Tag: geetha bharathi bhat

  • ಶೋಭಿತಾ ಸೂಸೈಡ್ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ: ಗೀತಾ ಭಾರತಿ ಭಟ್ ಭಾವುಕ

    ಶೋಭಿತಾ ಸೂಸೈಡ್ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ: ಗೀತಾ ಭಾರತಿ ಭಟ್ ಭಾವುಕ

    ಕಿರುತೆರೆ ನಟಿ ಶೋಭಿತಾ (35) ಹೈದರಾಬಾದ್‌ನಲ್ಲಿ ಇಂದು (ಡಿ.1) ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಶೋಭಿತಾ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿತ್ವದವರಲ್ಲ ಎಂದು ‘ಬ್ರಹ್ಮಗಂಟು’ ಸಹನಟಿ ಗೀತಾ (Geetha Bharathi Bhat) ಪ್ರತಿಕ್ರಿಯಿಸಿದ್ದಾರೆ. ‘ಬ್ರಹ್ಮಗಂಟು’ (Brahmagantu) ಸೀರಿಯಲ್‌ನಲ್ಲಿ ಶೋಭಿತಾ ಜೊತೆ ನಟಿಸಿದ ದಿನಗಳನ್ನು ಗೀತಾ ಸ್ಮರಿಸಿದ್ದಾರೆ.

    ಶೋಭಿತಾ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿತ್ವದವರು ಅಲ್ಲ. ನಾವಿಬ್ಬರೂ ‘ಬ್ರಹ್ಮಗಂಟು’ ಸೀರಿಯಲ್ ಮಾಡಬೇಕಾದರೆ, ಬೇರೆ ಯಾರೋ ಸೀರಿಯಲ್ ಆರ್ಟಿಸ್ಟ್ ಸೂಸೈಡ್ ಸುದ್ದಿ ಕೇಳಿ ಈ ರೀತಿ ಮಾಡಿಕೊಳ್ಳುವುದು ತಪ್ಪು ಎಂದು ಶೋಭಿತಾ ಚರ್ಚಿಸಿದರು. ಆದರೆ ಇವರ ಸುದ್ದಿ ಈ ತರಹ ಬರುತ್ತೆ ಎಂದು ಅಂದುಕೊಂಡಿರಲಿಲ್ಲ. ಈಗಲೂ ಅವರ ಆತ್ಮಹತ್ಯೆಯ ಸುದ್ದಿ ನಂಬೋಕೆ ತುಂಬಾ ಕಷ್ಟ ಆಗುತ್ತಿದೆ ಎಂದು ನಟಿ ಗೀತಾ ಮಾತನಾಡಿದ್ದಾರೆ. ಇದನ್ನೂ ಓದಿ:ಬಾಲಿವುಡ್ ಸಿನಿಮಾ ಮಾಡದಿರಲು ಕಾರಣ ಬಿಚ್ಚಿಟ್ಟ ಐಕಾನ್ ಸ್ಟಾರ್

    ಶೋಭಿತಾ ಮದುವೆಯಾದ್ಮೇಲೆ ನನ್ನ ಜೊತೆ ಸಂಪರ್ಕ ಇರಲಿಲ್ಲ. ನಾನು ಅವರನ್ನು ಕಡೆಯದಾಗಿ ಭೇಟಿ ಆಗಿದ್ದು, ಅವರ ಮದುವೆಗೂ ಮುಂಚೆ, ಆ ನಂತರ ಅವರು ಸಿಗಲಿಲ್ಲ. ಅವರಿಗೆ ಅದೇನು ಕಷ್ಟು ಇತ್ತು ಎಂಬುದು ಗೊತ್ತಿಲ್ಲ. ಅವರ ಕಷ್ಟ ಏನಿತ್ತು ಅವರು ಯಾರ ಹತ್ತಿರ ಆದ್ರೂ ಹೇಳಿಕೊಳ್ಳಬೇಕಿತ್ತು. ಅವರ ಕುಟುಂಬಕ್ಕೆ ಅವರ ಸಾವಿನ ನೋವನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ.

    ಅವರ ಕುಟುಂಬವನ್ನು ಶೋಭಿತಾ ನೋಡಿಕೊಳ್ಳುತ್ತಿದ್ದರು. ಅವರು ತುಂಬಾ ಸ್ವಾಭಿಮಾನಿಯಾಗಿದ್ದರು. ಅವರು ತುಂಬಾ ಸ್ಟ್ರಾಂಗ್ ವ್ಯಕ್ತಿ ಆಗಿದ್ದರು. ಅವರು ಈ ಮಟ್ಟಕ್ಕೆ ಕುಗ್ಗಿ ಸೂಸೈಡ್ ಮಾಡಿಕೊಂಡಿದ್ದಾರೆ ಎಂದರೆ ನಂಬೋಕೆ ಆಗುತ್ತಿಲ್ಲ ಎಂದು ನಟಿ ಭಾವುಕರಾಗಿದ್ದಾರೆ.

    ಅಂದಹಾಗೆ, ‘ಬ್ರಹ್ಮಗಂಟು’ ಸೀರಿಯಲ್ ಸೇರಿದಂತೆ 12 ಸೀರಿಯಲ್‌ಗಳಲ್ಲಿ ಶೋಭಿತಾ ನಟಿಸಿದರು. ಜಾಕ್‌ಪಾಟ್, ವಂದನಾ, ಅಟೆಂಪ್ಟ್ ಟು ಮರ್ಡರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ಜಿಮ್‍ನತ್ತ ಮುಖ ಮಾಡಿದ ಗೀತಾ ಭಾರತಿ ಭಟ್

    ಜಿಮ್‍ನತ್ತ ಮುಖ ಮಾಡಿದ ಗೀತಾ ಭಾರತಿ ಭಟ್

    ಬೆಂಗಳೂರು: ಬಿಗ್‍ಬಾಸ್ ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಅವರು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಇರುವ ನಟಿ ಮಣಿಯರ ಸಾಲಿನಲ್ಲಿ ಇದ್ದಾರೆ. ಹಾಡಿನ ವೀಡಿಯೋಗಳು ಮೂಲಕ ಸದ್ದು ಮಾಡುತ್ತಿರುತ್ತಾರೆ. ಈಗ ಈ ನಟಿ ದೇಹದ ತೂಕ ಇಳಿಸಿಕೊಳ್ಳಲು ಮುಂದಾಗಿದ್ದಾರೆ.

    ಅತಿಯಾದ ದೇಹದ ತೂಕದಿಂದಲೇ ಸಾಕಷ್ಟು ಅವಕಾಶಗಳನ್ನು ಕಳೆದುಕೊಂಡಿರುವ ಈ ನಟಿ ಈಗ ದೇಹದ ತೂಕ ಇಳಿಸಿಕೊಳ್ಳುವತ್ತ ಗಮನ ಹರಿಸಿದ್ದಾರೆ. ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಾವು ವರ್ಕೌಟ್ ಮಾಡುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.  ಒಂದೊಂದು ದಿನವೂ ನಿಮ್ಮದೇ ದಾಖಲೆಯನ್ನು ಒಡೆದು ಹಾಕುತ್ತಿರಿ, ಚೆನ್ನಾಗಿದೆ ಎಂದು ಬಿಗ್‍ಬಾಸ್ ಖ್ಯಾತಿಯ ಕೆ ಪಿ ಅರವಿಂದ್ ಕಾಮೆಂಟ್ ಮಾಡಿದ್ದಾರೆ.

    ಕಳೆದ ಕೆಲವು ದಿನಗಳಿಂದ ಜಿಮ್‍ನತ್ತ ಮುಖ ಮಾಡಿದ್ದಾರೆ. ತಮ್ಮ ವರ್ಕೌಟ್ ವೀಡಿಯೋ ಹಂಚಿಕೊಳ್ಳುತ್ತಿರುವ ನಟಿ ಜಿಮ್‍ನಲ್ಲಿನ ಅನುಭವಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಕಿರಣ್ ಸಾಗರ್ ಎಂಬ ಫಿಟ್ನೆಸ್ ಕೋಚ್ ಬಳಿ ತರಬೇತಿ ಪಡೆಯುತ್ತಿದ್ದಾರೆ. ತಮ್ಮ ದೇಹದ ತೂಕ ಇಳಿಸಿಕೊಳ್ಳಲು ತುಂಬಾ ಶ್ರಮ ಪಟ್ಟು ಬೆವರು ಸುರಿಸುತ್ತಿದ್ದಾರೆ. ಇದನ್ನೂ ಓದಿ:  ಕುಚ್ಚಲಕ್ಕಿ ರೊಟ್ಟಿ ಮಾಡಿದ ರಾಬರ್ಟ್ ನಟಿ ಆಶಾ ಭಟ್

     

    ಕಿರುತೆರೆಯಲ್ಲಿ ನಟಿಸುವ ಮೂಲಕ ಮುನ್ನಲೆಗೆ ಬಂದ ಗೀತಾ ಭಾರತಿ ಭಟ್ ಅವರು ತಮ್ಮದೇ ಆಗಿರುವ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಬಿಗ್‍ಬಾಸ್ ಮನೆಯಿಂದ ಹೊರ ಬಂದ ನಂತರ ಸಾಕಷ್ಟು ಫೋಟೋಶೂಟ್‍ಗಳಿಗೆ ಪೋಸ್ ಕೊಟ್ಟಿದ್ದಾರೆ. ನಟಿ ತಮನ್ನಾ ಭಾಟಿಯಾ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ. ಗುತುರ್ಂದಾ ಸೀತಾಕಾಲಂ ಸಿನಿಮಾದಲ್ಲಿ ಗೀತಾ ಭಾರತಿ ನಟಿಸುತ್ತಿದ್ದಾರೆ.

  • ‘ಬ್ರಹ್ಮಗಂಟು’ ಗೀತಾ, ‘ಗಟ್ಟಿಮೇಳ’ ವಿಕ್ರಾಂತ್ ವಿಚಾರಣೆಗೆ ಹಾಜರ್

    ‘ಬ್ರಹ್ಮಗಂಟು’ ಗೀತಾ, ‘ಗಟ್ಟಿಮೇಳ’ ವಿಕ್ರಾಂತ್ ವಿಚಾರಣೆಗೆ ಹಾಜರ್

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ಭದ್ರತಾ ವಿಭಾಗ (ಐಎಸ್‍ಡಿ) ಸೀರಿಯಲ್ ನಟ, ನಟಿಯರಿಗೂ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದೆ. ಈ ಹಿನ್ನೆಲೆಯಲ್ಲಿ ಕಿರುತೆರೆ ನಟಿ ಗೀತಾಭಾರತಿ ಭಟ್ ಮತ್ತು ನಟ ಅಭಿಷೇಕ್ ದಾಸ್ ವಿಚಾರಣೆಗೆ ಹಾಜರಾಗಿದ್ದಾರೆ. ಇದನ್ನೂ ಓದಿ: ನಟ ಲೂಸ್ ಮಾದ ಯೋಗಿಯಿಂದ ಮತ್ತೊಂದು ಎಡವಟ್ಟು

    ವಿಚಾರಣೆಗೆ ಹೋಗುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅಭಿಷೇಕ್ ದಾಸ್, ಸೋಮವಾರ ರಾತ್ರಿ ನನಗೆ ನೋಟಿಸ್ ಬಂದಿದೆ. ಹೀಗಾಗಿ ವಿಚಾರಣೆಗೆ ಬಂದಿದ್ದೇನೆ. ನನ್ನ ಪ್ರಕಾರ ಡ್ರಗ್ಸ್ ಕೇಸಿನಲ್ಲಿ ಬಂಧಿತರಾಗಿರುವ ವ್ಯಕ್ತಿಗಳ ಬಗ್ಗೆ ಕೇಳಲು ಕರೆದಿರಬಹುದು ಅಥವಾ ಆ ವ್ಯಕ್ತಿಗಳನ್ನು ಮುಂಚೆ ಎಲ್ಲಾದರೂ ಭೇಟಿಯಾಗಿದ್ದೀರಾ, ಯಾವುದಾದರೂ ಪಾರ್ಟಿಗೆ ಹೋಗಿದ್ದೀರ ಎಂದು ಕೇಳಲು ಕರೆದಿರಬಹುದು ಎಂದರು. ಇದನ್ನೂ ಓದಿ: ನಮಗೆ ಆಗದವರು ನಮ್ಮ ಹೆಸರು ಹೇಳಿರ್ಬೋದು: ಗೀತಾಭಾರತಿ ಭಟ್‍

    ಕಿರುತೆರೆಯಲ್ಲಿ ಇದಿಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಸರ್ಕಲ್‍ನಲ್ಲಿ ಡ್ರಗ್ಸ್ ಇಲ್ಲ. ನಾನು ಓಡಾಡಿರುವ ಸ್ನೇಹಿತರು ಕೂಡ ಡ್ರಗ್ಸ್ ತೆಗೆದುಕೊಳ್ಳುವುದನ್ನು ನಾನು ನೋಡಿಲ್ಲ. ಕೆಲವು ವ್ಯಕ್ತಿಗಳ ಬಗ್ಗೆ ವಿಚಾರಣೆ ಮಾಡಬೇಕು. ಅವರ ಬಗ್ಗೆ ನಿಮಗೆ ಗೊತ್ತಿರುವ ಮಾಹಿತಿ ಕೊಟ್ಟು ಹೋಗಿ ಎಂದು ಫೋನ್ ಮಾಡಿ ಕರೆದಿದ್ದಾರೆ. ಹೀಗಾಗಿ ಬಂದಿದ್ದೇನೆ. ಈಗಾಗಲೇ ಮೂವರು ಕಿರುತೆರೆ ನಟರು ಬಂದಿದ್ದಾರೆ. ಇನ್ನೂ ಕೆಲವರು ಬರುತ್ತಾರೆ, ನಾಳೆನೂ ಕೆಲ ನಟರು ಬರುತ್ತಾರೆ. ನನಗೆ ಗೊತ್ತಿರುವುದನ್ನು ನಾನು ಹೇಳುತ್ತೇನೆ ಎಂದು ನಟ ಅಭಿಷೇಕ್ ಹೇಳಿದರು.

    ಇದೇ ವೇಳೆ ಗೀತಾಭಾರತಿ ಭಟ್ ಮಾತನಾಡಿದ್ದು, ಸೆ.19ರಂದು ನನಗೆ ನೋಟಿಸ್ ಕೊಟ್ಟಿದ್ದಾರೆ. ಹೀಗಾಗಿ ಸಂಪೂರ್ಣವಾಗಿ ಐಎಸ್‍ಡಿಗೆ ನಾನು ಸಪೋರ್ಟ್ ಮಾಡುತ್ತೇನೆ. ಅವರು ಕೇಳುವ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರಿಸುವ ಮೂಲಕ ಸಹಕಾರ ನೀಡುತ್ತೇನೆ. ಅವರು ನಮ್ಮನ್ನು ವಿಚಾರಣೆಗೆ ಕರೆದಿದ್ದಾರೆ. ಆದರೆ ಅವರು ನಮ್ಮನ್ನು ಆರೋಪಿಯನ್ನಾಗಿ ಮಾಡುತ್ತಿಲ್ಲ ಎಂದರು.

    ನಟಿ ಗೀತಾಭಾರತಿ ಭಟ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದು, ಗೀತಾ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಇನ್ನೂ ನಟ ಅಭಿಷೇಕ್ ದಾಸ್ ‘ಗಟ್ಟಿಮೇಳ’ ಸೀರಿಯಲ್ಲಿ ನಟಿಸುತ್ತಿದ್ದು, ವಿಕ್ರಾಂತ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ.

  • ನಮಗೆ ಆಗದವರು ನಮ್ಮ ಹೆಸರು ಹೇಳಿರ್ಬೋದು: ಗೀತಾಭಾರತಿ ಭಟ್‍

    ನಮಗೆ ಆಗದವರು ನಮ್ಮ ಹೆಸರು ಹೇಳಿರ್ಬೋದು: ಗೀತಾಭಾರತಿ ಭಟ್‍

    ಬೆಂಗಳೂರು: ಡ್ರಗ್ಸ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಗಟ್ಟಿಮೇಳ ಧಾರವಾಹಿಯ ವಿಕ್ರಾಂತ್ ಖ್ಯಾತಿಯ ಅಭಿಷೇಕ್ ದಾಸ್ ಮತ್ತು ಬ್ರಹ್ಮಗಂಟು ಧಾರಾವಾಹಿಯ ಗೀತಾಭಾರತಿ ಭಟ್‍ಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

    ಈ ಬೆನ್ನಲ್ಲೇ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದ ಗೀತಾಭಾರತಿ, ಡ್ರಗ್ ಕೇಸ್ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಬಂದಿರುವುದು ನಿಜ. ನಾನು ಈ ವಿಚಾರವಾಗಿ ಪ್ಯಾನಿಕ್ ಆಗಿದ್ದೇನೆ. ವಿಚಾರಣೆಗೆ ಕರೆದಿದ್ದಾರೆ ಎಂದರೆ ನಾವು ತಪ್ಪು ಮಾಡಿದ್ದೇವೆ ಎಂದಲ್ಲ. ನಮಗೆ ಆಗದವರು ನನ್ನ ಹೆಸರು ಹೇಳಿರಬಹುದು. ವಿಚಾರಣೆಗೆ ಹಾಜರಾಗೋದಾಗಿ ಹೇಳಿದ್ದಾರೆ. ಇದನ್ನೂ ಓದಿ: ಇಬ್ಬರು ಡ್ರಗ್ ಪೆಡ್ಲರ್‌ಗಳು ಅರೆಸ್ಟ್ – ಅಯ್ಯಪ್ಪ, ಲೂಸ್ ಮಾದ ಯೋಗಿ ವಿಚಾರಣೆ

    ಅಭಿಷೇಕ್ ದಾಸ್ ಮತ್ತು ಗೀತಾಭಾರತಿ ಭಟ್ ಇಂದು ಆಂತರಿಕ ಭದ್ರತಾ ದಳದ ಎದುರು ಹಾಜರಾಗಬೇಕಿದೆ. ಸೆಪ್ಟಂಬರ್ 19ರಂದು ಮಾಜಿ ಕ್ರಿಕೆಟರ್ ಅಯ್ಯಪ್ಪ, ಸೀರಿಯಲ್ ನಟಿ ರಶ್ಮಿ ಚಂಗಪ್ಪ ವಿಚಾರಣೆಯೂ ನಡೆದಿದೆ. ಸೆಪ್ಟೆಂಬರ್ 12ರಂದು ಪೀಣ್ಯ ಪೊಲೀಸರ ಕೈಗೆ ಕೇರಳ ಮೂಲದ ಇಬ್ಬರು ಪೆಡ್ಲರ್‍ಗಳು ತಗ್ಲಾಕೊಂಡಿದ್ದರು. ಅವರ ಬಳಿ ಗಾಂಜಾ, ಎಲ್‍ಎಸ್‍ಡಿ ಮಾತ್ರೆಗಳು ಪತ್ತೆಯಾಗಿದ್ದವು. ವಿಚಾರಣೆ ವೇಳೆ ಸಿನಿಮಾ ಮತ್ತು ಸೀರಿಯಲ್ ನಟ-ನಟಿಯರಿಗೆ ಡ್ರಗ್ಸ್ ಸಪ್ಲೈ ಮಾಡ್ತಿರೋದರ ಬಗ್ಗೆ ಬಾಯ್ಬಿಟ್ಟಿದ್ರು.