮಲ್ಯ ರಸ್ತೆ, ಬೆಂಗಳೂರು.
    3. ಬೆಂಗಳೂರು ದಕ್ಷಿಣ :- ಎಸ್.ಎಸ್.ಎಂ.ಆರ್.ವಿ ಕಾಲೇಜು, 9ನೇ ಬ್ಲಾಕ್, ಜಯನಗರ, ಬೆಂಗಳೂರು.

    ಬೆಂಗ್ಳೂರಿನಲ್ಲಿ ಮತದಾನ ನೀರಸ:
    ಕರ್ನಾಟಕದಲ್ಲಿ ಸಂಜೆ 5 ಗಂಟೆ ಹೊತ್ತಿಗೆ 63.90% ರಷ್ಟು ಮತದಾನವಾಗಿದೆ. ಬೆಂಗಳೂರು ನಗರ ಜಿಲ್ಲೆಯ ಮೂರು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲೂ ಶೇಕಡವಾರು ಮತದಾನ 50% ದಾಟಿದೆ. ಬೆಂಗಳೂರು ಗ್ರಾಮಾಂತರದಲ್ಲಿ 61.78%, ಬೆಂಗಳೂರು ಉತ್ತರ 50.04%, ಬೆಂಗಳೂರು ಕೇಂದ್ರ 48.61%, ಬೆಂಗಳೂರು ದಕ್ಷಿಣ 49.37% ಮತ ಚಲಾವಣೆಯಾಗಿದೆ.

    ಉಡುಪಿ-ಚಿಕ್ಕಮಗಳೂರು 72.13%, ದಕ್ಷಿಣ ಕನ್ನಡ 71.83%, ಹಾಸನ 71.13%, ಚಿತ್ರದುರ್ಗ 67% ಬಿರುಸಿನ ಮತದಾನವಾಗಿದೆ. ತುಮಕೂರು 72.10%, ಮಂಡ್ಯ 74.87%, ಮೈಸೂರು 65.85%, ಚಾಮರಾಜನಗರ 69.60%, ಚಿತ್ರದುರ್ಗ 70.97%, ಕೋಲಾರ 71.26% ಮತ ಚಲಾವಣೆಯಾಗಿದೆ.

  • ಚಾಮರಾಜನಗರದಲ್ಲಿ ಗ್ರಾಮಸ್ಥರಿಂದ ದಾಂಧಲೆ, ಇವಿಎಂ ಧ್ವಂಸ

    ಚಾಮರಾಜನಗರದಲ್ಲಿ ಗ್ರಾಮಸ್ಥರಿಂದ ದಾಂಧಲೆ, ಇವಿಎಂ ಧ್ವಂಸ

    ಚಾಮರಾಜನಗರ: ಮತದಾನ ಬಹಿಷ್ಕರಿಸಿದ್ದ ಗ್ರಾಮಸ್ಥರನ್ನು ಮನವೊಲಿಸಲು ತೆರಳಿದ್ದ ಅಧಿಕಾರಿಗಳ ವಿರುದ್ಧ ಜನ ಪ್ರತಿಭಟನೆ ನಡೆಸಿ ಕಲ್ಲು ತೂರಾಟ ನಡೆಸಿದ ಘಟನೆ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಸೌಲಭ್ಯ ಇಲ್ಲ ಎಂದು ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಈ ವೇಳೆ ಅಧಿಕಾರಿಗಳು ಕೆಲವರ ಮನವೊಲಿಸಿ ಮತದಾನಕ್ಕೆ ಕರೆತಂದಿದ್ದಾರೆ. ಈ ವೇಳೆ ಇಡೀ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದೇವೆ ಎಂದು ಗ್ರಾಮದ ಒಂದು ಗುಂಪು ಗಲಾಟೆ ಆರಂಭಿಸಿದೆ. ಎರಡು ಗುಂಪುಗಳ ಮಧ್ಯೆ ನಡೆದ ಜಗಳ ಕೊನೆಗೆ ವಿಕೋಪಕ್ಕೆ ತಿರುಗಿ ಇವಿಎಂ (EVM) ಹಾಗೂ ಮತಗಟ್ಟೆಯ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಗಲಾಟೆಯಲ್ಲಿ ಕೆಲವು ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ:ಮೂಲಭೂತ ಸೌಕರ್ಯ ಕೊರತೆ ಆರೋಪ – ಮಹದೇಶ್ವರ ಬೆಟ್ಟ ವ್ಯಾಪ್ತಿಯ 5 ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ

    ಮೂಲಭೂತ ಸೌಕರ್ಯ ಕೊರತೆಯಿಂದ ಮಹದೇಶ್ವರ ಬೆಟ್ಟ (Mahadeshwara Hill) ವ್ಯಾಪ್ತಿಯ 5 ಗ್ರಾಮಗಳ ಗ್ರಾಮಸ್ಥರು ಮತದಾನದಿಂದ ದೂರ ಉಳಿದಿದ್ದರು. ಇಂಡಿಗನತ್ತ, ತೇಕಣೆ, ಮೆಂದಾರೆ ಹಾಗೂ ತುಳಸೀಕೆರೆ ಗ್ರಾಮಗಳಲ್ಲಿ ಮತದಾನ ಬಹಿಷ್ಕರಿಸಿದ್ದಾರೆ. ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಕೆಲ ದಿನಗಳ ಹಿಂದೆಯೇ ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದರು. ಅಧಿಕಾರಿಗಳು ಮನವೊಲಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿ ಮತದಾನ ಮಾಡಲೇಬಾರದು ಎಂದು ಗ್ರಾಮಸ್ಥರು ದೃಢ ಸಂಕಲ್ಪ ಮಾಡಿದ್ದರು. ಇದನ್ನೂ ಓದಿ: ತಾಳಿ ಕಟ್ಟುವ ಮುನ್ನ ಓಡೋಡಿ ಬಂದು ಮತದಾನ ಮಾಡಿದ ವರ

  • ಉಸಿರಾಟದ ಸಮಸ್ಯೆ; ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಬಂದು ಮತದಾರರಿಂದ ವೋಟ್

    ಉಸಿರಾಟದ ಸಮಸ್ಯೆ; ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಬಂದು ಮತದಾರರಿಂದ ವೋಟ್

    ಬೆಂಗಳೂರು: ಉಸಿರಾಟದ ಸಮಸ್ಯೆಯ ನಡುವೆಯೂ ಕೆಲ ಮತದಾರರು ಆಕ್ಸಿಜನ್ ಮಾಸ್ಕ್ (Oxygen Mask) ಹಾಕಿಕೊಂಡು ಬಂದು ಮತದಾನ (Voting) ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

    ಇಂಪ್ಯಾಕ್ಟ್ ಕಾಲೇಜ್ ಬೂತ್‌ನಲ್ಲಿ 62 ವರ್ಷದ ವೃದ್ಧರೊಬ್ಬರು ಉಸಿರಾಟ ಸಮಸ್ಯೆಯಿದ್ದರೂ ಮತ ಹಾಕುವ ಸಲುವಾಗಿ ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಬಂದು ಮತ ಹಾಕಿದ್ದಾರೆ. ಇದನ್ನೂ ಓದಿ: ಕರ್ತವ್ಯ ನಿರತ ಚುನಾವಣಾ ಮಹಿಳಾ ಸಿಬ್ಬಂದಿ ನಿಧನ

    ಇನ್ನೊಂದೆಡೆ ರಾಜಾಜಿನಗರ ಎರಡನೇ ಬ್ಲಾಕ್‌ನ ನಿವಾಸಿ ಗೀತಾ (83) ಕಳೆದ ಮೂರು ವರ್ಷಗಳಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ಬಳಸುತ್ತಿದ್ದಾರೆ. ಇದೇ ವೇಳೆ ಅವರು ಹರಿದಾಸ ಸಾಹಿತ್ಯ ಕುರಿತು ಪಿಹೆಚ್‌ಡಿ ಮಾಡುತ್ತಿದ್ದಾರೆ. ಕಳೆದ ತಿಂಗಳು ಉತ್ತರಾಧಿಮಠದವರು ನಡೆಸಿದ ಹರಿದಾಸ ಸಾಹಿತ್ಯ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಹರಿದಾಸ ಸಾಹಿತ್ಯ ಕುರಿತು ಪಾಠ ಮಾಡುತ್ತಾರೆ. ಚುನಾವಣಾ ಪ್ರಚಾರಕ್ಕೆ ಹೋದಾಗ ನಾನು ವೋಟು ಹಾಕಬೇಕು. ಆಕ್ಸಿಜನ್ ಸಿಲಿಂಡರ್ ಇರುವ ಅಂಬುಲೆನ್ಸ್ ವ್ಯವಸ್ಥೆ ಮಾಡು ಎಂದು ಕಟ್ಟಪ್ಪಣೆ ಮಾಡಿದರು. ಅದೀಗ ಜಾರಿಗೊಂಡಿದೆ. ಅದೇ ರೀತಿ ಗೀತಮ್ಮ ವೋಟು ಹಾಕಿ ಎರಡೂ ಕೈ ಎತ್ತಿ ಜೈ ಶ್ರೀರಾಮ್ ಎಂದಿದ್ದಾರೆ. ಇದನ್ನೂ ಓದಿ: ಮತ ಹಾಕಲು ಬಂದಾಗ ಹೃದಯ ಸ್ತಂಭನ- ಮಹಿಳೆಯ ಪ್ರಾಣ ಉಳಿಸಿದ ವೈದ್ಯರು

    ಇನ್ನು ದಾಸರಹಳ್ಳಿಯಲ್ಲಿ ವೃದ್ಧ ಮಹಿಳೆಯೊಬ್ಬರು ಆಸ್ಪತ್ರೆಯಿಂದ ಆಕ್ಸಿಜನ್ ಹಾಕಿಕೊಂಡು ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ನೀಲಂ ಸಿನ್ಹಾ ಎಂಬ ವೃದ್ಧೆ ಶ್ವಾಸಕೋಶದ ಖಾಯಿಲೆಯಿಂದ ಬಳಲುತ್ತಿದ್ದು, ಉಸಿರಾಟದ ತೊಂದರೆ ಇದ್ದರೂ ಸಹ ಆಕ್ಸಿಜನ್ ಹಾಕಿಕೊಂಡು ಶೆಟ್ಟಿಹಳ್ಳಿ ಸರ್ಕಾರಿ ಶಾಲೆಯಲ್ಲಿ ತನ್ನ ಮತ ಚಲಾಯಿಸಿದ್ದಾರೆ. ಇದನ್ನೂ ಓದಿ: ನೋಟಾಗಿಂತ ಕಡಿಮೆ ಮತ ಪಡೆದ ಅಭ್ಯರ್ಥಿಗಳನ್ನು ನಿಷೇಧಿಸಿ, ಮರು ಚುನಾವಣೆಗೆ ನಿರ್ದೇಶನ ಕೋರಿ ಅರ್ಜಿ

  • ಮಹಾರಾಜರ ಗೆಟಪ್‌ನಲ್ಲಿ ಬಂದು ಮತದಾನ ಮಾಡಿದ ವ್ಯಕ್ತಿ

    ಮಹಾರಾಜರ ಗೆಟಪ್‌ನಲ್ಲಿ ಬಂದು ಮತದಾನ ಮಾಡಿದ ವ್ಯಕ್ತಿ

    ಮೈಸೂರು: ಮಹಾರಾಜರ ಗೆಟಪ್‌ನಲ್ಲಿ (Maharaja Dress) ಬಂದು ವ್ಯಕ್ತಿಯೊಬ್ಬರು ಮತದಾನ (Vote) ಮಾಡಿದ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ.

    ಮೈಸೂರಿನ ಕುವೆಂಪುನಗರದ (Kuvempu Nagar) ವಿವೇಕಾನಂದ ಸರ್ಕಲ್ ಬಳಿಯ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬರು ವಿಶೇಷವಾಗಿ ಮಹಾರಾಜರ ಉಡುಗೆ ತೊಟ್ಟು ಮತದಾನಕ್ಕೆ ಆಗಮಿಸಿ ಜನರನ್ನು ಆಕರ್ಷಿಸಿದ್ದಾರೆ. ಇದನ್ನೂ ಓದಿ: ಮೂಲಭೂತ ಸೌಕರ್ಯ ಕೊರತೆ ಆರೋಪ – ಮಹದೇಶ್ವರ ಬೆಟ್ಟ ವ್ಯಾಪ್ತಿಯ 5 ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ

    ಕುವೆಂಪುನಗರದ ನಿವಾಸಿ ಉಮಾಕಾಂತ್ ಎಂಬ ವ್ಯಕ್ತಿ ಮಹಾರಾಜರ ಗೆಟಪ್‌ನಲ್ಲಿ ಬಂದು ಮತದಾನ ಮಾಡಿ ವಿಶೇಷವಾಗಿ ತಮ್ಮ ಹಕ್ಕನ್ನು ಚಲಾಯಿಸಿದ್ದು, ಇವರ ಮಹಾರಾಜರ ತೊಡುಗೆ ನೋಡುಗರ ಗಮನಸೆಳೆದಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ ಉತ್ತಮವಾದ ವಾತಾವರಣ ಇದೆ: ಸಿದ್ದರಾಮಯ್ಯ

  • ಮೂಲಭೂತ ಸೌಕರ್ಯ ಕೊರತೆ ಆರೋಪ – ಮಹದೇಶ್ವರ ಬೆಟ್ಟ ವ್ಯಾಪ್ತಿಯ 5 ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ

    ಮೂಲಭೂತ ಸೌಕರ್ಯ ಕೊರತೆ ಆರೋಪ – ಮಹದೇಶ್ವರ ಬೆಟ್ಟ ವ್ಯಾಪ್ತಿಯ 5 ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ

    ಚಾಮರಾಜನಗರ: ಮೂಲಭೂತ ಸೌಕರ್ಯ ಕೊರತೆ ಆರೋಪಿಸಿ ಮಹದೇಶ್ವರ ಬೆಟ್ಟ (Mahadeshwara Hill) ವ್ಯಾಪ್ತಿಯ 5 ಗ್ರಾಮಗಳ ಗ್ರಾಮಸ್ಥರು ಮತದಾನದಿಂದ (Voting) ದೂರ ಉಳಿದಿದ್ದಾರೆ.

    ಇಂಡಿಗನತ್ತ, ತೇಕಣೆ, ಮೆಂದಾರೆ ಹಾಗೂ ತುಳಸೀಕೆರೆ ಗ್ರಾಮಗಳಲ್ಲಿ ಮತದಾನ ಬಹಿಷ್ಕರಿಸಿದ್ದು (Election Boycott), ಪಡಸಲನತ್ತ ಗ್ರಾಮದಲ್ಲಿ 85 ಮತದಾರರ ಪೈಕಿ ಇಬ್ಬರು ಮಾತ್ರ ಮತದಾನ ಮಾಡಿದ್ದಾರೆ. ಉಳಿದಂತೆ ಯಾವುದೇ ಮತದಾರರು ಇದುವರೆಗೂ ಮತಗಟ್ಟೆಯತ್ತ ಸುಳಿದಿಲ್ಲ. ಕನಿಷ್ಠ ಮೂಲಭೂತ ಸೌಕರ್ಯದಿಂದ ಗ್ರಾಮಸ್ಥರು ವಂಚಿತರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ ಉತ್ತಮವಾದ ವಾತಾವರಣ ಇದೆ: ಸಿದ್ದರಾಮಯ್ಯ

    ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ ಹಾಗೂ ಶಿಕ್ಷಣ ಮರಿಚೀಕೆಯಾಗಿದೆ ಎಂದು ಆರೋಪ ಹೊರಿಸಲಾಗಿದೆ. ಕೆಲ ದಿನಗಳ ಹಿಂದೆಯೇ ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದರು. ಅಧಿಕಾರಿಗಳು ಮನವೊಲಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿ ಮತದಾನ ಮಾಡಲೇಬಾರದು ಎಂದು ಗ್ರಾಮಸ್ಥರು ದೃಢ ಸಂಕಲ್ಪ ಮಾಡಿದ್ದಾರೆ. ಇದನ್ನೂ ಓದಿ: Lok Sabha Elections 2024: ಒಂದೇ ಕುಟುಂಬದ 85 ಮಂದಿಯಿಂದ ಏಕಕಾಲದಲ್ಲಿ ಮತದಾನ!

  • ಹಸೆಮಣೆ ಏರುವ ಮುನ್ನ ಮದುಮಗಳಿಂದ ಮೊದಲ ಮತದಾನ

    ಹಸೆಮಣೆ ಏರುವ ಮುನ್ನ ಮದುಮಗಳಿಂದ ಮೊದಲ ಮತದಾನ

    ಚಿಕ್ಕಮಗಳೂರು: ಹಸೆಮಣೆ ಏರುವ ಮುನ್ನ ಮದುಮಗಳಾಗಿ (Bride) ಅಲಂಕಾರಗೊಂಡು ಯುವತಿ ತನ್ನ ಬೂತ್‌ನಲ್ಲಿ ಮೊದಲ ಮತದಾನ (Voting) ಮಾಡಿ ಮದುವೆಗೆ ತೆರಳಿರುವ ಘಟನೆ ಚಿಕ್ಕಮಗಳೂರು (Chikkamagaluru)  ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.

    ಕುಂದೂರು ಸಮೀಪದ ತಳವಾರ ಗ್ರಾಮದ ಸುಮಿಕ್ಷಾ ಎಂಬ ಯುವತಿಯ ಮದುವೆ (Marriage) ಕೊಪ್ಪ ಮೂಲದ ಸಂಜಯ್ ಎಂಬವರೊಂದಿಗೆ ನಿಶ್ಚಯವಾಗಿತ್ತು. ಇಂದೇ ಮದುವೆ ನಿಗದಿಯಾಗಿದ್ದ ಕಾರಣ ಮದುವೆ ಮಂಟಪಕ್ಕೆ ತೆರಳುವ ಮುನ್ನ ಮದುಮಗಳಾಗಿ ಅಲಂಕಾರಗೊಂಡ ಯುವತಿ ಮೊದಲ ಮತದಾನ ಮಾಡಿ ಬಳಿಕ ಮದುವೆ ಮಂಟಪಕ್ಕೆ ತೆರಳಿದ್ದಾರೆ. ಮೂಡಿಗೆರೆ ಪಟ್ಟಣದ ಪ್ರೀತಂ ಹಾಲ್‌ನಲ್ಲಿ ಮದುವೆ ನಡೆಯಲಿದೆ. ಇದನ್ನೂ ಓದಿ: ಕಡ್ಡಾಯ ಮತದಾನ ಕಾನೂನು ತರಬೇಕು: ಸಿದ್ದಗಂಗಾ ಶ್ರೀ ಆಗ್ರಹ

    ಯುವತಿ ಕುಂದೂರು ಗ್ರಾಮದ ಬೂತ್ ನಂಬರ್ 86ರಲ್ಲಿ ಮತದಾನ ಮಾಡಿದ್ದಾರೆ. ಇದೇ ವೇಳೆ ದೇಶದ ಭದ್ರತೆಯ ರಕ್ಷಣೆಗಾಗಿ ಸುಭದ್ರತೆಯ ಸರ್ಕಾರ ನಿರ್ಮಾಣ ಮಾಡಲು ಮತದಾನ ಅತ್ಯಂತ ಮುಖ್ಯ ಎಂದು ಮದುಮಗಳ ಜೊತೆ ಆಕೆಯ 11 ಕುಟುಂಬಸ್ಥರು ಏಕಕಾಲದಲ್ಲಿ ಮತದಾನ ಮಾಡಿದ್ದಾರೆ. ಮದುಮಗಳಾಗಿ ಮತದಾನಕ್ಕೆ ಬಂದ ಯುವತಿ ಸುಮಿಕ್ಷಾ ಅವರಿಗೆ ಇತರೆ ಮತದಾರರು ಹಾಗೂ ಚುನಾವಣಾ ಸಿಬ್ಬಂದಿ ಕೂಡ ಶುಭಕೋರಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಮತದಾನ ಆರಂಭ : ತುಷಾರ್‌ ಗಿರಿನಾಥ್‌

  • ಏ.16ರಿಂದ ಮಂಡ್ಯದಲ್ಲಿ ಹೆಚ್‌ಡಿಕೆ ಪ್ರಚಾರ – ʻಕೈʼ ಕಟ್ಟಿಹಾಕಲು ದಳಪತಿ ಪ್ಲ್ಯಾನ್‌ ಏನು?

    ಏ.16ರಿಂದ ಮಂಡ್ಯದಲ್ಲಿ ಹೆಚ್‌ಡಿಕೆ ಪ್ರಚಾರ – ʻಕೈʼ ಕಟ್ಟಿಹಾಕಲು ದಳಪತಿ ಪ್ಲ್ಯಾನ್‌ ಏನು?

    ಮಂಡ್ಯ: ರಣ ಬಿಸಿಲಿನ ಕಾವು ಹೆಚ್ಚಾದ್ದಂತೆ ಮಂಡ್ಯ ಲೋಕ ಅಖಾಡದ ಕಾವು ಜೋರಾಗ್ತಿದೆ. ಮೈತ್ರಿ ಅಭ್ಯರ್ಥಿಯನ್ನ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ʻಕೈʼಪಡೆ ಹಳ್ಳಿ ಹಳ್ಳಿಗಳಲ್ಲಿ ಭರ್ಜರಿ ಪ್ರಚಾರ ನಡೆಸ್ತಿದೆ. ಕಾಂಗ್ರೆಸ್ ನ ಕ್ಯಾಂಪೇನ್ (Congress Election Campaign) ಸ್ಪೀಡ್ ಹೆಚ್ಚಾಗ್ತಿದ್ದಂತೆ ಅಲರ್ಟ್ ಆಗಿರುವ ಮೈತ್ರಿ ಅಭ್ಯರ್ಥಿ ದೋಸ್ತಿ ನಾಯಕರೊಂದಿಗೆ ಮತ್ತೆ ಮಂಡ್ಯ ಪ್ರಚಾರ ಅಖಾಡಕ್ಕೆ ಧುಮುಕಲು ರೆಡಿಯಾಗಿದ್ದಾರೆ‌. ಆ ಮೂಲಕ ಕೈ ಅಭ್ಯರ್ಥಿ ಮಣಿಸುವ ಪ್ಲ್ಯಾನ್‌ ಮಾಡಿದ್ದಾರೆ.

    ಮಂಡ್ಯ ಲೋಕಸಭಾ ಅಖಾಡ ದಿನೇ ದಿನೇ ರಂಗೇರುತ್ತಿದೆ. ಅದರಲ್ಲಿಯೂ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಮೈತ್ರಿ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕಿರುವುದರಿಂದ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕೈ ಪಡೆ, ಹೆಚ್ಡಿಕೆ ಸೋಲಿಸಿ ಮಣ್ಣು ಮುಕ್ಕಿಸಲೇಬೇಕೆಂದು ಪಣ ತೊಟ್ಟಿದೆ. ಜಿಲ್ಲೆಯಾದ್ಯಂತ ಭರ್ಜರಿ ಕ್ಯಾಂಪೇನ್ ನಡೆಸುತ್ತಿರುವ ಕೈ ಅಭ್ಯರ್ಥಿ ಸ್ಟಾರ್ ಚಂದ್ರು (Star Chandru) ಈಗಾಗಲೇ 3ನೇ ಸುತ್ತಿನ ಪ್ರಚಾರ ಆರಂಭಿಸಿದ್ದಾರೆ. ಮತ್ತೊಂದೆಡೆ ಸಚಿವರು, ಶಾಸಕರು ಸೇರಿದಂತೆ ಕೈ ನಾಯಕರು ಕ್ಯಾಂಪೇನ್ ನಲ್ಲಿ ತೊಡಗಿದ್ದಾರೆ. ಇದೀಗ ಕೈ ಪಡೆಯ ಪ್ರಚಾರದ ವೇಗ ಅರಿತಿರುವ ದೋಸ್ತಿ ಅಭ್ಯರ್ಥಿ ಹೆಚ್‌ಡಿಕೆ ಖುದ್ದು ತಾವೇ ಕ್ಯಾಂಪೇನ್ (Election Campaign) ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 8 ದಿನ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮಿಂಚಿನ ವೇಗದಲ್ಲಿ ಪ್ರಚಾರ ನಡೆಸಲು ಡೇಟ್ ಕೂಡ ಫಿಕ್ಸ್ ಮಾಡಿಕೊಂಡಿದ್ದಾರೆ.

    ಮಂಡ್ಯದಲ್ಲಿ ಯಾವಾಗ-ಎಲ್ಲಿಲ್ಲಿ ಪ್ರಚಾರ?
    ಮಂಡ್ಯ ಲೋಕಸಭಾ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದ್ದು, 8 ಕ್ಷೇತ್ರದಲ್ಲಿಯೂ ಸಮಾವೇಶ ನಡೆಸಿ ಮತದಾರರ ಗಮನ ಸೆಳೆಯಲು, ಮತದಾರರ ಮನೆ, ಮನ ತಲುಪಲು ಹೆಚ್‌ಡಿಕೆ ಮುಂದಾಗಿದ್ದಾರೆ. ಆದ್ದರಿಂದ ಏ.16 ರಿಂದ ಏ.24ರ ವರೆಗೆ ಪ್ರಚಾರ ಸಮಾವೇಶ ನಡೆಸಲು ರೆಡಿಯಾಗಿದ್ದಾರೆ. ಏ.16 ಮಳವಳ್ಳಿ, 17 ಕೆ.ಆರ್ ಪೇಟೆ, 18 ಕೆ.ಆರ್ ನಗರ, 19 ಮೇಲುಕೋಟೆ, 21 ಶ್ರೀರಂಗಪಟ್ಟಣ, 22 ನಾಗಮಂಗಲ, 23 ಮದ್ದೂರು, 24 ರಂದು ಮಂಡ್ಯದಲ್ಲಿ ಬೃಹತ್ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಆ ಮೂಲಕ ಕೈ ಅಭ್ಯರ್ಥಿಗೆ ಸೋಲುಣಿಸಿ, ಕೈ ನಾಯಕರಿಗೆ ಟಕ್ಕರ್ ಕೊಡಲು ಮಾಜಿ ಸಿಎಂ ಕುಮಾರಸ್ವಾಮಿ ರೆಡಿಯಾಗಿದ್ದಾರೆ. ಹೆಚ್‌ಡಿಕೆ ಜೊತೆ ಬಿಜೆಪಿಯ ರಾಜ್ಯ ನಾಯಕರು ಸಮಾವೇಶದಲ್ಲಿ ಭಾಗಿಯಾಗಲಿದ್ದು, ದೋಸ್ತಿ ಪಡೆ ಒಟ್ಟಾಗಿ ಕಾಂಗ್ರೆಸ್ ಮಣಿಸಲು ತಯಾರಾಗಿದ್ದಾರೆ.

    ಇನ್ನೂ ಹೆಚ್‌ಡಿಕೆ ಒಂದು ಕಡೆ ತಾಲೂಕು ಮಟ್ಟದಲ್ಲಿ ಬೃಹತ್ ಸಮಾವೇಶದ ಮೂಲಕ ಕ್ಯಾಂಪೇನ್ ಮಾಡಿದ್ರೆ, ಇತ್ತ ಪುತ್ರ ನಿಖಿಲ್ ತಂದೆ ಗೆಲುವಿಗಾಗಿ ಜಿಲ್ಲೆಯ ಎಲ್ಲ ಕ್ಷೇತ್ರದಲ್ಲಿಯೂ ಹೋಬಳಿವಾರು ಸಭೆ, ರೋಡ್ ಶೋಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಶನಿವಾರದಿಂದಲೇ ನಿಖಿಲ್ ಅಖಾಡಕ್ಕೆ ಧುಮುಕಲಿದ್ದಾರೆ. ಅದರ ಜೊತೆ ಆಯಾ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಶಾಸಕರು ಸ್ಥಳೀಯ ಮೈತ್ರಿ ನಾಯಕರು, ಕಾರ್ಯಕರ್ತರೊಂದಿಗೆ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಇಂದಿನಿಂದಲೇ ಶಾಸಕ, ಮಾಜಿ ಶಾಸಕರು ತಮ್ಮ ನಾಯಕ, ಮೈತ್ರಿ ಅಭ್ಯರ್ಥಿ ಹೆಚ್ಡಿಕೆ ಪರ ಕ್ಯಾಂಪೇನ್ ನಲ್ಲಿ ತೊಡಗುತ್ತಿದ್ದಾರೆ.

    ಕೈ‌ ಪಡೆಯ ಕ್ಯಾಂಪೇನ್ ಸ್ಪೀಡ್ ಕಂಡ ದೋಸ್ತಿ ಪಡೆ ಹೈ ಅಲರ್ಟ್ ಆಗಿದೆ. ಖುದ್ದು ತಾವು ಅಖಾಡಕ್ಕೆ ಧುಮುಕುವ ಮೂಲಕ ಕೈ ಪಡೆಗೆ ಸೋಲಿಣಿಸಲು ಸರ್ವ ಪ್ರಯತ್ನ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದೆ. ಆದ್ರೆ ಮತದಾರರು ಯಾರಿಗೆ ಜೈ ಅಂತಾನೆ, ಯಾರಿಗೆ ಕೈ ಕೊಡ್ತಾನೆ ಎಂದು ಚುನಾವಣೆ ನಡೆದು ಫಲಿತಾಂಶ ಬರುವವರೆಗೂ ಕಾಯಬೇಕಿದೆ.