Tag: Gender Minorities

  • ಟಿಜಿ ಕಾರ್ಡ್ ವಿತರಣೆ – ಕರ್ನಾಟಕ ರಾಜ್ಯದಲ್ಲೇ ಬೀದರ್ ನಂಬರ್ 1 ಜಿಲ್ಲೆ

    ಟಿಜಿ ಕಾರ್ಡ್ ವಿತರಣೆ – ಕರ್ನಾಟಕ ರಾಜ್ಯದಲ್ಲೇ ಬೀದರ್ ನಂಬರ್ 1 ಜಿಲ್ಲೆ

    ಬೀದರ್: ಲಿಂಗತ್ವ ಅಲ್ಪಸಂಖ್ಯಾತರಿಗೆ ಆನ್‍ಲೈನ್ ಮೂಲಕ ಟಿಜಿ ಕಾರ್ಡುಗಳನ್ನು ವಿತರಿಸಿದ ಕರ್ನಾಟಕ ರಾಜ್ಯದ ಮೊದಲನೇ ಜಿಲ್ಲೆಯಾಗಿ ಬೀದರ್ ಜಿಲ್ಲೆಯು ರಾಜ್ಯದ ಗಮನ ಸೆಳೆದಿದೆ. ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಹಲವಾರು ಬಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ದೇಶನ ನೀಡಿದ್ದರಿಂದ ಟಿಜಿ ಕಾರ್ಡು ವಿತರಣೆಯ ಪ್ರಕ್ರಿಯೆಯು ಬೀದರ್ ಜಿಲ್ಲೆಯಲ್ಲಿ ತೀವ್ರ ರೀತಿಯಲ್ಲಿ ನಡೆಯುತ್ತಿದೆ.

    ಬೀದರ್ ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 53 ಲಿಂಗತ್ವ ಅಲ್ಪಸಂಖ್ಯಾತರಿಗೆ ಟಿ.ಜಿ.ಕಾರ್ಡುಗಳನ್ನು ಆನ್‍ಲೈನ್ ಮೂಲಕ ಮಾಡಿಸಲಾಗಿದ್ದು, ಈ ಪ್ರಕ್ರಿಯೆಯನ್ನು ಇನ್ನಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತರಬೇತಿ ನಡೆಯಿತು. ಇದನ್ನೂ ಓದಿ: ಯಶ್ ನೇತೃತ್ವದ ತಂಡದಿಂದ ಪುರಾತನ ಕಲ್ಯಾಣಿ ಪುನರುಜ್ಜೀವನಕ್ಕೆ ಚಾಲನೆ

    ಈ ತರಬೇತಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ರವೀಂದ್ರ ಎಸ್ ರತ್ನಾಕರ, ಕರ್ನಾಟಕ ರಾಜ್ಯ ಮಂಗಳಮುಖಿಯರ ಅಭಿವೃದ್ಧಿ ನಿಗಮದ ನಿರೀಕ್ಷಕರಾದ ಯಲ್ಲಮ್ಮ ಬೋವಿ, ಶರಣ ತತ್ವ ಪ್ರಸಾರ, ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಬಸವರಾಜ್, ಲಿಂಗತ್ವ ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷರಾದ ಭೀಮ್ ಅಲಿಯಾಸ್ ಭೂಮಿಕಾ ಮತ್ತು ಇನ್ನಿತರ ಲಿಂಗತ್ವ ಅಲ್ಪಸಂಖ್ಯಾತರು ಭಾಗವಹಿಸಿದ್ದರು.

    ಬೀದರ್ ಜಿಲ್ಲೆಯಲ್ಲಿ 944 ಜನ ಲಿಂಗತ್ವ ಅಲ್ಪಸಂಖ್ಯಾತರಿದ್ದು, ಇದರಲ್ಲಿ ಶರಣ ತತ್ವ ನೇರ ಪ್ರಸಾರ ಮತ್ತು ಗ್ರಾಮೀಣ ಸಂಸ್ಥೆ ಬೀದರ್ ನಲ್ಲಿ 398 ಜನರು ನೋಂದಣಿಯಾಗಿದ್ದಾರೆ. ಬೀದರ್ ತಾಲೂಕಿನಲ್ಲಿ 140, ಭಾಲ್ಕಿ ತಾಲೂಕಿನಲ್ಲಿ 118, ಬಸವಕಲ್ಯಾಣ ತಾಲೂಕಿನಲ್ಲಿ 51, ಹುಮನಾಬಾದ್ ತಾಲೂಕಿನಲ್ಲಿ 41 ಮತ್ತು ಔರಾದ್ ತಾಲೂಕಿನಲ್ಲಿ 48 ಜನರು ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಇದನ್ನೂ ಓದಿ: ರಾಜಕೀಯ ಮಾಡಲು ಸಿದ್ದರಾಮಯ್ಯ, ಹೆಚ್‍ಡಿಕೆಗೆ ವಿಷಯಗಳೇ ಸಿಗ್ತಿಲ್ಲ: ಶಿವರಾಜ್ ಪಾಟೀಲ್