Tag: General Elections

  • ಸೋಮವಾರ 4ನೇ ಹಂತದ ಚುನಾವಣೆ – ಯಾವ ರಾಜ್ಯ, ಎಷ್ಟು ಕ್ಷೇತ್ರಗಳಲ್ಲಿ ಮತದಾನ? ಕಣದಲ್ಲಿರೋ ಪ್ರಮುಖರು ಯಾರು?

    ಸೋಮವಾರ 4ನೇ ಹಂತದ ಚುನಾವಣೆ – ಯಾವ ರಾಜ್ಯ, ಎಷ್ಟು ಕ್ಷೇತ್ರಗಳಲ್ಲಿ ಮತದಾನ? ಕಣದಲ್ಲಿರೋ ಪ್ರಮುಖರು ಯಾರು?

    ನವದೆಹಲಿ: ಸೋಮವಾರ (ಮೇ 12) 4ನೇ ಹಂತದ ಲೋಕಸಭೆ ಚುನಾವಣೆ (Lok Sabha Elections 2024) ನಡೆಯಲಿದ್ದು, ಸುಗಮ ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ ಸಂಪೂರ್ಣ ಸಜ್ಜಾಗಿದೆ.

    9 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ 96 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇದನ್ನೂ ಓದಿ: ಕೇಜ್ರಿವಾಲ್‌ಗೆ ಹುಚ್ಚು, ಬಿಜೆಪಿಯಲ್ಲಿ ವಯಸ್ಸಿನ ಮಿತಿ ಬಗ್ಗೆ ನಿರ್ಧಾರ ಕೈಗೊಂಡಿಲ್ಲ: ಆರ್‌.ಅಶೋಕ್

    ಆಂಧ್ರ ಪ್ರದೇಶದ 25, ತೆಲಂಗಾಣದ 17, ಉತ್ತರಪ್ರದೇಶದ 13, ಮಹಾರಾಷ್ಟ್ರದ 11, ಬಂಗಾಳದ 8, ಬಿಹಾರದ 5, ಒಡಿಶಾ, ಜಾರ್ಖಂಡ್‌ನ ತಲಾ 4 ಹಾಗೂ ಜಮ್ಮು ಮತ್ತು ಕಾಶ್ಮೀರದ 1 ಸ್ಥಾನಕ್ಕೆ ಮತದಾನ ನಡೆಯಲಿದ್ದು, 1717 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆ ಮಾಡಿಕೊಳ್ತಿದ್ದಾರೆ. ಇದನ್ನೂ ಓದಿ: ಭಾರತವನ್ನು ಅಭಿವೃದ್ಧಿಪಡಿಸಬೇಕಾದರೆ, ಪೂರ್ವ ಭಾರತವನ್ನು ಅಭಿವೃದ್ಧಿಪಡಿಸಬೇಕು – ಮೋದಿ

    ಕೇಂದ್ರ ಸಚಿವರಾದ ನಿತ್ಯಾನಂದ ರೈ, ಅಜಯ್ ಮಿಶ್ರಾ, ಮಾಜಿ ಸಿಎಂ ಅಖಿಲೇಶ್ ಯಾದವ್, ಅಧೀರ್ ರಂಜನ್ ಚೌಧರಿ, ಮಹುವಾ ಮೊಯಿತ್ರಾ, ಮಾಜಿ ಕ್ರಿಕೆಟಿಗ ಯುಸೂಫ್ ಪಠಾಣ್, ನಟ ಶತ್ರುಜ್ಞ ಸಿನ್ಹಾ, ಹೈದ್ರಾಬಾದ್‌ನಲ್ಲಿ ಅಸಾದುದ್ದೀನ್ ಓವೈಸಿ (Asaduddin Owaisi), ಮಾಧವಿಲತಾ ಸೇರಿ ಹಲವು ಪ್ರಮುಖರು ಕಣದಲ್ಲಿದ್ದಾರೆ.

    ಇದೇ ವೇಳೆ, ಆಂಧ್ರಪ್ರದೇಶ ವಿಧಾನಸಭೆಗೂ ಸೋಮವಾರವೇ ಚುನಾವಣೆ ನಡೆಯಲಿದೆ. ಸಿಎಂ ಜಗನ್ ನೇತೃತ್ವದ ವೈಎಸ್‌ಆರ್ ಪಾರ್ಟಿ ಏಕಾಂಗಿಯಾಗಿ ಸ್ಪರ್ಧೆ ಮಾಡಿದೆ. ಜಗನ್ ವಿರುದ್ಧ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಮತ್ತು ಬಿಜೆಪಿ ಜಂಟಿ ಹೋರಾಟ ನಡೆಸುತ್ತಿದೆ. ಕಾಂಗ್ರೆಸ್ ಕೂಡ ಕಣದಲ್ಲಿ ಕಾಣಿಸಿಕೊಂಡಿದೆ.

  • ನಾಲ್ಕನೇ ಬಾರಿಗೆ ಬಾಂಗ್ಲಾ ಅಧಿಕಾರದ ಗದ್ದುಗೆ ಏರಿದ ಶೇಖ್ ಹಸೀನಾ

    ನಾಲ್ಕನೇ ಬಾರಿಗೆ ಬಾಂಗ್ಲಾ ಅಧಿಕಾರದ ಗದ್ದುಗೆ ಏರಿದ ಶೇಖ್ ಹಸೀನಾ

    – ಮತದಾನದ ವೇಳೆ 17 ಜನ ಬಲಿ

    ಢಾಕಾ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್ ಪಾರ್ಟಿ ಜಯಗಳಿಸಿದ್ದು, ಪಕ್ಷದ ನಾಯಕಿ ಶೇಖ್ ಹಸೀನಾ ಅವರು ನಾಲ್ಕನೇ ಬಾರೀ ಪ್ರಧಾನಿ ಅಧಿಕಾರ ಸ್ವೀಕರಿಸಲಿದ್ದಾರೆ.

    ಬಾಂಗ್ಲಾದೇಶ 300 ಕ್ಷೇತ್ರಗಳ ಪೈಕಿ 299 ಕ್ಷೇತ್ರಗಳ ಮತದಾನವು ನಿನ್ನೆ ಬೆಳಗ್ಗೆ 8ರಿಂದ ಸಂಜೆ 6 ಗಂಟೆವರೆಗೆ ನಡೆಯಿತು. ಬಳಿಕ ಆರಂಭವಾದ ಮತ ಎಣಿಕೆಯಲ್ಲಿ ಅವಾಮಿ ಲೀಗ್ ಪಾರ್ಟಿ ಮುನ್ನಡೆ ಸಾಧಿಸಿದೆ.

    17 ಜನ ಬಲಿ:
    ಮತದಾನದ ವೇಳೆ ಆಡಳಿತರೂಢ ಅವಾಮಿ ಲೀಗ್ ಪಾರ್ಟಿ ಮತ್ತು ವಿಪಕ್ಷ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ (ಬಿಎನ್‍ಪಿ) ಕಾರ್ಯಕರ್ತರ ನಡುವೆ ಜಗಳ ಆರಂಭವಾಗಿ ಹಿಂಸಾಚಾರಕ್ಕೆ ತಿರುಗಿತ್ತು. ಪರಿಣಾಮ ಓರ್ವ ಪೊಲೀಸ್, ಸರ್ಕಾರಿ ಅಧಿಕಾರಿಗಳು, ಅವಾಮಿ ಲೀಗ್ ಪಾರ್ಟಿ ಐವರು ಸದಸ್ಯರು, ಬಿಎನ್‍ಪಿ ಕಾರ್ಯಕರ್ತರು ಸೇರಿದಂತೆ 17 ಜನರು ಬಲಿಯಾಗಿದ್ದಾರೆ. ಇವರಲ್ಲಿ ಮೂವರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.

    ಇವಿಎಂ ಬಳಕೆ:
    ಸಾರ್ವತ್ರಿಕ ಚುನಾವಣೆ ವೇಳೆ ಇದೇ ಮೊದಲಬಾರಿಗೆ ಬಾಗ್ಲಾದೇಶ ಚುನಾವಣಾ ಆಯೋಗವು ಮತಯಂತ್ರ (ಇವಿಎಂ) ಬಳಕೆ ಮಾಡಿದೆ. 300 ಕ್ಷೇತ್ರಗಳ ಪೈಕಿ 21 ಲಕ್ಷ ಜನಸಂಖ್ಯೆ ಇರುವ 6 ಕ್ಷೇತ್ರಗಳಲ್ಲಿ ಇವಿಎಂ ವ್ಯವಸ್ಥೆ ಅಳವಡಿಸಲಾಗಿತ್ತು. ಎರಡು ಕಡೆಗಳಲ್ಲಿ ಮಾತ್ರ ಇವಿಎಂ ದೋಷ ಕಂಡುಬಂದಿದೆ.

    ಚುನಾವಣಾ ಭದ್ರತೆ:
    ಸಾರ್ವತ್ರಿಕ ಚುನಾವಣೆ ವೇಳೆ ಭಾರೀ ಭದ್ರತೆಗೆ ಮುಂದಾಗಿದ್ದ ಆಡಳಿತ ರೂಢ ಪಕ್ಷವು, 6 ಲಕ್ಷ ಸೈನಿಕರು, ಸ್ಥಳೀಯ ಪೊಲೀಸ್ ಹಾಗೂ ವಿವಿಧ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಿತ್ತು. ಆದರೆ ಅವಾಮಿ ಲೀಗ್ ಪಾರ್ಟಿ ಮತ್ತು ಬಿಎನ್‍ಪಿ ಕಾರ್ಯಕರ್ತರ ಮಾರಾಮರಿಯಿಂದಾಗಿ 17 ಜನರು ಮೃತಪಟ್ಟಿದ್ದಾರೆ. ಬಿಎನ್‍ಪಿ ಸದಸ್ಯನೊಬ್ಬ ಹಿಂಸಾಚಾರದ ವೇಳೆ ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv