Tag: GD Deve Gowda

  • ಸೋಲಿನ ಭೀತಿಯಿಂದ ಸಿದ್ದರಾಮಯ್ಯ ಯಾರ ಕಾಲಿಗೆ ಬೇಕಾದ್ರು ಬೀಳ್ತಾರೆ: ಪ್ರತಾಪ್ ಸಿಂಹ

    ಸೋಲಿನ ಭೀತಿಯಿಂದ ಸಿದ್ದರಾಮಯ್ಯ ಯಾರ ಕಾಲಿಗೆ ಬೇಕಾದ್ರು ಬೀಳ್ತಾರೆ: ಪ್ರತಾಪ್ ಸಿಂಹ

    ಮೈಸೂರು: ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಸೋಲಿನ ಭಯ ಉಂಟಾಗಿದ್ದು, ಅಧಿಕಾರ ಪಡೆಯಲು ಯಾರ ಕಾಲಿಗೆ ಬೇಕಾದ್ರು ಬೀಳುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ, ಸೋಲಿನ ಭಯದಿಂದ ಸಿದ್ದರಾಮಯ್ಯ ಅವರು ಮಾತನಾಡುತ್ತಿದ್ದು, ಅಧಿಕಾರ ಪಡೆಯಲು ಯಾರ ಕಾಲಿಗೆ ಬೇಕಾದರೂ ಬೀಳುತ್ತಾರೆ. ವಿಧಾನಸಭಾ ಚುನಾವಣೆಗೂ ಮುನ್ನ ಅಪ್ಪನ ಆಣೆಗೂ ಎಚ್‍ಡಿಕೆ ಸಿಎಂ ಆಗಲ್ಲ ಎನ್ನುತ್ತಿದ್ದ ಅವರೇ ಅಧಿಕಾರಕ್ಕಾಗಿ ಎಚ್‍ಡಿ ದೇವೇಗೌಡರ ಅವರ ಕಾಲಿಗೆ ಬಿದ್ದು ಸಿಎಂ ಮಾಡಿದ್ರು. ಈಗ ಆದೇ ಸೋಲಿನ ಭಯದಿಂದ ಮಾತನಾಡುತ್ತಿದ್ದಾರೆ. ಅದ್ದರಿಂದ ಅವರ ಮಾತಿಗೆ ಅಷ್ಟು ಬೆಲೆ ಕೊಡಬೇಕಾಗಿಲ್ಲ ಎಂದರು.

    ಈ ಬಾರಿಯ ಚುನಾವಣೆಗೂ ಮುನ್ನ ವೀರಾವೇಶದಿಂದ ಚುನಾವಣೆ ಗೆಲ್ಲುತ್ತೇವೆ ಎಂದು ಬಂದರು. ಉಡಾಫೆಯಾಗಿ ಜಿಟಿಡಿ ಅವರ ಬಗ್ಗೆ ಮಾತನಾಡಿದ್ದರು. ಆದರೆ ಆದೇ ಸೋಲಿನ ಭಯ ಆರಂಭವಾದ ಕಾರಣ ಹಿಂದೆ ಸರಿದು ಜಿಟಿಡಿ ನಿನ್ನಿದ್ದರೆ ಗೆಲ್ಲಲು ಆಗುತ್ತದೆ ಎಂದು ಅವರ ಮನೆಗೆ ಹೋದರು. ಹೀಗಾಗಿ ಸೋಲುವುದು ಖಚಿತವಾದರೆ ಸಿದ್ದರಾಮಯ್ಯ ಅವರು ಯಾರ ಕಾಲು ಬೇಕಾದರೂ ಹಿಡಿಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.