Tag: GEN-Z

  • ದೂರದ ಸಂಬಂಧಕ್ಕೆ ಬಯಸುತ್ತಿದೆ ಮನ – ಜನರೇಶನ್‌-Zನಲ್ಲಿ ಆಗ್ತಿರೋ ಬದಲಾವಣೆಗೆ ಕಾರಣ ಏನು?

    ದೂರದ ಸಂಬಂಧಕ್ಕೆ ಬಯಸುತ್ತಿದೆ ಮನ – ಜನರೇಶನ್‌-Zನಲ್ಲಿ ಆಗ್ತಿರೋ ಬದಲಾವಣೆಗೆ ಕಾರಣ ಏನು?

    ಸರ್ಕಾರಿ ಹುದ್ದೆ ಅಥವಾ ಇನ್ಯಾವುದೋ ಉದ್ಯೋಗದಿಂದಾಗಿ ದಂಪತಿ, ಜೋಡಿ ಬೇರೆ ಬೇರೆ ಊರುಗಳಲ್ಲಿ ತುಂಬಾ ದೂರ, ಒಬ್ಬರನ್ನೊಬ್ಬರು ಬಿಟ್ಟು ಇರಬೇಕಾಗುತ್ತದೆ. ಇದು ಸಂಗಾತಿಗಳಿಬ್ಬರಿಗೆ ವಿರಹ ವೇದನೆ ನೀಡುವುದು. ದೈಹಿಕವಾಗಿ ದೂರವಿರುವ ಪರಿಣಾಮವು ಮಾನಸಿಕವಾಗಿಯೂ ಬೀಳುವುದು. ಇಂತಹ ಸಮಯವು ದಂಪತಿಗೆ ಒಂದು ಅಗ್ನಿಪರೀಕ್ಷೆಯಾಗುತ್ತದೆ. ಈ ವೇಳೆ ಕೆಲವೊಂದು ಸಣ್ಣಪುಟ್ಟ ವಿಚಾರಗಳಿಗೆ ಜಗಳವಾಗುತ್ತದೆ. ಕೆಲವೊಮ್ಮೆ ಸಂಬಂಧಗಳೇ ಮುರಿದುಬೀಳುತ್ತವೆ. ಈ ಎಲ್ಲ ಘಟನೆಗಳು ಜನರೇಷನ್‌-ಝಡ್‌ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ಝೆನ್‌-ಝೆಡ್‌ ಡೇಟಿಂಗ್‌ ಜೀವನ ಶೈಲಿಗೆ ಮುಂದಾಗುತ್ತಿದ್ದು, ದೂರ ಸಂಬಂಧಗಳನ್ನೇ ಅಂದ್ರೆ ವಿದೇಶಿ ಮಹಿಳೆಯರು ಅಥವಾ ಪುರುಷರ ಮೇಲೆ ಹೆಚ್ಚು ಅವಲಂಭಿಸುತ್ತಿವೆ.

    ಡೇಟಿಂಗ್ ಸ್ವಲ್ಪ ಅಸ್ಪಷ್ಟವಾದ ಸಂಗತಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಡೇಟಿಂಗ್ ಮಾಡುವ ಮೊದಲು ಆತ ಅಥವಾ ಆಕೆ ತಮ್ಮ ಮನಸ್ಸು ಮತ್ತು ಹೃದಯವನ್ನು ಅಣಿಗೊಳಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಡೇಟಿಂಗ್ ಅಂದ ಮೇಲೆ ಅಲ್ಲಿ ನಿರಾಕರಣೆಗಳು ಸಂಭವಿಸುತ್ತವೆ. ಪ್ರೀತಿ ನಿಜವಾಗಿದ್ದರೆ ಮತ್ತು ಸರಿಯಾದ ದೃಷ್ಟಿಕೋನದಿಂದ ಈ ಸಂಬಂಧವಿದ್ದರೆ ಆಗ ನೀವು ಖಂಡಿತವಾಗಿಯೂ ಗೆದ್ದು ಬರಬಹುದು.

    ನವಯುಗದ ಜನರೇಷನ್‌ನಲ್ಲಿ ಅರ್ಧದಷ್ಟು ಯುವ ಸಮೂಹ ತಾವಿರುವ ಸ್ಥಳವನ್ನು ಬಿಟ್ಟು ದೂರದ ಸ್ಥಳಗಳಲ್ಲಿ ಅವನ ಅಥವಾ ಅವಳೊಂದಿಗೆ ಡೇಟಿಂಗ್‌ ಮಾಡಲು ಆಸಕ್ತಿ ವಹಿಸುತ್ತಿದ್ದಾರೆ. 3/1 ಭಾಗದಷ್ಟು ಜನ ದೇಶದ ಗಡಿಯಾಚೆಗಿನ ಸಂಪರ್ಕ ಬೆಳೆಸಲು ಮುಂದಾಗುತ್ತಿದ್ದಾರೆ. ವಿದೇಶಿ ಪ್ರಯಾಣಗಳು ಹಾಗೂ ಡೇಟಿಂಗ್‌ ಆಪ್‌ಗಳು ಹಾಗೂ ಸೋಷಿಯಲ್‌ ಮೀಡಿಯಾಗಳು ಇದಕ್ಕೆ ಹೇಗೆ ವೇದಿಕೆಗಳಾಗ್ತಿವೆ ಅನ್ನೋದನ್ನ ತಿಳಿಯೋಣ….

    ವಿದೇಶಿ ಪ್ರೀತಿ ಹುಡುಕಲು ಪಾಸ್‌ಪೋರ್ಟ್‌ ಕನೆಕ್ಷನ್‌
    ಇಂದಿನ ಜನರೇಷನ್‌ Zಗೆ ವಿದೇಶಿ ಪ್ರಯಾಣ ಕೈಗೊಳ್ಳೋದು ಕೇವಲ ಮನೋಲ್ಲಾಸಕ್ಕಲ್ಲ, ಹೊಸ ಹೊಸ ಸಂಬಂಧಗಳನ್ನ ಅನ್ವೇಶಿಸೋದಕ್ಕಾಗಿಯೂ ಮಾಡ್ತಿದ್ದಾರೆ. ಇದ್ದಕ್ಕಾಗಿ ಹೆಚ್ಚು ಹೆಚ್ಚು ದೇಶಗಳಿಗೆ ಪ್ರಯಾಣಿಸಲು ಶೀಘ್ರ ಪಾಸ್‌ಪೋರ್ಟ್‌ ಮಾಡಿಸಿಕೊಳ್ತಿದ್ದಾರೆ. ಆದ್ರೆ ಕೆಲವರು ಡೇಟಿಂಗ್‌ ಆಪ್‌ಗಳನ್ನ ಬಳಸಿಕೊಂಡು ತಮ್ಮ ನಗರ ವ್ಯಾಪ್ತಿಗಳನ್ನ ಹೊರತುಪಡಿಸಿ, ವಿಶ್ವದಾದ್ಯಂತ ಇರುವ ಜನರೊಂದಿಗೆ ಸಂಪರ್ಕ ಸಾಧಿಸಲು ಬಯಸುತ್ತಿದ್ದಾರೆ.

    ಭಾರತಲ್ಲಿ ಎಲ್ಲೆಲ್ಲಿ ಡೇಟಿಂಗ್‌ ಬಳಕೆ ಹೆಚ್ಚಾಗಿದೆ?
    ದೆಹಲಿಯ ಎನ್‌ಸಿಆರ್‌, ಮಹಾರಾಷ್ಟ್ರದ ಮುಂಬೈ, ಪುಣೆ, ಕರ್ನಾಟಕದ ಬೆಂಗಳೂರು, ಬಂಗಾಳದ ಕೋಲ್ಕತ್ತಾ ನಗರಗಳು ಡೇಟಿಂಗ್‌ ಆಪ್‌ಗಳ ಮೂಲಕ ಹೆಚ್ಚಾಗಿ ವಿದೇಶಿ ಸಂಬಂಧಗಳನ್ನು ಬಯಸುತ್ತಿವೆ. ಇತ್ತೀಚಿನ ಸಮೀಕ್ಷೆ ಪ್ರಕಾರ, ಗ್ಲೀಡನ್‌ ಬಳಕೆದಾರರ ಸಂಖ್ಯೆಯಲ್ಲಿ ಬೆಂಗಳೂರು 20% ಬಳಕೆದಾರರನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮುಂಬೈ(19%), ಕೋಲ್ಕತ್ತಾ (18%), ದೆಹಲಿ (15%) ಇದೆ. ಬಳಕೆದಾರರ ಪೈಕಿ 58% ರಷ್ಟು ಮಂದಿ ಮಹಿಳೆಯರಿದ್ದಾರೆ. ಇವರು ಸುಮಾರು 45 ನಿಮಿಷಗಳ ಕಾಲ ಈ ಆ್ಯಪ್ನಲ್ಲಿ ಸಮಯ ಕಳೆಯುತ್ತಿದ್ದಾರೆ. ಎಲ್ಲಾ ವಯಸ್ಸಿನ ಪುರುಷರು ಮತ್ತು ಮಹಿಳೆಯರು ಈ ಅಪ್ಲಿಕೇಶನ್ ಬಳಸುತ್ತಿದ್ದಾರೆ.

    ಈ ಸಮಸ್ಯೆ ತಪ್ಪಿಸಲು ಏನು ಮಾಡಬೇಕು?
    ಪ್ರೀತಿ ಅನ್ನೋದೇ ಮಾಯೆ ಎನ್ನುವಂತೆ ಬೆಳಗ್ಗೆ ಪ್ರಪೋಸ್‌ ಮಾಡಿದ್ರೆ ಮಧ್ಯಾಹ್ನ ಮಜಾ ಮಾಡಿ ಸಂಜೆ ಬೇರೆಯಾಗುವ ಕಾಲ ಇದು. ಹೀಗಾಗಿ ಹಿರಿಯರು ಸಂಬಂಧಗಳ ನೈಜ ಬೆಲೆ ತಿಳಿಸಿಕೊಡಬೇಕಾಗಿದೆ. ತಾವು ದೂರವಿದ್ದರೂ ಸಂಬಂಧಗಳನ್ನ ಗಟ್ಟಿಯಾಗಿಟ್ಟುಕೊಳ್ಳುವ ಮೂಲಕ ಇಂದಿನ ಜನರೇಷನ್‌ಗೆ ಮಾದರಿಯಾಗಬೇಕಿದೆ. ಅದಕ್ಕಾಗಿ ಒಂದಿಷ್ಟು ಸಲಹೆಗಳೂ ಇಲ್ಲಿವೆ. ʼ

    ಪ್ರೀತಿಗೆ ಡಿಜಿಟಲ್‌ ಟಚ್‌ ಇರಲಿ
    ಇದು ಅಂಗೈಯಲ್ಲೇ ವಿಶ್ವವನ್ನೇ ಆಡಿಸುವಂತಹ ಸಮಯ. ಹೀಗಾಗಿ ನೀವು ದೂವಿದ್ದೀರಿ ಎಂದು ಖಂಡಿತವಾಗಿಯೂ ಚಿಂತೆ ಮಾಡಬೇಡಿ. ಇಲ್ಲಿ ನೀವು ಡಿಜಿಟಲ್ ಮಾಧ್ಯಮದ ಸಂಪೂರ್ಣ ಸಹಕಾರ ಪಡೆಯಿರಿ. ವೀಡಿಯೋ ಕಾಲ್ ನಿಂದ ಹಿಡಿದು ಪ್ರತಿನಿತ್ಯವೂ ಕರೆ ಮಾಡಿದರೆ ಸಂಬಂಧವು ಹಾಗೆ ಮುಂದುವರಿಯುವುದು. ಈಗ ಮೊಬೈಲ್ ಕರೆಯು ಅಷ್ಟು ದುಬಾರಿಯೇನಿಲ್ಲ. ಡಿಜಿಟಲ್ ಮಾಧ್ಯಮದ ನೆರವಿನಿಂದ ಸಂಗಾತಿಗೆ ನೀವು ಹತ್ತಿರದಲ್ಲೇ ಇರುವಂತಹ ಭಾವನೆ ಮೂಡಿಸಬಹುದು. ಇದರಿಂದ ಸಂಬಂಧಕ್ಕೂ ಬಲ ಬರುವುದು. ಹೀಗಾಗಿ ಜನರೇಷನ್‌ ಡಿಜಿಟಲ್‌ ಮಾಧ್ಯಮಗಳನ್ನೇ ದೂರ ಸಂಬಂಧಕ್ಕೆ ವೇದಿಕೆಯಾಗಿ ಮಾಡಿಕೊಂಡಿವೆ.

    ಸಾಂದರ್ಭಿಕ ಚಿತ್ರ

    ಅವರ ವೈಯಕ್ತಿಕ ಬದುಕಿಗೂ ಗೌರವ ನೀಡಿ
    ನೀವು ಕೆಲವೊಂದು ಸಲ ಕರೆ ಸ್ವೀಕರಿಸದೆ ಇರಬಹುದು ಅಥವಾ ನಿಮ್ಮ ಸಂಗಾತಿಗೆ ಕರೆ ಸ್ವೀಕರಿಸಲು ಸಾಧ್ಯವಾಗದೆ ಇರಬಹುದು. ಇಂತಹ ಸಮಯದಲ್ಲಿ ನೀವು ಸಂಶಯಪಡಬಾರದು. ಸಂಗಾತಿಯು ನಿಮ್ಮನ್ನು ಎಷ್ಟು ಪ್ರೀತಿಸುವರು ಎಂದು ಗಮನಿಸುವುದು ಅತೀ ಅಗತ್ಯ. ನೀವು ಅವರ ಬದುಕಿಗೆ ಬೇಲಿ ಹಾಕಲು ಹೋಗಬಾರದು. ಸಂಬಂಧದಲ್ಲಿ ಆತ್ಮವಿಶ್ವಾಸದಿಂದ ಇರಬೇಕು ಮತ್ತು ಅವರಲ್ಲೂ ಇಂತಹ ಆತ್ಮವಿಶ್ವಾಸ ತುಂಬಬೇಕು.

    ಉಡುಗೊರೆಗಳನ್ನು ಕಳುಹಿಸಿ
    ನೀವು ಹಾಗೆ ಯಾವುದಾದರೂ ಒಳ್ಳೆಯ ಉಡುಗೊರೆ ಕಳುಹಿಸಿ ಅವರಿಗೆ ಸಪ್ರೈಸ್ ನೀಡಬಹುದು. ಇದು ಅದ್ಭುತವಾಗಿ ಕೆಲಸ ಮಾಡುವುದು. ನೀವು ಸಣ್ಣ ಉಡುಗೊರೆ ಅಥವಾ ಹೂವಿನ ಬೊಕ್ಕೆ ನೀಡಿದರೂ ಅದು ಅದ್ಭುತವಾಗಿ ಕೆಲಸ ಮಾಡುವುದು. ನಿಮ್ಮ ಪ್ರಯತ್ನ ಹಾಗೂ ಪ್ರೀತಿಗೆ ಅವರು ಸೋಲುವರು.

    ಭವಿಷ್ಯಕ್ಕಾಗಿ ಯೋಜನೆ ರೂಪಿಸಿ
    ಭವಿಷ್ಯಕ್ಕಾಗಿ ಯೋಜನೆಗಳನ್ನು ಹಾಕಿಕೊಳ್ಳುವುದು ಸಂಬಂಧದಲ್ಲೇ ಇದ್ದೇ ಇರುವುದು. ಸಂಗಾತಿಯು ನಿಮ್ಮಿಂದ ದೂರವಿರುವರು ಎಂದು ಭಾವಿಸದೆ, ಅವರೊಂದಿಗೆ ಮಾತಿನಾಡುವ ವೇಳೆ ಭವಿಷ್ಯದ ಯೋಜನೆ ಹಾಕಿಕೊಳ್ಳಿ. ನೀವು ಹೋಗಬಹುದಾದ ಜಾಗ ಮತ್ತು ಇತರ ಸಾಹಸಗಳ ಬಗ್ಗೆ ಚರ್ಚೆ ಮಾಡಿ. ಇದರಿಂದ ನಿಮ್ಮ ಸಂಬಂಧಕ್ಕೆ ಬಲ ಬರುವುದು.

    ಲೈಂಗಿಕತೆ ಏಕೆ ಮುಖ್ಯ?
    * ಇದು ಹೆಣ್ಣು-ಗಂಡಿನ ನಡುವೆ ಬಾಂಧವ್ಯ ಬೆಸೆಯುತ್ತದೆ
    * ಸಂಗಾತಿಯೆಡೆಗೆ ನಿಮ್ಮ ಪ್ರೀತಿ ಹಾಗೂ ಸೆಳೆತ ಎಷ್ಟಿದೆ ಎಂದು ನಿರ್ಧರಿಸುತ್ತದೆ.
    * ಲೈಂಗಿಕ ಅತೃಪ್ತಿಯಿಂದ ದಾಂಪತ್ಯದಲ್ಲಿ ಬಿರುಕುಂಟಾಗುವುದನ್ನು ತಡೆಯುತ್ತದೆ.
    * ಸಂಬಂಧದಲ್ಲಿ ಭದ್ರತೆ ಭಾವನೆ ಮೂಡಿಸುತ್ತದೆ
    * ಇದು ಮನಸ್ಸು ಹಾಗೂ ದೇಹಕ್ಕೆ ಉಲ್ಲಾಸವನ್ನು ನೀಡುತ್ತದೆ
    * ಅಲ್ಲದೆ ಮಗುವನ್ನು ಪಡೆಯಬೇಕೆಂದರೆ ಸೆಕ್ಸ್ ಅತ್ಯವಶ್ಯಕ.

    ದಂಪತಿಗಳು ಸಕ್ರೀಯವಾಗಿದ್ದರೆ ದೊರೆಯುವ ಪ್ರಯೋಜನಗಳೇನು?
    * ಮನಸ್ಸಿಗೆ ಖುಷಿ ಸಿಗುವುದು ಲೈಂಗಿಕ ಕ್ರಿಯೆ ನಡೆಸಿದಾಗ. ದೇಹದಲ್ಲಿ ಹಲವು ಬಗೆಯ ಹಾರ್ಮೋನ್‌ಗಳು ಉತ್ಪತ್ತಿಯಾಗುತ್ತದೆ
    * ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
    * ನಿಮ್ಮ ದೇಹವನ್ನು ನೀವು ಹೆಚ್ಚಾಗಿ ಪ್ರೀತಿಸುವಂತೆ ಮಾಡುತ್ತದೆ.
    * ನಿಮ್ಮ ಸಂಗಾತಿಯ ಆರೈಕೆ ಮಾಡುವಿರಿ.
    * ಇದು ಮಾನಸಿಕ ಒತ್ತಡವನ್ನು ಹೊರ ಹಾಕುತ್ತದೆ.

    ಯಾವಾಗ ಸೆಕ್ಸ್ ಬೇಡ?
    ಕೆಲವು ಸಂದರ್ಭಗಳಲ್ಲಿ, ನೀವು ಕೆಲವು ಚಟುವಟಿಕೆಗಳನ್ನು ಬಿಟ್ಟುಬಿಡಬೇಕಾಗಬಹುದು, ಅಥವಾ ಲೈಂಗಿಕತೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗಬಹುದು.
    * ಗರ್ಭಾವಸ್ಥೆಯಲ್ಲಿ ರಕ್ತಸ್ರಾವವನ್ನು ಅನುಭವಿಸಿದಾಗ.
    * ಗರ್ಭಪಾತದ ಅಪಾಯವನ್ನು ಹೊಂದಿದ್ದಾಗ.
    * ಗರ್ಭಕಂಠದ ದೌರ್ಬಲ್ಯದ ಹಿನ್ನೆಲೆ ಹೊಂದಿದ್ದರೆ ಅಥವಾ ಅವಧಿಪೂರ್ವ ಮಗುವಿಗೆ ಜನ್ಮ ನೀಡಿದ್ದರೆ.
    * ಹೆಚ್ಚಿನ ಬಿಪಿ ಅಥವಾ ಡಯಾಬಿಟಿಸ್ ಹೊಂದಿದ್ದರೆ.
    * ನೀವು ಫಲವತ್ತತೆ ಚಿಕಿತ್ಸೆಗಳಿಗೆ ಒಳಗಾಗಿದ್ದರೆ, ಅಥವಾ ಹೊಟ್ಟೆಯಲ್ಲಿ ಒಂದಕ್ಕಿಂತ ಹೆಚ್ಚು ಶಿಶುಗಳಿದ್ದರೆ.
    * ನೀವು ಅಥವಾ ನಿಮ್ಮ ಪತಿ ಯಾವುದಾದರೂ ಲೈಂಗಿಕವಾಗಿ ಹರಡುವ ಸೋಂಕು ಹೊಂದಿದ್ದರೆ.

  • ಇದು GEN-Z ಯುಗ – ಈ ಜನರೇಷನ್‌ ಬಗ್ಗೆ ನಿಮಗೆಷ್ಟು ಗೊತ್ತು?

    ಇದು GEN-Z ಯುಗ – ಈ ಜನರೇಷನ್‌ ಬಗ್ಗೆ ನಿಮಗೆಷ್ಟು ಗೊತ್ತು?

    ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವ ಒಂದು ಪದವೆಂದರೆ ಅದು GEN-Z. ಎಲ್ಲರ ಬಾಯಲ್ಲಿಯೂ ಅದೊಂದೇ. ದೈನಂದಿನ ಜೀವನದಲ್ಲಿ, ದಿನನಿತ್ಯದ ಕ್ರಿಯೆಗಳಲ್ಲಿ, ತಂತ್ರಜ್ಞಾನದಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಎಲ್ಲೆಡೆಯೂ ಅದರ ಧ್ಯಾನವೇ ಎಂದರೆ ತಪ್ಪಾಗಲಿಕ್ಕಿಲ್ಲ. ಈಗಿನ ಪ್ರಸ್ತುತ ಜಗತ್ತಿನಲ್ಲಿ ತಮ್ಮ ಕೌಶಲ್ಯ ಹಾಗೂ ಇನ್ನಿತರ ಕ್ರಿಯೆಗಳ ಮೂಲಕ ಇಂದಿನ ಯುವಕರು GEN-Z ಎಂಬ ಹೊಸ ಯುಗವನ್ನು ಸೃಷ್ಟಿಸಿದ್ದಾರೆ. 

    ಹೌದು, ಏನಿದು GEN-Z? ಇಂದಿನ ಪೀಳಿಗೆಗೂ GEN-Z ಗೂ ಏನು ಸಂಬಂಧ? ಎಂದು ಹಲವರಲ್ಲಿ ಈ ಪ್ರಶ್ನೆ ಮೂಡಿದ್ದು ನೂರಕ್ಕೂ ನೂರರಷ್ಟು ಸತ್ಯ. ಸರಳ ಪದದಲ್ಲಿ ಹೇಳುವುದಾದರೆ GEN-Z ಎಂದರೆ ಇಂದಿನ ಪ್ರಸ್ತುತ ಜಗತ್ತು ಎನ್ನಬಹುದು.    ವಿವರವಾಗಿ ಏನಿದು GEN-Z? ಎನ್ನುವ ಎಲ್ಲ ಪ್ರಶ್ನೆಗಳಿಗೂ ವಿವರವಾದ ಮಾಹಿತಿ ಇಲ್ಲಿದೆ. 

    ಏನಿದು GEN-Z?

    ಪ್ರಾರಂಭದಿಂದಲೂ ಭೂಮಿ ಉಗಮವಾದಾಗಿನಿಂದ ಒಂದೊಂದು ಆಗಿ ಹೊಸತಾದ ಸೃಷ್ಟಿಗಳಾಗುತ್ತಿವೆ. ದಿನಕ್ಕೊಂದು ಹೊಸ ಹೊಸ ಆವಿಷ್ಕಾರಗಳು ಆಗುತ್ತಿವೆ. ಹೀಗಿರುವಾಗ ಹೊಸ ಸಂಶೋಧನೆ ಹಾಗೂ ಹೊಸ ಹೊಸ ಕಲ್ಪನೆಗಳಿಗೆ ಇಂದಿನ ಯುವಕರ ಪಾತ್ರವೂ ಕೂಡ ಇದೆ. ಅದೇ ರೀತಿ ಕ್ರಿ.ಶ ಪ್ರಾರಂಭವಾದಾಗಿನಿಂದ ಇತಿಹಾಸವನ್ನು ನಾವು ನೋಡುತ್ತಾ ಬಂದರೆ ಹೊಸತನವನ್ನು ಕಾಣಬಹುದು. ಇನ್ನು ಸ್ವತಂತ್ರ ಪೂರ್ವ ಭಾರತಕ್ಕೂ ಹಾಗೂ ಸ್ವಾತಂತ್ರೋತ್ತರ ಭಾರತಕ್ಕೂ ತುಂಬಾ ವ್ಯತ್ಯಾಸವಿದೆ. ಇದೆಲ್ಲದಕ್ಕೂ ಆ ಕಾಲದ ಅಥವಾ ಆ ಯುಗದ ಜನರ, ಅಂದಿನ ಯುವಕರ ಪಾತ್ರ ಪ್ರಮುಖವಾದದ್ದು. ಅದರಂತೆ 1997ರ ಮಧ್ಯದಿಂದ 2012ರ ಮೊದಲ ಭಾಗದವರೆಗೆ ಜನಿಸಿದ ಮಕ್ಕಳನ್ನು ನಾವು GEN-Z ಯುಗದವರು ಎಂದು ಕರೆಯಲಾಗುತ್ತದೆ. ಈ ಯುಗದಲ್ಲಿ ಹುಟ್ಟಿದ ಮಕ್ಕಳು ಜಗತ್ತಿನಲ್ಲಿ ಪ್ರಾರಂಭವಾದ ಕೌತುಕ ಮೂಡಿಸುವ ತಾಂತ್ರಿಕ ಯುಗದೊಂದಿಗೆ ಬೆಳೆದವರು. ಅದಲ್ಲದೆ ಈ ಮಕ್ಕಳು ಹೊಸ ಹೊಸ ಸಂಸ್ಕೃತಿ ಹಾಗೂ ವಿಭಿನ್ನ ಕಲೆಯನ್ನು ತಮ್ಮೊಂದಿಗೆ ಬೆಳೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಯುಗದ ಮಕ್ಕಳನ್ನು GEN-Z ಎಂದು ಕರೆಯುತ್ತಾರೆ. 

    GEN-Z ಯುಗದ ವಿಭಿನ್ನತೆಯೇನು? 

    • ಯಾವಾಗ ಭೂಮಿಯ ಮೇಲೆ ಇಂಟರ್ನೆಟ್ ಪ್ರಾರಂಭವಾಯಿತು ಅದೇ ಸಮಯದೊಂದಿಗೆ ಜನಿಸಿದ ಮಕ್ಕಳೇ ಇವರು. 
    • ಅದಲ್ಲದೆ ಡಿಜಿಟಲ್ ಯುಗ ಸೇರಿದಂತೆ ಇನ್ನಿತರ ಬದಲಾವಣೆಗಳೊಂದಿಗೆ ಈ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಂಡರು.
    • 1990ಕ್ಕು ಮುನ್ನ ಮೊಬೈಲ್ ಎನ್ನುವುದು ಒಂದು ವಸ್ತುವಾಗಿತ್ತು. ಆದರೆ ಇದರ ನಂತರ ಇಂಟರ್ನೆಟ್ ಪ್ರಾರಂಭವಾದಂತೆ ಮೊಬೈಲ್ ಎಂಬುದು ಜೀವನದ ಒಂದು ಅವಿಭಾಜ್ಯ ಅಂಗವಾಗಿ ಬದಲಾಗಲು ಪ್ರಾರಂಭವಾಯಿತು. 
    • ಈ GEN-Z ಯುಗವು ಇಂಟರ್ನೆಟ್, ಸೋಶಿಯಲ್ ಮೀಡಿಯಾ ಮತ್ತು ಮೊಬೈಲ್ ಜ್ಞಾನದೊಂದಿಗೆ ಬೆಳೆದು ಬಂದ ಮೊದಲ ಪೀಳಿಗೆ ಇದಾಗಿದೆ.
    • ಈ ಪೀಳಿಗೆ ವರ್ಚುಯಲ್ ಹಾಗೂ ಆಫ್ಲೈನ್ ಅನುಭವಗಳನ್ನ ಪಡೆದುಕೊಳ್ಳುತ್ತಾ ಬೆಳೆದ ಯುಗ ಇದಾಗಿದೆ. ಅತ್ಯಂತ ವೈವಿಧ್ಯಮಯ ಯುಗ ಎಂದರೆ ತಪ್ಪಾಗಲಿಕ್ಕಿಲ್ಲ. 
    • ಈ ಯುಗದಲ್ಲಿ ಪ್ರಾರಂಭವಾದ ಪ್ರತಿಯೊಂದು ತಂತ್ರಜ್ಞಾನ ಸಮಾಜಕ್ಕೆ ಹೆಚ್ಚಿನ ಲಾಭವನ್ನು ಕೊಡುತ್ತಲೇ ಬರುತ್ತದೆ. 
    • 1997 ರಿಂದ 2012ರ ಮಧ್ಯದಲ್ಲಿ ಜನಿಸಿದ 13 ರಿಂದ 28 ವರ್ಷದ ಒಳಗಿನವರನ್ನು ಈ GEN-Z ಗೆ ಸೇರಿಸಲಾಗುತ್ತದೆ. 
    • ಇನ್ನು GEN-Z ಸಮಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಬಂದ ನಂತರ ಇದರ ಬಳಕೆ ಹೆಚ್ಚಾಗಿ ಪ್ರಾರಂಭವಾಯಿತು. ಮೊಬೈಲ್, ಸಾಮಾಜಿಕ ಮಾಧ್ಯಮ ಹಾಗೂ ಅಂತರ್ಜಾಲದ ಪ್ರಭಾವ ಜನರ ಮೇಲೆ ಹೆಚ್ಚಾಗಲು ಪ್ರಾರಂಭಿಸಿತು.  

    GEN-Zಗೂ ಮುನ್ನ ಇದೇ ರೀತಿ ಹಲವು ಯುಗಗಳೆಂದು ಗುರುತಿಸಲಾಗಿತ್ತು. 

    • The Greatest Generation 1901-1927 : ಈ ಪೀಳಿಗೆಯು ಎರಡನೇ ಮಹಾಯುದ್ಧದ ಸಮಯದಲ್ಲಿ ಪ್ರಬುದ್ಧವಾಯಿತು. ಈ ಸಮಯದಲ್ಲಿ ತಮ್ಮ ಕೆಲಸ ಹಾಗೂ ತ್ಯಾಗದಿಂದಲೇ ಹೆಸರುವಾಸಿಯಾಗಿದ್ದಾರೆ. 
    • The Silent Generation 1928-1945:  Greatest Generation ಪೀಳಿಗೆಯ ನೆರಳಿನಲ್ಲಿ ಬೆಳೆದ ಈ ಯುಗವು ಯುದ್ಧದ ಸಮಯದಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸಿತು. 
    • Baby Boomers 1946-1964: ಎರಡನೇ ಮಹಾಯುದ್ಧದ ನಂತರ ಸಂಭವಿಸಿದ “ಬೇಬಿ ಬೂಮ್” ನಿಂದ ಈ ಪೀಳಿಗೆಗೆ ಈ ಹೆಸರು ಬಂದಿದೆ. ಬೂಮರ್‌ಗಳು 1960 ಮತ್ತು 70ರ ದಶಕದ ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, 
    • Generation X 1965-1980: ಒಂದೇ ಕುಟುಂಬದಲ್ಲಿ ಇಬ್ಬರು ಆದಾಯ ಪಡೆಯುವವರು ಹಾಗೂ  ತಾಯಿ ಅಥವಾ ತಂದೆ ಮಾತ್ರ ಇರುವ ಕುಟುಂಬದಲ್ಲಿ ಕೆಲವು ಮಕ್ಕಳು ಅಗತ್ಯ ಮೀರಿ ಕಾಳಜಿಯಲ್ಲಿ  ಬೆಳೆದವು. ಹೀಗಾಗಿ ಜೆನ್ X ಎಂದು ಕರೆದರು. ಇದೇ ಯುಗದಲ್ಲಿ ಕಂಪ್ಯೂಟರ್‌ ಹಾಗೂ ತಂತ್ರಜ್ಞಾನದ ಉದಯವಾಯಿತು.
    • Millennials 1981-1996: ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮದ ಬೆಳವಣಿಗೆಯೊಂದಿಗೆ ಬೆಳೆದ ಮೊದಲ ಪೀಳಿಗೆ. 
    • Generation Z  1997-2012:1997ರ ಮಧ್ಯದಿಂದ 2012ರ ಮೊದಲ ಭಾಗದವರೆಗೆ ಜನಿಸಿದ ಮಕ್ಕಳನ್ನು ನಾವು GEN-Z ಯುಗದವರು ಎಂದು ಕರೆಯಲಾಗುತ್ತದೆ. ಈ ಯುಗದಲ್ಲಿ ಹುಟ್ಟಿದ ಮಕ್ಕಳು ಜಗತ್ತಿನಲ್ಲಿ ಪ್ರಾರಂಭವಾದ ಕೌತುಕ ಮೂಡಿಸುವ ತಾಂತ್ರಿಕ ಯುಗದೊಂದಿಗೆ ಬೆಳೆದವರು. ಅದಲ್ಲದೆ ಈ ಮಕ್ಕಳು ಹೊಸ ಹೊಸ ಸಂಸ್ಕೃತಿ ಹಾಗೂ ವಿಭಿನ್ನ ಕಲೆಯನ್ನು ತಮ್ಮೊಂದಿಗೆ ಬೆಳೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಯುಗದ ಮಕ್ಕಳನ್ನು GEN-Z ಎಂದು ಕರೆಯುತ್ತಾರೆ. 
    • Generation Alpha 2013-2024: GEN-Z ಪ್ರಾರಂಭವಾದಂತೆ 2012ರ ನಂತರ ಅಂದರೆ 2013 ರಿಂದ 2020 ರ ವರೆಗೆ ಜನಿಸಿದ ಮಕ್ಕಳನ್ನು ಈ ಯುಗಕ್ಕೆ ಸೇರಿಸಲಾಗುತ್ತದೆ. GEN-Z ಯುಗವನ್ನು ಸಂಪೂರ್ಣವಾಗಿ ಅನುಸರಿಸಿಕೊಂಡು ಬಂದ ಯುಗವನ್ನು GEN- ALPHA ಎಂದು ಕರೆಯಲಾಗುತ್ತದೆ. ಈ ಯುಗದಲ್ಲಿ ಕೃತಕ ಬುದ್ಧಿಮತ್ತೆಯನ್ನು ತಮ್ಮ ದೈನಂದಿನ ಜೀವನದ ಭಾಗವನ್ನಾಗಿಸಿಕೊಂಡು ಡಿಜಿಟಲ್‌ ಜಗತ್ತಿನಲ್ಲಿ ಮುಂದುವರೆಯುತ್ತಿದ್ದಾರೆ.
    • Generation Beta 2025-2039: ಇದು ಮುಂದಿನ ಪೀಳಿಗೆಯಾಗಿದ್ದು, ಇವರನ್ನು ಜೆನ್‌ Z ನ ಮಕ್ಕಳು ಎನ್ನುತ್ತಾರೆ. 

    GEN-Zಗೂ ನೇಪಾಳ ದಂಗೆಗೂ ಸಂಬಂಧವೇನು?

    ಇತ್ತೀಚಿಗೆ ನೇಪಾಳದಲ್ಲಿ ಯುವಜನರ ದಂಗೆ ಭುಗಿಲೆದ್ದಿತ್ತು. ಹೌದು ನೇಪಾಳ ಸರ್ಕಾರವು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳನ್ನು ಬಂದ್ ಮಾಡಿದ ಪರಿಣಾಮ ದೊಡ್ಡಮಟ್ಟದ ದಂಗೆ ಪ್ರಾರಂಭವಾಗಿತ್ತು. ಈ ಸಮಯದಲ್ಲಿ ಅಲ್ಲಿನ ಯುವಕರು ವಿಪರೀತಮಟ್ಟಕ್ಕೆ ಹೋಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಈ ದಂಗೆಗೆ ನಿಂತ ಆ ಯುವಪೀಳಿಗೆ GEN-Z ಯುಗಕ್ಕೆ ಸೇರಿದ್ದು. 

    ನೇಪಾಳ ಸರ್ಕಾರ ದೇಶದಲ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳನ್ನು ನಿಯಂತ್ರಣಕ್ಕೆ ತರುವ ದೃಷ್ಟಿಯಿಂದ ಕೆಲವು ನಿಯಮಗಳನ್ನ ಜಾರಿ ಮಾಡಿತು. Social networks use management directive 2023ರ ಅಡಿಯಲ್ಲಿ ಸ್ಥಳೀಯವಾಗಿರಲಿ ಅಥವಾ ಬೇರೆ ದೇಶದ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆಗಿರಲಿ. ಇದೆಲ್ಲವನ್ನ ನಿಯಂತ್ರಣಕ್ಕೆ ತರುವ ದೃಷ್ಟಿಯಿಂದ  ನೇಪಾಳದ ಸಂವಾದ, ಮಾಧ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನಿರ್ಧರಿಸಿತ್ತು. ಈ ಸಚಿವಾಲಯದ ಅಡಿಯಲ್ಲಿ ಪ್ಲಾಟ್ ಫಾರ್ಮ್ ಗಳು ನೋಂದಣಿ ಮಾಡಿಸಿಕೊಳ್ಳಬೇಕಿತ್ತು. ಈ ನೋಂದಣಿಗಾಗಿ ಒಂದು ಸೀಮಿತ ಅವಧಿಯನ್ನು ನೀಡಿತ್ತು. ಒಂದು ವೇಳೆ ನೋಂದಣಿ ಮಾಡಿಕೊಳ್ಳದಿದ್ದರೆ ಫ್ಲಾಟ್ ಫಾರ್ಮ್ ಗಳನ್ನು ನಿರ್ಬಂಧ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆ ನಿಯಮಗಳನ್ನು ಪಾಲಿಸಿದ ಪ್ಲಾಟ್ ಫಾರ್ಮ್ ಗಳನ್ನು ಮುಕ್ತಾಯ ದಿನಾಂಕದ ಬಳಿಕ ನಿರ್ಬಂಧಿಸಿತ್ತು. ಅದರಂತೆ ನೇಪಾಳದಲ್ಲಿ ಸೆಪ್ಟಂಬರ್ 4ರಂದು ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಪ್, ಯೂಟ್ಯೂಬ್, X ಸೇರಿದಂತೆ 26 ಸಾಮಾಜಿಕ ಮಾಧ್ಯಮ ಆಪ್ ಹಾಗೂ ಸೈಟ್ಗಳ ಮೇಲೆ ನಿರ್ಬಂಧ ಹೇರಿತ್ತು. 

    ನಿರ್ಬಂಧದ ಬೆನ್ನಲ್ಲೇ ಈ GEN-Z ಯುವಕರು ಪ್ರತಿಭಟನೆಗಿಳಿದರು. ಯುವಕರ ಮೇಲಿನ ವಾಕ್ ಸ್ವಾತಂತ್ರ್ಯ ಕಸಿದುಕೊಂಡಿತು ಹಾಗೂ ಈ ಮೂಲಕ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಯುವಕರು ಮುಗಿಬಿದ್ದರು. ನೇಪಾಳದ ರಾಜಧಾನಿ ಕಠ್ಮಂಡು ಸೇರಿದಂತೆ ಬೇರೆ ಬೇರೆ ನಗರಗಳಲ್ಲಿ ಆಕ್ರೋಶ ಹೊರಹಾಕಿದರು. 

    ಈ ಪ್ರತಿಭಟನೆಯಲ್ಲಿ 72 ಜನರು ಸಾವನ್ನಪ್ಪಿದರೆ, ಇನ್ನು ಹಲವರು ಗಾಯಗೊಂಡರು. ಈ ಪ್ರತಿಭಟನೆ ಬಳಿಕ ಸೆಪ್ಟೆಂಬರ್ 8-9ರ ನಡುವೆ ನೇಪಾಳ ಸರ್ಕಾರ ತನ್ನ ಸೋಶಿಯಲ್ ಮೀಡಿಯಾ ಬ್ಯಾನ್ ನಿರ್ಧಾರವನ್ನು ಹಿಂತೆಗೆದುಕೊಂಡಿತು. ಅದರಂತೆ ಸದ್ಯ ಬ್ಯಾನ್ ಆಗಿದ್ದ 26 ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ಗಳು ಮತ್ತೆ ಕಾರ್ಯಾರಂಭಿಸಿದವು.

  • ನೇಪಾಳ ಪ್ರಧಾನಿ ಹುದ್ದೆ ರೇಸಲ್ಲಿ ಕರ್ನಾಟಕದ ಎಂಟೆಕ್ ಪದವೀಧರ

    ನೇಪಾಳ ಪ್ರಧಾನಿ ಹುದ್ದೆ ರೇಸಲ್ಲಿ ಕರ್ನಾಟಕದ ಎಂಟೆಕ್ ಪದವೀಧರ

    ಕಠ್ಮಂಡು: ಸೋಷಿಯಲ್ ಮೀಡಿಯಾ ಬ್ಯಾನ್‌ನಿಂದಾಗಿ ಶುರುವಾದ ದಂಗೆಯ ಬೆನ್ನಲ್ಲೇ ರಾಜೀನಾಮೆ ನೀಡಿರುವ ನೇಪಾಳದ ಪ್ರಧಾನಿ ಓಲಿ ಸ್ಥಾನಕ್ಕೆ ಇದೀಗ ಕರ್ನಾಟಕದ ಎಂಟೆಕ್ ಪದವೀಧರನಾಗಿರುವ ರ‍್ಯಾಪರ್ ಬಲೇನ್ ಶಾ ಹೆಸರು ಜೋರಾಗಿ ಕೇಳಿ ಬರುತ್ತಿದೆ.

    ನೇಪಾಳದಲ್ಲಿ ಹೊಸತಲೆಮಾರಿನ ಯುವಜನ (GEN-Z) ದಂಗೆಯಿಂದಾಗಿ ನೇಪಾಳದ (Nepal) ಪ್ರಧಾನಿ ಸ್ಥಾನಕ್ಕೆ ಸೆ.9ರಂದು ಕೆ.ಪಿ.ಶರ್ಮಾ ಓಲಿ (KP Sharma Oli) ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಎಂಟೆಕ್ ಪದವೀಧರ ಪಿಎಂ ರೇಸ್‌ನಲ್ಲಿದ್ದಾರೆ ಎನ್ನಲಾಗುತ್ತಿದೆ.ಇದನ್ನೂ ಓದಿ: ನೇಪಾಳ ಧಗ ಧಗ – ಉದ್ರಿಕ್ತರಿಂದ ಮನೆಗೆ ಬೆಂಕಿ, ಮಾಜಿ ಪ್ರಧಾನಿ ಪತ್ನಿ ಸಾವು

    ಸದ್ಯ ನೇಪಾಳದ ರಾಜಧಾನಿ ಕಠ್ಮಂಡುವಿನ ಮೇಯರ್ ಆಗಿರುವ ಬಲೇನ್ ಅಲಿಯಾಸ್ ಬಲೇಂದ್ರಗೆ ಯುವಜನರ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಬಲೇನ್ ಅವರೇ ಮುಂದಿನ ಪ್ರಧಾನಿ ಆಗಬೇಕು, ಯುವಜನರ ಆಶೋತ್ತರ ಈಡೇರಿಸಲು ಅವರೇ ಸೂಕ್ತ ಎಂಬ ಒತ್ತಾಯ ಜಾಲತಾಣದಲ್ಲಿ ಕೇಳಿಬರುತ್ತಿದೆ. ಇವರ ಜೊತೆಗೆ ಸಂಸದೆ ಸುಮನಾ ಶ್ರೇಷ್ಠ ಅವರ ಹೆಸರೂ ಕೂಡ ಮುನ್ನೆಲೆಗೆ ಬಂದಿದೆ.

    ಸದ್ಯ 35 ವರ್ಷದ ಬಲೇಂದ್ರ ಅವರ ಪರವಾಗಿ ಆನ್‌ಲೈನ್‌ನಲ್ಲಿ ದೇಶಾದ್ಯಂತ ದೊಡ್ಡಮಟ್ಟದ ಕ್ಯಾಂಪೇನ್ ನಡೆಯುತ್ತಿದೆ. ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಯುವಜನರು ಯುವ ಮುಖವೊಂದನ್ನು ದೇಶದ ಪ್ರಧಾನಿ ಸ್ಥಾನದಲ್ಲಿ ತಂದು ಕೂರಿಸುವ ಬೇಡಿಕೆ ಇಡುತ್ತಿದ್ದಾರೆ.

    ಬಲೇನ್ ಹಿನ್ನೆಲೆ ಏನು?
    1990ರಲ್ಲಿ ಜನಿಸಿರುವ ಬಲೇನ್ ಅವರು ಎಂಜಿನಿಯರಿಂಗ್ ಪದವೀಧರ. ಕಠ್ಮಂಡುವಿನಲ್ಲಿ ಎಂಜಿನಿ ಯರಿಂಗ್ ಮುಗಿಸಿ ಅವರು, ಬಳಿಕ ಕರ್ನಾಟಕದ ಬೆಳಗಾವಿಯಲ್ಲಿ ಕೇಂದ್ರ ಸ್ಥಾನ ಹೊಂದಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ಸ್ಟçಕ್ಚರಲ್ ಎಂಜಿನಿಯರಿAಗ್‌ನಲ್ಲಿ ಎಂಟೆಕ್ ಪದವಿ ಪಡೆದಿದ್ದಾರೆ.

    ರಾಜಕೀಯಕ್ಕೆ ಕಾಲಿಡುವ ಮೊದಲು ಶಾ ನೇಪಾಳದ ಭೂಗತ ಹಿಪ್ ಆಫ್‌ನಲ್ಲಿದ್ದು ಸದ್ದು ಮಾಡಿದವರು. ರ‍್ಯಾಪರ್ ಆಗಿ, ಸಾಹಿತಿಯಾಗಿ ಯುವಜನರ ಗಮನಸೆಳೆದವರು. ಬಳಿಕ 2022ರಲ್ಲಿ ಕಠ್ಮಂಡು ಮೇಯರ್ ಚುನಾವಣೆಗೆ ಸ್ಪರ್ಧಿಸಿ ಸಿಪಿಎನ್ (ಯುಎಂಎಲ್) ಅಭ್ಯರ್ಥಿ ವಿರುದ್ಧ 61,000 ಮತಗಳ ಅಂತರದಿಂದ ಗೆದ್ದಿದ್ದರು. ನೇಪಾಳಿ ರ‍್ಯಾಪ್ ಬ್ಯಾಟಲ್ ಲೀಗ್‌ನ 2ನೇ ಆವೃತ್ತಿಯ ವಿನ್ನರ್ ಕೂಡ ಆಗಿರುವ ಬಲೇಂದ್ರ ಸಾಮಾಜಿಕ ಜಾತಾಣದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ.ಇದನ್ನೂ ಓದಿ: ನೇಪಾಳದಲ್ಲಿ ಅಲ್ಲೋಲ ಕಲ್ಲೋಲ – ಹಣಕಾಸು ಸಚಿವನನ್ನ ಬೀದಿಯಲ್ಲಿ ಅಟ್ಟಾಡಿಸಿ ಹೊಡೆದ ಉದ್ರಿಕ್ತರು