ಬೆಂಗಳೂರು: ನಮ್ಮ ತಂದೆಯಿಂದ ಬಂದಿರೋ ಬಳುವಳಿ ಒಂದೇ ಬಣ್ಣ ಹಚ್ಚೋದು, ಆಕ್ಟಿಂಗ್ ಮಾಡೋದು ಅಷ್ಟೇ. ನಮಗೆ ರಾಜಕೀಯ ಬೇಡ ಎಂದು ನಟ ಶಿವರಾಜ್ ಕುಮಾರ್ (Shicaraj Kumar) ಸ್ಪಷ್ಟಪಡಿಸಿದ್ದಾರೆ.
ಲೋಕಸಭೆಗೆ ರೆಡಿಯಾಗಿ ಅಂತಾ ಡಿಕೆಶಿ (DK Shivakumar) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ತಂದೆ ಕೊಟ್ಟಿರುವ ಬಳುವಳಿ ಬಣ್ಣ ಹಚ್ಚೋದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ನಮ್ಮದೇನಿದ್ದರೂ ಮೇಕಪ್ ಹಾಕೋದು ಸಿನಿಮಾ ಮಾಡೋದು. ರಾಜಕೀಯ ನಮಗೆ ಬೇಡ ಎಂದರು.
ಬಂಗಾರಪ್ಪ ಮಗಳು ನಮ್ಮ ಮನೆ ಸೊಸೆ. ಗೀತಾಳಿಗೆ ಇಂಟರೆಸ್ಟ್ ಇದ್ರೆ ಮಾಡ್ಲಿ. ಹೆಂಡತಿ ಇಷ್ಟಪಟ್ಟರೆ ಅವರಿಗೆ ಸಪೋರ್ಟ್ ಮಾಡೋದು ಗಂಡನ ಕೆಲಸ. ಗೀತಾ ಇಷ್ಟಪಟ್ರೆ ಚುನಾವಣೆಗೆ ಸಪೋರ್ಟ್ ಮಾಡ್ತೀವಿ ಎಂದು ತಿಳಿಸಿದರು. ಇದನ್ನೂ ಓದಿ: ಶಿವಣ್ಣಗೆ ಎಂಪಿ ಟಿಕೆಟ್ ಆಫರ್ ಕೊಟ್ಟ ಡಿಕೆಶಿ
75 ನೇ ವರ್ಷದ ಈಡಿಗ ಸಮುದಾಯದ ಈ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ವ್ಯಕ್ತಿಗಳು ಇರಬೇಕಿತ್ತು. ಆದರೆ ಇಲ್ಲ, ಆದರೆ ಅವರ ಆಶೀರ್ವಾದವಿದೆ. ನಮ್ಮ ಬೇಡಿಕೆಗಳನ್ನು ಸಿದ್ದರಾಮಯ್ಯ ಸರ್ಕಾರ ಈಡೇರಿಸುತ್ತದೆ. ನಮ್ಮ ತಂದೆಯವರು ಯಾವಾಗಲೂ ಸಿದ್ದರಾಮಯ್ಯ ಅವರಿಗೆ ನಮ್ಮ ಕಾಲದವರು ಅಂತಿದ್ದರು. ಅಂತಹ ಬಾಂಧವ್ಯ ಮುಖ್ಯಮಂತ್ರಿಗಳಲ್ಲಿ ಇದೆ ಎಂದು ಹೇಳಿದರು.
ಒಬ್ಬೊಬ್ಬರಿಗೆ ಒಂದೊಂದು ಭಿನ್ನಾಭಿಪ್ರಾಯ ಇರುತ್ತದೆ. ಇಂತಹ ಕಾರ್ಯಕ್ರಮದಿಂದ ಪ್ರೋತ್ಸಾಹ ಮುಖ್ಯ. ಯಾರು ಮಾಡಿದ್ರು ಅನ್ನೋದು ಮುಖ್ಯವಲ್ಲ. ಯಾರಿಗೋಸ್ಕರ ಮಾಡಿದ್ರು ಅನ್ನೋದು ಮುಖ್ಯ. ಭರವಸೆ ಮಾತು ಮುಖ್ಯಮಂತ್ರಿಗಳಿಂದ ಬರಬೇಕು. ಇಂತಹ ಕಾರ್ಯಕ್ರಮಗಳು ಬರಬೇಕು ಎಂದು ಶಿವಣ್ಣ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ರಾಜಕೀಯ ಮುಖಂಡರ ಜೊತೆ ಪದೇ ಪದೇ ಭೇಟಿ ಮಾಡುತ್ತಿದ್ದಾರೆ ನಟ ಶಿವರಾಜ್ ಕುಮಾರ್ (Shivraj Kumar). ಜೊತೆಗೆ ರಾಜಕೀಯ ಸಮಾರಂಭಗಳಲ್ಲೂ ಅವರು ಭಾಗಿಯಾಗುತ್ತಿದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡಿದರು. ಜೊತೆಗೆ ಶಿವರಾಜ್ ಕುಮಾರ್ ಪತ್ನಿ ಗೀತಾ (Geetha) ಕಾಂಗ್ರೆಸ್ ಪಕ್ಷಕ್ಕೂ ಸೇರ್ಪಡೆಯಾದರು.
ಮಧು ಬಂಗಾರಪ್ಪ (Madhu Bangarappa), ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ (Siddaramaiah) ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಪರವಾಗಿ ಪ್ರಚಾರ ಮಾಡಿ ಕಾಂಗ್ರೆಸ್ ಗೆಲುವಿಗೆ ಕಾರಣರಾಗಿದ್ದ ಶಿವರಾಜ್ ಕುಮಾರ್ ಭೇಟಿಯಾಗಿ ಕಾಂಗ್ರೆಸ್ ಮುಖಂಡ ಸುರ್ಜೆವಾಲಾ ಸ್ವತಃ ಶಿವಣ್ಣ ಮನೆಗೆ ಬಂದಿದ್ದರು. ಆನಂತರ ಸಂಬಂಧಿ ಮಧು ಬಂಗಾರಪ್ಪ ಮಂತ್ರಿಯಾದರು. ಮಧು ಮಂತ್ರಿಯಾಗಿದ್ದರ ಹಿಂದೆ ಶಿವರಾಜ್ ಕುಮಾರ್ ಪ್ರಭಾವವೂ ಇದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಬಾಲಿವುಡ್ ಚಿತ್ರಗಳ ಫ್ಲಾಪ್ ಬಳಿಕ ರಶ್ಮಿಕಾ ನಟನೆ 3ನೇ ಚಿತ್ರದ ಟೀಸರ್ ರಿಲೀಸ್
ನಿರಂತರ ಚಿತ್ರೀಕರಣ ಮಧ್ಯೆಯೂ ಶಿವರಾಜ್ ಕುಮಾರ್, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇತ್ತೀಚೆಗಷ್ಟೇ ನಡೆದ ಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮದಲ್ಲೂ ಶಿವಣ್ಣ ಪತ್ನಿ ಸಮೇತ ಹಾಜರಿದ್ದರು. ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಸ್ವತಃ ಕಾರು ಡ್ರೈವ್ ಮಾಡಿಕೊಂಡು ಬಂದಿದ್ದರು ಶಿವರಾಜ್ ಕುಮಾರ್.
ಸಿಎಂ ಸಿದ್ದರಾಮಯ್ಯ ಸರ್ಕಾರಿ ನಿವಾಸದಲ್ಲಿ ಪತ್ನಿ ಗೀತಾ ಅವರ ಜತೆ ಬಂದು ಸಿಎಂ ಭೇಟಿ ಮಾಡಿದ ನಟ ಶಿವರಾಜ್ ಕುಮಾರ್, ಕೆಲ ಹೊತ್ತು ಅವರೊಂದಿಗೆ ಮಾತನಾಡಿದ್ದಾರೆ. ಮಾತುಕತೆ ಬಳಿಕ ಹೊರ ಬಂದ ಅವರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಪ್ರತಿಕ್ರಿಯೆ ಕೊಡದೇ ತೆರಳಿದರು. ಶಿವಣ್ಣ ದಂಪತಿ ಜೊತೆ ಸಚಿವ ಮಧು ಬಂಗಾರಪ್ಪ ಕೂಡ ಆಗಮಿಸಿದ್ದರು.
ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯದ ಉಸ್ತುವಾರಿ ವಹಿಸಿಕೊಂಡಿರುವ ರಣ್ ದೀಪ್ ಸಿಂಗ್ ಸುರ್ಜೆವಾಲ (Randeep Singh Surjewala) ಇಂದು ಬೆಳಗ್ಗೆ ನಟ ಶಿವರಾಜ್ ಕುಮಾರ್ (Shivraj Kumar) ಮನೆಗೆ ಭೇಟಿ ನೀಡಿದ್ದಾರೆ. ಈ ಭೇಟಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಗೀತಾ (Geetha) ಶಿವರಾಜ್ ಕುಮಾರ್ ಸಹೋದರ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷದ ಮೇಲೆ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರನ್ನು ಸಮಾಧಾನ ಪಡಿಸುವಂತೆ ಮನವಿ ಮಾಡುವುದಕ್ಕಾಗಿ ಸರ್ಜೆವಾಲ ಬಂದಿದ್ದರು ಎಂದು ಹೇಳಲಾಗುತ್ತಿದೆ.
ಮಧು ಬಂಗಾರಪ್ಪ ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆಯೇ ‘ತಮ್ಮ ಸಹೋದರ ಈ ಬಾರಿ ಮಂತ್ರಿಯಾಗಲಿದ್ದಾರೆ’ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ‘ಮಧು ಈ ಸಲ ಗ್ಯಾರಂಟಿ ಮಂತ್ರಿಯಾಗಲಿದ್ದಾರೆ’ ಎಂದು ಭವಿಷ್ಯ ನುಡಿದಿದ್ದರು. ಆದರೆ, ಕಾಂಗ್ರೆಸ್ ಸರಕಾರ ಮೊದಲ ಹಂತದ ಮಂತ್ರಿಗಳ ಪಟ್ಟಿಯಲ್ಲಿ ಮಧು ಬಂಗಾರಪ್ಪ ಹೆಸರನ್ನು ಸೇರಿಸದೇ ಭವಿಷ್ಯವನ್ನು ಸುಳ್ಳಾಗಿಸಿತ್ತು. ಹಾಗಾಗಿಯೇ ಸಿಎಂ, ಡಿಸಿಎಂ ಪ್ರಮಾಣ ವಚನ ವೇಳೆ ಮಧು ಗೈರಾಗಿದ್ದರು. ಇದನ್ನೂ ಓದಿ:‘ಯಶ್ 19’ ಸಿನಿಮಾದ ಫೋಟೋ ಲೀಕ್? ರಾಕಿ ಭಾಯ್ ನಯಾ ಲುಕ್
ಒಂದು ಕಡೆ ಮಧು ಬಂಗಾರಪ್ಪ (Madhu Bangarappa) ಅವರನ್ನು ಸಮಾಧಾನಿಸಲು ಗೀತಾ ಅವರಿಗೆ ಹೇಳಿದ್ದಾರೆ ಎಂದು ಹೇಳಲಾಗುತ್ತಿದ್ದರೆ, ಮತ್ತೊಂದು ಕಡೆ ಪ್ರಚಾರಕ್ಕೆ ಬಂದಿದ್ದ ಶಿವರಾಜ್ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಸುರ್ಜೆವಾಲ ಬಂದಿದ್ದರು ಎಂದು ಹೇಳಲಾಗುತ್ತಿದೆ. ಶಿವರಾಜ್ ಕುಮಾರ್ ಹಲವು ಕ್ಷೇತ್ರಗಳ ಪ್ರಚಾರದಲ್ಲಿ ಭಾಗಿಯಾಗಿದ್ದರು. ಜಗದೀಶ್ ಶೆಟ್ಟರ ಹೊರತು ಪಡಿಸಿ ಶಿವಣ್ಣ ಹೋದ ಕಡೆಯಲ್ಲ ಕಾಂಗ್ರೆಸ್ ಗೆದ್ದಿದೆ. ಹಾಗಾಗಿ ಧನ್ಯವಾದಗಳನ್ನು ತಿಳಿಸಲು ಶಿವಣ್ಣ ಮನೆಗೆ ಸುರ್ಜೆವಾಲ ಬಂದಿದ್ದರು ಎಂಬ ಮಾಹಿತಿಯೂ ಇದೆ.
ಇಷ್ಟೆಲ್ಲ ಊಹಾಪೋಹಗಳು ಹರಿದಾಡುತ್ತಿದ್ದರೂ, ಭೇಟಿಯ ವಿಚಾರವನ್ನೂ ನಿಗೂಢವಾಗಿ ಇಡಲಾಗಿದೆ. ಸುರ್ಜೆವಾಲ ಬಂದಿದ್ದ ಕಾರಣವನ್ನು ಶಿವಣ್ಣ ಆಗಲಿ ಅಥವಾ ಕಾಂಗ್ರೆಸ್ ಪಕ್ಷವಾಗಲಿ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಈ ಭೇಟಿ ರಹಸ್ಯವಾಗಿ ಉಳಿದುಕೊಂಡಿದೆ.
ಇಂದು ಮಧ್ಯಾಹ್ನ 12 ಗಂಟೆಗೆ ನಿರ್ಮಾಪಕಿ ಹಾಗೂ ಶಿವರಾಜ್ ಕುಮಾರ್ ಪತ್ನಿ ಗೀತಾ (Geetha) ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ. ಗೀತಾ ಶಿವರಾಜ್ ಕುಮಾರ್ ಗೆ ರಾಜಕೀಯ ಹೊಸದೇನೂ ಅಲ್ಲವಾದರೂ, ಕಾಂಗ್ರೆಸ್ ಪಕ್ಷಕ್ಕೆ ಇದೇ ಮೊದಲ ಬಾರಿಗೆ ಸೇರ್ಪಡೆ ಆಗುತ್ತಿದ್ದಾರೆ. ಈ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ ನಟ ಶಿವರಾಜ್ ಕುಮಾರ್.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ‘ಇಂದು ಗೀತಾ ಕಾಂಗ್ರೆಸ್ ಪಕ್ಷ ಸೇರಿ, ನಾಳೆಯಿಂದ ಸೊರಬದಲ್ಲಿ ಪ್ರಚಾರಕ್ಕೆ ತೆರಳುತ್ತಾರೆ. ಅವರ ಜೊತೆ ನಾನೂ ತೆರಳುತಿದ್ದೇನೆ. ಸೊರಬದಲ್ಲಿ ಮಧು ಹಾಗೂ ಅವರ ಮಾವ ಭೀಮ ನಾಯಕ್ ಸಿರಸಿಯಲ್ಲಿ ಚುನಾವಣೆಗೆ ಸ್ಪರ್ಧಿಸುತಿದ್ದಾರೆ. ಇಬ್ಬರೂ ಗೆಲ್ಲಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ. ಇದನ್ನೂ ಓದಿ:ನೆಗೆಟಿವ್ ರೋಲ್ ಮಾಡಿದ್ದಕ್ಕೆ ಮದುವೆ ಸಂಬಂಧ ಕ್ಯಾನ್ಸಲ್- ನಟಿ ಅನಿಕಾ ಸಿಂಧ್ಯ
ಮುಂದುವರೆದು ಮಾತನಾಡಿದ ಶಿವರಾಜ್ ಕುಮಾರ್ (Shivaraj Kumar), ‘ಬಂಗಾರಪ್ಪ ಅವರ ಮಕ್ಕಳಾದ ಮಧು ಹಾಗೂ ಗೀತಾರಿಗೆ ರಾಜಕೀಯ ಹೇಳಿಕೊಡೊದು ಬೇಡ. ತಾಯಿ ಹೋದ ಬಳಿಕ ಎರಡು ವರ್ಷದಿಂದ ಶಕ್ತಿ ಧಾಮದ ಪ್ರೆಸಿಡೆಂಟ್ ಆಗಿದ್ದಾರೆ ಗೀತೆ. ಮಕ್ಕಳಿಗೆ ಸ್ಕಿಲ್ ಡೆವಲಪ್ಮೆಂಟ್ ಮಾಡುತಿದ್ದಾರೆ. ಸುತ್ತಮುತ್ತ ಫ್ರೀ ಬೇಕಿಂಗ್ ಕ್ಯಾಂಪ್ ಮಾಡಿ ಅವೇರ್ ನೆಸ್ ಕೂಡ ಮಾಡಿದ್ದಾರೆ. ಸಮಾಜಮುಖಿ ಕೆಲಸಗಳ ಬಗ್ಗೆ ಅವರಿಗೆ ಆಸಕ್ತಿ ಇದೆ’ ಎಂದು ಹೇಳಿದರು.
ಗೀತಾ ಶಿವರಾಜ್ ಕುಮಾರ್ ರ ಕಿರಿಯ ಸಹೋದರ ಮಧು ಬಂಗಾರಪ್ಪ (Madhu Bangarappa) ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಸ್ವತಃ ಸಹೋದರ ಕುಮಾರ್ ಬಂಗಾರಪ್ಪ (Kumar Bangarappa) ಅವರ ವಿರುದ್ಧವೇ ಸೊರಬ (Soraba) ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿದಿದ್ದಾರೆ. ಕಿರಿಯ ಸಹೋದರನನ್ನು ಬೆಂಬಲಿಸುವುದಕ್ಕಾಗಿ ಗೀತಾ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ.
ದೊಡ್ಮನೆ ಸೊಸೆ ಗೀತಾ (Geetha) ಶಿವರಾಜ್ ಕುಮಾರ್ ಇಂದು ಮಧ್ಯಾಹ್ನ 12ಕ್ಕೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಅವರನ್ನು ಕಾಂಗ್ರೆಸ್ ಮುಖಂಡರು ಬರಮಾಡಿಕೊಳ್ಳಲಿದ್ದಾರೆ. ಮಧು ಬಂಗಾರಪ್ಪ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
ಪತ್ನಿಯು ಕಾಂಗ್ರೆಸ್ ಪಕ್ಷವನ್ನು ಸೇರುತ್ತಿರುವ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟ ಶಿವರಾಜ್ ಕುಮಾರ್ (Shivaraj Kumar), ‘ಇಂದು ಗೀತಾ ಕಾಂಗ್ರೆಸ್ ಪಕ್ಷ ಸೇರಿ, ನಾಳೆಯಿಂದ ಸೊರಬದಲ್ಲಿ ಪ್ರಚಾರಕ್ಕೆ ತೆರಳುತ್ತಾರೆ. ಅವರ ಜೊತೆ ನಾನೂ ತೆರಳುತಿದ್ದೇನೆ. ಸೊರಬದಲ್ಲಿ ಮಧು ಹಾಗೂ ಅವರ ಮಾವ ಭೀಮ ನಾಯಕ್ ಸಿರಸಿಯಲ್ಲಿ ಚುನಾವಣೆಗೆ ಸ್ಪರ್ಧಿಸುತಿದ್ದಾರೆ. ಇಬ್ಬರೂ ಗೆಲ್ಲಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಶಿವರಾಜ್ ಕುಮಾರ್, ‘ಬಂಗಾರಪ್ಪ ಅವರ ಮಕ್ಕಳಾದ ಮಧು ಹಾಗೂ ಗೀತಾರಿಗೆ ರಾಜಕೀಯ ಹೇಳಿಕೊಡೊದು ಬೇಡ. ತಾಯಿ ಹೋದ ಬಳಿಕ ಎರಡು ವರ್ಷದಿಂದ ಶಕ್ತಿ ಧಾಮದ ಪ್ರೆಸಿಡೆಂಟ್ ಆಗಿದ್ದಾರೆ ಗೀತೆ. ಮಕ್ಕಳಿಗೆ ಸ್ಕಿಲ್ ಡೆವಲಪ್ಮೆಂಟ್ ಮಾಡುತಿದ್ದಾರೆ. ಸುತ್ತಮುತ್ತ ಫ್ರೀ ಬೇಕಿಂಗ್ ಕ್ಯಾಂಪ್ ಮಾಡಿ ಅವೇರ್ ನೆಸ್ ಕೂಡ ಮಾಡಿದ್ದಾರೆ. ಸಮಾಜಮುಖಿ ಕೆಲಸಗಳ ಬಗ್ಗೆ ಅವರಿಗೆ ಆಸಕ್ತಿ ಇದೆ’ ಎಂದು ಹೇಳಿದರು.
ಗೀತಾ ಶಿವರಾಜ್ ಕುಮಾರ್ ರ ಕಿರಿಯ ಸಹೋದರ ಮಧು ಬಂಗಾರಪ್ಪ (Madhu Bangarappa) ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಸ್ವತಃ ಸಹೋದರ ಕುಮಾರ್ ಬಂಗಾರಪ್ಪ (Kumar Bangarappa) ಅವರ ವಿರುದ್ಧವೇ ಸೊರಬ (Soraba) ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿದಿದ್ದಾರೆ. ಕಿರಿಯ ಸಹೋದರನನ್ನು ಬೆಂಬಲಿಸುವುದಕ್ಕಾಗಿ ಗೀತಾ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರತಿ ಬಾರಿಯೂ ಮಧು ಬಂಗಾರಪ್ಪನವರನ್ನು ಬೆಂಬಲಿಸುತ್ತಾ ಬಂದಿದ್ದಾರೆ ಗೀತಾ ಶಿವರಾಜ್ ಕುಮಾರ್. ಒಂದು ಬಾರಿ ಚುನಾವಣೆಗೂ ಅವರು ಸ್ಪರ್ಧಿಸಿ ಸೋತಿದ್ದಾರೆ. ಈ ಬಾರಿ ಸಹೋದರನನ್ನು ಗೆಲ್ಲಿಸಲೇಬೇಕು ಎನ್ನುವ ಕಾರಣದಿಂದಾಗಿ ಕಾಂಗ್ರೆಸ್ ಗೆ ಸೇರ್ಪಡೆ ಆಗುವ ಮೂಲಕ ತಮ್ಮ ಮತ್ತೋರ್ವ ಸಹೋದರ ಕುಮಾರ್ ಬಂಗಾರಪ್ಪ ವಿರುದ್ಧವೇ ಪ್ರಚಾರ ಮಾಡಲಿದ್ಧಾರೆ.
ಈ ಹಿಂದೆ ಕಾಂಗ್ರೆಸ್ ಪಕ್ಷದ ಮುಖಂಡ ಡಿ.ಕೆ. ಶಿವಕುಮಾರ್ (D.K. Shivakumar) ಮತ್ತು ಶಿವರಾಜ್ ಕುಮಾರ್ ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಗೀತಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಮಾತುಕತೆ ಕೂಡ ನಡೆದಿತ್ತು. ಆ ಮಾತುಕತೆ ಫಲಪ್ರದವಾಗಿದೆ. ಹಾಗಾಗಿ ಗೀತಾ ಶಿವರಾಜ್ ಕುಮಾರ್ ಇಂದು ಕಾಂಗ್ರೆಸ್ ಪಕ್ಷದ ಬಾವುಟ ಹಿಡಿಯಲಿದ್ದಾರೆ.
ಮೈಸೂರು: ನಾನು ಲಾರ್ಡ್ ಶಿವ ಅಲ್ಲ. ನಾನು ನಿಮ್ಮ ಶಿವಣ್ಣ ಮಾತ್ರ ಎಂದು ಚಂದನವನದ ನಟ ಶಿವರಾಜ್‍ಕುಮಾರ್ ಅಭಿಮಾನಿಗಳಿಗೆ ಹೇಳಿದರು.
ಮೈಸೂರಿನಲ್ಲಿ ನಯನ ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಭಾಷಣ ಮಾಡಿದ ಅವರು, ಕೋವಿಡ್-19 ಸಂದರ್ಭದಲ್ಲಿ ಇಂತಹ ಆಸ್ಪತ್ರೆ ಬಹಳ ಅಗತ್ಯ. ಅಪ್ಪು ಹೆಸರಿನಲ್ಲಿ ಚಿಕಿತ್ಸೆಗೆ ರಿಯಾಯಿತಿ ಕೊಡಲಾಗುತ್ತಿದೆ. ಅಪ್ಪುಗೆ ಯೋಗ, ಯೋಗ್ಯತೆ ಎರಡೂ ಇದೆ. ಹೀಗಾಗಿ ಈ ರೀತಿಯ ಸ್ಮರಣೆ ಆಗುತ್ತಿದೆ. ದೊಡ್ಡವರು, ಚಿಕ್ಕವರು ಎಂಬ ಬೇಧ ಇರದೆ ಎಲ್ಲರಿಗೂ ಸಮನಾಗಿ ಚಿಕಿತ್ಸೆ ನೀಡಿ ಎಂದು ಆಶಿಸಿದರು. ಇದನ್ನೂ ಓದಿ: ಸಂಪೂರ್ಣವಾಗಿ ನೋವು ಹೇಳಿಕೊಳ್ಳೋ ಸ್ಥಿತಿಯಲ್ಲಿಲ್ಲ, ಅದರೊಂದಿಗೆ ಬದುಕ್ತಿದ್ದೇವೆ: ಅಪ್ಪು ನೆನೆದ ಶಿವಣ್ಣ
ಗೀತಾ ತನ್ನ ತಾಯಿಯ ಸ್ಥಾನದಲ್ಲಿ ನಿಂತು ಶಕ್ತಿಧಾಮ ನೋಡಿಕೊಳ್ಳುತ್ತಿದ್ದಾರೆ. ನಾನು ಲಾರ್ಡ್ ಶಿವ ಅಲ್ಲ. ನಾನು ನಿಮ್ಮ ಶಿವಣ್ಣ ಮಾತ್ರ. ನಾನು ಶಿವಣ್ಣ ಆಗಿರೋಕೆ ಮಾತ್ರ ಇಷ್ಟ ಪಡುತ್ತೇನೆ ಎಂದು ಹೇಳಿ ಅಭಿಮಾನಿಗಳನ್ನು ರಂಜಿಸಲು ‘ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು’ ಎಂದು ಹಾಡನ್ನು ಹಾಡಿದರು. ನಂತರ ಆಸ್ಪತ್ರೆಗೆ ಅಪ್ಪು ಹೆಸರಿನಲ್ಲಿ ಎರಡು ಗಂಧದ ಗಿಡ ಕೊಟ್ಟಿದ್ದಾರೆ.
ಉದ್ಯಮಿ ಕೆ.ಬಿ.ಕುಮಾರ್ ಕುಟುಂಬದ ಒಡೆತನದ ಆಸ್ಪತ್ರೆ ಇದಾಗಿದೆ. ಈ ಆಸ್ಪತ್ರೆಯಲ್ಲಿ 150 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಲೋಕಾರ್ಪಣೆ ಮಾಡಲಾಗಿದ್ದು, ಯೋಗಾನರಸಿಂಹಸ್ವಾಮಿ ದೇಗುಲದ ಶ್ರೀ ಭಾಷ್ಯಂ ಸ್ವಾಮಿಜೀ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಈ ಆಸ್ಪತ್ರೆಯ ಸಿಇಓ ಆಗಿ ಪುತ್ರಿ ಹಾಗೂ ಕೈಂಡ್ ಆರ್ಟ್ ಟ್ರಸ್ಟ್ ನಯನ ಮುನ್ನೆಡಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಜಿಟಿ ದೇವೇಗೌಡ, ಪುತ್ರ ಜಿಡಿ ಹರೀಶ್ ಗೌಡ ಸೇರಿ ಸ್ಥಳೀಯ ಜನಪ್ರತಿನಿಧಿಗಳು ಭಾಗಿಯಾಗಿದ್ದರು. ಇದನ್ನೂ ಓದಿ: ಕರಿಷ್ಮಾ ಫಿಟ್ನೆಸ್ ಹೊಗಳಿದ ಮಲೈಕಾ ಅರೋರಾ
ಇದೇ ವೇಳೆ ಸಿನಿಮಾ ಮಂದಿರಗಳಿಗೆ ಕೋವಿಡ್ 50:50 ರೂಲ್ಸ್ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆಯಷ್ಟೇ ನಾನು ಈ ಬಗ್ಗೆ ಮಾಹಿತಿ ತೆಗೆದುಕೊಂಡಿದ್ದೇನೆ. ನಾವು ಕೊರೊನಾದ ಜೊತೆ ಜೊತೆಗೆ ಬದುಕಬೇಕಿದೆ. ಅದರ ಜೊತೆಗೆ ಬದುಕಬೇಕಾದ ಅನಿವಾರ್ಯತೆ ಇದೆ. ಎಲ್ಲ ಕ್ಷೇತ್ರಗಳಿಗೂ 50:50 ರೂಲ್ಸ್ ನಿಂದ ರಿಲ್ಯಾಕ್ಸ್ ಕೊಡಲಾಗಿದೆ. ಆದರೆ ಸಿನಿಮಾ ಮಂದಿರಗಳಿಗೆ ಯಾಕೆ ರಿಲ್ಯಾಕ್ಸ್ ಕೊಟ್ಟಿಲ್ಲ ಎಂದು ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ. ಮುಖ್ಯಮಂತ್ರಿಗಳು ನಮಗೆ ಸಾಕಷ್ಟು ಬಾರಿ ಅನುಕೂಲ ಮಾಡಿಕೊಟ್ಟಿದ್ದಾರೆ. ಈಗಲೂ ನಮಗೆ ಅನುಕೂಲ ಮಾಡಿಕೊಡುವ ಭರವಸೆ ಇದೆ ಎಂದು ವಿವರಿಸಿದರು.
ಬೆಂಗಳೂರು: ಮೂರನೇ ವಾರ ಬಿಗ್‍ಬಾಸ್ ಮನೆಯಿಂದ ಗೀತಾ ಭಾರತಿ ಮನೆಯಿಂದ ಹೊರ ಬಂದಿದ್ದಾರೆ.
ಒಟ್ಟು 17 ಜನರ ಪೈಕಿ ಗೀತಾ ಸೇರಿದಂತೆ ಮೂವರು ಮನೆಯಿಂದ ಹೊರ ಬಂದಿದ್ದಾರೆ. ಮೊದಲ ವಾರ ಟಿಕ್‍ಟಾಕ್ ಸ್ಟಾರ್ ಧನುಶ್ರೀ, ಎರಡನೇ ವಾರ ನಿರ್ಮಲಾ ಚೆನ್ನಪ್ಪ ಔಟ್ ಆಗಿದ್ದಾರೆ. ಮೂರನೇ ವಾರದ ಶನಿವಾರ ಕೊನೆಯ ನಾಮಿನೇಷನ್ ಲಿಸ್ಟ್ ನಲ್ಲಿ ಶಮಂತ್, ರಘು, ವಿಶ್ವನಾಥ್, ದಿವ್ಯಾ ಉರುಡುಗ ಮತ್ತು ಗೀತಾ ಉಳಿದುಕೊಂಡಿದ್ದರು.
ಮನೆಯಿಂದ ಹೊರ ಬಂದ ಗೀತಾ ಸುದೀಪ್ ಜೊತೆ ವೇದಿಕೆ ಹಂಚಿಕೊಂಡರು. ಮನೆಯಲ್ಲಿರೋ ಎಲ್ಲರನ್ನ ತುಂಬಾನೇ ಪ್ರೀತಿಸುತ್ತೇನೆ. ಬಿಗ್‍ಬಾಸ್ ವಾಯ್ಸ್ ಮೇಲೆ ತುಂಬಾನೇ ಲವ್ ಆಗಿದೆ. ಮುಂದೆ ಹಾಡುತ್ತೇನೆ, ನಟಿಸುತ್ತೇನೆ ಜೊತೆಗೆ ಸಣ್ಣಗಾಗುತ್ತೇನೆ. ಮುಂದಿನ ವಾರ ಶಮಂತ್ ಮನೆಯಿಂದ ಹೊರ ಬರಬಹುದು ಎಂದು ಹೇಳಿದರು.
ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಹಾಗೂ ದಿವ್ಯ ಉರುಡುಗ ಜೋಡಿ ಟಾಸ್ಕ್ ಆಡಿ ಗೆದ್ದಿದ್ದರು. ಅದಾದ ಬಳಿಕದಿಂದ ಈ ಜೋಡಿ ಬಗ್ಗೆ ಮನೆಮಂದಿಯೆಲ್ಲಾ ಮಾತನಾಡಿಕೊಳ್ಳಲು ಶುರುಮಾಡಿದ್ದಾರೆ. ಈ ಕುರಿತು ಗೀತಾ ಹಾಗೂ ಪ್ರಶಾಂತ್ ಸಂಬರ್ಗಿ ಕೂಡ ಭಾರೀ ಚರ್ಚೆಯನ್ನೇ ನಡೆಸಿದ್ದಾರೆ.
ಹೌದು. ಜೋಡಿ ಟಾಸ್ಕ್‍ನಲ್ಲಿ ಆಡಲು ದಿವ್ಯ ಉರುಡುಗ ಅವರು ಅರವಿಂದ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಆ ಬಳಿಕದಿಂದ ಇಬ್ಬರೂ ಹೆಚ್ಚು ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ದಿವ್ಯ ಹಾಗೂ ಅರವಿಂದ್ ಮಧ್ಯೆ ಏನೋ ನಡೆಯುತ್ತಿದೆ ಅಂತ ಮನೆ ಮಂದಿ ಪಿಸು ಪಿಸು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಹಿಂದೆ ದಿವ್ಯ ಉರುಡುಗ ಅವರು ಪ್ರಶಾಂತ್ ಸಂಬರ್ಗಿ ಜೊತೆ ಚೆನ್ನಾಗಿಯೇ ಇದ್ದರು. ಆದರೆ ಜೋಡಿ ಟಾಸ್ಕ್ ಬಂದ ಬಳಿಕ ದಿವ್ಯ ಉರುಡುಗ ವರ್ತನೆ ಬದಲಾಗಿದೆ ಎಂದು ನಿಧಿ ಸುಬ್ಬಯ್ಯ ಹಾಗೂ ಶುಭಾ ಪೂಂಜಾ ಮಾತನಾಡಿಕೊಂಡಿದ್ದಾರೆ.
ಇತ್ತ ಗೀತಾ ಹಾಗೂ ಸಂಬರ್ಗಿ ಕೂಡ ದಿವ್ಯ, ಅರವಿಂದ್ ಜೋಡಿ ಬಗ್ಗೆ ರಾತ್ರಿ ಚರ್ಚೆ ನಡೆಸಿದ್ದಾರೆ. ಇವರು ಲವ್ ಮಾಡ್ತಿದ್ದಾರೋ ಹೇಗೆ ಎಂದು ಗೀತಾ ಅವರು ದಿವ್ಯ ಬಳಿಯೇ ಹಲವು ಬಾರಿ ಪ್ರಶ್ನೆ ಮಾಡಿದ್ದರಂತೆ. ಆಗ ದಿವ್ಯ, ಜೋಡಿ ಟಾಸ್ಕ್ ಅಂತ ಒಟ್ಟಾಗಿ ಇದ್ದೇವೆ ಎಂದು ಉತ್ತರಿಸಿರುವುದಾಗಿ ಸಂಬರ್ಗಿ ಬಳಿ ಗೀತಾ ಹೇಳಿದ್ದಾರೆ.
ಅರವಿಂದ್ ಅವರು ದಿವ್ಯಾರನ್ನು ಲವ್ ಮಾಡುವ ವಿಚಾರದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಅವರು ಓಪನ್ ಆಗಿದ್ದಾರೆ ಎಂದು ಸಂಬರ್ಗಿ ಹೇಳಿದ್ದಾರೆ. ಸಂಬರ್ಗಿ ಮಾತಿಗೆ ದನಿಗೂಡಿಸಿದ ಗೀತಾ, ಶುಭಾ ಪೂಂಜಾ ಮದುವೆ ನಂತರದಲ್ಲಿ ಇನ್ನೊಂದು ಮದುವೆ ಊಟ ಸಿಗಬಹುದು ಅಂತ ಹೇಳಿದ್ದಾರೆ. ಅಷ್ಟೇ ಅಲ್ಲದೆ ಜೋಡಿ ಟಾಸ್ಕ್ ಮುಗಿದು 2 ದಿನವಾದರೂ ಇವರಿಬ್ಬರು ಒಟ್ಟಾಗಿದ್ದಾರೆ ಅಂತ ಹೇಳಿಕೊಂಡು ಗೀತಾ, ಪ್ರಶಾಂತ್ ನಕ್ಕಿದ್ದಾರೆ. ಜೊತೆಗೆ ಒಳ್ಳೆಯದಾದರೆ ಆಗಲಿ, ನಾವು ಓವರ್ ಆಗಿ ಯೋಚನೆ ಮಾಡುತ್ತಿದ್ದೆವೆ ಅಂತ ಗೀತಾ ಅವರನ್ನೇ ಅವರು ಪ್ರಶ್ನೆ ಮಾಡಿಕೊಂಡಿದ್ದಾರೆ.
ಬೆಂಗಳೂರು: ಗೋಕಾಕ್ ಚಳುವಳಿ ಮತ್ತು ಕನ್ನಡಪ್ರೇಮದ ಕಥಾನಕವೆಂಬ ಸುಳಿವಿನ ಮೂಲಕವೇ ಕನ್ನಡಿಗರ ನಡುವೆ ಕುತೂಹಲದ ಸೆಳೆಮಿಂಚು ಹರಿಸಿದ್ದ ಚಿತ್ರ ಗೀತಾ. ಗೋಲ್ಡನ್ ಸ್ಟಾರ್ ಗಣೇಶ್ ಟ್ರೇಲರ್ ಮೂಲಕ ಕನ್ನಡ ಪರ ಹೋರಾಟಗಾರನಾಗಿ ಅಬ್ಬರಿಸಿದ್ದ ರೀತಿ ಮತ್ತಷ್ಟು ಜನರನ್ನು ಆಕರ್ಷಿಸಿತ್ತು. ಅಷ್ಟಕ್ಕೂ ಗೋಕಾಕ್‍ನಂಥಾ ಐತಿಹಾಸಿಕ ಚಳುವಳಿಯನ್ನು ಕಮರ್ಶಿಯಲ್ ಚೌಕಟ್ಟಿನಲ್ಲಿ, ಪ್ರೇಮಕಥಾನಕದೊಂದಿಗೆ ಹೇಳೋದೇ ಮಹಾ ಸವಾಲು. ನಿರ್ದೇಶಕ ವಿಜಯ್ ಕಿರಣ್ ಮೊದಲ ಹೆಜ್ಜೆಯಲ್ಲಿಯೇ ಅದನ್ನು ಸ್ವೀಕರಿಸಿದ್ದಾರೆಂದರೆ, ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡಪರ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆಂದರೆ ಗೀತಾ ಬಗ್ಗೆ ಬೆರಗು ಮೂಡದಿರಲು ಸಾಧ್ಯವೇ? ಈ ಕಾರಣದಿಂದಲೇ ದಶ ದಿಕ್ಕುಗಳಿಂದಲೂ ಕುತೂಹಲಕ್ಕೆ ಕಾರಣವಾಗಿದ್ದ ಗೀತಾ ಇದೀಗ ಪ್ರೇಕ್ಷಕರ ಮುಂದೆ ಅನಾವರಣಗೊಂಡಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಇಲ್ಲಿ ಎರಡು ಪಾತ್ರಗಳನ್ನು ಸಂಭಾಳಿಸಿದ್ದಾರೆ. ಅವೆರಡರಲ್ಲಿಯೂ ಕನ್ನಡಿಗರೆಲ್ಲರ ಮನ ಮುಟ್ಟುವಂತೆ ನಟಿಸಿದ್ದಾರೆ. ಆಕಾಶ್ ಮತ್ತು ಶಂಕರನಾಗಿ ಅವರು ನಟಿಸಿದ್ದಾರೆ. ಈ ಆಕಾಶ್ ತಂದೆ ತಾಯಿಯರಿದ್ದರೂ ತೊಳಲಾಟವನ್ನೇ ಹೊದ್ದು ಬದುಕುವ ಹುಡುಗ. ಯಾಕೆಂದರೆ ತಂದೆ ತಾಯಿ ಬೇರೆಯಾಗಿ ಎರಡು ಧ್ರುವಗಳಂತಾಗಿರುತ್ತಾರೆ. ಇಬ್ಬರನ್ನೂ ಬೇರೆ ಬೇರೆಯಾಗಿಯೇ ಕಾಣುತ್ತಾ, ಅಪೂರ್ಣ ಪ್ರೀತಿಯ ಕೊರತೆಯನ್ನು ಮನಸೊಳಗೆ ಸಾಕಿಕೊಂಡೆ ಇರೋ ಆತನ ಪಾಲಿಗೆ ಅಪ್ಪ ಅಮ್ಮ ಹೀಗಾಗಲು ಕಾರಣವೇನೆಂಬುದು ಸದಾ ಕಾಡುವ ಪ್ರಶ್ನೆ. ಕಡೆಗೂ ಅದಕ್ಕೆ ಉತ್ತರ ಹುಡುಕಿದಾಗ ಕನ್ನಡಪ್ರೇಮಿ ಶಂಕರನ ಕಥೆ ತೆರೆದುಕೊಳ್ಳುತ್ತೆ. ಇಡೀ ಕಥೆಗೊಂದು ಹೊಸಾ ಆವೇಗ ಬರುವುದು ಆ ಕ್ಷಣದಿಂದಲೇ.
ಅಲ್ಲಿಂದಾಚೆಗೆ ಗೋಕಾಕ್ ಚಳುವಳಿಯ ಹಿನ್ನೆಲೆಯ ಅಪ್ಪಟ ಕನ್ನಡ ಪ್ರೇಮ ಹೊದ್ದುಕೊಂಡ ಕಥೆ ಬಿಚ್ಚಿಕೊಳ್ಳುತ್ತದೆ. ಅದರ ಜೊತೆ ಜೊತೆಗೇ ಎಂಥವರ ಎದೆಗಾದರೂ ನೇರವಾಗಿ ಸೋಕುವಂಥಾ ಪ್ರೇಮ ಕಥೆಯೂ ಬಿಚ್ಚಿಕೊಳ್ಳುತ್ತದೆ. ಅಷ್ಟಕ್ಕೂ ಈ ಆಕಾಶ್ ಯಾರು? ಆತನಿಗೂ ಶಂಕರನ ಕಥೆಗೂ ಇರೋ ಕನೆಕ್ಷನ್ನುಗಳೇನೆಂಬುದನ್ನು ಕುತೂಹಲ ಕಾಯ್ದಿಟ್ಟುಕೊಂಡೇ ಅನಾವರಣಗೊಳಿಸುವಲ್ಲಿ ನಿರ್ದೇಶಕ ವಿಜಯ್ ನಾಗೇಂದ್ರರ ಜಾಣ್ಮೆಯ ಅನಾವರಣವಾಗುತ್ತದೆ. ಗೋಕಾಕ್‍ನಂಥಾ ಗಂಭೀರ ಚಳುವಳಿ ಮತ್ತು ಪ್ರೀತಿಯನ್ನು ಹದಮುದವಾಗಿ ಬೆರೆಸುತ್ತಲೇ ಮನೋರಂಜನೆಗೂ ಕೂಡಾ ಕೊರತೆಯಾಗದಂತೆ ಮೂಡಿ ಬಂದಿರೋದು ಈ ಚಿತ್ರದ ನಿಜವಾದ ಹೆಚ್ಚುಗಾರಿಕೆ.
ಇಲ್ಲಿ ಗೋಕಾಕ್ ಚಳುವಳಿಯನ್ನು ಮರು ರೂಪಿಸಿದ ರೀತಿಯೇ ಕನ್ನಡದ ಮನಸುಗಳನ್ನೆಲ್ಲ ಥ್ರಿಲ್ ಆಗಿಸುವಂತಿದೆ. ಕಥೆ ಬೇರೆ ಬೇರೆ ದಿಕ್ಕುಗಳಲ್ಲಿ ಹರಡಿಕೊಂಡಿದ್ದರೂ ಯಾವುದೂ ಕೃತಕ ಅನ್ನಿಸದಂತೆ, ಬೇರೆ ಬೇರೆಯೆಂಬ ಭಾವ ಮೂಡಿಸದಂತೆ ಕೂಡಿಸುವಲ್ಲಿಯೂ ಕೂಡಾ ನಿರ್ದೇಶನದ ಕಸುಬುದಾರಿಕೆ ಜಾಹೀರಾಗುತ್ತದೆ. ಇನ್ನುಳಿದಂತೆ ಗಣೇಶ್ ಇಲ್ಲಿ ಬೇರೆಯದ್ದೇ ಲುಕ್ಕಿನಲ್ಲಿ, ಹದಗೊಂಡ ನಟನೆಯ ಮೂಲಕ ಪ್ರೇಕ್ಷಕರನ್ನು ಅಚ್ಚರಿಗೀಡು ಮಾಡುತ್ತಾರೆ. ಮೂವರು ನಾಯಕಿಯರು ಮತ್ತು ಇತರೇ ಪಾತ್ರವರ್ಗವೂ ಕೂಡಾ ಅದಕ್ಕೆ ತಕ್ಕುದಾಗಿಯೇ ಸಾಥ್ ಕೊಟ್ಟಿದ್ದಾರೆ. ಹಿನ್ನೆಲೆ ಸಂಗೀತ, ಛಾಯಾಗ್ರಹಣ ಮತ್ತು ಹಾಡುಗಳೆಲ್ಲವೂ ಒಂದಕ್ಕೊಂದು ಪೂರಕವಾಗಿವೆ.
ಈ ಚಿತ್ರದಲ್ಲಿ ಪ್ರಧಾನ ಕುತೂಹಲವಿದ್ದದ್ದೇ ಗೋಕಾಕ್ ಚಳುವಳಿಯ ಮರುಸೃಷ್ಟಿಯ ಬಗ್ಗೆ. ಅದನ್ನು ನಿರ್ಮಾಪಕರಾದ ಸೈಯದ್ ಸಲಾಮ್ ಮತ್ತು ಶಿಲ್ಪಾ ಗಣೇಶ್ ಪರಿಣಾಮಕಾರಿಯಾಗಿ, ರಿಚ್ ಆಗಿ ಮೂಡಿ ಬರುವಂತೆ ಮಾಡಿದ್ದಾರೆ. ನಿರ್ದೇಶಕ ವಿಜಯ್ ನಾಗೇಂದ್ರ ಮೊದಲ ಹೆಜ್ಜೆಯಲ್ಲಿಯೇ ಸಂಕೀರ್ಣವಾದ ಕಥೆಯನ್ನು ಆರಿಸಿಕೊಂಡಿದ್ದರೂ ಕೂಡಾ ಎಲ್ಲಿಯೂ ಸಿಕ್ಕಾಗದಂತೆ ಕಲಾತ್ಮಕ ಕೈಚಳಕ ತೋರಿಸಿದ್ದಾರೆ. ಈ ಕಾರಣದಿಂದಲೇ ವಿರಳ ಕಥೆಯ ಮೂಲಕ ಗೀತಾ ಕನ್ನಡತನದ ಗೋಲ್ಡನ್ ಕ್ಷಣಗಳನ್ನು ಸಮರ್ಥವಾಗಿಯೇ ಪ್ರೇಕ್ಷಕರ ಮುಂದಿಟ್ಟಿದ್ದಾಳೆ!
ಬೆಂಗಳೂರು: ಒಂದು ಸಿನಿಮಾ ರೂಪುಗೊಳ್ಳೋದರ ಹಿಂದೆ ನಾನಾ ಘಟ್ಟಗಳಿರುತ್ತವೆ. ಹೇಳಲಾರದಂಥಾ ಪಡಿಪಾಟಲುಗಳೂ ಇರುತ್ತವೆ. ದಿನ, ತಿಂಗಳುಗಳಲ್ಲ; ವರ್ಷಗಟ್ಟಲೆ ಪಟ್ಟಾಗಿ ಕೂತು ಕಾವು ಕೊಡದಿದ್ದರೆ ಗಟ್ಟಿ ಕಥೆಯೊಂದು ರೂಪುಗೊಳ್ಳಲು ಸಾಧ್ಯವಾಗೋದಿಲ್ಲ. ಇದೀಗ ಭಾರೀ ಅಬ್ಬರದೊಂದಿಗೆ ಇದೇ ತಿಂಗಳ 27ರಂದು ಬಿಡುಗಡೆಗೆ ರೆಡಿಯಾಗಿರೋ ಗೀತಾ ಚಿತ್ರದ ಹುಟ್ಟಿನ ಹಿಂದೆಯೂ ಅಂಥಾದ್ದೇ ಪರಿಶ್ರಮಗಳ ಕಥೆಯಿದೆ. ಅಷ್ಟಕ್ಕೂ ಈಗ ಬಿಡುಗಡೆಯ ಹೊಸ್ತಿಲಲ್ಲಿರೋ ಗೀತಾ ಎರಡು ವರ್ಷದ ಹಿಂದೆಯೇ ಒಂದೆಳೆಯ ಕಥೆಯ ಮೂಲಕ ನಸುನಕ್ಕಿದ್ದಳು.
ಸಂತೋಷ್ ಆನಂದ್ ರಾಮ್ ನಿರ್ದೇಶನದ ಸೂಪರ್ ಹಿಟ್ ಚಿತ್ರ ರಾಜಕುಮಾರದಲ್ಲಿ ಕೋ ರೈಟರ್, ಡೈರೆಕ್ಟರ್ ಆಗಿದ್ದವರು ವಿಜಯ್ ನಾಗೇಂದ್ರ. ಆ ಚಿತ್ರ ತೆರೆ ಕಂಡು ಸಾರ್ವಕಾಲಿಕ ದಾಖಲೆ ಮಾಡಿದ್ದೀಗ ಇತಿಹಾಸ. ಈ ರಾಜಕುಮಾರ ಚಿತ್ರಕ್ಕೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ವಿಜಯ್ ನಾಗೇಂದ್ರರಿಗೆ ಗೀತಾ ಚಿತ್ರದ ಒಂದೆಳೆ ಕಥೆ ಹೊಳೆದು ಅದಕ್ಕೊಂದಷ್ಟು ಸಿನಿಮಾ ರೂಪುರೇಷೆಗಳನ್ನೂ ನೀಡಿದ್ದರು. ಆಗ ವಿಜಯ್ ಅವರ ಮನಸಲ್ಲಿ ನಾಯಕನಾಗಿ ನೆಲೆಗೊಂಡಿದ್ದದ್ದು ಗೋಲ್ಡನ್ ಸ್ಟಾರ್ ಗಣೇಶ್ ಅವರೇ!
ರಾಜಕುಮಾರ ಚಿತ್ರ ಬಿಡುಗಡೆಯಾಗುತ್ತಲೇ ವಿಜಯ್ ನಾಗೇಂದ್ರ ಗಣೇಶ್‍ರನ್ನು ಭೇಟಿಯಾಗಿ ಈ ಕಥೆಯನ್ನು ಹೇಳಿದ್ದರಂತೆ. ಅದನ್ನು ಕೇಳಿದಾಕ್ಷಣವೇ ಖುಷಿಗೊಂಡಿದ್ದ ಗಣೇಶ್ ನಟಿಸಲೂ ಒಪ್ಪಿಗೆ ಸೂಚಿಸಿದ್ದರು. ಹಾಗೆ ಹೊಳೆದ ಒಂದೆಳೆಯನ್ನು ಗೋಕಾಕ್ ಚಳವಳಿಯ ಬಗ್ಗೆ ಅಧ್ಯಯನ ನಡೆಸಿ, ಹಿರಿಯರಿಂದ ಮಾರ್ಗದರ್ಶನ ಪಡೆದು ಕಡೆಗೂ ಒಂದು ರೂಪಕ್ಕೆ ತರಲಾಗಿತ್ತು. ಇದರೊಂದಿಗೆ ಮಸ್ತ್ ಆಗಿರೋ ಪ್ರೇಮ ಕಥಾನಕವನ್ನು ಬ್ಲೆಂಡ್ ಮಾಡಿ ಗಟ್ಟಿ ಕಥೆಯೊಂದನ್ನು ಸಿದ್ಧಪಡಿಸಿಕೊಂಡ ವಿಜಯ್ ನಾಗೇಂದ್ರ ಚಿತ್ರೀಕರಣಕ್ಕಿಳಿದಿದ್ದರು. ಆ ನಂತರದ್ದೇನಿದ್ದರೂ ಸೆನ್ಸೇಷನಲ್ ಪಯಣ. ಹಾಗೆ ಸಾಗಿ ಬಂದಿರೋ ಗೀತಾ ಚಿತ್ರ ಇದೇ ತಿಂಗಳ 27ರಂದು ತೆರೆಗಾಣಲಿದೆ. ಈ ಚಿತ್ರವನ್ನು ಕನ್ನಡ ಚಿತ್ರರಂಗದ ಯಶಸ್ವೀ ನಿರ್ಮಾಪಕ ಸೈಯದ್ ಸಲಾಮ್ ಅವರ ಸಹಕಾರದೊಂದಿಗೆ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿದ್ದಾರೆ.