Tag: Gender Change Surgery

  • ವಿದ್ಯಾರ್ಥಿನಿಯನ್ನ ಮದ್ವೆಯಾಗಲು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಶಿಕ್ಷಕಿ

    ವಿದ್ಯಾರ್ಥಿನಿಯನ್ನ ಮದ್ವೆಯಾಗಲು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಶಿಕ್ಷಕಿ

    ಜೈಪುರ: ಪ್ರೀತಿ (Love) ಅನ್ನೋದೇ ಮಾಯೆ ಅದು ಯಾರನ್ನು ಹೇಗೆ ಬೇಕಾದರೂ ಬದಲಾಯಿಸುತ್ತದೆ ಎಂಬ ಮಾತನ್ನು ನಾವು ಕೇಳುತ್ತಲೇ ಇದ್ದೇವೆ. ಅದಕ್ಕೆ ಅನೇಕ ನಿದರ್ಶನಗಳನ್ನು ನೋಡುತ್ತಲೇ ಇದ್ದೇವೆ.

    ಪ್ರೀತಿ ಎಂದಾಕ್ಷಣ ಅದೆಷ್ಟೋ ಸಿನಿಮಾ ಕಥೆಗಳು (Cinema Story) ಕಣ್ಣ ಮುಂದೆ ಹಾದು ಹೋಗುತ್ತವೆ. ಮೈ ಕೊರೆಯುವ ಚಳಿಗೆ ಬೆಚ್ಚನೆಯ ಅಪ್ಪುಗೆ ಬೇಕೆನ್ನಿಸುತ್ತದೆ. ಆದ್ದರಿಂದಲೇ ಪ್ರೀತಿಗೆ ಕಣ್ಣಿಲ್ಲ ಎಂದೂ ಹೇಳುತ್ತಾರೆ. ರಾಜಸ್ಥಾನದಲ್ಲಿ ನಡೆದ ಘಟನೆಯೊಂದು ಇದಕ್ಕೆ ಸಾಕ್ಷಿಯಾಗಿದೆ. ಇದನ್ನೂ ಓದಿ: ಎಣ್ಣೆ ಏಟಲ್ಲಿ ಯುವತಿಯರ ಗುದ್ದಾಟ – ಜುಟ್ಟು ಹಿಡಿದು ಒಬ್ಬಳ ಮೇಲೆ ಎರಗಿದ ನಾಲ್ವರು

    ಹೌದು. ರಾಜಸ್ಥಾನದ (Rajasthana) ಭರತ್‌ಪುರದ ಶಿಕ್ಷಕರೊಬ್ಬರು ತಾನು ಪುರುಷನಾಗಲು ಹಾಗೂ ತನ್ನ ವಿದ್ಯಾರ್ಥಿನಿಯನ್ನು (Student) ಮದುವೆಯಾಗಬೇಕೆಂಬ ಹಂಬಲದಿಂದ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ (Gender Change Surgery) ಮಾಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ – ಪೋಸ್ಟರ್ ಹಾಕಿ ಬಿಜೆಪಿ ಪ್ರತಿಭಟನೆ

    ಈ ಬಗ್ಗೆ ಪುರಷನಾಗಿ ಬದಲಾಗಿರುವ ಶಿಕ್ಷಕ (Teacher) ಆರವ್ ಕುಂತಲ್ ತಾವೇ ಹೇಳಿಕೊಂಡಿದ್ದಾರೆ. ನಾನೂ ಶಸ್ತ್ರಚಿಕಿತ್ಸೆಗೆ ಒಳಗಾಗಲು ಬಯಸಿದ್ದೆ. 2019ರ ಡಿಸೆಂಬರ್‌ನಲ್ಲಿ ನನ್ನ ಮೊದಲ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಇತ್ತೀಚೆಗೆ ಮತ್ತೊಮ್ಮೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲಾಯಿತು ಎಂದು ಹೇಳಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ತನ್ನ ವಿದ್ಯಾರ್ಥಿಯನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ (Marriage).

    ಇನ್ನೂ ಪುರುಷನಾಗಿ ಬದಲಾದ ಶಿಕ್ಷಕನನ್ನು ಮದುವೆಯಾದ ಯುವತಿ ಪ್ರತಿಕ್ರಿಯಿಸಿ, ನಾನು ಮೊದಲಿನಿಂದಲೂ ಅವರನ್ನು ಪ್ರೀತಿಸುತ್ತಿದ್ದೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಾಗ ನಾನೂ ಅವರೊಂದಿಗೆ ಇದ್ದೆ. ಈ ಸರ್ಜರಿ ಮಾಡಿಸಿಕೊಳ್ಳದೇ ಇದ್ದಿದ್ದರೂ ನಾನು ಅವರನ್ನು ಮದುವೆಯಾಗುತ್ತಿದ್ದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]