ರಾಕಿಂಗ್ ಸ್ಟಾರ್ ಯಶ್ ಅವರು ‘ಕೆಜಿಎಫ್ 2’ (KGF 2) ಸಕ್ಸಸ್ ನಂತರ ಟಾಕ್ಸಿಕ್ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಮುಹೂರ್ತ ಆದ್ಮೇಲೆ ಇದರ ಬಗ್ಗೆ ಏನು ಅಪ್‌ಡೇಟ್ ಸಿಗುತ್ತಿಲ್ಲ ಎಂದು ನಿರಾಸೆಯಲ್ಲಿದ್ದ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ‘ಟಾಕ್ಸಿಕ್’ ಚಿತ್ರದ್ದೇ ಎನ್ನಲಾದ ನಟನ ನಯಾ ಲುಕ್ ರಿವೀಲ್ ಆಗಿದೆ. ವಕೀಲ್ ಸಾಬ್ ಗೆಟಪ್‌ನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿಯನ್ನು ದೈವದ ಪಾದಕ್ಕೆ ಅರ್ಪಿಸುತ್ತೇನೆ: ರಿಷಬ್ ಶೆಟ್ಟಿ
ಯಶ್ (Yash) ನಟನೆಯ ಮುಂಬರುವ ಸಿನಿಮಾ ‘ಟಾಕ್ಸಿಕ್’ (Toxic) ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಹೀಗಿರುವಾಗ ಕಪ್ಪು ಕೋಟ್ ಧರಿಸಿ ಲಾಯರ್ ಗೆಟಪ್‌ನಲ್ಲಿ ಸ್ಟೈಲೀಶ್ ಆಗಿ ಯಶ್ ಕಾಣಿಸಿಕೊಂಡಿರುವ ತುಣುಕೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೇಳೆ, ಸೆಟ್‌ಗೆ ತೆರಳಿದ ಸಂದರ್ಭದಲ್ಲಿ ನಟಿ ರಾಧಿಕಾ ಪಂಡಿತ್ ಕೂಡ ಯಶ್ ಜೊತೆ ಕಾಣಿಸಿಕೊಂಡಿದ್ದಾರೆ. ಒಟ್ನಲ್ಲಿ ನಟನ ಹೊಸ ಗೆಟಪ್‌ನಲ್ಲಿ ನೋಡಿ ಫ್ಯಾನ್ಸ್ ಸಂಭ್ರಮಿಸಿದ್ದಾರೆ.
ಯಶ್ ನಟನೆಯ ಟಾಕ್ಸಿಕ್ (Toxic) ಸಿನಿಮಾವನ್ನು ಗೀತು ಮೋಹನ್ ದಾಸ್ (Geethu Mohan Das) ನಿರ್ದೇಶನ ಮಾಡಲಿದ್ದಾರೆ ಎನ್ನುವ ವಿಷಯ ಬಿಟ್ಟರೆ, ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದ ಒಂದೇ ಒಂದು ಫೋಟೋ ಕೂಡ ಆಚೆ ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಯಶ್ ಮತ್ತು ಗೀತು ಅವರ ಫೋಟೋ ಸಿಕ್ಕಿದೆ. ಗೋವಾದಲ್ಲಿ ಸಿನಿಮಾದ ಶೂಟಿಂಗ್ ನಡೆದಿದ್ದು, ಆ ಫೋಟೋ ಅದು ಎನ್ನಲಾಗುತ್ತಿದೆ.
ಟೆಂಪಲ್ರನ್ಮುಗಿಸಿಕೊಂಡುಸದ್ಯಯಶ್ (Yash) ಗೋವಾದಲ್ಲಿ (Goa) ಬೀಡುಬಿಟ್ಟಿದ್ದಾರೆ. ಗೋವಾದಏರ್ಪೋರ್ಟ್ನಲ್ಲಿಕಾಣಿಸಿಕೊಂಡುಅಭಿಮಾನಿಗಳಿಗೆಅಚ್ಚರಿಮೂಡಿಸಿದ್ದರು. ಸದ್ಯಅವರುಗೋವಾನಲ್ಲಿಬೀಡುಬಿಟ್ಟಿರೋದುಟಾಕ್ಸಿಕ್ಸಿನಿಮಾದಶೂಟಿಂಗ್ಗಾಗಿಎನ್ನುವವಿಚಾರಹರಿದಾಡುತ್ತಿತ್ತು. ಅದು ಈಗ ನಿಜವಾಗಿದೆ. ಶೂಟಿಂಗ್ ಸಮಯದ್ದು ಎನ್ನಲಾದ ಫೋಟೋ ವೈರಲ್ ಆಗಿದೆ.
ಟಾಕ್ಸಿಕ್ಸಿನಿಮಾದಬಗ್ಗೆಯಾವುದೇಅಪ್ಡೇಟ್ನೀಡದಯಶ್ಮೊನ್ನೆಯಷ್ಟೇಈಕುರಿತಂತೆಮಾತನಾಡಿದ್ದರು. ತಮ್ಮ 19ನೇಸಿನಿಮಾದಪ್ರಾಜೆಕ್ಟ್ಎಲ್ಲಿಗೆಬಂತು? ಎಂಬುದರಬಗ್ಗೆಸುದ್ದಿಗೋಷ್ಠಿಯೊಂದರಲ್ಲಿಮಾತನಾಡಿದ್ದರು. ಡೈರೆಕ್ಟರ್ಗೀತುಮೋಹನ್ದಾಸ್ನಿರ್ದೇಶನದಲ್ಲಿಈಸಿನಿಮಾಮೂಡಿಬರುತ್ತಿದ್ದು, ಕೆವಿಎನ್ಸಂಸ್ಥೆಜೊತೆಯಶ್ಕೈಜೋಡಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ (Yash) ಈ ಬಾರಿ ಪ್ಯಾನ್ ಇಂಡಿಯಾವನ್ನೂ ದಾಟಿಕೊಂಡು ಯೋಚನೆ ಮಾಡಿದ್ದಾರೆ. ಸಿನಿಮಾದ ಟೈಟಲ್ ಮತ್ತು ಆಯ್ಕೆ ಮಾಡಿಕೊಂಡಿರುವ ಕಥೆ ನೋಡಿದರೆ, ಇದೊಂದು ಹಾಲಿವುಡ್ ರೇಂಜ್ ನಲ್ಲಿ ತಯಾರಾಗುತ್ತಿರುವ ಕನ್ನಡದ ಸಿನಿಮಾ ಎಂದೇ ಹೇಳಬಹುದು. ಯಾವುದೇ ಭಾಷೆಯಲ್ಲಿ ಈ ಸಿನಿಮಾ ಬಂದರೂ, ಅದಕ್ಕೆ ತೊಂದರೆ ಆಗದಿರುವಂತೆ ‘ಟಾಕ್ಸಿಕ್’ (Toxic) ಎಂದು ಹೆಸರಿಟ್ಟಿದ್ದಾರೆ. ಇದು ಎಲ್ಲ ಭಾಷೆಗೂ ಸಲ್ಲುವಂತೆ ಟೈಟಲ್ ಆಗಿದೆ.
ಇದರ ಜೊತೆಗೆ ಮತ್ತೊಂದು ವಿಷಯವೂ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಅದಕ್ಕೆ ಪುಷ್ಠಿ ಎನ್ನುವಂತೆ ಇಂದು ರಿಲೀಸ್ ಆಗಿರುವ ಟೈಟಲ್ ಟೀಸರ್ ನಲ್ಲಿ ಅದರ ಛಾಯೆ ಕೂಡ ಇದೆ. ಟಾಕ್ಸಿಕ್ ಸಿನಿಮಾದಲ್ಲಿ ಇಂಟರ್ ನ್ಯಾಷನಲ್ ಡ್ರಗ್ಸ್ ಮಾಫಿಯಾ ಕುರಿತಾದ ಕಥೆಯನ್ನು ಹೇಳಲಿದ್ದಾರಂತೆ ನಿರ್ದೇಶಕ ಗೀತು ಮೋಹನದಾಸ್ (Geethu Mohan Das). ಟೈಟಲ್ ಟೀಸರ್ ನಲ್ಲಿ ಒಂದು ಕಡೆ ಯಶ್ ಕೈಯಲ್ಲಿ ಗನ್, ಬಾಯಲ್ಲಿ ಸಿಗಾರೆ ಮತ್ತು ಅವನ ಸುತ್ತಮುತ್ತ ಪೌಡರ್ ಹಾರುತ್ತಿದೆ. ಹಾಗಾಗಿ ಇದೊಂದು ಡ್ರಗ್ಸ್ ಮಾಫಿಯಾದ ಕಥೆ ಎಂದು ಹೇಳಲಾಗುತ್ತಿದೆ.
ಮತ್ತೊಂದು ಅಚ್ಚರಿಯ ಸಂಗತಿ ಅಂದರೆ, ಈ ಚಿತ್ರದ ಮೂಲಕ ಯಶ್ ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೆವಿಎನ್ ಪ್ರೊಡಕ್ಷನ್ (KVN Production) ಜೊತೆ ಮಾನ್ ಸ್ಟರ್ ಮೈಂಡ್ ಕ್ರಿಯೇಸನ್ಸ್ ಹೆಸರು ಕೂಡ ಇದ್ದು, ಈ ಸಂಸ್ಥೆಯು ಯಶ್ ಅವರದ್ದು ಎಂದು ಹೇಳಲಾಗುತ್ತಿದೆ. 2019 ರಲ್ಲಿ ಮಾನ್ ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಯನ್ನು ಯಶ್ ನೋಂದಣಿ ಮಾಡಿದ್ದಾರೆ. ಇದೀಗ ತಮ್ಮ 19ನೇ ಸಿನಿಮಾ ಮೂಲಕ ನಿರ್ಮಾಪಕರಾಗಿಯೂ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ತಮ್ಮ ಸಂಸ್ಥೆಯ ಮೂಲಕ ಅಂತರಾಷ್ಟ್ರೀಯ ಮಟ್ಟದ ಸಿನಿಮಾಗಳನ್ನ ನಿರ್ಮಾಣ ಮಾಡಲು ಯಶ್ ನಿರ್ಧಾರ ಮಾಡಿದ್ದಾರೆ.
ಈ ನಡುವೆ ಮತ್ತೊಂದು ಹೊಸ ವಿಷಯ ಹರಿದಾಡುತ್ತಿದೆ. ಮೊನ್ನೆಯಷ್ಟೇ ಈ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಕೇವಲ ಒಬ್ಬರು ನಾಯಕಿಯರಲ್ಲ, ಮೂವರು ನಾಯಕಿಯರು ಇರಲಿದ್ದಾರೆ ಎನ್ನುವುದು ಲೇಟೆಸ್ಟ್ ಮಾಹಿತಿ. ಸಾಯಿ ಪಲ್ಲವಿ, ಮೃಣಾಲ್ ಠಾಕೂರ್ ಹೀಗೆ ಮೂವರು ಹಿರೋಯಿನ್ ಚಿತ್ರದಲ್ಲಿ ಪಾತ್ರವಾಗಲಿದ್ದಾರಂತೆ.
ತಮ್ಮ ಹೊಸ ಸಿನಿಮಾದ ಟೈಟಲ್ (Title) ಅನ್ನು ಡಿ.8ರಂದು ಬೆಳಗ್ಗೆ 9:55ಕ್ಕೆ ಲಾಂಚ್ ಮಾಡುವುದಾಗಿ ರಾಕಿಭಾಯ್ ಘೋಷಣೆ ಮಾಡಿದ್ದಾಗ, 9:55ಕ್ಕೆ ಸಮಯ ನಿಗದಿ ಆಗಿದ್ದು ಏಕೆ? ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಲಾಂಚ್ ಮಾಡಿದರೆ ಒಳ್ಳೆಯದಾ? ಅಥವಾ ಯಾರಾದರೂ ಅದೇ ಸಮಯವನ್ನು ನಿಗದಿ ಮಾಡಿದ್ದಾರಾ ಎನ್ನುವ ಚರ್ಚೆ ಕೂಡ ಶುರುವಾಗಿದೆ.
ಉತ್ತರ ಸಿಂಪಲ್ ಎನ್ನುತ್ತವೆ ಮೂಲಗಳು. ಯಶ್ ಅವರ 19ನೇ ಸಿನಿಮಾ ಇದಾಗಿದ್ದು, 9+5+5 ಒಟ್ಟು ಮಾಡಿದರೆ 19 ಸಂಖ್ಯೆಯಾಗುತ್ತದೆ. ಹಾಗಾಗಿ ಈ ಸಮಯವನ್ನು ನಿಗದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಯಶ್ ಏನೇ ಮಾಡಿದರೂ ಹೊಸ ರೀತಿಯಲ್ಲಿ ಯೋಚಿಸುತ್ತಾರೆ. ಹಾಗಾಗಿ ಈ ಲೆಕ್ಕಾಚಾರವನ್ನು ಅವರು ಹೊಸದಾಗಿ ಯೋಚಿಸಿದ್ದಾರೆ. ಅದರಾಚೆ ಏನೂ ಇಲ್ಲ ಎನ್ನುತ್ತಾರೆ ಯಶ್ ಆಪ್ತರು.
ನಿರೀಕ್ಷಿತ ಯಶ್ (Yash) ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್ ಆಗಿದೆ. ಜಗತ್ತಿನ ಗಮನ ಸೆಳೆಯುವಂತಹ ಟೈಟಲ್ ಅನ್ನು ಅವರು ತಮ್ಮ ಚಿತ್ರಕ್ಕಾಗಿ ಇಟ್ಟಿದ್ದಾರೆ. ಟಾಕ್ಸಿಕ್ (Toxic) ಹೆಸರಿನಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಈ ಚಿತ್ರದ ಮೂಲಕ ಯಶ್ ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೆವಿಎನ್ ಪ್ರೊಡಕ್ಷನ್ (KVN Production) ಜೊತೆ ಮಾನ್ ಸ್ಟರ್ ಮೈಂಡ್ ಕ್ರಿಯೇಸನ್ಸ್ ಹೆಸರು ಕೂಡ ಇದ್ದು, ಈ ಸಂಸ್ಥೆಯು ಯಶ್ ಅವರದ್ದು ಎಂದು ಹೇಳಲಾಗುತ್ತಿದೆ.
2019 ರಲ್ಲಿ ಮಾನ್ ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಯನ್ನು ಯಶ್ ನೋಂದಣಿ ಮಾಡಿದ್ದಾರೆ. ಇದೀಗ ತಮ್ಮ 19ನೇ ಸಿನಿಮಾ ಮೂಲಕ ನಿರ್ಮಾಪಕರಾಗಿಯೂ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ತಮ್ಮ ಸಂಸ್ಥೆಯ ಮೂಲಕ ಅಂತರಾಷ್ಟ್ರೀಯ ಮಟ್ಟದ ಸಿನಿಮಾಗಳನ್ನ ನಿರ್ಮಾಣ ಮಾಡಲು ಯಶ್ ನಿರ್ಧಾರ ಮಾಡಿದ್ದಾರೆ.
ಈ ನಡುವೆ ಮತ್ತೊಂದು ಹೊಸ ವಿಷಯ ಹರಿದಾಡುತ್ತಿದೆ. ಮೊನ್ನೆಯಷ್ಟೇ ಈ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಕೇವಲ ಒಬ್ಬರು ನಾಯಕಿಯರಲ್ಲ, ಮೂವರು ನಾಯಕಿಯರ ಇರಲಿದ್ದಾರೆ ಎನ್ನುವುದು ಲೆಟೆಸ್ಟ್ ಮಾಹಿತಿ. ಸಾಯಿ ಪಲ್ಲವಿ, ಮೃಣಲಾ ಠಾಕೂರ್ ಹೀಗೆ ಮೂವರು ಹಿರೋಯಿನ್ ಚಿತ್ರದಲ್ಲಿ ಪಾತ್ರವಾಗಲಿದ್ದಾರಂತೆ.
ತಮ್ಮ ಹೊಸ ಸಿನಿಮಾದ ಟೈಟಲ್ (Title) ಅನ್ನು ಡಿ.8ರಂದು ಬೆಳಗ್ಗೆ 9.55ಕ್ಕೆ ಲಾಂಚ್ ಮಾಡುವುದಾಗಿ ರಾಕಿಭಾಯ್ ಘೋಷಣೆ ಮಾಡಿದ್ದಾಗ, 9.55ಕ್ಕೆ ಸಮಯ ನಿಗದಿ ಆಗಿದ್ದು ಏಕೆ? ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಲಾಂಚ್ ಮಾಡಿದರೆ ಒಳ್ಳೆಯದಾ? ಅಥವಾ ಯಾರಾದರೂ ಅದೇ ಸಮಯವನ್ನು ನಿಗದಿ ಮಾಡಿದ್ದಾರಾ ಎನ್ನುವ ಚರ್ಚೆ ಕೂಡ ಶುರುವಾಗಿದೆ.
ಉತ್ತರ ಸಿಂಪಲ್ ಎನ್ನುತ್ತವೆ ಮೂಲಗಳು. ಯಶ್ ಅವರ 19ನೇ ಸಿನಿಮಾ ಇದಾಗಿದ್ದು, 9+5+5 ಒಟ್ಟು ಮಾಡಿದರೆ 19 ಸಂಖ್ಯೆಯಾಗುತ್ತದೆ. ಹಾಗಾಗಿ ಈ ಸಮಯವನ್ನು ನಿಗದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಯಶ್ ಏನೇ ಮಾಡಿದರೂ ಹೊಸ ರೀತಿಯಲ್ಲಿ ಯೋಚಿಸುತ್ತಾರೆ. ಹಾಗಾಗಿ ಈ ಲೆಕ್ಕಾಚಾರವನ್ನು ಅವರು ಹೊಸದಾಗಿ ಯೋಚಿಸಿದ್ದಾರೆ. ಅದರಾಚೆ ಏನೂ ಇಲ್ಲ ಎನ್ನುತ್ತಾರೆ ಯಶ್ ಆಪ್ತರು. ಕೆಜಿಎಫ್, ಕೆಜಿಎಫ್ 2 (KGF 2) ಸಕ್ಸಸ್ ಬಳಿಕ ಯಶ್ ಸೈಲೆಂಟ್ ಆಗಿ ಮುಂದಿನ ಸಿನಿಮಾಗೆ ಭರ್ಜರಿ ತಯಾರಿ ಮಾಡಿಕೊಳ್ತಾ ಇದ್ದರು. ಇಷ್ಟು ತಿಂಗಳು ಅವರು ತೆಗೆದುಕೊಂಡಿದ್ದು ಯಾಕೆ ಎನ್ನುವುದಕ್ಕೆ ಟೈಟಲ್ ನಲ್ಲೇ ಹಲವು ಉತ್ತರಗಳಿವೆ.
ಕೊನೇ ಹಂತಕ್ಕೆ ಬಂದು ನಿಂತಿದೆ ಯಶ್ 19 (Yash 19) ಸಿನಿಮಾ. ಇನ್ನೂ ಆರಂಭವೇ ಆಗಿಲ್ಲ. ಅದು ಹೇಗೆ ಕೊನೆ ಹಂತ? ಪ್ರಶ್ನೆ ಏಳುತ್ತದೆ. ಉತ್ತರಕ್ಕೂ ಮುನ್ನ ಇದಕ್ಕೆಲ್ಲ ತಳಪಾಯ ಹಾಕಿದ ಆ ಮಹಿಳಾ ನಿರ್ದೇಶಕಿಯ ಸಿನಿಮಾ ಶ್ರದ್ಧೆ, ಭಕ್ತಿ ಹಾಗೂ ತ್ಯಾಗದ ಕತೆ ಕೇಳಲೇಬೇಕು. ಯಶ್ 19 ಚಿತ್ರದ ಆ ಮಲಯಾಳಂ ನಿರ್ದೇಶಕಿ ಯಾರು? ಹೇಗೆ ಯಶ್ ಮತ್ತು ನಿರ್ದೇಶಕಿ (Director) ಹೊಂದಿಕೊಂಡರು? ಎಂಟು ವರ್ಷದ ಮಗಳನ್ನು ಬಿಟ್ಟು ಆರು ತಿಂಗಳಿಂದ ಆ ಮಹಿಳೆ ಬೆಂಗಳೂರಿನಲ್ಲಿ ಹೇಗೆ ಕಾಯಕ ಮಾಡುತ್ತಿದ್ದಾರೆ? ಯಾವಾಗ ಆರಂಭ ರಾಕಿ ನಯಾ ಯುದ್ಧ? ಇಲ್ಲಿದೆ ಎಕ್ಸ್‌ಕ್ಲೂಸಿವ್ ಸ್ಟೋರಿ.
ಯಶ್ 19, ಭಕ್ತಗಣ ಈ ಸಿನಿಮಾದ ಸುದ್ದಿಯನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದಾರೆ. ಬರೀ ಫ್ಯಾನ್ಸ್ ಮಾತ್ರ ಅಲ್ಲ, ಇಡೀ ವಿಶ್ವವೇ ರಾಕಿಭಾಯ್ ಇಡುವ ಹೊಸ ಹೆಜ್ಜೆಯನ್ನು ಕಣ್ಣುಜ್ಜಿಕೊಂಡು ಕಾಯುತ್ತಿದ್ದಾರೆ. ಕೆಜಿಎಫ್ ಮುಗಿದು ವರ್ಷವಾಗುತ್ತಾ ಬಂತು. ಇನ್ನೇನು ಮತ್ತೆ? ಈ ಪ್ರಶ್ನೆ ಕೇಳಿದವರಿಗೆ ಯಶ್ ಉತ್ತರ ಒಂದೇ. ‘ವೇಟ್ ಮಾಡಿ ಬ್ರದರ್…ಕಾದಷ್ಟು ಹಣ್ಣಿನ ರುಚಿ ಜಾಸ್ತಿ’ ಗಡ್ಡದ ಮೇಲೆ ಕೈ ಎಳೆದುಕೊಳ್ಳುತ್ತಿದ್ದಾರೆ. ಅದೀಗ ಮುಗಿವ ಹಂತಕ್ಕೆ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅದ್ದೂರಿಯಾಗಿ ಟೈಟಲ್ ಹಾಗೂ ಉಳಿದ ವಿವರ ಹರವಿಡಲಿದ್ದಾರೆ ಯಶ್.ಇದನ್ನೂ ಓದಿ:ಶಿಕ್ಷಕಿ ಜೊತೆ ಸಪ್ತಪದಿ ತುಳಿಯಲು ಸಜ್ಜಾದ ಪೈಲ್ವಾನ್ ಖ್ಯಾತಿಯ ನಟ
ಕನ್ನಡ ಸ್ಟಾರ್‌ಗಳನ್ನು ಬಿಡಿ. ಅವರನ್ನು ದಾಟಿ ಯಶ್ (Yash) ಮುಂದೆ ಹೋಗಿದ್ದಾರೆ. ಅಥವಾ ಜನರು ಹಾಗಂತ ಆಶೀರ್ವಾದ ಮಾಡಿದ್ದಾರೆ. ಇನ್ನೇನಿದ್ದರೂ ಅವರದ್ದು ಪ್ಯಾನ್ ಇಂಡಿಯಾ ಲೆವೆಲ್. ಅದಕ್ಕೆ ತಕ್ಕಂತೆ ಕತೆ, ಚಿತ್ರಕತೆ, ಮೇಕಿಂಗ್ ಮಾಡಬೇಕು. ಎರಡು ಮೂರು ವರ್ಷದಿಂದ ಇದಕ್ಕಾಗಿ ತಪಸ್ಸು ಮಾಡಿದ್ದಾರೆ. ಹಲವಾರು ಸ್ಟಾರ್ ಡೈರೆಕ್ಟರ್‌ಗಳು ಭೇಟಿ ಮಾಡಿದ್ದಾರೆ. ಎಲ್ಲರ ಕತೆ ಕೇಳಿದ್ದಾರೆ. ಅದ್ಯಾಕೊ.. ರಾಕಿಭಾಯ್ ಮನಸು ಹುಚ್ಚೆದ್ದು ಕುಣಿಯಲಿಲ್ಲ. ಈ ಪಾತ್ರ ಮಾಡಲೇಬೇಕು ಅನ್ನಿಸಲಿಲ್ಲ. ಹುರುಪು ಮೂಡಿಸಲಿಲ್ಲ. ಯಾರ ಬಳಿ ಇದೆ ನಂಗೆ ಹೊಂದುವ ಕತೆ. ಯಾರು ನನ್ನನ್ನು ಹ್ಯಾಂಡಲ್ ಮಾಡುತ್ತಾರೆ. ಯೋಚನೆ ಜಾರಿಯಲ್ಲಿತ್ತು. ಆಗಲೇ ಬಂದು ನಿಂತರು ಗೀತು ಮೋಹನ್‌ದಾಸ್.
ರಾಜಮೌಳಿ, ಶಂಕರ್, ಸುಕುಮಾರ್, ಬನ್ಸಾಲಿ ಹೀಗೆ ದೇಶದ ಎಲ್ಲ ಭಾಷೆಯ ಟಾಪ್ ಸ್ಟಾರ್ ಡೈರೆಕ್ಟರ್ ಜೊತೆಯೇ ಯಶ್ ಹೊಸ ಸಿನಿಮಾ ಮಾಡ್ತಾರೆ ಬಿಡಪ್ಪ. ಈ ರೀತಿ ಎಲ್ಲರೂ ಅಂದುಕೊಂಡಿದ್ದರು. ಆ ಸಮಯದಲ್ಲಿ ಇದೇ ಸಮಾಚಾರ ಎಲ್ಲೆಡೆ ಧಗಧಗಿಸುತ್ತಿತ್ತು. ಯಾರು ಯಾರು ಯಾರು ಡೈರೆಕ್ಟರ್? ಉತ್ತರ ಸಿಗಲಿಲ್ಲ. ಈಗ ಎಲ್ಲದಕ್ಕೂ ಪೂರ್ಣ ವಿರಾಮವನ್ನು ಇಟ್ಟಿದ್ದಾರೆ. ಅಫ್‌ಕೋರ್ಸ್ ಅಧಿಕೃತವಾಗಿ ಯಶ್ ಟೀಮ್ ಹೇಳಿಲ್ಲ. ಆದರೆ ಖಬರ್ ಮಾತ್ರ ಪಕ್ಕಾ ಅಂದ್ರ ಪಕ್ಕಾ. ಆಗಲೇ ನೋಡಿ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಬೆಂಗಳೂರಿಗೆ ಕಾಲಿಟ್ಟಿದ್ದು, ಯಶ್‌ಗೆ ಕತೆ ಹೇಳಿದ್ದು ಮುಂದಾಗಿದ್ದು ಇತಿಹಾಸ. ಗೀತು, ಯಶ್ 19 ಚಿತ್ರಕ್ಕೆ ಕ್ಯಾಮೆರಾ ಹಿಡಿಯಲಿದ್ದಾರೆ ಅದರಲ್ಲಿ ನೋ ಡೌಟ್.
ಗೀತು ಮೋಹನ್‌ದಾಸ್ (Geethu Mohandas) ಈಗ ತಾನೇ ಈ ಹೆಸರನ್ನು ಕನ್ನಡಿಗರು ಕೇಳುತ್ತಿದ್ದಾರೆ. ಮಲಯಾಳಂನಲ್ಲಿ (Malyalam) ಇವರಿಗೆ ದೊಡ್ಡ ಹೆಸರಿದೆ. ಆದರೆ ಮಾಸ್ ಸಿನಿಮಾ ಕೆಟಗರಿಯಲ್ಲಿ ಅಲ್ಲ. ಇವರದ್ದು ಏನಿದ್ದರೂ ಒಂಥರಾ ಬ್ರಿಡ್ಜ್ ಅಥವಾ ಕಲಾತ್ಮಕ ಸಿನಿಮಾ. 42 ವರ್ಷದ ಗೀತು ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಾಲ ನಟಿ ಹಾಗೂ ನಟಿಯಾಗಿ ಮೂವತ್ತಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ. ಅನೇಕ ಪ್ರಶಸ್ತಿ ಪಡೆದಿದ್ದಾರೆ. ಅದ್ಯಾಕೊ ಇವರಿಗೆ ನಿರ್ದೇಶನದ ಹುಡುಕಿ ಬಂದಿತು. ಆಗಲೇ ಇವರು ತಮ್ಮದೇ ಪ್ರೊಡಕ್ಷನ್ ಕಂಪನಿ ಸ್ಥಾಪಿಸಿದರು. ಕಿರು ಚಿತ್ರವನ್ನು ನಿರ್ಮಿಸಿ, ನಿರ್ದೇಶಿದರು. ಅದಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿಗಳು ದಕ್ಕಿದವು.
ಇಲ್ಲಿವರೆಗೆ ಗೀತು ನಿರ್ದೇಶನ ಮಾಡಿದ್ದು ಎರಡೇ ಸಿನಿಮಾ. ಲೈರ್ಸ್ ಡೀಸ್ ಮತ್ತು ಮೋತಾನ್. ಹಿಂದಿ ಹಾಗೂ ಮಲಯಾಳಂ ಭಾಷೆ. ಎರಡಕ್ಕೂ ರಾಷ್ಟ್ರ ಪ್ರಶಸ್ಸಿ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿ ಲೆಕ್ಕವಿಲ್ಲದಷ್ಟು ಸಿಕ್ಕವು. ಇವರ ಬಯೋಡೇಟಾ ಇಷ್ಟೇ. ಒಂದೇ ಒಂದು ಮಾಸ್ ಸಿನಿಮಾ ಮಾಡಿಲ್ಲ, ಮಾಸ್ ಹೀರೋಗೆ ಕ್ಯಾಮೆರಾ ಹಿಡಿದಿಲ್ಲ. ಅಂಥ ನಿರ್ದೇಶಕಿಯನ್ನು ಯಶ್ ಆಯ್ಕೆ ಮಾಡಿಕೊಂಡಿದ್ದಾರೆ. ಅದು ಹೇಗೆ ಸಾಧ್ಯ ಎಂದು ಕೇಳುವಂತಿಲ್ಲ. ಇಬ್ಬರ ನಡುವೆ ಕತೆ. ಚಿತ್ರಕತೆ ಮೇಕಿಂಗ್ ಎಲ್ಲ ವಿಷಯದಲ್ಲಿ ಹೊಂದಾಣಿಕೆ ಹುಟ್ಟಿದಾಗ ಮಾತ್ರ ಕೈ ಜೋಡಿಸಲು ಸಾಧ್ಯ ಅಲ್ಲವೆ? ಅದಾಗಿದ್ದಕ್ಕೇ ಕಳೆದ ಆರು ತಿಂಗಳಿಂದ ಗೀತು ಬೆಂಗಳೂರಿನಲ್ಲಿದ್ದಾರೆ. ಎಂಟು ವರ್ಷದ ಮಗಳನ್ನು ಕೇರಳದಲ್ಲೇ ಬಿಟ್ಟಿದ್ದಾರೆ.
ಗೀತು ಮೋಹನ್ ದಾಸ್‌ಗೆ ಏಳೆಂಟು ವರ್ಷದ ಮಗಳಿದ್ದಾಳೆ. ಹೆಸರು ಆರಾಧನಾ. ಹೆಚ್ಚು ಕಮ್ಮಿ ಐದಾರು ತಿಂಗಳಿಂದ ಬೆಂಗಳೂರಿನ ವೆಸ್ಟ್ ಎಂಡ್ ಹೋಟೆಲ್‌ನಲ್ಲಿದ್ದಾರೆ ಗೀತು. ಹಗಲು ರಾತ್ರಿ ದುಡಿಯುತ್ತಿದ್ದಾರೆ. ಕನ್ನಡ ಬರಲ್ಲ. ಆದರೂ ಎಲ್ಲ ವಿಭಾಗಕ್ಕೆ ಜೀವ ತುಂಬಿದ್ದಾರೆ. ಒಂದೊಂದು ದೃಶ್ಯಕ್ಕೂ ಪಕ್ಕಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಯಾವ್ಯಾವ ದೃಶ್ಯ, ಎಲ್ಲೆಲ್ಲಿ ಶೂಟಿಂಗು, ಸೆಟ್ಟು,ಸ್ಥಳ ಯಾವುದೂ ಹೋಗಲಿ ಬಿಡು ಎನ್ನುವಂತಿಲ್ಲ. ಎಲ್ಲವೂ ಕಾಗದದ ಮೇಲೆ ಮೂಡಬೇಕು. ಅದು ಕಾರ್ಯರೂಪಕ್ಕೆ ಬರಬೇಕು. ಹೀಗೆ ಇಡೀ ಸಹಾಯಕ ಹುಡುಗರ ತಂಡದ ಜವಾಬ್ದಾರಿ ಈ ಮಹಿಳೆ ಹೊತ್ತುಕೊಂಡಿದ್ದಾರೆ. ಅಫ್‌ಕೋರ್ಸ್ ಇದಕ್ಕೆಲ್ಲ ಇಂಚಿಂಚಾಗಿ ಗೈಡ್ ಮಾಡಲು ಯಶ್ ಇದ್ದೇ ಇದ್ದಾರೆ.
ಯಶ್ ತಲೆಯಲ್ಲಿ ಎಲ್ಲವೂ ನಿಕ್ಕಿಯಾಗಿದೆ. ಮುಂದೆ ಯಾವ ರೀತಿ ಹೆಜ್ಜೆ ಇಡಬೇಕು ? ಯಾವ ಕತೆ ಮಾಡಬೇಕು ? ಕೆಜಿಎಫ್‌ಗಿಂತ ಭಿನ್ನವಾಗಿ ಹಾಗೂ ಅದಕ್ಕಿಂತ ಎತ್ತರಕ್ಕೆ ಸಿನಿಮಾವನ್ನು ಹೇಗೆ ತೆಗೆದುಕೊಂಡು ಹೋಗಬೇಕು ? ನ್ಯಾಶನಲ್ ಮಾರ್ಕೆಟ್‌ಗೆ ನುಗ್ಗಿದ್ದೇವೆ…ಇನ್ನು ಇಂಟರ್‌ನ್ಯಾಶನಲ್ ಮಟ್ಟ ಮುಟ್ಟುವುದು ಹೇಗೆ ? ಯಾವ ರೀತಿ ಹಾಲಿವುಡ್‌ಗೆ ಸ್ಯಾಂಡಲ್‌ವುಡ್ ಖದರ್ ತೋರಿಸಬೇಕು ? ಇದೇ ಕ್ಷಣ ಕ್ಷಣ ತಲೆಯಲ್ಲಿ ಓಡಾಡುತ್ತಿದೆ. ನಿಯತ್ತಿನ ತಂತ್ರಜ್ಞರನ್ನು ಒಂದುಗೂಡಿಸಿದ್ದಾರೆ. ಎಲ್ಲರೂ ಶಿಸ್ತು, ಶ್ರದ್ಧೆ ಹಾಗೂ ನಿಯತ್ತಿಗೆ ಇನ್ನೊಂದು ಹೆಸರಾದವರು. ಅವರಿಂದಲೇ ಹೊಸ ಚಿತ್ರಕ್ಕೆ ತುಪ್ಪದ ದೀಪ ಬೆಳಗಲಿದ್ದಾರೆ. ಗೀತು ಮೋಹನ್ ದಾಸ್ ನಮ್ಮ ಯಶ್ ಯಾಗಕ್ಕೆ ಉಘೇ ಉಘೆ ಎಂದಿದ್ದಾರೆ. ಈ ಸುದ್ದಿ ಕೇಳುತ್ತಿದ್ದಂತೆಯೇ ಒಬ್ಬೊಬ್ಬರು ಒಂದೊಂದು ರೀತಿ ಮಾತಾಡುತ್ತಾರೆ…ಅಥವಾ ಮಾತು ಶುರು ಮಾಡುತ್ತಾರೆ. ಹೆಸರೇ ಕೇಳದ…ಮಾಸ್ ಸಿನಿಮಾ ನಿರ್ದೇಶಿಸದ ಹೆಣ್ಣು ಅದು ಹೇಗೆ ಈ ಚಿತ್ರಕ್ಕೆ ಜೀವ ತುಂಬುತ್ತಾಳೆ ? ಯಶ್ ಅದ್ಯಾಕೆ ಈಕೆಯನ್ನು ಒಪ್ಪಿಕೊಂಡರು ? ಗ್ಯಾಂಗ್‌ಸ್ಟರ್ ಕತೆಯನ್ನು ಈ ಮಹಿಳೆ ನಿರ್ದೇಶಿಸಿ ಗೆಲ್ಲುತ್ತಾಳಾ ? ಕುತೂಹಲ ಹೆಚ್ಚಾಗುತ್ತಿದೆ. ಉತ್ತರ ಸಿನಿಮಾ ಮಾತ್ರ ಕೊಡುತ್ತದೆ. ಅದಕ್ಕಾಗಿ ಇನ್ನು ಒಂದೂವರೆ ವರ್ಷವೋ ಎರಡು ವರ್ಷವೋ ಕಾಯಬೇಕು, ಬೇರೆ ದಾರಿ ಇಲ್ಲ.
ಇಂದು ಮತ್ತೆ ರಾಕಿಂಗ್ ಸ್ಟಾರ್ ಯಶ್ (Yash) ಅವರ 19ನೇ ಸಿನಿಮಾ (19th movie) ಟ್ವಿಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಕಳೆ ಹಲವು ತಿಂಗಳಿಂದ ಈ ಸಿನಿಮಾದ ಬಗ್ಗೆ ನಾನಾ ರೀತಿಯ ಸುದ್ದಿಗಳು ಕೇಳಿ ಬರುತ್ತಿವೆ. ಅಧಿಕೃತವಾಗಿ ಸಿನಿಮಾ ತಂಡವಾಗಲಿ ಅಥವಾ ಯಶ್ ಅವರಾಗಲಿ ಮಾತನಾಡದೇ ಇದ್ದರೂ, ಸೋಷಿಯಲ್ ಮೀಡಿಯಾಗಳಲ್ಲಂತೂ ಟ್ರೆಂಡ್ ಆಗುತ್ತಲೇ ಇದೆ.
ಕೆಜಿಎಫ್ 2 (KGF 2) ಸಿನಿಮಾ ರಿಲೀಸ್ ನಂತರ ಅವರ ಮುಂದಿನ ಚಿತ್ರವನ್ನು ಯಾರೆಲ್ಲ ನಿರ್ದೇಶನ ಮಾಡಲಿದ್ದಾರೆ ಎನ್ನುವ ಕುರಿತಾಗಿ ನಾನಾ ಹೆಸರುಗಳು ಕೇಳಿ ಬಂದವು. ನರ್ತನ್, ಶಂಕರ್ ಹೀಗೆ ಹಲವಾರು ನಿರ್ದೇಶಕರ ಹೆಸರನ್ನು ತೇಲಿಬಿಟ್ಟರು. ಇದೀಗ ಮತ್ತೊಂದು ಹೆಸರು ಕೇಳಿ ಬಂದಿದ್ದು, ಇದೇ ನಿರ್ದೇಶಕರ ಸಿನಿಮಾದಲ್ಲೇ ಯಶ್ ನಟಿಸಲಿದ್ದಾರೆ ಎನ್ನುವ ವಿಷಯ ಹರಿದಾಡುತ್ತಿದೆ. ಇದನ್ನೂ ಓದಿ:38 ಕೋಟಿ ರೂಪಾಯಿ ಕೊಟ್ಟು ಎರಡು ಐಷರಾಮಿ ಮನೆ ಖರೀದಿಸಿದ ಆಲಿಯಾ ಭಟ್
ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ (Geethu Mohan Das) ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಲಯರ್ಸ್ ಡೈರಿ ಸಿನಿಮಾಗಾಗಿ ಎರಡು ರಾಷ್ಟ್ರಪ್ರಶಸ್ತಿಯನ್ನು ಪಡೆದಿರುವ ಗೀತು ಅವರ ಸ್ಕ್ರಿಪ್ಟ್ ಬಗ್ಗೆ ಯಶ್ ಒಲವು ತೋರಿದ್ದಾರೆ ಎಂದು ವರದಿಯಾಗಿದೆ. ಸತತ ಒಂದು ವರ್ಷಗಳಿಂತ ಗೀತು ಮತ್ತು ಯಶ್ ಸ್ಕ್ರಿಪ್ಟ್ ಬಗ್ಗೆ ಚರ್ಚೆ ಮಾಡುತ್ತಲೇ ಇದ್ದಾರೆ ಎಂದು ಅವರ ಆಪ್ತರು ಹಂಚಿಕೊಂಡಿದ್ದಾರೆ.
ಕಳೆದೆರಡು ವಾರದ ಹಿಂದೆ ಯಶ್ ಶ್ರೀಲಂಕಾಕ್ಕೆ (Sri Lanka) ಭೇಟಿ ನೀಡಿದ್ದರು. ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದರು. ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಫೋಟೋ ನೋಡಿದವರು ಯಶ್ ಶ್ರೀಲಂಕಾ ಪ್ರವಾಸದಲ್ಲಿ ಇದ್ದಾರೆ ಅಂದುಕೊಂಡಿದ್ದರು. ಬೇಸಿಗೆ ರಜೆಯನ್ನು ಕಳೆಯಲು ಅವರು ಅಲ್ಲಿಗೆ ಹೋಗಿದ್ದಾರೆ ಎಂದು ನಂಬಲಾಗಿತ್ತು. ಆದರೆ, ಶ್ರೀಲಂಕಾ ಸರಕಾರ ಬೇರೆಯದ್ದೇ ಮಾಹಿತಿಯನ್ನು ಕೊಟ್ಟಿತ್ತು.
ಈ ಕುರಿತು ಬೋರ್ಡ್ ಆಫ್ ಇನ್ವೆಸ್ಟ್‌ಮೆಂಟ್ ಇನ್ ಶ್ರೀಲಂಕಾದ ಮುಖ್ಯಾಧಿಕಾರಿ ದಿನೇಶ್ ವೇರಕ್ಕೋಡಿ (Dinesh Verakkodi) ಅವರು ಮಾಹಿತಿ ಹಂಚಿಕೊಂಡಿದ್ದು, ‘ಭಾರತದ ಜನಪ್ರಿಯ ವ್ಯಕ್ತಿಯಾಗಿರುವ, ಯಶ್ ಎಂಬ ಹೆಸರಿನಿಂದ ಜನಪ್ರಿಯವಾಗಿರುವ ನಟ ನವೀನ್ ಕುಮಾರ್ ಅವರನ್ನು ಭೇಟಿ ಮಾಡಿದೆ. ಮೂರು ಫಿಲ್ಮ್ ಫೇರ್ ಪ್ರಶಸ್ತಿ ವಿಜೇತರು ಆಗಿರುವ ಅವರು ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಲು ಅನುಮತಿ ಕೇಳಿದ್ದಾರೆ’ ಎಂದು ಟ್ವೀಟ್ ಮಾಡಿದ್ದರು.
ಯಶ್ (Yash) ಅವರ 19ನೇ ಚಿತ್ರದ ಬಗ್ಗೆ ದಿನಕ್ಕೊಂದು ಸುದ್ದಿ ಹೊರಬರುತ್ತಿದೆ. ಕೆಜಿಎಫ್ 2 (KGF 2) ಸಿನಿಮಾ ರಿಲೀಸ್ ನಂತರ ಅವರ ಮುಂದಿನ ಚಿತ್ರವನ್ನು ಯಾರೆಲ್ಲ ನಿರ್ದೇಶನ ಮಾಡಲಿದ್ದಾರೆ ಎನ್ನುವ ಕುರಿತಾಗಿ ನಾನಾ ಹೆಸರುಗಳು ಕೇಳಿ ಬಂದವು. ನರ್ತನ್, ಶಂಕರ್ ಹೀಗೆ ಹಲವಾರು ನಿರ್ದೇಶಕರ ಹೆಸರನ್ನು ತೇಲಿಬಿಟ್ಟರು. ಇದೀಗ ಮತ್ತೊಂದು ಹೆಸರು ಕೇಳಿ ಬಂದಿದ್ದು, ಇದೇ ನಿರ್ದೇಶಕರ ಸಿನಿಮಾದಲ್ಲೇ ಯಶ್ ನಟಿಸಲಿದ್ದಾರೆ ಎನ್ನುವ ವಿಷಯ ಹರಿದಾಡುತ್ತಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ (Geethu Mohan Das) ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಲಯರ್ಸ್ ಡೈರಿ ಸಿನಿಮಾಗಾಗಿ ಎರಡು ರಾಷ್ಟ್ರಪ್ರಶಸ್ತಿಯನ್ನು ಪಡೆದಿರುವ ಗೀತು ಅವರ ಸ್ಕ್ರಿಪ್ಟ್ ಬಗ್ಗೆ ಯಶ್ ಒಲವು ತೋರಿದ್ದಾರೆ ಎಂದು ವರದಿಯಾಗಿದೆ. ಸತತ ಒಂದು ವರ್ಷಗಳಿಂತ ಗೀತು ಮತ್ತು ಯಶ್ ಸ್ಕ್ರಿಪ್ಟ್ ಬಗ್ಗೆ ಚರ್ಚೆ ಮಾಡುತ್ತಲೇ ಇದ್ದಾರೆ ಎಂದು ಅವರ ಆಪ್ತರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಟ ಚೇತನ್ ಭಾರತದ ವೀಸಾ ರದ್ದು
ಕಳೆದೊಂದು ವಾರದಿಂದ ಯಶ್ ಶ್ರೀಲಂಕಾದಲ್ಲಿ (Sri Lanka) ಬೀಡು ಬಿಟ್ಟಿದ್ದಾರೆ. ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋ ನೋಡಿದವರು ಯಶ್ ಶ್ರೀಲಂಕಾ ಪ್ರವಾಸದಲ್ಲಿ ಇದ್ದಾರೆ ಅಂದುಕೊಂಡಿದ್ದರು. ಬೇಸಿಗೆ ರಜೆಯನ್ನು ಕಳೆಯಲು ಅವರು ಅಲ್ಲಿಗೆ ಹೋಗಿದ್ದಾರೆ ಎಂದು ನಂಬಲಾಗಿತ್ತು. ಆದರೆ, ಶ್ರೀಲಂಕಾ ಸರಕಾರ ಬೇರೆಯದ್ದೇ ಮಾಹಿತಿಯನ್ನು ಕೊಟ್ಟಿದೆ.
ಈ ಕುರಿತು ಬೋರ್ಡ್ ಆಫ್ ಇನ್ವೆಸ್ಟ್‌ಮೆಂಟ್ ಇನ್ ಶ್ರೀಲಂಕಾದ ಮುಖ್ಯಾಧಿಕಾರಿ ದಿನೇಶ್ ವೇರಕ್ಕೋಡಿ (Dinesh Verakkodi) ಅವರು ಮಾಹಿತಿ ಹಂಚಿಕೊಂಡಿದ್ದು, ‘ಭಾರತದ ಜನಪ್ರಿಯ ವ್ಯಕ್ತಿಯಾಗಿರುವ, ಯಶ್ ಎಂಬ ಹೆಸರಿನಿಂದ ಜನಪ್ರಿಯವಾಗಿರುವ ನಟ ನವೀನ್ ಕುಮಾರ್ ಅವರನ್ನು ಭೇಟಿ ಮಾಡಿದೆ. ಮೂರು ಫಿಲ್ಮ್ ಫೇರ್ ಪ್ರಶಸ್ತಿ ವಿಜೇತರು ಆಗಿರುವ ಅವರು ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಲು ಅನುಮತಿ ಕೇಳಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.
ಹಲವು ದಿನಗಳಿಂದ ಯಶ್ ಮತ್ತು ತಂಡ ಶ್ರೀಲಂಕಾದಲ್ಲಿ ಬೀಡು ಬಿಟ್ಟಿದೆ. ಅಲ್ಲಿನ ಸಿನಿಮಾ ಉದ್ಯಮಿಗಳನ್ನು ಮತ್ತು ತಂತ್ರಜ್ಞರನ್ನು ಯಶ್ ಭೇಟಿ ಮಾಡುತ್ತಿದ್ದಾರೆ. ಅಲ್ಲದೇ, ಚಿತ್ರೀಕರಣ ಸ್ಥಳವನ್ನೂ ಅವರು ಹುಡುಕುತ್ತಿದ್ದಾರೆ. ಅಲ್ಲಿಗೆ ಸದ್ಯದಲ್ಲಿ ಯಶ್ 19ನೇ ಸಿನಿಮಾ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.