Tag: Gehana Vasishta

  • ಸೆಕ್ಸ್ ವೀಡಿಯೋ ಅಪ್ಲೋಡ್- ನಟಿ ಗೆಹನಾ ಅರೆಸ್ಟ್

    ಸೆಕ್ಸ್ ವೀಡಿಯೋ ಅಪ್ಲೋಡ್- ನಟಿ ಗೆಹನಾ ಅರೆಸ್ಟ್

    ಮುಂಬೈ: ವೆಬ್‍ಸೈಟ್ ನಲ್ಲಿ ಸೆಕ್ಸ್ ವಿಡಿಯೋ ಅಪ್ಲೋಡ್ ಮಾಡಿದ ಆರೋಪದಡಿ ನಟಿ ಗೆಹನಾ ವಸಿಷ್ಠರನ್ನ ಪೊಲೀಸರು ಬಂಧಿಸಿದ್ದಾರೆ.

    ಪೋರ್ನ್ ವೀಡಿಯೋ ಶೂಟಿಂಗ್ ಮತ್ತು ಅಪ್ಲೋಡ್ ಮಾಡಿದ ಆರೋಪದಡಿ ನಟಿಯನ್ನ ಬಂಧಿಸಲಾಗಿದೆ. ಇಂದು ನ್ಯಾಯಾಲಯದ ಮುಂದೆ ನಟಿಯನ್ನ ಹಾಜರುಪಡಿಸಲಾಗುವುದು ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

    ಮಧ್ಯ ಪ್ರದೇಶ ಮೂಲದ ಗೆಹನಾ ಖಾಸಗಿ ವಾಹಿನಿಯ ನಿರೂಪಕಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ತದನಂತರ ಮಾಡೆಲ್ ಲೋಕದಲ್ಲಿ ಗುರುತಿಸಿಕೊಂಡ ಗೆಹಾನ ಸುಮಾರು 80 ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾಡೆಲ್ ಲೋಕಕ್ಕೆ ಬಂದ ಬಳಿಕ ವಂದನಾ ಹೆಸರನ್ನ ಗೆಹನಾ ಆಗಿ ಬದಲಿಸಿಕೊಂಡಿದ್ದರು. ಹಲವು ಸಿನಿಮಾಗಳಲ್ಲಿ ಗೆಹಾನ ಕಾಣಿಸಿಕೊಂಡಿದ್ದು ತಮ್ಮ ಹಾಟ್ ಮೂವ್ ಗಳಿಂದಲೇ ಹೆಚ್ಚು ಸದ್ದು ಮಾಡಿದ್ದಾರೆ. ಇನ್ನೂ ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಗೆಹನಾ ಕೆಲ ದಿನಗಳ ಹಿಂದೆ ಬೀಚ್ ಬಳಿ ಬಿಕಿನಿ ತೊಟ್ಟು ಪೋಸ್ ನೀಡಿದ್ದರು.