Tag: geetha govindam 2

  • ಮತ್ತೆ ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್

    ಮತ್ತೆ ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್

    ಟಾಲಿವುಡ್‌ನ (Tollywood) ಚೆಂದದ ಕಪಲ್ ಅಂದರೆ ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ (Rashmika Mandanna) ತೆರೆ ಹಿಂದೆ ಅದೇನೇ ಕುಚ್ ಕುಚ್ ಕಹಾನಿ ನಡೀತಾ ಇದ್ರೂ, ತೆರೆಯ ಮೇಲೆ ಬೆಸ್ಟ್ ಕಪಲ್ ಆಗಿ ಜನರ ಮನಗೆದ್ದಿದ್ದಾರೆ. ಇದೀಗ ‘ಗೀತಾ ಗೋವಿಂದಂ’ (Geetha Govindam) ಜೋಡಿ ಮತ್ತೆ ಒಟ್ಟಿಗೆ ಸಿನಿಮಾ ಮಾಡ್ತಾರೆ ಎಂಬ ಬಿಸಿ ಬಿಸಿ ಸುದ್ದಿ ಸಿಕ್ಕಿದೆ.

    ವಿಜಯ್ ದೇವರಕೊಂಡ (Vijay Devarakonda) ಸಿನಿಮಾದಲ್ಲಿ ಇದ್ದಾರೆ ಎಂದರೆ ಅಲ್ಲಿ ಲವ್, ರೊಮ್ಯಾನ್ಸ್, ಲಿಪ್ ಲಾಕ್ ಇರೋದಂತೂ ಪಕ್ಕಾ. ಆ್ಯಕ್ಷನ್ ಸೀನ್ಸ್ ಜೊತೆ ಹಸಿಬಿಸಿ ದೃಶ್ಯಗಳು ಇದ್ದೇ ಇರುತ್ತದೆ. ಕಂಟೆಂಟ್ ಜೊತೆ ಪಡ್ಡೆಹುಡುಗರಿಗೆ ಬೇಕಾಗುವಂತಹ ಸಿನಿಮಾ ಮಾಡೋದ್ರಲ್ಲಿ ವಿಜಯ್ ಎತ್ತಿದ ಕೈ. ಹೀಗಿರುವಾಗ ವಿಜಯ್- ರಶ್ಮಿಕಾ ನಟನೆಯ ‘ಗೀತಾ ಗೋವಿಂದಂ’ ಸಿನಿಮಾ ಸಿನಿರಸಿಕರಿಗೆ ಕ್ರೇಜ್ ಹುಟ್ಟುಹಾಕಿತ್ತು. ಇಬ್ಬರು ನಟಿಸಿದ ಮೊದಲ ಸಿನಿಮಾನೇ ಸೂಪರ್ ಡೂಪರ್ ಹಿಟ್ ಆಗಿತ್ತು. ಇದನ್ನೂ ಓದಿ:ದಾಂಪತ್ಯಕ್ಕೆ ಅಂತ್ಯ ಹಾಡಿದ ನಟಿ, ಡಿವೋರ್ಸ್ ಬಗ್ಗೆ ಬಿಗ್ ಬಾಸ್ ಚೈತ್ರಾ ಅಪ್‌ಡೇಟ್

    ನಂತರ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ವಿಜಯ್-ರಶ್ಮಿಕಾ ಜೋಡಿಯಾಗಿ ನಟಿಸಿದ್ರು. ಈ ಸಿನಿಮಾ ಗಲ್ಲಾಪೆಟ್ಟಿಗೆ ಶೇಕ್ ಮಾಡೋದ್ರಲ್ಲಿ ಸೋಲ್ತು. ಆದರೆ ಇಬ್ಬರ ಕೆಮಿಸ್ಟ್ರಿ ವರ್ಕ್ಔಟ್ ಆಯ್ತು. ಈ ಚಿತ್ರದಿಂದ ವಿಜಯ್-ರಶ್ಮಿಕಾ ಮತ್ತಷ್ಟು ಕ್ಲೋಸ್ ಆದ್ರು. ತೆರೆ ಹಿಂದೆ ಇಬ್ಬರು ಆಗಾಗ ಟ್ರಿಪ್, ಪಾರ್ಟಿ ಅಂತಾ ಜೊತೆಯಾಗ್ತಾರೆ. ಆದ್ರೂ ನಮ್ಮ ನಡುವೆ ಏನಿಲ್ಲ ಅಂತಾ ಕಥೆ ಹೇಳ್ತಾರೆ. ತೆರೆ ಹಿಂದಿನ ಫ್ರೆಂಡ್‌ಶಿಪ್ ಬಗ್ಗೆ ಇಬ್ಬರು ಗಪ್‌ಚುಪ್ ಅಂತಾ ಇದ್ರೂ ಕೂಡ ಸದಾ ಒಂದಲ್ಲಾ ಒಂದು ವಿಚಾರವಾಗಿ ಜೋಡಿ ಸುದ್ದಿಯಾಗುತ್ತಾರೆ. ಈಗ ಇಬ್ಬರು ಜೊತೆಯಾಗಿ ಸಿನಿಮಾ ಮಾಡುವ ಬಗ್ಗೆ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ.

    ಸಮಂತಾ ಜೊತೆ ಖುಷಿ ಸಿನಿಮಾವನ್ನ ವಿಜಯ್ ಮುಗಿಸಿಕೊಂಡಿದ್ದಾರೆ. ಮೃಣಾಲ್ ಠಾಕೂರ್- ಶ್ರೀಲೀಲಾ (Sreeleela) ಜೊತೆಗಿನ ಎರಡು ಸಿನಿಮಾ ಮುಗಿದ ಮೇಲೆ ರಶ್ಮಿಕಾ ಮಂದಣ್ಣ ಜೊತೆ ಮತ್ತೆ ವಿಜಯ್ ದೇವರಕೊಂಡ ರೊಮ್ಯಾನ್ಸ್ ಮಾಡೋದು ಪಕ್ಕಾ ಎಂದು ಹೇಳಲಾಗುತ್ತಿದೆ. ರಶ್ಮಿಕಾ ಕೂಡ ಅಷ್ಟರಲ್ಲಿ ಒಪ್ಪಿಕೊಂಡಿರುವ ಸಿನಿಮಾಗಳ ಮುಗಿಸಿಕೊಡ್ತಾರೆ. ಮತ್ತೆ ಗೀತಾ ಗೋವಿಂದಂ ಜೋಡಿ ಆನ್‌ಸ್ಕ್ರೀನ್‌ನಲ್ಲಿ ಜೊತೆಯಾಗೋದು ರೊಮ್ಯಾನ್ಸ್ ಮಾಡೋದು ಪಕ್ಕಾ. ಸೂಕ್ತ ಎಂದೆನಿಸುವ ಭಿನ್ನ ಕಥೆಯೊಂದಿಗೆ ಈ ಜೋಡಿ ಮತ್ತೆ ಜೊತೆ ಆಗ್ತಾರೆ. ಅಧಿಕೃತ ಅಪ್‌ಡೇಟ್ ಸಿಗೋವರೆಗೂ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ರಶ್ಮಿಕಾ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ವಿಜಯ್ ದೇವರಕೊಂಡ

    ಮತ್ತೆ ರಶ್ಮಿಕಾ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ವಿಜಯ್ ದೇವರಕೊಂಡ

    ಟಾಲಿವುಡ್‌ನ (Tollywood) ಸೂಪರ್ ಹಿಟ್ ಜೋಡಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Devarakonda) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. `ಗೀತ ಗೋವಿಂದಂ’ ಜೋಡಿ ಮತ್ತೆ ಒಂದಾಗುತ್ತಿದ್ದಾರೆ. ಇದನ್ನೂ ಓದಿ: ʻಘೋಸ್ಟ್ʼ ಸಿನಿಮಾದಲ್ಲಿ ಪತ್ರಕರ್ತೆಯಾದ ಕೆಜಿಎಫ್‌ ನಟಿ ಅರ್ಚನಾ ಜೋಯಿಸ್

    ಕಿರಿಕ್ ಪಾರ್ಟಿ ಬ್ಯೂಟಿ ರಶ್ಮಿಕಾ ಮಂದಣ್ಣಗೆ ಟಾಲಿವುಡ್ ಅಂಗಳದಲ್ಲಿ ಟರ್ನಿಂಗ್ ಪಾಯಿಂಟ್ ಕೊಟ್ಟ ಸಿನಿಮಾ ಅಂದ್ರೆ `ಗೀತಾ ಗೋವಿಂದಂ’ (Geetha Govindam) ಚಿತ್ರ. ಈ ಸಿನಿಮಾ ಮೂಲಕ ವಿಜಯ್ ಮತ್ತು ರಶ್ಮಿಕಾ ಜೋಡಿಯನ್ನ ಸಿನಿಪ್ರಿಯರು ಹಾಡಿಹೊಗಳಿದ್ದರು. ಅದರಲ್ಲೂ ಲಿಪ್‌ಲಾಕ್ ಸೀನ್ ಅಂತೂ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಿತ್ತು. ಬಳಿಕ `ಡಿಯರ್ ಕಾಮ್ರೆಡ್’ ಚಿತ್ರದ ಕಮಾಲ್ ಮಾಡಿತ್ತು.

    `ಲೈಗರ್’ (Liger) ಸೋಲಿನಲ್ಲಿರುವ ವಿಜಯ್‌ಗೆ ರಶ್ಮಿಕಾ ಸಾಥ್ ನೀಡಿದ್ದಾರೆ. `ಗೀತಾ ಗೋವಿಂದಂ’ ಪಾರ್ಟ್ 2ಗೆ ಈ ಜೋಡಿ ಮತ್ತೆ ಜೊತೆಯಾಗುತ್ತಿದ್ದಾರೆ. ಸೀಕ್ವೆಲ್ ಮಾಡಲು ಪ್ರತಿಷ್ಠಿತ ಸಂಸ್ಥೆಯೊಂದು ಈಗಾಗಲೇ ಪ್ಲ್ಯಾನ್ ಮಾಡಿದ್ದಾರೆ. ಇದರಲ್ಲೂ ರಶ್ಮಿಕಾ- ವಿಜಯ್ ಜೋಡಿಯಾಗಿ ಬರುತ್ತಿದ್ದಾರೆ.

    ಪಾರ್ಟ್ 2ನಲ್ಲಿ ಪಕ್ಕಾ ರೊಮ್ಯಾಂಟಿಕ್ ದೃಶ್ಯಗಳಿಗೆ ಹೆಚ್ಚಿನ ಆದ್ಯತೆಯಿದ್ದು, ಸಿನಿರಸಿಕರಿಗೆ ಖುಷಿಯಾಗಲಿದೆ. ಸದ್ಯ ಈ ಸಿಹಿ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k