Tag: Genelia Ritesh Deshmukh

  • ಅಂಗಾಂಗ ದಾನ ಮಾಡುವುದಾಗಿ ಘೋಷಿಸಿದ ಜೆನಿಲಿಯಾ ದಂಪತಿ

    ಅಂಗಾಂಗ ದಾನ ಮಾಡುವುದಾಗಿ ಘೋಷಿಸಿದ ಜೆನಿಲಿಯಾ ದಂಪತಿ

    ಬಾಲಿವುಡ್ ನಟಿ ಜೆನಿಲಿಯಾ (Genelia) ಮತ್ತು ರಿತೇಶ್ (Riteish Deshmukh) ಸಿನಿಮಾ ಬದಲು ಸಮಾಜಮುಖಿ ಕಾರ್ಯದ ಮೂಲಕ ಸದ್ದು ಮಾಡ್ತಿದ್ದಾರೆ. ತಮ್ಮ ಅಂಗಾಂಗಗಳನ್ನು ದಾನ ಮಾಡುವುದಾಗಿ ಈ ದಂಪತಿ ಘೋಷಿಸಿದ್ದಾರೆ. ಇದನ್ನೂ ಓದಿ:ಪ್ರಭಾಸ್ ಮದುವೆ ಬಗ್ಗೆ ಸೂಚನೆ ಕೊಟ್ಟ ದೊಡ್ಡಮ್ಮ

    ಜುಲೈಯಲ್ಲಿ ನಡೆಯುತ್ತಿರುವ ಅಂಗಾಂಗ ದಾನದ ತಿಂಗಳಲ್ಲಿ ತಮ್ಮ ಅಂಗಾಂಗ ದಾನ ಮಾಡಿದ ಬಾಲಿವುಡ್ ದಂಪತಿ ರಿತೇಶ್, ಜೆನಿಲಿಯಾಗೆ ಧನ್ಯವಾದಗಳು. ಇದು ಇತರರನ್ನು ಸಹ ಪ್ರೇರಣೆ ನೀಡುತ್ತದೆ ಎಂದು ಈ ಜೋಡಿಯ ವಿಡಿಯೋ ಶೇರ್ ಮಾಡಿ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ಎಕ್ಸ್‌ ಖಾತೆಯಲ್ಲಿ ತಿಳಿಸಿದೆ.

    ಇನ್ನೂ ರಿತೇಶ್ ನಟನೆಯ ‘ಕಾಕುಡ’ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಜೆನಿಲಿಯಾ ಇದೀಗ ಕನ್ನಡದ ‘ಜ್ಯೂನಿಯರ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಶ್ರೀಲೀಲಾ ನಟನೆಯ ಚಿತ್ರವಾಗಿದೆ.

  • ಶಿವಣ್ಣನ ಮನೆಗೆ ಭೇಟಿ ನೀಡಿದ `ಸತ್ಯ ಇನ್ ಲವ್’ ಚಿತ್ರದ ನಾಯಕಿ ಜೆನಿಲಿಯಾ

    ಶಿವಣ್ಣನ ಮನೆಗೆ ಭೇಟಿ ನೀಡಿದ `ಸತ್ಯ ಇನ್ ಲವ್’ ಚಿತ್ರದ ನಾಯಕಿ ಜೆನಿಲಿಯಾ

    ಬಾಲಿವುಡ್ ನಟಿ ಜೆನಿಲಿಯಾ ಮತ್ತೆ ಕನ್ನಡ ಸಿನಿಮಾಗೆ ಕಂಬ್ಯಾಕ್ ಆಗಿದ್ದಾರೆ. ಬಹುಭಾಷೆಗಳಲ್ಲಿ ಜೆನಿಲಿಯಾ ಮಿಂಚುತ್ತಿದ್ದಾರೆ. ಸದ್ಯ ಬೆಂಗಳೂರಿಗೆ ಬಂದಿಳಿದಿರುವ ನಟಿ ಜೆನಿಲಿಯಾ, ನಟ ಶಿವಣ್ಣ ಮನೆಗೆ ಜೆನಿಲಿಯಾ ಮತ್ತು ರಿತೇಶ್ ಭೇಟಿ ನೀಡಿದ್ದಾರೆ.

    ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾಗಳ ಮೂಲಕ ಸೈ ಎನಿಸಿಕೊಂಡ ನಟಿ ಜೆನಿಲಿಯಾ, 2018ರಲ್ಲಿ `ಸತ್ಯ ಇನ್ ಲವ್’ ಚಿತ್ರದ ಮೂಲಕ ಶಿವಣ್ಣನಿಗೆ ನಾಯಕಿಯಾಗಿ ನಟಿಸಿದ್ದರು. ಬಳಿಕ ಮದುವೆ, ಸಂಸಾರ ಅಂತಾ ಚಿತ್ರರಂಗದಿಂದ ದೂರ ಸರಿದಿದ್ದರು. ಈಗ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ನಟನೆಯ ಚಿತ್ರದಲ್ಲಿ ಪವರ್‌ಫುಲ್ ಪಾತ್ರದಲ್ಲಿ ಜೆನಿಲಿಯಾ ನಟಿಸುತ್ತಿದ್ದಾರೆ. ಇದೀಗ ಜೆನಿಲಿಯಾ ದಂಪತಿ ಶಿವಣ್ಣನ ಮನೆಗೆ ಭೇಟಿ ನೀಡಿದ್ದಾರೆ.

    `ಸತ್ಯ ಇನ್ ಲವ್’ ಚಿತ್ರದಲ್ಲಿ ಶಿವಣ್ಣನ ಜೋಡಿಯಾಗಿ ಜೆನಿಲಿಯಾ ಮಿಂಚಿದ್ದರು. ಇದೀಗ ಕಿರೀಟಿ ಮತ್ತು ಶ್ರೀಲೀಲಾ ಅಭಿನಯದ ಹೊಸ ಚಿತ್ರದಲ್ಲಿ ಜೆನಿಲಿಯಾ ನಟಿಸುತ್ತಿದ್ದಾರೆ. ಸದ್ಯ ಶಿವಣ್ಣ ಮತ್ತು ಗೀತಾ ಅವರನ್ನ ಜೆನಿಲಿಯಾ ಭೇಟಿ ಮಾಡಿದ್ದಾರೆ. ಈ ವೇಳೆ ನಟ ರಿತೇಶ್ ದೇಶ್‌ಮುಖ್ ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಸದ್ದಿಲ್ಲದೆ ಹಸೆಮಣೆ ಏರಿದ್ರಾ ʻಗ್ರಾಮಾಯಣʼ ಚಿತ್ರದ ನಾಯಕಿ ಅಮೃತಾ ಅಯ್ಯರ್

    ಈ ವೇಳೆ ಕಿರೀಟಿ ಮತ್ತು ಜೆನಿಲಿಯಾ ಹೊಸ ಸಿನಿಮಾಗೆ ಶಿವರಾಜ್‌ಕುಮಾರ್ ಶುಭಹಾರೈಸಿದ್ದಾರೆ. ಈ ಚಿತ್ರದ ಶೂಟಿಂಗ್‌ ಕೂಡ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಅದ್ಧೂರಿಯಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಬಳ್ಳಾರಿ ಕುವರ ಕಿರೀಟಿ – ಸ್ಟಂಟ್, ಆ್ಯಕ್ಟಿಂಗ್, ಡ್ಯಾನ್ಸ್ ರಾಜಮೌಳಿ ಮೆಚ್ಚುಗೆ!

    ಅದ್ಧೂರಿಯಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಬಳ್ಳಾರಿ ಕುವರ ಕಿರೀಟಿ – ಸ್ಟಂಟ್, ಆ್ಯಕ್ಟಿಂಗ್, ಡ್ಯಾನ್ಸ್ ರಾಜಮೌಳಿ ಮೆಚ್ಚುಗೆ!

    ಮಾಜಿ ಸಚಿವ ಜನಾರ್ದನ ರೆಡ್ಡಿ ಸುಪುತ್ರ ಕಿರೀಟಿ ಅದ್ಧೂರಿಯಾಗಿ ಗಾಂಧಿನಗರದ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಬಾಹುಬಲಿ ಸೂತ್ರಧಾರ ಎಸ್.ಎಸ್.ರಾಜಮೌಳಿಯ ಅಭಯ ಹಸ್ತದಿಂದ ಕಿರೀಟಿ ಚೊಚ್ಚಲ ಚಿತ್ರಕ್ಕೆ ಆರಂಭ ಸಿಕ್ಕಿದೆ. ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್ ಮುಖ್, ಶ್ರೀಲೀಲಾ ಸೇರಿದಂತೆ ದೊಡ್ಡ ತಾರಾಬಳಗವೇ ನಟಿಸಲಿರುವ ಈ ಸಿನಿಮಾದ ಮುಹೂರ್ತ ಇವತ್ತು ಅದ್ಧೂರಿಯಾಗಿ ನೆರವೇರಿದೆ.

    ಡ್ಯಾನ್ಸ್ ಮೆಚ್ಚಿದ ಮೌಳಿ!
    ಕಿರೀಟಿ ಚೊಚ್ಚಲ ಸಿನಿಮಾಗೆ ಕ್ಲ್ಯಾಪ್ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ ರಾಜಮೌಳಿ ಹೀರೋ ಇಂಟ್ರೂಡಕ್ಷನ್ ಟೀಸರ್ ನೋಡಿ ಕಿರೀಟಿ ಬೆನ್ನುತಟ್ಟಿದರು. ನನಗೆ ಪ್ರಾಮಿಸಿಂಗ್ ಆಗಿರುವ ಯುವ ಪ್ರತಿಭೆಯನ್ನು ಲಾಂಚ್ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇವರು ನಟನೆ, ಡ್ಯಾನ್ಸ್, ಸ್ಟಂಟ್ಸ್ ಎಲ್ಲವನ್ನು ಮಾಡುತ್ತಾರೆ. ಇದೇ ಸಂದರ್ಭದಲ್ಲಿ ಯುವ ಪ್ರತಿಭೆಗೆ ಒಳ್ಳೆ ಲಾಂಚ್ ಕೂಡಬೇಕು. ಈ ಪ್ರತಿಭೆ ಈಗ ಅದ್ಭುತ ಕೈಗಳ ಜೊತೆ ಸೇರಿಕೊಂಡಿದೆ. ಅದಕ್ಕೆ ಖುಷಿಯಾಗುತ್ತಿದೆ ಎಂದು ರಾಜಮೌಳಿ ಹೇಳಿದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ – ಗಿರೀಶ್ ಕಾಸರವಳ್ಳಿ ಕುರಿತ ಪುಸ್ತಕ ಬಿಡುಗಡೆ

    ಕಿರೀಟಿ ಬಗ್ಗೆ ಏನಂದ್ರು ಕ್ರೇಜಿಸ್ಟಾರ್!
    ಕ್ರೇಜಿಸ್ಟಾರ್ ರವಿಚಂದ್ರನ್ ಕಿರೀಟಿ ಸಿನಿಮಾದಲ್ಲಿ ಸ್ಪೆಷಲ್ ರೋಲ್‍ವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಕಿರೀಟಿ ತಂದೆಯಾಗಿ ಕಾಣಿಸಿಕೊಳ್ಳಲಿರುವ ರವಿಮಾವ ಸಿನಿಮಾ ಬಗ್ಗೆ ಸ್ಟಾರ್ ಕಾಸ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಿರೀಟಿ ಏರ್ ಪೋರ್ಟ್ ನಲ್ಲಿ ಒಮ್ಮೆ ಭೇಟಿ ಮಾಡಿದ್ದೆವು. ನನಗೆ ನಟನೆ ಬಗ್ಗೆ ಸಾವಿರ ಪ್ರಶ್ನೆ ಕೇಳಿದ್ದರು. ಈ ಸಿನಿಮಾದಲ್ಲಿ ಕಿರೀಟಿಗೆ ಸಾರಥಿ ಬಂದು ರಾಧಾಕೃಷ್ಣ. ಹಿಂದೆ ಜನಾರ್ಧನ್ ರೆಡ್ಡಿ ಅವರ ಆರ್ಶೀವಾದ. ಶ್ರೀಲೀಲಾ ಇದ್ದಾರೆ, ಜನೀಲಿಯಾ ಇದ್ದಾರೆ. ನಾನೂ ಇದ್ದೀನಿ. ಇದಕ್ಕಿಂತ ಒಳ್ಳೆಯ ಪ್ಯಾಕೇಜ್ ಬೇಕಾ ನಿಮಗೆ? ಎಂದರು.

    ಕನ್ನಡಕ್ಕೆ ಜೆನಿಲಿಯಾ ಕಂಬ್ಯಾಕ್!
    ಶಿವರಾಜ್ ಕುಮಾರ್ ನಟನೆಯ ‘ಸತ್ಯ್ ಇನ್ ಲವ್’ ಸಿನಿಮಾದಲ್ಲಿ ನಟಿಸಿದ್ದ ಜೆನೀಲಿಯಾ ಮತ್ತೆ ಸ್ಯಾಂಡಲ್‍ವುಡ್‍ಗೆ ಮರಳಿದ್ದಾರೆ. ವಿವಾಹದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ಜೆನೀಲಿಯಾ 10 ವರ್ಷಗಳ ಬಳಿಕ ನಟನೆಗೆ ಹಿಂದಿರುಗಿದ್ದಾರೆ. 10 ವರ್ಷಗಳ ಬಳಿಕ ಮತ್ತೆ ನಟನೆಗೆ ಮರಳುತ್ತಿದ್ದೇನೆ. ಇದು ತುಂಬಾನೇ ಸ್ಪೆಷಲ್ ಪ್ರಾಜೆಕ್ಟ್. ಈ ಸಿನಿಮಾ ಪೂರ್ತಿ ನಾವು ಇರುತ್ತೇವೆ ಎಂದು ತಿಳಿಸಿದರು.

    ಟೀಸರ್ ಸೂಪರ್!
    ಕಿರೀಟಿ ಸಿನಿಮಾದ ಮುಹೂರ್ತದ ವೇಳೆ ಹೀರೋ ಇಂಟ್ರೂಡಕ್ಷನ್ ಟೀಸರ್ ರಿಲೀಸ್ ಮಾಡಲಾಯಿತು. ಆಕ್ಷನ್, ಸ್ಟಂಟ್, ಡ್ಯಾನ್ಸ್, ಬೊಂಬಾಟ್ ಆಕ್ಟಿಂಗ್ ಎಲ್ಲರ ಮಿಶ್ರಣದ ಟೀಸರ್ ಝಲಕ್ ನೋಡಿ ಎಲ್ಲರೂ ಹುಬ್ಬೇರಿಸ್ತಿದ್ದಾರೆ. ಕಿರೀಟಿ ರೈಸಿಂಗ್ ಸ್ಟಾರ್ ಎಂದು ಟೀಸರ್ ನೋಡಿದವರು ಕೊಂಡಾಡ್ತಿದ್ದಾರೆ. ಇದನ್ನೂ ಓದಿ: ಪ್ರಭಾಸ್‍ಗೆ ಮಿರ್ಚಿ ಪ್ರಶ್ನೆ ಕೇಳಿದ ದೀಪಿಕಾ ಪಡುಕೋಣೆ!

    ಕಿರೀಟಿ ಸಿನಿಮಾ ತೆಲುಗಿನ ಖ್ಯಾತ ಪ್ರೊಡಕ್ಷನ್ ಹೌಸ್ ವಾರಾಹಿ ಫಿಲ್ಮಂ ಪ್ರೊಡಕ್ಷನ್ ನಡಿ ಅದ್ಧೂರಿ ಬಜೆಟ್ ನಲ್ಲಿ ತಯಾರಾಗ್ತಿರುವ 15ನೇ ಸಿನಿಮಾ. ‘ಮಯಾಬಜಾರ್’ ಸಿನಿಮಾ ಖ್ಯಾತಿಯ ರಾಧಾಕೃಷ್ಣರೆಡ್ಡಿ ನಿರ್ದೇಶನ, ಬಾಹುಬಲಿ ಛಾಯಾಗ್ರಾಹ ಕೆ.ಕೆ.ಸೆಂಥಿಲ್ ಕುಮಾರ್ ಕ್ಯಾಮರಾ ಕೈ ಚಳಕದಲ್ಲಿ ಸಿನಿಮಾ ಮೂಡಿಬರುತ್ತಿದೆ. ಖ್ಯಾತ ಮ್ಯೂಸಿಕ್ ಡೈರೆಕ್ಟರ್ ದೇವಿಶ್ರೀಪ್ರಸಾದ್ ಮ್ಯೂಸಿಕ್ ಇಂಪು ಇರುವ, ಭಾರತದ ಬಹುಬೇಡಿಕೆಯ ಸ್ಟಂಟ್ ಮಾಸ್ಟರ್ ಪೀಟರ್ ಹೇನ್ ಆ್ಯಕ್ಷನ್ ಸೀನ್ಸ್, ಕಲಾ ನಿರ್ದೇಶನ ಮಾಡಿರುವ ರವೀಂದರ್ ಈ ಸಿನಿಮಾದ ಕಲಾ ನಿರ್ದೇಶನದ ಹೊಣೆ ಹೊತ್ತಿದ್ದಾರೆ.