Tag: Gender

  • ಪ್ರೀತಿ ನಿರಾಕರಿಸಿದ ಮನೆಯವರು – ಲಿಂಗವನ್ನೇ  ಬದಲಾಯಿಸಿಕೊಂಡ ಯುವತಿ

    ಪ್ರೀತಿ ನಿರಾಕರಿಸಿದ ಮನೆಯವರು – ಲಿಂಗವನ್ನೇ ಬದಲಾಯಿಸಿಕೊಂಡ ಯುವತಿ

    ಲಕ್ನೋ: ಪರಸ್ಪರ ಪ್ರೀತಿಸುತ್ತಿದ್ದ ಯುವತಿಯರಿಬ್ಬರ ಸಂಬಂಧಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಯುವತಿಯೊಬ್ಬಳು ಲಿಂಗವನ್ನೇ ಬದಲಾಯಿಸಿಕೊಂಡ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.

    ಸಲಿಂಗಿಗಳಾದ ಯುವತಿಯರಿಬ್ಬರ ಒಬ್ಬರನೊಬ್ಬರು ಬಹಳ ಪ್ರೀತಿಸುತ್ತಿದ್ದರು. ತಮ್ಮ ಇಬ್ಬರ ಸಂಬಂಧವನ್ನು ಮತ್ತೊಂದು ಹಂತಕ್ಕೆ ತೆಗದುಕೊಂಡು ಹೋಗಲು ಇಚ್ಛಿಸಿ ಇಬ್ಬರು ಮದುವೆಯಾಗಲು ತೀಮಾನಿಸಿದರು. ಆದರೆ ಇವರಿಬ್ಬರ ಸಂಬಂಧಕ್ಕೆ ಮನೆಯವರು ವಿರೋಧ ವ್ಯಕ್ತಿಪಡಿಸಿದ್ದಾರೆ. ಈ ವೇಳೆ ಅವರಲ್ಲಿ ಒಬ್ಬಳು ಶಸ್ತ್ರಚಿಕಿತ್ಸೆ ಮೂಲಕ ಲಿಂಗವನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಿದಳು.

    ಹುಚ್ಚಿಯಂತೆ ಪ್ರೀತಿಸುತ್ತಿದ್ದ ಯುವತಿ ತಮ್ಮ ಪ್ರೀತಿಗೆ ಯಾವುದೇ ಅಡ್ಡಿ, ಆತಂಕ ಬರಬಾರದು ಎಂಬ ಉದ್ದೇಶದಿಂದ ತನ್ನ ಲಿಂಗಬದಲಾಯಿಸಿಕೊಳ್ಳಲು ತೀರ್ಮಾನಿಸಿದಳು. ಯುವತಿ ತನ್ನ ಕುಟುಂಬಸ್ಥರ ಮನವೊಲಿಸಲು ನಾನಾ ಪ್ರಯತ್ನಗಳನ್ನಜು ಮಾಡಿದಳು ಆದರೆ, ಆಕೆಯ ಎಲ್ಲಾ ಪ್ರಯತ್ನಗಳು ವ್ಯರ್ಥವಾಯಿತು. ಕೊನೆಗೆ ತಮ್ಮಿಬ್ಬರ ಸಂಬಂಧ ಉಳಿಸಿಕೊಳ್ಳಲು ಆಕೆಗೆ ಬೇರೆ ದಾರಿ ಕಾಣದಿದ್ದಾಗ, ತನ್ನ ಲಿಂಗವನ್ನೇ ಬದಲಾಯಿಸಿಕೊಳ್ಳಲು ಯೋಚಿಸಿದ್ದಾಳೆ.

    ಪ್ರಯಾಗ್‌ರಾಜ್‌ನಲ್ಲಿರುವ ಸ್ವರೂಪ್ ರಾಣಿ ನೆಹರೂ ಆಸ್ಪತ್ರೆಯ ವೈದ್ಯರ ತಂಡವು ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಕೆ ಸಂಪೂರ್ಣ ಪುರುಷನಾಗಲು ಸುಮಾರು 1.5 ವರ್ಷಗಳು ಬೇಕಾಗುತ್ತವೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಮಹಿಳೆಗೆ ಟೆಸ್ಟೋಸ್ಟೆರಾನ್ ರಿಪ್ಲೇಸ್ಮೆಂಟ್ ಥೆರಪಿ ನೀಡಲಾಗುತ್ತದೆ. ಟೆಸ್ಟೋಸ್ಟೆರಾನ್ ಚಿಕಿತ್ಸೆಯು ಎದೆಯ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಡಾ. ಮೋಹಿತ್ ಜೈನ್ ಹೇಳಿದ್ದಾರೆ.

    ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಯ ನಂತರ ಯುವತಿ ಗರ್ಭಧರಿಸುವ ಮತ್ತು ಗರ್ಭಿಣಿಯಾಗುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಈ ರೀತಿ ಶಸ್ತ್ರಚಿಕಿತ್ಸೆ ನಡೆಸುತ್ತಿರುವುದು ಇದೇ ಮೊದಲಾಗಿದ್ದು, ಸಂಪೂರ್ಣ ಚಿಕಿತ್ಸೆ 18 ತಿಂಗಳಿನೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸದ್ಯ ಯುವತಿಯ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ತಿಳಿಸಿದ್ದಾರೆ.

    Live Tv

  • ಕ್ರಿಕೆಟ್‍ನಲ್ಲಿ ಲಿಂಗ ಸಮಾನತೆಗಾಗಿ ಬ್ಯಾಟ್ಸ್‌ಮ್ಯಾನ್‌ ಬದಲಾಗಿ ‘ಬ್ಯಾಟರ್’ ಪದ ಬಳಕೆ

    ಕ್ರಿಕೆಟ್‍ನಲ್ಲಿ ಲಿಂಗ ಸಮಾನತೆಗಾಗಿ ಬ್ಯಾಟ್ಸ್‌ಮ್ಯಾನ್‌ ಬದಲಾಗಿ ‘ಬ್ಯಾಟರ್’ ಪದ ಬಳಕೆ

    ಲಂಡನ್: ಕ್ರಿಕೆಟ್‍ನಲ್ಲಿ ಮಹಿಳಾ ಮತ್ತು ಪುರುಷರ ಲಿಂಗ ಸಮಾನತೆ ಸಲುವಾಗಿ ಪ್ರಸ್ತುತ ಬಳಕೆಯಲ್ಲಿರುವ ಬ್ಯಾಟ್ಸ್‌ಮ್ಯಾನ್‌ ಪದದ ಬದಲಾಗಿ ಬ್ಯಾಟರ್ ಪದ ಬಳಸುವಂತೆ ಮಾರ್ಲೆಬೋನ್  ಕ್ರಿಕೆಟ್ ಸಂಸ್ಥೆ(ಎಂಸಿಸಿ) ತೀರ್ಮಾನಿಸಿದೆ.

    ಎಂಸಿಸಿ ಜಾರಿಗೊಳಿಸುವ ಕ್ರಿಕೆಟ್ ನಿಯಮಗಳನ್ನು ಪಾಲಿಸುವ ಐಸಿಸಿ ಇದೀಗ ಈ ಮಹತ್ವದ ಬದಲಾವಣೆಯನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಎಂಸಿಸಿ ಕ್ರಿಕೆಟ್‍ನಲ್ಲಿ ಮಹತ್ವದ ಬದಲಾವಣೆ ತರುವ ನಿಟ್ಟಿನಲ್ಲಿ ಕಾನೂನು ಉಪ ಸಮಿತಿಯ ಜೊತೆ ಚರ್ಚಿಸಿ ಕ್ರಿಕೆಟ್‍ನಲ್ಲಿ ನಿಯಮಗಳನ್ನು ಜಾರಿಗೊಳಿಸುತ್ತದೆ. ಇದೀಗ ಮಹಿಳಾ ಕ್ರಿಕೆಟ್ ಕೂಡ ಪುರುಷ ಕ್ರಿಕೆಟ್ ನಂತೆ ಜನಪ್ರಿಯತೆ ಗಳಿಸುತ್ತಿದೆ. ಆದರೆ ಕ್ರಿಕೆಟ್‍ನಲ್ಲಿ ಬ್ಯಾಟ್ಸ್‌ಮ್ಯಾನ್‌ ಎಂಬ ಪದ ಮಹಿಳಾ ಕ್ರಿಕೆಟ್‍ನಲ್ಲಿ ಸರಿಹೊಂದುತ್ತಿರಲಿಲ್ಲ. ಹಾಗಾಗಿ ಈ ಬದಲಾವಣೆಗೆ ಮುಂದಾಗಿದೆ. ಇದನ್ನೂ ಓದಿ: ಐಪಿಎಲ್‍ಗೂ ತಟ್ಟಿದ ಕೊರೊನಾ – ನಟರಾಜನ್‍ಗೆ ಸೋಂಕು, 6 ಮಂದಿ ಕ್ವಾರಂಟೈನ್

    ಈಗಾಗಲೇ ಕ್ರಿಕೆಟ್‍ನಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಮನಾಗಿ ಬೌಲರ್ ಮತ್ತು ಫೀಲ್ಡರ್ ಎಂಬ ಪದ ಬಳಕೆಯಾಗುತ್ತಿದೆ. ಇದೀಗ ಬ್ಯಾಟ್ಸ್‌ಮ್ಯಾನ್‌ ಬದಲಾಗಿ ಬ್ಯಾಟರ್ ಅಥವಾ ಬ್ಯಾಟರ್ಸ್ ಪದ ಬಳಕೆಗೆ ಎಂಸಿಸಿ ಮುಂದಾಗಿದ್ದು, ಈ ಮೂಲಕ ಕ್ರಿಕೆಟ್‍ನಲ್ಲಿ ಲಿಂಗ ಸಮಾನತೆಗಾಗಿ ಶ್ರಮಿಸಿದೆ. ಇದನ್ನೂ ಓದಿ: ಸ್ಟೇಡಿಯಂನಲ್ಲಿ ಮಹಿಳಾ ಪ್ರೇಕ್ಷಕರು ಇದ್ದಾರೆ, ಪ್ರಸಾರ ಮಾಡಬೇಡಿ – ಅಫ್ಘಾನಿಸ್ಥಾನದಲ್ಲಿ ಐಪಿಎಲ್ ಬ್ಯಾನ್