Tag: Geeta

  • ಹಿರಿಯ ನಟಿ ಲೀಲಾವತಿ ಮನೆಯಲ್ಲಿ ಶಿವಣ್ಣ: ಆರೋಗ್ಯ ವಿಚಾರಣೆ

    ಹಿರಿಯ ನಟಿ ಲೀಲಾವತಿ ಮನೆಯಲ್ಲಿ ಶಿವಣ್ಣ: ಆರೋಗ್ಯ ವಿಚಾರಣೆ

    ಯೋಸಹಜ ಅನಾರೋಗ್ಯದ ಕಾರಣದಿಂದಾಗಿ ಹಾಸಿಗೆ ಹಿಡಿದಿರುವ ಹಿರಿಯ ನಟಿ ಲೀಲಾವತಿ ಅವರ ಮನೆಗೆ ನಟ ಶಿವರಾಜ್ ಕುಮಾರ್ (Shivaraj Kumar) ಆಗಮಿಸಿ ಆರೋಗ್ಯ ವಿಚಾರಿಸಿದ್ದಾರೆ. ಪತ್ನಿ ಗೀತಾ (Geeta)ಅವರೊಂದಿಗೆ ಆಗಮಿಸಿದ್ದ ಶಿವಣ್ಣ, ಹಿರಿಯ ನಟಿಯ ಆರೋಗ್ಯದ ಕುರಿತು ವಿವರಣೆ ಪಡೆದುಕೊಂಡರು. ಲೀಲಾವತಿ ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಿದರು.

    ಮನೆಗೆ ಆಗಮಿಸಿದ್ದ ಶಿವರಾಜ್ ಕುಮಾರ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ವಿನೋದ್ ರಾಜ್ (Vinod Raj), ಅಮ್ಮನ ಆರೋಗ್ಯದ ಕುರಿತು ಮಾಹಿತಿ ನೀಡಿದರು. ಶಿವಣ್ಣ ಮತ್ತು ವಿನೋದ್ ರಾಜ್ ತಬ್ಬಿಕೊಂಡು ಭಾವುಕ ಕ್ಷಣಕ್ಕೆ ಸಾಕ್ಷಿಯಾದರು.

    ಮೊನ್ನೆಯಷ್ಟೇ ಲೀಲಾವತಿ (Leelavati) ಅವರ ಮನೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದ್ದರು ಖ್ಯಾತ ನಟ ಅರ್ಜುನ್ ಸರ್ಜಾ (Arjun Sarja), ದರ್ಶನ್. ನೆಲಮಂಗಲದ ಬಳಿ ಇರುವ ಸೋಲದೇವನಹಳ್ಳಿ ತೋಟದ ಮನೆಗೆ ಬಂದಿದ್ದ ಅರ್ಜುನ್ ಸರ್ಜಾ, ಕೆಲವು ಹೊತ್ತು ಲೀಲಾವತಿ ಅವರ ಮನೆಯಲ್ಲಿ ಇದ್ದು, ಆರೋಗ್ಯ ವಿಚಾರಿಸಿದ್ದರು.

     

    ವಯಸ್ಸಿನ ಕಾರಣದಿಂದಾಗಿ ಲೀಲಾವತಿ ಅವರು ಹಾಸಿಗೆ ಹಿಡಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಸೋಲದೇವನಹಳ್ಳಿಗೆ ತೆರೆಳ ಆರೋಗ್ಯ ವಿಚಾರಿಸುತ್ತಿದ್ದಾರೆ. ಇದೀಗ ಅರ್ಜುನ್ ಸರ್ಜಾ ಕೂಡ  ಅದೇ ಕೆಲಸ ಮಾಡಿದ್ದಾರೆ. 87 ವರ್ಷದ ಹಿರಿಯ ನಟಿ ಲೀಲಾವತಿಯವರು ಆರೋಗ್ಯ ಸಮಸ್ಯೆಯಿಂದಾ ವಿಶ್ರಾಂತಿ ಪಡೆಯುತ್ತಿದ್ದಾರೆ.

  • ನನ್ನ ತಮ್ಮ ಮಂತ್ರಿ ಆಗ್ತಾನೆ : ನಿಜವಾಯ್ತು ಗೀತಾ ಶಿವರಾಜ್ ಕುಮಾರ್ ಭವಿಷ್ಯ

    ನನ್ನ ತಮ್ಮ ಮಂತ್ರಿ ಆಗ್ತಾನೆ : ನಿಜವಾಯ್ತು ಗೀತಾ ಶಿವರಾಜ್ ಕುಮಾರ್ ಭವಿಷ್ಯ

    ಲವು ದಿನಗಳ ಹಿಂದೆ ದೊಡ್ಮನೆ ಸೊಸೆ ಗೀತಾ (Geeta) ಶಿವರಾಜ್ ಕುಮಾರ್ ಭವಿಷ್ಯ ನುಡಿದಿದ್ದರು. ಇದೀಗ ನಿಜವಾಗಿದೆ. ಸೊರಬ (Soraba) ಕ್ಷೇತ್ರದಿಂದ ಗೀತಾ ಸಹೋದರ ಮಧು ಬಂಗಾರಪ್ಪ (Madhu Bangarappa) ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದರು. ಗೆಲುವು ಘೋಷಣೆ ಆಗುತ್ತಿದ್ದಂತೆಯೇ ಗೀತಾ ಶಿವರಾಜ್ ಕುಮಾರ್ (Shivraj Kumar) ತಮ್ಮನ ಬಗ್ಗೆ ಭವಿಷ್ಯ ನುಡಿದಿದ್ದರು. ಈ ಬಾರಿ ಮಧು ಮಂತ್ರಿ ಆಗ್ತಾನೆ ಎಂದು ಮಾಧ್ಯಮಗಳ ಮುಂದೆ ಮಾತನಾಡಿದ್ದರು.

    ನಿನ್ನೆಯಷ್ಟೇ ಕಾಂಗ್ರೆಸ್ (Congress)  ಪಕ್ಷವು 24 ಜನ ಮಂತ್ರಿಗಳ ಪಟ್ಟಿ ಬಿಡುಗಡೆ ಆಗಿದ್ದು, ಆ ಪಟ್ಟಿಯಲ್ಲಿ ಮಧು ಬಂಗಾರಪ್ಪ ಹೆಸರಿದೆ. ಸಹಜವಾಗಿಯೇ ಗೀತಾ ಅವರ ಮಾತಿಗೆ ಬೆಲೆ ಬಂದಿದೆ. ಅಲ್ಲದೇ, ಮೊನ್ನೆಯಷ್ಟೇ ಕಾಂಗ್ರೆಸ್ ಮುಖಂಡ ಸುರ್ಜೆವಾಲಾ ಕೂಡ ಶಿವರಾಜ್ ಕುಮಾರ್ ಮನೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲೂ ಮಂತ್ರಿ ಮಾಡುವ ಕುರಿತು ಮಾತುಕತೆ ನಡೆದಿದೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ಎಕ್ಸ್ ಕ್ಲೂಸಿವ್ ಸುದ್ದಿ ಪ್ರಕಟಿಸಿತ್ತು. ಇದನ್ನೂ ಓದಿ:ಈ ಕಾರಣಕ್ಕಾಗಿ ಯಶ್ ಸಿನಿಮಾ ಕೈ ಬಿಟ್ಟರು: ನಿರ್ದೇಶಕ ನರ್ತನ್

    ಈವರೆಗೂ ಜೆಡಿಎಸ್ ಸಪೋರ್ಟ್ ಮಾಡುತ್ತಾ ಬಂದಿದ್ದ ಗೀತಾ ಶಿವರಾಜ್ ಕುಮಾರ್, ಇದೇ ಪಕ್ಷದಿಂದಲೇ ಚುನಾವಣೆಯನ್ನೂ ಎದುರಿಸಿದ್ದರು. ಈ ವರ್ಷ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಈ ಮೂಲಕ ಸಹೋದರ ಮಧು ಅವರ ಪರ ಪ್ರಚಾರಕ್ಕೆ ಶಿವರಾಜ್ ಕುಮಾರ್ ಅವರನ್ನು ಕರೆತಂದಿದ್ದರು. ಈ ಎಲ್ಲ ಸಹಕಾರವು ಮಧು ಅವರನ್ನು ಮಂತ್ರಿಯಾಗಿಸಿದೆ.

    ಡಾ.ರಾಜ್ ಕುಟುಂಬದಲ್ಲಿ ಯಾರೂ ರಾಜಕಾರಣಕ್ಕೆ ಬಾರದೇ ಇದ್ದರೂ, ಪತ್ನಿ ಪರವಾಗಿ ಶಿವಣ್ಣ ರಾಜಕೀಯ ಆಖಾಡಕ್ಕೆ ಇಳಿದಿದ್ದರು. ಗೀತಾ ಅವರದ್ದು ರಾಜಕಾರಣ ಕುಟುಂಬವಾಗಿದ್ದರಿಂದ ಸಹಜವಾಗಿಯೇ ಶಿವರಾಜ್ ಕುಮಾರ್ ಪತ್ನಿಯ ಕೆಲಸಗಳಿಗೆ ಸಾಥ್ ನೀಡುವುದು ಅನಿವಾರ್ಯವಾಗಿತ್ತು. ಅದನ್ನು ಅವರು ನಿಭಾಯಿಸಿದ್ದರು.

  • ಇದು ಭೈರತಿ ರಣಗಲ್ ಸಿನಿಮಾ ಟೀಮ್

    ಇದು ಭೈರತಿ ರಣಗಲ್ ಸಿನಿಮಾ ಟೀಮ್

    ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ (Geeta) ಶಿವರಾಜಕುಮಾರ್  ಅವರು ನಿರ್ಮಿಸುತ್ತಿರುವ, ನರ್ತನ್ (Narthan) ನಿರ್ದೇಶನದ, ಶಿವರಾಜಕುಮಾರ್ ((Shivaraj Kumar)) ನಾಯಕರಾಗಿ ನಟಿಸುತ್ತಿರುವ ‘ಭೈರತಿ ರಣಗಲ್’ (Bhairati Rangal) ಚಿತ್ರದ ಮುಹೂರ್ತ ಸಮಾರಂಭ ಗವಿಪುರದ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಭಾಗವಹಿಸಿದ್ದರು.

    ಮಫ್ತಿ ಚಿತ್ರದ ಶಿವರಾಜಕುಮಾರ್ ಅವರ ಭೈರತಿ ರಣಗಲ್ ಪಾತ್ರ ಇನ್ನು ಎಲ್ಲರ ಮನದಲ್ಲಿದೆ. ಆ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಈ ಚಿತ್ರದ ಕಥೆ ಮಾಡಲಾಗಿದೆ. ಇದು ಮಫ್ತಿ ಚಿತ್ರದ ಪ್ರೀಕ್ವೆಲ್. ಮಫ್ತಿ ಚಿತ್ರದಲ್ಲಿ ಮಧ್ಯಾಂತರದ ನಂತರ ಈ ಪಾತ್ರ ಬರುತ್ತದೆ. ಇಲ್ಲಿ ಭೈರತಿ ರಣಗಲ್ ಆಗಿದ್ದು ಹೇಗೆ ಎಂದು ತಿಳಿಯುತ್ತದೆ.  ಶಿವರಾಜಕುಮಾರ್ ಅವರು ಈ ಚಿತ್ರದ ನಾಯಕರಾಗಲು ಒಪ್ಪಿರುವುದು ಹಾಗೂ ಗೀತಾ ಶಿವರಾಜಕುಮಾರ್ ಅವರು ನಿರ್ಮಾಣ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ರವಿ‌ ಬಸ್ರೂರ್ ಸಂಗೀತ ನಿರ್ದೇಶನ, ನವೀನ್ ಕುಮಾರ್ ಅವರ ಛಾಯಾಗ್ರಹಣ ಹಾಗೂ ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಇಂದು ಮುಹೂರ್ತ ನೆರವೇರಿದೆ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ನಿರ್ದೇಶಕ ನರ್ತನ್ ತಿಳಿಸಿದರು.

    ಮಫ್ತಿ ಚಿತ್ರದ ಭೈರತಿ ರಣಗಲ್ ನನಗೆ ಇಷ್ಟವಾದ ಪಾತ್ರ. ಈ ಚಿತ್ರವನ್ನು ನಮ್ಮ ಸಂಸ್ಥೆಯಿಂದ ನಿರ್ಮಾಣ ಮಾಡುತ್ತಿದ್ದೇವೆ.  ಚಿತ್ರದ ಪ್ರಾರಂಭಕ್ಕೆ ಸಮಯ ಈಗ ಕೂಡಿ ಬಂದಿದೆ. ಮಫ್ತಿ ಬಂದು ಆರು ವರ್ಷಗಳಾಗಿದೆ. ಈಗಲೂ ನಾನು ಹಾಗೆ ಇದ್ದೀನಿ. ಹಾಗಾಗಿ ಈ ಪಾತ್ರ ಮಾಡಲು ಅನುಕೂಲವಾಗುತ್ತದೆ. ಪ್ರೀಕ್ವೆಲ್ ಆಗಿರುವುದರಿಂದ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತೇನೆ. ನರ್ತನ್ ಕಥೆ ಚಿನ್ನಾಗಿ ಮಾಡಿಕೊಂಡಿದ್ದಾರೆ ಎಂದರು ನಾಯಕ ಶಿವರಾಜಕುಮಾರ್. ಇದನ್ನೂ ಓದಿ:ಈ ಕಾರಣಕ್ಕಾಗಿ ಯಶ್ ಸಿನಿಮಾ ಕೈ ಬಿಟ್ಟರು: ನಿರ್ದೇಶಕ ನರ್ತನ್

    ಭೈರತಿ ರಣಗಲ್ ಚಿತ್ರವನ್ನು ನಮ್ಮ ಗೀತಾ ಪಿಕ್ಚರ್ಸ್ ಮೂಲಕ ನಿರ್ಮಾಣ ಮಾಡಬೇಕೆಂದು ಮೊದಲೆ ನಿರ್ಧಾರವಾಗಿತ್ತು. ಈಗ ಚಿತ್ರ ಆರಂಭವಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕಿ ಗೀತಾ ಶಿವರಾಜಕುಮಾರ್. ನಿವೇದಿತಾ ಶಿವರಾಜಕುಮಾರ್,  ಕೆ.ಪಿ.ಶ್ರೀಕಾಂತ್, ಛಾಯಾಗ್ರಹಕ ನವೀನ್ ಕುಮಾರ್ ಹಾಗೂ ಕಲಾ ನಿರ್ದೇಶಕ ಶಿವಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

  • ನಾನು ರಾಜಕಾರಣಕ್ಕೆ ಹೋಗಲಾರೆ : ನಟ ಶಿವರಾಜ್ ಕುಮಾರ್

    ನಾನು ರಾಜಕಾರಣಕ್ಕೆ ಹೋಗಲಾರೆ : ನಟ ಶಿವರಾಜ್ ಕುಮಾರ್

    ತ್ನಿ ಗೀತಾ ಜೊತೆ ಚುನಾವಣಾ (Election) ಪ್ರಚಾರದಲ್ಲಿ ತೊಡಗಿರುವ ನಟ ಶಿವರಾಜ್ ಕುಮಾರ್ (Shivaraj Kumar), ಯಾವುದೇ ಕಾರಣಕ್ಕೂ ಸಕ್ರೀಯ ರಾಜಕಾರಣಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಪತ್ನಿ ಗೀತಾ ಅವರದ್ದು ರಾಜಕಾರಣಿ ಕುಟುಂಬ. ಹಾಗಾಗಿ ಅವರೊಂದಿಗೆ ಪ್ರಚಾರದಲ್ಲಿ ಪಾಲ್ಗೊಂಡಿರುವೆ. ಆಪ್ತರಿಗಾಗಿ ಪ್ರಚಾರ ಮಾಡುವೆ. ಅದರ ಹೊರತಾಗಿ ಅಧಿಕೃತವಾಗಿ ಯಾವುದೇ ಪಕ್ಷವನ್ನು ಸೇರಲಾರೆ ಮತ್ತು ಚುನಾವಣೆಗೂ ನಿಲ್ಲಲಾರೆ ಎಂದಿದ್ದಾರೆ ಶಿವರಾಜ್ ಕುಮಾರ್.

    ಡಾ.ರಾಜ್ ಕುಟುಂಬಕ್ಕೂ ರಾಜಕಾರಣಿಗಳಿಗೂ ನಂಟಿದ್ದರೂ ನೇರವಾಗಿ ಯಾವತ್ತೂ ಅವರು ರಾಜಕಾರಣಿಗಳೊಂದಿಗೆ ಮತ್ತು ಪಕ್ಷದೊಂದಿಗೆ  ಗುರುತಿಸಿಕೊಂಡವರಲ್ಲ. ಸ್ವತಃ ರಾಜ್ ಕುಮಾರ್ ಅವರಿಗೆ ಚುನಾವಣೆಗೆ ನಿಲ್ಲುವಂತೆ ಒತ್ತಡವಿದ್ದರೂ, ಅವರು ಒಪ್ಪಿಕೊಳ್ಳಲಿಲ್ಲ. ಯಾವುದೇ ಪಕ್ಷದ (Party) ಪರವಾಗಿಯೂ ಪ್ರಚಾರ ಮಾಡಿದವರಲ್ಲ. ಅದೇ ಮಾರ್ಗದಲ್ಲೇ ರಾಘವೇಂದ್ರ ರಾಜ್ ಕುಮಾರ್ (Raghavendra Rajkumar) ಮತ್ತು ಪುನೀತ್ (Puneeth) ರಾಜ್ ಕುಮಾರ್ ನಡೆದುಕೊಂಡು ಬಂದವರು. ಆದರೆ, ಗೀತಾ ಅವರನ್ನು ಮದುವೆಯಾದ ನಂತರ ಶಿವಣ್ಣ ಚುನಾವಣೆ ಪ್ರಚಾರಕ್ಕೆ ಇಳಿದಿದ್ದಾರೆ.

    ದೊಡ್ಮನೆ ಸೊಸೆಯಾಗಿ ಬಂಗಾರಪ್ಪನವರ ಪುತ್ರಿ ಗೀತಾ (Geeta) ಬಂದ ನಂತರ, ಸಹೋದರನ ಪರವಾಗಿ ಅವರು ಪ್ರಚಾರಕ್ಕೆ ಹೋದರು. ಸ್ವತಃ ಗೀತಾ ಅವರೇ ಚುನಾವಣೆಗೂ ನಿಂತರು. ಹೀಗಾಗಿ ಅನಿವಾರ್ಯ ಕಾರಣದಿಂದಾಗಿ ಶಿವರಾಜ್ ಕುಮಾರ್ ‍ಪ್ರಚಾರದಲ್ಲಿ ತೊಡಗಲೇಬೇಕಾಯಿತು. ಆದರೆ, ಡಾ.ರಾಜ್ ಕುಟುಂಬ ಮಾತ್ರ ಚುನಾವಣೆಯ ಉಸಾಬರಿಗೆ ಹೋಗಲಿಲ್ಲ. ಸ್ವತಃ ಗೀತಾ ಅವರೇ ಚುನಾವಣೆಗೆ ಸ್ಪರ್ಧಿಸಿದಾಗ ಪುನೀತ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಕೂಡ ಪ್ರಚಾರ ಮಾಡಲಿಲ್ಲ. ಇದನ್ನೂ ಓದಿ:ಹೊಸ ಹೇರ್‌ ಸ್ಟೈಲ್‌ ಮಾಡಿಸಿಕೊಂಡ ನಟಿ ಮೇಘನಾ ರಾಜ್

    ಮೊನ್ನೆಯಷ್ಟೇ ರಾಘವೇಂದ್ರ ರಾಜ್ ಕುಮಾರ್ ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿ, ‘ಶಿವರಾಜ್ ಕುಮಾರ್ ನನ್ನ ಅಣ್ಣ, ಗೀತಾ ನನ್ನ ಅತ್ತಿಗೆ. ಉಳಿದಂತೆ ನನಗೇನೂ ಗೊತ್ತಿಲ್ಲ’ ಎಂದು ಹೇಳುವ ಮೂಲಕ ರಾಜಕಾರಣದಿಂದ ದೂರ ಇದ್ದೇವೆ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದರು. ಹಾಗಾಗಿ ಶಿವರಾಜ್ ಕುಮಾರ್ ಕೂಡ ಸಕ್ರೀಯ ರಾಜಕಾರಣದಲ್ಲಿ ಇರಲಾರೆ ಎನ್ನುವ ಸಂದೇಶ ನೀಡಿದ್ದಾರೆ.

  • ಮೈದುನನ ಮೃತದೇಹವನ್ನಾದರೂ ನಮಗೆ ನೀಡಿ: ನವೀನ್ ಅತ್ತಿಗೆ ಕಣ್ಣೀರು

    ಮೈದುನನ ಮೃತದೇಹವನ್ನಾದರೂ ನಮಗೆ ನೀಡಿ: ನವೀನ್ ಅತ್ತಿಗೆ ಕಣ್ಣೀರು

    ಹಾವೇರಿ: ನನ್ನ ಮೈದುನನ ಮೃತದೇಹವನ್ನಾದರೂ ನಮಗೆ ನೀಡಿ ಎಂದು ನವೀನ್ ಗ್ಯಾನಗೌಡರ್ ಅತ್ತಿಗೆ ಗೀತಾ ಕಣ್ಣೀರು ಹಾಕಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಮೈದುನನ ಮೃತದೇಹವನ್ನಾದರೂ ನಮಗೆ ನೀಡಿ. ನಮ್ಮ ಕುಟುಂಬಸ್ಥರಲ್ಲಿ ಅವನೊಬ್ಬನೇ ಓದಿರುವ ಯುವಕ. ಆತನ ಮೇಲೆ ತುಂಬಾ ಕನಸು ಕಂಡಿದ್ದೆವು. ಎಲ್ಲಾ ನುಚ್ಚುನೂರಾಯ್ತು. ಜೀವಂತವಾಗಿ ಆತನನ್ನು ಕೊನೆಗೂ ನೋಡಲಾಗಲಿಲ್ಲ. ಕನಿಷ್ಟ ಪಕ್ಷ ನನ್ನ ಮೈದುನನ ಮೃತದೇಹವನ್ನಾದರೂ ನೀಡಿ ಎಮದು ಅವರು ಅಂಗಲಾಚಿದರು. ಇದನ್ನೂ ಓದಿ: ನನ್ನ ತಮ್ಮನಿಗೆ ಬಹಳಷ್ಟು ಕನಸುಗಳಿದ್ದವು: ನವೀನ್ ಸಹೋದರ

    ಇತ್ತ ನವೀನ್ ಸಹೋದರ ಮಾತನಾಡಿ, ನನ್ನ ತಮ್ಮನಿಗೆ ಬಹಳಷ್ಟು ಕನಸು ಇದ್ದವು. ಆತನ ಜೊತೆಗೆ ಹೋದವರು ಎಲ್ಲರೂ ವಾಪಸು ಜೀವಂತವಾಗಿ ಬರುತ್ತಿದ್ದಾರೆ. ಆದರೆ ನನ್ನ ತಮ್ಮ ಬರಲೇ ಇಲ್ಲ. ಒಂದು ಕಡೆ ಅಪ್ಪ ಅಮ್ಮನನ್ನು ಸಮಾಧಾನ ಮಾಡಬೇಕು. ನಾನೇ ಹಿರಿಯ ಮಗ ಅವರ ಮುಂದೆ ನಾನು ಅತ್ತರೇ ನನಗೆ ನೋವು ತಡೆಯಲು ಆಗುತ್ತಿಲ್ಲ ಎಂದು ತಮ್ಮನ್ನು ಕಳೆದುಕೊಂಡು ಅಣ್ಣ ಹರ್ಷ ಬೇಸರ ವ್ಯಕ್ತಡಪಡಿಸಿದರು.

  • ಸಿನಿ ಕಾರ್ಮಿಕರಿಗೆ 10 ಲಕ್ಷ ನೆರವು ನೀಡಿದ ಸೆಂಚುರಿ ಸ್ಟಾರ್

    ಸಿನಿ ಕಾರ್ಮಿಕರಿಗೆ 10 ಲಕ್ಷ ನೆರವು ನೀಡಿದ ಸೆಂಚುರಿ ಸ್ಟಾರ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್‌ರವರು ಸಂಕಷ್ಟದಲ್ಲಿರುವ ಸಿನಿಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ. ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಅನೇಕ ಸಿನಿಮಾ ಕಾರ್ಮಿಕರಿಗೆ ಡಾ. ಶಿವರಾಜ್ ಕುಮಾರ್‌ರವರು 10 ಲಕ್ಷ ರೂ. ಚೆಕ್ ನೀಡುವ ಮೂಲಕ ನೆರವು ನೀಡಿದ್ದಾರೆ.

    ಇಂದು ಪತ್ನಿ ಗೀತಾರವರ ಹುಟ್ಟುಹಬ್ಬವನ್ನು ಆಚರಿಸಿದ ಶಿವರಾಜ್ ಕುಮಾರ್‌ರವರು ಇದೇ ಖುಷಿಯಲ್ಲಿ ಶಿವರಾಜ್ ಕುಮಾರ್‍ರವರು ನಿರ್ಮಾಪಕ ಕೆ.ಪಿ ಶ್ರೀಕಾಂತ್‍ರವರ ಜೊತೆಗೂಡಿ 10 ಲಕ್ಷ ರೂ. ಚೆಕ್‍ನನ್ನು ಕಾರ್ಮಿಕರ ಒಕ್ಕೂಟಕ್ಕೆ ಹಸ್ತಾಂತರಿಸಿದ್ದಾರೆ. ಜೊತೆಗೆ ಶಿವರಾಜ್ ಕುಮಾರ್‌ರವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಗೀತಾರವರ ಫೋಟೋವನ್ನು ಹಂಚಿಕೊಂಡಿದ್ದು, ಹ್ಯಾಪಿ ಬರ್ತ್‍ಡೇ ಮೇಡಮ್, ನೂರಾರು ಕಾಲ ಖುಷಿ ಖುಷಿಯಾಗಿರಿ.. ಎಂದು ಬರೆದುಕೊಂಡಿದ್ದಾರೆ.

    ಈ ಮುನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‌ರವರು ಕೂಡ ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ರೂಪಾಯಿ ನೆರವು ನೀಡಿದ್ದರು. ಅಲ್ಲದೇ ರಾಕಿಂಗ್ ಸ್ಟಾರ್ ಯಶ್ ಕೂಡ ಸುಮಾರು 3 ಸಾವಿರಕ್ಕೂ ಹೆಚ್ಚು ಸಿನಿಮಾ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5 ಸಾವಿರ ರೂ. ಗಳನ್ನು ತಮ್ಮ ಸಂಪಾದನೆಯಿಂದ ನೀಡುವುದಾಗಿ ಘೋಷಿಸಿದ್ದರು.

     

  • ಮಂಜು ತ್ಯಾಗದಿಂದ ದೊಡ್ಮನೆ ಮಂದಿಗೆ ಸಿಕ್ತು ಬೆಡ್ ರೂಮ್!

    ಮಂಜು ತ್ಯಾಗದಿಂದ ದೊಡ್ಮನೆ ಮಂದಿಗೆ ಸಿಕ್ತು ಬೆಡ್ ರೂಮ್!

    ಕಳೆದ ಒಂದು ವಾರದಿಂದ ಚಳಿ ಹಾಗೂ ಸೊಳ್ಳೆ ಕಾಟದಿಂದ ಹೊರಗೆ ನಿದ್ರೆ ಮಾಡಲು ಆಗದೇ ಕಷ್ಟ ಪಡುತ್ತಿರುವ ಬಿಗ್‍ಬಾಸ್ ಸ್ಪರ್ಧಿಗಳು ಬೆಡ್ ರೂಮ್‍ನನ್ನು ಹಿಂದಿರುಗಿಸುವಂತೆ ಬಿಗ್‍ಬಾಸ್‍ಗೆ ಎಷ್ಟೋ ಬಾರಿ ಮನವಿ ಮಾಡಿದ್ದರು. ಆದರೂ ಕೂಡ ಬಿಗ್‍ಬಾಸ್ ಮನಕರಗಲಿಲ್ಲ. ಆದರೆ ನಿನ್ನೆ ಜೋಡಿ ಟಾಸ್ಕ್ ವೊಂದರಲ್ಲಿ ಗೆದ್ದ ಮಂಜುವಿನಿಂದ ಇದೀಗ ದೊಡ್ಮನೆ ಮಂದಿಗೆ ಬೆಡ್ ರೂಮ್ ದೊರೆತಿದೆ.

    ಹೌದು ನಿನ್ನೆ ಬಿಗ್‍ಬಾಸ್ ಸದಸ್ಯರಿ ಮಸ್ತ್ ಮಸ್ತ್ ಮೊಟ್ಟೆ ಬಂತು ಎಂಬ ಟಾಸ್ಕ್ ನೀಡಿದ್ದರು. ಅದರ ಅನುಸಾರ ಪ್ರತಿ ಜೋಡಿಯ ಒಬ್ಬ ಸದಸ್ಯ ಗಾರ್ಡನ್ ಏರಿಯಾದಲ್ಲಿ ಚಿನ್ನ, ಬೆಳ್ಳಿ, ಬಿಳಿ ಮೊಟ್ಟೆಯನ್ನು ಕ್ಯಾಚ್ ಹಿಡಿದು ಬುಟ್ಟಿಯೊಂದಕ್ಕೆ ಹಾಕಬೇಕಾಗಿತ್ತು. ಮತ್ತೋರ್ವ ಸದಸ್ಯ ಮೊಟ್ಟೆಯನ್ನು ಒಂದು ಬುಟ್ಟಿಯಿಂದ ಮತ್ತೊಂದು ಬುಟ್ಟಿಗೆ ವರ್ಗಾಯಿಸಬೇಕಿತ್ತು.

    ಅದರಂತೆ ಈ ಟಾಸ್ಕ್‍ನಲ್ಲಿ ಎಲ್ಲಾ ಜೋಡಿಗಳನ್ನು ಹಿಂದಿಕ್ಕಿ ಲ್ಯಾಗ್ ಮಂಜು ಹಾಗೂ ಗೀತಾ 6 ಗೋಲ್ಡನ್ ಮೊಟ್ಟೆ ಹಾಗೂ 4 ಸಿಲ್ವರ್ ಮೊಟ್ಟೆ ಗಳಿಸುವ ಮೂಲಕ 800 ಅಂಕ ಪಡೆದು ವಿಜೇತರಾಗುತ್ತಾರೆ. ಆಟದಲ್ಲಿ ಗೆದ್ದ ಮಂಜು ಹಾಗೂ ಗೀತಾಗೆ ಬಿಗ್‍ಬಾಸ್ ರಿಚಾರ್ಜ್ ಯಂತ್ರವನ್ನು ಕಳುಹಿಸುತ್ತಾರೆ. ಬಳಿಕ ಬಿಗ್‍ಬಾಸ್ ನಿಮಗೆ ಸಿಕ್ಕಿರುವ ರಿಚಾರ್ಜ್ ಯಂತ್ರ ವಿಶೇಷವಾದದ್ದೂ ಇದು ನಿಮ್ಮ ಬಳಿಯೇ ಇರುತ್ತದೆ. ಅದನ್ನು ಯಾರು ಕದಿಯುವಂತಿಲ್ಲ. ಒಂದು ವೇಳೆ ವಿಶೇಷ ಯಂತ್ರವನ್ನು ಹಿಂದಿರುಗಿಸಿದರೆ ಬೆಡ್‍ರೂಮ್‍ನನ್ನು ಮನೆಯ ಸದಸ್ಯರಿಗಾಗಿ ಬಿಗ್‍ಬಾಸ್ ಹಿಂದಿರುಗಿಸುತ್ತಾರೆ ಎಂದು ಘೋಷಿಸುತ್ತಾರೆ.

    ಈ ವೇಳೆ ಮಂಜು ಹಾಗೂ ಗೀತಾ ಹಿಂದೆ-ಮುಂದೆ ಯೋಚಿಸದೇ ಯಂತ್ರವನ್ನು ಬಿಗ್‍ಬಾಸ್‍ಗೆ ಹಿಂದಿರುಗಿಸಿ ಮನೆ ಮಂದಿಗೆ ಬೆಡ್ ರೂಮ್ ಹಿಂದಿರುಗಿಸಿ ಕೊಡಿಸುತ್ತಾರೆ. ಇದರಿಂದ ಫುಲ್ ಖುಷ್ ಆದ ಬಿಗ್ ಬಾಸ್ ಮಂದಿ ಮಂಜುವಿಗೆ ಜೈಕಾರ ಹಾಕಿ ಅಪ್ಪಿ ಮುದ್ದಾಡುತ್ತಾರೆ. ಅದರಲ್ಲೂ ಬೆಡ್ ರೂಮ್ ಇಲ್ಲದೆ ಕಂಗೆಟ್ಟಿದ್ದ ಶುಭ ಪೂಂಜಾ ಮಂಜು ಮೇಲೆ ಹಾರಿ, ಮನೆ ಪೂರ್ತಿ ಕುಣಿದಾಡುತ್ತಾ ಮಂಜುವಿಗೆ ಧನ್ಯವಾದ ತಿಳಿಸಿ ಸಂತಸ ವ್ಯಕ್ತಪಡಿಸಿದರು. ಉಳಿದವರು ಜೋರಾದ ಚಪ್ಪಾಳೆ ಹಾಗೂ ಶಿಳ್ಳೆ ಹೊಡೆಯುವ ಮೂಲಕ ಕೃತಜ್ಞತೆ ಸಲ್ಲಿಸಿದರು.

    ಒಟ್ಟಾರೆ ಬೆಡ್‍ರೂಮ್ ಇರದೇ ಪರದಾಡುತ್ತಾ ದಿಕ್ಕಾಪಾಲಾಗಿದ್ದ ದೊಡ್ಮನೆ ಮಂದಿಗೆ ಮತ್ತೆ ಬೆಡ್ ರೂಮ್ ದೊರಕಿಸಿ ಕೊಡುವ ಮೂಲಕ ಮಂಜು ಎಲ್ಲರಿಗೂ ಹೀರೋ ಆಗಿದ್ದಾರೆ.

  • ಗೀತಾ ಹುಟ್ಟುಹಬ್ಬಕ್ಕೆ ಎಂದೂ ಒಡವೆ, ಸೀರೆ ಕೇಳಲಿಲ್ಲ: ಸೀತಾರಾಮ್

    ಗೀತಾ ಹುಟ್ಟುಹಬ್ಬಕ್ಕೆ ಎಂದೂ ಒಡವೆ, ಸೀರೆ ಕೇಳಲಿಲ್ಲ: ಸೀತಾರಾಮ್

    – ಹುಟ್ಟುಹಬ್ಬ ಮರೆತೆನೆಂದು ಗೀತಾ ಎಂದೂ ನೊಂದುಕೊಂಡಿಲ್ಲ

    ಬೆಂಗಳೂರು: ಜನಪ್ರಿಯ ನಿರ್ದೇಶ ಟಿ.ಎನ್ ಸೀತಾರಾಮ್ ಅವರ ಪತ್ನಿ ಗೀತಾ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಪತ್ನಿಯ ಬರ್ತ್ ಡೇ ವಿಶೇಷವಾಗಿ ಸೀತಾರಾಮ್ ಅವರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

    ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇರುವ ಸೀತಾರಾಮ್ ಅವರು, ಇತ್ತೀಚೆಗಷ್ಟೇ ತಮ್ಮ ನಿರ್ದೇಶನದ ಮಗಳು ಜಾನಕಿ ಧಾರವಾಹಿಯನ್ನು ಒಂದನೇ ಎಪಿಸೋಡಿನಿಂದ ಮರುಪ್ರಸಾರ ಮಾಡಲು ಆಗಲ್ಲ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಈಗ ತಮ್ಮ ಮಡದಿಯ ಹುಟ್ಟುಹಬ್ಬಕ್ಕೆ ಗೀತಾಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದು ಮದುವೆ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಇದುವರೆಗೆ ನಾಲ್ಕು ಸಾರಿ ಮರೆತಿದ್ದೇನೆ. ಇನ್ನು ನಾಲ್ಕು ಸಾರಿ ಊರಿನಲ್ಲಿ ಅಥವಾ ದೇಶದಲ್ಲಿ ಇರಲಿಲ್ಲ. ಇನ್ನು ನಾಲ್ಕು ಸಾರಿ ಮರೆಯದಿದ್ದರೂ ಅಸಾಧ್ಯ ಕಷ್ಟಗಳ ಮಧ್ಯೆ ಅದು ಮುಖ್ಯವೆಂದು ಅನ್ನಿಸದೇ ನನ್ನ ಕಷ್ಟಗಳನ್ನೇ ವಿಚಿತ್ರವಾಗಿ ಆನಂದಿಸುತ್ತಾ ಸುಮ್ಮನಾಗಿದ್ದೇನೆ. ಹೆಚ್ಚಿನ ಸಮಯಗಳಲ್ಲಿ ಕಷ್ಟ ಎನ್ನುವುದು ತಾನಾಗೇ ಬಂದಿರಲಿಲ್ಲ. ನನ್ನ ಅವಿವೇಕ, ದೊಡ್ಡತನ ತೋರಿಸಿಕೊಳ್ಳಬೇಕೆನ್ನುವ ನನ್ನ ಸಣ್ಣತನ ಇವುಗಳಿಂದ ಬಂದದ್ದು ಎಂದು ಹೆಂಡತಿಯ ಹುಟ್ಟುಹಬ್ಬದ ಬಗ್ಗೆ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

    ಧಾರಾವಾಹಿ, ಸಿನಿಮಾಗಳಲ್ಲಿ ಹೆಂಡತಿಯ ಹುಟ್ಟುಹಬ್ಬ ಮರೆತರೆ ಅದು ಧಾರಾವಾಹಿಗಳಲ್ಲಿ ನಾಲ್ಕು ಎಪಿಸೋಡ್, ಸಿನಿಮಾದಲ್ಲಿ ಆರು ಸೀನುಗಳು ಅಥವಾ ಒಂದು ಹಾಡು. ಆದರೆ ಇಲ್ಲಿ ಅದಕ್ಕಾಗಿ ಅರ್ಧ ಪೇಜಿನ ಡೈಲಾಗ್ ಕೂಡಾ ಇರಲಿಲ್ಲ. ನಾನು ಗೀತಾ ಹುಟ್ಟುಹಬ್ಬ ಮರೆತೆನೆಂದು ಗೀತಾ ಎಂದೂ ನೊಂದುಕೊಂಡಿಲ್ಲ ಅಥವಾ ನೋವಾಗಿದ್ದರೂ ತೋರಿಸಿಕೊಂಡಿಲ್ಲ. ಅಶ್ವಿನಿ ಅಥವಾ ಸತ್ಯ ನೆನಪು ಮಾಡಿದ್ದಾರೆ ಎಂದು ಸೀತಾರಾಮ್ ಹೇಳಿದ್ದಾರೆ.

    ನಾನು ಮರೆತಿದ್ದು ಮಾತ್ರವಲ್ಲ, ಹುಟ್ಟುಹಬ್ಬದ ದಿನ ನನ್ನ ಬೇರೆ ಕಷ್ಟಗಳಿಂದಾಗಿ ಕೆಟ್ಟದಾಗಿ ವರ್ತಿಸಿ ಮನೆಯ ವಾತಾವರಣವನ್ನು ಕಹಿಗೊಳಿಸಿದ್ದೂ ಅನೇಕ ಬಾರಿ. ಯಾವುದಕ್ಕೂ ಪ್ರತ್ಯೇಕ ಎಪಿಸೋಡುಗಳಾಗಲೀ, ದೃಶ್ಯಗಳಾಗಲೀ ಇರಲಿಲ್ಲ. ಕೇವಲ ಒಂದು ಪಶ್ಚಾತ್ತಾಪದ ನೋಟ. ಅದೂ ಲಾಂಗ್ ಶಾಟ್ ನಲ್ಲಿ ಎಂದು ಪತ್ನಿಯ ಹುಟ್ಟುಹಬ್ಬದಂದು ಜಗಳವಾಡಿದರೆ ಏನೂ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

    ಗೀತಾ ಹುಟ್ಟು ಹಬ್ಬಕ್ಕೆ ಎಂದೂ ಒಡವೆ ಕೇಳಲಿಲ್ಲ, ಸೀರೆ ಕೇಳಲಿಲ್ಲ. ಗೀತಾ ಕೇಳುವುದು ಒಂದೇ. ದೇವಸ್ಥಾನಕ್ಕೆ ಒಟ್ಟಿಗೇ ಹೋಗಿಬರೋಣ ಎಂದು ಆದರೆ ಈ ಬಾರಿ ಹುಟ್ಟುಹಬ್ಬದ ದಿನ ದೇವಸ್ಥಾನಕ್ಕೂ ಹೋಗುವಂತಿಲ್ಲ. ಮನೆ ಕೆಲಸದವರೂ ಬರುತ್ತಿಲ್ಲ, ಕೆಲವು ವರ್ಷಗಳಿಂದ ಬರುತ್ತಿದ್ದ ಅಡುಗೆಯವರೂ ಇಲ್ಲ. ಎಲ್ಲ ಕೆಲಸ ಗೀತಾ ಮೇಲೆ (ಪಾತ್ರೆ ತೊಳೆಯುವುದು ಬಿಟ್ಟು-ಅದನ್ನು ನಾನು ಮಾಡುತ್ತಿದ್ದೇನೆ) ಏನಾದರೂ ಕೊಡಿಸೋಣವೆಂದರೆ ಅಂಗಡಿಗಳೂ ಇಲ್ಲ. ಗೀತಾಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.

  • ಗೀತಾ ಪೋಷಕರನ್ನು ಹುಡುಕಿಕೊಟ್ಟವರಿಗೆ ಸಿಗುತ್ತೆ 1 ಲಕ್ಷ ರೂ. ಬಹುಮಾನ

    ಗೀತಾ ಪೋಷಕರನ್ನು ಹುಡುಕಿಕೊಟ್ಟವರಿಗೆ ಸಿಗುತ್ತೆ 1 ಲಕ್ಷ ರೂ. ಬಹುಮಾನ

    ನವದೆಹಲಿ: ಪಾಕಿಸ್ತಾನದಲ್ಲಿ ಹಲವು ದಶಕಗಳ ಕಾಲ ನೆಲೆಸಿ ಭಾರತಕ್ಕೆ ವಾಪಸ್ಸಾದ ಗೀತಾ ಪೋಷಕರಿಗಾಗಿ ಹುಡುಕಾಟ ಮುಂದುವರಿದಿದ್ದು, ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಒಂದು ಲಕ್ಷ ರೂ.ಹಣವನ್ನು ಬಹುಮಾನವಾಗಿ ಘೋಷಣೆ ಮಾಡಿದ್ದಾರೆ.

    ತನ್ನ ಬಾಲ್ಯದಲ್ಲಿ ಭಾರತದ ಗಡಿಯನ್ನು ದಾಟಿ ಪಾಕಿಸ್ತಾನಕ್ಕೆ ತೆರಳಿದ್ದ ಯುವತಿಯನ್ನು ಸುಷ್ಮಾ ಸ್ವರಾಜ್‍ರವರು ಭಾರತಕ್ಕೆ ವಾಪಸ್ ಕರೆತಂದು ಎರಡು ವರ್ಷಗಳೇ ಕಳೆದಿವೆ. ಪ್ರಸ್ತುತ ಗೀತಾ ಅವರು ಇಂದೋರ್‍ನ ಮೂಕ ಹಾಗೂ ಕಿವುಡರ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದಾರೆ.

    ಸುಷ್ಮಾ ಅವರು ಈ ಕುರಿತು ವಿಡಿಯೋವನ್ನು ಬಿಡುಗಡೆಗೊಳಿಸಿದ್ದು, ಗೀತಾ ಕುಟುಂಬವರ ಕುರಿತು ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನವನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ.

    ಗೀತಾರನ್ನು ಭಾರತಕ್ಕೆ ವಾಪಸ್ ಕರೆತಂದ ಸಂದರ್ಭದಲ್ಲಿ ಹಲವರು ಆಕೆ ತಮ್ಮ ಮಗಳೇ ಎಂದು ಆಗಮಿಸಿದ್ದರು. ಆದರೆ ಇದನ್ನು ಗೀತಾ ತನ್ನ ನಿರಾಕರಿಸಿದ್ದರು. ಗೀತಾ ಪ್ರಸ್ತುತ ಸಂಜ್ಞಾ ಭಾಷೆಯನ್ನು ಕಲಿತ್ತಿದ್ದು, ಕಂಪ್ಯೂಟರ್ ತರಬೇತಿಯನ್ನು ಪಡೆಯುತ್ತಿದ್ದಾರೆ.

    ಗೀತಾ ಪೋಷಕರು ಎಲ್ಲೇ ಇದ್ದರೂ ಆಕೆಯನ್ನು ಕರೆದುಕೊಂಡು ಹೋಗಬೇಕು, ಆಕೆಯ ವಿದ್ಯಾಭ್ಯಾಸ ಮತ್ತು ಮದುವೆಗೆ ಬೇಕಾದ ಎಲ್ಲಾ ಸಹಾಯವನ್ನು ಸರ್ಕಾರವೇ ನೀಡುತ್ತದೆ ಎಂಬ ಭರವಸೆಯನ್ನು ನೀಡಿದ್ದಾರೆ.

    ಗೀತಾ ಬಿಹಾರ್ ಅಥವಾ ಜಾರ್ಖಡ್ ರಾಜ್ಯಕ್ಕೆ ಸೇರಿರಬೇಕು, ಆಕೆಯ ಕುರಿತು ವಾರದ 7 ದಿನಗಳು ಹೆಚ್ಚಿನ ಜಾಹೀರಾತನ್ನು ನೀಡಿ ಇದರಿಂದ ಆಕೆಯ ಪೋಷಕರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಎರಡು ರಾಜ್ಯಗಳ ಮುಖ್ಯಮಂತ್ರಿಗಳಲ್ಲಿ ಸುಷ್ಮಾ ಸ್ವರಾಜ್ ಮನವಿ ಮಾಡಿಕೊಂಡಿದ್ದಾರೆ.

    ಗೀತಾ ತನ್ನ 7-8 ವಯಸ್ಸಿನಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ತೆರಳುವ ಸಂಜೋತಾ ಎಕ್ಸ್‍ಪ್ರೆಸ್‍ನಲ್ಲಿ ಒಬ್ಬಳೇ ಪ್ರಯಾಣ ಬೆಳೆಸಿ ಲಾಹೋರ್ ಪೊಲೀಸ್ ಅಧಿಕಾರಿಗಳಿಗೆ ಸಿಕ್ಕಿದ್ದಳು. ಈಕೆಯ ಮೂಲ ಹೆಸರು ಗುಡ್ಡಿ ಎಂದಾಗಿದ್ದು, ಪಾಕಿಸ್ತಾನದಲ್ಲಿ ಈಕೆಗೆ ಆಶ್ರಯವನ್ನು ನೀಡಿದ್ದ ಈಧಿ ಸಂಘಟನೆಯವರು ಈಕೆಗೆ ಗೀತಾ ಎಂಬ ಹೆಸರನ್ನು ಇಟ್ಟಿದ್ದರು.