Tag: gdp

  • ಏಪ್ರಿಲ್‌- ಜೂನ್‌ GDP ಬೆಳವಣಿಗೆ 13.5% ರಷ್ಟು ಏರಿಕೆ

    ಏಪ್ರಿಲ್‌- ಜೂನ್‌ GDP ಬೆಳವಣಿಗೆ 13.5% ರಷ್ಟು ಏರಿಕೆ

    ನವದೆಹಲಿ: ಏಪ್ರಿಲ್‌ -ಜೂನ್‌ ಅವಧಿಯ ಜಿಡಿಪಿ(ಒಟ್ಟಾರೆ ದೇಶೀಯ ಉತ್ಪನ್ನ) ಬೆಳವಣಿಗೆ 13.5% ರಷ್ಟು ಏರಿಕೆಯಾಗಿದೆ.

    ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಈ ಸಂಖ್ಯಾ ಮಾಹಿತಿಯನ್ನು  ಬಿಡುಗಡೆ ಮಾಡಿದೆ. 2021ರ ಈ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ 20.1% ರಷ್ಟು ಏರಿಕೆಯಾಗಿತ್ತು. 2020ರಲ್ಲಿ ಕೊರೊನಾ ಇದ್ದ ಕಾರಣ ಈ ಪ್ರಮಾಣದ ಏರಿಕೆಯಾಗಿತ್ತು.

    ಏಪ್ರಿಲ್‌- ಜೂನ್‌ ಮೊದಲ ಹಣಕಾಸು ವರ್ಷದಲ್ಲಿ ಆರ್‌ಬಿಐ ಜಿಡಿಪಿ ಬೆಳವಣಿಗೆ 16.2% ರಷ್ಟಿರಬಹುದು ಎಂದು ಅಂದಾಜಿಸಿತ್ತು.

    2022ರ ಏಪ್ರಿಲ್-ಜೂನ್ ಅವಧಿಯಲ್ಲಿ ಚೀನಾ 0.4% ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ. ಇದನ್ನೂ ಓದಿ: 12 ಸಾವಿರ ರೂ. ಒಳಗಿನ ಚೀನಿ ಫೋನ್‌ಗಳನ್ನು ನಿಷೇಧಿಸಲ್ಲ: ಕೇಂದ್ರ ಸರ್ಕಾರ

    ಯಾವುದು ಎಷ್ಟು ಬೆಳವಣಿಗೆ?
    ಕೃಷಿ ವಲಯ: Q1FY23 ರಲ್ಲಿ 4.5% ಮತ್ತು Q4FY22 ರಲ್ಲಿ 4.1%
    ಗಣಿಗಾರಿಕೆ: 6.5% Vs 6.7%
    ಉತ್ಪಾದನೆ 4.8% Vs -0.2%
    ನಿರ್ಮಾಣ: 16.8% Vs 2%
    ವ್ಯಾಪಾರ, ಹೋಟೆಲ್, ಸಾರಿಗೆ, ಸಂವಹನ: 25.7% Vs 5.3%
    ಹಣಕಾಸು, ರಿಯಲ್ ಎಸ್ಟೇಟ್, ವೃತ್ತಿಪರ ಸೇವೆಗಳು: 9.2% Vs 4.3%

    Live Tv
    [brid partner=56869869 player=32851 video=960834 autoplay=true]

  • ಏಷ್ಯಾದಲ್ಲಿ ಭಾರತ ಹೊರತುಪಡಿಸಿ 13 ದೇಶಗಳಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ

    ಏಷ್ಯಾದಲ್ಲಿ ಭಾರತ ಹೊರತುಪಡಿಸಿ 13 ದೇಶಗಳಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ

    ನವದೆಹಲಿ: ಏಷ್ಯಾದಲ್ಲಿ ಭಾರತ ಹೊರತುಪಡಿಸಿ 13 ರಾಷ್ಟ್ರಗಳು ಆರ್ಥಿಕ ಹಿಂಜರಿತ ಎದುರಿಸುವ ಸಾಧ್ಯತೆಯಿದೆ ಎಂದು ಬ್ಲೂಮ್‌ಬರ್ಗ್‌ ಅರ್ಥಶಾಸ್ತ್ರಜ್ಞರ ಸಮೀಕ್ಷೆ ತಿಳಿಸಿದೆ.

    ಭಾರತದಲ್ಲಿ ಆರ್ಥಿಕ ಹಿಂಜರಿತ ಎದುರಿಸುವ ಪರಿಸ್ಥಿತಿ ಶೂನ್ಯ ಎಂದು ಹೇಳಿದೆ. ಈಗಾಗಲೇ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಆರ್ಥಿಕ ಹಿಂಜರಿತವಾಗುವ ಸಾಧ್ಯತೆ ಶೇ.85ರಷ್ಟಿದೆ ಎಂದು ಅಂದಾಜಿಸಿದೆ.

    ಯಾವ ದೇಶದಲ್ಲಿ ಎಷ್ಟು ಸಾಧ್ಯತೆ?
    ಶ್ರೀಲಂಕಾ ಶೇ.85, ನ್ಯೂಜಿಲೆಂಡ್‌ ಶೇ.33, ದಕ್ಷಿಣ ಕೊರಿಯಾ ಶೇ.25, ಜಪಾನ್‌ ಶೇ.25, ಚೀನಾ ಶೇ.20, ಹಾಂಕಾಂಗ್‌ ಶೇ.20, ಆಸ್ಟ್ರೇಲಿಯಾ ಶೇ.20, ತೈವಾನ್‌ ಶೇ.20, ಪಾಕಿಸ್ತಾನ ಶೇ.20, ಮಲೇಷ್ಯಾ ಶೇ.20, ವಿಯೆಟ್ನಾಂ ಶೇ.10, ಥೈಲ್ಯಾಂಡ್‌ ಶೇ.10, ಫಿಲಿಪೈನ್ಸ್ ಶೇ.8, ಇಂಡೋನೇಷ್ಯಾ ಶೇ.3 ಎಂದಿದೆ.

    ಆರ್ಥಿಕವಾಗಿ ಮುಂದುವರಿದ ದೇಶಗಳ ಪೈಕಿ ಇಟಲಿ ಶೇ.65, ಫ್ರಾನ್ಸ್‌ ಶೇ.50, ಜರ್ಮನಿ ಶೇ.45, ಇಂಗ್ಲೆಂಡ್‌ ಶೇ.45, ಅಮೆರಿಕ ಶೇ.40, ಜಪಾನ್‌ ಶೇ.25, ಚೀನಾದಲ್ಲಿ ಶೇ. ಆರ್ಥಿಕ ಹಿಂಜರಿತವಾಗುವ ಸಾಧ್ಯತೆ  ಶೇ.20 ರಷ್ಟಿದೆ.

    ಯುರೋಪ್‌ ಮತ್ತು ಅಮೆರಿಕ ಖಂಡದ ದೇಶಗಳಿಗೆ ಹೋಲಿಸಿದರೆ ಏಷ್ಯಾ ಖಂಡದಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ ಕಡಿಮೆ ಎಂದು ವರದಿ ತಿಳಿಸಿದೆ.

    ವಿಶ್ವಕ್ಕೆ ಹೋಲಿಸಿದರೆ ಭಾರತದಲ್ಲಿ ಆರ್ಥಿಕ ಹಿಂಜರಿತವಾಗುವ ಸಾಧ್ಯತೆ ಕಡಿಮೆ. ಒಂದು ವೇಳೆ ಹಿಂಜರಿತವಾದರೂ ಕಡಿಮೆ ಸಮಯದವರೆಗೆ ಇರಲಿದೆ. ಆರ್ಥಿಕ ಹಿಂಜರಿತದಿಂದಾಗಿ ಜಾಗತಿಕವಾಗಿ ಏರಿಕೆಯಾಗಿರುವ ವಸ್ತುಗಳ ಬೆಲೆಗಳು ಕಡಿಮೆಯಾಗಲಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

    ಬೆಲೆ ಏರಿಕೆ ಮತ್ತು ಹಣದುಬ್ಬರ ನಿಯಂತ್ರಿಸಲು ಅಮೆರಿಕದ ಕೇಂದ್ರ ಬ್ಯಾಂಕ್‌ ಫೆಡರಲ್‌ ರಿಸರ್ವ್‌ ಬಡ್ಡಿದರ ಏರಿಸಿದೆ. ಬಡ್ಡಿ ದರ ಏರಿಸಿದ ಪರಿಣಾಮ ವಿಶ್ವಾದ್ಯಂತ ಕರೆನ್ಸಿಗಳ ಮುಂದೆ ಡಾಲರ್‌ ಮೌಲ್ಯ ಏರಿಕೆಯಾಗುತ್ತಿದೆ. ಹೀಗಿದ್ದರೂ ಮುಂದಿನ ವರ್ಷ ಅಮೆರಿಕ ಆರ್ಥಿಕ ಹಿಂಜರಿತಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಆರ್ಥಿಕ ಹಿಂಜರಿತ? – ಉತ್ತರ ಕೊಟ್ಟ ಬೈಡನ್

    ಸಾಮಾಜಿಕ ಜಾಲತಾಣದಲ್ಲಿ ಈಗ ಆರ್ಥಿಕ ಹಿಂಜರಿತ( Recession) ಟ್ರೆಂಡಿಂಗ್‌ ಟಾಪಿಕ್‌ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಅಮೆರಿಕದಲ್ಲಿ ಆರ್ಥಿಕ ಹಿಂಜರಿತ? – ಉತ್ತರ ಕೊಟ್ಟ ಬೈಡನ್

    ಅಮೆರಿಕದಲ್ಲಿ ಆರ್ಥಿಕ ಹಿಂಜರಿತ? – ಉತ್ತರ ಕೊಟ್ಟ ಬೈಡನ್

    ವಾಷಿಂಗ್ಟನ್: ಕೆಲವೇ ದಿನಗಳಲ್ಲಿ ತ್ರೈಮಾಸಿಕ ವರದಿ ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಆರ್ಥಿಕ ಕುಸಿತವಾಗಲಿದ್ಯಾ ಎಂಬ ಪ್ರಶ್ನೆ ಈಗ ಎದ್ದಿದೆ. ಸತತ ಎರಡು ತ್ರೈಮಾಸಿಕದಲ್ಲಿ ಜಿಡಿಪಿ ಕುಸಿತ ಕಾಣಲಿರುವುದರಿಂದ ಅಮೆರಿಕದಲ್ಲಿ ಆರ್ಥಿಕ ಕುಸಿತವಾಗುತ್ತಾ ಎಂಬ ಪ್ರಶ್ನೆಗೆ ಅಧ್ಯಕ್ಷ ಜೋ ಬೈಡನ್ ಉತ್ತರ ನೀಡಿದ್ದಾರೆ.

    ನನ್ನ ದೃಷ್ಟಿಯಲ್ಲಿ ಅಮೆರಿಕವು ಎಂದಿಗೂ ಆರ್ಥಿಕ ಕುಸಿತವನ್ನು ಕಾಣುವುದಿಲ್ಲ. ನಾವು ಈ ಕ್ಷಿಪ್ರ ಬೆಳವಣಿಗೆಯಿಂದ ಸ್ಥಿರವಾದ ಬೆಳವಣಿಗೆಗೆ ಹೋಗುತ್ತೇವೆ ಎಂದು ತಿಳಿಸಿದರು.

    ಈಗಾಗಲೇ ಅನೇಕ ಅಮೆರಿಕದ ಅಧಿಕಾರಿಗಳು ಹೆಚ್ಚುತ್ತಿರುವ ಆರ್ಥಿಕ ಹಿಂಜರಿತದ ಭಯವನ್ನು ಕಡಿಮೆ ಮಾಡಿದ್ದಾರೆ. ಅತ್ಯಂತ ಬಲಿಷ್ಠವಾದ ಕಾರ್ಮಿಕ ಮಾರುಕಟ್ಟೆಗಳನ್ನು ನೀಡಿದರೆ ವಿಶ್ವದ ಅತಿದೊಡ್ಡ ಆರ್ಥಿಕತೆ ಕುಸಿತವಾಗುವುದು ಅಸಂಭವ ಎಂದರು.

    2020ರಿಂದ ಸಾಂಕ್ರಾಮಿಕ ರೋಗ ಕೊರೊನಾದಿಂದಾಗಿ ಆರ್ಥಿಕತೆ ಕುಸಿದಿತ್ತು. ಇದಾದ ಬಳಿಕ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಮೆರಿಕದ ಜಿಡಿಪಿ ಶೇ.1.6ರಷ್ಟು ಕುಸಿತ ಕಂಡಿತ್ತು. ಇದನ್ನೂ ಓದಿ: ಮ್ಯೂಸಿಕ್ ಸದ್ದಿಗೆ ಗಾಬರಿಯಿಂದ ಜನರ ಮೇಲೆ ಓಡಿದ ಕುದುರೆ – 6 ಮಂದಿಗೆ ಗಾಯ

    ಈಗಾಗಲೇ ಹಣದುಬ್ಬರದ ವಿರುದ್ಧ ಹೋರಾಡಲು ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿದರವನ್ನು ಏರಿಸಿದೆ. ಇದರಿಂದಾಗಿ ವಿಶ್ವಾದ್ಯಂತ ವಿವಿಧ ದೇಶಗಳ ಮುಂದೆ ಡಾಲರ್ ಮೌಲ್ಯ ಏರಿಕೆಯಾಗುತ್ತಿದೆ. ಇದನ್ನೂ ಓದಿ: ಜ್ವರದಿಂದ ಬಳಲುತ್ತಿದ್ರೂ ಮೌನ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಭಾಗಿ

    ಸತತ ಎರಡು ತ್ರೈಮಾಸಿಕದಲ್ಲಿ ಜಿಡಿಪಿ ದರ ಕುಸಿತ ಕಂಡರೆ ಇದು ಆರ್ಥಿಕ ಹಿಂಜರಿತದ ಲಕ್ಷಣ ಎಂದು ಅರ್ಥಶಾಸ್ತ್ರಜ್ಞರು ವ್ಯಾಖ್ಯಾನಿಸುತ್ತಾರೆ. ಈ ಹಿಂದೆ ಕೋವಿಡ್ ಮೊದಲ ಮತ್ತು ಎರಡನೇ ಅಲೆ ಸಮಯದಲ್ಲಿ ವಿಶ್ವಾದ್ಯಂತ ಜಿಡಿಪಿ ಕುಸಿತ ಕಂಡಿತ್ತು. ಋಣಾತ್ಮಕ ಕುಸಿತ ಕಂಡಿದ್ದರೂ ಕೋವಿಡ್ ಕಾರಣದಿಂದ ಕುಸಿತ ಕಂಡಿದ್ದರೂ ನಂತರ ಲಾಕ್‍ಡೌನ್ ತೆರವಾದ ಬಳಿಕ ಆರ್ಥಿಕತೆ ಚೇತರಿಕೆಯತ್ತ ಮರಳಿತ್ತು. ಆದರೆ ರಷ್ಯಾ ಉಕ್ರೇನ್ ಯುದ್ಧ, ಕೋವಿಡ್ ಇತ್ಯಾದಿ ಕಾರಣದಿಂದ ಮತ್ತೆ ಆರ್ಥಿಕ ಹಿಂಜರಿತದ ಭೀತಿ ಕಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಕೃಷಿ ಕ್ಷೇತ್ರ ಹಾಳುಗೆಡವಿದ್ದೇ ಮೋದಿ ಸಾಧನೆ: ಸಿದ್ದು ಕಿಡಿ

    ಕೃಷಿ ಕ್ಷೇತ್ರ ಹಾಳುಗೆಡವಿದ್ದೇ ಮೋದಿ ಸಾಧನೆ: ಸಿದ್ದು ಕಿಡಿ

    ಬೆಂಗಳೂರು: ಕೃಷಿ ಕ್ಷೇತ್ರವನ್ನು ಸಂಪೂರ್ಣ ಹಾಳುಗೆಡವಿ ಅದನ್ನು ಕಾರ್ಪೊರೇಟ್ ಬಂಡವಾಳಗಾರರ ಕಾಲಿಗೆ ತಳ್ಳಿರುವುದೇ ಪ್ರಧಾನಿ ನರೇಂದ್ರ ಮೋದಿ ಅವರ 8 ವರ್ಷದ ಸಾಧನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿರುವ ಅವರು, ಕಳೆದ 8 ವರ್ಷಗಳಲ್ಲಿ ಮೋದಿಯವರು ಹೇಳಿದ ಸುಳ್ಳುಗಳಿಗೆ ಲೆಕ್ಕವೇ ಇಲ್ಲ. ಅವುಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದೂ ಸೇರಿದೆ. ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಘೋಷಣೆ ಮಾಡಿದ್ದ ಮೋದಿ ಅದನ್ನು ಸಂಪೂರ್ಣ ಹಾಳುಗೆಡವಿದ್ದಾರೆ. ಇದನ್ನೂ ಓದಿ: ಪರಿಷ್ಕೃತ ಪಠ್ಯ ರದ್ದು ಮಾಡಿ, ರೋಹಿತ್ ಚಕ್ರತೀರ್ಥರನ್ನು ವಜಾಗೊಳಿಸಬೇಕು – ಸಿದ್ದರಾಮಯ್ಯ ಆಗ್ರಹ

    ನ್ಯಾಷನಲ್ ಮಾದರಿ ಸಮೀಕ್ಷೆ ಪ್ರಕಾರ 2015-16 ರಲ್ಲಿ ಪ್ರತಿ ರೈತ ಕುಟುಂಬದ ವಾರ್ಷಿಕ ಆದಾಯ 96,703 ರೂಪಾಯಿಗಳಷ್ಟಿತ್ತು ಎಂದು ಅಂದಾಜಿಸಲಾಗಿದೆ. ಅಂದರೆ ಒಂದು ಕೃಷಿ ಕುಟುಂಬದ ತಿಂಗಳ ಸರಾಸರಿ ಆದಾಯ 8,000 ರೂಪಾಯಿ ಎಂದಾಯಿತು. ಈ 8 ಸಾವಿರ ರೂಪಾಯಿಗಳಲ್ಲಿ ಸರಾಸರಿ ಶೇ.43 ರಷ್ಟು ಕೂಲಿಯಿಂದ ಬರುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಇದನ್ನೂ ಓದಿ: ಬೀದರ್ ಪ್ರವೇಶಕ್ಕೆ ಪ್ರಮೋದ್ ಮುತಾಲಿಕ್, ಆಂದೋಲನ ಶ್ರೀಗಳಿಗೆ ಬ್ಯಾನ್

    2022 ರಲ್ಲಿ ಇದು ದ್ವಿಗುಣಗೊಳ್ಳಬೇಕಾದರೆ 2015-16ರ ಬೆಲೆಗಳಲ್ಲಿ ಲೆಕ್ಕ ಹಾಕಿದರೆ ಸರಾಸರಿ ಪ್ರತಿ ರೈತ ಕುಟುಂಬದ ತಿಂಗಳ ಆದಾಯ 16,000 ರೂಪಾಯಿಗಳಿಗೆ ಏರಿಕೆಯಾಗಬೇಕು. ವರ್ಷಕ್ಕೆ 1,72,694 ರೂಪಾಯಿಗಳಷ್ಟಾಗಬೇಕು. ಇಂದಿನ ಬೆಲೆಗಳಲ್ಲಿ, ಹಣದುಬ್ಬರ ಸೇರಿಸಿ ಲೆಕ್ಕ ಹಾಕಿದರೆ 2.5 ರಿಂದ 2.8 ಲಕ್ಷ ರೂಪಾಯಿಗಳಾಗಬೇಕು ಅಥವಾ ತಿಂಗಳಿಗೆ 22 ರಿಂದ 25 ಸಾವಿರ ರೂಪಾಯಿಗಳಾಗಬೇಕು ಎಂದು ತಜ್ಞರು ಹೇಳುತ್ತಿದ್ದಾರೆ. ರೈತರ ಆದಾಯ ದ್ವಿಗುಣಗೊಳ್ಳಬೇಕಾಗಿದ್ದರೆ 2016 ರಿಂದಲೆ ನಿರಂತರವಾಗಿ ಕೃಷಿ ಕ್ಷೇತ್ರದ ಬೆಳವಣಿಗೆ ಪ್ರತಿ ವರ್ಷ ಸುಮಾರು ಶೇ.10.5 ರಷ್ಟು ಇರಬೇಕಿತ್ತು. ಆದರೆ ವಾಸ್ತವವಾಗಿ ಬೆಳವಣಿಗೆಯಾಗಿದ್ದು ಕೇವಲ ಶೇ.2.88 ರಷ್ಟು ಮಾತ್ರ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

    NARENDRA MODI

    2019-20 ರಲ್ಲಿ ಎನ್‌ಎಸ್‌ಎಸ್‌ಒ ಹಲವು ಆಯಾಮಗಳಲ್ಲಿ ಸಮೀಕ್ಷೆ ಮಾಡಿತು. ಆದರೆ ಸಮೀಕ್ಷೆಯ ವರದಿಗಳನ್ನು ಗುಪ್ತವಾಗಿ ಪರಿಶೀಲಿಸಿದ ಕೇಂದ್ರ ಸರ್ಕಾರಕ್ಕೆ, ಆ ವರದಿಯು ತನಗೆ ವ್ಯತಿರಿಕ್ತವಾಗಿದೆ ಎಂದಬು ಪರಿಗಣಿಸಿಯೇ ವರದಿ ಬಿಡುಗಡೆ ಮಾಡಲಿಲ್ಲ. ಆದರೂ ಮಾಧ್ಯಮಗಳಿಗೆ ವರದಿ ಸೋರಿಕೆಯಾಯಿತು. ಸರ್ಕಾರದ ಡೇಟಾ ನೋಡಿದರೂ ಕೂಡ ಮನಮೋಹನಸಿಂಗ್ ಅವರ ಯುಪಿಎ ಅವಧಿಯಲ್ಲಿ ಕೃಷಿಯ ಜಿವಿಎ ಬೆಳವಣಿಗೆ ದರ ಸರಾಸರಿ ಶೇ. 4.6 ಕ್ಕಿಂತ ಹೆಚ್ಚಿಗೆ ಇತ್ತು. ಮೋದಿಯವರ ಕಾಲದಲ್ಲಿ ಕೇವಲ ಶೇ. 3.3ಕ್ಕೆ ಇಳಿಕೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    SIDDARAMAIAH

    ಇಷ್ಟೆಲ್ಲಾ ಆದರೂ ಮೋದಿ ಅವರ ಸರ್ಕಾರ ಜಾಹಿರಾತು ಕೊಟ್ಟು ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ಕೃಷಿಕರ ಉಳಿವಿಗಾಗಿ ಎಂಎಸ್‌ಪಿ ಹೆಚ್ಚಿಸಿದ್ದೇವೆ ಎಂದು ಹೇಳುತ್ತಾರೆ. ಇದನ್ನೂ ಓದಿ: ಹಿಂದೂಗಳ ರಕ್ಷಣೆ ಹೆಸರಲ್ಲಿ ಅಧಿಕಾರಕ್ಕೇರಿ, ಹಿಂದೂ ವಿರೋಧಿ ವರ್ತನೆ ಸರಿಯಲ್ಲ: ಮುತಾಲಿಕ್

    ಮನಮೋಹನಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ 2004 ರಿಂದ 2013-14ರ ವೇಳೆಗೆ ಹಲವಾರು ಕೃಷಿ ಉತ್ಪನ್ನಗಳಿಗೆ ಶೇ.204ರ ವರೆಗೆ ಬೆಂಬಲ ಬೆಲೆ ಹೆಚ್ಚಿಸಿದ್ದರು. ಭತ್ತದ ಮೇಲೆ ನೀಡುವ ಎಂಎಸ್‌ಪಿ ಶೇ.126 ರಷ್ಟು ಹೆಚ್ಚು ಮಾಡಿದ್ದರು. ಮೋದಿಯವರು ಈ 8 ವರ್ಷಗಳಲ್ಲಿ ಭತ್ತದ ಎಂಎಸ್‌ಪಿ ಯನ್ನು ಶೇ.44 ರಷ್ಟು ಹೆಚ್ಚಿಸಿದ್ದಾರೆ ಎಂದು ಹೇಳಿದ್ದಾರೆ.

    ತೊಗರಿಯ ಬೆಂಬಲ ಬೆಲೆಯನ್ನು ಮನಮೋಹನಸಿಂಗರು ಶೇ.204 ರಷ್ಟು ಹೆಚ್ಚಿಸಿದ್ದರೆ ಮೋದಿಯವರು ಶೇ.44 ರಷ್ಟು ಹೆಚ್ಚಿಸಿದ್ದಾರೆ. ಬಿಳಿ ಜೋಳದ ಮೇಲೆ ಶೇ.178 ರಷ್ಟು ಹೆಚ್ಚಿಸಿದ್ದರೆ ಮೋದಿಯವರ ಸರ್ಕಾರ ಕೇವಲ ಶೇ.78 ರಷ್ಟು ಹೆಚ್ಚಿಸಿದೆ. ಶೇಂಗಾ ಪರಿಸ್ಥಿತಿಯೂ ಅಷ್ಟೆ ಯುಪಿಎ ಸರ್ಕಾರ ಶೇ.163 ರಷ್ಟು ಹೆಚ್ಚಿಸಿತ್ತು. ಬಿಜೆಪಿ ಸರ್ಕಾರ ಕೇವಲ ಶೇ. 31.5 ರಷ್ಟು ಹೆಚ್ಚಿಸಿದೆ. ಹೆಸರು ಕಾಳಿನ ಮೇಲಿನ ಎಂಎಸ್‌ಪಿಯನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಶೇ.196 ರಷ್ಟು ಹೆಚ್ಚಿಸಿದ್ದರೆ ಬಿಜೆಪಿ ಸರ್ಕಾರ ಕೇವಲ ಶೇ.56 ರಷ್ಟು ಹೆಚ್ಚಿಸಿದೆ ಎಂದು ಮಾಹಿತಿ ನೀಡಿದ್ದಾರೆ.

    ಕಳೆದ ವರ್ಷದವರೆಗೆ 47 ಲಕ್ಷ ರೈತ ಕುಟುಂಬಗಳಿಗೆ ತಿಂಗಳಿಗೆ ನೀಡಿದ್ದು ಕೇವಲ 166 ರೂಪಾಯಿ ಮಾತ್ರ. ಇದು ಬಿಜೆಪಿಯವರ ಸಾಧನೆ. ಕೃಷಿಕರ ಆದಾಯ 8 ವರ್ಷಗಳಲ್ಲಿ ದ್ವಿಗುಣಗೊಳ್ಳುವ ಬದಲು ಅವರ ಸಾಲದ ಪ್ರಮಾಣ ದ್ವಿಗುಣಗೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಚೀನಾ ಮೀರಿಸಿದ ಭಾರತ – ವಿಶ್ವದಲ್ಲೇ ಅತೀ ವೇಗದ ಅಭಿವೃದ್ಧಿ

    ಚೀನಾ ಮೀರಿಸಿದ ಭಾರತ – ವಿಶ್ವದಲ್ಲೇ ಅತೀ ವೇಗದ ಅಭಿವೃದ್ಧಿ

    ವಾಷಿಂಗ್ಟನ್: ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮದಿಂದ ಹಾಗೂ ಕೋವಿಡ್ ಪ್ರಭಾವದಿಂದ ಇಡೀ ವಿಶ್ವವೇ ನಲುಗಿ ಹೋಗಿ, ಆರ್ಥಿಕತೆ ಕುಗ್ಗುವ ಆತಂಕದಲ್ಲಿದೆ. ಆದರೆ ಭಾರತದ ಆರ್ಥಿಕತೆಯಲ್ಲಿ ಭಾರೀ ಪ್ರಮಾಣದ ಚೇತರಿಕೆ ಕಾಣುತ್ತಿದೆ.

    ಹೌದು, ಭಾರತ ಇದೀಗ ಚೀನಾವನ್ನೇ ಮೀರಿಸುವಷ್ಟು ವೇಗವಾಗಿ ಆರ್ಥಿಕತೆಯಲ್ಲಿ ಅಭಿವೃದ್ದಿ ಹೊಂದುತ್ತಿದೆ. 2022ನೇ ಇಸವಿಯಲ್ಲಿ ಭಾರತ ಶೇ.8.2 ರಷ್ಟು ಪ್ರಗತಿ ಕಾಣಲಿದೆ. ಇದು ಜಗತ್ತಿನಲ್ಲಿಯೇ ಅತೀ ವೇಗದ ಅಭಿವೃದ್ಧಿ ಹೊಂದಲಿರುವ ಆರ್ಥಿಕತೆ ಎನಿಸಿಕೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ತಿಳಿಸಿದೆ. ಇದನ್ನೂ ಓದಿ: 12 ರಾಜ್ಯಗಳಲ್ಲಿ ವಿದ್ಯುತ್ ಸಮಸ್ಯೆ: ಮಹಾರಾಷ್ಟ್ರ ಸಚಿವ

     

    ಚೀನಾದ ಪ್ರಗತಿ ದರ ಶೇ.4.4 ರಷ್ಟು ಇದ್ದು, ಭಾರತ ಇದರ ದುಪ್ಪಟ್ಟು ವೇಗದಲ್ಲಿ ಅಭಿವೃದ್ದಿ ಹೊಂದುತ್ತಿದೆ. 2021ರ ಜಾಗತಿಕ ಆರ್ಥಿಕ ದರ ಶೇ.6.1 ಇದ್ದು, ಈ ವರ್ಷ ಶೇ.3.6 ಕ್ಕೆ ಭಾರೀ ಪ್ರಮಾಣದಲ್ಲಿ ಇಳಿಕೆ ಕಾಣಲಿದೆ ಎಂದು ಹೇಳಿದೆ. ಇದನ್ನೂ ಓದಿ: ಇಂದು ಸಂಜೆಯೊಳಗೆ ಶರಣಾಗಿ – ನಾಪತ್ತೆಯಾಗಿರುವ 8 ಹುಬ್ಬಳ್ಳಿ ಪುಂಡರಿಗೆ ಡೆಡ್‌ಲೈನ್‌

    ಕೆಲವು ತಿಂಗಳ ಹಿಂದೆ ಐಎಂಎಫ್ 2022ರ ಭಾರತದ ಆರ್ಥಿಕತೆ ಶೇ.9.1 ಇರಲಿದೆ ಎಂದು ತಿಳಿಸಿತ್ತು. ಇದೀಗ ಐಎಂಎಫ್ ಈ ಅಂದಾಜನ್ನು ಪರಿಷ್ಕರಿಸಿ, ಶೇ.0.8 ರಷ್ಟು ಕಡಿಮೆ ಮಾಡಿದೆ. 2023ರಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ.6.9 ಇರಲಿದೆ ಎಂದು ತಿಳಿಸಿದೆ.

  • 2030ರ ವೇಳೆಗೆ ಏಷ್ಯಾದಲ್ಲಿ ಭಾರತ ನಂಬರ್ 2

    2030ರ ವೇಳೆಗೆ ಏಷ್ಯಾದಲ್ಲಿ ಭಾರತ ನಂಬರ್ 2

    ಲಂಡನ್: 2022-23 ರಲ್ಲಿ ಭಾರತದ ಆರ್ಥಿಕತೆ ಶೇ.6.7 ರಷ್ಟು ವೇಗದಲ್ಲಿ ಬೆಳೆಯುವ ಮುನ್ಸೂಚನೆ ಇದೆ. ಇದರ ಆಧಾರದಲ್ಲಿ ಭಾರತ 2030ರ ವೇಳೆ ಜಪಾನ್ ದೇಶವನ್ನು ಹಿಂದಿಕ್ಕಿ, ಏಷ್ಯಾದಲ್ಲಿ ಎರಡನೇ ಅತೀ ದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಮಾಹಿತಿ ನಿರ್ವಹಣಾ ಸೇವೆ (ಐಹೆಚ್‌ಎಸ್) ಮಾರುಕಟ್ಟೆ ಹೇಳಿದೆ.

    ಭಾರತ ಜಪಾನ್ ದೇಶವನ್ನು ಹಿಂದಿಕ್ಕಿ ಪ್ರಪಂಚದಲ್ಲೇ ಆರ್ಥಿಕತೆಯ 3ನೇ ಸ್ಥಾನ ಪಡೆಯುವುದರೊಂದಿಗೆ ದೇಶದ ಜಿಡಿಪಿ ಜರ್ಮನಿ ಯನ್ನು ಮೀರಿಸಿ ವಿಶ್ವದಲ್ಲೇ ಮೂರನೇ ಸ್ಥಾನಕ್ಕೆ ಏರಲಿದೆ ಎಂದು ಐಹೆಚ್‌ಎಸ್ ಮಾರುಕಟ್ಟೆ ಶುಕ್ರವಾರ ತಿಳಿಸಿದೆ. ಇದನ್ನೂ ಓದಿ: ಪ್ರಧಾನ ಮಂತ್ರಿ ಭದ್ರತಾ ಸಿದ್ಧತೆ ಹೇಗಿರುತ್ತೆ ಗೊತ್ತಾ?

    ಪ್ರಸ್ತುತ ಅಮೇರಿಕ, ಚೀನಾ, ಜಪಾನ್, ಜರ್ಮನಿ ಬಳಿಕ ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ಹೊಂದಿದೆ. ಭಾರತದ ಜಿಡಿಪಿ 2021ರಲ್ಲಿ 2.7 ಟ್ರಿಲಿಯನ್ ಯುಎಸ್ ಡಾಲರ್ ಇದ್ದು, 2030ರ ವೇಳೆಗೆ 8.4 ಟ್ರಿಲಿಯನ್ ಯುಎಸ್ ಡಾಲರ್‌ಗೆ ಏರುವ ಮುನ್ಸೂಚನೆ ಇದೆ.

    ಭಾರತದ ವೇಗದ ಆರ್ಥಿಕ ವಿಸ್ತರಣೆ 2030ರ ವೇಳೆ ಜಪಾನಿನ ಜಿಡಿಪಿಯನ್ನು ಮೀರಿ ಏಷ್ಯಾದಲ್ಲಿ ಎರಡನೇ ಸ್ಥಾನಕ್ಕೆ ಬಂದು ನಿಲ್ಲಲಿದೆ ಎಂದು ಐಹೆಚ್‌ಎಸ್ ಮಾರ್ಕೆಟ್ ಲಿಮಿಟೆಡ್ ತಿಳಿಸಿದೆ. ಇದನ್ನೂ ಓದಿ: ಭೂಮಿಯ ಸಮೀಪದಿಂದ ಹಾದುಹೋಗಲಿದೆ ಪರಮಾಣು ಬಾಂಬ್‌ಗಿಂತ 30 ಪಟ್ಟು ಹೆಚ್ಚು ಶಕ್ತಿಯ ಕ್ಷುದ್ರಗ್ರಹ

    ಕೋವಿಡ್‌ನಿಂದ ಆರ್ಥಿಕತೆ ಕುಂಠಿತವಾಗಿದ್ದರೂ ಮುಂದಿನ ಕೆಲ ವರ್ಷದಲ್ಲಿ ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಯ ದೇಶವಾಗಿ ಹೊರಹೊಮ್ಮುವ ಸಾಧ್ಯತೆ ಇದೆ.

  • GDP: ಜುಲೈ-ಸೆಪ್ಟೆಂಬರ್‌ 2ನೇ ತ್ರೈಮಾಸಿಕದಲ್ಲಿ ಶೇ. 8.4ರಷ್ಟು ಬೆಳವಣಿಗೆ

    GDP: ಜುಲೈ-ಸೆಪ್ಟೆಂಬರ್‌ 2ನೇ ತ್ರೈಮಾಸಿಕದಲ್ಲಿ ಶೇ. 8.4ರಷ್ಟು ಬೆಳವಣಿಗೆ

    ನವದೆಹಲಿ: 2021-22ರ ಆರ್ಥಿಕ ವರ್ಷದ ಜುಲೈ-ಸೆಪ್ಟೆಂಬರ್‌ ಎರಡನೇ ತ್ರೈಮಾಸಿಕದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ. 8.4 ರಷ್ಟು ಬೆಳವಣಿಗೆ ಸಾಧಿಸಿದೆ.

    ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಭಾರತ ಶೇ. 7.4 ರಷ್ಟು ಜಿಡಿಪಿ ದಾಖಲಿಸಿತ್ತು. ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆರ್ಥಿಕ ಬೆಳವಣಿಗೆ ಕೊಂಚ ಕ್ಷೀಣಿಸಿತ್ತು. ಈಗ ಧನಾತ್ಮಕ ರೀತಿಯಲ್ಲಿ ಬೆಳವಣಿಗೆಯತ್ತ ಸಾಗಿದೆ ಎಂಬುದನ್ನು ಅಂಕಿ ಅಂಶದಿಂದ ತಿಳಿಯಬಹುದು. ಇದನ್ನೂ ಓದಿ: ಮಧ್ಯವರ್ತಿಗಳಿಗೆ ಅವಕಾಶವಿಲ್ಲ, ನೇರವಾಗಿ ರೈತರ ಖಾತೆಗಳಿಗೆ ಬೆಳೆ ಪರಿಹಾರ- ಅಶೋಕ್

    ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆಯ ವೇಗವು ಮುಖ್ಯವಾಗಿ ಕೃಷಿ, ಗಣಿಗಾರಿಕೆ, ಉತ್ಪಾದನೆ, ವಿದ್ಯುತ್‌ ಮತ್ತು ನೀರು ಸರಬರಾಜು, ಸಾರಿಗೆ, ಸಂವಹನ ಮತ್ತು ರಿಯಲ್‌ ಎಸ್ಟೇಟ್‌ನಂತರ ಪ್ರಮುಖ ಕ್ಷೇತ್ರಗಳಲ್ಲಿ ಕಂಡುಬಂದ ಸಕಾರಾತ್ಮಕ ಬೆಳವಣಿಗೆಯಿಂದಾಗಿದೆ.

    ತ್ರೈಮಾಸಿಕದಲ್ಲಿ ದೇಶದ ಉತ್ಪಾದನಾ ವಲಯ ಶೇ. 5.5ರಷ್ಟು ಹೆಚ್ಚಿದ್ದರೆ, ನಿರ್ಮಾಣ ವಿಭಾಗ ಶೇ. 7.5 ರಷ್ಟು ಬೆಳವಣಿಗೆ ಕಂಡಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಕಂಗನಾ ರಣಾವತ್‌ಗೆ ಕೊಲೆ ಬೆದರಿಕೆ- ಯಾವ ಬೆದರಿಕೆಗಳಿಗೂ ಅಂಜುವುದಿಲ್ಲ ಎಂದ ನಟಿ

    ಕೋವಿಡ್‌ ಲಾಕ್‌ಡೌನ್‌ ತೆರವಾದ ನಂತರ ಭಾರತದ ಆರ್ಥಿಕತೆ ಪುನಶ್ಚೇತನ ಕಂಡಿದೆ. ಇದು ಆರ್ಥಿಕ ವಲಯದಲ್ಲಿ ಧನಾತ್ಮಕ ಬೆಳವಣಿಗೆಯಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

  • ಸಂಪತ್ತು ಭಾರೀ ಏರಿಕೆ – ಪಾಕಿಸ್ತಾನದ GDP ಮೀರಿಸಿದ ಎಲೋನ್ ಮಸ್ಕ್

    ಸಂಪತ್ತು ಭಾರೀ ಏರಿಕೆ – ಪಾಕಿಸ್ತಾನದ GDP ಮೀರಿಸಿದ ಎಲೋನ್ ಮಸ್ಕ್

    ವಾಷಿಂಗ್ಟನ್: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಕಂಪನಿಯ ಸ್ಥಾಪಕ ಎಲೋನ್ ಮಸ್ಕ್ ಆಸ್ತಿ ಈಗ ಪಾಕಿಸ್ತಾನದ ಜಿಡಿಪಿ ಮೌಲ್ಯಕ್ಕಿಂತ ಅಧಿಕವಾಗಿದೆ. ಮಸ್ಕ್ ಆಸ್ತಿ ಮೌಲ್ಯ 300 ಶತಕೋಟಿ ಡಾಲರ್ (22.50 ಲಕ್ಷ ಕೋಟಿ ರೂ.) ಮೀರಿದ್ದು, ಪಾಕಿಸ್ತಾನದ 280 ಶತಕೋಟಿ ರೂ. ಡಾಲರ್ ಜಿಡಿಪಿಗಿಂತ ಹೆಚ್ಚಾಗಿದೆ.

    22 ಕೋಟಿ ಜನಸಂಖ್ಯೆ ಹೊಂದಿರುವ ಪಾಕಿಸ್ತಾನದ ಒಂದು ವರ್ಷದ ಒಟ್ಟು ಉತ್ಪಾದನೆಗಿಂತ ಮಸ್ಕ್ ಆಸ್ತಿಯೇ ಹೆಚ್ಚಾಗಿದ್ದು, ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಎಂಬ ಹಿರಿಮೆ ಹೊಂದಿರುವ ಮಸ್ಕ್ 300 ಶತಕೋಟಿ ಡಾಲರ್ ಆಸ್ತಿಯನ್ನು ಹೊಂದಿದ್ದಾರೆ. ಇದನ್ನೂ ಓದಿ: ಸೂಪರ್‌ ಟೆಕ್ನಾಲಜಿ ಅಭಿವೃದ್ಧಿ ಪಡಿಸಿದವರಿಗೆ 729 ಕೋಟಿ ಬಹುಮಾನ ಘೋಷಿಸಿದ ಮಸ್ಕ್‌

    PAK

    ಬ್ಲೂಮ್‍ಬರ್ಗ್ ಬಿಲಿಯನೇರ್ ಇಂಡೆಕ್ಸ್‍ನಲ್ಲಿ ಮಸ್ಕ್ ಆಸ್ತಿ 311 ಶತಕೋಟಿ ಡಾಲರ್‍ ಗೆ ಏರಿದೆ. ಈ ಮೂಲಕ ಮಸ್ಕ್ 300 ಶತಕೋಟಿ ಡಾಲರ್ ಕ್ಲಬ್ ದಾಟಿದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ನೀರಜ್ ಚೋಪ್ರಾಗೆ XUV 700 ಕಾರ್ ಗಿಫ್ಟ್ ನೀಡಿದ ಮಹೀಂದ್ರಾ

    ಮಸ್ಕ್ ಅವರು ಟೆಸ್ಲಾ ಸಹಿತ ಹಲವು ಎಲೆಕ್ಟ್ರಿಕ್ ವಾಹನ ಉದ್ಯಮ ಸೇರಿದಂತೆ ಹಲವು ಕಂಪನಿಗಳ ಒಡೆಯ. ಅವರ ಕಂಪನಿಯ ಷೇರು ಮೌಲ್ಯಗಳು ಭಾರೀ ಏರಿಕೆ ಕಂಡಿದ್ದರಿಂದ ಹಾಗೂ 1 ಲಕ್ಷದಷ್ಟು ಟೆಸ್ಲಾ ಎಲೆಕ್ಟ್ರಿಕ್ ವಾಹನಗಳು ಒಮ್ಮೆಲೆ ಮಾರಾಟವಾದ ಬೆನ್ನಲ್ಲೇ ಅವರ ಆಸ್ತಿ ಮೌಲ್ಯ 292 ಶತಕೋಟಿ ಡಾಲರ್‍ ಗೆ (22.50 ಲಕ್ಷ ಕೋಟಿ ರೂ.) ಏರಿಕೆ ಕಂಡಿದೆ. ಇದನ್ನೂ ಓದಿ: ಭೀಕರ ಅಪಘಾತ-11 ಮಂದಿ ಸಾವು, ನಾಲ್ವರಿಗೆ ಗಾಯ

    ಬ್ಲೂಮ್‍ಬರ್ಗ್ ಇಂಡೆಕ್ಸ್ ನ ವರದಿಯ ಪ್ರಕಾರ ಶ್ರೀಮಂತರ ಪಟ್ಟಿಯಲ್ಲಿ ಮಸ್ಕ್ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಜೆಫ್ ಬೆಜೋಸ್ 14.62 ಲಕ್ಷ ಕೋಟಿ ರೂ. ಬೆರ್ನಾರ್ಡ್ ಅರ್ನಾಲ್ಟ್ 12.52 ಲಕ್ಷ ಕೋಟಿ ರೂ. ಆಗಿದೆ. ಈ ಪಟ್ಟಿಯಲ್ಲಿ ಭಾರತದ ಉದ್ಯಮಿ ರಿಲಯನ್ಸ್ ಒಡೆಯ ಮುಕೇಶ್ ಅಂಬಾನಿ 71.2 ಲಕ್ಷ ಕೋಟಿ ರೂ. ನೊಂದಿಗೆ 11ನೇ ಸ್ಥಾನ ಪಡೆದರೆ, ಇನ್ನೋರ್ವ ಉದ್ಯಮಿ ಗೌತಮ್ ಅದಾನಿ 5.77 ಲಕ್ಷ ಕೋಟಿ ರೂ. ಆಸ್ತಿಯೊಂದಿಗೆ 13ನೇ ಸ್ಥಾನ ಪಡೆದಿದ್ದಾರೆ.

    ಕಳೆದ ವರ್ಷದ ನವೆಂಬರ್‌ನಲ್ಲಿ ಟೆಸ್ಲಾ ಕಂಪನಿಯ 1 ಷೇರಿನ ಬೆಲೆ 400 ಡಾಲರ್(ಅಂದಾಜು 29,971 ರೂ.) ಇದ್ದರೆ ಈ ವರ್ಷದ ಅಕ್ಟೋಬರ್ 29ರ ವೇಳೆಗೆ ಇದು 1,114 ಡಾಲರ್(ಅಂದಾಜು 83,470 ರೂ.)ಗೆ ಏರಿಕೆಯಾಗಿದೆ.

  • 2022ರಲ್ಲಿ ಭಾರತದ ಜಿಡಿಪಿ ಶೇ.6.7 – ವಿಶ್ವದಲ್ಲೇ ಅತ್ಯಂತ ವೇಗದ ಬೆಳವಣಿಗೆ

    2022ರಲ್ಲಿ ಭಾರತದ ಜಿಡಿಪಿ ಶೇ.6.7 – ವಿಶ್ವದಲ್ಲೇ ಅತ್ಯಂತ ವೇಗದ ಬೆಳವಣಿಗೆ

    ನವದೆಹಲಿ: 2022ರಲ್ಲಿ ಭಾರತದ ಜಿಡಿಪಿ ಶೇ.6.7ರಷ್ಟು ಪ್ರಗತಿ ಕಾಣಲಿದ್ದು, ಇದು ವಿಶ್ವದಲ್ಲೇ ಅತ್ಯಂತ ವೇಗದ ಬೆಳವಣಿಗೆಯಾಗಲಿದೆ ಎಂದು ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಆನ್ ಟ್ರೇಡ್ ಆ್ಯಂಡ್ ಡೆವಲಪ್‍ಮೆಂಟ್(ಯುಎನ್‍ಸಿಟಿಎಡಿ) ತನ್ನ ಟ್ರೇಡ್ ಆ್ಯಂಡ್ ಡೆವಲಪ್‍ಮೆಂಟ್ ರಿಪೋರ್ಟ್-2021ರಲ್ಲಿ ತಿಳಿಸಿದೆ.

    2022ರಲ್ಲಿ ಭಾರತ ಶೇ.6.7ರಷ್ಟು ಅಂದರೆ ವಿಶ್ವದಲ್ಲೇ ಅತ್ಯಂತ ವೇಗದ ಜಿಡಿಪಿ ಬೆಳವಣಿಗೆ ಕಾಣಲಿದೆ. ಚೀನಾ ಎರಡನೇ ಸ್ಥಾನದಲ್ಲಿದ್ದು, ಶೇ.5.7ರಷ್ಟು ಜಿಡಿಪಿ ಕಾಣಲಿದೆ ಎಂದು ಯುಎನ್‍ಸಿಟಿಎಡಿ ತನ್ನ ವರದಿಯಲ್ಲಿ ತಿಳಿಸಿದೆ. 2021ರಲ್ಲಿ ಚೀನಾ 8.3ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸುವ ಮೂಲಕ ಮೊದಲ ಸ್ಥಾನದಲ್ಲಿತ್ತು. ಭಾರತ 2021ರಲ್ಲಿ ಶೇ.7.2ರಷ್ಟು ಬೆಳವಣಿಗೆ ಕಂಡಿತ್ತು. ಜಾಗತಿಕ ಆರ್ಥಿಕತೆಯು ಸುಮಾರು ಶೇ.5.3ರಷ್ಟು ಹೆಚ್ಚಳದೊಂದಿಗೆ ಅರ್ಧ ಶತಮಾನದಲ್ಲೇ ಅತ್ಯಂತ ವೇಗದ ಬೆಳೆವಣಿಗೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಚಿತ್ರದುರ್ಗದ ಮಕ್ಕಳಲ್ಲಿ ವಿಚಿತ್ರ ರೋಗ – ಸರ್ಕಾರಿ ಜಿಲ್ಲಾಸ್ಪತ್ರೆ ಹೌಸ್ ಫುಲ್

    ಈ ವರ್ಷ ಜಾಗತಿಕ ಬೆಳವಣಿಗೆ ಶೇ.5.3ರಷ್ಟು ತಲುಪುವ ನಿರೀಕ್ಷೆ ಇದೆ. ಇದು ಸುಮಾರು ಅರ್ಧ ಶತಮಾನದಲ್ಲಿಯೇ ಅತ್ಯಂತ ವೇಗವಾದ ಬೆಳವಣಿಗೆಯಾಗಿದೆ. ಕೆಲವು ದೇಶಗಳು 2021ರ ಅಂತ್ಯದ ವೇಳೆಗೆ 2019ರ ತಮ್ಮ ಉತ್ಪಾದನಾ ಮಟ್ಟವನ್ನು ಪುನಃ ಸ್ಥಾಪಿಸಲಿವೆ, ಇಲ್ಲವೇ ಮೀರಿಸುತ್ತವೆ. 2021ರ ಹೊರತಾದ ಜಾಗತಿಕ ಚಿತ್ರಣವು ಅನಿಶ್ಚಿತತೆಯಿಂದ ಕೂಡಿದೆ ಎಂದು ಹೇಳಿದೆ. ಇದನ್ನೂ ಓದಿ: ಶೇ.100 ಎಫ್‍ಡಿಐಗೆ ಸರ್ಕಾರದ ಅನುಮತಿ ಬೇಕಿಲ್ಲ – ಟೆಲಿಕಾಂ ಕಂಪನಿಗಳಿಗೆ ಹಲವು ಕೊಡುಗೆ

    ಮುಂದಿನ ವರ್ಷ ಜಾಗತಿಕ ಬೆಳವಣಿಗೆಯಲ್ಲಿ ಕುಸಿತ ಕಾಣಬಹುದು ಎಂದು ಯುಎನ್‍ಸಿಟಿಎಡಿ ಹೇಳಿದೆ. ಆದರೆ ಎಷ್ಟು ಅವಧಿಯವರೆಗೆ ಮತ್ತು ಎಷ್ಟು ಕುಸಿತವಾಗುತ್ತದೆ ಎಂಬುದು ಪ್ರಮುಖ ಆರ್ಥಿಕತೆಗಳಲ್ಲಿನ ನೀತಿ, ನಿರ್ಧಾರಗಳ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದೆ.

    2020ರಲ್ಲಿ ಶೇ.3.5ರಷ್ಟು ಕುಸಿತದ ನಂತರ, ಈ ವರ್ಷ ಜಾಗತಿಕ ಉತ್ಪಾದನೆಯು ಶೇ.5.3ರಷ್ಟು ಬೆಳವಣಿಗೆಯ ನಿರೀಕ್ಷೆಯಲ್ಲಿದೆ. 2020ರಲ್ಲಿ ಆದ ನಷ್ಟವನ್ನು ಭಾಗಶಃ ತುಂಬುತ್ತದೆ. ಕೊರೊನಾ ಸಾಂಕ್ರಾಮಿಕ ರೋಗ ಇಲ್ಲದ ಸಮಯದಲ್ಲಿ ಅಂದರೆ 2017-19ರ ಅವಧಿಯಲ್ಲಿ ವಾರ್ಷಿಕ ಜಾಗತಿಕ ಬೆಳವಣಿಗೆ ದರ ಶೇ.3ರಷ್ಟಿತ್ತು ಎಂದು ಯುಎನ್‍ಸಿಟಿಎಡಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

  • ನೋಟು ಮುದ್ರಿಸಿ ಆರ್ಥಿಕ ಸಮಸ್ಯೆ ದೂರವಾಗಿಸುತ್ತಾ ಸರ್ಕಾರ? ಲೋಕಸಭೆಯಲ್ಲಿ ಸೀತಾರಾಮನ್ ಉತ್ತರ

    ನೋಟು ಮುದ್ರಿಸಿ ಆರ್ಥಿಕ ಸಮಸ್ಯೆ ದೂರವಾಗಿಸುತ್ತಾ ಸರ್ಕಾರ? ಲೋಕಸಭೆಯಲ್ಲಿ ಸೀತಾರಾಮನ್ ಉತ್ತರ

    ನವದೆಹಲಿ: ಹೊಸ ನೋಟು ಮುದ್ರಣ ಮಾಡಿ ಆರ್ಥಿಕ ಸಂಕಟವನ್ನು ಸರ್ಕಾರ ದೂರು ಮಾಡುತ್ತಾ ಪ್ರಶ್ನೆಗೆ ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರ ನೀಡಿದ್ದಾರೆ.

    ಕಳೆದ ಎರಡು ವರ್ಷಗಳಿಂದ ಕೊರೊನಾ ಮಾಹಾಮರಿಯಿಂದಾಗಿ ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಾ ಬಂದಿದೆ. ಈ ವರ್ಷ ಚೇತರಿಕೆ ಕಾಣುವ ಸಮಯದಲ್ಲಿಯೇ ಕೊರೊನಾ ಎರಡನೇ ಅಲೆ ಅಪ್ಪಳಿಸಿ ಆರ್ಥಿಕ ಚಟುವಟಿಕೆಗಳು ಸ್ತಬ್ಧಗೊಂಡಿತ್ತು. ಇದೀಗ ಮತ್ತೆ ಆರ್ಥಿಕ ಚಟುವಟಿಕೆಗಳು ಹಳೆಯ ಲಯಕ್ಕೆ ಮರಳಿವೆ. ಇಂದು ಲೋಕಸಭೆಯಲ್ಲಿ ಈ ವಿಷಯದ ಕುರಿತಾಗಿ ಪ್ರಶ್ನೆ ಕೇಳಲಾಗಿತ್ತು. ಹೊಸ ನೋಟುಗಳ ಮುದ್ರಣ ಮೂಲಕ ಅರ್ಥವ್ಯವಸ್ಥೆಗೆ ಉತ್ತೇಜನ ನೀಡುವ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆಯಾ ಎಂದು ಪ್ರಶ್ನೆ ಮಾಡಲಾಗಿತ್ತು.

    ಕೊರೊನಾದಿಂದ ಉಂಟಾಗಿರುವ ಆರ್ಥಿಕ ಸಂಕಟದ ಪರಿಹಾರಕ್ಕಾಗಿ ಹೊಸ ನೋಟುಗಳ ಮುದ್ರಣ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಬಹುತೇಕ ಅರ್ಥಶಾಸ್ತ್ರಜ್ಞರು ಅರ್ಥ ವ್ಯವಸ್ಥೆಯ ಚೇತರಿಕೆಗಾಗಿ ಹೊಸ ನೋಟುಗಳು ಮುದ್ರಣದ ಜೊತೆಯಲ್ಲಿ ಲಭ್ಯವಿರುವ ಉದ್ಯೋಗಗಳನ್ನು ಉಳಿಸಿಕೊಳ್ಳಬೇಕೆಂದು ಸಲಹೆ ನೀಡುತ್ತಾರೆ ಎಂದರು. ಇದೇ ವೇಳೆ 2020-21ನೇ ಆರ್ಥಿಕ ವರ್ಷದಲ್ಲಿ ಶೇ.7.3ರಷ್ಟು ಉತ್ಪಾದನೆ ಕುಸಿಯುವ ಅನುಮಾನಗಳಿವೆ ಎಂದು ಲಿಖಿತ ರೂಪದಲ್ಲಿ ಹೇಳಿದರು.

    ಜಿಡಿಪಿ ಇಳಿಕೆಯನ್ನು ಗಮನಿಸಿದ್ರೆ ಕೊರೊನಾ ಮಹಾಮಾರಿ ಅರ್ಥವ್ಯವಸ್ಥೆಯ ಮೇಲೆ ಎಷ್ಟು ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ತಿಳಿಯುತ್ತದೆ. ನಮ್ಮ ಅರ್ಥವ್ಯವಸ್ಥೆ ಅಡಿಪಾಯ ಭದ್ರವಾಗಿದ್ದು, ಲಾಕ್‍ಡೌನ್ ತೆರವುಗೊಳಿಸಿದ ಆರ್ಥಿಕ ಚಟುವಟಿಕೆಗಳು ಹಂತ ಹಂತವಾಗಿ ಚೇತರಿಕೆ ಕಂಡಿವೆ. ಜೊತೆಗೆ ಆತ್ಮನಿರ್ಭರ ಭಾರತದ ಅಭಿಯಾನದಡಿಯಲ್ಲಿ ಆರ್ಥಿಕ ಚಟುವಟಿಕೆಗೆ ಸಹಾಯ ನೀಡುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಸದನಕ್ಕೆ ವಿತ್ತ ಸಚಿವರು ಮಾಹಿತಿ ನೀಡಿದರು. ಇದನ್ನೂ ಓದಿ: ಬಿಎಸ್‍ವೈ ಮೋದಿಯ ಇತ್ತೀಚಿನ ಬಲಿಪಶು: ರಣದೀಪ್ ಸಿಂಗ್ ಸುರ್ಜೆವಾಲಾ

    ಆತ್ಮನಿರ್ಭರ ಭಾರತ ಅಭಿಯಾನದಡಿಯಲ್ಲಿ ಸರ್ಕಾರ ಇದುವರೆಗೂ 29.87 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಲಾಗಿದೆ. ಆರ್ಥಿಕ ಚಟುವಟಿಕೆ ಮತ್ತೆ ಹಳೆ ಲಯಕ್ಕೆ ತರೋದು ಈ ಅಭಿಯಾನದ ಉದ್ದೇಶ ಎಂದು ಸೀತಾರಾಮನ್ ಹೇಳಿದರು. ಇದನ್ನೂ ಓದಿ: ಕೃಷಿ ಕಾನೂನು ವಿರೋಧಿಸಿ ಸಂಸತ್‍ಗೆ ಟ್ರ್ಯಾಕ್ಟರ್ ಏರಿ ಬಂದ ರಾಹುಲ್ ಗಾಂಧಿ