‘ಗೀತಾ’ ಸೀರಿಯಲ್ (Geetha Serial) ಮೂಲಕ ಮನೆ ಮಾತಾದ ನಟ ಧನುಷ್ ಗೌಡ (Dhanush Gowda) ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆ (Wedding) ಸಂಭ್ರಮದ ನಡುವೆಯೂ ವೋಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ಧನುಷ್ ಈ ನಡೆಗೆ ಫ್ಯಾನ್ಸ್ ಭೇಷ್ ಎಂದಿದ್ದಾರೆ. ಹೊಸ ಜೋಡಿಯ ದಾಂಪತ್ಯಕ್ಕೆ ಶುಭಕೋರಿದ್ದಾರೆ.
ಅತ್ತೆಯ ಮಗಳ ಜೊತೆ ಇಂದು (ಏ.26) ಧನುಷ್ ಮದುವೆಯಾಗಿದ್ದಾರೆ. ಧನುಷ್ ಮದುವೆ ಸಂಭ್ರಮದಲ್ಲಿ ಕಿರುತೆರೆಯ ನಟ-ನಟಿಯರು ಭಾಗವಹಿಸಿ ಶುಭಹಾರೈಸಿದ್ದಾರೆ. ಮದುವೆಯ ಶಾಸ್ತ್ರದ ನಡುವೆ ಮರಿಯದೇ ಧನುಷ್ ವೋಟ್ ಮಾಡಿರೋದು ಅಭಿಮಾನಿಗಳ ಗಮನ ಸೆಳೆದಿದೆ.
‘ಗೀತಾ’ ಸೀರಿಯಲ್ (Geetha Serial) ಹೀರೋ ಧನುಷ್ ಗೌಡ (Dhanush Gowda) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಧನುಷ್ ಮನೆಯಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರುಗಿದೆ. ಅತ್ತೆಯ ಮಗಳ ಜೊತೆ ಹಸೆಮಣೆ ಏರಲು ನಟ ರೆಡಿಯಾಗಿದ್ದಾರೆ. ಇದನ್ನೂ ಓದಿ:ಟಾಪ್‌ಲೆಸ್ ಆಗಿ ಕಾಣಿಸಿಕೊಂಡ ‘ಕೆಜಿಎಫ್’ ನಟಿ- ಸಖತ್ ಹಾಟ್ ಎಂದ ನೆಟ್ಟಿಗರು
ಕಳೆದ ಡಿಸೆಂಬರ್‌ನಲ್ಲಿ ಧನುಷ್ ಅವರು ಅತ್ತೆ ಮಗಳು ಸಂಜನಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಈ ನಿಶ್ಚಿತಾರ್ಥ ನೆರವೇರಿತ್ತು. ಈಗ ಮದುವೆ ಬಗ್ಗೆ ಧನುಷ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಗೀತಾ ಸೀರಿಯಲ್ ಮೂಲಕ ಭವ್ಯಾ ಗೌಡಗೆ ಹೀರೋ ಆಗಿ ನಟಿಸಿದ್ದ ಧನುಷ್ ಸದ್ಯ ಸಿನಿಮಾ ಮಾಡಲು ತಯಾರಿ ಮಾಡಿಕೊಳ್ತಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಮಾಹಿತಿ ಸಿಗಲಿದೆ.
ಕಿರುತೆರೆ ನಟಿ ಭವ್ಯಾ ಗೌಡ (Bhavya Gowda) ಅವರು ‘ಗೀತಾ’ ಸೀರಿಯಲ್ (Geetha Serial) ಮೂಲಕ ಮನೆ ಮಾತಾಗಿದ್ದರು. ಈ ಸೀರಿಯಲ್‌ನಿಂದ ಅಪಾರ ಅಭಿಮಾನಿಗಳ ಬಳಗ ಕೂಡ ನಟಿ ಹೊಂದಿದ್ದರು. ಇದೀಗ ಜನಪ್ರಿಯ ಗೀತಾ ಧಾರಾವಾಹಿ ಮುಕ್ತಾಯವಾಗಿದೆ. ಈ ಬೆನ್ನಲ್ಲೇ ನಟಿ ಭವ್ಯಾ ಧರ್ಮಸ್ಥಳ, ಕಟೀಲು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
‘ಗೀತಾ’ ಸೀರಿಯಲ್ 4 ವರ್ಷಗಳ ಕಾಲ ಟಿವಿ ಪ್ರೇಕ್ಷಕರನ್ನು ರಂಜಿಸಿತ್ತು. ಮಧ್ಯಮ ಕುಟುಂಬದ ಹುಡುಗಿಯ ಪಾತ್ರದಲ್ಲಿ ಭವ್ಯಾ ಗಮನ ಸೆಳೆದಿದ್ದರು. ಟಿಕ್ ಟಾಕ್ ಸ್ಟಾರ್ ಆಗಿದ್ದ ಭವ್ಯಾ ಕಿರುತೆರೆ ನಟಿಯಾಗಿ ಗೆದ್ದಿದ್ದರು. ಧನುಷ್ ಗೌಡ-ಭವ್ಯಾ ಜೋಡಿ ಪ್ರೇಕ್ಷಕರಿಗೆ ಹಿಡಿಸಿತ್ತು. ಇದನ್ನೂ ಓದಿ:ಬಹುಕಾಲದ ಗೆಳೆಯನ ಜೊತೆ ಹೊಸ ಜೀವನಕ್ಕೆ ಕಾಲಿಟ್ಟ ಗೂಗ್ಲಿ ಬೆಡಗಿ
ಈಗ ಸತತ 4 ವರ್ಷಗಳು ರಂಜಿಸಿದ್ದ ‘ಗೀತಾ’ ಧಾರಾವಾಹಿ ಜರ್ನಿ ಅಂತ್ಯವಾಗಿದೆ. ಹೊಸ ಜರ್ನಿಗೆ ಮುನ್ನುಡಿ ಬರೆಯುವ ಮೊದಲು ದೇವರ ಸನ್ನಿಧಿಗೆ ನಟಿ ಭೇಟಿ ನೀಡಿದ್ದಾರೆ. ಧರ್ಮಸ್ಥಳ ಮಂಜುನಾಥ ಮತ್ತು ಕಟೀಲು ದುರ್ಗಾಪರವೇಶ್ವರಿ ದೇವಿಗೆ ನಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಐರೆನ್ ಲೆಗ್ ಎಂದು ಕೆಣಕುವವರಿಗೆ ಕೆಲಸದ ಮೂಲಕ ಉತ್ತರ ಕೊಟ್ರು ಪೂಜಾ ಹೆಗ್ಡೆ
‘ಗೀತಾ’ ಸೀರಿಯಲ್ ನಂತರ ಮುಂದೇನು? ಎಂಬ ಪ್ರಶ್ನೆ ಭವ್ಯಾ ಅಭಿಮಾನಿಗಳಲ್ಲಿ ಕಾಡ್ತಿದೆ. ಮತ್ತೆ ಕಿರುತೆರೆಗೆ ಎಂಟ್ರಿ ಕೊಡ್ತಾರಾ? ಅಥವಾ ಬೆಳ್ಳಿಪರದೆಯಲ್ಲಿ ಮಿಂಚುತ್ತಾರಾ ಕಾದುನೋಡಬೇಕಿದೆ.
ಕಿರುತೆರೆಯ ಜನಪ್ರಿಯ ಸೀರಿಯಲ್ ‘ಗೀತಾ’ (Geetha) ಹೀರೋ ಧನುಷ್ ಗೌಡ್ (Dhanush Gowda) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಂಜನಾ ಜೊತೆ ಅದ್ದೂರಿಯಾಗಿ ಧನುಷ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
‘ಗೀತಾ’ ಸೀರಿಯಲ್ ಮೂಲಕ ಮನೆಮಾತಾದ ವಿಜಯ್ ಅಲಿಯಾಸ್ ಧನುಷ್ ಗೌಡ ಅವರು ಗ್ರ್ಯಾಂಡ್ ಆಗಿ ಸಂಜನಾ (Sanjana Prabhu) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಮೂಲಕ ಗಾಸಿಪ್‌ಗೆಲ್ಲಾ ಬ್ರೇಕ್ ಹಾಕಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನಟಿ ಭವ್ಯಾ ಗೌಡ (Bhavya Gowda) ಅವರು ಧನುಷ್-ಸಂಜನಾ ಜೊತೆಗಿನ ಫೋಟೋ ಹಂಚಿಕೊಂಡು ಹೊಸ ಬಾಳಿಗೆ ಶುಭಕೋರಿದ್ದಾರೆ. ಧನುಷ್ ಎಂಗೇಜ್‌ಮೆಂಟ್ ಫೋಟೋ ವೈರಲ್ ಆಗ್ತಿದ್ದಂತೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಅಂದಹಾಗೆ ಧನುಷ್ ನಿಶ್ಚಿತಾರ್ಥದ ಸುಂದರ ಫೋಟೋಗಳು ಸುಜಯ್ ನಾಯ್ಡು ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ಇನ್ನೂ ‘ಗೀತಾ’ (Geetha) ಧಾರಾವಾಹಿಯ ಭವ್ಯಾ- ಧನುಷ್ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ. ಲವ್‌ನಲ್ಲಿದ್ದಾರೆ ಎಂದೇ ಹೇಳಲಾಗಿತ್ತು. ಇಬ್ಬರೂ ಈ ವಿಚಾರವನ್ನು ತಳ್ಳಿಹಾಕಿದ್ದರು. ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ನಮ್ಮ ನಡುವೆ ಏನಿಲ್ಲ ಎಂದು ಸ್ಪಷ್ಟನೆ ನೀಡಿದ್ದರು ಈ ಜೋಡಿ. ಸಂಜನಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಮೂಲಕ ಎಲ್ಲಾ ಅಂತೆ ಕಂತೆ ಗಾಸಿಪ್‌ಗೆ ಬ್ರೇಕ್ ಹಾಕಿದ್ದಾರೆ ನಟ ಧನುಷ್.
ಕಿರುತೆರೆಯ ಜನಪ್ರಿಯ ಸೀರಿಯಲ್ ‘ಗೀತಾ’ (Geetha Serial) ಮೂಲಕ ಪರಿಚಿತರಾದ ಲೇಡಿ ವಿಲನ್ ಶರ್ಮಿತ ಗೌಡ (Sharmitha Gowda) ಮತ್ತೆ ಹೊಸ ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ನಟಿಯ ಹಾಟ್ & ಬೋಲ್ಡ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಭಾನುಮತಿ ಎಂಬ ವಿಲನ್ ರೋಲ್‌ನಿಂದ ಮನಗೆದ್ದಿರುವ ಶರ್ಮಿತ, ದುಬೈನ ಕೆಲ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಕಪ್ಪು ಮತ್ತು ಲೈಟ್ ಬಣ್ಣ ಉಡುಗೆಯಲ್ಲಿ ನಟಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ನಟಿಯ ಲುಕ್ ನೋಡಿ ಸೊಸೆ ಗೀತಾಗಿಂತ ನೀವೇ ಸೂಪರ್ ಅಂತಾ ನೆಟ್ಟಿಗರು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ನಾನು ಹೋಗುತ್ತಿಲ್ಲ: ನಟಿ ರಂಜನಿ ರಾಘವನ್ ಸ್ಪಷ್ಟನೆ
ಕೆಲ ತಿಂಗಳ ಹಿಂದೆ ಬಿಕಿನಿ ಫೋಟೋಗಳನ್ನ ನಟಿ ಶೇರ್ ಮಾಡುವ ಮೂಲಕ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಇಷ್ಟು ಫಿಟ್ ಆಗಿರೋ ನಟಿ, ತಾಯಿ ರೋಲ್ ಮಾಡ್ತಾರಾ ಅಂತಾ ಬಾಯಿ ಮೇಲೆ ಬೆರಳು ಇಟ್ಟಿದ್ದರು. ಅಷ್ಟರ ಮಟ್ಟಿಗೆ ಶರ್ಮಿತ ಬಿಕಿನಿ ಅವತಾರ ಪಡ್ಡೆಹುಡುಗರ ದಿಲ್ ಕದ್ದಿತ್ತು.
ಪ್ರಸ್ತುತ ‘ಗೀತಾ’ ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ಶರ್ಮಿತ ನಟಿಸುತ್ತಿದ್ದಾರೆ. ಭವ್ಯಾ ಗೌಡ (Bhavya Gowda) ಮತ್ತು ಧನುಷ್ ಗೌಡ ನಾಯಕ ಮತ್ತು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ (Bigg Boss Kannada) ಶುರುವಾಗುತ್ತಿರೋ ಕಾರಣ, ಸೀರಿಯಲ್ ಅಂತ್ಯವಾಗುವ ಸಾಧ್ಯತೆಯಿದೆ.
‘ಗೀತಾ’ (Geetha) ಸೀರಿಯಲ್ ಮೂಲಕ ಮನೆ ಮಾತಾದ ನಟಿ ಭವ್ಯಾ ಗೌಡ (Bhavya Gowda) ಅವರು ಇದೀಗ ಬಿಗ್ ಬಾಸ್ ಮನೆಗೆ (Bigg Boss House) ಬರಲಿದ್ದಾರೆ. ಗೀತಾ ಆಗಿ ಸಿನಿಪ್ರಿಯರ ಮನ ಗೆದ್ದಿರುವ ನಟಿ, ದೊಡ್ಮನೆ ಆಟದಲ್ಲಿ ಭಾಗವಹಿಸಲಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ಪ್ಯಾರಿಸ್‌ನಲ್ಲಿ ಸ್ನೇಹಿತರ ಮದುವೆಯಲ್ಲಿ ಮಿಂಚಿದ ರಾಮ್ ಚರಣ್ ದಂಪತಿ
ಟಿಕ್ ಟಾಕ್ ಮೂಲಕ ಫೇಮಸ್ ಆಗಿದ್ದ ಭವ್ಯಾ ‘ಗೀತಾ’ ಧಾರಾವಾಹಿಯಲ್ಲಿ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡರು. ಮೊದಲ ಸೀರಿಯಲ್‌ನಲ್ಲೇ ಗಮನ ಸೆಳೆದ ಯುವ ನಟಿಗೆ ಸಿನಿಮಾ ಆಫರ್ಸ್‌ಗಳು ಸಿಗುತ್ತಿವೆ. ಹೀಗಿರುವಾಗ ಈ ಬಾರಿಯ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ನಟಿ ಭವ್ಯಾ ಕೂಡ ಬರುತ್ತಿದ್ದಾರೆ ಎನ್ನಲಾಗುತ್ತಿದೆ.
‘ಅನುಬಂಧ ಅವಾರ್ಡ್’ ಕಾರ್ಯಕ್ರಮದಲ್ಲಿ ಹೊಸ ಸೀರಿಯಲ್ ಲಾಂಚ್ ಆಗಿದೆ. ಬೃಂದಾವನ ಎಂಬ ಸೀರಿಯಲ್ ಬರುತ್ತಿದೆ. ಟಿವಿಯಲ್ಲಿ ಈ ಶೋ ಇನ್ನೂ ಪ್ರಸಾರವಾಗಬೇಕಿದೆ. ಹಾಗಾಗಿ ಬಿಗ್ ಬಾಸ್ ಮನೆಗೆ (Bigg Boss Kannada) ನಟಿ ಬರುತ್ತಾರೆ ಎನ್ನಲಾಗುತ್ತಿದೆ.
ಸ್ಯಾಂಡಲ್‌ವುಡ್ ನಟಿ ಅಮೂಲ್ಯ (Amulya) ಸಂಬಂಧಿ ಆಗಿರುವ ಭವ್ಯಾಗೆ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಗೀತಾ ಸೀರಿಯಲ್ ಸಹನಟ ಧನುಷ್ ಗೌಡ ಜೊತೆಗಿನ ಸ್ನೇಹದ ವಿಚಾರವಾಗಿ ನಟಿ ಹೈಲೆಟ್ ಆಗಿದ್ದರು. ಇಬ್ಬರು ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಬಳಿಕ ಇದೆಲ್ಲಾ ಸುಳ್ಳು ಎಂದು ಈ ಜೋಡಿ ಡೇಟಿಂಗ್ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದರು.
ಕನ್ನಡ ಕಿರುತೆರೆಯಲ್ಲಿ ‘ಗೀತಾ’ ಸೀರಿಯಲ್ ಮೂಲಕ ಮೋಡಿ ಮಾಡಿರುವ ಜೋಡಿ ಭವ್ಯಾ- ಧನುಷ್ ಗೌಡ (Dhanush Gowda) ಇದೀಗ ತಮ್ಮ ಬಗೆಗಿನ ಗಾಸಿಪ್ ಬಗ್ಗೆ ಮಾತನಾಡಿದ್ದಾರೆ. ಧರ್ಮಸ್ಥಳಕ್ಕೆ ಓಡಿ ಹೋಗಿ ಮದುವೆಯಾಗಿದ್ದಾರೆ (Wedding) ಎಂಬ ಸುದ್ದಿಗೆ ಈ ಜೋಡಿ ಸ್ಪಷ್ಟನೆ ನೀಡಿದೆ. ಗೀತಾ ಮತ್ತು ವಿಜಯ್ ರಿಯಲ್ ಲೈಫ್‌ನಲ್ಲೂ ಲವ್ (Love) ಮಾಡ್ತಿದ್ದಾರಾ? ಎಂಬ ಅಭಿಮಾನಿಗಳ ಪ್ರಶ್ನೆಗೆ ಈಗ ಕ್ಲ್ಯಾರಿಟಿ ನೀಡಿದ್ದಾರೆ.
ತಮ್ಮ ಬಗೆಗಿನ ಕೇಳಿರುವ ಸುದ್ದಿ ಬಗ್ಗೆ ‘ಗೀತಾ’ (Geetha Serial) ಸೀರಿಯಲ್ ಜೋಡಿ ಪ್ರತಿಕ್ರಿಯೆ ನೀಡಿದೆ. ನಾವಿಬ್ಬರೂ ಲವ್ ಮಾಡ್ತಿದ್ದೀವಿ. ಮದುವೆಯಾಗಿ ಈಗಾಗಲೇ ಮಕ್ಕಳಾಗಿದೆ. ಮಕ್ಕಳ ನಾಮಕರಣ ಮಾಡಿದ್ದೀವಿ. ಧರ್ಮಸ್ಥಳಕ್ಕೆ ಓಡಿ ಹೋಗಿ ಮದುವೆ ಆಗಿದ್ದೀವಿ ಅಂತಾ ಕೇಳಿದ್ದೀವಿ. ನಾವು ಕೇಳಿರುವ ಕೆಟ್ಟ ಗಾಸಿಪ್‌ನಲ್ಲಿ ಇದೊಂದು ಎಂದಿದ್ದಾರೆ.
ನಿಮ್ಮ ಮಗಳಿಗೆ ಮದುವೆ ಆಗಿದೆಯಂತೆ ಎಂದು ಕೆಲವರು ನಮ್ಮ ತಾಯಿಗೆ ಕರೆ ಮಾಡಿ ಕೇಳಿದ್ದರು. ನಮ್ಮಿಬ್ಬರ ಮನೆಯಲ್ಲೂ ನಮ್ಮ ಸ್ನೇಹಕ್ಕೆ ಬೆಂಬಲ ಇದೆ. ನಿಮಗೆ ನಿಮ್ಮ ಫ್ರೆಂಡ್‌ಶಿಪ್ ಬಗ್ಗೆ ನಂಬಿಕೆ ಇದ್ಯಾ? ಸಾಕು ಎಲ್ಲರನ್ನೂ ಮೆಚ್ಚಿಸುವ ಅವಶ್ಯಕತೆಯಿಲ್ಲ. ನಿಮಗೆ ನೀವು ಏನು ಅಂತಾ ಗೊತ್ತಿದ್ರೆ ಸಾಕು ಎಂದು ನಮ್ಮಿಬ್ಬರ ಕುಟುಂಬ ನಮಗೆ ಸಾಥ್ ನೀಡಿದ್ರು ಎಂದು ‘ಗೀತಾ’ ನಟಿ ಭವ್ಯಾ (Bhavya Gowda) ಮಾತನಾಡಿದರು. ಇದನ್ನೂ ಓದಿ:ಕಪ್ಪು ಸೀರೆಯುಟ್ಟು ಮಿಂಚಿದ ನಟಿ ಸಮಂತಾ
ಇಲ್ಲದ ಈ ಕೆಟ್ಟ ಸುದ್ದಿ ವೈರಲ್ ಆದಾಗ, ಗೀತಾ ಸೀರಿಯಲ್ ಶುರುವಿನಲ್ಲಿ ವಿಜಯ್ ಜೊತೆ 8 ತಿಂಗಳು ಮಾತನಾಡೋದನ್ನೇ ಬಿಟ್ಟಿದ್ದೆ ಎಂದು ಭವ್ಯಾ ಹೇಳಿದರು. ನಮ್ಮ ಇಬ್ಬರಿಗೂ ವೈಯಕ್ತಿಕ ಬದುಕಿದೆ. ಈ ತರಹದ ಸುದ್ದಿ ನಮ್ಮ ಜೀವನಕ್ಕೂ ಹಾನಿ ಮಾಡುತ್ತೆ. ಕಡೆಗೆ ನಾವಿಬ್ಬರೂ ಕುಳಿತು ಮಾತನಾಡಿದ್ವಿ. ನಮ್ಮ ಇಬ್ಬರೂ ಲವ್ ಫಿಲಿಂಗ್ಸ್ ಇಲ್ಲ ಅಂದ ಮೇಲೆ ಬೇರೆ ಅವರಿಗೆ ಕ್ಲ್ಯಾರಿಟಿ ಕೊಡುವ ಅಗತ್ಯವಿಲ್ಲ ಎಂದು ಡಿಸೈಡ್ ಮಾಡಿ ಫ್ರೆಂಡ್‌ಶಿಪ್ ಮುಂದುವರೆಸಿದ್ವಿ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಷ್ಟೇ ಎಂದು ನಟಿ ಭವ್ಯಾ- ಧನುಷ್ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಲವ್ ಮತ್ತು ಮದುವೆ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.
ಕಿರುತೆರೆಯ ಜನಪ್ರಿಯ ‘ಗೀತಾ’ (Geetha) ಸೀರಿಯಲ್‌ನ ಖಳನಟಿಯಾಗಿ ಶರ್ಮಿತಾ ಗೌಡ (Sharmitha Gowda) ಕಾಣಿಸಿಕೊಂಡಿದ್ದಾರೆ. ಮಂಥರೆಯಾಗಿ ಕಿರುತೆರೆಯಲ್ಲಿ ಮೋಡಿ ಮಾಡ್ತಿದ್ದಾರೆ. ಸದ್ಯ ನಟಿ ವೆಕೇಷನ್ ಮೂಡ್‌ನಲ್ಲಿದ್ದಾರೆ. ಹೆಬ್ಬಾವನ್ನ ಭುಜದ ಮೇಲೆ ಹೊತ್ತುಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಕುರಿತ ಫೋಟೋ, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಗೀತಾ ಸೀರಿಯಲ್, ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ಶರ್ಮಿತಾ ಗೌಡ ಸೈ ಎನಿಸಿಕೊಂಡಿದ್ದಾರೆ. ಆಗಾಗ ಶೂಟಿಂಗ್‌ಗೆ ಬ್ರೇಕ್ ಇದ್ದಾಗ ಹೊಸ ಜಾಗಗಳಿಗೆ ಭೇಟಿ ನೀಡುತ್ತಾ ಇರುತ್ತಾರೆ. ಆಗಾಗ ಬಿಕಿನಿ ಫೋಟೋ ಶೇರ್ ಮಾಡುತ್ತಾ, ಪಡ್ಡೆಹುಡುಗರ ನಿದ್ದೆಗೆಡಿಸುತ್ತಾರೆ. ಸದ್ಯ ವಿದೇಶಕ್ಕೆ ನಟಿ ಹಾರಿದ್ದಾರೆ. ಇದನ್ನೂ ಓದಿ:ಆ ಸಂಬಂಧ ಅರ್ಧಕ್ಕೆ ನಿಂತು ಹೋಯಿತು, ಆದ್ರೆ ನನಗೆ ಮದುವೆ ಬಗ್ಗೆ ನಂಬಿಕೆಯಿದೆ- ನಟಿ ವೈಷ್ಣವಿ
ಇದೀಗ ಶರ್ಮಿತಾ ನೀಲಿ ಬಣ್ಣದ ಬಾಡಿಕಾನ್ ಡ್ರೆಸ್‌ನಲ್ಲಿ ಹೆಬ್ಬಾವನ್ನು ಭುಜದ ಮೇಲೆ ಹೊತ್ತುಕೊಂಡಿರುವ ಫೋಟೊ ಹಂಚಿಕೊAಡಿದ್ದಾರೆ. ಹಾವು ಅಂದ್ರೆ ಜನ ಹೆದರುತ್ತಾರೆ. ಇನ್ನು ಹಾವನ್ನು ನೋಡಿದರೆ ಓಡಿ ಹೋಗುತ್ತಾರೆ. ಅದರಲ್ಲೂ ಹೆಬ್ಬಾವನ್ನು ನಟಿ ಶರ್ಮಿತಾ ಹೊತ್ತುಕೊಂಡಿರುವುದು ನೋಡಿ ಕೆಲವರು ಹುಬ್ಬೇರಿಸಿದ್ದಾರೆ. ಅಭಿಮಾನಿಗಳು ಬಹಳ ನೀವು ಬೋಲ್ಡ್, ಗ್ರೇಟ್, ಹುಷಾರು ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಕಿರುತೆರೆ ಮಾತ್ರವಲ್ಲ ಸಿನಿಮಾಗಳಿಗೂ ನಟಿ ಹೆಚ್ಚಿನ ಆದ್ಯತೆ ಕೊಡುತ್ತಿದ್ದಾರೆ. ನಟನೆಗೆ ಆದ್ಯತೆಯಿರುವ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಹಾಗೆಯೇ ಪರಭಾಷೆಯ ಸೀರಿಯಲ್‌ನಲ್ಲಿಯೂ ಕಾಣಿಸಿಕೊಳ್ತಿದ್ದಾರೆ.
‘ನನ್ನರಸಿ ರಾಧೆ’ (Nanarasi Radhe) ಸೀರಿಯಲ್ ಮೂಲಕ ಅಭಿಮಾನಿಗಳಿಗೆ ಪರಿಚಿತರಾದ ನಟಿ ಸಹನಾ, ಹೀರೋ ಅಗಸ್ತ್ಯ ರಾಥೋಡ್ ಸಹೋದರಿಯಾಗಿ ನಟಿಸಿದ್ದರು. ಊರ್ವಿ ಪಾತ್ರದಲ್ಲಿ ನಟಿ ಬಣ್ಣ ಹಚ್ಚಿದ್ದರು.
ಗುರುಹಿರಿಯರು ನಿಶ್ಚಿಯಿಸಿದ ವರ ಪ್ರತಾಪ್ ಶೆಟ್ಟಿ ಜೊತೆ ಹೊಸ ಬಾಳಿಗೆ ಸಹನಾ ಶೆಟ್ಟಿ ಕಾಲಿಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಸಹನಾ- ಪ್ರತಾಪ್ ಸೋಮವಾರ (ಮೇ.8)ರಂದು ಮದುವೆಯಾಗಿದ್ದಾರೆ.
ಸಹನಾ ಶೆಟ್ಟಿ ಮದುವೆಗೆ, ‘ಗೀತಾ’ ಸೀರಿಯಲ್ ಜೋಡಿ ಭವ್ಯಾ ಗೌಡ- ಧನುಷ್ ಗೌಡ, ನಟಿ ಅಮೂಲ್ಯ, ಬಿಗ್ ಬಾಸ್ ಜಯಶ್ರೀ ಆರಾಧ್ಯ ಸೇರಿದಂತೆ ಹಲವರು ಭಾಗವಹಿಸಿ ನವಜೋಡಿಗೆ ಶುಭಕೋರಿದ್ದಾರೆ.