Tag: Genelia

  • ಮತ ಚಲಾಯಿಸಿದ ರಿತೇಶ್ ದೇಶ್‌ಮುಖ್, ಜೆನಿಲಿಯಾ ದಂಪತಿ

    ಮತ ಚಲಾಯಿಸಿದ ರಿತೇಶ್ ದೇಶ್‌ಮುಖ್, ಜೆನಿಲಿಯಾ ದಂಪತಿ

    ಬಾಲಿವುಡ್ ನಟ ರಿತೇಶ್ ದೇಶ್‌ಮುಖ್ (Riteish Deshmukh) ಮತ್ತು ಜೆನಿಲಿಯಾ (Genelia) ದಂಪತಿ ಇಂದು (ಮೇ.7) ಒಟ್ಟಾಗಿ ವೋಟ್ ಮಾಡಿದ್ದಾರೆ. ವೋಟ್ ಮಾಡಿರುವ ಫೋಟೋವನ್ನು ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮದುವೆ ಆಗಲ್ಲ, ಆದರೆ ರಾಜಕೀಯಕ್ಕೆ ಬರುವ ಪ್ಲ್ಯಾನ್ ಇದೆ ಎಂದ ಸೋನು ಗೌಡ

    ಮಹಾರಾಷ್ಟ್ರದ ಲಾತೂರ್ ಮತದಾನ ಕೇಂದ್ರದಲ್ಲಿ ಸಾಲಿನಲ್ಲಿ ನಿಂತು ನಗು ನಗುತ್ತಾ ರಿತೇಶ್ ಮತ್ತು ಜೆನಿಲಿಯಾ ವೋಟ್ ಮಾಡಿದ್ದಾರೆ. ಇವರ ರಿತೇಶ್ ತಾಯಿ ಕೂಡ ಮತದಾನ ಮಾಡಿದ್ದಾರೆ. ನಿಮಗಾಗಿ ವೋಟ್ ಮಾಡಿ, ಭವಿಷ್ಯಕ್ಕಾಗಿ ಮತ್ತು ದೇಶಕ್ಕಾಗಿ ಮತದಾನ ಮಾಡಿ ಎಂದು ರಿತೇಶ್ ದಂಪತಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

    ಅಂದಹಾಗೆ, ಕನ್ನಡದ ‘ಸತ್ಯ ಇಸ್ ಇನ್ ಲವ್’ ಚಿತ್ರದ ನಟಿ ಜೆನಿಲಿಯಾ ಸದ್ಯ ಜ್ಯೂನಿಯರ್, ‘ಸಿತಾರೇ ಜಮೀನ್‌ಪರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ಹೌಸ್‌ಫುಲ್ 5’ ಸಿನಿಮಾದಲ್ಲಿ ರಿತೇಶ್ ಬ್ಯುಸಿಯಾಗಿದ್ದಾರೆ.

  • ಮಾಜಿಮಂತ್ರಿ ಜನಾರ್ದನ್ ರೆಡ್ಡಿ ಮಗನ ಸಿನಿಮಾದಲ್ಲಿ ಜೆನಿಲಿಯಾ ಅತ್ತಿಗೆ ಪಾತ್ರ ಮಾಡ್ತಿಲ್ಲವಂತೆ

    ಮಾಜಿಮಂತ್ರಿ ಜನಾರ್ದನ್ ರೆಡ್ಡಿ ಮಗನ ಸಿನಿಮಾದಲ್ಲಿ ಜೆನಿಲಿಯಾ ಅತ್ತಿಗೆ ಪಾತ್ರ ಮಾಡ್ತಿಲ್ಲವಂತೆ

    ಮಾಜಿಮಂತ್ರಿ ಜನಾರ್ದನ್ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಗ್ರ್ಯಾಂಡ್ ಆಗಿ ಸಿನಿಮಾ ರಂಗ ಪ್ರವೇಶ ಮಾಡಿದ್ದಾರೆ. ಕಿರೀಟಿ ನಟನೆಯ ಸಿನಿಮಾ ಎರಡು ಭಾಷೆಯಲ್ಲಿ ಮೂಡಿ ಬರುತ್ತಿದ್ದು, ಈ ಸಿನಿಮಾಗಾಗಿ ಅವರು ಪಕ್ಕಾ ತಯಾರಿ ಮಾಡಿಕೊಂಡೆ ಎಂಟ್ರಿ ಕೊಟ್ಟಿದ್ದಾರೆ. ಪಾತ್ರಗಳ ಆಯ್ಕೆಯಲ್ಲೂ ಚಿತ್ರತಂಡ ಕಾಳಜಿವಹಿಸಿದೆ. ಕಿರೀಟಿಗೆ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದು, ಮತ್ತೊಂದು ಮಹತ್ವದ ಪಾತ್ರದಲ್ಲಿ ಬಹುಭಾಷಾ ನಟಿ ಜೆನಿಲಿಯಾ ಡಿಸೋಜಾ ಕಾಣಿಸಿಕೊಳ್ಳುತ್ತಿದ್ದಾರೆ. ಆ ಪಾತ್ರದ ಬಗ್ಗೆ ಮೊದಲಿನಿಂದಲೂ ಚರ್ಚೆ ನಡೆದಿತ್ತು.

    ಮದುವೆಯ ನಂತರ ಸಿನಿಮಾ ರಂಗದಿಂದ ದೂರವಿದ್ದ ಜೆನಿಲಿಯಾ, ಇದೀಗ ಹಲವು ವರ್ಷಗಳ ನಂತರ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಅವರು ಯಾವ ರೀತಿಯ ಪಾತ್ರವನ್ನು ಒಪ್ಪಿಕೊಂಡಿರಬಹುದು ಎಂಬ ಕುತೂಹಲವಿತ್ತು. ಸಿನಿಮಾ ಮುಹೂರ್ತದ ದಿನ ಅವರು ನಾಯಕನ ಅತ್ತಿಗೆ ಪಾತ್ರ ಮಾಡಲಿದ್ದಾರೆ ಎನ್ನುವ ಗಾಸಿಪ್ ಹರಡಿತ್ತು. ಆದರೆ, ಜೆನಿಲಿಯಾ ಈ ಸಿನಿಮಾದಲ್ಲಿ ಅತ್ತಿಗೆಯ ಪಾತ್ರ ಮಾಡುತ್ತಿಲ್ಲವಂತೆ. ಇದನ್ನೂ ಓದಿ:ಚಾರ್ಲಿ 777 ತೆರಿಗೆ ವಿನಾಯತಿ: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅಸಮಾಧಾನ ಏಕೆ?

    ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಜೆನಿಲಿಯಾ ಕಂಪೆನಿಯೊಂದರ ಸಿಇಓ ಪಾತ್ರವನ್ನು ನಿಭಾಯಿಸಲಿದ್ದಾರಂತೆ. ಅದೊಂದು ಮಹತ್ವದ ಪಾತ್ರವೂ ಆಗಿದೆಯಂತೆ. ಹಾಗಾಗಿಯೇ ಅವರು ಈ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ರಾಧಾಕೃಷ್ಣ ರೆಡ್ಡಿ ಅವರು ಈ ಚಿತ್ರದ ನಿರ್ದೇಶಕರು. ಈ ಹಿಂದೆ ಇವರು ಪುನೀತ್ ರಾಜ್ ಕುಮಾರ್ ಬ್ಯಾನರ್ ನಲ್ಲಿ ಮಾಯಾಬಜಾರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದು ಇವರ ಎರಡನೇ ಸಿನಿಮಾ.

    Live Tv

  • ಪತ್ನಿ ಎದುರೆ ಫ್ಲರ್ಟ್ ಮಾಡಿದ ರಿತೇಶ್ – ಮುಂದೆ ಜೆನಿಲಿಯಾ ಮಾಡಿದ್ದೇನು ಗೊತ್ತಾ?

    ಪತ್ನಿ ಎದುರೆ ಫ್ಲರ್ಟ್ ಮಾಡಿದ ರಿತೇಶ್ – ಮುಂದೆ ಜೆನಿಲಿಯಾ ಮಾಡಿದ್ದೇನು ಗೊತ್ತಾ?

    ಮುಂಬೈ: ಬಾಲಿವುಡ್‍ನ ಮುದ್ದಾದ ಜೋಡಿಗಳಲ್ಲಿ ರಿತೇಶ್ ದೇಶ್‍ಮುಖ್ ಹಾಗೂ ಜೆನಿಲಿಯಾ ಡಿಸೋಜಾ ಜೋಡಿ ಕೂಡ ಒಂದು. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಆಗಾಗ ಹಾಸ್ಯದ ವೀಡಿಯೋ ಹಾಗೂ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಹಲವು ದಿನಗಳು ಹಿಂದೆ ಸಮಾರಂಭವೊಂದಕ್ಕೆ ಪತ್ನಿಯೊಂದಿಗೆ ಭೇಟಿ ನೀಡಿದ ರಿತೇಶ್, ನಟಿಯೊಬ್ಬರ ಜೊತೆ ಜೆನಿಲಿಯಾ ಮುಂದೆಯೇ ಅತೀ ಸಲುಗೆಯಿಂದ ನಡೆದುಕೊಂಡಿದ್ದರು. ಇದನ್ನು ಕಂಡು ಜೆನಿಲಿಯಾ ರಿತೇಶ್ ಮೇಲೆ ಆಕ್ರೋಶಗೊಂಡಿದ್ದರು. ಇದೀಗ ಈ ವೀಡಿಯೋವನ್ನು ಜೆನಿಲಿಯಾ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದು, ಮುಂದೇನಾಯ್ತು ಎಂದು ತಿಳಿದುಕೊಳ್ಳಬೇಕಾ? ಎಂದು ಕ್ಯಾಪ್ಷನ್ ಹಾಕಿದ್ದಾರೆ.

    ವೀಡಿಯೋದಲ್ಲಿ ರಿತೇಶ್ ದೇಶ್‍ಮುಖ್ ಪ್ರೀತಿ ಜಿಂಟಾ ಜೊತೆ ಮಾತನಾಡುತ್ತಿರುತ್ತಾರೆ. ಈ ವೇಳೆ ಜೆನಿಲಿಯಾ ಸಮಾಧಾನದಿಂದ ಕೇಳುತ್ತಿರುತ್ತಾರೆ. ನಂತರ ರಿತೇಶ್ ಪ್ರೀತಿ ಜಿಂಟಾರನ್ನು ತಬ್ಬಿಕೊಂಡು, ಕೈಗೆ ಕಿಸ್ ಮಾಡುತ್ತಾರೆ. ಇದನ್ನು ನೋಡಿ ಜೆನಿಲಿಯಾ ಗರಂ ಆಗುತ್ತಾರೆ. ಬಳಿಕ ಮನೆಗೆ ಬಂದ ಮೇಲೆ ರಿತೇಶ್‍ರನ್ನು ಜೆನಿಲಿಯಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ರಿತೇಶ್ ಸಾಕಪ್ಪಾ ಸಾಕು ಎಂದು ಕೈ ಮುಗಿದು ಕೇಳಿಕೊಳ್ಳುವಷ್ಟು ಪಂಚ್ ನೀಡಿದ್ದಾರೆ. ಈ ಘಟನೆಯು 2019ರ ಐಫಾ ಅವಾರ್ಡ್ ಕಾರ್ಯಕ್ರಮದಲ್ಲಿ ನಡೆದಿದೆ. ವೀಡಿಯೋದಲ್ಲಿ ಜೆನಿಲಿಯಾ ಮುಖಭಾವನೆ ಎಲ್ಲರ ಗಮನ ಸೆಳೆದಿದೆ.

    ರಿತೇಶ್ ಹಾಗೂ ಜೆನಿಲಿಯಾ 2003ರಲ್ಲಿ ತುಜೆ ಮೇರಿ ಕಸಮ್ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. 2012ರ ಫೆಬ್ರವರಿ 3ರಂದು ಹಿಂದೂ ಸಂಪ್ರಾದಾಯ ಪ್ರಕಾರ ಸಪ್ತಪದಿ ತುಳಿದರು.

     

    View this post on Instagram

     

    A post shared by Genelia Deshmukh (@geneliad)

  • ಜೀವನದ ಅದ್ಭುತ ಕ್ಷಣವನ್ನು ಹಂಚಿಕೊಂಡ ಸತ್ಯ ಇನ್ ಲವ್ ಬೆಡಗಿ

    ಜೀವನದ ಅದ್ಭುತ ಕ್ಷಣವನ್ನು ಹಂಚಿಕೊಂಡ ಸತ್ಯ ಇನ್ ಲವ್ ಬೆಡಗಿ

    ಮುಂಬೈ: ಸತ್ಯ ಇನ್ ಲವ್ ಚಿತ್ರದ ನಾಯಕಿ, ಬಾಲಿವುಡ್ ನಟಿ ಜೆನಿಲಿಯಾ ಡಿಸೋಜಾ ತಮ್ಮ 9ನೇ ವಿವಾಹ ವಾರ್ಷಿಕೋತ್ಸವವನ್ನು ಬುಧವಾರ ಆಚರಿಸಿಕೊಂಡಿದ್ದಾರೆ. ಈ ಕುರಿತ ವಿಡಿಯೋವೊಂದನ್ನು ರಿತೇಶ್ ದೇಶ್ ಮುಖ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾಲ್ಲಿ ಫುಲ್ ವೈರಲ್ ಆಗುತ್ತಿದೆ.

    ವೀಡಿಯೋ ಹಂಚಿಕೊಂಡಿರುವ ರಿತೇಶ್ ಮ್ಯಾರೇಜ್ ಅನಿವರ್ಸರಿ ಸೆಲೆಬ್ರೆಷನ್‍ನ ಎಲ್ಲಾ ರೀತಿಯ ವ್ಯವಸ್ಥೆಯನ್ನು ಸ್ವತಃ ಜೆನಿಲಿಯಾ ಖುದ್ದಾಗಿ ಮಾಡಿದ್ದಾರೆ. ನಮ್ಮ ಅನಿವರ್ಸರಿ ಸೆಲೆಬ್ರೆಷನ್‍ಗೆ ದೆಹಲಿಯಿಂದ ವಿಕ್ರಮ್‍ಜಿತ್ ರಾಯ್ ಬಾಣಸಿಗನಾಗಿ ಆಗಮಿಸಿದ್ದರು ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Riteish Deshmukh (@riteishd)

    ಇದೇ ರೀತಿ ಜೆನಿಲಿಯಾ ಕೂಡ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು, ನನ್ನ ಜೀವನದ ಅದ್ಭುತ ಕ್ಷಣಗಳನ್ನು ರಿತೇಶ್ ಜೊತೆ ಆಚರಿಸುತ್ತಿದ್ದೇನೆ. ನಮ್ಮ ಈ ಸುಮಧುರವಾದ ದಿನದಂದು ದೆಹಲಿಯಿಂದ ಆಗಮಿಸಿ ನಾವು ಕೇಳಿದ ಎಲ್ಲಾ ವೆಜಿಟೇರಿಯನ್ ಮೆನು ಹಾಗೂ ಸ್ವೀಟ್‍ಗಳನ್ನು ಮಾಡಿಕೊಟ್ಟಿದಕ್ಕೆ ವಿಕ್ರಮ್‍ಜಿತ್ ರಾಯ್‍ರಿಗೆ ಧನ್ಯವಾದ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

     

    View this post on Instagram

     

    A post shared by Genelia Deshmukh (@geneliad)

    ರಿತೇಶ್ ಹಾಗೂ ಜೆನಿಲಿಯಾ 2003ರಲ್ಲಿ ತುಜೆ ಮೆರಿ ಕಸಮ್ ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸಿದ್ದರು. 2012 ರಂದು ಇಬ್ಬರು ವಿವಾಹವಾದರು. ಇದೀಗ ಈ ಜೋಡಿಗೆ ರಿಯಾನ್ ಹಾಗೂ ರಹೈಲ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.